Tag: mother in law

  • ಭೀಕರ ರಸ್ತೆ ಅಪಘಾತ- ಸ್ಥಳದಲ್ಲಿಯೇ ಅತ್ತೆ-ಸೊಸೆ ಸಾವು

    ಭೀಕರ ರಸ್ತೆ ಅಪಘಾತ- ಸ್ಥಳದಲ್ಲಿಯೇ ಅತ್ತೆ-ಸೊಸೆ ಸಾವು

    ಯಾದಗಿರಿ: ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಅತ್ತೆ ಸೊಸೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸೈದಾಪುರ ಸಮೀಪದ ನಿಲ್ಲಹಳ್ಳಿ ಗೆಟ್ ಬಳಿ ನಡೆದಿದೆ.

    ಯಾದಗಿರಿ ತಾಲೂಕಿನ ಲಾಡಾಪುರ್ ಗ್ರಾಮದ ನಿವಾಸಿಗಳಾದ ಮಹಾದೇವಮ್ಮ (50) ಪ್ರಿಯಾ (35) ಮೃತ ದುರ್ದೈವಿಗಳು. ಈ ದುರ್ಘಟನೆಯಲ್ಲಿ ಮಹೇಂದ್ರ ಮತ್ತು ಸಂಬಂಧಿ ಲೋಕೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಮಹೇಂದ್ರ ಅವರು ತಮ್ಮ ಕುಟುಂಬದ ಜೊತೆಗೆ ಕಾರಿನಲ್ಲಿ ಯಾದಗಿರಿಯಿಂದ ಮೂಲಕ ಬೆಂಗಳೂರಿಗೆ ಹೊರಟಿದ್ದರು. ಆದರೆ ವೇಗವಾಗಿದ್ದ ಕಾರು ಸೈದಾಪುರ ಸಮೀಪದ ನಿಲ್ಲಹಳ್ಳಿ ಗೆಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮಹಾದೇವಮ್ಮ ಹಾಗೂ ಪ್ರಿಯಾ ಮೃತಪಟ್ಟಿದ್ದಾರೆ.

    ಕಾರು ಅಪಘಾತವನ್ನು ನೋಡಿದ ಕೆಲ ಜನರು ಆಂಬುಲೆನ್ಸ್ ಹಾಗೂ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಸೈದಾಪುರ ಠಾಣೆಯ ಪೊಲೀಸರು, ಗಾಯಾಳುಗಳನ್ನು ರಾಯಚೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಅತಿಯಾಗಿ ಕಾರು ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಸೊಸೆಗೆ ಮರು ಮದುವೆ ಮಾಡಿಸಿ ವರನನ್ನು ಮನೆ ತುಂಬಿಸಿಕೊಂಡ ಅತ್ತೆ-ಮಾವ

    ಸೊಸೆಗೆ ಮರು ಮದುವೆ ಮಾಡಿಸಿ ವರನನ್ನು ಮನೆ ತುಂಬಿಸಿಕೊಂಡ ಅತ್ತೆ-ಮಾವ

    ಶಿವಮೊಗ್ಗ: ಅತ್ತೆ-ಸೊಸೆ ಜಗಳ, ವರದಕ್ಷಿಣೆ ಕಿರುಕುಳ, ಪತಿಯಿಂದ ಪತ್ನಿಗೆ ಕಿರುಕುಳ ಮತ್ತಿತರ ನಕಾರಾತ್ಮಕ ವಿಚಾರಗಳ ನಡುವೆ ಅತ್ತೆ-ಮಾವ, ವಿಧವೆ ಸೊಸೆಗೆ ಮರು ಮದುವೆ ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮಗನ ಸಾವಿನ ನಂತರ ಸೊಸೆಯ ಜೀವನ ನಿಕೃಷ್ಟ ಆಗಬಾರದು ಎಂಬ ಉದ್ದೇಶದಿಂದ ಆಕೆಗೆ ಮರುವಿವಾಹ ಮಾಡಿಸಿ, ವರನನ್ನು ಮನೆ ತುಂಬಿಸಿಕೊಂಡ ಸಹೃದಯಿ ದಂಪತಿಯ ನಿಲುವು ಜನರ ಮೆಚ್ಚುಗೆಗೆ ಕಾರಣವಾಗಿದೆ.

    ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮದ ಕಡೇಕಲ್ ನರಸಿಂಹ ಮತ್ತು ಲೋಲಾಕ್ಷಿ ದಂಪತಿ ಪುತ್ರ ಪ್ರಶಾಂತ್ ಎಂಬವರ ಜೊತೆ ಆನಂದಪುರ ಹೋಬಳಿ ಗೌತಮಪುರ ಸಮೀಪ ಹಿರೇಹಾರಕ ಗ್ರಾಮದ ಮಂಜುನಾಥ ಮತ್ತು ರೇಣುಕಮ್ಮ ದಂಪತಿ ಪುತ್ರಿ ವೀಣಾ ಅವರ ಮದುವೆ 4 ವರ್ಷಗಳ ಹಿಂದೆ ನಡೆದಿತ್ತು. ದುರಾದೃಷ್ಟವಶಾತ್ ಪ್ರಶಾಂತ್ 2 ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು.

    ಸುಂದರ ಸಂಸಾರ ಕಟ್ಟುವ ಕನಸು ಹೊತ್ತಿದ್ದ 22 ವರ್ಷದ ವೀಣಾಗೆ ಪತಿಯ ಸಾವು ಭರ ಸಿಡಿಲಿನಂತೆ ಅಪ್ಪಳಿಸಿತ್ತು. ಜೊತೆಗೆ ಬದುಕಿನ ಕುಡಿಯಾಗಿ ಉದಯಿಸಿದ್ದ ಮಗ ಯಶ್ಮಿಕ್‍ನ ಭವಿಷ್ಯ ರೂಪಿಸುವ ಹೊಣೆಗಾರಿಕೆಯೂ ಹೆಗಲೇರಿತ್ತು. ಒಂದೂವರೆ ವರ್ಷದ ಮಗ ಅಪ್ಪನಿಗಾಗಿ ಹಂಬಲಿಸಿದಾಗೆಲ್ಲ, ಪತಿಯನ್ನು ನೆನೆದು ಹೆತ್ತ ಕರುಳು ಮರುಗುತ್ತಿತ್ತು. ನರಸಿಂಹ ದಂಪತಿಗೆ ಪುತ್ರ ವಿಯೋಗದ ಶೋಕ ಇನ್ನಿಲ್ಲದಂತೆ ಕಾಡುತ್ತಿತ್ತು. ಇರುವ ಒಬ್ಬ ಮಗನ ಅಕಾಲಿಕ ಸಾವನ್ನು ಅರಗಿಸಿಕೊಳ್ಳಲು ಕಷ್ಟವಾಗಿತ್ತು. ಹಾಗೆಂದು ಅವರು ಸುಮ್ಮನಾಗಲಿಲ್ಲ. ದುಃಖದ ನಡುವೆಯೂ ತಮ್ಮ ಸೊಸೆ, ಮೊಮ್ಮಗನ ಬದುಕು ರೂಪಿಸುವ ಹೊಣೆ ಹೊತ್ತು, ಸೊಸೆಗೆ ಮರುವಿವಾಹ ಮಾಡಿದ್ದಾರೆ. ಎಲ್ಲಕ್ಕಿಂತ ವಿಶೇಷ ಎನ್ನುವಂತೆ ಸೊಸೆಯನ್ನು ವರಿಸಿದಾತನನ್ನು ಮಗನಾಗಿ ಸ್ವೀಕರಿಸಿ, ಮನೆದುಂಬಿಸಿಕೊಂಡಿದ್ದಾರೆ.

    ಇದೀಗ ವೀಣಾಳ ಕೈಹಿಡಿದಿರುವ ಗಣೇಶ ಅವರು ಹೊಸನಗರ ತಾಲೂಕಿನ ಈಚಲಕೊಪ್ಪ ಸಮೀಪದ ಬಿಲ್ಗೋಡಿ ಗ್ರಾಮದವರು. 27 ವರ್ಷದ ಇವರಿಗೆ ಇದು ಮೊದಲ ವಿವಾಹ. ಗಣೇಶ್ ಪತ್ನಿಯ ಜೊತೆಯಲ್ಲಿ ಅವರ ಕುಟುಂಬದ ಸ್ವಲ್ಪ ಜಮೀನನ್ನು ನೋಡಿಕೊಂಡು, ಬದುಕಿನ ಹೊಸ ಹೆಜ್ಜೆ ಇಟ್ಟಿದ್ದಾರೆ. ಇಂತಹ ಮಾದರಿ ಕಾರ್ಯಕ್ಕೆ ಜೊತೆಯಾಗಿ ನಿಂತದ್ದು, ವೀಣಾ ಸಹೋದರ ಕೇಶವ ಹಾಗೂ ಅವರ ಸಂಬಂಧಿ ಮಾಜಿ ಸೈನಿಕ ಭೈರಾಪುರ ಕಿಶೋರ. ಇವರು ಮೂರೂ ಕುಟುಂಬಸ್ಥರ ಮನವೊಲಿಸಿ ಮದುವೆ ಮನೆಯ ಸಾರಥ್ಯ ವಹಿಸಿದರು. ಬಂಧು ಬಾಂಧವರು ಬೆನ್ನೆಲುಬಾಗಿ ನಿಂತರು. ಡಿ. 22ರಂದು ಹೊಸನಗರದ ಗಣಪತಿ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ವಿವಾಹ ಮಹೋತ್ಸವ ನಡೆದಿದೆ.

  • ಅತ್ತೆಯ ಮೇಲೆ ಅಳಿಯನಿಂದ್ಲೇ ಅತ್ಯಾಚಾರ

    ಅತ್ತೆಯ ಮೇಲೆ ಅಳಿಯನಿಂದ್ಲೇ ಅತ್ಯಾಚಾರ

    ಹೈದರಾಬಾದ್: 48 ವರ್ಷದ ಅತ್ತೆಯ ಮೇಲೆ ಅಳಿಯನೇ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆಯೊಂದು ಹೈದರಾಬಾದ್‍ನ ಪುಂಜಗುತ್ತ ಪ್ರದೇಶದಲ್ಲಿ ನಡೆದಿದೆ.

    ಶುಕ್ರವಾರ ರಾತ್ರಿ ಮದ್ಯದ ನಶೆಯಲ್ಲಿ ಮನೆಗೆ ಬಂದ 34 ವರ್ಷದ ಅಳಿಯ, ನೇರವಾಗಿ ಅತ್ತೆ ಇದ್ದ ಕೋಣೆಗೆ ತೆರಳಿದ್ದಾನೆ. ಅಲ್ಲಿ ಆತನ ಅತ್ತೆ ಮಲಗಿದ್ದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಅಳಿಯ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.

    ಕಳೆದ ಕೆಲ ವರ್ಷಗಳಿಂದ ಮಹಿಳೆ ತನ್ನ ಮಗಳು ಮತ್ತು ಅಳಿಯನ ಜೊತೆ ವಾಸವಾಗಿದ್ದರು. ಘಟನೆ ನಡೆದ ದಿನ ಮಗಳು ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದರು. ಈ ವೇಳೆಯೇ ಕುಡಿದ ಬಂದ ಅಳಿಯ ಅತ್ತೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

    ಮಹಿಳೆ ನೀಡಿದ ದೂರಿನಂತೆ ಐಪಿಸಿ ಸೆಕ್ಷನ್ 376(ಅತ್ಯಾಚಾರ)ರ ಅಡಿಯಲ್ಲಿ ಅಳಿಯನ ವಿರುದ್ಧ ದೂರು ದಾಖಲು ಮಾಡಲಾಗಿದೆ. ಆರೋಪಿ ತನ್ನ ಪತ್ನಿಯ ಜೊತೆ ಕ್ಷಮೆ ಕೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

  • ಕ್ಷುಲಕ ಕಾರಣಕ್ಕೆ ಜಗಳ – ಪರಸ್ಪರ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ ಅತ್ತೆ ಸೊಸೆ

    ಕ್ಷುಲಕ ಕಾರಣಕ್ಕೆ ಜಗಳ – ಪರಸ್ಪರ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ ಅತ್ತೆ ಸೊಸೆ

    ತುಮಕೂರು: ಕ್ಷುಲ್ಲಕ ಕಾರಣಕ್ಕೆ ಅತ್ತೆ-ಸೊಸೆ ಜಗಳ ಮಾಡಿಕೊಂಡು ಪರಸ್ಪರ ಬೆಂಕಿ ಹಚ್ಚಿಕೊಂಡು ಇಬ್ಬರೂ ಸಾವನ್ನಪ್ಪಿದ ವಿಲಕ್ಷಣ ಘಟನೆ ತುಮಕೂರು ತಾಲೂಕಿನ ಗಂಗಸದ್ರದಲ್ಲಿ ನಡೆದಿದೆ.

    ಸೊಸೆ ರಾಜೇಶ್ವರಿ (45) ಹಾಗೂ ಅತ್ತೆ ಪಾರ್ವತಮ್ಮ (75) ಮೃತರು. ಇಂದು ಕ್ಷುಲ್ಲಕ ಕಾರಣಕ್ಕೆ ಅತ್ತೆ-ಸೊಸೆ ನಡುವೆ ಜಗಳ ಆರಂಭವಾಗಿದೆ. ಜಗಳವಾಡುತ್ತಾ ತಮ್ಮ ಮನೆಯ ಬಾಗಿಲನ್ನು ಒಳಗಡೆಯಿಂದ ಲಾಕ್ ಮಾಡಿಕೊಂಡು ಮನೆಯಲ್ಲಿದ್ದ ಥಿನ್ನರ್ (ಪೈಂಟ್‍ಗೆ ಬಳಸುವ ವಸ್ತು) ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಪರಸ್ಪರ ಒಬ್ಬರಿಗೊಬ್ಬರು ಥಿನ್ನರ್ ಎರಚಿ ಬೆಂಕಿ ಹಚ್ಚಿಕೊಂಡಿದ್ದಾರೋ ಅಥವಾ ಯಾವ ರೀತಿ ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ವೇಳೆ ಒಳಗಡೆಯಿಂದ ಇಬ್ಬರ ಕಿರುಚಾಟ, ನೋವು ಸ್ಥಳೀಯರಿಗೆ ಕೇಳಿಸಿದೆ. ಅಲ್ಲದೇ ಹೊಗೆ ಕೂಡ ಬರುತಿತ್ತು ಕಾರಣ ಬಾಗಿಲು ತೆರೆದು ನೋಡಿದಾಗ ಇಬ್ಬರೂ ಸಾವನ್ನಪ್ಪಿದ್ದಾರೆ. ಇದನ್ನು ಓದಿ: ಅತ್ತೆಯ ಜೊತೆಗೆ ಸೊಸೆಯ ಅನೈತಿಕ ಸಂಬಂಧ – ಇಬ್ಬರನ್ನು ಇರಿದು ಕೊಂದ ನಿವೃತ್ತ ಶಿಕ್ಷಕ

    ಪಾರ್ವತಮ್ಮನ ಮಗ ಶಿವಕುಮಾರ್ ಪೈಂಟ್‍ ಕೆಲಸ ಮಾಡಿಕೊಂಡಿದ್ದು, ಪತ್ನಿ ರಾಜೇಶ್ವರಿಯನ್ನು ಮದುವೆಯಾಗಿ ಗಂಗಸಂದ್ರದ ಪತ್ನಿಯ ತವರು ಮನೆಯಲ್ಲಿಯೇ ವಾಸವಿದ್ದರು. ಕಳೆದ ಆರು ತಿಂಗಳ ಹಿಂದೆ ಶಿವಕುಮಾರ್ ತಾಯಿ ಪಾರ್ವತಮ್ಮರನ್ನ ಬೀರನಕಲ್ಕು ಗ್ರಾಮದಿಂದ ಕರೆದುಕೊಂಡು ಹೋಗಿ ಜೊತೆಯಲ್ಲಿ ಇರಿಸಿಕೊಂಡಿದ್ದರು. ಶಿವಕುಮಾರ್ ತನ್ನ ತಾಯಿಯನ್ನು ಕರೆದುಕೊಂಡು ಬಂದ ಕಾರಣ ರಾಜೇಶ್ವರಿ ಪ್ರತಿನಿತ್ಯ ಕಿರಿಕ್ ಮಾಡಿ ಜಗಳವಾಡುತ್ತಿದ್ದರಂತೆ. ಅದು ಇಂದು ವಿಕೋಪಕ್ಕೆ ಹೋಗಿ ಇಬ್ಬರು ಮೃತಪಟ್ಟಿರಬಹದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಾಯಿ ಮನೆ ಸೇರಿದ ಪತ್ನಿ- ನಡುರಸ್ತೆಯಲ್ಲೇ ಅತ್ತೆಯನ್ನು ಕೊಂದ ಅಳಿಯ

    ತಾಯಿ ಮನೆ ಸೇರಿದ ಪತ್ನಿ- ನಡುರಸ್ತೆಯಲ್ಲೇ ಅತ್ತೆಯನ್ನು ಕೊಂದ ಅಳಿಯ

    – ಪತ್ನಿಗೂ ಚಾಕು ಇರಿತ
    – ತನ್ನ ವಿರುದ್ಧ ದೂರು ನೀಡಿದ್ದಕ್ಕೆ ಕೊಲೆ

    ಅಹಮದಾಬಾದ್: ಪತಿ ಕಿರುಕುಳ ನೀಡುತ್ತಾನೆ ಎಂದು ಪತ್ನಿ ತನ್ನ ತಾಯಿ ಮನೆ ಸೇರಿದ್ದಳು ಹಾಗೂ ಪತಿ ವಿರುದ್ಧ ದೂರು ಕೂಡ ನೀಡಿದ್ದಳು. ಇದರಿಂದ ರೊಚ್ಚಿಗೆದ್ದ ಪತಿರಾಯ ನಡುರಸ್ತೆಯಲ್ಲಿಯೇ ಪತ್ನಿ ಮತ್ತು ಅತ್ತೆಗೆ ಚಾಕು ಇರಿದಿದ್ದು, ಸ್ಥಳದಲ್ಲೇ ಅತ್ತೆ ಸಾವನ್ನಪ್ಪಿರುವ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಕಲುಪುರ್ ನಿವಾಸಿ ಶೈಲೇಶ್ ಠಾಕೋರ್(35) ಆರೋಪಿ. ಶೈಲೇಶ್ ಪತ್ನಿ ಹೇತಲ್ ಠಾಕೋರ್(27) ಅವರ ತಾಯಿ ಶಾಂತ ಠಾಕೋರ್(47) ಕೊಲೆಯಾದ ದುರ್ದೈವಿ. ಶೈಲೇಶ್ ಪ್ರತಿನಿತ್ಯ ನೀಡುತ್ತಿದ್ದ ಕಿರುಕುಳ, ಹಿಂಸೆ ತಾಳಲಾರದೆ ಹೇತಲ್ ಮನೆಬಿಟ್ಟು ತವರನ್ನು ಸೇರಿದ್ದಳು. ಈ ವೇಳೆ ಮಗಳ ಕಷ್ಟ ಕಂಡು ಕೋಪಗೊಂಡ ಶಾಂತ ಅವರು, ಎನ್‍ಜಿಒ ಒಂದರ ಸಹಾಯದಿಂದ ಶೈಲೇಶ್ ವಿರುದ್ಧ ಪೊಲೀಸರಿಗೆ ಅಳಿಯನ ದೂರು ನೀಡಿದ್ದರು. ಆದ್ದರಿಂದ ತಾಯಿ, ಮಗಳ ಮೇಲೆ ಶೈಲೇಶ್ ದ್ವೇಷವಿಟ್ಟುಕೊಂಡಿದ್ದನು. ಇದನ್ನೂ ಓದಿ: ಮದ್ವೆಗೆ ಒಪ್ಪಿಲ್ಲವೆಂದು ಯುವತಿಯ ಕತ್ತು ಸೀಳಿ ಪೊಲೀಸರ ಅತಿಥಿಯಾದ

    ಈ ಸಂಬಂಧ ಶನಿವಾರ ಕೋರ್ಟಿನಲ್ಲಿ ವಿಚಾರಣೆ ಇತ್ತು. ಹೀಗಾಗಿ ಶಾಂತ ಹಾಗೂ ಹೇತಲ್ ಕೋರ್ಟಿಗೆ ಹೋಗುವ ಮೊದಲು ಎನ್‍ಜಿಒಗೆ ತೆರೆಳುತ್ತಿದ್ದರು. ಈ ಬಗ್ಗೆ ತಿಳಿದ ಶೈಲೇಶ್ ಅವರು ಹೋಗುವ ರಸ್ತೆಯಲ್ಲಿ ಅಡಗಿ ಕುಳಿತಿದ್ದನು. ಶಾಂತ ಹಾಗೂ ಹೇತಲ್ ರಸ್ತೆಯಲ್ಲಿ ಬರುತ್ತಿದ್ದಾಗ ಶೈಲೇಶ್ ಏಕಾಏಕಿ ಅವರಿಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಜೊತೆಗೆ ಇಬ್ಬರಿಗೂ ಚಾಕು ಇರಿದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ:22 ವರ್ಷದ ಮಗಳಿಗೆ ವಿದ್ಯುತ್ ಶಾಕ್ ನೀಡಿ, ಕತ್ತು ಸೀಳಿದ ಪಾಪಿ ತಂದೆ

    ಈ ವೇಳೆ ಗಂಭೀರ ಗಾಯಗೊಂಡಿದ್ದ ಶಾಂತ ಸ್ಥಳದಲ್ಲೇ ಸಾವನ್ನಪ್ಪಿದ್ದು, ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಹೇತಲ್ ಅವರನ್ನು ಕಂಡು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಹೇತಲ್ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇದನ್ನೂ ಓದಿ:ಮದ್ವೆಯಾದ ಒಂದೇ ವಾರಕ್ಕೆ ಪತಿಯನ್ನು ಕೊಲ್ಲಲು ಯತ್ನಿಸಿದ ಪತ್ನಿ

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಈ ಸಂಬಂಧ ವಿಚಾರಣೆ ಮುಂದುವರಿಸಿದ್ದಾರೆ.

  • ಅತ್ತೆ ಮೇಲಿನ ಕೋಪಕ್ಕೆ 2 ಮಕ್ಕಳಿಗೆ ವಿಷವಿಕ್ಕಿ ತಾಯಿ ಆತ್ಮಹತ್ಯೆಗೆ ಯತ್ನ

    ಅತ್ತೆ ಮೇಲಿನ ಕೋಪಕ್ಕೆ 2 ಮಕ್ಕಳಿಗೆ ವಿಷವಿಕ್ಕಿ ತಾಯಿ ಆತ್ಮಹತ್ಯೆಗೆ ಯತ್ನ

    ಮಂಡ್ಯ: ಅತ್ತೆ ಮೇಲಿನ ಕೋಪಕ್ಕೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳಿಗೆ ವಿಷವಿಕ್ಕಿ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ತಾಯಿಯ ಕೋಪಕ್ಕೆ ಇಬ್ಬರು ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಇನ್ನೋರ್ವ ಬಾಲಕನ ಸ್ಥಿತಿ ಗಂಭಿರವಾಗಿದೆ.

    ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿಕೋಡಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಳವಾಯಿಕೋಡಿಹಳ್ಳಿ ಗ್ರಾಮದ ನಿವಾಸಿ ಶಿವಪ್ಪ ಅವರ ಪತ್ನಿ ಸೌಜನ್ಯ(24) ಮಕ್ಕಳಿಗೆ ವಿಷ ಕುಡಿಸಿ, ತಾನೂ ಆತ್ಮಹತ್ಯಗೆ ಯತ್ನಿಸಿದ ತಾಯಿ. ಮೃತಪಟ್ಟ ಮಗುವನ್ನು ಲೋಹಿತ್(1) ಎಂದು ಗುರುತಿಸಲಾಗಿದ್ದು, ಇನ್ನೋರ್ವ ಮಗ ಪುನೀತ್(3) ಸ್ಥಿತಿ ಗಂಭಿರವಾಗಿದೆ.

    ಕಳೆದ 6 ವರ್ಷಗಳ ಹಿಂದೆ ಶಿವಪ್ಪ ಸೌಜನ್ಯರನ್ನು ಪ್ರೀತಿ ಮಾಡಿ ಮದುವೆಯಾಗಿದ್ದರು. ಸೌಜನ್ಯಗೆ ಅವರ ಅತ್ತೆ ಮಕ್ಕಳನ್ನು ಮತಾನಾಡಿಸೋದು, ಆಟವಾಡಿಸೋದು ಇಷ್ಟವಾಗುತ್ತಿರಲಿಲ್ಲ. ಇದೇ ಕಾರಣಕ್ಕೆ ಸೌಜನ್ಯ ಹಾಗೂ ಅತ್ತೆ ಮಧ್ಯೆ ಗಲಾಟೆ ನಡೆದಿತ್ತು. ಇದೇ ಸಿಟ್ಟಿನಲ್ಲಿದ್ದ ತಾಯಿ ಬುಧವಾರ ತನ್ನಿಬ್ಬರು ಮಕ್ಕಳಿಗೆ ವಿಷ ಕುಡಿಸಿ, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಷ ಸೇವನೆಯಿಂದ ನರಳಾಡುತ್ತಿದ್ದ ಮೂವರನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರು.

    ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಲೋಹಿತ್ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ. ಇತ್ತ ಪುನೀತ್ ಹಾಗೂ ತಾಯಿ ಸ್ಥಿತಿ ಕೂಡ ಗಂಭಿರವಾಗಿದ್ದು ಇಬ್ಬರೂ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

  • ಮಾವನನ್ನ ಕೊಲೆಗೈದು, ದೇಹವನ್ನು ಗೋಣಿಚೀಲದಲ್ಲಿ ಠಾಣೆಗೆ ತಂದ ಸೊಸೆ

    ಮಾವನನ್ನ ಕೊಲೆಗೈದು, ದೇಹವನ್ನು ಗೋಣಿಚೀಲದಲ್ಲಿ ಠಾಣೆಗೆ ತಂದ ಸೊಸೆ

    – ಬಿಡಿಸಿಕೊಳ್ಳಲು ಹೋಗಿ ಹೆಣವಾದ ಅತ್ತೆ

    ಬಾಗಲಕೋಟೆ: ಸೊಸೆಯೊಬ್ಬಳು ಕಬ್ಬಿಣದ ರಾಡ್‍ನಿಂದ ಮಾವ ಹಾಗೂ ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.

    ಜಮಖಂಡಿ ತಾಲೂಕಿನ ಜಂಬಗಿ ಕೆ.ಡಿ. ಗ್ರಾಮದ ಸಿದ್ದರಾಯ ಮಲ್ಲೇಶನವರ (58) ಹಾಗೂ ಕಲಾವತಿ (45) ಕೊಲೆಯಾದ ಅತ್ತೆ, ಮಾವ. ಗೀತಾ ಮಲ್ಲೇಶನವರ ಕೊಲೆ ಮಾಡಿರುವ ಆರೋಪಿ ಸೊಸೆ. ಗೀತಾ ಗುರುವಾರ ಮಧ್ಯಾಹ್ನ ಕೃತ್ಯ ಎಸಗಿದ್ದಾಳೆ.

    ಮಾವ ಸಿದ್ದರಾಯ ಕಳೆದ ಕೆಲವು ದಿನಗಳಿಂದ ಸೊಸೆ ಗೀತಾಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಗೀತಾ ಇಂದು ಮಾವನ ಜೊತೆಗೆ ಜಗಳಕ್ಕೆ ಮುಂದಾಗಿದ್ದಳು. ಈ ವೇಳೆ ಇಬ್ಬರ ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆ ಮಾಡಿದ್ದಾರೆ. ಈ ವೇಳೆ ಗೀತಾ ಕಬ್ಬಿಣದ ರಾಡ್‍ನಿಂದ ಮಾವ ಸಿದ್ದರಾಯನ ತಲೆಗೆ ಹೊಡೆದಿದ್ದಾಳೆ. ಹಲ್ಲೆಯನ್ನು ತಡೆಯಲು ಬಂದ ಅತ್ತೆ ಕಲಾವತಿ ತಲೆಗೂ ರಾಡ್‍ನಿಂದ ತಲೆಗೆ ಹೊಡೆದಿದ್ದಾಳೆ.

    ಗಂಭೀರವಾಗಿ ಗಾಯಗೊಂಡಿದ್ದ ಸಿದ್ದರಾಯ ಹಾಗೂ ಕಲಾವತಿ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಪಲ್ಪ ಸಮಯದ ಬಳಿಕ ಗೀತಾ ಮಾವನ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಪತಿ ಗುರುಪಾದ ಜೊತೆಗೆ ಸಾವಳಗಿ ಪೊಲೀಸ್ ಠಾಣೆಗೆ ಹೋಗಿದ್ದಾಳೆ.

    ಮಾವ ಸಿದ್ದರಾಯನಿಗೆ ಇಬ್ಬರು ಹೆಂಡತಿಯರು. ನಾನು ಸಿದ್ದರಾಯನ ಮೊದಲ ಹೆಂಡತಿಯ ಮಗ ಗುರುಪಾದ ಪತ್ನಿ. ನಮ್ಮ ಅತ್ತೆ ಸಾವನ್ನಪ್ಪಿದ ಬಳಿಕ ಮಾವ ಎರಡನೇ ಮದುವೆಯಾಗಿದ್ದು, ಅವರೊಂದಿಗೆ ಇದ್ದಾನೆ. ನಾನು ಹಾಗೂ ಪತಿ ಸಮೀಪ ಮನೆಯಲ್ಲಿ ವಾಸಿಸುತ್ತಿದ್ದೇವೆ. ಆದರೆ ಮಾವ ಆಗಾಗ ಮನೆಗೆ ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದ. ಹೀಗಾಗಿ ಕೊಲೆ ಮಾಡಿದ್ದೇನೆ ಎಂದು ಆರೋಪಿ ಗೀತಾ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

    ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಾವಳಗಿ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಗೀತಾ, ಪತಿ ಗುರುಪಾದ ಹಾಗೂ ಬಸಗೊಂಡನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

  • ವರದಕ್ಷಿಣೆ ನೀಡದ ಮಾವನ ಕಿವಿ ಕತ್ತರಿಸಿ, ಅತ್ತೆಯ ಮೂಗು ಕಚ್ಚಿದ ಅಳಿಯ

    ವರದಕ್ಷಿಣೆ ನೀಡದ ಮಾವನ ಕಿವಿ ಕತ್ತರಿಸಿ, ಅತ್ತೆಯ ಮೂಗು ಕಚ್ಚಿದ ಅಳಿಯ

    ಲಕ್ನೋ: ವರದಕ್ಷಿಣೆ ನೀಡಿಲ್ಲ ಎಂಬ ಕಾರಣ ಅಳಿಯನೊಬ್ಬ ಮಾವನ ಕಿವಿ ಕತ್ತರಿಸಿ ಅತ್ತೆಯ ಮೂಗು ಕಚ್ಚಿದ ಘಟನೆ ಉತ್ತರ ಪ್ರದೇಶದ ಬರೇಲಿಯ ನಕಾಟಿಯಾ ಪ್ರದೇಶದಲ್ಲಿ ನಡೆದಿದೆ.

    ಹಲ್ಲೆ ಮಾಡಿದ ಅಳಿಯನನ್ನು ಮೊಹಮ್ಮದ್ ಅಶ್ಫಾಕ್ ಎಂದು ಗುರುತಿಸಲಾಗಿದ್ದು, ಹಲ್ಲೆಗೊಳಗಾದ ಅತ್ತೆ ಮಾವನನ್ನು, ಗಂಥಾ ರೆಹಮಾನ್ ಮತ್ತು ಗುಲ್ಶನ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಗುಲ್ಶನ್ ಅವರನ್ನು ಹೆಚ್ಚಿನ ಚಿಕೆತ್ಸೆಗಾಗಿ ದೆಹಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎಫ್‍ಸಿಐ) ನಾಲ್ಕನೇ ಹಂತದ ಉದ್ಯೋಗಿಯಾಗಿರುವ ಗಂಥಾ ರೆಹಮಾನ್ ಅವರ ತನ್ನ ಪುತ್ರಿ ಚಾಂದ್ ಬಿ ಅವರನ್ನು ಒಂದು ವರ್ಷದ ಹಿಂದೆ ಬರೇಲಿಯ ರೀಯಲ್ ಎಸ್ಟೇಟ್ ವ್ಯಾಪಾರಿಯಾದ ಮೊಹಮ್ಮದ್ ಅಶ್ಫಾಕ್‍ನಿಗೆ ಕೊಟ್ಟು ವಿವಾಹ ಮಾಡಿದ್ದಾರೆ. ಈ ಸಮಯದಲ್ಲಿ ರೆಹಮಾನ್ ತನ್ನ ಮಗಳಿಗೆ 10 ಲಕ್ಷ ರೂಪಾಯಿ ವರದಕ್ಷಿಣೆಯನ್ನು ಕೂಡ ನೀಡಿದ್ದಾರೆ. ಆದರೆ ಚಾಂದ್ ಬಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಆಕೆಯ ಗಂಡ 5 ಲಕ್ಷ ರೂ. ಹೆಚ್ಚು ವರದಕ್ಷಿಣೆ ನೀಡುವಂತೆ ಹೇಳಿದ್ದಾನೆ. ಆದರೆ ರೆಹಮಾನ್ ಇದನ್ನು ನಿರಾಕರಿಸಿದಾಗ, ಅಶ್ಫಾಕ್ ಭಾನುವಾರ ಚಂದ್ ಬಿಯನ್ನು ಥಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ವಿಷಯವನ್ನು ತಿಳಿದು ರೆಹಮಾನ್ ಮತ್ತು ಗುಲ್ಶನ್ ಜೊತೆಯಲ್ಲಿ ಮಗಳ ಮನೆಗೆ ಬಂದಿದ್ದಾರೆ. ಈ ವೇಳೆ ಎರಡು ಕುಟುಂಬದ ನಡುವೆ ಈ ವಿಚಾರಕ್ಕೆ ಮಾತುಕತೆ ನಡೆದಿದೆ. ಈ ವೇಳೆ ಕೋಪಗೊಂಡ ಅಶ್ಫಾಕ್ ಮತ್ತು ಅವರ ಕುಟುಂಬದವರು, ರೆಹಮಾನ್ ಮತ್ತು ಗುಲ್ಶನ್ ಅವರನ್ನು ಥಳಿಸಿದ್ದಾರೆ. ಈ ಜಗಳದಲ್ಲಿ ಅಶ್ಫಾಕ್ ಅತ್ತೆ ಗುಲ್ಶನ್ ಅವರ ಮೂಗು ಕಚ್ಚಿದ್ದಾನೆ ಮತ್ತು ಮಾವ ರೆಹಮಾನ್ ಅವರ ಕಿವಿಯನ್ನು ಚಾಕುವಿನಿಂದ ಕತ್ತರಿಸಿದ್ದಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಅವನಿಶ್ ಸಿಂಗ್, ಈ ಪ್ರಕರಣಕ್ಕೆ ಸಂಬಧಿಸಿದಂತೆ ಐಪಿಸಿ ಸೆಕ್ಷನ್ 323, 326 ಮತ್ತು 504ರ ಅಡಿಯಲ್ಲಿ ಅಶ್ಫಾಕ್ ಕುಟುಂಬದ ಐದು ಜನರ ಮೇಲೆ ಎಫ್‍ಐಆರ್ ದಾಖಲಾಗಿದೆ. ಅವರು ತಪ್ಪಿಸಿಕೊಂಡಿದ್ದು ಶೀಘ್ರದಲ್ಲೇ ಅವರನ್ನು ಬಂಧಿಸಲಿದ್ದೇವೆ ಎಂದು ಹೇಳಿದ್ದಾರೆ.

  • ಮದ್ವೆಯಾದ ಒಂದು ವರ್ಷದಲ್ಲೇ ಅತ್ತೆಯಿಂದ ಅಳಿಯನ ಹೀನಕೃತ್ಯ ಬಯಲು

    ಮದ್ವೆಯಾದ ಒಂದು ವರ್ಷದಲ್ಲೇ ಅತ್ತೆಯಿಂದ ಅಳಿಯನ ಹೀನಕೃತ್ಯ ಬಯಲು

    ಹೈದರಾಬಾದ್: ಮದುವೆಯಾದ ಒಂದು ವರ್ಷದಲ್ಲೇ 27 ವರ್ಷದ ಅಳಿಯನೊಬ್ಬ ಪತ್ನಿಯ ತಾಯಿಯ ಮೇಲೆ ಅತ್ಯಾಚಾರ ಎಸಗಿರುವ ಹೀನಕೃತ್ಯ ನಗರದಲ್ಲಿ ನಡೆದಿದೆ.

    ಆರೋಪಿಯನ್ನು ಭಾಸ್ಕರ್ ಎಂದು ಗುರುತಿಸಲಾಗಿದ್ದು, ಈ ಘಟನೆ ಜುಲೈ 31ರಂದು ಚಂದ್ರಯಂಗುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಶುಕ್ರವಾರ ಆರೋಪಿಯನ್ನು ಬಾಲಾಪುರದ ಬಳಿ ಬಂಧಿಸಿದ್ದಾರೆ. ಸದ್ಯಕ್ಕೆ ಸಂತ್ರಸ್ತೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಆರೋಪಿ ಹೈದರಾಬಾದ್‍ನ ಕಂಡಿಕಲ್ ಪ್ರದೇಶದ ನಿವಾಸಿಯಾಗಿದ್ದು, ಸಂತ್ರಸ್ತೆಯ ಮಗಳನ್ನು ಮದುವೆಯಾಗಿ ಒಂದು ವರ್ಷವಾಗಿದೆ. ಜುಲೈ 31ರಂದು ಆರೋಪಿ ಭಾಸ್ಕರ್ ತನ್ನ ಅತ್ತೆಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಅತ್ಯಾಚಾರ ಎಸಗಿದ ನಂತರ ಅತ್ತೆಯನ್ನು ಮನೆಯ ಬಳಿ ಡ್ರಾಪ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದೇ ವೇಳೆ ಈ ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಮಗಳಿಗೆ ವಿಚ್ಛೇದನ ಕೊಡುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿ ಬೆದರಿಕೆಗೆ ಜಗ್ಗದ ಅತ್ತೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಭಾಸ್ಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

  • ಅತ್ತೆ ಮನೆ ಧ್ವಂಸ ಮಾಡಿ ಬೆಂಕಿ ಹಚ್ಚಿದ ಕಿರಾತಕ ಅಳಿಯ

    ಅತ್ತೆ ಮನೆ ಧ್ವಂಸ ಮಾಡಿ ಬೆಂಕಿ ಹಚ್ಚಿದ ಕಿರಾತಕ ಅಳಿಯ

    – 60 ಸಾವಿರ, 30 ಗ್ರಾಂ ಚಿನ್ನದೊಂದಿಗೆ ಪರಾರಿ

    ದಾವಣಗೆರೆ: ಅತ್ತೆಯ ಮನೆಯನ್ನು ಧ್ವಂಸ ಮಾಡಿ ಬಳಿಕ ಅಳಿಯನೇ ಬೆಂಕಿ ಹಚ್ಚಿದ ಘಟನೆಯೊಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಮಾರುತಿ ಸರ್ಕಲ್ ಬಳಿ ನಡೆದಿದೆ.

    ಇಸ್ಮಾಯಿಲ್ ಅತ್ತೆ ಮನೆ ಧ್ವಂಸ ಮಾಡಿದ ಅಳಿಯ. ಇಸ್ಮಾಯಿಲ್ ಕಿರುಕುಳಕ್ಕೆ ಬೇಸತ್ತು ಪತ್ನಿ ಮುಬೀಯಾ ತವರಿಗೆ ಬಂದಿದ್ದರು. ಇದರಿಂದ ರೊಚ್ಚಿಗೆದ್ದ ಇಸ್ಮಾಯಿಲ್ ತಡರಾತ್ರಿ ಮನೆಯನ್ನು ದ್ವಂಸ ಮಾಡಿದ್ದಾರೆ. ಬಳಿಕ ಬೆಂಕಿ ಹಚ್ಚಿದ್ದಾನೆ. ಅಲ್ಲದೆ ಮನೆಯಲ್ಲಿದ್ದ 60 ಸಾವಿರ ರೂಪಾಯಿ ನಗದು ಹಾಗೂ 30 ಗ್ರಾಂ ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದಾನೆ.

    ಇಸ್ಮಾಯಿಲ್ ಬೆದರಿಕೆಗೆ ಹೆದರಿ ಇಸ್ಮಾಯಿಲ್ ಪತ್ನಿ ಮುಬೀನಾ ಹಾಗೂ ಅತ್ತೆ ರಜಿಯಾಬಿ ಕಳೆದ ಆರು ತಿಂಗಳಿಂದ ಸಂಬಂಧಿಕರ ಮನೆಯಲ್ಲಿ ಮಲಗುತ್ತಿದ್ದರು. ಸದ್ಯ ಪ್ರಕರಣ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಇಸ್ಮಾಯಿಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.