Tag: Mother tongue

  • ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣವನ್ನು ಮಾತೃಭಾಷೆಯಲ್ಲೂ ಕಲಿಯಬಹುದು: ರವಿಕುಮಾರ್

    ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣವನ್ನು ಮಾತೃಭಾಷೆಯಲ್ಲೂ ಕಲಿಯಬಹುದು: ರವಿಕುಮಾರ್

    ಬಾಗಲಕೋಟೆ: ಪ್ರತಿಯೊಬ್ಬರು ತಮ್ಮ ಮಾತೃಭಾಷೆಯಲ್ಲಿ ಇನ್ನೂ ಒಂದೆರಡು ವರ್ಷಗಳಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆಯಬಹುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದರು.

    ಜಿಲ್ಲೆಯ ಮುಧೋಳ ನಗರದಲ್ಲಿ ನಡೆದ ವಾಯುವ್ಯ ಪದವೀಧರರ ಶಿಕ್ಷಕರ ಚುನಾವಣೆ ನಿಮಿತ್ತ ಆಯೋಜಿಸಲಾಗಿದ್ದ, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಬದಲಾವಣೆಯನ್ನು ತರುತ್ತಿದೆ. ಈ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಶಿಕ್ಷಣವನ್ನು ಇಂಗ್ಲಿಷ್‍ನಲ್ಲಿ ಅಲ್ಲದೇ ಆಯಾ ರಾಜ್ಯದ ಪ್ರಾದೇಶಿಕ ಮಾತೃಭಾಷೆಯಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುತ್ತದೆ ಎಂದರು. ಇದನ್ನೂ ಓದಿ: ದಲಿತ ಯುವತಿಯ ಮೇಲೆ ಗ್ಯಾಂಗ್ ರೇಪ್ – ಡಿಎಂಕೆ ಯುವ ನಾಯಕ ಅರೆಸ್ಟ್

    ಈ ನಿರ್ಧಾರ ಮಹತ್ವದಾಗಿದ್ದು, ಇನ್ನೂ ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ತಮ್ಮ ಮಾತೃ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬಹುದು. ಮಾತೃಭಾಷೆ ಕನ್ನಡದಲ್ಲಿ ಹೆಚ್ಚು ಪ್ರಭುತ್ವ ಮತ್ತು ವಿಸ್ತಾರವಾಗಿ ಓದಿ ಬರೆಯಬಹುದು. ಸ್ನಾತಕೋತರ ಪದವಿಯನ್ನು ಪಡೆಯಬಹುದು. ಈಗಾಗಲೇ ಕೆಲ ರಾಜ್ಯದಲ್ಲಿ ಹಿಂದಿ ಭಾಷೆಯಲ್ಲಿ ವೈದ್ಯಕೀಯ, ಇಂಗ್ಲೀಷ್ ಶಿಕ್ಷಣ ನೀಡಲಾಗುತ್ತಿದೆ. ಆದ್ದರಿಂದ ಇನ್ನೊಂದೆರಡು ಮೂರು ವರ್ಷಗಳಲ್ಲಿ ಉನ್ನತ ಶಿಕ್ಷಣವನ್ನು ಎಲ್ಲರೂ ಕಡ್ಡಾಯವಾಗಿ ಇಂಗ್ಲಿಷ್ ಹಿಂದಿಯಲ್ಲಿ ಬರೆಯಬೇಕೆಂದಿಲ್ಲ. ಅದನ್ನ ಮಾತೃಭಾಷೆ ಕನ್ನಡದಲ್ಲೂ ಕೂಡ ಓದಿ ಬರೆಯಬಹುದಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಎಟಿಎಂಗೆ ಹಣ ಹಾಕು ಅಂತ ಕೊಟ್ಟರೆ, ಹಣದೊಂದಿಗೆ ಎಸ್ಕೇಪ್ ಆದ ಭೂಪ

    ಬಡವ ಬಲ್ಲಿದ ಎನ್ನದೇ ಶಿಕ್ಷಣ ಎಲ್ಲರಿಗೂ ದೊರಕಬೇಕೆಂಬ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲಾಗುತ್ತಿದೆ ಎಂದು ತಿಳಿಸಿದರು. ಈ ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಹನಮಂತ ನಿರಾಣಿ, ಸಚಿವರಾದ ಗೋವಿಂದ್ ಕಾರಜೋಳ, ರಾಮಣ್ಣ ತಳೇವಢ ಮತ್ತಿತರರು ಹಾಜರಿದ್ದರು.

  • ಸೂರ್ಯ-ಚಂದ್ರ ಇರುವವರೆಗೂ ಹಿಂದೂ ಧರ್ಮ, ಮಾತೃ ಭಾಷೆ ಶಾಶ್ವತವಾಗಿರುತ್ತೆ: ಕಾರಜೋಳ

    ಸೂರ್ಯ-ಚಂದ್ರ ಇರುವವರೆಗೂ ಹಿಂದೂ ಧರ್ಮ, ಮಾತೃ ಭಾಷೆ ಶಾಶ್ವತವಾಗಿರುತ್ತೆ: ಕಾರಜೋಳ

    ಬೆಳಗಾವಿ: ಕರ್ನಾಟಕದಲ್ಲಿ 2,500 ಸಾವಿರ ವರ್ಷಗಳಿಂದ ಕನ್ನಡ ನಾಡಿನಲ್ಲಿ, ಕನ್ನಡ ಉಳಿಸುವ ಬೆಳೆಸುವ ಕೆಲಸ ಅನೇಕ ಮಹನೀಯರು ಮಾಡಿದ್ದಾರೆ. ಸೂರ್ಯ-ಚಂದ್ರ ಇರುವವರೆಗೂ ಕನ್ನಡ ಭಾಷೆ ಇರುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭೂಮಿ ಮೇಲೆ ಜನರು ಇರೋವರೆಗೂ ಕನ್ನಡ ಭಾಷೆ ಇರುತ್ತದೆ. ನಮ್ಮನ್ನು ಪರಕೀಯರು 600 ವರ್ಷಗಳ ಕಾಲ ಆಳಿದ್ದಾರೆ. ಕನ್ನಡ ಭಾಷೆಗೆ ಯಾರ ಜಟಾಪಟಿನೂ ಅಗತ್ಯತೆ ಇಲ್ಲ. ದೇಶದಲ್ಲಿ ಆಯಾ ಪ್ರದೇಶ, ರಾಜ್ಯಗಳಲ್ಲಿ ಮಾತೃಭಾಷೆಗಳಿರುತ್ತವೆ. ಅದೇ ರೀತಿ ಕರ್ನಾಟಕದಲ್ಲೂ ಕನ್ನಡ ಮಾತೃಭಾಷೆ ಇದೆ ಎಂದರು. ಇದನ್ನೂ ಓದಿ:  90 ವರ್ಷದ ಬುದ್ಧಿಮಾಂದ್ಯ ತಾಯಿ, ಮಗನನ್ನು ಗುರುತಿಸುವ ಭಾವನಾತ್ಮಕ ವೀಡಿಯೋ ವೈರಲ್

    ಕನ್ನಡ ಭಾಷೆ ನಮಗೆ ತಾಯಿ ಸಮಾನವಾಗಿದೆ. ಹೀಗಾಗಿ 2,500 ಸಾವಿರ ವರ್ಷದಿಂದ ಈ ನಾಡಿನಲ್ಲಿ ಕನ್ನಡ ಉಳಿಸುವ ಬೆಳೆಸುವ ಕೆಲಸ ಅನೇಕರು ಮಾಡಿದ್ದಾರೆ. ಸೂರ್ಯ-ಚಂದ್ರ ಇರುವವರೆಗೂ ಕನ್ನಡ ಭಾಷೆ ಇರುತ್ತದೆ. ಭೂಮಿ ಮೇಲೆ ಜನರು ಇರೋವರೆಗೂ ಕನ್ನಡ ಭಾಷೆ ಇರುತ್ತದೆ ಎಂದು ತಿಳಿಸಿದರು.

    ಬ್ರಿಟಿಷರು, ಮುಸ್ಲಿಮರು, ಪೋರ್ಚುಗೀಸರು ಸೇರಿ ಪರಕೀಯರು ನಮ್ಮನ್ನು ಆಳಿದ್ದಾರೆ. ಆದರೂ ಸಹ ಕನ್ನಡ ಭಾಷೆ ನಶಿಸಿ ಹೋಗಿಲ್ಲ, ಹಿಂದೂ ಧರ್ಮ ನಶಿಸಿ ಹೋಗಿಲ್ಲ. ಹಿಂದೂ ಧರ್ಮ ಮತ್ತು ಮಾತೃ ಭಾಷೆ ಶಾಶ್ವತವಾಗಿ ಇರುತ್ತದೆ ಎಂದು ನುಡಿದರು. ಇದನ್ನೂ ಓದಿ:  ಹಾಡಹಗಲೇ ಅತ್ಯಾಚಾರ – ‘ಕಾಲಿಗೆ ಬೀಳುತ್ತೇನೆ ನನ್ನನ್ನು ಬಿಟ್ಟು ಬಿಡಿ’ ಎಂದ್ರೂ ಬಿಡದ ಪಾಪಿಗಳು

  • ಹಿಂದಿ ಹೇರಿಕೆ ಕುರಿತು ಹೇಳಿಲ್ಲ, ಇದರಲ್ಲಿ ರಾಜಕೀಯ ಮಾಡಲಾಗುತ್ತಿದೆ- ಅಮಿತ್ ಶಾ

    ಹಿಂದಿ ಹೇರಿಕೆ ಕುರಿತು ಹೇಳಿಲ್ಲ, ಇದರಲ್ಲಿ ರಾಜಕೀಯ ಮಾಡಲಾಗುತ್ತಿದೆ- ಅಮಿತ್ ಶಾ

    – 2ನೇ ಭಾಷೆಯಾಗಿ ಹಿಂದಿ ಕಲಿಯಲು ವಿನಂತಿಸಿದ್ದೆ

    ನವದೆಹಲಿ: ಹಿಂದಿ ಹೇರಿಕೆಯ ಕುರಿತ ಹೇಳಿಕೆಯನ್ನು ನಾನು ನೀಡಿಲ್ಲ. ಮಾತೃ ಭಾಷೆ ನಂತರ 2ನೇ ಭಾಷೆಯಾಗಿ ಹಿಂದಿ ಬಳಸಲು ತಿಳಿಸಿದ್ದೇನೆ. ಕೆಲವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಂದಿಗೂ ಇತರ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರುವ ಕುರಿತು ಹೇಳಿಕೆ ನೀಡಿಲ್ಲ. ಆಯಾ ರಾಜ್ಯಗಳ ಮಾತೃಭಾಷೆಯ ನಂತರ ಹಿಂದಿಯನ್ನು 2ನೇ ಭಾಷೆಯಾಗಿ ಕಲಿಯಬೇಕೆಂದು ಮಾತ್ರ ವಿನಂತಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಅಲ್ಲದೆ ನಾನೇ ಹಿಂದಿಯೇತರ ರಾಜ್ಯ ಗುಜರಾತ್‍ನಿಂದ ಬಂದವನು. ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ಇದೇ ಅವರ ಆಯ್ಕೆಯಾಗಿದೆ ಎಂದು ಆರೋಪಿಸಿದ್ದಾರೆ.

    ಅಮಿತ್ ಶಾ ಅವರ ಏಕಭಾಷಾ ಸೂತ್ರದ ಹೇಳಿಕೆ ಕುರಿತು ದಕ್ಷಿಣ ಭಾರತದ ರಾಜ್ಯಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಅಲ್ಲದೆ ಅವರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹಿಂದಿಯೇತರ ರಾಜ್ಯಗಳಲ್ಲಿ ಭಾಷೆಯನ್ನು ಹೇರಲು ಈ ಹಿಂದೆ ಸಾಕಷ್ಟು ಬಾರಿ ಪ್ರಯತ್ನ ಮಾಡಲಾಗಿದೆ ಆದರೂ ಅದು ಸಾಧ್ಯವಾಗಿಲ್ಲ. ಇದೀಗ ಏಕ ಭಾಷಾ ಸೂತ್ರವನ್ನು ಅಮಿತ್ ಶಾ ಮತ್ತೊಮ್ಮೆ ಉಚ್ಛರಿಸಿದ್ದರು.

    `ಹಿಂದಿ ದಿವಸ್’ ಆಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಂದು ಅಮಿತ್ ಶಾ ಅವರು ದೆಹಲಿಯಲ್ಲಿ ಮಾತನಾಡಿ, ಈ ದೇಶದ ವಿಶೇಷತೆ ಅಂದರೆ ಭಾಷೆ. ಜಗತ್ತಿನ ಯಾವುದೇ ಭಾಷೆಯ ಜೊತೆ ಹೋಲಿಸಿ ನೋಡಿದಾಗ ನಮ್ಮ ಭಾಷೆಯ ವ್ಯಾಪಕತೆ, ಸಮೃದ್ಧತೆಯೇ ಸರ್ವಶ್ರೇಷ್ಠ ಎಂದಿದ್ದರು. ಅಲ್ಲದೇ ಭಾಷೆಗಳು ಮತ್ತು ಉಪಭಾಷೆಗಳ ವೈವಿಧ್ಯತೆಯು ನಮ್ಮ ರಾಷ್ಟ್ರದ ಶಕ್ತಿ. ಆದರೆ, ನಮ್ಮ ರಾಷ್ಟ್ರವು ಒಂದೇ ಭಾಷೆಯನ್ನು ಹೊಂದುವ ಅವಶ್ಯಕತೆಯಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹಿಂದಿಯನ್ನು `ರಾಜ್ ಭಾಷಾ’ ಎಂದು ಕರೆದು ಸ್ವೀಕರಿಸಿದ್ದರು. ಮಾತೃ ಭಾಷೆಯ ಜೊತೆಗೆ ಹಿಂದಿ ಭಾಷೆಯನ್ನು ಹೆಚ್ಚಾಗಿ ಬಳಸಿ ಎಂದಿದ್ದರು ಎಂದು ಹೇಳಿದ್ದರು.

    ಭಾರತವನ್ನು ಒಂದುಗೂಡಿಸುವ ಸಾಮಥ್ರ್ಯ ಹಿಂದಿ ಭಾಷೆಗೆ ಇದೆ. ಭಾರತವೂ ವಿಭಿನ್ನ ಭಾಷೆಗಳ ದೇಶ. ಪ್ರತಿ ಭಾಷೆಗೂ ತನ್ನದೇ ಮಹತ್ವವಿದೆ. ಆದರೆ ಜಾಗತಿಕವಾಗಿ ಭಾರತದ ಅಸ್ಮಿತೆ ಆಗುವ ಭಾಷೆಯ ಅಗತ್ಯವಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು. ಶಾ ಅವರ ಈ ಹೇಳಿಗೆ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಕೂಡ ದನಿಗೂಡಿಸಿದ್ದರು.

    ಈ ಬಗ್ಗೆ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ಭಾರತೀಯ ಸಂವಿಧಾನ ಅಂಗೀಕರಿಸಿದ ಭಾಷೆಗಳಲ್ಲಿ ಯಾವುದೇ ತಾರತಮ್ಯ ಸಲ್ಲದು. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ ಮತ್ತು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ. ನಮ್ಮ ದೇಶದಲ್ಲಿನ ಎಲ್ಲ ಅಧಿಕೃತ ಭಾಷೆಗಳು ಸಮಾನವಾಗಿವೆ. ಅದೇ ರೀತಿ ಕರ್ನಾಟಕದಲ್ಲಿಯೂ ಕನ್ನಡ ಪ್ರಮುಖ ಭಾಷೆಯಾಗಿದೆ. ಕನ್ನಡದ ಮಹತ್ವ ಹಾಗೂ ಅಸ್ಮಿತೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿಯಾಗುವುದಿಲ್ಲ. ಅಲ್ಲದೆ, ಕನ್ನಡ ಹಾಗೂ ರಾಜ್ಯದ ಸಂಸ್ಕೃತಿಯನ್ನು ಬೆಳೆಸಲು ಕಟಿಬದ್ಧರಾಗಿದ್ದೇವೆ ಎಂದು ಅಮಿತ್ ಶಾ ಹೇಳಿಕೆಗೆ ಕುಟುಕ್ಕಿದ್ದರು.

    ಈ ಕುರಿತು ನಟ-ರಾಜಕಾರಣಿ ಕಮಲ್ ಹಾಸನ್ ಪ್ರತಿಕ್ರಿಯಿಸಿ, ಭಾರತ ಗಣತಂತ್ರವಾದಾಗಲೇ ವೈವಿಧ್ಯತೆಯಲ್ಲಿ ಏಖತೆಯಿಂದ ಕೂಡಿದೆ ಎಂದು ಪ್ರಮಾಣೀಕರಿಸಲಾಗಿದೆ. ಇದೀಗ ಯಾವುದೇ ಶಾ, ಸುಲ್ತಾನ್ ಅಥವಾ ಸಾಮ್ರಾಟ್ ಇದನ್ನು ಹುಸಿಗೊಳಿಸಬಾರದು ಎಂದು ಸೋಮವಾರ ಪ್ರತಿಕ್ರಿಯಿಸಿದ್ದರು.