Tag: mother

  • ಮದ್ಯ ಸೇವಿಸಿ ತಾಯಿಯಿಂದಲೇ ಅಪ್ರಾಪ್ತ ಬಾಲಕಿಯ ಮೇಲೆ ಮಾರಣಾಂತಿಕ ಹಲ್ಲೆ

    ಮದ್ಯ ಸೇವಿಸಿ ತಾಯಿಯಿಂದಲೇ ಅಪ್ರಾಪ್ತ ಬಾಲಕಿಯ ಮೇಲೆ ಮಾರಣಾಂತಿಕ ಹಲ್ಲೆ

    ಕಾರವಾರ: ಮದ್ಯ ಸೇವಿಸಿ ತಾಯಿಯೇ ಅಪ್ರಾಪ್ತ ಬಾಲಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಾರವಾರದ ಕಾಜುಭಾಗ್ ಪಿಂಗೆ ರೋಡ್ ನಲ್ಲಿ ನಡೆದಿದೆ.

    ರೇಣಕಾ ತನ್ನ ಹೆತ್ತ ಮಗಳಿಗೆ ಥಳಿಸಿದ ಮಹಿಳೆ. ರೇಣುಕಾ ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದಳು. ಅಲ್ಲದೇ ರೇಣುಕಾ ಕುಡಿತದ ದಾಸಳಾಗಿದ್ದರಿಂದ ಆಕೆಯ ಮೊದಲ ಗಂಡ ಕೂಡ ಈಕೆಯನ್ನು ಬಿಟ್ಟು ಬಿಜಾಪುರಕ್ಕೆ ಹೋಗಿದ್ದ.

    ಮೊದಲ ಪತಿ ಬಿಟ್ಟು ಹೋದ ನಂತರ ರೇಣುಕಾ ಪ್ಲಂಬರ್ ಕೆಲಸ ಮಾಡುವ ಲಕ್ಷ್ಮಣ್ ಜೊತೆ ಮದುವೆಯಾಗಿದ್ದಳು. ಲಕ್ಷ್ಮಣ್‍ಗೂ ಕೂಡ ಇದು ಎರಡನೇ ಮದುವೆಯಾಗಿದ್ದು, ಆತನ ಮೊದಲನೇ ಪತ್ನಿ ತೀರಿ ಹೋಗಿದ್ದರು. ಸದ್ಯ ರೇಣುಕಾಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಕ್ಕಳಿದ್ದಾರೆ.

    ರೇಣುಕಾ ತನ್ನ ಮೊದಲನೇ ಪತಿಯ ಮಗಳೊಂದಿಗೆ ತನ್ನ ಎರಡನೇಯ ಪತಿ ಜೊತೆ ವಾಸವಾಗಿದ್ದಳು. ರೇಣುಕಾಗೆ ಕುಡಿತದ ಅಭ್ಯಾಸವಿದ್ದು, ಮೊನ್ನೆ ಕುಡಿತದ ಮತ್ತು ಹೆಚ್ಚಾಗಿದ್ದರಿಂದ ಆಕೆ ತನ್ನ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ.

    ರೇಣುಕಾ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸದೇ ಅವರನ್ನು ಮನೆಯಲ್ಲೇ ಕೆಲಸ ಮಾಡಿಸಿಕೊಳ್ಳುತ್ತಿದ್ದಳು. ಮೊನ್ನೆ ಕುಡಿದ ನಶೆ ಹೆಚ್ಚಾಗಿದ್ದರಿಂದ ರೇಣುಕಾ ಪಕ್ಕದ ಮನೆಯ ಮಕ್ಕಳೊಂದಿಗೆ ಆಟವಾಡುತಿದ್ದ ತನ್ನ ಮಗಳ ಮನೆಗೆ ಕರೆತಂದು ತನ್ನ ಸ್ವಂತ ಮಗಳು ಎನ್ನದೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾಳೆ.

    ಮಗಳ ಮೇಲೆ ಹಲ್ಲೆ ನಡೆಸುವುದನ್ನು ನೋಡಿದ ಅಕ್ಕಪಕ್ಕದ ಮನೆಯವರು ಆಕೆಯನ್ನು ತಡೆದು ಮಗುವನ್ನು ರಕ್ಷಿಸಿದ್ದಾರೆ. ಮಗುವಿಗೆ ತೀವ್ರ ಗಾಯವಾಗಿ ತಲೆಯಲ್ಲಿ ರಕ್ತಸ್ರಾವ ಆಗುತ್ತಿತ್ತು. ಈ ವೇಳೆ ಅಕ್ಕಪಕ್ಕದ ಮನೆಯವರು ಅಂಬುಲೆನ್ಸ್ ಗೆ ಕರೆ ಮಾಡಿದ್ದರು. ಆದರೆ ರೇಣುಕಾ ತನ್ನ ಮಗಳನ್ನು ಆಸ್ಪತ್ರೆಗೆ ಕಳುಹಿಸದೇ ಆಕೆಯನ್ನು ರೂಮಿನಲ್ಲಿ ಕೂಡಿಹಾಕಿದ್ದಳು.

    ರೇಣುಕಾ ತನ್ನ ಪತಿ ಲಕ್ಷ್ಮಣ್ ಮೇಲೂ ಹಲ್ಲೆ ನಡೆಸುತ್ತಿದ್ದರಿಂದ ಆತ ಮನೆಯಲ್ಲಿ ಹೆಚ್ಚು ಕಾಲ ಕಳೆಯುತ್ತಿರಲಿಲ್ಲ. ಅಲ್ಲದೇ ರೇಣುಕಾ ಈಗ ತನ್ನ ಮಗಳ ಮೇಲೆ ಹಲ್ಲೆ ನಡೆಸಿರುವ ವಿಷಯ ಇದುವರೆಗೂ ಆಕೆಯ ಪತಿಗೆ ತಿಳಿದಿಲ್ಲ.

    ಮಾಧ್ಯಮದಲ್ಲಿ ಈ ವಿಷಯ ಪ್ರಸಾರವಾಗುತ್ತಿದ್ದಂತೆ ಇಂದು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ರೇಣುಕಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಆಕೆಯ ಮಕ್ಕಳು ತಾಯಿಯನ್ನು ಬಿಡಲು ಒಪ್ಪುತ್ತಿಲ್ಲ. ಸದ್ಯ ಮಹಿಳಾ ಹಾಗೂ ಮಕ್ಕಳಾ ಕಲ್ಯಾಣ ಇಲಾಖೆ ರೇಣುಕಾ ಅವರಿಗೆ ಕೌನ್ಸಿಲಿಂಗ್ ನಡೆಸಿ ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರ್ಧರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 7 ತಿಂಗಳ ಕಂದಮ್ಮನನ್ನು ಕೊಂದ್ಳು ಪಾಪಿ ತಾಯಿ

    7 ತಿಂಗಳ ಕಂದಮ್ಮನನ್ನು ಕೊಂದ್ಳು ಪಾಪಿ ತಾಯಿ

    ನವದೆಹಲಿ: ಆರ್ಥಿಕ ಸಮಸ್ಯೆಗೆ ಹೆದರಿ ತನ್ನ ಏಳು ತಿಂಗಳ ಕಂದಮ್ಮನನ್ನು ಕೊಂದು ಸಹಜ ಸಾವು ಎಂದು ಸಾಬೀತು ಪಡಿಸಲು ಮುಂದಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಆದಿಬಾ ಎಂಬವಳೇ ಮಗುವನ್ನು ಕೊಂದ ಪಾಪಿ ತಾಯಿ. ಮಗುವಿನ ತಂದೆ ಇಸ್ರೇಲ್ ಖಾನ್ ಮತ್ತು ಆದಿಬಾ ಮಲ್ಚಾಂಡ್ ಆಸ್ಪತ್ರೆಗೆ ಮೃತಪಟ್ಟ ಮಗುವನ್ನು ಕರೆತರುತ್ತಾರೆ. ಆಗಸ್ಟ್ 20 ರಂದು ಹಳ್ರಾತ್ ನಿಜಾಮುದ್ದೀನ್ ಪೊಲೀಸ್ ಠಾಣೆಯಲ್ಲಿ ಮಗು ಮೃತಪಟ್ಟಿರುವುದು ತಿಳಿದು, ವಿಚಾರಿಸಿದಾಗ ಮಗು ಬಕೆಟ್ ನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಪೋಷಕರು ಹೇಳುತ್ತಾರೆ.

    ಮಗುವಿನ ಕುತ್ತಿಗೆಯ ಭಾಗದಲ್ಲಿ ಅನುಮಾನಸ್ಪದ ಗುರುತುಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಮರಣೋತ್ತರ ಪರೀಕ್ಷೆಗಾಗಿ ಮಗುವಿನ ದೇಹವನ್ನು ಆಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸ್ (ಏಮ್ಸ್)ಗೆ ಕಳುಹಿಸಲಾಗಿತ್ತು.

    ಆಗಸ್ಟ್ 27 ರಂದು ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ಕತ್ತಿನ ಭಾಗಕ್ಕೆ ಮಾರಣಾಂತಿಕ ಒತ್ತಡ ಉಂಟಾಗಿದೆ. ಅಲ್ಲದೇ ಮೃತ ದೇಹದ ಆಂತರಿಕ ಭಾಗಗಳಲ್ಲಿ ಯಾವುದೇ ನೀರು ತುಂಬಿರಲಿಲ್ಲ ಎಂದು ವರದಿಯಾಗಿದೆ. ಈ ಕಾರಣದಿಂದಾಗಿ ಪೊಲೀಸರು ಮನೆಯ ಸ್ನಾನದ ಕೋಣೆಯನ್ನು ಪರಿಶೀಲಿಸಿ ಮಗು ಮೃತಪಟ್ಟಿದೆ ಎಂದು ಹೇಳಲಾಗಿದ್ದ ಬಕೆಟ್ ವಶಪಡಿಸಿಕೊಂಡಿದ್ದರು. ಆದಿಬಾ ಮನೆಯಲ್ಲಿ ಒಬ್ಬಳೇ ಇದ್ದಾಗ ಈ ಘಟನೆ ನಡೆದಿತ್ತು ಎಂಬುವುದು ಬೆಳಕಿಗೆ ಬಂದಿತ್ತು.

    ಕೊಲೆ ಮಾಡಿದ್ದು ಯಾಕೆ..?
    ಅನುಮಾನದ ಆಧಾರದ ಮೇಲೆ ಆದಿಬಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮಗು ಹುಟ್ಟಿದಾಗಿನಿಂದಲೂ ಅನಾರೋಗ ಪೀಡಿತವಾಗಿತ್ತು. ಮಗುವಿನ ಚಿಕಿತ್ಸೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಾಗಿತ್ತು. ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಲು ಮಗುವನ್ನೇ ಕೊಲೆ ಮಾಡಲು ನಿರ್ಧರಿದ್ದಾಳೆ. ಬಳಿಕ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮಲಗಿದ್ದ ಮಗುವನ್ನು ತನ್ನ ದುಪ್ಪಟದ ಸಹಾಯದಿಂದ ಮಗುವನ್ನು ಕೊಲೆ ಮಾಡಿದ್ದಾಳೆ. ಮೃತಪಟ್ಟ ಮಗುವಿನ ದೇಹವನ್ನು ಬಕೆಟ್ ನಲ್ಲಿ ಹಾಕಿ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಮೃತ ದೇಹವನ್ನು ತೆಗೆದು ಹಾಸಿಗೆ ಮೇಲೆ ಮಲಗಿಸಿ ಪತಿಗೆ ವಿಷಯವನ್ನು ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದರು.

    ಸದ್ಯಕ್ಕೆ ಪೊಲೀಸರು ಆರೋಪಿ ಆದಿಬಾಳನ್ನು ಬಂಧಿಸಿದ್ದು, ಕೊಲೆ ಮಾಡಲು ಬಳಸಿದ್ದ ದುಪ್ಪಟವನ್ನು ವಶಪಡಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಪ್ಟಾಥ್ಲಾನ್ ಚಿನ್ನದ ಹುಡುಗಿ ಸ್ವಪ್ನಾ ತಾಯಿಯ ಆನಂದಭಾಷ್ಪ ವಿಡಿಯೋ ವೈರಲ್

    ಹೆಪ್ಟಾಥ್ಲಾನ್ ಚಿನ್ನದ ಹುಡುಗಿ ಸ್ವಪ್ನಾ ತಾಯಿಯ ಆನಂದಭಾಷ್ಪ ವಿಡಿಯೋ ವೈರಲ್

    ಕೋಲ್ಕತ್ತಾ: ಹೆಪ್ಟಾಥ್ಲಾನ್ ಚಿನ್ನದ ಪದಕ ವಿಜೇತ ಸ್ವಪ್ನಾ ಬರ್ಮನ್ ತಾಯಿ ಟಿವಿಯಲ್ಲಿ ಮಗಳು ಸಾಧನೆಯನ್ನು ನೋಡಿ, ಆನಂದಭಾಷ್ಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಶ್ಚಿಮ ಬಂಗಾದ ಸ್ವಪ್ನಾ ಬಮರ್ನ್ ಕುಟುಂಬಸ್ಥರು ಟಿವಿ ಮುಂದೆ ಕುಳಿತು ಚಪ್ಪಾಳೆ ತಟ್ಟಿದರೆ, ತಾಯಿ ಮಗಳ ಸಾಧನೆಯನ್ನು ನೆನೆದು ಆನಂದ ಬಾಷ್ಪ ಸುರಿಸಿದರು. ಬುಧವಾರ ವಿರೇಂದ್ರ ಸೆಹ್ವಾಗ್ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಇದನ್ನು 5.3 ಸಾವಿರ ಜನರು ರಿಟ್ವೀಟ್ ಮಾಡಿದ್ದು 24 ಸಾವಿರ ಜನ ಲೈಕ್ ಮಾಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಪುಟ್ಟ ಮನೆಯೊಂದರಲ್ಲಿ ಕುಟುಂಬದ ಜೊತೆಗೆ ಟಿವಿ ನೋಡುತ್ತಿದ್ದ ಸ್ವಪ್ನಾ ಬರ್ಮನ್ ತಾಯಿ ಆನಂದ ಭಾಷ್ಪ ಸುರಿಸಿದರು. ಎಲ್ಲರೂ ಚಪ್ಪಾಳೆ ತಟ್ಟುತ್ತಾ ಸ್ವಪ್ನಾ ಸಾಧನೆಯನ್ನು ಕುಟುಂಬಸ್ಥರು ಸಂಭ್ರಮಿಸುತ್ತಿದ್ದರು. ಆದರೆ ತಾಯಿ ಸ್ಪಪ್ನಾ ಸಾಧನೆಯನ್ನು ನೋಡಿ ಕುಳಿತ ಜಾಗದಿಂದ ಎದ್ದು ಹೋಗಿ, ದೇವರ ಮುಂದೆ ದೀಡ್ ನಮಸ್ಕಾರ ಹಾಕಿದ್ದಾರೆ.

    ಸ್ವಪ್ನಾ ನರ್ಮನ್ ಯಾರು?
    ಹುಟ್ಟುತ್ತಲೇ ಎರಡೂ ಕೈ ಹಾಗೂ ಎರಡೂ ಕಾಲುಗಳಲ್ಲಿ ತಲಾ ಆರು ಬೆರಳುಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ಸ್ವಪ್ನಾ ಬರ್ಮನ್ ಅವರ ಮನೆಯಲ್ಲಿ ಬಡತನವಿದೆ. ಬಡ ಕುಟುಂಬದಿಂದ ಬಂದಿರುವ ಸ್ವಪ್ನಾರ ತಂದೆ ರಿಕ್ಷಾ ಚಾಲಕರಾಗಿದ್ದು ಅವರು ಕೂಡಾ ಅನಾರೋಗ್ಯಕ್ಕೆ ತುತ್ತಾಗಿ ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಇದರಿಂದಾಗಿ ತಮ್ಮ ಬದುಕಿನಲ್ಲಿ ಎರಡನೇ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಸ್ವಪ್ನಾ ಭಾಗವಹಿಸುವುದು ಅನುಮಾನವಿತ್ತು.

    ಸಮಸ್ಯೆಗಳನ್ನು ಎದುರಿಸಿದ ಸ್ವಪ್ನಾ ಏಷ್ಯಾನ್ ಗೇಮ್ಸ್‍ಗೆ ಆಯ್ಕೆಯಾಗಿದ್ದರು. ಆದರೆ ಅವರ ಕಾಲಿಗೆ ಯಾವುದೇ ಕಂಪೆನಿಯ ಶೂಗಳು ಸೂಕ್ತವಾಗುತ್ತಿಲ್ಲ. ಪ್ರತಿ ಟೂರ್ನಿಯಲ್ಲಿ ಸ್ಪರ್ಧಿಸುವ ವೇಳೆ ವಿಶೇಷ ಶೂಗಳನ್ನು ಆಯ್ಕೆ ಮಾಡುವುದೇ ದೊಡ್ಡ ಸಮಸ್ಯೆ ಆಗುತ್ತಿತ್ತು. ಇನ್ನು ಜಂಪ್ ಮಾಡಬೇಕಾದ ಸ್ಪರ್ಧೆಗಳ ವೇಳೆ ಶೂ ಸಮಸ್ಯೆಯಾಗಿ ಕಾಡುತ್ತಿತ್ತು. ಕಾರಣ ಜಿಗಿದು ನೆಲಕ್ಕೆ ಬರುತ್ತಿದ್ದಂತೆ ಶೂ ಕಳಚಿ ಬಿಳುತಿತ್ತು. ಇಲ್ಲವೇ ಬೆರಳು ಹಾಗೂ ಕಾಲು ನೋವು ಕಾಣಿಸಿ ಭಾರೀ ಸಮಸ್ಯೆ ಎದುರಿಸುತ್ತಿದ್ದರು.

    ಹೆಪ್ಟಾಥ್ಲಾನ್ ಒಟ್ಟು 7 ಸ್ಪರ್ಧೆಯಲ್ಲಿ 6,026 ಅಂಕ ಪಡೆದು ಸ್ವಪ್ನಾ ಚಿನ್ನಕ್ಕೆ ಮುತ್ತಿಕ್ಕಿದರು. ನಾಲ್ಕು ವರ್ಷಗಳ ಹಿಂದೆಯೂ ಏಷ್ಯನ್ ಗೇಮ್ಸ್ ನಲ್ಲಿ ಸ್ವಪ್ನಾ 5,178 ಅಂಕ ಗಳಿಸಿ 5ನೇ ಸ್ಥಾನ ಪಡೆದಿದ್ದರು.

    ಏನಿದು ಹೆಪ್ಟಾಥ್ಲಾನ್?
    100 ಮೀಟರ್, 200 ಮೀಟರ್, 800 ಮೀಟರ್, ಲಾಂಗ್ ಜಂಪ್, ಹೈ ಜಂಪ್, ಜಾವಲಿನ್ ಎಸೆತ, ಶಾಟ್‍ಪೂಟ್ ಸ್ಪರ್ಧೆಯಲ್ಲಿ ಗಳಿಸಿದ ಅಂಕದ ಆಧಾರದಲ್ಲಿ ಪದಕ ನೀಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅತ್ತೆಗೆ ಶುಭಾಶಯ ಕೋರಿದ ಪ್ರಿಯಾ ಸುದೀಪ್

    ಅತ್ತೆಗೆ ಶುಭಾಶಯ ಕೋರಿದ ಪ್ರಿಯಾ ಸುದೀಪ್

    ಬೆಂಗಳೂರು: ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜ ಅವರ ಹುಟ್ಟುಹಬ್ಬದ ಪ್ರಯುಕ್ತ ಪ್ರಿಯಾ ಸುದೀಪ್ ಅವರು ತಮ್ಮ ಅತ್ತೆಗೆ ಶುಭಾಶಯವನ್ನು ಕೋರಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾ ಸುದೀಪ್, “ಹುಟ್ಟುಹಬ್ಬದ ಶುಭಾಶಯ ಅಮ್ಮ. ನಿಮಗೆ ದೇವರು ಉತ್ತಮ ಆರೋಗ್ಯ ಮತ್ತು ನೆಮ್ಮದಿಯನ್ನು ಕೊಡಲಿ” ಅಂತ ಅವರ ಜೊತೆಗಿನ ಫೋಟೋವನ್ನು ಹಾಕಿ ಪೋಸ್ಟ್ ಮಾಡಿದ್ದಾರೆ.

    ಪ್ರಿಯಾ ಅವರು ಟ್ವೀಟ್ ಮಾಡಿ ಶುಭಾಶಯ ಕೋರಿದ ಬಳಿಕ ಅಭಿಮಾನಿಗಳು ಕೂಡ ಸುದೀಪ್ ತಾಯಿಗೆ ಬರ್ತ್ ಡೇ ಶುಭಾಶಯವನ್ನು ಕೋರಿದ್ದಾರೆ. ಈಗಾಗಲೇ ಸುದೀಪ್ ಅವರು ತಮ್ಮ ಬರ್ತ್ ಡೇ ಪ್ರಯುಕ್ತ ಅಭಿಮಾನಿಗಳಿಗೆ ಸರ್ಪ್ರೈಸ್  ಕೊಟ್ಟಿದ್ದಾರೆ.

    `ಗುರುವಾರ ಸುದೀಪ್ ಅವರ ತಾಯಿ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಪ್ರಿಯಾ ಟ್ವೀಟ್ ಮಾಡುವ ಮೂಲಕ ಬರ್ತ್ ಡೇ ಶುಭಾಶಯವನ್ನು ತಿಳಿಸಿದ್ದಾರೆ. ಸೆಪ್ಟೆಂಬರ್ 2ರಂದು ಸುದೀಪ್ ಅವರು ತಮ್ಮ ಹುಟ್ಟುವನ್ನು ಆಚರಿಸಿಕೊಳ್ಳಲಿದ್ದಾರೆ.

    ಕಿಚ್ಚ ಸುದೀಪ್ ಕಳೆದ ವರ್ಷ ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಗೂಗಲ್ ಪ್ಲಸ್ ನಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಆದರೆ ಈ ಬಾರಿ ತಮ್ಮ ಅಸೋಸಿಯೇಟ್ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ಕಿಚ್ಚ ಸುದೀಪ್ ಹೇಳಿದ್ದಾರೆ. ಕಳೆದ ವರ್ಷ ಸುದೀಪ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿರಲಿಲ್ಲ. ಆದರೆ ಈ ವರ್ಷ ತಮ್ಮ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳಿಗೆ ಮೀಸಲಿಡಲಿದ್ದಾರೆ. ಆದರೆ ಆ ದಿನದಂದು ಖರ್ಚು ಮಾಡಬಾರದು, ಅಡಂಭರವಿರಬಾರದು. ನನಗಂತ ಏನೂ ತರಬೇಡಿ, ಶುಭಾಶಯ ತಿಳಿಸಿ ಅಷ್ಟೇ ಸಾಕು ಎಂದು ಸುದೀಪ್ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಣ್ಣನ ಕಳುಹಿಸಲು ಹೋದ ಒಂದೂವರೆ ವರ್ಷದ ಕಂದಮ್ಮ ಶಾಲಾ ಬಸ್ಸಿಗೆ ಬಲಿ!

    ಅಣ್ಣನ ಕಳುಹಿಸಲು ಹೋದ ಒಂದೂವರೆ ವರ್ಷದ ಕಂದಮ್ಮ ಶಾಲಾ ಬಸ್ಸಿಗೆ ಬಲಿ!

    ಹೈದರಾಬಾದ್: ಅಣ್ಣನ ಶಾಲಾ ಬಸ್ಸಿನಡಿ ಸಿಲುಕಿ 18 ತಿಂಗ್ಳು(ಒಂದೂವರೆ ವರ್ಷದ) ಹೆಣ್ಣು ಮಗು ದಾರುಣವಾಗಿ ಮೃತಪಟ್ಟ ಘಟನೆ ಹೈದಾರಾಬಾದ್ ನ ಬೊಂಗ್ಳೂರು ಎಂಬಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ಬೆಳಗ್ಗೆ ನಡೆದಿದ್ದು, ಮೃತ ದುರ್ದೈವಿ ಕಂದಮ್ಮನನ್ನು ಪ್ರತೀಕಾ ಎಂದು ಗುರುತಿಸಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಸತ್ತಯ್ಯನನ್ನು ಆದಿಭಟ್ಲಾ ಪೊಲೀಸರು ಬಂಧಿಸಿದ್ದಾರೆ.

    ಘಟನೆ ವಿವರ:
    ಪ್ರತೀಕಾ, ಬೊಂಗ್ಳೂರು ಅಂತಪುರಂ ಕಾಲೊನಿಯ ವೆಂಕಟೇಶ್ ಹಾಗೂ ಚಂದನ ದಂಪತಿಯ ಪುತ್ರಿ. ಈಕೆಯ ಅಣ್ಣ ಪ್ರಜ್ವಲ್, ಬೊಂಗ್ಳೂರು ಸಾಹಿತಿ ವಿದ್ಯಾಲಯ ನರ್ಸರಿ ಶಾಲೆಗೆ ಹೋಗುತ್ತಿದ್ದಾನೆ ಅಂತ ಆದಿಭಟ್ಳಾ ಸಬ್ ಇನ್ಸ್ ಪೆಕ್ಟರ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.

    ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಚಂದನ, ಪ್ರಜ್ವಲ್ ಹಾಗೂ ಪ್ರತೀಕಾ ಮನೆಯ ಹತ್ತಿರವೇ ಶಾಲಾ ಬಸ್ಸಿಗಾಗಿ ಕಾಯುತ್ತಿದ್ದರು. ಸ್ವಲ್ಪ ಸಮಯದಲ್ಲೇ ಬಸ್ ಬಂದಿದೆ. ಬಸ್ ಬಂದ ಕೂಡಲೇ ಅದರಲ್ಲಿದ್ದ ಆಯ ಕೆಳಗಿಳಿದು ಪ್ರಜ್ವಲ್ ನನ್ನು ಬಸ್ ಗೆ ಹತ್ತಿಸಿದ್ದಾರೆ. ಇತ್ತ ತಾಯಿ ಮಗನ ಬ್ಯಾಗ್ ಹಿಡಿದುಕೊಂಡಿದ್ದು, ಅದನ್ನು ಆತನಿಗೆ ಕೊಡುವಲ್ಲಿ ನಿರತರಾಗಿದ್ದರು. ಹೀಗಾಗಿ ಮಗಳು ಪ್ರತೀಕಾ ಕಡೆ ಅವರು ಗಮನಹರಿಸಿರಲಿಲ್ಲ. ಪರಿಣಾಮ ಪ್ರತೀಕಾ ಬಸ್ ನ ಮುಂದುಗಡೆ ತೆರಳಿದ್ದಾಳೆ. ಇದನ್ನು ಚಾಲಕ ಕೂಡ ಗಮನಿಸಿರಲಿಲ್ಲ. ಅಲ್ಲದೇ ಬಸ್ಸನ್ನು ಏಕಾಏಕಿ ಚಲಾಯಿಸಿದ್ದಾನೆ. ಈ ವೇಳೆ ಬಸ್ ಮುಂಬದಿಯಿದ್ದ ಪ್ರತೀಕಾ ಬಸ್ಸಿನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಅಂತ ಎಸ್‍ಐ ವಿವರಿಸಿದ್ದಾರೆ.

    ಮಗು ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಚಾಲಕ ಬಸ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಆರೋಪಿ ಚಾಲಕನನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿದ್ದರು.

    ತಲೆಮರೆಸಿಕೊಂಡಿದ್ದ ಚಾಲಕನನ್ನು ಕೊನೆಗೂ ಆದಿಭಟ್ಲಾ ಪೊಲೀಸರು ಬಂಧಿಸಿದ್ದಾರೆ. ಚಾಲಕ ಸತ್ತಯ್ಯನ ಜೊತೆ ಲೈಸನ್ಸ್ ಇದ್ದು, ಘಟನೆ ನಡೆದ ವೇಳೆ ಆತ ಮದ್ಯಪಾನ ಮಾಡಿರಲಿಲ್ಲ ಅಂತ ತಿಳಿಸಿದ್ದಾರೆ. ಸದ್ಯ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 304- ಎ(ವೇಗದ ಚಾಲನೆ ಅಥವಾ ಅಜಾಗರೂಕತೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿತೆಯ ಮೇಲೆ ಮಲಗಿದ್ದ ತಾಯಿಯ ಪಾದದಡಿಗೆ ತಲೆಕೊಟ್ಟು ಕಣ್ಣೀರಿಟ್ಟ ಅಂಡರ್ ವರ್ಲ್ಡ್ ಡಾನ್!

    ಚಿತೆಯ ಮೇಲೆ ಮಲಗಿದ್ದ ತಾಯಿಯ ಪಾದದಡಿಗೆ ತಲೆಕೊಟ್ಟು ಕಣ್ಣೀರಿಟ್ಟ ಅಂಡರ್ ವರ್ಲ್ಡ್ ಡಾನ್!

    ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜನ ತಾಯಿ ವಿಲಾಸಿನಿ ಶೆಟ್ಟಿಗಾರ್ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು, ಇಂದು ಅಂತ್ಯಸಂಸ್ಕಾರ ನಡೆದಿದೆ. ಬನ್ನಂಜೆ ರಾಜ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು, ತಾಯಿಯ ಅಂತಿಮ ವಿಧಿವಿಧಾನ ಮತ್ತು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾನೆ.

    ಉಡುಪಿಯ ಕಲ್ಮಾಡಿಯಲ್ಲಿರುವ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದ ವಿಲಾಸಿನಿ ಶೆಟ್ಟಿಗಾರ್ಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಬಳಿಕ ಬನ್ನಂಜೆ ರಾಜಾ ಕುಟುಂಬಸ್ಥರು ಉಡುಪಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದು, ರಾಜನನ್ನು ಒಂದು ದಿನದ ಮಟ್ಟಿಗೆ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಪರವಾನಿಗೆ ಪಡೆಯುವುದರಲ್ಲಿ ಯಶಸ್ವಿಯಾದರು. ಇದನ್ನೂ ಓದಿ:  ಭೂಗತ ಪಾತಕಿ ಬನ್ನಂಜೆ ರಾಜನ ತಾಯಿ ನಿಧನ

    ಬನ್ನಂಜೆ ರಾಜ ಕಳೆದ ರಾತ್ರಿ ಉಡುಪಿ ನಗರ ಠಾಣೆಗೆ ಬಂದಿದ್ದನು. ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ಕಲ್ಮಾಡಿಯ ಮನೆಗೆ ಕರೆತರಲಾಗಿದ್ದು, ಮನೆಯಲ್ಲಿ ನಡೆದ ಅಂತಿಮ ವಿಧಿವಿಧಾನದಲ್ಲಿ ಬನ್ನಂಜೆ ರಾಜ ಮಗನಾಗಿ ಮಾಡಬೇಕಾಗ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದಾನೆ. ಅಂತಿಮ ಯಾತ್ರೆಯ ಚಟ್ಟಕ್ಕೆ ಹೆಗಲು ಕೊಟ್ಟಿದ್ದಾನೆ. ಅಲ್ಲಿಂದ ಮಲ್ಪೆಯ ಹಿಂದೂ ರುದ್ರಭೂಮಿಗೆ ಬನ್ನಂಜೆ ರಾಜನನ್ನು ಕರೆದುಕೊಂಡು ಹೋಗಿದ್ದು, ರುದ್ರಭೂಮಿಯಲ್ಲಿ ಸುಮಾರು ಒಂದು ಗಂಟೆಗಳ ಪ್ರಕ್ರಿಯೆಗಳು ನಡೆದಿದೆ. ಹಿರಿಯರ ಅಪ್ಪಣೆಯಂತೆ ಎಲ್ಲಾ ಪ್ರಕ್ರಿಯೆಯನ್ನು ಬನ್ನಂಜೆ ರಾಜ ಮಾಡಿದ್ದಾನೆ.

    ತಾಯಿಯ ಪಾದದಡಿ ಕಾಲಿಟ್ಟು ಕಣ್ಣೀರಿಟ್ಟ ಭೂಗತ ಪಾತಕಿ!
    ಭೂಗತ ಪಾತಕಿ ಬನ್ನಂಜೆ ರಾಜ ಸುಮಾರು 25 ವರ್ಷಗಳ ಕಾಲ ಅಜ್ಞಾತ ಸ್ಥಳದಲ್ಲಿದ್ದನು. 2015ರಲ್ಲಿ ಮೊರಕ್ಕೋದಲ್ಲಿ ಪೊಲೀಸರಿಗೆ ಶರಣಾಗಿದ್ದ. 2015ರ ಆಗಸ್ಟ್ 15ರಂದು ಉಡುಪಿಗೆ ಕರೆತರಲಾಗಿತ್ತು. 10ಕ್ಕೂ ಹೆಚ್ಚು ಪ್ರಕರಣಗಳು ಸದ್ಯ ಬನ್ನಂಜೆ ರಾಜನ ಮೇಲಿದ್ದು, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿದೆ. ಸುಮಾರು 25 ವರ್ಷಗಳಿಂದ ಕುಟುಂಬದ ಸಂಪರ್ಕದಿಂದ ದೂರವಾಗಿದ್ದ ರಾಜನಿಗೆ ಅಮ್ಮನ ಅನಾರೋಗ್ಯ ಬಹಳ ಕಾಡುತ್ತಿದ್ದಂತೆ. ಅಮ್ಮನ ಕೊನೆಯ ದಿನಗಳಲ್ಲಿ ಅವರ ಜೊತೆಗೆ ಇರಬೇಕು ಅಂತ ಅವನ ಮನಸ್ಸು ಹಂಬಲಿಸಿದೆ. ಹೀಗಾಗಿ ಪೊಲೀಸರಿಗೆ ಶರಣಾಗಿದ್ದಾನೆ.

    ತಾಯಿಯ ಅನಾರೋಗ್ಯದ ಸಂದರ್ಭ ಮನೆಗೆ ಬಂದಿದ್ದ ಬನ್ನಂಜೆ, ಎರಡನೇ ಭೇಟಿಯ ಸಂದರ್ಭ ತಾಯಿ ಇಲ್ಲವಾಗಿದ್ದಾರೆ. ಅಂತ್ಯ ಸಂಸ್ಥಾರದ ಚಿತೆಯ ಮೇಲೆ ಮಲಗಿದ್ದ ತಾಯಿಯ ಪಾದದ ಕೆಳಗೆ ತಲೆಯಿಟ್ಟು ಕೆಲಕಾಲ ಕಣ್ಣೀರಿಟ್ಟಿದ್ದಾನೆ. ಬನ್ನಂಜೆ ರಾಜಾ, ತಂದೆ ಮತ್ತು ಅಣ್ಣನ ಜೊತೆಗೆ ತಾಯಿಯ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಿದ್ದಾನೆ. ಪ್ರಕ್ರಿಯೆಗಳೆಲ್ಲಾ ಮುಗಿಯುವ ತನಕ ಸ್ಮಶಾನದಲ್ಲಿರಲು ಅವಕಾಶ ನೀಡಿದ ಪೊಲೀಸರು ಮತ್ತೆ ನಗರ ಠಾಣೆಗೆ ಕರೆದೊಯ್ದಿದ್ದಾರೆ.

    ಬನ್ನಂಜೆ ರಾಜನ ಸಂಬಂಧಿ ಸುನೀಲ್ ದಾಸ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ವಿಲಾಸಿನಿ ಶೆಟ್ಟಿಗಾರ್ ಉತ್ತಮ ಶಿಕ್ಷಕಿಯಾಗಿ ಉಡುಪಿಯ ಎಲ್ಲಾ ಭಾಗಗಳಲ್ಲೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದರು. ಕಾಲು ಜಾರಿ ಬಿದ್ದು ಮೃತಪಟ್ಟಿದ್ದು, ಬನ್ನಂಜೆ ರಾಜನನ್ನು ಬೆಳಗಾವಿಯಿಂದ ಕರೆತರಲು ಉಡುಪಿ ಕೋರ್ಟ್ ಅವಕಾಶ ನೀಡಿದೆ. ಇಡೀ ಕುಟುಂಬಸ್ಥರ ಪರವಾಗಿ ನಾವು ಕೋರ್ಟ್ ಮತ್ತು ಪೊಲೀಸ್ ಇಲಾಖೆಗೆ ಧನ್ಯವಾದ ಹೇಳುತ್ತೇವೆ. ತಾಯಿಯ ಕೊನೆಗಾಲದಲ್ಲಿ ಜೊತೆಗಿರಬೇಕು ಎಂದು ರಾಜೇಂದ್ರ (ಬನ್ನಂಜೆ ರಾಜ) ಹೇಳಿಕೊಂಡಿದ್ದನು. ಆದರೆ ತಾಯಿಯ ಮುಖವನ್ನಾದರೂ ನೋಡುವ ಅವಕಾಶ ಸಿಕ್ಕಿದ್ದು ನೆಮ್ಮದಿ ತಂದಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ, ಮಗನಿಂದ ತಾಯಿಯ ದಯಾಮರಣಕ್ಕೆ ಮನವಿ

    ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ, ಮಗನಿಂದ ತಾಯಿಯ ದಯಾಮರಣಕ್ಕೆ ಮನವಿ

    ತುಮಕೂರು:ನಿಗೂಢ ಖಾಯಿಲೆಯಿಂದ ನರಳುತಿದ್ದ ತಾಯಿಯ ದಯಾಮರಣಕ್ಕೆ ಅನುಮತಿ ಕೊಡುವಂತೆ ಮಗನೊಬ್ಬ ತುಮಕೂರು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

    ನಿಸ್ತೇಜ ಸ್ಥಿತಿಯಲ್ಲಿರುವ ತಾಯಿಯನ್ನು ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ ದಯಾಮರಣಕ್ಕಾಗಿ ಮಗ ಅಂಗಲಾಚಿದ್ದಾರೆ. ತುಮಕೂರು ನಗರದ ಗಾರ್ಡನ್ ರಸ್ತೆಯ ನಿವಾಸಿ ನಾಗರಾಜ್ ತನ್ನ ತಾಯಿ ನಾಗರತ್ನಮ್ಮಾರ ದಯಾಮರಣಕ್ಕಾಗಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದಯಾಮರಣಕ್ಕೆ ಸುಪ್ರೀಂ ಅನುಮತಿ: ಏನಿದು ಲಿವಿಂಗ್ ವಿಲ್? ತೀರ್ಪಿನಲ್ಲಿ ಏನಿದೆ? ತಪ್ಪು ಮಾಡಿದ್ರೆ ಶಿಕ್ಷೆ ಏನು?

    ಕೈಕಾಲು ಸ್ವಾದೀನ ಕಳೆದುಕೊಂಡ ನಾಗರತ್ನಮ್ಮ ಕಳೆದ 10 ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ನಾಗರತ್ನಮ್ಮ ಅವರಿಗೆ ಎಷ್ಟೇ ಚಿಕಿತ್ಸೆ ಕೊಡಿಸಿದರೂ ಕಾಯಿಲೆ ಮಾತ್ರ ಗುಣಮುಖವಾಗಿರಲಿಲ್ಲ. ಇದರಿಂದ ಬೇಸತ್ತ ಮಗ ನಾಗರಾಜು ತಾಯಿಯನ್ನು ಕರೆದುಕೊಂಡು ಡಿಸಿ ಕಚೇರಿ ಬಳಿ ಹೋಗಿ ತಾಯಿಯ ದಯಾಮರಣಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.

    ನಂತರ ತಾಯಿ ಮಗನ ಪರಿಸ್ಥಿತಿ ನೋಡಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು ತಕ್ಷಣ ನಾಗರತ್ನಮ್ಮಾಳರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೇಲ್ಛಾವಣಿ ಕುಸಿದು ತಾಯಿ ಮಗ ದುರ್ಮರಣ

    ಮೇಲ್ಛಾವಣಿ ಕುಸಿದು ತಾಯಿ ಮಗ ದುರ್ಮರಣ

    ಬಳ್ಳಾರಿ: ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ ತಾಯಿ ಮಗ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಗರದ ಕೌಲಬಜಾರ್ ಪ್ರದೇಶದಲ್ಲಿ ನಡೆದಿದೆ.

    ಹೇಮಲತಾ ಹಾಗೂ ದರ್ಶನ್ ಮೃತ ದುರ್ದೈವಿಗಳು. ಶನಿವಾರ ತಡರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿ ಹಾಗೂ ಮಗನ ಮೇಲೆ ಏಕಾಏಕಿ ಮನೆಯ ಮೇಲ್ಛಾವಣೆ ಕುಸಿದು ಬಿದ್ದಿದೆ. ಬಿದ್ದ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಅಸುನೀಗಿದ್ದಾರೆ. ಇಂದು ಬೆಳಗ್ಗೆ ಮನೆ ಕುಸಿದಿರುವುದನ್ನು ಕಂಡ ಸ್ಥಳೀಯರು ಅವಶೇಷಗಳಡಿಯಲ್ಲಿ ಸಿಲುಕಿದ್ದ ಮೃತ ದೇಹಗಳನ್ನು ಹೊರತೆಗೆದಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರೀಶೀಲನೆ ನಡೆಸಿ, ಮನೆಯು ತುಂಬಾ ಹಳೆಯದಾಗಿದ್ದರಿಂದ ಕುಸಿದು ಬಿದ್ದಿದೆ ಎಂದು ತಿಳಿಸಿದ್ದಾರೆ. ಘಟನೆ ಸಂಬಂಧ ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರಮಹಾಲಕ್ಷ್ಮಿ ಹಬ್ಬದಂದೇ ಜನನ- 2ನೇ ಹೆರಿಗೆಯಲ್ಲಿ 3 ಮಕ್ಕಳಿಗೆ ಜನ್ಮ

    ವರಮಹಾಲಕ್ಷ್ಮಿ ಹಬ್ಬದಂದೇ ಜನನ- 2ನೇ ಹೆರಿಗೆಯಲ್ಲಿ 3 ಮಕ್ಕಳಿಗೆ ಜನ್ಮ

    ಮೈಸೂರು: ವರಮಹಾಲಕ್ಷ್ಮಿ ಹಬ್ಬದಂದೇ ತಾಯಿಯೊಬ್ಬರು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ವಿಜಯನಗರ ನಿವಾಸಿ ಪ್ರೇಮ್ ಕುಮಾರ್ ಅವರ ಪತ್ನಿ ಸವಿತಾಗೆ 3 ಮಕ್ಕಳ ಜನ್ಮವಾಗಿದೆ. ಸವಿತಾ ತಮ್ಮ 2ನೇ ಹೆರಿಗೆಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರು ಆಪರೇಷನ್ ಮೂಲಕ ಮೂರು ಮಕ್ಕಳನ್ನು ಯಶಸ್ವಿಯಾಗಿ ಡೆಲಿವರಿ ಮಾಡಿಸಿದ್ದಾರೆ.

    ಮೂರು ಮಕ್ಕಳಲ್ಲಿ ಎರಡು ಗಂಡು ಮಕ್ಕಳು, ಒಂದು ಹೆಣ್ಣು ಮಗುವಾಗಿದೆ. ಪತ್ನಿಗೆ ಮೂರು ಮಕ್ಕಳಾದ ಹಿನ್ನಲೆಯಲ್ಲಿ ಪತಿ ಪ್ರೇಮ್ ಕುಮಾರ್ ಸಂತಸ ವ್ಯಕ್ತಪಡಿಸಿದರು. ಸದ್ಯ ಆಸ್ಪತ್ರೆಯಲ್ಲಿ ತಾಯಿ ಹಾಗೂ ಮೂವರು ಮಕ್ಕಳೂ ಕ್ಷೇಮವಾಗಿದ್ದಾರೆ.

    ಈ ಹಿಂದೆ ಬಳ್ಳಾರಿಯಲ್ಲಿ ಮಹಿಳೆಯೊಬ್ಬರು 10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಸಿರಗುಪ್ಪ ಪಟ್ಟಣದ ಸದಾಶಿವನಗರದ ಆಸ್ಪತ್ರೆಯಲ್ಲಿ ಸೀಮಾಂದ್ರದ ಕೌತಾಳಂನ ಮಾರಮ್ಮ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮದುವೆಯಾಗಿ 10 ವರ್ಷದ ನಂತರ ಏಕಕಾಲಕ್ಕೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವ ಕುಟುಂಬದವರಿಗೆ ತ್ರಿವಳಿ ಧಮಾಕಾ ಎನ್ನುವಂತಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 20 ದಿನದ ಹಸುಗೂಸಿಗಾಗಿ ಮಳೆಯಲ್ಲೇ ಓಡಿ, ಬದುಕಿಸಿಕೊಳ್ಳಲಾಗದೇ ನರಳಾಡುತ್ತಿರುವ ತಾಯಿ!

    20 ದಿನದ ಹಸುಗೂಸಿಗಾಗಿ ಮಳೆಯಲ್ಲೇ ಓಡಿ, ಬದುಕಿಸಿಕೊಳ್ಳಲಾಗದೇ ನರಳಾಡುತ್ತಿರುವ ತಾಯಿ!

    ಮಡಿಕೇರಿ: ತನ್ನ 20 ದಿನದ ಹಸುಗೂಸನ್ನು ರಕ್ಷಿಸಿಕೊಳ್ಳಲು ಪ್ರವಾಹದಲ್ಲೇ ಓಡಿದ ತಾಯಿಯೊಬ್ಬರು, ತನ್ನ ಮಡಿಲಲ್ಲೆ ಮಗುವನ್ನು ಕಳೆದುಕೊಂಡ  ಹೃದಯವಿದ್ರಾವಕ ಘಟನೆ ಕೊಡಗಿನ ಮುಕ್ಕೋಡ್ಲು ಬಳಿ ನಡೆದಿದೆ.

    ಹೌದು. ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ತಾಯಿಯೊಬ್ಬಳು ತನ್ನ ಮಡಿಲಲ್ಲೇ 20 ದಿನದ ಹಸುಗೂಸನ್ನು ಕಳೆದುಕೊಂಡಿರುವ ಕರುಣಾಜನಕ ಕಥೆ ಮುಕ್ಕೋಡ್ಲು ಬಳಿ ನಡೆದಿದೆ. ತನ್ನ ಮಡಿಲಲ್ಲೇ ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಜವರಾಯನಾಗಿ ಬಂದ ಮಳೆರಾಯ ತಾಯಿಯ ಕಂಕುಳಲ್ಲಿದ್ದ ಮಗುವಿನ ಪ್ರಾಣಪಕ್ಷಿಯನ್ನೇ ಕಿತ್ತುಕೊಂಡು ಹೋಗಿದ್ದಾನೆ. ಇದನ್ನೂ ಓದಿ: ಅಜ್ಜಿಯನ್ನು ಹುಡುಕಿಕೊಡುವಂತೆ ಮೊಮ್ಮಗಳ ಮನವಿ – ಅಧಿಕಾರಿಗಳ ಜೊತೆ 5 ಕಿ.ಮೀ. ನಡೆದ ಸಾ.ರಾ.ಮಹೇಶ್

    ಶನಿವಾರ ಮುಕ್ಕೋಡ್ಲು ಬಳಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು, ಈ ವೇಳೆ ಗ್ರಾಮದಲ್ಲಿದ್ದ ಮುತ್ತು ಹಾಗೂ ಸರಸ್ವತಿ ದಂಪತಿಯ ಮನೆ ಕುಸಿದು ಬಿದ್ದಿದೆ. ದಂಪತಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ತಮ್ಮ 20 ದಿನದ ಹಿಂದೆ ಹುಟ್ಟಿದ್ದ ಹೆಣ್ಣು ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಪ್ರವಾಹದ ಮಧ್ಯೆ ಓಡಿದ್ದಾರೆ. ಈ ವೇಳೆ ಸರಸ್ವತಿ ಮಗುವಿನೊಂದಿಗೆ ಮಣ್ಣಿನ ಗುಡ್ಡೆಯೊಂದರಲ್ಲಿ ಕುಸಿದು ಬಿದ್ದುಬಿಟ್ಟರು. ಬಿದ್ದ ರಭಸಕ್ಕೆ ಕೈಯಲ್ಲಿದ್ದ ಮಗುವಿನ ಪ್ರಾಣಪಕ್ಷಿ ಹಾರಿಹೋಗಿದೆ. ಅವರು ಸಹ ತಮ್ಮ ಕಾಲನ್ನು ಕಳೆದುಕೊಂಡಿದ್ದಾರೆ.

    ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿಯು, ಕಾಲು ಕಳೆದ ಕೊಂಡ ನೋವನ್ನೂ ಲೆಕ್ಕಿಸದೆ, ಮಗುವಿನ ಚಿಂತೆಯಲ್ಲಿ ಮುಳುಗಿದ್ದಾರೆ. ತನ್ನ ಮಡಿಲಿನಿಂದಲೇ ಕೂಸನ್ನು ಕಿತ್ತುಕೊಂಡ ಜವರಾಯನಿಗೆ ಹಿಡಿಶಾಪ ಹಾಕುತ್ತಿದ್ದಾಳೆ. ಮಗುವನ್ನು ಕಳೆದುಕೊಂಡು ದಂಪತಿಯು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಇದನ್ನೂ ಓದಿ: ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv