Tag: mother in law

  • ಮಾವನಿಂದ ಅತ್ಯಾಚಾರಕ್ಕೊಳಗಾದ ನವವಿವಾಹಿತೆ ಆತ್ಮಹತ್ಯೆ..!

    ಮಾವನಿಂದ ಅತ್ಯಾಚಾರಕ್ಕೊಳಗಾದ ನವವಿವಾಹಿತೆ ಆತ್ಮಹತ್ಯೆ..!

    ಭೋಪಾಲ್: ಮಾವನಿಂದ ಅತ್ಯಾಚಾರಕ್ಕೆ ಒಳಗಾದ ನವ ವಿವಾಹಿತೆ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಮಧ್ಯಪ್ರದೇಶದ ಬಜಾರಿಯಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಈ ಕುರಿತು ಮೃತ ಮಹಿಳೆಯ ಪೋಷಕರು ಬಜಾರಿಯಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅತ್ಯಾಚಾರ ಎಸಗಿದ್ದ ಮಾವ ಹಾಗೂ ಮಹಿಳೆಯ ಮೇಲೆ ಹಲ್ಲೆ ಮಾಡಿ, ಮಾನಸಿಕವಾಗಿ ಹಿಂಸೆ ನೀಡಿದ್ದ ಅತ್ತೆ ಹಾಗೂ ಪತಿಯನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?:
    ನರಸಿಂಗಾಪುರದ 20 ವರ್ಷದ ಮಹಿಳೆ ಬಜಾರಿಯಾ ಮೂಲದ ಯುವಕನೊಬ್ಬನನ್ನು ಜೂನ್ ತಿಂಗಳಲ್ಲಿ ವಿವಾಹವಾಗಿದ್ದಳು. ಮದುವೆಯಾಗಿ ಮನೆಗೆ ಬಂದಿದ್ದ ಸೊಸೆಯ ಜೊತೆಗೆ ಮಾವ ಅಸಭ್ಯವಾಗಿ ವರ್ತಿಸುತ್ತಿದ್ದನು. ಒಂದು ದಿನ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದ ಕಾಮುಕ ಮಾವ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳೆ ನಡೆದ ಘಟನೆಯನ್ನು ಪತಿ ಹಾಗೂ ಅತ್ತೆಯ ಬಳಿ ಹೇಳಿಕೊಂಡಿದ್ದಾಳೆ.

    ಈ ವೇಳೆ ಅವರು ತಪ್ಪನ್ನು ಸರಿಪಡಿಸದೆ ಈ ವಿಷಯನ್ನು ಯಾರಿಗೂ ಹೇಳದಂತೆ ಎಚ್ಚರಿಕೆ ನೀಡಿದ್ದಾರೆ. ಪತಿ ಕೂಡ ಪತ್ನಿಯ ಬೆಂಬಲಕ್ಕೆ ನಿಲ್ಲದೆ ಅಮಾನವೀಯತೆ ಮೆರೆದಿದ್ದಾನೆ. ಇದರಿಂದಾಗಿ ಮನನೊಂದ ಮಹಿಳೆ ತಾಯಿಗೆ ಫೋನ್ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾಳೆ. ಪತ್ನಿ ಫೋನ್‍ನಲ್ಲಿ ಮಾತನಾಡಿದ್ದನ್ನು ಕೇಳಿಸಿಕೊಂಡ ಪತಿ, ಮೊಬೈಲ್ ಒಡೆದು ಹಾಕಿ, ಹಲ್ಲೆ ಮಾಡಿದ್ದಾನೆ. ಪತಿಯ ಕ್ರೂರ ವರ್ತನೆ, ಮಾವನ ಕೃತ್ಯ ಹಾಗೂ ಅತ್ತೆಯ ಬೆದರಿಕೆಗೆ ಒಳಗಾದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಈ ಕುರಿತು ಮೃತ ಮಹಿಳೆಯ ಪೋಷಕರು ನರಸಿಂಗಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೃತರ ಮಾವ, ಪತಿ ಮತ್ತು ಅತ್ತೆಯನ್ನು ಬಂಧಿಸಿದ್ದಾರೆ. ಸದ್ಯ ಈ ಪ್ರಕರಣವನ್ನು ಬಜಾರಿಯಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಎವುಡ್ರಾ ನೀವು? ಎಂದುಕಿ ವಾಚ್ಚವು? ಸಿಸಿಬಿ ಅಧಿಕಾರಿಗಳ ಮೇಲೆ ರೆಡ್ಡಿ ಅತ್ತೆ ಕೂಗಾಟ

    ಎವುಡ್ರಾ ನೀವು? ಎಂದುಕಿ ವಾಚ್ಚವು? ಸಿಸಿಬಿ ಅಧಿಕಾರಿಗಳ ಮೇಲೆ ರೆಡ್ಡಿ ಅತ್ತೆ ಕೂಗಾಟ

    ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಬಳ್ಳಾರಿ ನಿವಾಸ ಅಹಂಬಾವಿ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಳ ಮೇಲೆ ರೆಡ್ಡಿ ಅತ್ತೆ ನಾಗಲಕ್ಷ್ಮಮ್ಮ ಕೂಗಾಟ ನಡೆಸಿದ್ದಾರೆ ಎನ್ನಲಾಗಿದೆ.

    ಇಂದು ಬೆಳಂಬೆಳಗ್ಗೆ ಅಹಂಬಾವಿ ನಿವಾಸ ಮೇಲೆ ಸಿಸಿಬಿ ಪೊಲೀಸರ 8 ಜನರ ತಂಡ ದಾಳಿ ನಡೆಸಿ ಪರಿಶೀಲನೆ ಆರಂಭಿಸಿತ್ತು. ಆದರೆ ಈ ವೇಳೆ ಮನೆಯಲ್ಲಿ ನಾಗಕ್ಷ್ಮಮ್ಮ ಅವರು ಅಧಿಕಾರಿಗಳ ಕಂಡು ಕೂಗಾಟ ನಡೆಸಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ತನ್ನ ಮಗಳು ಹಾಗೂ ಅಳಿಯ ಇಲ್ಲದ ವೇಳೆ ಏಕೆ ಆಗಮಿಸಿದ್ದೀರಿ. ನಿಮಗೆ ಏನು ಬೇಕು? ನನ್ನ ಮಗಳು, ಅಳಿಯ ಬಂದ ಮೇಲೆ ಬನ್ನಿ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ನಾಗಲಕ್ಷ್ಮಮ್ಮ ಅವರ ಈ ಮಾತಿಗೆ ಉತ್ತರ ನೀಡಿದ ಅಧಿಕಾರಿಗಳು ಮಾಹಿತಿ ನೀಡಿ ಮಹಿಳಾ ಪೊಲೀಸರನ್ನು ಕರೆಸಿಕೊಂಡಿದ್ದಾರೆ. ಸದ್ಯ ಪರಿಶೀಲನೆ ನಡೆಯುವವರೆಗೂ ನಾಗಕ್ಷ್ಮಮ್ಮ ಅವರು ಮಹಿಳಾ ಅಧಿಕಾರಿಯ ವಶದಲ್ಲಿ ಇರಲಿದ್ದಾರೆ. ಕಳೆದ ಬಾರಿ ಮಗಳ ಮದುವೆ ವೇಳೆಯೂ ಇದೆ ರೀತಿ ದಾಳಿ ನಡೆಸಿ ಮನೆಯಲ್ಲಿದ್ದ ಸಂಭ್ರಮವನ್ನು ಹಾಳು ಮಾಡಿದ್ದರು. ಇಂದು ದೀಪಾಳಿಯ ಹಬ್ಬದ ಸಂಭ್ರಮದ ವೇಳೆಯೂ ಇದೇ ರೀತಿ ಮಾಡಿದ್ದಾರೆ ಎಂಬ ಅಂಶದ ಮೇಲೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಪೊಲೀಸರ ದಾಳಿ ವೇಳೆ ಜನಾರ್ದನ ರೆಡ್ಡಿ ಮನೆಯಲ್ಲಿ ಯಾರು ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು. ಮನೆಯಲ್ಲಿ ಕೆಲಸ ಮಾಡುವ ಮಂದಿ ಇದ್ದರು ಅಷ್ಟೇ. ಆದರೆ ಶಾಸಕ ಶ್ರೀರಾಮುಲು ಅವರು ಸ್ಥಳಕ್ಕೆ ಆಗಮಿಸಿ ಪೊಲೀಸರ ಪರಿಶೀಲನೆಗೆ ಬೇಕಾದ ವ್ಯವಸ್ಥೆ ಮಾಡಿದ್ದಾರೆ. ಈ ವೇಳೆಯೇ ರೆಡ್ಡಿ ಅವರ ಅತ್ತೆಯೂ ಸ್ಥಳಕ್ಕೆ ಆಗಮಿಸಿದ್ದಾರೆ.

    ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿಗೆ ತಲುಪಿದೆ ಎನ್ನಲಾದ 57 ಕೆಜಿ ಚಿನ್ನಕ್ಕಾಗಿ ಪೊಲೀಸರು ಬೆಳಗ್ಗೆಯಿಂದಲೂ ಶೋಧಕಾರ್ಯ ನಡೆಸಿದ್ದು, ಮನೆಯ ಎಲ್ಲ ಭಾಗಗಳಲ್ಲಿ ಪರಿಶೀಲನೆಯ ಕಾರ್ಯ ನಡೆಸಿದ್ದಾರೆ. ಇನ್ನು ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ ನೇಣು ಹಾಕಿಕೊಳ್ಳುವಾಗ ಲೈವ್ ವಿಡಿಯೋ ಮಾಡಿದ ಪತಿ!

    ಪತ್ನಿ ನೇಣು ಹಾಕಿಕೊಳ್ಳುವಾಗ ಲೈವ್ ವಿಡಿಯೋ ಮಾಡಿದ ಪತಿ!

    ಲಕ್ನೋ: ಗಂಡನ ಮನೆಯವರ ಕಿರುಕುಳ ತಾಳಲಾರದೇ ಪತ್ನಿ ನೇಣಿಗೆ ಶರಣಾಗುತ್ತಿದ್ದಾಗ ಪತಿ ವಿಡಿಯೋ ಮಾಡಿದ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ.

    ಗೀತಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಗೀತಾ 2015ರ ಏಪ್ರಿಲ್ 22ರಂದು ರಾಜ್‍ಕುಮಾರ್ ಜೊತೆ ಮದುವೆಯಾಗಿದ್ದಳು. ಮದುವೆ ಆಗಿ ಕೆಲವು ದಿನಗಳಲ್ಲಿ ಗೀತಾಗೆ ಆಕೆಯ ಪತಿ ಹಾಗೂ ಆತನ ಮನೆಯವರು ಒಂದು ಕಾರನ್ನು ವರದಕ್ಷಿಣೆ ಆಗಿ ನೀಡಬೇಕೆಂದು ಕಿರುಕುಳ ನೀಡುತ್ತಿದ್ದರು. ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಗೀತಾ ಹಾಗೂ ಪತಿ ಮನೆಯವರ ನಡುವೆ ಜಗಳ ಕೂಡ ನಡೆಯುತ್ತಿತ್ತು.

    ಪತಿ ಹಾಗೂ ಆತನ ಮನೆಯವರ ವರದಕ್ಷಿಣೆಯ ಕಿರುಕುಳ ತಾಳಲಾರದೇ ಗೀತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗೀತಾ ಆತ್ಮಹತ್ಯೆಗೆ ಶರಣಾಗುವಾಗ ರಾಜ್‍ಕುಮಾರ್ ಆಕೆಯ ರೂಂ ಹೊರಗೆ ನಿಂತು ಕಿಟಕಿಯಿಂದ ಲೈವ್ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಗೀತಾ ಆತ್ಮಹತ್ಯೆ ಮಾಡಿಕೊಳ್ಳುವಾಗ ಆಕೆಯ ಗಂಡನ ಮನೆಯವರು ಹೊರಗೆ ನಿಂತು ಕಿರುಚಾಡುತ್ತಿದ್ದರೇ ಹೊರತು ಬಾಗಿಲು ಒಡೆಯಲು ಪ್ರಯತ್ನಿಸಲಿಲ್ಲ ಎಂದು ವರದಿಯಾಗಿದೆ.

    ಗೀತಾ ನೇಣಿಗೆ ಶರಣಾಗಿರುವ ವಿಡಿಯೋ 12 ನಿಮಿಷ 14 ಸೆಕೆಂಡ್‍ಗಳಿದೆ. ಈ ವಿಡಿಯೋದಲ್ಲಿ ಆಕೆಯ ಅತ್ತೆ ಹಾಗೂ ನಾದಿನಿ ಪ್ರಮಾಣ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಲು ಪ್ರಯತ್ನಿಸಿದ್ದರು. ಆದರೆ ಬಾಗಿಲು ಒಡೆದು ಆಕೆಯನ್ನು ರಕ್ಷಿಸಲು ಯಾರೂ ಮುಂದಾಗಲಿಲ್ಲ. ಪತಿ ವಿಡಿಯೋ ಮಾಡುತ್ತಿರುವುದು ಗಮನಿಸಿದ ಗೀತಾಗೆ ಆತ್ಮಹತ್ಯೆ ಮಾಡಿಕೊಳ್ಳುವುದ್ದಕ್ಕೆ ಪ್ರೇರೆಪಿಸುತ್ತಿತ್ತು.

    ಈ ಘಟನೆ ನಡೆದ ಮೇಲೆ ಪೊಲೀಸರು ಹಾಗೂ ಗೀತಾ ಪೋಷಕರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಗೀತಾ ಪೋಷಕರು ಆಕೆಯ ಪತಿ ಹಾಗೂ ಆತನ ಮನೆಯವರ ಮೇಲೆ ವರದಕ್ಷಿಣೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಕೇಸ್ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪತಿ ರಾಜ್‍ಕುಮಾರ್ ಹಾಗೂ ಅತ್ತೆ ವಿಮಲಾರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ವಿಡಿಯೋ ವೈರಲ್ ಆದ ಮೇಲೆ ಪೊಲೀಸರು ಮತ್ತೊಮ್ಮೆ ಈ ಕೇಸ್ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.

  • ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಪತಿ ಮನೆಯವರಿಂದ್ಲೇ ಹಲ್ಲೆ!

    ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಪತಿ ಮನೆಯವರಿಂದ್ಲೇ ಹಲ್ಲೆ!

    ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಆಕೆಯ ಮೈದುನ, ಅತ್ತೆ ಹಾಗೂ ಪತಿ ಮನೆಯವರು ಸೇರಿಕೊಂಡು ಹಲ್ಲೆ ಮಾಡಿರೋ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

    ಶಾಂತವ್ವ ಕಚವಿ(36) ಹಲ್ಲೆಗೊಳಗಾದ ಮಹಿಳೆ. ಜುಲೈ 6ರ ರಾತ್ರಿ ಶಾಂತವ್ವಳ ಪತಿ ಮನೆಯಲ್ಲಿ ಇಲ್ಲದಿದ್ದಾಗ ಶಾಂತವ್ವಳೊಂದಿಗೆ ಜಗಳ ಶುರು ಮಾಡಿದ ಮೈದುನ ಶಿವಲಿಂಗಪ್ಪ, ಅತ್ತೆ ಸೇರಿದಂತೆ ಗಂಡನ ಮನೆಯ ಐದಾರು ಜನರು ಸೇರಿಕೊಂಡು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿದ್ದಾರೆ.

    ಶಾಂತವ್ವಳ ಪತಿ ಮತ್ತು ಆಕೆಯ ಮೈದುನ ಶಿವಲಿಂಗಪ್ಪ ಆಗಾಗ ಜಗಳ ಮಾಡ್ತಿದ್ರು. ಇದ್ರಿಂದ ರೋಸಿಹೋಗಿದ್ದ ಆರೋಪಿ ಶಿವಲಿಂಗಪ್ಪ, ಶಾಂತವ್ವಳ ಪತಿ ಇಲ್ಲದಿದ್ದಾಗ ಆಕೆಯ ಮೇಲೆ ಹಲ್ಲೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ.

    ಹಲ್ಲೆಗೆ ಒಳಗಾದ ಶಾಂತವ್ವ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಸಂಬಂಧ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರೋ ಕಾಗಿನೆಲೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

  • ಮದುವೆಯಾಗಿ ವರ್ಷ ಕಳೆದರೂ ಮಕ್ಕಳಾಗಲಿಲ್ಲ ಅಂತಾ ಕಿರುಕುಳ ನೀಡಿದ ಪತಿ: ಆತ್ಮಹತ್ಯೆ ಶರಣಾದ ಪತ್ನಿ

    ಮದುವೆಯಾಗಿ ವರ್ಷ ಕಳೆದರೂ ಮಕ್ಕಳಾಗಲಿಲ್ಲ ಅಂತಾ ಕಿರುಕುಳ ನೀಡಿದ ಪತಿ: ಆತ್ಮಹತ್ಯೆ ಶರಣಾದ ಪತ್ನಿ

    ಬೆಳಗಾವಿ: ಪತಿಯ ಮನೆಯವರ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಯರಮಳಾ ಗ್ರಾಮದಲ್ಲಿ ನಡೆದಿದೆ.

    ಸುರೇಖಾ ತಳವಾರ(24) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಸುರೇಖಾ ಅವರು ಒಂದೂವರೆ ವರ್ಷದ ಹಿಂದಷ್ಟೇ ಯರಮಳಾ ಗ್ರಾಮದ ಪರಶುರಾಮ್ ಎಂಬವರ ಜೊತೆ ಮದುವೆಯಾಗಿದ್ದರು.

    ಮದುವೆಯಾಗಿ ಒಂದೂವರೆ ವರ್ಷವಾದರೂ ನಿನಗೆ ಮಕ್ಕಳು ಆಗಲಿಲ್ಲ ಎಂದು ಸುರೇಖಾ ಅವರಿಗೆ ಪತಿ ಪರಶುರಾಮ್, ಅತ್ತೆ ಹಾಗೂ ಮಾವ ನಿತ್ಯವೂ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಮನನೊಂದ ಸುರೇಖಾ ಬುಧವಾರ ರಾತ್ರಿ ಪತಿಯ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುರೇಖಾ ಸಂಬಂಧಿಕರು ಆರೋಪಿಸಿದ್ದಾರೆ.

    ಈ ಕುರಿತು ಸುರೇಖಾ ಪತಿ ಪರಶುರಾಮ್, ಅತ್ತೆ ಹಾಗೂ ಮಾವನ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅತ್ತೆ-ಸೊಸೆ ಜಗಳ ಕೊಲೆಯಲ್ಲಿ ಅಂತ್ಯ!

    ಅತ್ತೆ-ಸೊಸೆ ಜಗಳ ಕೊಲೆಯಲ್ಲಿ ಅಂತ್ಯ!

    ಹಾವೇರಿ: ಸಣ್ಣ ವಿಚಾರಕ್ಕೆ ಅತ್ತೆ-ಸೊಸೆ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಕೈ ಕೈ ಮಿಲಾಯಿಸಿದ ಪರಿಣಾಮ ಅತ್ತೆಯೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಆಲದೇಗಿ ಗ್ರಾಮದಲ್ಲಿ ನಡೆದಿದೆ.

    ಗಂಗಮ್ಮ ಕಜ್ಜರಿ (70) ಮೃತ ಅತ್ತೆ. ಆರೋಪಿ ಸೊಸೆ ಲಲಿತಾ. ಸುಮಾರು ದಿನಗಳಿಂದ ಅತ್ತೆ ಗಂಗಮ್ಮ ಹಾಗೂ ಸೊಸೆ ಲಲಿತಾ ನಡುವೆ ನಿತ್ಯವೂ ಪದೇ ಪದೇ ಜಗಳ ನಡೆಯುತ್ತಿತ್ತು.

    ಮಂಗಳವಾರ ಬೆಳಿಗ್ಗೆ ಸೊಸೆ ಲಲಿತಾ ಹಾಗೂ ಅತ್ತೆ ಗಂಗಮ್ಮನ ನಡುವೆ ಮಾತಿನ ಚಕಮಕಿ ನಡೆದಿದ್ದು, ನಂತರ ಒಬ್ಬರಿಗೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆರೋಪಿ ಲಲಿತಾ ತನ್ನ ಅತ್ತೆ ಗಂಗಮ್ಮಳ ತಲೆಗೆ ಬಲವಾಗಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗಂಗಮ್ಮ ಅವರನ್ನು ರಾಣೆಬೆನ್ನೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೇ ಗಂಗಮ್ಮ ಮೃತಪಟ್ಟಿದ್ದಾರೆ.

    ಈ ಕುರಿತು ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸೊಸೆ ಲಲಿತಾಳನ್ನು ಬಂಧಿಸಲಾಗಿದೆ.

  • ಅಮ್ಮ ಬಂದ್ರು ಅಂತಾ ಪತ್ನಿ ಪಾದ ತೊಳೆದಿದ್ದ ನೀರನ್ನೇ ತಲೆ ಮೇಲೆ ಹಾಕ್ಕೊಂಡ- ವಿಡಿಯೋ ವೈರಲ್

    ಅಮ್ಮ ಬಂದ್ರು ಅಂತಾ ಪತ್ನಿ ಪಾದ ತೊಳೆದಿದ್ದ ನೀರನ್ನೇ ತಲೆ ಮೇಲೆ ಹಾಕ್ಕೊಂಡ- ವಿಡಿಯೋ ವೈರಲ್

    ಮುಂಬೈ: ಭಯ ಎನ್ನುವ ಸಾರ್ವತ್ರಿಕ ಸಮಸ್ಯೆ. ಅದರಲ್ಲೂ ಅತ್ತೆಯ ಭಯ ಜಗತ್ತಿನ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ಎನ್ನುವ ಸಂದೇಶ ಹೊತ್ತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪತ್ನಿಯ ಪಾದಗಳನ್ನು ತೊಳೆಯುತ್ತಿರುವ ವ್ಯಕ್ತಿಯೊಬ್ಬ ತನ್ನ ತಾಯಿಯು ಮನೆ ಒಳಗೆ ಬಂದಿದ್ದು ತಿಳಿದು ಹೆದರಿ ತಬ್ಬಿಬ್ಬಾಗುತ್ತಾನೆ. ಅವನ ಹಾಗೂ ಪತ್ನಿಯ ವರ್ತನೆ ನೋಡುಗರಲ್ಲಿ ಭಾರೀ ನಗುವನ್ನು ತರಿಸುತ್ತದೆ. ಅಲ್ಲದೇ ಈ ವಿಡಿಯೋ ಕೆಲವೊಬ್ಬರ ಅನುಭವವನ್ನು ಕೆರಳಿಸುತ್ತದೆ.

    ವಿಡಿಯೋದಲ್ಲಿ ಏನಿದೆ?:
    ಮನೆಯಲ್ಲಿ ಯಾರು ಇಲ್ಲದಿರುವಾಗ ವ್ಯಕ್ತಿಯೊಬ್ಬ ಟಬ್ ನಲ್ಲಿ ನೀರು ತುಂಬಿಕೊಂಡು ಅದರಲ್ಲಿ ತನ್ನ ಹೆಂಡತಿಯ ಪಾದಗಳನ್ನು ತೊಳೆಯುತ್ತಿರುತ್ತಾನೆ. ದಂಪತಿ ಏಕಾಂತದಲ್ಲಿ ಏನ್ನನೋ ಮಾತನಾಡುತ್ತ ಕಾಲ ಕಳೆಯುತ್ತಿರುತ್ತಾರೆ. ಈ ವೇಳೆ ಸಡನ್ ಆಗಿ ಅತ್ತೆ ಒಳಗೆ ಬರುತ್ತಾರೆ. ಅತ್ತೆ ಬಂದಿರುವುದನ್ನು ಗಮನಿಸಿದ ಸೊಸೆ ತನ್ನ ಕಾಲನ್ನು ಟಬ್ ನಿಂದ ಹಿಂದಕ್ಕೆ ತಗೆಯುತ್ತಾಳೆ. ಇತ್ತ ವ್ಯಕ್ತಿಯೂ ಕೂಡ ತನ್ನ ತಾಯಿಗೆ ಯಾವುದೇ ರೀತಿಯ ಸಂದೇಹ ಬಾರದಿರಲಿ ಎಂದು ಹೆದರಿಕೆಯಿಂದ ಪತ್ನಿಯ ಪಾದ ತೊಳೆದ ನೀರನ್ನು ತಲೆ ಮೇಲೆ ಹಾಕಿಕೊಳ್ಳುತ್ತಾನೆ. ಇದಕ್ಕೆ ಪತ್ನಿಯೂ ಕೂಡ ಸಹಾಯ ಮಾಡುತ್ತಾಳೆ.

    https://twitter.com/FarooqFantastic/status/1001350970234818560

    ಈ ದೃಶ್ಯವು ಕೆಲವರಿಗೆ ಅಷ್ಟೊಂದು ಪರಿಣಾಮಕಾರಿ ಅಲ್ಲ ಅನಿಸಬಹುದು. ಆದರೆ ಯಾವುದೇ ತಾಯಿಯು ಮಗ ಹೀಗೆ ಮಾಡುವುದನ್ನು ಇಷ್ಟಪಡುವುದಿಲ್ಲ. ಅಲ್ಲದೇ ಸೊಸೆ ಕೂಡಾ ಅತ್ತೆಗೆ ಹೆದರುತ್ತಾಳೆ ಎನ್ನುವುದನ್ನು ವಿಡಿಯೋ ಹೇಳುತ್ತದೆ.

    ಸದ್ಯ ಈ ವಿಡಿಯೋ ಫೇಸ್ ಬುಕ್, ವ್ಯಾಟ್ಸಪ್, ಟ್ವೀಟ್ಟರ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

  • ಹೂ ಕಿತ್ತಿದ್ದಕ್ಕೆ ಅತ್ತೆಗೆ ಹಿಗ್ಗಾಮುಗ್ಗಾ ಥಳಿಸಿದ ನಿರ್ದಯಿ ಸೊಸೆ!- ವಿಡಿಯೋ ವೈರಲ್

    ಹೂ ಕಿತ್ತಿದ್ದಕ್ಕೆ ಅತ್ತೆಗೆ ಹಿಗ್ಗಾಮುಗ್ಗಾ ಥಳಿಸಿದ ನಿರ್ದಯಿ ಸೊಸೆ!- ವಿಡಿಯೋ ವೈರಲ್

    ಕೋಲ್ಕತ್ತಾ: ಸೊಸೆ ತನ್ನ ಅತ್ತೆಗೆ ಹಿಗ್ಗಾಮುಗ್ಗವಾಗಿ ಥಳಿಸಿದ ಅಮಾನವೀಯ ಘಟನೆಯೊಂದು ದಕ್ಷಿಣ ಕೋಲ್ಕತ್ತಾದ ಗರಿಯಾ ಎಂಬ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ..

    ಅತ್ತೆ ಯಶೋದಾ ಪಾಲ್ ಅವರಿಗೆ ಸೊಸೆ ಸ್ವಪ್ನ ಪಾಲ್ ಹೊಡೆಯುವ ದೃಶ್ಯವನ್ನು ನೆರೆಮನೆಯವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲೇನಿದೆ?: ಆರೋಪಿ ಸೊಸೆ ಸ್ವಪ್ನ ಪಾಲ್ ತನ್ನ ಅತ್ತೆ 75 ವರ್ಷದ ಯಶೋದಾ ಅವರ ಕೂದಲನ್ನು ಎಳೆದಾಡಿ ಮುಖಕ್ಕೆ ಹೊಡೆದಿದ್ದಾಳೆ. ಈ ದೃಶ್ಯವನ್ನು ನೆರೆಮನೆಯರು ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಕೆಲ ಗಂಟೆಗಳಲ್ಲೇ ಈ ವಿಡಿಯೋವನ್ನು 25 ಸಾವಿರ ಮಂದಿ ಶೇರ್ ಮಾಡಿದ್ದಾರೆ.

    ನನ್ನ ಅನುಮತಿಯಿಲ್ಲದೇ ಯಾಕೆ ಹೂ ಕಿತ್ತೆ ಅಂತ ಕಿರುಚಾಡಿಕೊಂಡ ಸೊಸೆ, ವಯಸ್ಸು ನೋಡದೇ ಅತ್ತೆಗೆ ಚೆನ್ನಾಗಿ ಥಳಿಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ಹಲವು ಮಂದಿ ಸೊಸೆಯ ವರ್ತನೆಯನ್ನು ಖಂಡಿಸಿದ್ದಾರೆ. ಅಲ್ಲದೇ ಸೊಸೆಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.

    ವಯೋವೃದ್ಧೆ ಯಶೋದಾ ಪಾಲ್ ಅವರಿಗೆ ಮರೆವಿನ ಕಾಯಿಲೆ ಇದೆ. ಹೀಗಾಗಿ ಅವರು ಸೊಸೆಯ ಥಳಿತಕ್ಕೊಳಗಾಗಿದ್ದಾರೆ. ತಮ್ಮ ಗಾರ್ಡನ್ ನಿಂದ ಹೂ ಕೀಳುವಾಗ ಸೊಸೆಯ ಅನುಮತಿ ಪಡೆಯಲಿಲ್ಲ. ಇದರಿಂದ ಸಿಟ್ಟಿಗೆದ್ದ ಸೊಸೆ, ಅತ್ತೆಯ ಮೇಲೆ ಕ್ರೂರ ವರ್ತನೆ ತೋರಿದ್ದಾಳೆ. ಅಲ್ಲದೇ ಅತ್ತೆಗೆ ಪ್ರತಿನಿತ್ಯ ಸೊಸೆ ದೈಹಿಕ ಹಿಂಸೆ ಕೊಡುತ್ತಿದ್ದಾಳೆ. ಯಶೋದಾ ಪಾಲ್ ಅವರ ಪತಿ ಹಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು ಅಂತ ಕೋಲ್ಕತ್ತಾ ಪೊಲೀಸರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ಸ್ಡ್ರೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅತ್ತೆ ಯಶೋದಾ ಅವರನ್ನು ಪೊಲೀಸರು ರಕ್ಷಿಸಿದ್ದಾರೆ. ಆರೋಪಿ ಸೊಸೆಯನ್ನು ಪೊಲೀಸರು ಬುಧವಾರ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

     

     

  • ಮಚ್ಚಿನಿಂದ ಕೊಚ್ಚಿ ಪತ್ನಿ, ಅತ್ತೆಯನ್ನು ಬರ್ಬರವಾಗಿ ಕೊಲೆಗೈದ!

    ಮಚ್ಚಿನಿಂದ ಕೊಚ್ಚಿ ಪತ್ನಿ, ಅತ್ತೆಯನ್ನು ಬರ್ಬರವಾಗಿ ಕೊಲೆಗೈದ!

    ತುಮಕೂರು: ತನ್ನ ಅತ್ತೆ ಮತ್ತು ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆಯೊಂದು ತುಮಕೂರಿನ ಪಾವಗಡ ತಾಲೂಕಿನ ಗೌಡಿ ಹಟ್ಟಿಯಲ್ಲಿ ನಡೆದಿದೆ.

    ರಾಮಾಂಜಿನಮ್ಮ(50), ನಾಗಮಣಿ(28) ಕೊಲೆಯಾದ ದುರ್ದೈವಿಗಳು. ಮಂಜುನಾಥ್ (30) ಹತ್ಯೆಗೈದ ಆರೋಪಿ.

    ದಿನಗೂಲಿ ಕೆಲಸ ಮಾಡುತ್ತಿದ್ದ ಮಂಜುನಾಥ್, ಪತ್ನಿ ನಾಗಮಣಿಯನ್ನು ವರಿಸಿ 6 ವರ್ಷವಾಗಿತ್ತು. ಆ ಬಳಿಕ ಪತ್ನಿಗೆ ಅಕ್ರಮ ಸಂಬಂಧವಿದೆಯೆಂದು ಶಂಕಿಸಿದ್ದನು. ಈ ವಿಚಾರವಾಗಿ ಕುಡಿದು ಬಂದು ಗಲಾಟೆ ಕೂಡ ಮಾಡುತ್ತಿದ್ದನು.

    ನಾಗಮಣಿ ಅವರು ತವರು ಮನೆಗೆ ತೆರಳಿದ್ದ ಸಂದರ್ಭದಲ್ಲಿ ಮಂಜುನಾಥ್ ಕುಡಿದು ಆಕೆಯ ಮನೆಗೆ ಹೋಗಿದ್ದಾನೆ. ಅಲ್ಲದೇ ಅಕ್ರಮ ಸಂಬಂಧ ವಿಚಾರವಾಗಿ ಮತ್ತೆ ತಗಾದೆ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಮಂಜುನಾಥ್, ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿದ್ದಾನೆ. ಈ ವೇಳೆ ನಾಗಮಣಿ ತಾಯಿ ಅಡ್ಡಬಂದಿದ್ದರಿಂದ ಇದರಿಂದ ಸಿಟ್ಟುಗೊಂಡ ಮಂಜುನಾಥ್ ಅತ್ತೆಯ ಮೇಲೂ ಮಚ್ಚು ಬೀಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಅತ್ತೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮಂಜುನಾಥ್ -ನಾಗಮಣಿ ದಂಪತಿಗೆ ಮಗನೊಬ್ಬನಿದ್ದು, ಇದೀಗ ತಾಯಿಯನ್ನು ಕಳೆದುಕೊಂಡಿದ್ದಾನೆ.

    ಸ್ಥಳಕ್ಕೆ ಪಾವಗಡ ಪೊಲೀಸರ ಭೇಟಿ, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮನೆಯೊಳಗೆ ಚಿರತೆ ನುಗಿದ್ದ ವೇಳೆ ಶೌಚಾಲಯದಲ್ಲಿ ಬಂಧಿಯಾಗಿದ್ದ ಅತ್ತೆ-ಸೊಸೆಗೆ ಸನ್ಮಾನ!

    ಮನೆಯೊಳಗೆ ಚಿರತೆ ನುಗಿದ್ದ ವೇಳೆ ಶೌಚಾಲಯದಲ್ಲಿ ಬಂಧಿಯಾಗಿದ್ದ ಅತ್ತೆ-ಸೊಸೆಗೆ ಸನ್ಮಾನ!

    ತುಮಕೂರು: ಮನೆಯೊಳಗೆ ಇದ್ದ ಚಿರತೆಗೆ ಸೆಡ್ಡುಹೊಡೆದು ಸತತ 7 ಗಂಟೆ ಕಾಲ ಶೌಚಾಲಯದಲ್ಲಿ ಬಂಧಿಯಾಗಿ ಸುರಕ್ಷಿತವಾಗಿ ಹೊರಕ್ಕೆ ಬಂದ ತುಮಕೂರಿನ ಗಟ್ಟಿಗಿತ್ತಿ ಅತ್ತೆ-ಸೊಸೆಗೆ ಅಭಿನಂದನೆಯ ಮಾಹಾಪೂರ ಹರಿದು ಬರುತಿದೆ.

    ಅತ್ತೆ ವನಜಾಕ್ಷಿ ಸೊಸೆ ವಿನುತಾ ಹಾಗೂ ಮಾವ ರಂಗನಾಥ್ ಅವರು ತೋರಿದ ಧೈರ್ಯಕ್ಕೆ ಮೆಚ್ಚಿ ನಗರದ ಜನತೆ ಸನ್ಮಾನಿಸಿದ್ದಾರೆ. ಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಟ್ಟಿಗಿತ್ತಿ ಅತ್ತೆ ಮತ್ತು ಸೊಸೆಗೆ ಭಾನುವಾರ ಸನ್ಮಾನಿಸಲಾಯಿತು. ಇದನ್ನೂ ಓದಿ: ಮನೆಗೆ ನುಗ್ಗಿದ ಚಿರತೆ – ಭಯಗೊಂಡು ಶೌಚಾಲಯದಲ್ಲಿ ಅಡಗಿಕೊಂಡ್ರು ಅತ್ತೆ, ಸೊಸೆ

    ಯಾವುದೇ ಸಂಕಷ್ಟ ಬಂದರೂ ಧೃತಿಗೆಡದೇ ಧೈರ್ಯದಿಂದ ಇದ್ದರೆ ಆ ಸಂಕಷ್ಟದಿಂದ ಸುಲಭವಾಗಿ ಪಾರಾಗಬಹುದು ಇದಕ್ಕೆ ಈ ಅತ್ತೆ-ಸೊಸೆಯೆ ಸಾಕ್ಷಿ ಎಂದು ಅಭಿನಂದಿಸಿ ಪ್ರಮಾಣ ಪತ್ರ ನೀಡಲಾಗಿದೆ. ಶಾಸಕ ರಫೀಕ್ ಅಹಮದ್ ಈ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿರತೆ ಸಂಕಷ್ಟದಿಂದ ಪಾರಾದ ರಂಗನಾಥ್ ಅವರ ಕುಟುಂಬದ ಧೈರ್ಯವನ್ನು ಕೊಂಡಾಡಿದರು.

    ಅಂದಹಾಗೆ ಜನವರಿ 20 ರಂದು ಇವರ ಮನೆಗೆ ಚಿರತೆ ನುಗ್ಗಿತ್ತು. ಭಯಗೊಂಡು ಮನೆಯವರು ಶೌಚಾಲಯದಲ್ಲಿ ಅಡಗಿಕೊಂಡಿದ್ದರು. ಸತತ 11 ಗಂಟೆಯ ಕಾರ್ಯಚರಣೆ ಮೂಲಕ ಚಿರತೆಯನ್ನು ಮನೆಯಲ್ಲೇ ಸೆರೆಹಿಡಿಯಲಾಗಿತ್ತು. ಇದನ್ನೂ ಓದಿ: ಆಪರೇಷನ್ ಚೀತಾ ಸಕ್ಸಸ್-ಅಡುಗೆ ಮನೆಯ ಅಟ್ಟದ ಮೇಲೆ ಕುಳಿತಿದ್ದ ಚಿರತೆ