Tag: mother

  • ಸರ್ಪ್ರೈಸ್ ನೋಡಿ ದೊಡ್ಡ ವೇದಿಕೆಯಲ್ಲೇ ಕಣ್ಣೀರಿಟ್ಟ ಹನುಮಂತ

    ಸರ್ಪ್ರೈಸ್ ನೋಡಿ ದೊಡ್ಡ ವೇದಿಕೆಯಲ್ಲೇ ಕಣ್ಣೀರಿಟ್ಟ ಹನುಮಂತ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ “ಸರಿಗಮಪ ಸೀಸನ್ 15′ ರಲ್ಲಿ ಕುರಿಗಾಹಿ ಅಂತಲೇ ಖ್ಯಾತಿ ಪಡೆದಿರುವ ಹನುಮಂತನಿಗೆ ವಾಹಿನಿ ಒಂದು ಸರ್ಪ್ರೈಸ್ ನೀಡಿದೆ. ಆದರೆ ಆ ಸರ್ಪ್ರೈಸ್ ನೋಡಿ ಹನುಮಂತ ವೇದಿಯ ಮೇಲೆಯೇ ಕಣ್ಣೀರು ಹಾಕಿದ್ದಾರೆ.

    ಇದೇ ಭಾನುವಾರ ಖಾಸಗಿ ವಾಹಿನಿಯಲ್ಲಿ ‘ಜೀ ಕುಟುಂಬ ಅವಾರ್ಡ್ಸ್ ‘ಕಾರ್ಯಕ್ರಮ ಪ್ರಸಾರವಾಗಿದೆ. ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಿರುತೆರೆಯಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದಿರುವ ನಟ-ನಟಿ ಸೇರಿದಂತೆ ಕಲಾವಿದರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗಿತ್ತು.

    ಇದೇ ಕಾರ್ಯಕ್ರಮದಲ್ಲಿ ಜನತೆ ಮೆಚ್ಚಿದೆ ಅಚ್ಚುಮೆಚ್ಚಿನ ಸ್ಪರ್ಧಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಗೆ 5 ಮಂದಿ ನಾಮಿನೇಟ್ ಆಗಿದ್ದರು. ಆದರೆ ಕೊನೆಯಲ್ಲಿ ಸರಿಗಮಪ ಸೀಸನ್ 5ರ ಸ್ಪರ್ಧಿ ಹನುಮಂತನಿಗೆ ಪ್ರಶಸ್ತಿ ಲಭಿಸಿದೆ. ಈ ಸಂದರ್ಭದಲ್ಲಿ ಹನುಮಂತ ವೇದಿಕೆಯ ಮೇಲೆ ಹೋಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಹನುಮಂತ್ ತಮ್ಮ ತಂದೆ-ತಾಯಿ ಇಬ್ಬರನ್ನು ಬಿಟ್ಟು ಬೆಂಗಳೂರಿಗೆ ಬಂದು 20 ದಿನಗಳಾಗಿತ್ತು.

    ಈ ಹಿಂದೆ ಸರಿಗಮಪ ವೇದಿಕೆಯಲ್ಲಿ ತಾಯಿಯನ್ನು ನೆನೆದು ಭಾವುಕರಾಗಿದ್ದರು. ಆದ್ದರಿಂದ ಪ್ರಶಸ್ತಿಯ ಜೊತೆ ಅವರ ತಾಯಿ ಶೀಲವ್ವ ಅವರನ್ನು ಕರೆಸಲಾಗಿತ್ತು. ಆಗ ವೇದಿಕೆಯ ಮೇಲೆ ತಾಯಿಯನ್ನು ನೋಡಿ ಒಂದು ಕ್ಷಣ ಹನುಮಂತ ಮೂಕರಾಗಿ ನಿಂತು ಕಣ್ಣೀರು ಹಾಕಿದ್ದಾರೆ. ಬಳಿಕ ಹನುಮಂತನ ಆಸೆಯಂತೆ ತಮ್ಮ ಮನೆಯಿಂದ ಜೋಳದ ರೊಟ್ಟಿ ತಂದು ತಾಯಿ ಕೈಯಿಂದ ವೇದಿಕೆಯ ಮೇಲೆಯೇ ತಿನ್ನಿಸಿದ್ದಾರೆ.

    ಹನುಮಂತ ಜೊತೆಗೆ ವೇದಿಕೆ ಮೇಲಿದ್ದ ನಿರೂಪಕರು ಕೂಡ ಸೇರಿ ಕುಳಿತು ಅವರ ಕೈಯಿಂದ ಕೈತ್ತುತ್ತು ತಿಂದಿದ್ದಾರೆ. ಹನುಮಂತ ಯಾವುದೇ ಸಂಗೀತ ತರಬೇತಿಗೂ ಹೋಗದೆ, ಕುರಿ ಕಾಯುತ್ತಾ, ಫೋನಿನಲ್ಲಿ ಹಾಡು ಕೇಳುತ್ತಾ ಬೆಳೆದಿದ್ದರು. ಇಂದು ಸರಿಗಮಪ ಕಾರ್ಯಕ್ರಮದ ಮೂಲಕ ಜನತೆಯ ಮೆಚ್ಚುಗೆಯನ್ನು ಪಡೆದು ಕುರಿಗಾಯಿ ಹನುಮಂತ ಎಂದು ಖ್ಯಾತಿ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾಸಿಗೆ ಇಲ್ಲವೆಂದು ತಾಯಿ-ಮಗುವನ್ನು ನೆಲದಲ್ಲೇ ಮಲಗಿಸಿದ್ರು!

    ಹಾಸಿಗೆ ಇಲ್ಲವೆಂದು ತಾಯಿ-ಮಗುವನ್ನು ನೆಲದಲ್ಲೇ ಮಲಗಿಸಿದ್ರು!

    ಚಾಮರಾಜನಗರ: ಹಾಸಿಗೆ ಇಲ್ಲ ಎಂಬ ಕಾರಣಕ್ಕೆ ಆಗ ತಾನೇ ಜನಿಸಿದ ಮಗುವನ್ನು ತನ್ನ ತಾಯಿಯೊಂದಿಗೆ ನೆಲದ ಮೇಲೆ ಮಲಗಿಸಿರುವ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಚಿಕ್ಕಹೊಳೆಯ ಜಯಲಕ್ಷ್ಮಿ ಅವರಿಗೆ ಹೆರಿಗೆ ಆಗಿ ಕೆಲ ನಿಮಿಷಗಳಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ ಎಂಬ ಕಾರಣಕ್ಕೆ ತಾಯಿ ಹಾಗೂ ಮಗುವನ್ನು ಆಸ್ಪತ್ರೆಯ ಸಿಬ್ಬಂದಿ ನೆಲದ ಮೇಲೆ ಮಲಗಿಸಿದ್ದಾರೆ. ನೆಲದ ಮೇಲೆ ಚಾಪೆ ಹಾಸಿ ಬಾಣಂತಿ ಹಾಗೂ ಎಳೆ ಕಂದಮ್ಮನನ್ನು ಮಲಗಿಸಲಾಗಿದೆ. ಈ ವೇಳೆ ಬಾಣಂತಿಯ ಪೋಷಕರು ತಮ್ಮ ಮನೆಯಿಂದ ತಂದಿದ್ದ ಬೆಟ್ ಶೀಟನ್ನು ತಾಯಿ-ಮಗುವಿಗೆ ಹೊದಿಕೆಯ ರೂಪದಲ್ಲಿ ಹಾಕಿದ್ದಾರೆ.

    ಆಸ್ಪತ್ರೆಯ ಸಿಬ್ಬಂದಿ ಬಾಣಂತಿ ಹಾಗೂ ಮಗುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಚಾಪೆಯ ಮೇಲೆ ಹಾಸಿಗೆ ಹಾಸಿಕೊಡುವ ಸೌಜನ್ಯಕ್ಕೂ ಮುಂದಾಗಿಲ್ಲ. ಹೀಗಾಗಿ ಬಾಣಂತಿ ಹಾಗೂ ಮಗು ಚಳಿಯಲ್ಲಿ ನಡುಗುತ್ತಿದ್ದಾರೆ. ಹಿಂದುಳಿದ ವರ್ಗ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಸ್ವಕೇತ್ರವಾದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ನಿತ್ಯ ಇದೇ ರೀತಿ ಒಂದಲ್ಲಾ ಒಂದು ಸಮಸ್ಯೆಗಳಿಂದ ಇಲ್ಲಿನ ಜನರು ಬಳಲುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನೈತಿಕ ಸಂಬಂಧದಿಂದ ಮಗು ಜನನ- ಅಂದು ಶಿಶು ಬೇಡವೆಂದಿದ್ದ ತಾಯಿ ಇಂದು ವಾಪಸ್

    ಅನೈತಿಕ ಸಂಬಂಧದಿಂದ ಮಗು ಜನನ- ಅಂದು ಶಿಶು ಬೇಡವೆಂದಿದ್ದ ತಾಯಿ ಇಂದು ವಾಪಸ್

    ಧಾರವಾಡ: ಅನೈತಿಕ ಸಂಬಂಧದಿಂದ ಮಗು ಹುಟ್ಟಿದ ಮಗುವನ್ನು ಬೇಡವೆಂದ ಮಹಿಳೆ ಇದೀಗ ಮಕ್ಕಳ ರಕ್ಷಣಾ ಘಟಕದ ಮೊರೆ ಹೋಗುವ ಮುಲಕ ಮಗುವನ್ನು ವಾಪಸ್ ಪಡೆದ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ.

    ಧಾರವಾಡ ನಗರದ ತಾಯಿಯ ಮನವಿ ಆಲಿಸಿದ ಮಕ್ಕಳ ರಕ್ಷಣಾ ಘಟಕದವರು, ತಾಯಿಗೆ ತನ್ನ ಮಗುವನ್ನ ಕೊಡಿಸುವಲ್ಲಿ ಸಫಲರಾಗಿದ್ದಾರೆ.

    ಕಳೆದ ಒಂದೂವರೆ ವರ್ಷದ ಹಿಂದೆ ಧಾರವಾಡ ನಗರದ ಲಕ್ಷ್ಮಿಸಿಂಗನಕೇರೆ ಬಡಾವಣೆಯ ಮಹಿಳೆಯೊಬ್ಬಳಿಗೆ ಅನೈತಿಕ ಸಂಬಂಧದಿಂದ ಗಂಡು ಮಗು ಹುಟ್ಟಿತ್ತು. ಈ ಮಗುವನ್ನು ಮಹಿಳೆಯ ಅಣ್ಣ ತಂದು ತಮ್ಮ ಮನೆಯಲ್ಲಿ ಸಾಕ್ತಿದ್ದರು. ಆದ್ರೆ ಇಷ್ಟು ದಿನ ಸುಮ್ಮನಿದ್ದ ಈ ಮಹಿಳೆ ಇದೀಗ ತನ್ನ ಮಗನ ನೆನಪಾಗಿದೆ. ಹೀಗಾಗಿ ಅಣ್ಣನ ಬಳಿ ಬಂದು ತನ್ನ ಮಗುವನ್ನು ತನಗೆ ವಾಪಸ್ ಕೊಡುವಂತೆ ಕೇಳಿದ್ದಾಳೆ. ಆದ್ರೆ ಅಣ್ಣ ಶಂಕರ್ ಗೋಸಾವಿ ತನಗೆ 4 ಲಕ್ಷ ಕೊಡು ಮಗು ಕೊಡುತ್ತೇನೆ ಅಂತ ಹೇಳಿದ್ದಾನೆ. ಇದರಿಂದ ಮಹಿಳೆ ಮಕ್ಕಳ ರಕ್ಷಣಾ ಘಟಕಕ್ಕೆ ತೆರಳಿ ಮನವಿ ಮಾಡಿಕೊಂಡಿದ್ದಾಳೆ.

    ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಹಿಳೆಯ ಅಣ್ಣನ ಮನಗೆ ಹೋಗಿ ಆ ಮಗುವನ್ನು ತಾಯಿಗೆ ಕೊಡಿಸಿದ್ದಾರೆ. ಈ ಮಹಿಳೆಗೆ ಮೊದಲು ಮದುವೆಯಾಗಿತ್ತು. ಗಂಡ ಕುಡುಕನಾಗಿದ್ದರಿಂದ ಅವನ ಜೊತೆ ವಿಚ್ಛೇದನ ಕೊಡಿಸಲಾಗಿತ್ತು. ಸದ್ಯ ಮಗು ಪಡೆದ ಮಹಿಳೆಗೆ ಸಾಧನಾ ಸಂಸ್ಥೆಯಲ್ಲಿ ಆಶ್ರಯ ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತನ್ನಿಬ್ಬರ ಮಕ್ಕಳಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ತಾಯಿ

    ತನ್ನಿಬ್ಬರ ಮಕ್ಕಳಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ತಾಯಿ

    ಬೆಂಗಳೂರು: ತನ್ನಿಬ್ಬರ ಮುದ್ದು ಮಕ್ಕಳಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಸೊಸೆನೂರುಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಾಯಿ ಲಕ್ಷ್ಮಿ ಹಾಗೂ ಇಬ್ಬರು ಮಕ್ಕಳಾದ ಪವನ್(3), ಸಾತ್ವಿಕ್ (5) ಮೃತರು. ಪತಿ ಆನಂದ್ ಕಿರುಕುಳಕ್ಕೆ ಬೇಸತ್ತು ತಾಯಿ-ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಆರು ವರ್ಷಗಳ ಹಿಂದೆ ಲಕ್ಷ್ಮಿ ಮತ್ತು ಆನಂದ್ ಮದುವೆ ನಡೆದಿತ್ತು. ಪತಿ-ಪತ್ನಿ ನಡುವೆ ಪ್ರತಿನಿತ್ಯ ಗಲಾಟೆ ನಡೆಯುತ್ತಿತ್ತು. ಭಾನುವಾರ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸಂಜೆ 5 ಗಂಟೆಗೆ ಪತಿ ಆನಂದ್ ಮನೆಗೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡ್ಯೂಟಿ ಜೊತೆ ತಾಯ್ತನದ ಜವಾಬ್ದಾರಿ ಮೆರೆದ ಮಹಿಳಾ ಪೊಲೀಸ್

    ಡ್ಯೂಟಿ ಜೊತೆ ತಾಯ್ತನದ ಜವಾಬ್ದಾರಿ ಮೆರೆದ ಮಹಿಳಾ ಪೊಲೀಸ್

    – ವೈರಲ್ ಆಯ್ತು ತಾಯಿ ಮಗುವಿನ ಫೋಟೋ!

    ಲಕ್ನೋ: ಉತ್ತರಪ್ರದೇಶದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕರ್ತವ್ಯದ ಜೊತೆಗೆ ತನ್ನ ತಾಯ್ತನದ ಜವಾಬ್ದಾರಿಯನ್ನೂ ಸಹ ಮರೆಯದೆ ಎರಡರಲ್ಲೂ ನಿರತವಾಗಿ ಕೆಲಸಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಹೌದು, ಪೊಲೀಸರು, ಯೋಧರು ಹಾಗೂ ಇತರೆ ದೇಶಸೇವೆಯಲ್ಲಿ ತೊಡಗಿಕೊಂಡವರಿಗೆ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗಿಂತ ಜನರ ರಕ್ಷಣೆ, ದೇಶ ಸೇವೆಯೇ ಮುಖ್ಯವಾಗಿರುತ್ತದೆ. ಇದಲ್ಲದೇ ಈ ವೃತ್ತಿಯಲ್ಲಿರುವ ಮಹಿಳೆಯರು ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದಲ್ಲೂ ಹೆಚ್ಚು ಗಮನ ಹರಿಸಬೇಕಾಗಿರುತ್ತದೆ. ಗಂಡ, ಮನೆ, ಮಕ್ಕಳನ್ನು ನೋಡಿಕೊಳ್ಳುವ ಜವಬ್ದಾರಿಯು ಸಹ ಅವರಿಗೆ ಪ್ರಮುಖವಾಗಿರುತ್ತದೆ.

    https://twitter.com/navsekera/status/1056036428474388480

    ಉತ್ತರಪ್ರದೇಶದ ಇನ್ಸ್ ಪೆಕ್ಟರ್ ಜನರಲ್ ನವನೀತ್ ಸೆಕೆರಾ ತಮ್ಮ ಟ್ವಿಟ್ಟರ್ ನಲ್ಲಿ ತಮ್ಮ ಕಚೇರಿಯ ಮಹಿಳಾ ಪೊಲೀಸ್ ಅಧಿಕಾರಿಯು ತನ್ನ ಕರ್ತವ್ಯದ ಜೊತೆಗೆ ತನ್ನ ಪಕ್ಕದಲ್ಲಿ ಅಂದಾಜು ಒಂದು ವರ್ಷದ ಮಗುವನ್ನು ಮಲಗಿಸಿಕೊಂಡು ಕರ್ತವ್ಯದಲ್ಲಿ ನಿರತರಾಗಿರುವ ಫೋಟೋವನ್ನು ಪ್ರಕಟಿಸಿದ್ದರು. ಈ ಫೋಟೋ ನೋಡಿದ ಜಾಲತಾಣಿಗರು ತಾಯಿಯ ಪ್ರೀತಿ ಹಾಗೂ ಅವರ ಕರ್ತವ್ಯ ನಿಷ್ಠೆಯನ್ನು ಕೊಂಡಾಡಿದ್ದಾರೆ.

    ಸೆಕೆರಾ ಎಂಬವರು ತಮ್ಮ ಟ್ವಿಟ್ಟರಿನಲ್ಲಿ, ಇದೊಂದು ಅದ್ಭುತ, ಇದಕ್ಕೆ ಯಾವುದೇ ಬರಹವನ್ನು ಹಾಕುವ ಅಗತ್ಯವಿಲ್ಲ ಎಂದು ಬರೆದುಕೊಂಡು ಫೋಟೋವನ್ನು ಹಾಕಿಕೊಂಡಿದ್ದರು. ಒಬ್ಬ ತಾಯಿ ತನ್ನ ಕರ್ತವ್ಯದ ಸ್ಥಳದಲ್ಲಿಯೂ ಸಹ, ತಾಯಿ ಪ್ರೀತಿಯನ್ನು ಮಗುವಿಗೆ ನೀಡುವುದನ್ನು ಮರೆಯುವುದಿಲ್ಲ. ಮಹಿಳೆಯೊಬ್ಬಳಿದಂದಲೇ ಎರಡೂ ಕೆಲಸಗಳನ್ನು ನಿಭಾಯಿಸುವುದು ಸಾಧ್ಯ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಣದಾಸೆಗೆ 20 ದಿನದ ಗಂಡು ಮಗುವನ್ನೇ ಮಾರಾಟ ಮಾಡಿದ್ಳು..!

    ಹಣದಾಸೆಗೆ 20 ದಿನದ ಗಂಡು ಮಗುವನ್ನೇ ಮಾರಾಟ ಮಾಡಿದ್ಳು..!

    ಕಲಬುರಗಿ: ತಾಯಿಯೊಬ್ಬಳು ಹಣದಾಸೆಗೆ ತನ್ನ ಕರುಳ ಕುಡಿಯನ್ನು ಮಾರಾಟ ಮಾಡಿದ ಪ್ರಕರಣವೊಂದು ಕಲಬುರಗಿಯ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ ನಡೆದಿದೆ.

    ರಜಿಯಾ ಹಣಕ್ಕಾಗಿ ಮಗುವನ್ನು ಮಾರಾಟ ಮಾಡಿದ ತಾಯಿ. ರಜಿಯಾ ಕಳೆದ 20 ದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಆಗುವುದರ ಜೊತೆಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿ ನಂತರ ಆಸ್ಪತ್ರೆಯಿಂದ ಡಿಸ್ಚಾಜ್9 ಕೂಡ ಆಗಿದ್ದಳು. ಆದರೆ ಮಗುವಿನ ತೂಕ ಕಡಿಮೆ ಇದ್ದ ಕಾರಣ ಪುನಃ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಈ ವೇಳೆ ಸಂಬಂಧಿ ನಗರದ ಟಿಪ್ಪು ಚೌಕ್ ಬಡಾವಣೆ ನಿವಾಸಿ ರೆಹಮತ್ ಉನ್ನಿಸಾ ಎಂಬಾಕೆ ಯೋಗಕ್ಷೇಮ ವಿಚಾರಿಸಲು ಬಂದಾಗ ಮಗುವಿನ ತಾಯಿ ರಜಿಯಾ ತನ್ನ ಕಡು ಬಡತನದ ಕಥೆ ಆಕೆಯ ಮುಂದೆ ಬಿಚ್ಚಿಟ್ಟು ನನಗೆ ಮಗುವನ್ನು ಸಾಕೋಕೆ ಆಗ್ತಿಲ್ಲ. ಕಂಡವರ ಮನೆ ಕಸ ಮುಸುರೆ ಕೆಲಸ ಮಾಡಿದರೆ ಹೊಟ್ಟೆ ತುಂಬುವುದು ಅಂತಾ ತನ್ನ ಅಳಲನ್ನ ತೋಡಿಕೊಂಡಳು.

    ನಾನು ಮಗು ಮಾರಾಟ ಮಾಡುತ್ತೇನೆ ನೀನೇ ತಗೋ ಅಂತಾ ಹೇಳಿದ್ದಾಳೆ. ಅದಕ್ಕೆ ಸಂಬಂಧಿ ರೆಹಮತ್ ಉನ್ನಿಸಾ, ನಿನಗೆ 10 ಸಾವಿರ ರೂ. ಹಣ ಕೊಡುತ್ತೇನೆ. ಮಗು ನನಗೆ ಕೊಡು ಅಂತಾ ಹೇಳಿ ಐದು ಸಾವಿರ ರೂ. ಅಡ್ವಾನ್ಸ್ ಕೊಟ್ಟು ಮಗುವನ್ನು ತೆಗೆದುಕೊಂಡು ಹೋಗಿದ್ದಾಳೆ. ಈ ವಿಷಯ ರಜಿಯಾ ಗಂಡನಿಗೆ ಗೊತ್ತಿಲ್ಲದೆ ತನ್ನ ಗಂಡು ಮಗುವನ್ನು ಮಾರಾಟ ಮಾಡಿದ್ದಾಳೆ.

    ರಜಿಯಾಗೆ ಎರಡು ಹೆಣ್ಣು ಮಕ್ಕಳಿದ್ದು ಇದೀಗ ಮೂರನೇಯದಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಕಡು ಬಡತನವಿದ್ದ ಕಾರಣ ಪತಿ ಕೂಲಿ ಕೆಲಸಕ್ಕೆ ಹೋದರೆ ಈಕೆ ಮನೆ ಮನೆಗೆ ಹೋಗಿ ಮುಸುರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಳು. ಆದರೆ ಇತ್ತೀಚಿಗಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ತುತ್ತು ಅನ್ನಕ್ಕೂ ಪರದಾಡುವ ಗಂಭೀರ ಪರಿಸ್ಥಿತಿಯಲ್ಲಿ ಮಕ್ಕಳನ್ನು ಹೇಗೆ ಸಾಕಲಿ ಎನ್ನುವ ಚಿಂತೆಗೆ ರಜಿಯಾ ಜಾರಿದ್ದಳು.

    ಮಾರಾಟ ಮಾಡುವ ನಿರ್ಧಾರಕ್ಕೆ ಬಂದ ರಜಿಯಾ ಕೇವಲ 10 ಸಾವಿರ ರೂ.ಗೆ ಮಾರಾಟ ಮಾಡಿದ್ದಾಳೆ. ಇದೇ ವೇಳೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ನರಿಬೋಳ ಗ್ರಾಮದ ಮಹಿಳೆಯೊಬ್ಬಳು ನಿನ್ನ ಮಗು ಹೇಗಿದೆ ಅಂತಾ ಪ್ರಶ್ನಿಸಿದ್ದಾಳೆ. ಈ ವೇಳೆ ತಾನು ಮಗು ಮಾರಾಟ ಮಾಡಿದ್ದಾಗಿ ಹೇಳಿದ್ದಾಳೆ. ತಕ್ಷಣವೇ ಈ ವಿಷಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಗೊತ್ತಾಗಿದೆ. ಇದರಿಂದ ಕಾರ್ಯಪ್ರವೃತ್ತರಾದ ಮಕ್ಕಳ ರಕ್ಷಣಾ ಘಟಕದ ಸದಸ್ಯರು ತಾಯಿಯನ್ನು ವಿಚಾರಣೆಗೊಳಪಡಿಸಿದಾಗ ಮಾಹಿತಿ ಬಹಿರಂಗಗೊಂಡಿದೆ. ನಂತರ ಮಹಿಳಾ ಪೊಲೀಸ್ ಠಾಣೆಗೆ ತಾಯಿ ರಜಿಯಾ ಮತ್ತು ಮಗು ಪಡೆದ ರೆಹಮತ್ ಉನ್ನಿಸಾರನ್ನು ಒಪ್ಪಿಸಿದ್ದಾರೆ. ಸದ್ಯ ಮಗು ಅಪೌಷ್ಟಿಕಯಿಂದ ಬಳಲುತ್ತಿರುವ ಕಾರಣ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗು ಅಳುತ್ತದೆಂದು ಬಾತ್ ಟಬ್‌ನಲ್ಲಿ  ಮುಳುಗಿಸಿ ಕೊಂದೇ ಬಿಟ್ಟಳು!

    ಮಗು ಅಳುತ್ತದೆಂದು ಬಾತ್ ಟಬ್‌ನಲ್ಲಿ ಮುಳುಗಿಸಿ ಕೊಂದೇ ಬಿಟ್ಟಳು!

    ವಾಷಿಂಗ್ಟನ್: ಹೆತ್ತ ಮಗು ಅಳೋದನ್ನ ಕೇಳಲಾಗದ ಕ್ರೂರ ತಾಯಿಯೊಬ್ಬಳು ಒಂದು ತಿಂಗಳ ಹಸುಗೂಸನ್ನು ಬಾತ್ ಟಬ್ ನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಅರಿಝೋನಾದಲ್ಲಿ ನಡೆದಿದೆ.

    19 ವರ್ಷದ ಜೆನ್ನಾ ಫೊಲ್‍ವೆಲ್ ಹೆತ್ತ ಕಂದಮ್ಮನನ್ನೇ ಕೊಲೆ ಮಾಡಿದ ಕ್ರೂರಿ ತಾಯಿ. ಕೊಲೆ ಮಾಡುವುದಕ್ಕೂ ಮುನ್ನ ಮಗುವನ್ನು ಹೇಗೆ ಕೊಲೆ ಮಾಡಬೇಕು. ಮಗುವನ್ನು ನೀರಿನಲ್ಲಿ ಮುಳುಗಿಸಿ ಸಾಯಿಸುವುದಕ್ಕೆ ಎಷ್ಟು ಸಮಯ ಬೇಕು, ಪಾಲಕರು ಮಗುವನ್ನು ಕೊಲ್ಲುವುದಕ್ಕೆ ಕಾರಣವೇನು ಎಂಬೆಲ್ಲಾ ವಿಷಯಗಳ ಬಗ್ಗೆ ಗೂಗಲ್‍ನಲ್ಲಿ ಹುಡುಕಾಟ ನಡೆಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನಡೆದಿದ್ದೇನು: ಪೊಲೀಸರಿಗೆ ಕರೆ ಮಾಡಿದ ಜೆನ್ನ ತನ್ನ ಮಗುವನ್ನ ಅಪಹರಿಸಿದ್ದಾರೆ ಎಂದು ದೂರು ನೀಡಿದ್ದಳು. ಈ ಸಂಬಂಧ ವಿಚಾರಣೆ ನಡೆಸಿದ ಪೊಲೀಸರಿಗೆ ತನಿಖೆ ನಡೆಸುವ ಮಗುವನ್ನು ಬಾತ್ ಟಬ್‍ನಲ್ಲಿ ಮುಳುಗಿಸಿ ಕೊಲೆ ಮಾಡಿದ ಜೆನ್ನಾ ದೇಹವನ್ನ ಬ್ಯಾಗಿನಲ್ಲಿ ಇರಿಸಿ, ಪಾರ್ಕ್ ನಲ್ಲಿ ಎಸೆಯೋದಕ್ಕೆ ಮುಂದಾಗಿದ್ದಳು ಎಂಬ ಶಾಕಿಂಗ್ ಅಂಶ ತಿಳಿದು ಬಂದಿದೆ.

    ಆರೋಪಿ ಜೆನ್ನಾ ಸದ್ಯ ಕೊಲೆ ಆರೋಪದ ಅಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದು, ಕೃತ್ಯದ ಸತ್ಯ ತಿಳಿದ ಪತಿ ಎರಿಕ್ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಅಲ್ಲದೇ ಆಕೆಗೇ ಕಠಿಣ ಶಿಕ್ಷೆ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ನ್ಯಾಯಾಲಯಕ್ಕೆ ಹೇಳಿಕೆ ನೀಡಿರುವ ಎರಿಕ್ ಮಗುವಿನೊಂದಿಗೆ ನಾನು ಕೂಡ ರಾತ್ರಿ ವೇಳೆ ಸಮಯ ಕಳೆದಿದ್ದು, ಅವನಿಂದ ನನಗೆ ಯಾವುದೇ ಕಿರಿಕಿರಿ ಆಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ಆಯ್ ಆ್ಯಮ್ ಸಾರಿ’ ಮಗನೇ ಪ್ಲೀಸ್ ಮನೆಗೆ ಬಾ..!

    ‘ಆಯ್ ಆ್ಯಮ್ ಸಾರಿ’ ಮಗನೇ ಪ್ಲೀಸ್ ಮನೆಗೆ ಬಾ..!

    ಹಾಸನ: ‘ಆಯ್ ಆ್ಯಮ್ ಸಾರಿ’ ಮಗನೇ ಪ್ಲೀಸ್ ಮನೆಗೆ ವಾಪಸ್ ಬಾರೋ ಅಂತಾ ಮಗನನ್ನು ಕಣ್ಣೀರಿಟ್ಟು ಹಾಸನ ದಂಪತಿ ಕರೆಯುತ್ತಿದ್ದಾರೆ.

    ಹೌದು, ಹಾಸನದ ಕುವೆಂಪು ನಗರದ ಜಗದೀಶ್- ವಸಂತಾ ದಂಪತಿ ಪುತ್ರ ಸೋನುಕುಮಾರ್ (21) ಮನೆ ಬಿಟ್ಟು ಹೋಗಿದ್ದು, ಮೂರು ದಿನಗಳು ಕಳೆದರೂ ವಾಪಾಸ್ ಬಂದಿಲ್ಲ. ಹೀಗಾಗಿ ಹೆತ್ತು ಮುದ್ದಾಡಿದ ಜೀವಗಳು ಮಗನ ಬರುವಿಕೆಗಾಗಿ ಪ್ರತಿಕ್ಷಣವೂ ಕಾಯುತ್ತಿದ್ದಾರೆ.

    ಏನೇ ತಪ್ಪಿದ್ದರೂ ಕ್ಷಮಿಸಿ ಮನೆಗೆ ಬಂದು ಬಿಡು. ಸಾರಿ ಕನೋ, ನಿಮ್ಮ ಅಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸರಿಯಾಗಿ ಊಟ, ತಿಂಡಿ ಮಾಡುತ್ತಿಲ್ಲ. ನೀನು ಇಲ್ಲದೆ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ನೀನು ಕೆಲಸ ಮಾಡುವುದು ಬೇಡ. ಎಲ್ಲಿರುವೆ ಅಂತಾ ಒಂದು ಫೋನ್ ಮಾಡಿ ಹೇಳು ಎಂದು ಜಗದೀಶ್ ಕಣ್ಣಿರು ಹಾಕುತ್ತಲೇ ಮಗನಿಗೆ ಮನವಿ ಮಾಡಿಕೊಂಡಿದ್ದಾರೆ.

    ಇತ್ತ ತಾಯಿ ವಸಂತಾ ಅವರು ಕೂಡ, ನಿನ್ನ ಮಾತನ್ನೇ ಕೇಳುತ್ತೇವೆ. ಸೋನುಕುಮಾರ್ ಎಲ್ಲಿ ಇದ್ದಿಯಾ ಅಂತಾ ದಯವಿಟ್ಟು ಹೇಳು. ನಿನ್ನ ಬಿಟ್ಟು ಬದುಕುವ ಶಕ್ತಿ ನಮಗಿಲ್ಲ ಎಂದು ಮಗನಿಗೆ ತಿಳಿಸಿದ ಅವರು, ನಾನು ಕೂಲಿ ಮಾಡಿ ಜೀವನ ಮಾಡುತ್ತಿದ್ದೇವೆ. ಮಗನೆ ನಮ್ಮ ಮನೆಯ ಆಸ್ತಿ, ನಮಗಿರುವುದು ಒಬ್ಬನೇ ಮಗ. ನಿಮಗೆ ಕಂಡ ಅವರು ತಕ್ಷಣ ನಮಗೆ ಮಾಹಿತಿ ನೀಡಿ ಅಂತಾ ಪಬ್ಲಿಕ್ ಟಿವಿ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೆಳತಿಗಾಗಿ 13ರ ಪೋರ ಬಿಎಂಡಬ್ಲ್ಯು ಕಾರ್ ಕದ್ದ: ಕಾರಲ್ಲಿ ಚೇಸ್ ಮಾಡಿ ಮಗನನ್ನು ಹಿಡಿದ ತಾಯಿ

    ಗೆಳತಿಗಾಗಿ 13ರ ಪೋರ ಬಿಎಂಡಬ್ಲ್ಯು ಕಾರ್ ಕದ್ದ: ಕಾರಲ್ಲಿ ಚೇಸ್ ಮಾಡಿ ಮಗನನ್ನು ಹಿಡಿದ ತಾಯಿ

    ವಾಷಿಂಗ್ಟನ್: 13 ವರ್ಷದ ಅಮೆರಿಕದ ಬಾಲಕನೊಬ್ಬ ಬಿಎಂಡಬ್ಲ್ಯು ಕಾರನ್ನು ಕದ್ದು ತನ್ನ ಗರ್ಲ್ ಫ್ರೆಂಡ್ ಮನೆಗೆ ಹೋಗುವಾಗ ತನ್ನ ತಾಯಿಯ ಕೈಗೆ ಸಿಕ್ಕಿ ಹಾಕಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಟೆಕ್ಸಾಸ್ ನ ಎಲ್ ಪಾಸೋ ನಗರದ 13 ವರ್ಷದ ಆರೋನ್ ತನ್ನ ತಾಯಿಯ ಬಿಎಂಡಬ್ಲ್ಯು ಕಾರನ್ನ ಕದ್ದು, ತನ್ನ ಗರ್ಲ್ ಫ್ರೆಂಡ್ ಮನೆಗೆ ಹೋಗುತ್ತಿರುತ್ತಾನೆ. ಕಾರ್ ಕದ್ದಿರುವ ವಿಷಯ ತಿಳಿದ ತಾಯಿ ತನ್ನ ಮಗನನ್ನು ಹಿಂಬಾಲಿಸಿ ಆತನನ್ನು ಕಾರಿನಿಂದ ಹೊರತಂದು ಬೆಲ್ಟಿನಿಂದ ಹೊಡೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆರೋನ್ ಅಕ್ಕ ಲಿಜಾ ಟ್ವಿಟ್ಟರ್ ನಲ್ಲಿ ಈ ದೃಶ್ಯವನ್ನ ಹಂಚಿಕೊಂಡಿದ್ದು, “ನನ್ನ ತಮ್ಮ ಆರೋನ್, ನನ್ನ ತಾಯಿ ಕ್ಯಾಮೆರಾ ನೋಡಬಾರದು ಎಂದು ನಮ್ಮ ಮನೆಯ ವೈಫೈ ಕನೆಕ್ಷನ್ ಅನ್ನು ಕಡಿತಗೊಳಿಸಿ, ಹೊಸ ಬಿಎಂಡಬ್ಲ್ಯು ಕಾರ್ ಅನ್ನು ಕದ್ದಿದ್ದಾನೆ” ಎಂದು ಟ್ವೀಟ್ ಮಾಡಿದ್ದಳು. ಈ ವಿಡಿಯೋವನ್ನು 1.4 ಲಕ್ಷ ಜನರು ಲೈಕ್ ಮಾಡಿದ್ದು, 43 ಸಾವಿರ ಜನರು ರೀ ಟ್ವೀಟ್ ಮಾಡಿದ್ದಾರೆ.

    ತಾಯಿ ಮಗನನ್ನು ಹಿಂಬಾಲಿಸುತ್ತಿರುವ ವಿಡಿಯೋಗೆ ಜನರು ಹೆಚ್ಚು ಲೈಕ್ ಮತ್ತು ರೀ ಟ್ವೀಟ್ ಮಾಡಿದ್ದು, ಆ ತಾಯಿಯನ್ನ ಹೊಗಳಿ, ನಮ್ಮ ಮನೆಯಲ್ಲಿ ಹೀಗೇನಾದರು ನಡೆದರೆ ಪೊಲೀಸರ ಬದಲಿಗೆ ನಿಮ್ಮನ್ನೇ ಕರೆಯುತ್ತೇವೆ ಎಂದು ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/LilaaBites/status/1050843628585738240

  • ಮಲಗಿದ್ದ ಮಗನ ಕತ್ತು ಹಿಸುಕಿ ಕೊಲೆಗೈದ ತಾಯಿ

    ಮಲಗಿದ್ದ ಮಗನ ಕತ್ತು ಹಿಸುಕಿ ಕೊಲೆಗೈದ ತಾಯಿ

    ಲಕ್ನೋ: ಉತ್ತರ ಪ್ರದೇಶದ ವಿಧಾನ ಪರಿಷತ್ ಸಭಾಪತಿ ರಮೇಶ್ ಯಾದವ್ ಪುತ್ರ ಅಭಿಜಿತ್ ಯಾದವ್ ಕೊಲೆಯನ್ನು ಆತನ ತಾಯಿಯೇ ಮಾಡಿದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಅಭಿಜಿತ್ ಯಾದವ್ ತಾಯಿ ಮೀರಾ ಯಾದವ್‍ರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧನದ ನಂತರ ತಪ್ಪೊಪ್ಪಿಕೊಂಡಿರುವ ಮೀರಾ ಯಾದವ್, ಮಗ ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದರಿಂದ ಮಲಗಿದ್ದ ವೇಳೆ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ರಮೇಶ್ ಯಾದವ್ ಎರಡನೇ ಪತ್ನಿ ಮೀರಾ ಯಾದವ್ ದಂಪತಿಗೆ ಅಭಿಜಿತ್ ಮತ್ತ ಅಭಿಷೇಕ್ ಎಂಬ ಎರಡು ಮಕ್ಕಳಿದ್ದು, ಮೊದಲ ಮಗನನ್ನೇ ತಾಯಿ ಈಗ ಕೊಲೆ ಮಾಡಿದ್ದಾಳೆ.

    ಭಾನುವಾರ ಮಲಗಿದ ಸ್ಥಿತಿಯಲ್ಲಿ ಅಭಿಜಿತ್ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಸಹಜ ಸಾವು ಅಂತಾ ತಿಳಿದ ಕುಟುಂಬಸ್ಥರು ಅಂತ್ಯಕ್ರಿಯೆ ಸಿದ್ಧತೆಯಲ್ಲಿ ತೊಡಗಿದ್ದರು. ಆದ್ರೆ ಕೆಲವರು ಇದೊಂದು ಅಸಹಜ ಸಾವು ಅಂತಾ ಶಂಕಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಅಂತ್ಯಕ್ರಿಯೆ ತಡೆದು ಮೃತ ದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು, ಮರಣೋತ್ತರ ಶವ ಪರೀಕ್ಷೆ ವೇಳೆ ಅಭಿಜಿತ್ ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎನ್ನುವ ಫಲಿತಾಂಶ ಬಂದಿದೆ.

    ಈ ಹಿನ್ನೆಲೆಯಲ್ಲಿ ಪೊಲೀಸರು ಕುಟುಂಬಸ್ಥರು ವಿಚಾರಣೆಗೆ ಒಳಪಡಿಸಿದಾಗ ತಾಯಿ ಮೀರಾ ಯಾದವ್ ತಪ್ಪೊಪ್ಪಿಕೊಂಡಿದ್ದಾಳೆ. ಪುತ್ರ ಅಭಿಜಿತ್ ಪ್ರತಿನಿತ್ಯ ಕುಡಿದು ತಡರಾತ್ರಿ ಮನೆಗೆ ಬರುತ್ತಿದ್ದನು. ಪ್ರತಿದಿನ ನನ್ನೊಂದಿಗೆ ಜಗಳ ಮಾಡಿ, ಹಲ್ಲೆ ನಡೆಸುತ್ತಿದ್ದನು. ಶನಿವಾರ ಮದ್ಯ ಸೇವಿಸಿ ಬಂದ ಅಭಿಜಿತ್ ವಿನಾಕಾರಣ ಜಗಳ ಆರಂಭಿಸಿದನು. ನಶೆಯಲ್ಲಿದ್ದ ಅಭಿಜಿತ್ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದನು. ಈ ವೇಳೆ ನನ್ನ ಜೀವ ಉಳಿಸಿಕೊಳ್ಳಲು ಆತನನ್ನು ದೂರ ತಳ್ಳಿದಾಗ, ಗೋಡೆಗೆ ತಾಗಿ ಕೆಳಗೆ ಬಿದ್ದನು. ಕೋಪದಿಂದ ನನ್ನನ್ನು ಕೊಲ್ಲಲು ಮುಂದಾದ ನಾನೇ ಸೆಣಬಿನಿಂದ ಆತನ ಕುತ್ತಿಗೆಯನನ್ನು ಬಿಗಿದು ಕೊಲೆ ಮಾಡಿದೆ ಎಂದು ಮೀರಾ ಯಾದವ್ ಹೇಳಿಕೆ ನೀಡಿದ್ದಾಳೆ.

    ಸದ್ಯ ಪೊಲೀಸರು ಆರೋಪಿ ತಾಯಿಯನ್ನು ವಶಕ್ಕೆ ಪಡೆದು, ಇತರೆ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv