Tag: mother

  • ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಯುವಕನಿಗೆ ಬೇಕಿದೆ ಸೂಕ್ತ ಚಿಕಿತ್ಸೆ

    ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಯುವಕನಿಗೆ ಬೇಕಿದೆ ಸೂಕ್ತ ಚಿಕಿತ್ಸೆ

    ಬೆಂಗಳೂರು: 25 ವರ್ಷದ ಯುವಕನಿಗೆ ಬದುಕಿನಲ್ಲಿ ಏನಾನದರೂ ಸಾಧಿಸಬೇಕು, ತಾಯಿ-ತಂಗಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಡಿಗ್ರಿ ಮಾಡುತ್ತಿದ್ದನು. ಅದರೆ ವಿಧಿಯಾಟವೇ ಬೇರೆಯಾಗಿತ್ತು. ವಾಂತಿ, ಭೇದಿ ಅಂತಾ ಆಸ್ಪತ್ರೆ ಸೇರಿದ್ದ ಯುವಕ ಕಳೆದ 6 ವರ್ಷದಿಂದ ಕಾಲುಗಳ ಸ್ವಾಧೀನ ಕಳೆದುಕೊಂಡು ಮನೆಗೆ ಆಸರೆಯಾಗಬೇಕಿದ್ದವ ತಾಯಿ ತಂಗಿಯ ಆರೈಕೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ.

    ಹೌದು. ಯುವಕ ಅಭಿಷೇಕ್ ಇದೀಗ ಅಮ್ಮ ಮತ್ತು ತಂಗಿಯ ಆರೈಕೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ. ಬೆಂಗಳೂರಿನ ನಾಗರಬಾವಿ ಸಮೀಪ ಕೆಂಗೆಂಟೆ ನಿವಾಸಿಯಾಗಿರೋ ಈತ ತಾಯಿ ಮಂಗಳ, ತಂಗಿ ಲಕ್ಷ್ಮೀಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ಮಕ್ಕಳು ಸಣ್ಣವರಾಗಿದ್ದಾಗಲೇ ತಂದೆ ಕುಡಿತದ ಚಟಕ್ಕೆ ಬಿದ್ದು ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಕುಟುಂಬದ ಜವಾಬ್ದಾರಿಯನ್ನು ಹೊತ್ತ ತಾಯಿ ತನ್ನ ಇಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಚೆನ್ನಾಗಿ ನೋಡಿಕೊಂಡಿದ್ದಾರೆ.

    6 ವರ್ಷಗಳ ಹಿಂದೆ ತಾಯಿಯ ಕಷ್ಟವನ್ನ ಅರಿತಿದ್ದ ಮಗ ಅಭಿಷೇಕ್, ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ. ಇನ್ನೇನು ತಾಯಿ ಮತ್ತು ತಂಗಿಯನ್ನು ಸುಖವಾಗಿ ನೋಡಿಕೊಳ್ಳಲು ಉದ್ಯೋಗ ಮಾಡಬೇಕೆಂಬ ಖುಷಿಯಲ್ಲಿದ್ದನು. ಆದ್ರೆ ಅಭಿಷೇಕ್‍ಗೆ ವಾಂತಿ-ಭೇದಿ ಶುರುವಾಗಿ ಮೂರ್ಛೆ ರೋಗ ಆವರಿಸಿತ್ತು. ಮಗನ ಅವಸ್ಥೆಯನ್ನು ಕಂಡು ತಾಯಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ವೈದ್ಯರ ಎಡವಟ್ಟೋ ಏನೋ ಡಾಕ್ಟರ್ ನೀಡಿದ ಮಾತ್ರೆ ಸೇವಿಸಿದ ಬಳಿಕ ಹಂತ ಹಂತವಾಗಿ ಎರಡೂ ಕಾಲುಗಳ ಶಕ್ತಿ ಕುಂಠಿತಗೊಂಡಿದ್ದು, ಮಾತನಾಡಲು, ಓಡಾಡಲು ಹಾಗೂ ತನ್ನ ಕೆಲಸವನ್ನೂ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಕಾಲುಗಳು ಸ್ವಾಧೀನತೆ ಇಲ್ಲದೇ ಅಭಿಷೇಕ್ ಹಾಸಿಗೆ ಹಿಡಿದಿದ್ದಾನೆ.

    ಮಗನಿಗೆ ಊಟ ತಿನ್ನಿಸುವುದರಿಂದ ಹಿಡಿದು ದಿನನಿತ್ಯ ಕರ್ಮಾದಿಗಳಿಗೆ ತಾಯಿ ಮತ್ತು ತಂಗಿ ಆರೈಕೆ ಮಾಡುತ್ತಿದ್ದಾರೆ. ಈತನನ್ನು ನೋಡಿಕೊಳ್ಳಲು ಒಬ್ಬರಾದರೂ ಮನೆಯಲ್ಲಿ ಇರಲೇಬೇಕು. ತಂಗಿ ಓದು ಮುಗಿಸಿ ಮನೇಲಿದ್ರೆ ತಾಯಿ ಖಾಸಗಿ ಶಾಲೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದಾರೆ. ಬರುವ ಹಣದಿಂದ ಮಗನ ಔಷಧಿ, ಬಾಡಿಗೆಗೆ ಸಾಕಾಗುತ್ತಿದೆ.

    ಗಂಡು ದಿಕ್ಕಿಲ್ಲದ ಮನೆಗೆ ಆಸರೆಯಾಗಬೇಕಿದ್ದ ಮಗ ಹಾಸಿಗೆ ಹಿಡಿದಿದ್ದು ಜೀವನ ಸಾಗಿಸಲು ಕಷ್ಟಕರವಾಗಿದೆ. ಕಷ್ಟಪಟ್ಟು ಮಾತನಾಡಲು ಯತ್ನಿಸಿದ ಅಭಿಷೇಕ್, ನನಗೆ ಸಹಾಯ ಮಾಡಿ, ನನ್ನ ಜೀವನಕ್ಕೆ ಆಧಾರವಾಗಿ ಎಂದು ಕೇಳಿಕೊಳ್ಳುತ್ತಿದ್ದಾನೆ. ಇತ್ತ ಮಗ ದುಡಿದು ಅವನ ಕಾಲ ಮೇಲೆ ನಿಂತು ಜೀವನ ಮಾಡಲು ಚಿಕಿತ್ಸೆ ಕೊಡಿಸಿ, ಪಿಂಚಣಿ ಸೌಲಭ್ಯ ಕೊಡಿಸಿ ಎಂದು ತಾಯಿ ಮತ್ತು ತಂಗಿ ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಬಯಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.youtube.com/watch?v=b2g_gWGZ4iQ

  • ಸಾಧು ಕೋಕಿಲಗೆ ಮಾತೃ ವಿಯೋಗ

    ಸಾಧು ಕೋಕಿಲಗೆ ಮಾತೃ ವಿಯೋಗ

    ಬೆಂಗಳೂರು: ಸ್ಯಾಂಡಲ್‍ವುಡ್ ಹಾಸ್ಯನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರ ತಾಯಿ ವಿಧಿವಶರಾಗಿದ್ದಾರೆ.

    ಸಾಧು ಕೋಕಿಲಾ ಅವರ ತಾಯಿ ನಿಧನರಾಗಿದ್ದು, ಸ್ವತಃ ಈ ಸುದ್ದಿಯನ್ನು ಸಾಧು ಕೋಕಿಲಾ ಅವರ ಸಹೋದರಿ ಉಷಾ ಕೋಕಿಲಾ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ. ಉಷಾ ಕೋಕಿಲ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ “ನನ್ನ ತಾಯಿ ಇನ್ನಿಲ್ಲ” ಎಂದು ಬರೆದುಕೊಂಡಿದ್ದಾರೆ.

    ಉಷಾ ಕೋಕಿಲಾ ತಮ್ಮ ತಾಯಿಯ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಾಕಿ, ನನ್ನ ತಾಯಿ ಇನ್ನಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಮಂಗಳ ಅವರು ಆರ್ಕೇಸ್ಟ್ರಾದಲ್ಲಿ ಗಾಯಕಿ ಆಗಿದ್ದರು. ಸಾಧು ಕೋಕಿಲಾ ತಂದೆಯವರು ಕೂಡ ಪಿಟೀಲು ವಾದ್ಯ ನುಡಿಸುತ್ತಿದ್ದರು.

    ಇತ್ತೀಚೆಗೆ ಕಾರ್ಯಕ್ರವೊಂದರಲ್ಲಿ ಸಾಧು ಕೋಕಿಲಾ ಅವರು ತಮ್ಮ ತಾಯಿಯನ್ನು ನೆನೆದು ಭಾವುಕರಾಗಿದ್ದರು. ತೀರ್ಪುಗಾರರಾಗಿರುವ ಸಾಧು ಕೋಕಿಲಾ ಅವರ ಕಾರ್ಯಕ್ರಮದಲ್ಲಿ ಎಲ್ಲ ಸ್ಪರ್ಧಿಗಳು 90ರ ದಶಕದ ಹಾಡುಗಳನ್ನು ಹಾಡಿದ್ದರು. ಸ್ಪರ್ಧಿ ಅಪೇಕ್ಷಾ ಪೈ `ಸೇವಂತಿಗೆ ಚೆಂಡಿನಂತಹ ಮುದ್ದು ಕೋಳಿ’ ಎಂಬ ಲಾಲಿ ಹಾಡನ್ನು ಹಾಡಿದ್ದರು.

    ಈ ಹಾಡನ್ನು ಕೇಳಿದ ಸಾಧು ಕೋಕಿಲ ಒಂದು ಕ್ಷಣ ಭಾವುಕರಾಗಿ, ನಾವು ಚಿಕ್ಕವರಿದ್ದಾಗ ನಮ್ಮ ತಾಯಿ ಇದೇ ಹಾಡನ್ನು ಹಾಡುತ್ತಿದ್ದರು. ಸದ್ಯ ಐಸಿಯುನಲ್ಲಿ ನಮ್ಮ ತಾಯಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳುತ್ತಲೇ ಸಾಧು ಅವರ ಕಣ್ಣಾಲಿಗಳು ತುಂಬಿಕೊಂಡಿತ್ತು. ಅಮ್ಮನಿಗೆ ಪ್ರಪಂಚದಲ್ಲಿ ಸರಿಸಾಟಿಯಾದದ್ದು ಬೇರೆ ಏನೂ ಇಲ್ಲ. ಈ ಲಾಲಿ ಹಾಡುಗಳು ಪ್ರತಿಯೊಬ್ಬರ ಮನದಾಳಕ್ಕೆ ತಲುಪುತ್ತವೆ ಅಂತ ಕಣ್ಣೀರು ಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಲ್ಲರ ಮುಂದೆಯೇ ನಾಲೆಗೆ ಜಿಗಿದ ತಾಯಿ ಮಕ್ಕಳು!

    ಎಲ್ಲರ ಮುಂದೆಯೇ ನಾಲೆಗೆ ಜಿಗಿದ ತಾಯಿ ಮಕ್ಕಳು!

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಬಳಿಯ ವರುಣಾ ನಾಲೆಗೆ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳು ಎಲ್ಲರ ಮುಂದೆ ನೋಡ ನೋಡುತ್ತಿದ್ದಂತೆ ನಾಲೆಗೆ ಹಾರಿದ್ದಾರೆ.

    ತಾಯಿ ಕಮಲ (45) ಮಕ್ಕಳಾದ ವೈಷ್ಣವಿ (18) ಹಾಗೂ ವರ್ಷಾ (14) ನಾಲೆಗೆ ಹಾರಿದವರಾಗಿದ್ದಾರೆ. ಮೂಲತಃ ಕಮಲ ಮತ್ತು ಮಕ್ಕಳು ಮೈಸೂರು ನಿವಾಸಿಗಳಾಗಿದ್ದಾರೆ. ಗುರುವಾರ ಸಂಜೆ ತನ್ನ ಇಬ್ಬರು ಮಕ್ಕಳೊಂದಿಗೆ ಶ್ರೀರಂಗಪಟ್ಟಣದ ತಾಲೂಕಿನ ಕೆಆರ್‌ಎಸ್‌ ಬಳಿಯ ವರುಣಾ ನಾಲೆಯ ಹತ್ತಿರ ಕಮಲರವರು ಬಂದಿದ್ದಾರೆ. ಈ ವೇಳೆ ಎಲ್ಲರು ನೋಡ ನೋಡುತ್ತಲೆ ಇರುವಾಗಲೇ ಏಕಾಏಕಿ ನಾಲೆಗೆ ಹಾರಿದ್ದಾರೆ. ಎಂದು ತಿಳಿದು ಬಂದಿದೆ.

    ತಾಯಿ ಹಾಗೂ ಮಕ್ಕಳು ನಾಲೆಗೆ ಹಾರಿದ ತಕ್ಷಣ ಸ್ಥಳೀಯರು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ನಾಲೆಯಲ್ಲಿ ನೀರಿನ ರಭಸ ಹೆಚ್ಚಾಗಿದ್ದು ಹಾಗೂ ಕತ್ತಲಾಗಿದ್ದರಿಂದ ಕಾರ್ಯಾಚರಣೆಯನ್ನು ಕೈಗೊಂಡಿರಲಿಲ್ಲ. ಇಂದು ಮುಂಜಾನೆ ಕೆಆರ್‌ಎಸ್‌ ಜಲಾಶಯ ಮೂಲಕ ನಾಲೆಗೆ ಹರಿಯುತ್ತಿರುವ ನೀರಿನ ಪ್ರಮಾಣವನ್ನು ತಗ್ಗಿಸಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತಾಯಿ ಹಾಗೂ ಮಕ್ಕಳಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಮಾಹಿತಿಗಳ ಪ್ರಕಾರ ಕಮಲರವರು ತಮ್ಮ ಪತಿಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಕೆಆರ್‌ಎಸ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆತ್ತ ತಾಯಿಯಿಂದಲೇ 3 ವರ್ಷದ ಹೆಣ್ಣು ಮಗುವಿನ ಕೊಲೆ!

    ಹೆತ್ತ ತಾಯಿಯಿಂದಲೇ 3 ವರ್ಷದ ಹೆಣ್ಣು ಮಗುವಿನ ಕೊಲೆ!

    ಬೆಂಗಳೂರು: ಕಾವಲ್ ಭೈರಸಂದ್ರದ ಬಸ್ ಸ್ಟಾಪ್ ಬಳಿ ಹೆತ್ತ ತಾಯಿಯೇ ಕಂದಮ್ಮನನ್ನು ಕೊಲೆ ಮಾಡಿರುವ ಶಂಕೆಯೊಂದು ವ್ಯಕ್ತವಾಗುತ್ತಿದೆ.

    ವರ್ಷ(3) ಮೃತಪಟ್ಟ ಮಗುವಾಗಿದ್ದು, ಪ್ರಿಯಾ(29) ಮಗುವಿಗೆ ಹೊಡೆದ ತಾಯಿ. ತನಗೆ ಹೆಣ್ಣು ಮಗು ಇಷ್ಟ ಇಲ್ಲ ಎಂದು ತಾಯಿ ಪ್ರಿಯಾ ಪ್ರತಿನಿತ್ಯ ಹೊಡೆಯುತ್ತಿದ್ದಳು. ಆದರೆ ಇಂದು ತನ್ನ ಮಗುವನ್ನು ಹೊಡೆದು ಆಕೆಯೇ ಕೊಲೆ ಮಾಡಿದ್ದಾಳಾ ಎಂಬ ಸಂಶಯ ಹುಟ್ಟಿದೆ.

    ಸದ್ಯ ಸ್ಥಳಕ್ಕೆ ಡಿಜೆ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಿ ವರದಿ ಬಂದ ನಂತರ ಸತ್ಯಾಂಶ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

    ಮಗುವಿನ ಮೇಲೆ ಬಿಸಿನೀರು ಬಿದ್ದಿದ್ದು, ಸರಿಯಾಗಿ ಚಿಕಿತ್ಸೆ ಕೊಡಿಸದೆ ಮೃತಪಟ್ಟಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಸದ್ಯ ಪ್ರಿಯಾ 8 ತಿಂಗಳ ಗರ್ಭಿಣಿಯಾಗಿದ್ದು, ಸ್ಥಳೀಯರು ಪ್ರಿಯಾ ವಿರುದ್ಧ ಆಕೆಯ ಮನೆ ಮುಂದೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಗಳವಾಡಿ ಪತ್ನಿ ಮಲಗಿದ ನಂತ್ರ 13ರ ಮಗಳನ್ನು ಕರೆದುಕೊಂಡು ಹೋಗಿ ರೇಪ್ ಮಾಡ್ದ!

    ಜಗಳವಾಡಿ ಪತ್ನಿ ಮಲಗಿದ ನಂತ್ರ 13ರ ಮಗಳನ್ನು ಕರೆದುಕೊಂಡು ಹೋಗಿ ರೇಪ್ ಮಾಡ್ದ!

    ನೊಯ್ಡಾ: ಇಲ್ಲಿನ ಗೌತಮ್ ಬುದ್ಧ್ ನಗರದ ದಾದ್ರಿ ಪ್ರದೇಶದಲ್ಲಿ ತನ್ನ 13 ವರ್ಷದ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಕಾಮುಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಪತ್ನಿ ನೀಡಿದ ದೂರಿನಂತೆ ದಾದ್ರಿ ಪೊಲೀಸರು 40 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ.

    ದಂಪತಿ ಮಧ್ಯೆ ಮದುವೆಯಾದಾಗಿಂದಲೂ ಸಣ್ಣ ಪುಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಜಗಳಗಳು ನಡೆಯುತ್ತಿತ್ತು. ಅಂತೆಯೇ ಶನಿವಾರ ರಾತ್ರಿಯೂ ಇವರಿಬ್ಬರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿತ್ತು. ಹೀಗಾಗಿ ಪತ್ನಿ ನಿದ್ರೆಗೆ ಜಾರಿದ ಬಳಿಕ ಪತಿ ತಮ್ಮ 13 ವರ್ಷದ ಮಗಳನ್ನು ಕರೆದುಕೊಂಡು ಮಧ್ಯರಾತ್ರಿ ಹೊರಗೆ ಹೋಗಿದ್ದಾನೆ. ಅಲ್ಲದೇ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ವಿಚಾರವನ್ನು ಸಂತ್ರಸ್ತೆ ತನ್ನ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಪತಿಯ ನೀಚ ಕೃತ್ಯದಿಂದ ಗಾಬರಿಗೊಂಡ ತಾಯಿ ಕೂಡಲೇ ದಾದ್ರಿ ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧವೇ ದೂರು ದಾಖಲಿಸಿದ್ದಾರೆ.

    ಸದ್ಯ ಆರೋಪಿ ತಂದೆಯ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಇತ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಅಂತ ಅವರು ವಿವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನೈತಿಕ ಸಂಬಂಧ ನೋಡಿದ ಅಪ್ರಾಪ್ತೆ – ಪ್ರಿಯಕರನೊಂದಿಗೆ ಸೆಕ್ಸ್ ಮಾಡುವಂತೆ ತಾಯಿ ಒತ್ತಾಯ

    ಅನೈತಿಕ ಸಂಬಂಧ ನೋಡಿದ ಅಪ್ರಾಪ್ತೆ – ಪ್ರಿಯಕರನೊಂದಿಗೆ ಸೆಕ್ಸ್ ಮಾಡುವಂತೆ ತಾಯಿ ಒತ್ತಾಯ

    ಭುವನೇಶ್ವರ: ತಾಯಿಯೊಬ್ಬಳು ತಾನು ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿಸಿರುವ ಅಮಾನವೀಯ ಘಟನೆ ಒಡಿಶಾದ ಬಾಲಸೋರ್ ನಲ್ಲಿ ನಡೆದಿದೆ.

    17 ವರ್ಷದ ಅಪ್ರಾಪ್ತ ಸದರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ. ತನ್ನ ತಾಯಿಯೊಂದಿಗಿನ ಅಕ್ರಮ ಸಂಬಂಧವನ್ನು ವಿರೋಧಿಸಿದಕ್ಕೆ 60 ವರ್ಷದ ವ್ಯಕ್ತಿ ಸುಮಾರು ಐದು ಬಾರಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

    ಏನಿದು ಪ್ರಕರಣ?
    ಪಟ್ಟಣ ಹೊರವಲಯದಲ್ಲಿರುವ ಕುರುಡದಲ್ಲಿ ನಾವು ವಾಸಿಸುತ್ತಿದ್ದೆವು. ನಾನು ಮನೆಗೆ ಬಂದಾಗ ತನ್ನ ತಾಯಿ ಬೇರೆ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ತಿಳಿಯಿತು. ಬಳಿಕ ನಾನು ಅವರ ಸಂಬಂಧವನ್ನು ವಿರೋಧಿಸಿದೆ. ಆಗ ನನ್ನ ತಾಯಿ ಆತನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದಳು. ಬಳಿಕ ಆತ ನನ್ನ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿಯಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾಳೆ.

    ಸಂತ್ರಸ್ತೆ ಎಫ್‍ಐಆರ್ ದಾಖಲಿಸುತ್ತಿದ್ದಂತೆ ಆರೋಪಿ ತಾಯಿ ತನ್ನ ಮಗಳು ಮಾಡಿದ ಆರೋಪವನ್ನು ತಳ್ಳಿ ಹಾಕಿದ್ದಾಳೆ. ಅಷ್ಟೇ ಅಲ್ಲದೇ ಆಕೆಗೆ ಕಾಯಿಲೆ ಇದೆ, ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಆರೋಪಿಸಿದ್ದಾಳೆ.

    ಆರೋಪಿ ಮಹಿಳೆ ಪತಿಯಿಂದ ದೂರವಿದ್ದು, ಮೂರು ಮಕ್ಕಳಿದ್ದಾರೆ. ಸ್ಥಳೀಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಸದ್ಯಕ್ಕೆ ಈ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ತನಿಖೆ ಬಳಿಕ ಸತ್ಯಾಸತ್ಯತೆ ತಿಳಿದು ಬರುತ್ತದೆ ಎಂದು ಸದಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಬ್ಬ ಮುಗಿಸಿ ವಾಪಸ್ಸಾಗ್ತಿದ್ದಾಗ ಅಪಘಾತ- ತಾಯಿ, ಮಗಳು ದುರ್ಮರಣ

    ಹಬ್ಬ ಮುಗಿಸಿ ವಾಪಸ್ಸಾಗ್ತಿದ್ದಾಗ ಅಪಘಾತ- ತಾಯಿ, ಮಗಳು ದುರ್ಮರಣ

    ಬೆಂಗಳೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದು ಆಕ್ಟಿವಾ ಹೊಂಡಾದಲ್ಲಿದ್ದ ತಾಯಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿ, ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೆಬ್ಬಾಳದ ಬಳಿಯಿರುವ ಲುಂಬಿನಿ ಗಾರ್ಡನ್ ಬಳಿ ನಡೆದಿದೆ.

    ಸುರೇಖಾ ಹಾಗೂ ಆರಾಧ್ಯ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಸಂಬಂಧಿಕರ ಮನೆಯಲ್ಲಿ ಗಣೇಶನ ಹಬ್ಬ ಮುಗಿಸಿ ದಂಪತಿ ಹಾಗೂ ಅವರ ಮಗಳು ತಮ್ಮ ಆಕ್ಟಿವಾ ಹೊಂಡಾದಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ಲುಂಬಿನಿ ಗಾರ್ಡನ್ ಬಳಿ ಅಪರಿಚಿತ ವಾಹನವೊಂದು ಸ್ಕೂಟರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಾಯಿ ಸುರೇಖಾ ಹಾಗೂ ಮಗಳು ಆರಾಧ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದಾಗಿ ರಘು ಗಂಭೀರವಾಗಿ ಗಾಯಗೊಂಡಿದ್ದಾರೆ.

    ದಾರಿಹೋಕರು ಅಪಘಾತವಾಗಿರುವುದನ್ನು ಗಮನಿಸಿ, ಕೂಡಲೇ ಆಂಬುಲೆನ್ಸ್ ಮೂಲಕ ಗಂಭೀರವಾಗಿ ಗಾಯಗೊಂಡಿದ್ದ ರಘು ಹಾಗೂ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

    ಘಟನೆ ಸಂಬಂಧ ಹೆಬ್ಬಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಿನ್ತಾ ಇರೋವಾಗ ಡ್ಯಾಡಿ ಕಾದ ಕಬ್ಬಿಣದ ಸೌಟಿನಿಂದ ಹೊಡೆದ್ರು- 4ರ ಹೆಣ್ಣು ಮಗು ಕಣ್ಣೀರು!

    ತಿನ್ತಾ ಇರೋವಾಗ ಡ್ಯಾಡಿ ಕಾದ ಕಬ್ಬಿಣದ ಸೌಟಿನಿಂದ ಹೊಡೆದ್ರು- 4ರ ಹೆಣ್ಣು ಮಗು ಕಣ್ಣೀರು!

    ಹೈದರಾಬಾದ್: ತಾಯಿ ಹಾಗೂ ಆಕೆಯ ಲವ್ವರ್ ಸೇರಿಕೊಂಡು 4 ವರ್ಷದ ಪುಟ್ಟ ಕಂದಮ್ಮನಿಗೆ ಬಿಸಿಯಾದ ಕಬ್ಬಿಣದ ಸೌಟಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

    ಘಟನೆಯ ಬಳಿಕ ಇದೀಗ ಕಂದಮ್ಮನನ್ನು ಎನ್‍ಜಿಒ ಕಾರ್ಯಕರ್ತರು ರಕ್ಷಿಸಿದ್ದಾರೆ. ಬಳಿಕ ಪುಟ್ಟ ಕಂದಮ್ಮ ನಡೆದ ಘಟನೆಯನ್ನು ವಿವರಿಸಿದ್ದಾಳೆ. `ನಾನು ತಿನ್ನುತ್ತಾ ಇರೋವಾಗ ಡ್ಯಾಡಿ ಬಂದು ನಂಗೆ ಹೊಡೆದ್ರು. ಅಲ್ಲದೇ ನಂತರ ಕಾದ ಕಬ್ಬಿಣದ ಸೌಟಿನಿಂದ ನನ್ನ ಹಿಂಬದಿಗೆ ಒತ್ತಿ ಇಟ್ಟರು. ಅಲ್ಲದೇ ಅಮ್ಮನೂ ಚುಚ್ಚಿದ್ದಾಳೆ ಅಂತ ಜೋರಾಗಿ ಅಳುತ್ತಾ ಕಾರ್ಯಕರ್ತರಲ್ಲಿ ತನ್ನ ದುಃಖ ತೋಡಿಕೊಂಡಿದ್ದಾಳೆ.

    ತಂದೆಯ ಕೃತ್ಯದಿಂದ ಕಂದಮ್ಮ ಜೋರಾಗಿ ಕಿರುಚಾಡಿಕೊಂಡಿದ್ದನ್ನು ಕೇಳಿದ ಸ್ಥಳೀಯರು ಕೂಡಲೇ ಸ್ಥಳೀಯ ರಾಜಕಾರಣಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಅವರು ತಕ್ಷಣವೇ ಎನ್‍ಜಿಓಗೆ ಮಾಹಿತಿ ರವಾನಿಸಿದ್ದು, ಸದ್ಯ ಹೆಣ್ಣು ಮಗುವನ್ನು ರಕ್ಷಿಸಲಾಗಿದೆ ಅಂತ ಕಾರ್ಯಕರ್ತ ಅಚ್ಯುತ್ ರಾವ್ ತಿಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ತಾಯಿ ಹಾಗೂ ಆಕೆಯ ಲವ್ವರ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದಾಗ, 25 ವರ್ಷದ ತಾಯಿ ಈಗಾಗಲೇ ಗಂಡನನ್ನು ತೊರೆದು ಲವ್ವರ್ ಜೊತೆ ವಾಸವಾಗಿದ್ದಾಳೆ. ಆದ್ರೆ ಇತ್ತೀಚೆಗೆ ಇವರಿಬ್ಬರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಹೀಗಾಗಿ ತಮ್ಮ ಮೇಲಿನ ಸಿಟ್ಟನ್ನು ಮಗುವಿನ ಮೇಲೆ ತೋರಿರುವುದಾಗಿ ಬಾಯ್ಬಿಟ್ಟಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೀವದ ಹಂಗು ತೊರೆದು ಬ್ರಹ್ಮಪುತ್ರ ನದಿಗೆ ಹಾರಿ ತಾಯಿ ಸೇರಿ ಮೂವರನ್ನ ರಕ್ಷಿಸಿದ 11ರ ಪೋರ

    ಜೀವದ ಹಂಗು ತೊರೆದು ಬ್ರಹ್ಮಪುತ್ರ ನದಿಗೆ ಹಾರಿ ತಾಯಿ ಸೇರಿ ಮೂವರನ್ನ ರಕ್ಷಿಸಿದ 11ರ ಪೋರ

    ಡಿಸ್ಪುರ್: 11 ವರ್ಷದ ಬಾಲಕ ಜೀವದ ಹಂಗು ತೊರೆದು ಬ್ರಹ್ಮಪುತ್ರ ನದಿಗೆ ಹಾರಿ ತನ್ನ ತಾಯಿ ಸೇರಿದಂತೆ ಮೂವರನ್ನು ರಕ್ಷಿಸಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ.

    11 ವರ್ಷದ ಕಮಲ್ ಕಿಶೋರ್ ದಾಸ್ ಮೂವರನ್ನು ರಕ್ಷಿಸಿ ಶೌರ್ಯ ಮೆರೆದ ಬಾಲಕ. ಬುಧವಾರ ಕಮಲ್ ಕಿಶೋರ್ ದಾಸ್ ಕುಟುಂಬ ಉತ್ತರ ಗುವಾಹಟಿಯಿಂದ ತನ್ನ ಅಜ್ಜಿಯನ್ನು ಬಿಟ್ಟು ಮನೆಗೆ ವಾಪಸ್ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಇತ್ತೀಚೆಗೆ ಅಸ್ಸಾಂನಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಮಳೆಯಿಂದಾಗಿ ಬ್ರಹ್ಮಪುತ್ರ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ದೋಣಿ ಪಿಲ್ಲರ್ ಗೆ ಬಡಿದು ಮಗುಚಿದೆ.

    ಈ ವೇಳೆ ಕಮಲ್ ತಾಯಿ ಆತನನ್ನು ಈಜಿ ಪಿಲ್ಲರ್ ಹಿಡಿದುಕೊಳ್ಳುವಂತೆ ಹೇಳಿದ್ದಾರೆ. ಅದರಂತೆಯೇ ಕಮಲ್ ಈಜಿ ಪಿಲ್ಲರ್ ಅನ್ನು ಹಿಡಿದುಕೊಂಡಿದ್ದಾನೆ. ಬಳಿಕ ಕಮಲ್ ಹಿಂದೆ ತಿರುಗಿ ನೋಡಿದಾಗ ತನ್ನ ತಾಯಿ ಮತ್ತು ಚಿಕ್ಕಮ್ಮ ಈಜಲು ಸಾಧ್ಯವಾಗದೇ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿದ್ದಾನೆ. ಕೂಡಲೇ ಕಮಲ್ ಜೀವದ ಹಂಗು ತೊರೆದು ಉಕ್ಕಿ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಹಾರಿದ್ದಾನೆ. ಬಳಿಕ ತಾಯಿಯ ತಲೆ ಕೂದಲನ್ನು ಹಿಡಿದುಕೊಂಡು ಈಜಿ ಪಿಲ್ಲರ್ ಹಿಡಿದುಕೊಳ್ಳಲು ಸಹಾಯ ಮಾಡಿದ್ದಾನೆ. ನಂತರ ದೂರದಲ್ಲಿ ತನ್ನ ಚಿಕ್ಕಮ್ಮ ಸಹ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿ ಮತ್ತೆ ನೀದಿಗೆ ಹಾರಿ ಚಿಕ್ಕಮ್ಮ ನನ್ನು ರಕ್ಷಿಸಿದ್ದಾನೆ.

    “ದೋಣಿ ಪಿಲ್ಲರ್ ಗೆ ಬಡಿದಾಗ ನನ್ನ ತಾಯಿಯು ನನ್ನ ಶೂಗಳನ್ನು ತೆಗೆದುಕೊಂಡು ಈಜುವಂತೆ ಹೇಳಿದರು. ಅದರಂತೆಯೇ ನಾನು ಈಜಿ ತೀರಕ್ಕೆ ಸೇರಿದೆ. ಆದರೆ ನಾನು ತೀರಕ್ಕೆ ಬಂದಾಗ ನನ್ನ ತಾಯಿ ಮತ್ತು ಚಿಕ್ಕಮ್ಮ ಈಜುಕೊಂಡು ಬರಲು ಸಾಧ್ಯವಾಗಿಲ್ಲ. ಬಳಿಕ ನಾನು ನದಿಗೆ ಹಾರಿ ತಾಯಿಯ ಕೂದಲನ್ನು ಹಿಡಿದುಕೊಂಡು ಬಂದು ಪಿಲ್ಲರ್ ಹಿಡಿದುಕೊಳ್ಳುವಂತೆ ಮಾಡಿದೆ” ಎಂದು ಕಮಲ್ ಹೇಳಿದ್ದಾನೆ.

    ಬುರ್ಕಾ ಧರಿಸಿದ್ದ ಮಹಿಳೆ ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು ನದಿಯಲ್ಲಿ ತೇಲುವುದಕ್ಕೂ ಕಷ್ಟ ಪಡುತ್ತಿದ್ದರು. ಬಳಿಕ ನಾನು ಮತ್ತೆ ನದಿಗೆ ಜಿಗಿದು ಅವರನ್ನು ರಕ್ಷಿಸಿದೆ. ಆದರೆ ದುರದೃಷ್ಟವಶಾತ್ ಮಗು ತಾಯಿಯ ಕೈಯಿಂದ ಜಾರಿ ನೀರಿನೊಳಗೆ ಬಿದ್ದು ಮುಂದೆ ಹೋಯಿತು. ತಾಯಿಯೂ ಕೂಡ ಮಗುವನ್ನು ರಕ್ಷಿಸಲು ನದಿಗೆ ಜಿಗಿದರು. ಆದರೆ ಈ ವೇಳೆ ನಾನು ಏನು ಮಾಡಲು ಸಾಧ್ಯವಾಗಿಲ್ಲ ಎಂದು ಕಮಲ್ ಹೇಳಿದ್ದಾನೆ.

    ಕಮಲ್ ವಾರದಲ್ಲಿ ಎರಡು ಬಾರಿ ಬ್ರಹ್ಮಪುತ್ರ ನದಿಯಲ್ಲಿ ಈಜಾಡುವುದನ್ನು ಅಭ್ಯಾಸ ಮಾಡಲು ಹೋಗುತ್ತಿದ್ದನು. ಇದರಿಂದಲೇ ಆತ ಧೈರ್ಯ ಪ್ರದರ್ಶಿಸಿ ನಮ್ಮ ಜೀವ ಉಳಿಸಲು ಸಾಧ್ಯವಾಯಿತು ಎಂದು ಕಮಲ್ ತಾಯಿ ಜಿತುಮೋನಿ ದಾಸ್ ಹೇಳಿದ್ದಾರೆ.

    ಈ ದೋಣಿಯಲ್ಲಿ ಒಟ್ಟು 36 ಮಂದಿ ಪ್ರಯಾಣಿಸುತ್ತಿದ್ದು, ಜೊತೆಗೆ ಅಕ್ರಮವಾಗಿ 18 ಮೋಟಾರ್ ಬೈಕ್ ಗಳನ್ನು ಸಾಗಿಸಲಾಗುತ್ತಿತ್ತು. ಮೂವರನ್ನು ಕಮಲ್ ರಕ್ಷಿಸಿದ್ದು, 12 ಮಂದಿ ಈಜಿ ದಡ ಸೇರಿದ್ದಾರೆ. 10 ಮಂದಿ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಇನ್ನುಳಿದಂತೆ 11 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪ್ಪ, ಮಗ ಬಿರಿಯಾನಿ ತಿಂದಿದಕ್ಕೆ ಮನೆ ಬಿಟ್ಟು ಹೋದ ಪತ್ನಿ

    ಅಪ್ಪ, ಮಗ ಬಿರಿಯಾನಿ ತಿಂದಿದಕ್ಕೆ ಮನೆ ಬಿಟ್ಟು ಹೋದ ಪತ್ನಿ

    ಬೆಂಗಳೂರು: ಅಪ್ಪ ಹಾಗೂ ಮಗ ಬಿರಿಯಾನಿ ತಿಂದಿದಕ್ಕೆ ಪತ್ನಿ ಮನೆ ಬಿಟ್ಟು ಹೋದ ಘಟನೆಯೊಂದು ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿ ನಡೆದಿದೆ.

    ಅನಿತಾ ಸರ್ಕಾರ್ (ಹೆಸರು ಬದಲಾಯಿಸಲಾಗಿದೆ) ಮನೆ ಬಿಟ್ಟು ಹೋದ ಗರ್ಭಿಣಿ. ಪತಿ ರಾಜು ಮನೆಗೆ ಬಿರಿಯಾನಿ ತಂದು ತನ್ನ ಮಗ ಆದರ್ಶ್ ಜೊತೆ ತಿನ್ನುತ್ತಿದ್ದರು. ಆದರೆ ಬಿರಿಯಾನಿ ವಾಸನೆ ಆಗಲ್ಲ ಎಂದು ಅನಿತಾ ಜಗಳವಾಡಿದ್ದಾಳೆ. ಪತಿ ಜೊತೆ ಜಗಳವಾಡಿದ ನಂತರ ನಾನು ಇನ್ಮುಂದೆ ಅಡುಗೆ ಮಾಡೋದಿಲ್ಲ ಎಂದು ಅನಿತಾ ಹೇಳಿದಳು.

    ನಂತರ ಪತಿ ರಾಜು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅನಿತಾ ಮನೆ ಬಿಟ್ಟು ಹೋಗಿದ್ದಾರೆ. ಸದ್ಯ ಈ ಬಗ್ಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    7 ವರ್ಷಗಳ ಹಿಂದೆ ಅನಿತಾ ಜೊತೆ ಮದುವೆಯಾಗಿದೆ. ನಾನು ಹಾಗೂ ಅನಿತಾ ಬೇರೆ ಮನೆ ಮಾಡಿಕೊಂಡು ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದೀವಿ. ಆದರೆ ಆಕೆ ನನಗೆ ಹುಷಾರಿಲ್ಲ ಎಂದು ಹೇಳಿದಳು ಆಗ ನಾನು 300 ರೂ. ಕೊಟ್ಟು ಆಸ್ಪತ್ರೆ ಬಳಿ ಬಿಟ್ಟು ಬಂದೆ. ಆದರೆ ಅನಿತಾ ವಾಪಸ್ ಮನೆಗೆ ಬರಲಿಲ್ಲ. ನಂತರ ಸಂಜೆ 4 ಹಂಟೆಗೆ ನಾನು ಅನಿತಾಗೆ ಫೋನ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಬಳಿಕ ನಾನು ಆಕೆಯ ತಂದೆ, ತಾಯಿ ಹಾಗೂ ಸಂಬಂಧಿಕರನ್ನು ವಿಚಾರಿಸಿದೆ. ಅಲ್ಲದೇ ಆಕೆಯನ್ನು ಹುಡುಕಿದೆ. ಆದರೆ ಅನಿತಾ ಎಲ್ಲೂ ಪತ್ತೆಯಾಗದಿದ್ದಾಗ ರಾತ್ರಿ 10.15 ಕ್ಕೆ ಠಾಣೆಗೆ ಬಂದು ಪತ್ನಿಯನ್ನು ಹುಡುಕಿ ಕೊಡುವುದಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv