Tag: mother

  • ತಾಯಿ, ಮಗಳು ನಾಪತ್ತೆ- ಪ್ರೀತಿಸುತ್ತಿದ್ದ ಯುವಕನಿಂದಲೇ ಕಿಡ್ನಾಪ್?

    ತಾಯಿ, ಮಗಳು ನಾಪತ್ತೆ- ಪ್ರೀತಿಸುತ್ತಿದ್ದ ಯುವಕನಿಂದಲೇ ಕಿಡ್ನಾಪ್?

    ಬೆಂಗಳೂರು: ಉತ್ತರಪ್ರದೇಶದಿಂದ ಬಂದು ಬೆಂಗಳೂರಿನಲ್ಲಿ ವಾಸವಾಗಿದ್ದ ಕುಟುಂಬದ ತಾಯಿ ಮತ್ತು ಮಗಳು ಏಕಾಏಕಿ ನಾಪತ್ತೆಯಾಗಿದ್ದು, ಪ್ರೀತಿಸಿದ ಯುವಕನೇ ಕಿಡ್ನಾಪ್ ಮಾಡಿರಬಹುದು ಎಂದು ಶಂಕೆ ಕೇಳಿಬಂದಿದೆ.

    ಗೋರಕ್ ಕಶ್ಯಪ್ ಮೂಲತಃ ಉತ್ತರಪ್ರದೇಶದ ಗಾಜಿಪುರ ಮೂಲದವರಾಗಿದ್ದು, ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿರುವ ಶಾಂತಿನಗರದ ಬಳಿ ಸಮೋಸ ಅಂಗಡಿಯನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದರು. ಕುಶಾಲ್ ದೇವಿಯನ್ನು ಮದುವೆಯಾಗಿದ್ದ ಗೋರಕ್ ಕಶ್ಯಪ್‍ಗೆ ಓರ್ವ ಪುತ್ರಿ, ಪುತ್ರನಿದ್ದು ಸಂಸಾರ ನೆಮ್ಮದಿಯಿಂದ ಸಾಗುತಿತ್ತು.

    ಸೆಪ್ಟಂಬರ್ 25ರಂದು ಗೋರಕ್ ಕಶ್ಯಪ್ ತನ್ನ ತಂದೆ-ತಾಯಿಯನ್ನು ನೋಡಿಕೊಂಡು ಬರುವಂತೆ ಪತ್ನಿ ಕುಶಾಲ್ ದೇವಿ ಮತ್ತು ಮಗಳಾದ ಅಂಜುವನ್ನು ಗಾಜಿಪುರಕ್ಕೆ ಕಳುಹಿಸಿದ್ದರು. ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ತೆರಳಿದ್ದ ಇಬ್ಬರು ಬಳಿಕ ನಾಪತ್ತೆಯಾಗಿದ್ದು, ಸೆಪ್ಟೆಂಬರ್ 28ರಂದು ಪತ್ನಿ ಕುಶಾಲ್ ದೇವಿ ತನ್ನ ಪತಿಗೆ ಕರೆ ಮಾಡಿ ನನ್ನ ಬಳಿ ಇದ್ದ ಹಣವನ್ನೆಲ್ಲಾ ಯಾರೋ ಕಿತ್ತುಕೊಂಡಿದ್ದಾರೆ ಎಂದು ಭಯದಲ್ಲಿ ಕರೆ ಮಾಡಿದ್ದಾರೆ. ನಂತರ ಆ ನಂಬರ್ ಗೆ ಕರೆ ಮಾಡಿದರೆ ಸ್ವಿಚ್ ಆಫ್ ಬಂದಿದೆ.

    ಪ್ರೇಮಿಯಿಂದ ಕಿಡ್ನಾಪ್?:
    ಗೋರಕ್ ಕುಟುಂಬದವರು ಸಮೋಸ ಅಂಗಡಿಯಲ್ಲಿ ಇದ್ದಾಗ ರಾಹುಲ್ ಎಂಬಾತ ಅಂಗಡಿ ಬಳಿ ಬರುತ್ತಿದ್ದನು. ಇದೇ ವೇಳೆ ಗೋರಕ್ ಕಶ್ಯಪ್ ಮಗಳಾದ ಅಂಜು ಕೂಡ ಅಂಗಡಿಯಲ್ಲಿ ಇರುತ್ತಿದ್ದಳು. ರಾಹುಲ್ ಅಂಜುವಿನ ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿದ್ದಾನೆ. ಇದೇ ವಿಚಾರಕ್ಕೆ ಹಲವಾರು ಬಾರಿ ಇವರ ಕುಟುಂಬದವರು ರಾಹುಲ್‍ನ ಜೊತೆ ಜಗಳವಾಡಿದ್ದಾರೆ. ಅಲ್ಲದೇ ರಾಹುಲ್ ಕೂಡ ತಾಯಿ ಮತ್ತು ಮಗಳು ಕಾಣೆಯಾದ ದಿನದಿಂದ ಕಾಣೆಯಾಗಿದ್ದಾನೆ. ಹೀಗಾಗಿ ಆತನೇ ಇಬ್ಬರನ್ನು ಕಿಡ್ನಾಪ್ ಮಾಡಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಅಮ್ಮ ಅಳುತ್ತಾ ತಂದೆಗೆ ತೆಲಂಗಾಣದಿಂದ ಫೋನ್ ಮಾಡಿರುವ ವಿಚಾರ ತಿಳಿದು ಮಗ ಸೋನೇಶ್ ತೆಲಂಗಾಣಕ್ಕೆ ಹೋಗಿ ತಾಯಿಯನ್ನು ಹುಡುಕುವ ಪ್ರಯತ್ನ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಇಬ್ಬರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುನಿಯಾ ವಿಜಿ ತಾಯಿಗೆ ಅನಾರೋಗ್ಯ?

    ದುನಿಯಾ ವಿಜಿ ತಾಯಿಗೆ ಅನಾರೋಗ್ಯ?

    ಬೆಂಗಳೂರು: ಅಮ್ಮನ ಮೇಲೆ ಅಪಾರ ಪ್ರೀತಿ ಹೊಂದಿರುವ ನಟ ದುನಿಯಾ ವಿಜಯ್ ಅವರ ತಾಯಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಒಬ್ಬರೆ ಆಟೋದಲ್ಲಿ ಆಸ್ಪತ್ರೆಗೆ ತೆರಳಿ ಮನೆಗೆ ವಾಪಸ್ ಆಗಿದ್ದಾರೆ.

    ವಿಜಯ್ ಅವರ ವಿವಾದಗಳಿಂದ ಬೇಸತ್ತಿರುವ ತಂದೆ ತಾಯಿ ಇಬ್ಬರು ಈ ಕುರಿತು ಚಿಂತೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಅವರಿಗೆ ಅನಾರೋಗ್ಯ ಉಂಟಾಗಿದೆ ಎನ್ನಲಾಗಿದೆ. ಸದ್ಯ ವಿಜಯ್ 2ನೇ ಪತ್ನಿ ಕೀರ್ತಿ ಅವರೊಂದಿಗೆ ವಿಶ್ರಾಂತಿ ಪಡೆಯಲು ಮಡಿಕೇರಿಗೆ ತೆರಳಿದ್ದಾರೆ. ಮಂಗಳವಾರ ಗಿರಿನಗರ ಪೊಲೀಸ್ ಠಾಣೆಗೆ ತೆರಳಿದ್ದ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ನನ್ನ ಇಬ್ಬರು ಹೆಣ್ಣು ಮಕ್ಕಳು ತಾಯಿ ನಾಗರತ್ನ ಮಾತು ಕೇಳಿಕೊಂಡು ನನ್ನ ವಿರುದ್ಧವೇ ದೂರು ನೀಡುವ ಸಾಧ್ಯತೆ ಇದೆ. ಮಕ್ಕಳು ಏನಾದರು ದೂರು ಕೊಟ್ಟರೆ ಪರಿಶೀಲಿಸಿ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಮುಂದೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ದುನಿಯಾ ವಿಜಿ ಹೆಣ್ಣು ಮಕ್ಕಳ ದೂರಿನಿಂದ ಮತ್ತೆ ಜೈಲು ಪಾಲಾಗುವ ಭೀತಿಯಲ್ಲಿದ್ದಾರೆ. ಬಳಿಕ ನೇರ ಅಲ್ಲಿಂದ ಮಡಿಕೇರಿಗೆ ತೆರಳಿದ್ದರು. ಆದರೆ ಸದ್ಯ ತಾಯಿಯ ಅನಾರೋಗ್ಯ ವಿಚಾರ ತಿಳಿದು ವಿಜಯ್ ಮತ್ತೆ ವಾಪಸ್ ಆಗುವ ಸಾಧ್ಯತೆಗಳಿದೆ.

    ಈ ಹಿಂದೆ ಹಲವು ಬಾರಿ ಮೊದಲ ಪತ್ನಿ ನಾಗರತ್ನ ಅವರ ವಿರುದ್ಧ ಆರೋಪ ಮಾಡಿದ್ದ ವಿಜಯ್, ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರಿದ್ದರು. ಅಲ್ಲದೇ ನ್ಯಾಯಾಲಯದಿಂದ ಜಾಮೀನು ಪಡೆದು ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದ ವೇಳೆಯೂ ಮೊದಲ ಪತ್ನಿಯ ವಿರುದ್ಧ ಸಾಕ್ಷಿ ಸಮೇತ ಹಲವು ಆರೋಪ ಮಾಡಿದ್ದರು.

    ಇದರ ನಡುವೇ ದುನಿಯಾ ವಿಜಯ್ ಪತ್ನಿ ನಾಗರತ್ನ ಅವರು ಇಂದು ಸಂಜೆ ಸುದ್ದಿಗೋಷ್ಠಿ ನಡೆಸಲಿದ್ದು, ವಿಜಯ್ ಕುರಿತ ಕೆಲ ಸ್ಫೋಟಕ ಸತ್ಯಗಳನ್ನು ಬಿಚ್ಚಿಡಲಿದ್ದೇನೆ ಎಂದು ತಿಳಿಸಿದ್ದಾರೆ. ಈ ಹಿಂದೆ ವಿಜಯ್ ಅವರ ವಿರುದ್ಧ ಯಾವುದೇ ಆರೋಪವನ್ನು ಮಾಡದ ನಾಗರತ್ನ ಅವರು ಕೀರ್ತಿ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದರು. ಅಲ್ಲದೇ ಕೀರ್ತಿ, ವಿಜಯ್ ಅವರ ವಿವಾಹ ನಡೆದಿಲ್ಲ ಎಂದು ಆರೋಪಿಸಿದ್ದರು. ಎಂದಿಗೂ ದುನಿಯಾ ವಿಜಯ್ ಅವರು ತಮ್ಮ ತಪ್ಪು ತಿಳಿದು ಮತ್ತೆ ನನ್ನ ಬಳಿ ಬರುತ್ತಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವಜಾತ ಶಿಶುವನ್ನು ಬ್ಯಾಗ್ ನಲ್ಲಿ ತುಂಬಿ ಬಾತ್‍ರೂಂನಲ್ಲೇ ಇಟ್ಟೋದ್ಳು!

    ನವಜಾತ ಶಿಶುವನ್ನು ಬ್ಯಾಗ್ ನಲ್ಲಿ ತುಂಬಿ ಬಾತ್‍ರೂಂನಲ್ಲೇ ಇಟ್ಟೋದ್ಳು!

    ಹೈದರಾಬಾದ್: ತೆಲಂಗಾಣದ ಮಂಚೇರಿಯಲ್ ನಗರದ ಸರ್ಕಾರಿ ಆಸ್ಪತ್ರೆಯ ಬಾತ್ ರೂಂನಲ್ಲಿ ಆಗ ತಾನೇ ಜನಿಸಿದ ಕಂದಮ್ಮನನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಸುತ್ತಿ ಇಟ್ಟಿರುವುದು ಬೆಳಕಿಗೆ ಬಂದಿದೆ.

    ಇಡೀ ರಾತ್ರಿ ಆ ಪ್ಲಾಸ್ಟಿಕ್ ಬ್ಯಾಗ್‍ನಲ್ಲೇ ಕಳೆದಿದ್ದ ಆ ಶಿಶುವನ್ನು ಬೆಳಗ್ಗೆ ಸಿಬ್ಬಂದಿ ಕಂಡ ತಕ್ಷಣವೇ ಪ್ಲಾಸ್ಟಿಕ್ ಬ್ಯಾಗ್‍ನಿಂದ ಹೊರತೆಗೆದು ಚಿಕಿತ್ಸೆ ಕೊಡಿಸಿದ್ರೂ ಮಗುವನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ.

    ಗಂಡುಶಿಶುವಿಗೆ ಜನ್ಮ ನೀಡಿದ ಮಹಿಳೆ ಭಾನುವಾರ ಸಂಜೆ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಕಂದಮ್ಮನನ್ನು ಸುತ್ತಿ ಆಸ್ಪತ್ರೆಯ ಬಾತ್‍ರೂಂನಲ್ಲಿ ಮಗುವನ್ನು ಇಟ್ಟು ಬಳಿ ಪರಾರಿಯಾಗಿದ್ದಾಳೆ ಎನ್ನಲಾಗುತ್ತಿದೆ. ಮುಂಜಾನೆ ವಾರ್ಡ್ ಸಿಬ್ಬಂದಿ ಕಸ ಗುಡಿಸಲು ಹೋದಾಗ ಶಿಶುವನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ವೈದ್ಯರನ್ನು ಕರೆದು ಮಗುವನ್ನು ಪ್ಲಾಸ್ಟಿಕ್ ಬ್ಯಾಗ್‍ನಿಂದ ಹೊರತೆಗೆದು ನಂತರ ಐಸಿಯುಗೆ ಸೇರಿಸಿದರು. ಆದ್ರೆ ಇಡೀ ರಾತ್ರಿ ಉಸಿರು ಕಟ್ಟಿದಂತಾಗಿದ್ದ ಹಸುಗೂಸು ಬದುಕುಳಿಯಲಿಲ್ಲ.

    ಸದ್ಯ ಆರೋಪಿ ತಾಯಿಗಾಗಿ ಆಸ್ಪತ್ರೆ ಹಾಗೂ ವಾರ್ಡ್‍ನ ಸುತ್ತಮುತ್ತ ಅಳವಡಿಸಿದ್ದ ಸಿಸಿ ಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಹಿಂದೆ ತಮಿಳುನಾಡಿನಲ್ಲಿ ಕೃಷ್ಣಗಿರಿ ಜಿಲ್ಲೆಯಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಅಲ್ಲಿ ಪೊದೆಯೊಂದರ ಮಧ್ಯೆ ಗಂಡು ಶಿಶು ಪತ್ತೆಯಾಗಿದ್ದು, ಮೈತುಂಬ ಇರುವೆಗಳು ಕಡಿದ ಸ್ಥಿತಿಯಲ್ಲಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಮಾರನೇ ದಿನ ಮಗು ಸಾವನ್ನಪ್ಪಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂಟಿತನದಿಂದ ಖಿನ್ನತೆ – 18 ತಿಂಗಳ ಮಗು ಜೊತೆ ಬಾವಿಗೆ ಹಾರಿದ ತಾಯಿ

    ಒಂಟಿತನದಿಂದ ಖಿನ್ನತೆ – 18 ತಿಂಗಳ ಮಗು ಜೊತೆ ಬಾವಿಗೆ ಹಾರಿದ ತಾಯಿ

    ಕಾರವಾರ: ತಾಯಿಯೊಬ್ಬರು ತನ್ನ 18 ತಿಂಗಳ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಘಟನೆಯಲ್ಲಿ ಮಗು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕಾರವಾರ ತಾಲೂಕಿನ ಅಂಗಡಿ ಗ್ರಾಮದ ಕಳಸವಾಡದಲ್ಲಿ ನಡೆದಿದೆ.

    ಅಂಗಡಿಗ್ರಾಮ ನಿವಾಸಿ ಅಲ್ಫಾನ್ಸೊ ಕುಟಿನ್ಹೊ (32) ಆತ್ಮಹತ್ಯೆಗೆ ಯತ್ನಿಸಿದವರು. ಅವರ ಪುತ್ರಿ ಸಲೂನ ಕುಟಿನ್ಹೊ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಅಲ್ಫಾನ್ಸೊ ಪತಿ ವಿದೇಶದಲ್ಲಿದ್ದು ತಾಯಿ ಮತ್ತು ಮಗು ಅಂಗಡಿ ಗ್ರಾಮದ ಕಳಸವಾಡದ ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದರು. ಇದರಿಂದಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

    ಅಲ್ಫಾನ್ಸೊ ಅವರು ಇಂದು ಮಗುವನ್ನು ಎತ್ತಿಕೊಂಡು ಬಾವಿಗೆ ಹಾರಿದ್ದ ವೇಳೆ ನೀರಿನ ಶಬ್ದ ಕೇಳಿ ಪಕ್ಕದ ಮನೆಯವರು ಇಬ್ಬರನ್ನೂ ಬಾವಿಯಿಂದ ಹೊರ ತೆಗೆದಿದ್ದಾರೆ. ಆದರೆ ಆ ವೇಳೆಗೆ ಮಗು ಮೃತಪಟ್ಟಿತ್ತು. ತಾಯಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಘಟನೆ ಕುರಿತು ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗುವಿನ ಜೊತೆ ಪರೀಕ್ಷೆಗೆ ತೆರಳಿದ ತಾಯಿ- ಅಮ್ಮನಾದ ಪೇದೆಯ ಫೋಟೋ ವೈರಲ್

    ಮಗುವಿನ ಜೊತೆ ಪರೀಕ್ಷೆಗೆ ತೆರಳಿದ ತಾಯಿ- ಅಮ್ಮನಾದ ಪೇದೆಯ ಫೋಟೋ ವೈರಲ್

    ಹೈದಾರಬಾದ್: ಮೂಸಾಪೇಟ್‍ನ ಪೊಲೀಸ್ ಪೇದೆಯೊಬ್ಬರು ಪರೀಕ್ಷೆ ಬರೆಯಲು ಬಂದಿದ್ದ ತಾಯಿಯ ಕಂದಮ್ಮನಿಗೆ ಅಮ್ಮನಾಗಿ ಸಾಂತ್ವನ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ನಾಲ್ಕು ತಿಂಗಳ ಮಗುವಿನ ತಾಯಿ ಪರೀಕ್ಷೆ ಬರೆಯಲು ಬಂದಿರುತ್ತಾರೆ. ಆ ತಾಯಿಗೆ ತೆಲಂಗಾಣ ಪೊಲೀಸ್ ಪೇದೆ ಮಗುವನ್ನು ನೋಡಿಕೊಳ್ಳುವ ಮೂಲಕ ಸಹಾಯ ಮಾಡಿದ್ದಾರೆ. ಪರೀಕ್ಷೆ ಕೇಂದ್ರದ ಹೊರಗೆ ಅಳುತ್ತಿದ್ದ ಮಗುವಿಗೆ ಸಾಂತ್ವನ ಮಾಡಲು ಯತ್ನಿಸುತ್ತಿದ್ದ ಛಾಯಾಚಿತ್ರವನ್ನು ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡುವ ಮೂಲಕ ಪೊಲೀಸ್ ಪೇದೆಗೆ ಹೃತ್ಪೂರ್ವಕ ವಂದನೆಗಳು ಎಂದು ಐಪಿಎಸ್ ಅಧಿಕಾರಿ ರೆಮಾ ರಾಜೇಶ್ವರಿ ಹಂಚಿಕೊಂಡಿದ್ದಾರೆ. ಇದೀಗ ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಪೊಲೀಸ್ ಪೇದೆ ಮುಜಿಬ್ ಉರ್ ರಹಮಾನ್ ಅವರು ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಮೂಸಾಪೇಟ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ರಹಮಾನ್ ಅವರನ್ನು ಬಾಬುಸ್ ಜೂನಿಯರ್ ಕಾಲೇಜಿನಲ್ಲಿ ನಡೆಯುವ ಪರೀಕ್ಷಾ ಕೇಂದ್ರಕ್ಕೆ ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸಲಾಗಿತ್ತು.

    ಮಗುವಿನ ತಾಯಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ಯೋಗ್ಯ ಕೆಲಸವಿರಲಿಲ್ಲ. ಅಷ್ಟೇ ಅಲ್ಲದೇ ಮಗುವಿನ ತಾಯಿ ಪೊಲೀಸ್ ಪೇದೆಯಾಗುವ ಆಸೆಯನ್ನು ಹೊಂದಿದ್ದಳು. ಹೀಗಾಗಿ ತಾಯಿ ಪರೀಕ್ಷೆ ಬರೆಯಲು ಬಂದಿದ್ದು, ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದರು. 14 ವರ್ಷದ ಹುಡುಗಿಯನ್ನು ಪರೀಕ್ಷಾ ಕೇಂದ್ರದಲ್ಲಿ ಉಸ್ತುವಾರಿಯಾಗಿ ಮಾಡಲಾಗಿತ್ತು. ಈ ವೇಳೆ ಮಗು ಅಳುತ್ತಿದ್ದದ್ದನ್ನು ಕಂಡು ಕರೆದುಕೊಂಡು ಬಂದು ನಾನು ಸಾಂತ್ವನ ಮಾಡಿದೆ ಎಂದು ರಹಮಾನ್ ಹೇಳಿದರು.

    ರಹಮಾನ್ ಅವರಿಗೆ ಇಬ್ಬರು ಮಕ್ಕಳಿದ್ದು, ಮಗ ಚೀನಾದಲ್ಲಿ ಮೆಡಿಕಲ್ ಓದುತ್ತಿದ್ದಾನೆ. ಮಗಳು ಮುಂದಿನ ವರ್ಷ ಶಾಲೆಯನ್ನು ಮುಗಿಸುತ್ತಿದ್ದಾರೆ.

    https://twitter.com/rama_rajeswari/status/1046456562825539585

    https://twitter.com/rama_rajeswari/status/1046298641273577472

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಜೋಡಿಹಕ್ಕಿಗಳಂತೆ ಇದ್ರು, ಆದ್ರೆ ಅಮ್ಮ ಬಿಟ್ಟೋದ್ರು- ಭಾವುಕರಾದ ಸಾಧುಕೋಕಿಲ

    ಜೋಡಿಹಕ್ಕಿಗಳಂತೆ ಇದ್ರು, ಆದ್ರೆ ಅಮ್ಮ ಬಿಟ್ಟೋದ್ರು- ಭಾವುಕರಾದ ಸಾಧುಕೋಕಿಲ

    ಬೆಂಗಳೂರು: ಅಪ್ಪ-ಅಮ್ಮ ಜೋಡಿಹಕ್ಕಿಗಳಂತೆ ಇದ್ದರು. ಆದರೆ ಇದೀಗ ಅಮ್ಮ ನಮ್ಮಿಂದ ದೂರವಾಗಿದ್ದಾರೆ ಅಂತ ಹೇಳುವ ಮೂಲಕ ಸ್ಯಾಂಡಲ್ ವುಡ್ ಹಾಸ್ಯನಟ ಸಾಧು ಕೋಕಿಲಾ ಭಾವುಕರಾದರು.

    ನನ್ನ ತಾಯಿ ಸಂಗೀತಕ್ಕಾಗಿ ಇಡೀ ಜೀವನ ಮುಡಿಪಾಗಿಟ್ಟಿದ್ದರು. ಅವರು ತಮ್ಮ ಕೊನೆ ಉಸಿರು ಇರೋವರೆಗೂ ಸಂಗೀತ ಕೇಳುತ್ತಿದ್ದರು. 55 ವರ್ಷದವರೆಗೂ ನಮ್ಮ ತಂದೆ ಅವರ ಜೊತೆಯೇ ಇದ್ದರು. ಅವರಿಬ್ಬರು ಜೋಡಿ ಹಕ್ಕಿಗಳಂತೆ ಇದ್ದರು, ಆದರೆ ಈಗ ಬಿಟ್ಟು ಹೋದರು ಎಂದು ಭಾವುಕರಾದ್ರು.

    ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಸ್ಪರ್ಧಿ ದೊಡ್ಡಪ್ಪ ಪುನೀತ್ ರಾಜ್‍ಕುಮಾರ್ ಅವರ ಅಭಿನಯಿಸಿದ ‘ವಂಶಿ’ ಚಿತ್ರದ ‘ತಾಯಿ ತಾಯಿ…’ ಹಾಡನ್ನು ಹಾಡಿದ್ದರು. ಈ ವೇಳೆ ಸಾಧು ಕೋಕಿಲಾ ಈ ಹಾಡನ್ನು ಕೇಳಿ ತಮ್ಮ ತಾಯಿಯನ್ನು ನೆನಪಿಸಿಕೊಂಡರು.

    ಸಾಧು ಕೋಕಿಲಾ ಅವರ ತಾಯಿ ಕಳೆದ ವಾರ ನಿಧನರಾಗಿದ್ದು, ಸ್ವತಃ ಈ ಸುದ್ದಿಯನ್ನು ಸಾಧು ಕೋಕಿಲಾ ಅವರ ಸಹೋದರಿ ಉಷಾ ಕೋಕಿಲಾ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ತಾಯಿಯ ಫೋಟೋದೊಂದಿಗೆ “ನನ್ನ ತಾಯಿ ಇನ್ನಿಲ್ಲ” ಎಂದು ಬರೆದುಕೊಂಡಿದ್ದರು.

    ಕೋಕಿಲಾ ತಾಯಿ ಮಂಗಳ ಅವರು ಆರ್ಕೇಸ್ಟ್ರಾದಲ್ಲಿ ಗಾಯಕಿ ಆಗಿದ್ದರು. ಸಾಧು ಕೋಕಿಲಾ ತಂದೆಯವರು ಕೂಡ ಪಿಟೀಲು ವಾದ್ಯ ನುಡಿಸುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಾಯಿಯನ್ನು ಬೈದಿದ್ದಕ್ಕೆ ಗೆಳೆಯನ ರುಂಡ ಕತ್ತರಿಸಿ ಠಾಣೆಗೆ ತಂದ!

    ತಾಯಿಯನ್ನು ಬೈದಿದ್ದಕ್ಕೆ ಗೆಳೆಯನ ರುಂಡ ಕತ್ತರಿಸಿ ಠಾಣೆಗೆ ತಂದ!

    ಮಂಡ್ಯ: ತಾಯಿಯನ್ನು ಬೈದಿದ್ದಕ್ಕೆ ಪಕ್ಕದ ಮನೆಯವನ ರುಂಡ ಕತ್ತರಿಸಿ ಠಾಣೆಗೆ ತೆಗೆದುಕೊಂಡು ಬಂದ ವಿಚಿತ್ರ ಘಟನೆಯೊಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ನಡೆದಿದೆ.

    ಪಶುಪತಿ(30) ರುಂಡ ತೆಗೆದುಕೊಂಡು ಠಾಣೆಗೆ ಬಂದ ವ್ಯಕ್ತಿ. ಪಶುಪತಿ ತನ್ನ ಪಕ್ಕದ ಮನೆಯ ಸ್ನೇಹಿತ ಗಿರೀಶ್ ತಲೆಯನ್ನು ಕಡಿದು ಪೊಲೀಸ್ ಠಾಣೆಗೆ ಬಂದಿದ್ದಾನೆ. ಪಶುಪತಿ ಹಾಗೂ ಗಿರೀಶ್ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ಚಿಕ್ಕಬಾಗಿಲಿನಿಂದ ಕೊಳತೂರಿಗೆ ಹೋಗುವ ರಸ್ತೆಯಲ್ಲಿ ಪಶುಪತಿ ಆತನ ತಲೆ ಕತ್ತರಿಸಿದ್ದಾನೆ. ಇದನ್ನೂ ಓದಿ:  2ನೇ ಹೆಂಡತಿಯ ಕೊಲೆಗೈದು ರುಂಡದೊಂದಿಗೆ ಪೊಲೀಸರಿಗೆ ಶರಣಾದ ಪತಿ!

    ಪಶುಪತಿ ತಂದೆ ನಾಗಣ್ಣ ಹಾಗೂ ತಾಯಿ ಸವಿತಾರಾಗಿದ್ದು, ಪಶುಪತಿಗೆ ಇನ್ನೂ ಮದುವೆಯಾಗಿಲ್ಲ. ಪಶುಪತಿ ಬೆಂಗಳೂರಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಗಣೇಶ ಹಬ್ಬಕ್ಕೆಂದು ಊರಿಗೆ ಬಂದಿದ್ದ. ಈ ವೇಳೆ ತನ್ನ ಸ್ನೇಹಿತನ ತಲೆ ಕತ್ತರಿಸಿ ಪೊಲೀಸ್ ಠಾಣೆಗೆ ಬಂದಿದ್ದಾನೆ.

    ಪಶುಪತಿ ರುಂಡ ತೆಗೆದುಕೊಂಡು ಠಾಣೆಗೆ ಬಂದಿದ್ದಾನೆ. ಈ ವೇಳೆ ಆತನ ಕೈಯಲ್ಲಿ ರುಂಡ ಇರುವುದನ್ನು ನೋಡಿ ಸಾರ್ವಕನಿಕರು ಬೆಚ್ಚಿಬಿದ್ದಿದ್ದಾರೆ. ಸದ್ಯ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮ್ಮನ ಕಾಲಿಗೆ ಬಿದ್ದು ನಮಸ್ಕರಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್- ಫೋಟೋ ವೈರಲ್

    ಅಮ್ಮನ ಕಾಲಿಗೆ ಬಿದ್ದು ನಮಸ್ಕರಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್- ಫೋಟೋ ವೈರಲ್

    ಬೆಂಗಳೂರು: ಯಾವುದೇ ಒಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ತಂದೆ-ತಾಯಿ ಮಾಡಿದ ತ್ಯಾಗ ಇರುತ್ತದೆ. ಇದಕ್ಕೆ ಎಲ್ಲರೂ ತಲೆಬಾಗ್ಲೇ ಬೇಕಾಗುತ್ತದೆ. ಇದಕ್ಕೆ ತಾಜಾ ಉದಾಹಣೆ ಎಂಬಂತೆ ಪೊಲೀಸ್ ಅಧಿಕಾರಿಯಾಗಿ ಯಶಸ್ವಿಯಾಗಿ ತರಬೇತಿ ಮುಗಿಸಿದ ಯುವಕ ನೇರ ತಾಯಿಯ ಬಳಿ ತೆರಳಿ ತನ್ನ ಸಾಧನೆಗೆ ಕಾರಣರಾದ ಅಮ್ಮನ ಕಾಲಿಗೆ ಬಿದ್ದ ನಮಸ್ಕರಿಸಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಶಂಸೆಗೆ ಕಾರಣವಾಗಿದೆ.

    ಕರ್ನಾಟಕದ ರಿಸರ್ವ್ ಪೊಲೀಸ್ ಎಡಿಜಿಪಿ, ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಈ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಮಹತ್ವ ಸಮಯದಲ್ಲಿ ಈ ಫೋಟೋ ಕ್ಲಿಕ್ ಮಾಡಿದ್ದು, ಯಶಸ್ವಿಯಾಗಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ತರಬೇತಿ ಪೂರ್ಣಗೊಳಿಸಿದ ಯುವಕ ಅಮ್ಮನ ಕಾಲಿಗೆ ನಮಸ್ಕಾರ ಮಾಡುತ್ತಿದ್ದಾರೆ ಎಂದು ತಮ್ಮ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಪೊಲೀಸ್ ಅಧಿಕಾರಿಯಾಗಿ ತರಬೇತಿ ಪೂರ್ಣಗೊಳಿಸಿದ ಯುವಕ ತನ್ನ ಸಾಧನೆ ನೋಡಲು ಪದವಿ ಪ್ರದಾನ ಸಮಾರಂಭಕ್ಕೆ ಬರಲು ಅಮ್ಮನಿಗೆ ಸಾಧ್ಯವಾಗದ ಕಾರಣ ಸಮವಸ್ತ್ರದಲ್ಲೇ ನೇರ ತನ್ನೂರಿಗೆ ತೆರಳಿದ್ದು, ಈ ವೇಳೆ ಅಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದನ್ನು ಕಂಡು ಅಲ್ಲಿಯೇ ಕಾಲಿಗೆ ನಮಸ್ಕಾರಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇದುವರೆಗೂ 17 ಸಾವಿರ ಮಂದಿ ಲೈಕ್ ಮಾಡಿದ್ದಾರೆ. 3 ಸಾವಿರ ಮಂದಿ ರೀಟ್ವೀಟ್ ಮಾಡಿದ್ದಾರೆ. ಇದು ತಾಯಿಗೆ ಹೆಮ್ಮೆಯ ಸಮಯವಾಗಿದ್ದು, ಮಕ್ಕಳು ಸಾಧನೆ ಮಾಡಲು ಪೋಷಕರು ತಮ್ಮ ಸರ್ವಸ್ವವವನ್ನು ತ್ಯಾಗ ಮಾಡುತ್ತಾರೆ ಎಂದು ಟ್ವಿಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

    https://twitter.com/NewIndiaSpeaks/status/1044833586803867648?

    ಗಂಡನನ್ನು ಕಳೆದುಕೊಂಡ ತಾಯಿ ಮಗನನ್ನು ಬೆಳೆಸಲು ಎಲ್ಲಾ ಜವಾಬ್ದಾರಿಯನ್ನು ಒಬ್ಬರೇ ನಿರ್ವಹಿಸಿದ್ದು, ಸದ್ಯ ಅವರ ಮಗ ಉತ್ತಮ ಸಾಧನೆ ಮಾಡಿದ್ದಾರೆ. ಇಂತಹ ಮೌಲ್ಯಗಳು ಸಮಾಜದಲ್ಲಿ ಇಂದಿಗೂ ಇರುವುದರಿಂದ ನಾವು ಜೀವಿಸಲು ಸಾಧ್ಯವಾಗುತ್ತಿದೆ ಎಂದು ಜಯರಾಮ್ ಎಂಬವರು ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

    ಆದರೆ ಫೋಟೋದಲ್ಲಿರುವ ಅಧಿಕಾರಿ ಯಾರು ಎಂಬುದು ಮಾತ್ರ ರಿವೀಲ್ ಆಗಿಲ್ಲ. ಆ ಅಧಿಕಾರಿ ಯಾರು ಎಂಬ ಮಾಹಿತಿ ಇದೆಯಾ ಎಂದು ಟ್ವಿಟ್ಟಿಗರು ಭಾಸ್ಕರ್ ರಾವ್ ಅವರನ್ನು ಕೋರಿದ್ದು, ಈ ಕುರಿತು ಮಾಹಿತಿ ಕಲೆ ಹಾಕುತ್ತಿರುವುದಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/Shirina777/status/1044236229896593408?

  • ಸೀಮೆ ಎಣ್ಣೆ ಸುರಿದುಕೊಂಡು 11 ತಿಂಗಳ ಮಗುವಿನ ಜೊತೆ ತಾಯಿ ಆತ್ಮಹತ್ಯೆ!

    ಸೀಮೆ ಎಣ್ಣೆ ಸುರಿದುಕೊಂಡು 11 ತಿಂಗಳ ಮಗುವಿನ ಜೊತೆ ತಾಯಿ ಆತ್ಮಹತ್ಯೆ!

    ಕೊಪ್ಪಳ: ಸೀಮೆ ಎಣ್ಣೆ ಸುರಿದುಕೊಂಡು ತಾಯಿ ಹಾಗೂ 11 ತಿಂಗಳ ಮಗು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ನಡೆದಿದೆ.

    ತೇಜಸ್ವೀನಿ(23) ಮತ್ತು ವರ್ಷಿಣಿ(11) ತಿಂಗಳ ಮಗು ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳು. ಪತಿ ಕಿರಣ್ ಮೊದಲ ಪತ್ನಿಯಿಂದ ದೂರವಾದ ಬಳಿಕ ತೇಜಸ್ವಿನಿ ಅವರನ್ನು 2 ವರ್ಷದ ಹಿಂದೆ ವಿವಾಹವಾಗಿದ್ದನು. ಮೊದಲ ಪತ್ನಿ ಕಿರಣ್ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಪತಿಯನ್ನು ತೊರೆದಿದ್ದರು ಎಂದು ಹೇಳಲಾಗುತ್ತಿದೆ.

    ತೇಜಸ್ವೀನಿ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಮಹಿಳೆ ಪೋಷಕರು ಪತಿ ಕಿರಣ್ ವಿರುದ್ಧ ಕೊಲೆಯ ಆರೋಪ ಮಾಡುತ್ತಿದ್ದಾರೆ. ಸದ್ಯ ಕಿರಣ್ ನನ್ನು ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಸ್ಥಳಕ್ಕೆ ಗಂಗಾವತಿ ಆಥಿsಠಿ ಸಂತೋಷ್ ಬನಹಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ವಿಷ ಕೊಟ್ಬಿಡಿ ಸಾಯ್ತೀನಿ- ಸರ್ಕಾರಿ ಕೆಲಸದಲ್ಲಿರೋ ಮಕ್ಕಳ ತಾಯಿಯ ಅಳಲು

    ವಿಷ ಕೊಟ್ಬಿಡಿ ಸಾಯ್ತೀನಿ- ಸರ್ಕಾರಿ ಕೆಲಸದಲ್ಲಿರೋ ಮಕ್ಕಳ ತಾಯಿಯ ಅಳಲು

    ದಾವಣಗೆರೆ: ಮೂರು ಜನ ಮಕ್ಕಳು ಸರ್ಕಾರಿ ಕೆಲಸದಲ್ಲಿ ಇದ್ದರೂ ಹೆತ್ತ ತಾಯಿಯನ್ನು ಪಾಳು ಬಿದ್ದ ಮನೆಯಲ್ಲಿ ಬಿಟ್ಟು ಹೋದ ಮನಕಲುಕುವ ಘಟನೆ ದಾವಣಗೆರೆ ಜಿಲ್ಲೆಯ ಗುಡಾಳ್ ಗ್ರಾಮದಲ್ಲಿ ನಡೆದಿದೆ.

    ಗುಡಾಳ್ ಗ್ರಾಮದ ನಿವಾಸಿ ಹಿರಿಯಮ್ಮ ಅನಾಥೆಯಂತೆ ಜೀವನ ನಡೆಸುತ್ತಿರುವ ವೃದ್ಧೆ. ಹಿರಿಯಮ್ಮ ಅವರ ಹಿರಿಯ ಮಗ ವೇದಮೂರ್ತಿ ಹರಿಹರ ತಾಲೂಕಿನಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಮಗಳು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

    ಹಿರಿಯಮ್ಮ ಅವರ ಪತಿ ತಿಪ್ಪೇಸ್ವಾಮಿ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದು, ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಪತಿಯ ಸಾವಿನ ನಂತರ ಹಿರಿಯಮ್ಮ ಅವರಿಗೆ ಸಿಗುತ್ತಿದ್ದ ಪಿಂಚಣಿ ಹಣ ಹಾಗೂ ಆಸ್ತಿಯನ್ನು ಮಕ್ಕಳು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಬಳಿಕ ಅವರನ್ನು ಯಾರೊಬ್ಬರು ನೋಡಿಕೊಳ್ಳದೆ ಪಾಳು ಬಿದ್ದ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ.

    ವೃದ್ಧೆ ಹಿರಿಯಮ್ಮ ಅವರು ಇರುವ ಮನೆಯ ಮೇಲ್ಛಾವಣಿ ಹಂಚುಗಳು ಮುರಿದಿವೆ. ಮನೆಯ ಒಂದು ಭಾಗದ ಗೋಡೆ ಕುಸಿದಿದ್ದು, ಮಳೆಯಾದರೆ ಮನೆಯ ತುಂಬಾ ನೀರು ನಿಲ್ಲುತ್ತದೆ. ಮಹಾಮಳೆಗೆ ಮನೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಆದರೂ ಮಕ್ಕಳು ಮಾತ್ರ ತಾಯಿಯ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲವಂತೆ. ಮುಪ್ಪಿನಲ್ಲಿ ನೋಡಿಕೊಳ್ಳಬೇಕಾದ ಮಕ್ಕಳೇ ತಾಯಿಯನ್ನು ಪಾಳುಬಿದ್ದ ಮನೆಯಲ್ಲಿ ಬಿಟ್ಟು ಹೋಗಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಿರಿಯಮ್ಮ ಅವರ ಪರಿಸ್ಥಿತಿಯನ್ನು ನೋಡಲಾಗದೇ ಗ್ರಾಮದ ಕೆಲವರು ಊಟ-ಉಪಚಾರ ಮಾಡುತ್ತಿದ್ದಾರೆ. ಮಕ್ಕಳು ಹೆತ್ತ ತಾಯಿಯನ್ನು ನೋಡಲಿಕ್ಕೂ ಕೂಡ ಬರುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ.

    ನನಗೆ ವಿಷ ಕೊಟ್ಟುಬಿಡಿ ಸಾಯುತ್ತೇನೆ. ಮಕ್ಕಳ ಮನೆಗೆ ಹೋದರೆ ನಾಯಿ ತರ ನನ್ನ ನೋಡುತ್ತಾರೆ. ಹೆತ್ತು ಹೊತ್ತು ಮಕ್ಕಳನ್ನು ಸಾಕಿದರೆ ನನಗೆ ಈ ಪರಿಸ್ಥಿತಿ ಬಂದಿದೆ ಎಂದು ಹಿರಿಯಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv