Tag: mother in law

  • ನಾನು ಬದುಕುಳಿಯಲು ಕೊಲೆ ಮಾಡಿದೆ – ಮಲಗಿದ್ದ ಪತ್ನಿ, ಅತ್ತೆಯ ಕತ್ತು ಕೊಯ್ದ

    ನಾನು ಬದುಕುಳಿಯಲು ಕೊಲೆ ಮಾಡಿದೆ – ಮಲಗಿದ್ದ ಪತ್ನಿ, ಅತ್ತೆಯ ಕತ್ತು ಕೊಯ್ದ

    – ಕೊಲೆಯ ನಂತ್ರ ಮಕ್ಕಳೊಂದಿಗೆ ಪೊಲೀಸ್ ಠಾಣೆಗೆ ಹೋದ

    ಜೈಪುರ: ವ್ಯಕ್ತಿಯೊಬ್ಬ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಅಲ್ಲದೇ ಹೆಂಡತಿಯ ವಿವಾಹೇತರ ಸಂಬಂಧಕ್ಕೆ ಆಕೆಯ ತಾಯಿ ಕೂಡ ಸಪೋರ್ಟ್ ಮಾಡಿದ್ದಾಳೆ ಎಂದು ಅತ್ತೆಯನ್ನೂ ಕೊಲೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಮಂಜು ಸೈನಿ ಮತ್ತು ಈಕೆಯ ತಾಯಿ ಗೌರ ದೇವಿ ಕೊಲೆಯಾವದರು. ಆರೋಪಿಯನ್ನು ರಾಮ್ ಕಿಶನ್ ಸೈನಿ ಎಂದು ಗುರುತಿಸಲಾಗಿದೆ. ಆರೋಪಿ ಕೊಲೆ ಮಾಡಿದ ನಂತರ ತನ್ನ ಮಕ್ಕಳೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಆರೋಪಿ ಮಂಜು ಸೈನಿ ಜೊತೆ ಅನೇಕ ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಸೈನಿ ಮತ್ತು ಆತನ ಕುಟುಂಬವು ಚಾಂಡಲೈ ರಸ್ತೆಯ ಶಿವಂ ಕಾಲೋನಿಯಲ್ಲಿರುವ ಅತ್ತೆ ಮನೆಯಲ್ಲಿ ವಾಸಿಸುತ್ತಿದ್ದರು. ಸೋಮವಾರ ನಸುಕಿನ ಜಾವ ಸುಮಾರು 1 ಗಂಟೆಗೆ ಮಲಗಿದ್ದ ಪತ್ನಿ ಮಂಜು ಅತ್ತೆ ಗೌರ ದೇವಿಯ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ. ಈ ವೇಳೆ ಆರೋಪಿಯ ಮಕ್ಕಳು ಮಲಗಿದ್ದರು ಎಂದು ತಿಳಿದುಬಂದಿದೆ.

    ಕೊಲೆ ಮಾಡಿದ ನಂತರ ಆರೋಪಿ ಸೈನಿ ತನ್ನ ಮಕ್ಕಳೊಂದಿಗೆ ಚಕ್ಸು ಪೊಲೀಸ್ ಠಾಣೆಗೆ ಹೋಗಿ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ತಕ್ಷಣ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಆರೋಪಿ ತನ್ನ ಮಕ್ಕಳ ಮುಂದೆ ತಾನು ಮಾಡಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

    ಸದ್ಯಕ್ಕೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಹೇಳಿದ ನಂತರ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದ್ದು, ಮಲಗಿದ್ದ ಸ್ಥಳದಲ್ಲಿಯೇ ಮಂಜು ಮತ್ತು ಗೌರ ದೇವಿ ಶವ ಪತ್ತೆಯಾಗಿದೆ. ನಂತರ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೇ ವಿಧಿವಿಜ್ಞಾನ ತಂಡ ಮತ್ತು ಶ್ವಾನ ದಳದ ತಂಡವೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿವೆ.

    ನನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಳು, ಅದಕ್ಕೆ ನನ್ನ ಅತ್ತೆ ಕೂಡ ಬೆಂಬಲ ನೀಡುತ್ತಿದ್ದಳು. ಇಬ್ಬರು ಮಹಿಳೆಯರು ನನ್ನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದರು. ಹೀಗಾಗಿ ನಾನು ಬದುಕುಳಿಯಲು ಅವರನ್ನು ಕೊಲೆ ಮಾಡಿದೆ ಎಂದು ಆರೋಪಿ ಪೊಲೀಸರ ಬಳಿ ಹೇಳಿದ್ದಾನೆ. ಮಕ್ಕಳಿಗೂ ಈ ಕೊಲೆಗೂ ಸಂಬಂಧ ಇಲ್ಲ. ಅಲ್ಲದೇ ತಾನೇ ಕೊಲೆ ಮಾಡಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಮದುವೆಯಾಗಿದ್ದರು ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನ ಪಟ್ಟು ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

  • ಬೆಂಗ್ಳೂರಿನಲ್ಲಿ ಪತ್ನಿಯ ಕೊಂದು, ಅತ್ತೆಯನ್ನು ಕೊಲ್ಲಲು ಕೋಲ್ಕತ್ತಾಗೆ ಹೋದ

    ಬೆಂಗ್ಳೂರಿನಲ್ಲಿ ಪತ್ನಿಯ ಕೊಂದು, ಅತ್ತೆಯನ್ನು ಕೊಲ್ಲಲು ಕೋಲ್ಕತ್ತಾಗೆ ಹೋದ

    – ಅತ್ತೆಗೆ ಗುಂಡಿಕ್ಕಿ, ತಾನು ಗುಂಡಿಕ್ಕಿಕೊಂಡು ಪ್ರಾಣ ಬಿಟ್ಟ

    ಕೋಲ್ಕತ್ತಾ: ಬೆಂಗಳೂರಿನಲ್ಲಿ ಪತ್ನಿಯನ್ನು ಕೊಂದು ನಂತರ ಕೋಲ್ಕತ್ತಾಗೆ ಹೋದ ಟೆಕ್ಕಿ ಅಲ್ಲಿ ಅತ್ತೆಗೆ ಗುಂಡಿಕ್ಕಿ ಕೊಂದು ನಂತರ ತಾನೂ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾನೆ.

    ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಅಮಿತ್ ಅಗರ್ವಾಲ್ (42) ತನ್ನ ಪತ್ನಿ ಶಿಲ್ಪಿ ಧಂಧಾನಿಯಾ ಅವರನ್ನು ಬೆಂಗಳೂರಿನ ವೈಟ್‍ಫೀಲ್ಡ್ ನ ನಿವಾಸದಲ್ಲಿ ಕೊಲೆ ಮಾಡಿದ್ದಾನೆ. ನಂತರ ಕೋಲ್ಕತ್ತಾಗೆ ಹೋಗಿ ಅತ್ತೆ ಲಲಿತ ಧಂಧಾನಿಯಾ ಅವರನ್ನು ಶೂಟ್ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಪೊಲೀಸರ ಮಾಹಿತಿ ಪ್ರಕಾರ, ಅಮಿತ್ ಮತ್ತು ಶಿಲ್ಪಿ ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ವೈವಾಹಿಕ ಜೀವನದಲ್ಲಿ ಜಗಳವಾಗಿ ವಿಚ್ಛೇದನ ಪಡೆಯುವ ಮಟ್ಟಕ್ಕೆ ಬಂದು ನಿಂತಿದ್ದರು. ಹೀಗಾಗಿ ಕೋಪಗೊಂಡ ಅಮಿತ್ ಮೊದಲು ಶಿಲ್ಪಿಯನ್ನು ಕೊಂದಿದ್ದಾನೆ. ನಂತರ ಅದೇ ದಿನ ಕೋಲ್ಕತ್ತಾಗೆ ಹೋಗಿ ಅತ್ತೆಯನ್ನು ಶೂಟ್ ಮಾಡಿದ್ದಾನೆ. ಈ ವೇಳೆ ಮನೆಯಲ್ಲೇ ಇದ್ದ ಮಾವ ಹೊರೆಗೆ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

    ಪತ್ನಿಯನ್ನು ಸೋಮವಾರ ಬೆಳಗ್ಗೆ ಕೊಲೆ ಮಾಡಿದ ಅಗರ್ವಾಲ್, ಸಂಜೆ 5.30ರ ಸುಮಾರಿಗೆ ಕೋಲ್ಕತ್ತಾದ ಫೂಲ್‍ಬಾಗನ್ ಪ್ರದೇಶದ ತಮ್ಮ ಅತ್ತೆ-ಮಾವನ ಫ್ಲ್ಯಾಟ್‍ಗೆ ಬಂದಿದ್ದಾನೆ. ಈ ವೇಳೆ ಅತ್ತೆ-ಮಾವನ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕೆ ತಿರುಗಿ ಅಮಿತ್ ಗನ್ ತೆಗೆದು ಅತ್ತೆ ಲಲಿತಾ ಅವರಿಗೆ ಶೂಟ್ ಮಾಡಿದ್ದಾನೆ. ಈ ವೇಳೆ ಮನೆಯಿಂದ ಓಡಿ ಹೋದ ಮಾವ ಹೊರಗಿನಿಂದ ಲಾಕ್ ಮಾಡಿಕೊಂಡು ಅಕ್ಕಪಕ್ಕದ ಮನೆಯವರನ್ನು ಕರೆದಿದ್ದಾರೆ. ಆಗ ತಾನೂ ಶೂಟ್ ಮಾಡಿಕೊಂಡು ಅಮಿತ್ ಪ್ರಾಣ ಬಿಟ್ಟಿದಾನೆ.

    ಸ್ಥಳೀಯ ಮಾಹಿತಿ ಮೇರಗೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿದಾಗ, ರೂಮಿನೊಳಗೆ ರಕ್ತದ ಮಡುವಿನಲ್ಲಿ ಅತ್ತೆ ಮತ್ತು ಅಳಿಯ ಸತ್ತು ಬಿದ್ದಿರುವುದು ಕಂಡು ಬಂದಿದೆ. ಅಮಿತ್ ಬಳಿ ಡೆತ್‍ನೋಟ್ ಕೂಡ ಸಿಕ್ಕಿದ್ದು, ಅದರಲ್ಲಿ ಬೆಂಗಳೂರಿನ ಮನೆಯಲ್ಲಿ ತನ್ನ ಹೆಂಡತಿಯನ್ನು ಕೊಂದಿರುವುದಾಗಿ ಬರೆದಿದ್ದಾನೆ. ತಕ್ಷಣ ಕೋಲ್ಕತ್ತಾ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಹೋದ ಬೆಂಗಳೂರು ಪೊಲೀಸರು ಪತ್ನಿಯನ್ನು ಕೊಂದಿರುವುದನ್ನು ದೃಢಪಡಿಸಿದ್ದಾರೆ.

    ಅಮಿತ್ ಮತ್ತು ಶಿಲ್ಪಿ ದಂಪತಿಗೆ 10 ವರ್ಷದ ಒಬ್ಬ ಮಗನೂ ಇದ್ದು, ಅವನ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ. ಆದರೆ ಅವನು ಸುರಕ್ಷಿತವಾಗಿ ಇದ್ದಾನೆ ಎಂದು ಮಾತ್ರ ಹೇಳಿದ್ದಾರೆ. ಈಗ ಪ್ರಾಥಮಿಕ ತನಿಖೆ ಮುಗಿದಿದ್ದು, ಘಟನೆ ಕಾರಣವೇನು ಎಂಬುದನ್ನು ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  • ನನಗಿಂತ ಅತ್ತೆ, ಮಾವನ್ನೇ ಹೆಚ್ಚು ಇಷ್ಟಡುತ್ತಾನೆ ಎಂದು ಮಗನನ್ನೇ ಕೊಂದ್ಳು

    ನನಗಿಂತ ಅತ್ತೆ, ಮಾವನ್ನೇ ಹೆಚ್ಚು ಇಷ್ಟಡುತ್ತಾನೆ ಎಂದು ಮಗನನ್ನೇ ಕೊಂದ್ಳು

    – 6 ವರ್ಷದ ಮಗನಿಗೆ ಇರಿದು ಮನೆಯಿಂದ ಕೆಳಗೆ ಹಾರಿದ ತಾಯಿ

    ಚಂಡೀಗಢ: ನನಗಿಂತ ನಮ್ಮ ಅತ್ತೆ-ಮಾವನನ್ನೇ ಜಾಸ್ತಿ ಇಷ್ಟ ಪಡುತ್ತಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ತಾಯಿಯೊಬ್ಬಳು ತನ್ನ ಮಗನನ್ನೇ ಇರಿದು ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಜಲಂಧರ್ ನಗರದಲ್ಲಿ ನಡೆದಿದೆ.

    ಮಗನನ್ನೇ ಕೊಂದ ತಾಯಿಯನ್ನು 30 ವರ್ಷದ ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ. ಈಕೆ ತನ್ನ ಆರು ವರ್ಷದ ಮಗು ಅರ್ಷ್‍ಪ್ರೀತ್‍ನನ್ನು ಅಡುಗೆ ಮನೆಯ ಚಾಕುವಿನಿಂದ ಎರಡು ಬಾರಿ ಇರಿದು ಕೊಲೆ ಮಾಡಿದ್ದಾಳೆ. ನಂತರ ಮನೆಯ ಮೇಲಿಂದ ಹಾರಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ಕೌರ್ ಪತಿ ಇಟಲಿಯಲ್ಲಿ ಕೆಲಸ ಮಾಡುತ್ತಿದ್ದು, ಆಕೆ ತನ್ನ ಅತ್ತೆ-ಮಾವ ಮತ್ತು ಮಗುವಿನೊಂದಿಗೆ ಜಲಂಧರ್ ನಗರದಲ್ಲಿ ವಾಸವಾಗಿದ್ದಳು. ಈ ವೇಳೆ ಅತ್ತೆ-ಮಾವನನ್ನು ಕಂಡರೆ ಕೌರ್ ಗೆ ಆಗುತ್ತಿರಲ್ಲಿ. ಆದರೆ ತಾತ-ಅಜ್ಜಿಯನ್ನು ಬಹಳ ಇಷ್ಟ ಪಡುತ್ತಿದ್ದ ಅರ್ಷ್‍ಪ್ರೀತ್ ಬಹಳ ಸಮಯ ತಾತ-ಅಜ್ಜಿಯ ಜೊತೆಯಲ್ಲೇ ಇರುತ್ತಿದ್ದ. ಇದನ್ನು ಕಂಡ ಕೌರ್ ನನ್ನ ಮಗನನ್ನು ಇವರು ನನ್ನಿಂದ ದೂರು ಮಾಡುತ್ತಿದ್ದಾರೆ ಎಂದು ಜಗಳವಾಡುತ್ತಿದ್ದಳು.

    ಕಳೆದ ಸೋಮವಾರ ಮನೆಯಲ್ಲಿ ಕುಳಿತು ಎಲ್ಲರೂ ಊಟ ಮಾಡುತ್ತಿದ್ದರು. ಈ ವೇಳೆ ಅರ್ಷ್‍ಪ್ರೀತ್ ಊಟ ಮುಗಿದ ನಂತರ ತಾತ-ಅಜ್ಜಿಯ ಬಳಿ ಹೋಗಿದ್ದಾನೆ. ಇದರಿಂದ ಕೋಪಗೊಂಡ ಕೌರ್ ಅವನನ್ನು ಎಳೆದುಕೊಂಡು ಆಕೆಯ ರೂಮಿಗೆ ಹೋಗಿದ್ದಾಳೆ. ಅಲ್ಲಿ ಅಡುಗೆ ಮನೆಯ ಚಾಕುವಿನಿಂದ ಅರ್ಷ್‍ಪ್ರೀತ್‍ಗೆ ಎರಡು ಬಾರಿ ಚುಚ್ಚಿದ್ದಾರೆ. ಈ ವೇಳೆ ಮನೆಯಲ್ಲಿ ಇದ್ದ ತಾತ-ಅಜ್ಜಿ ರೂಮಿಗೆ ಹೋಗಿದ್ದಾರೆ.

    ರೂಮಿಗೆ ಅತ್ತೆ-ಮಾವ ಬಂದ ತಕ್ಷಣ ಕೌರ್ ಮನೆಯ ಕಿಟಿಕಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾಳೆ. ಆದರೆ ಅವಳು ಪಾರಾಗಿದ್ದಾಳೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದಾಳೆ. ಆದರೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅರ್ಷ್‍ಪ್ರೀತ್ ಮಾತ್ರ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದ್ದಾನೆ. ಈಗ ಕೌರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

  • ಬಿಸಿ ಬಿಸಿ ಚಪಾತಿ ನೀಡದ್ದಕ್ಕೆ ಅತ್ತೆಯನ್ನೇ ಕೊಂದ

    ಬಿಸಿ ಬಿಸಿ ಚಪಾತಿ ನೀಡದ್ದಕ್ಕೆ ಅತ್ತೆಯನ್ನೇ ಕೊಂದ

    ಭೋಪಾಲ್: ವ್ಯಕ್ತಿಯೊಬ್ಬ ಬಿಸಿ ಬಿಸಿ ಚಪಾತಿ ನೀಡಲು ನಿರಾಕರಿಸಿದ್ದಕ್ಕೆ ಅತ್ತೆಯನ್ನೇ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.

    ಮಧ್ಯಪ್ರದೇಶದ ಬಿಲ್ಲೋರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗುಜರ್ ಬಾಯಿ (55) ಮೃತ ಮಹಿಳೆ. ಆರೋಪಿಯನ್ನು ಸುರೇಶ್ (35) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಅತ್ತೆ-ಮಾವನ ಮನೆಯಲ್ಲಿ ವಾಸಿಸುತ್ತಿದ್ದನು ಎಂದು ಪೊಲೀಸ್ ಅಧಿಕಾರಿ ಜಗದೀಶ್ ಪಾಟೀದಾರ್ ತಿಳಿಸಿದ್ದಾರೆ.

    ಆರೋಪಿ ಸುರೇಶ್ ಮಂಗಳವಾರ ಮಧ್ಯರಾತ್ರಿ ಮನೆಗೆ ಆಗಮಿಸಿದ್ದನು. ಆಗ ಅತ್ತೆ ಗುಜರ್ ಬಾಯಿ (55) ಆತನಿಗೆ ಊಟ ಬಡಿಸಿದ್ದರು. ಈ ವೇಳೆ ಆರೋಪಿ ಬಿಸಿ ಚಪಾತಿ ನೀಡುವಂತೆ ಕೇಳಿದ್ದಾನೆ. ಆದರೆ ಅತ್ತೆ ಬಿಸಿ ಚಪಾತಿ ನೀಡಲು ನಿರಾಕರಿಸಿದ್ದಾರೆ. ಆಗ ಇಬ್ಬರ ಮಧ್ಯೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಆರೋಪಿ ಸುರೇಶ್ ದೊಣ್ಣೆಯಿಂದ ಹೊಡೆದು ಅತ್ತೆಯನ್ನು ಕೊಲೆ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಗುಜರ್ ಬಾಯಿ ಕಿರುಚಾಟ ಕೇಳಿ ಉಳಿದ ಕುಟುಂಬದ ಸದಸ್ಯರು ಓಡಿ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಬಾಯಿ ಮೃತಪಟ್ಟಿದ್ದು, ಆರೋಪಿ ಕೊಲೆ ಮಾಡಿ ಪರಾರಿಯಾಗಿದ್ದನು. ನಂತರ ಈ ಕುರಿತು ಮಾವ ಆರೋಪಿ ಸುರೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.

    ಪೊಲೀಸರು ಮಾವ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುರೇಶ್‍ನನ್ನು ಬಂಧಿಸಿದ್ದಾರೆ.

  • ದಿನಸಿ ಸಾಮಗ್ರಿ ತರುವುದಕ್ಕೆ ಜಗಳ – ಅತ್ತೆ, ಪತಿಯನ್ನೇ ಹಿಗ್ಗಾಮುಗ್ಗ ಥಳಿಸಿದ ಮಹಿಳಾ ಪೇದೆ

    ದಿನಸಿ ಸಾಮಗ್ರಿ ತರುವುದಕ್ಕೆ ಜಗಳ – ಅತ್ತೆ, ಪತಿಯನ್ನೇ ಹಿಗ್ಗಾಮುಗ್ಗ ಥಳಿಸಿದ ಮಹಿಳಾ ಪೇದೆ

    ಹುಬ್ಬಳ್ಳಿ: ದೇಶಾದ್ಯಂತ ಕೊರೊನಾ ವೈರಸ್ ಭೀತಿಯಿಂದ ಲಾಕ್‍ಡೌನ್ ಘೋಷಣೆಯಾಗಿದ್ದು, ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಹುಬ್ಬಳ್ಳಿಯಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ತನ್ನ ಪತಿ ಮನೆಯವರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

    ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಸಿಬ್ಬಂದಿ ಕಸ್ತೂರಿ ಛಲವಾದಿ ಕ್ಷುಲ್ಲಕ ಕಾರಣಕ್ಕೆ ಪತಿಗೆ ಮಾನಸಿಕ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅತ್ತೆಗೂ ಕೂಡ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತಿ ಬಸವರಾಜ್ ಗೋಕಾವಿ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಮನೆಗೆ ಕಿರಾಣಿ ಸಾಮಗ್ರಿಗಳನ್ನು ತರುವ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಜಗಳ ತಾರಕಕ್ಕೇರಿದ್ದು, ಪೊಲೀಸ್ ಸಿಬ್ಬಂದಿಯೇ ಪತಿ ಹಾಗೂ ಅತ್ತೆ ಮೇಲೆ ಹಲ್ಲೆ ಮಾಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲದೇ ಪತಿ, ಪತ್ನಿ ನಡುವೆ ಮಗುವನ್ನು ಪಾಲನೆ ಪೋಷಣೆ ಮಾಡುವ ಹಾಗೂ ಇನ್ನಿತರ ಕೌಟುಂಬಿಕ ವಿಚಾರಕ್ಕೆ ಜಗಳವಾಗುತ್ತಿತ್ತು. ಪತಿ ಮೇಲೆ ಹಲ್ಲೆ ಮಾಡಿ, ಪತಿ ಹಾಗೂ ಅತ್ತೆಗೆ ಅಶ್ಲೀಲ ಪದಗಳನ್ನು ಬಳಸುವ ಮೂಲಕ ಮಹಿಳಾ ಪೇದೆ ತೊಂದರೆ ನೀಡುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಹಾಗೆಯೇ ಪೊಲೀಸ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಸವರಾಜ್ ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ. ಪತ್ನಿ ಕಿರುಕುಳ ತಾಳಲಾರದೆ ಎಪಿಎಂಸಿ ನವನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರು ಕೂಡ ಪೊಲೀಸ್ ಅಧಿಕಾರಿಗಳು ದೂರನ್ನು ಸ್ವೀಕರಿಸಿಲ್ಲ ಎಂದು ಬಸವರಾಜ್ ಆರೋಪಿಸಿದ್ದಾರೆ.

    ಕೊರೊನಾ ವೈರಸ್ ಭೀತಿಯಲ್ಲಿಯೂ ಕೂಡ ಪೊಲೀಸ್ ಸಿಬ್ಬಂದಿ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿಸುತ್ತಿದ್ದಾರೆ. ಆದರೇ ಈ ಪೊಲೀಸ್ ಸಿಬ್ಬಂದಿ ವರ್ತನೆಯಿಂದ ಕುಟುಂಬಸ್ಥರು ಮಾಧ್ಯಮದ ಮುಂದೆ ಬಂದು ಕಣ್ಣೀರು ಹಾಕುವಂತಾಗಿದೆ.

  • ಮದ್ವೆಯಾದ 2 ದಿನಕ್ಕೆ ಬಟ್ಟೆ ಬಿಚ್ಚುವಂತೆ ಹೇಳಿದ ಅತ್ತೆ – ರೂಮಿನ ಬಾಗಿಲು ಮುಚ್ಚಿ ನಾದಿನಿ ಮೇಲೆ ರೇಪ್

    ಮದ್ವೆಯಾದ 2 ದಿನಕ್ಕೆ ಬಟ್ಟೆ ಬಿಚ್ಚುವಂತೆ ಹೇಳಿದ ಅತ್ತೆ – ರೂಮಿನ ಬಾಗಿಲು ಮುಚ್ಚಿ ನಾದಿನಿ ಮೇಲೆ ರೇಪ್

    – ಅತ್ತೆ ಮುಂದೆ ನಗ್ನವಾಗಿ ನಿಂತ ಸೊಸೆ
    – ವರ್ಜಿನ್ನಾ, ಇಲ್ಲವಾ ನಿರೂಪಿಸು ಎಂದ ಪತಿ

    ಭೋಪಾಲ್: ಅತ್ತೆಯೊಬ್ಬಳು ಹನಿಮೂನ್‍ಗೆ ಹೋಗುವ ಮುನ್ನ ತನ್ನ ಸೊಸೆಯ ಕನ್ಯತ್ವ ಪರೀಕ್ಷೆ ಮಾಡಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

    ಇದೀಗ ಪತ್ನಿ ಈ ಕುರಿತು ಪೊಲೀಸರು ದೂರು ನೀಡಿದ್ದು, ಪೊಲೀಸರು ಅತ್ತೆ, ಪತಿ ಮತ್ತು ಪತಿಯ ಸಹೋದರನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಏನಿದು ಪ್ರಕರಣ?
    ಮಧ್ಯ ಪ್ರದೇಶದ ಇಂದೋರ್ ನಿವಾಸಿ ಯುವತಿಯ ವಿವಾಹ ಸ್ಥಳೀಯ ಯುವಕನೊಂದಿಗೆ ನಡೆದಿತ್ತು. ವಿವಾಹದ ನಂತರ ತನ್ನ ಪತಿಯೊಂದಿಗೆ ಹನಿಮೂನ್‍ಗೆ ಹೋಗಲು ಯುವತಿ ಪ್ಲಾನ್ ಮಾಡಿಕೊಂಡಿದ್ದಳು. ಆದರೆ ಅತ್ತೆ ಮದುವೆಯಾದ 2 ದಿನಗಳ ಬಳಿಕ ಸೊಸೆಯನ್ನು ಬಾತ್‍ರೂಮಿಗೆ ಬರುವಂತೆ ಹೇಳಿ ಅಲ್ಲಿ ಬಟ್ಟೆಯನ್ನು ಬಿಚ್ಚುವಂತೆ ಹೇಳಿದ್ದಳು.

    ಇದರಿಂದ ಶಾಕ್‍ಗೆ ಒಳಗಾದ ಆಕೆ ತನ್ನ ಪತಿಗೆ ವಿಚಾರ ತಿಳಿಸಿದ್ದಳು. ಆದರೆ ಪತ್ನಿಯ ಮಾತಿಗೆ ಮರು ಉತ್ತರ ನೀಡಿದ ಆತ ಅಮ್ಮ ಹೇಳಿದಂತೆ ಮಾಡು ಎಂದು ಸೂಚಿಸಿದ್ದ. ಅಲ್ಲದೇ ನೀನು ವರ್ಜಿನ್ನಾ ಇಲ್ಲವಾ ಎಂದು ನಿರೂಪಿಸು ಎಂದಿದ್ದ. ಪತಿಯ ಮಾತಿನಿಂದ ಬೇಸರಗೊಂಡ ಆಕೆ ಇಷ್ಟವಿಲ್ಲದಿದ್ದರೂ ಅತ್ತೆಯ ಎದುರು ಬೆತ್ತಲಾಗಿ ನಿಂತುಕೊಂಡಿದ್ದಾಳೆ.

    ಆ ಬಳಿಕ ಪತಿ-ಪತ್ನಿ ಇಬ್ಬರೂ ಹನಿಮೂನ್‍ಗೆ ಹೋಗಿದ್ದರು. ಆದರೆ ನಾಲ್ಕು ತಿಂಗಳ ಕಳೆದ ಬಳಿಕ ಪತಿಯ ಸಹೋದರ ಆಕೆಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದ. ಈ ಸಂಗತಿ ತಿಳಿದರೂ ಅತ್ತೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅಲ್ಲದೇ ತನ್ನ ಹಿರಿಯ ಮಗನ ರೂಮ್ ಸ್ವಚ್ಛ ಮಾಡುವಂತೆ ಹೇಳಿ ಆತನ ರೂಮಿಗೆ ಸೊಸೆಯನ್ನು ಕಳುಹಿಸಿದ್ದಳು. ಸೊಸೆ ರೂಮಿಗೆ ಹೋಗುತ್ತಿದ್ದಂತೆ ಪತಿಯ ಸಹೋದರ ಬಾಗಿಲನ್ನು ಮುಚ್ಚಿ ಅತ್ಯಾಚಾರ ಎಸಗಿದ್ದ.

    ಸಂತ್ರಸ್ತೆಯ ನಡೆದ ಘಟನೆಯ ಬಗ್ಗೆ ಅತ್ತೆಯ ಬಳಿ ಹೇಳಿದ್ದಳು. ಆಗ ಅತ್ತೆ ಆಕೆಯನ್ನೇ ಬೈದಿದ್ದಳು. ಕೊನೆಗೆ ಕುಟುಂಬಸ್ಥರ ಕಿರುಕುಳ ಸಹಿಸಲಾಗದೆ ಆಕೆ ತವರಿಗೆ ತೆರಳಿದ್ದಳು. ಆದರೆ ಪೋಷಕರಿಗೆ ನಡೆದ ಘಟನೆಯ ಬಗ್ಗೆ ಹೇಳಲು ಮುಜುಗರ ಪಟ್ಟು ಸುಮ್ಮನಾಗಿದ್ದಳು.

    ಕೆಲ ದಿನಗಳ ಬಳಿಕ ಪೋಷಕರು ಅತ್ತೆ ಮನೆಗೆ ಹೋಗುವಂತೆ ಹೇಳಿದ ಸಂದರ್ಭದಲ್ಲಿ ಅನಿವಾರ್ಯವಾಗಿ ಆಕೆ ನಡೆದ ಘಟನೆಗಳನ್ನು ಪೋಷಕರಿಗೆ ವಿವರಿಸಿದ್ದಳು. ಸದ್ಯ ಪೋಷಕರು ಮಗಳನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಈ ಕುರಿತು ಪತಿ,  ಅತ್ತೆ  ಮತ್ತು ಪತಿಯ ಸಹೋದರ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಅತ್ತೆಯನ್ನೇ ಕಿಡ್ನಾಪ್ ಮಾಡಿ ತಲೆ ಬೋಳಿಸಿದ ಅಳಿಯ

    ಅತ್ತೆಯನ್ನೇ ಕಿಡ್ನಾಪ್ ಮಾಡಿ ತಲೆ ಬೋಳಿಸಿದ ಅಳಿಯ

    -ತಮಿಳುನಾಡಿನಿಂದ ತುಳುನಾಡಿಗೆ ಬಂದ ಸಂತ್ರಸ್ತೆ

    ಮಂಗಳೂರು: ತನ್ನ ಪತ್ನಿಯ ತಾಯಿಯನ್ನು ಕಿಡ್ನಾಪ್ ಮಾಡಿ ಆಕೆಯ ತಲೆಯನ್ನು ಬೋಳಿಸಿ ಚಿತ್ರಹಿಂಸೆ ನೀಡಿದ ಅಳಿಯನ ವಿರುದ್ಧ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮೂಲತಃ ತಮಿಳುನಾಡಿನವರಾದ ಕಲಾವತಿ ಎಂಬವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ತಮಿಳುನಾಡು ಮೂಲದ ಚಂದ್ರಶೇಖರ್ ಎಂಬವರ ಜೊತೆ ಕಲಾವತಿ ತನ್ನ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ಇಬ್ಬರ ನಡುವೆ ಮನಸ್ತಾಪ ಬಂದು ಇದು ಕೋರ್ಟ್ ಮೆಟ್ಟಿಲೇರಿತ್ತು. ಇದರಿಂದ ಆಗಾಗ ಕೋರ್ಟ್ ಕಚೇರಿ ಅಲೆಯುವ ಪರಿಸ್ಥಿತಿ ಈ ಕುಟುಂಬಕ್ಕೆ ಎದುರಾಗಿತ್ತು. ಈ ವ್ಯಾಜ್ಯದ ಹಿನ್ನೆಲೆಯಲ್ಲಿ ಕಳೆದ 15 ದಿನಗಳ ಹಿಂದೆ ಕಲಾವತಿ ಅವರನ್ನು ಚಂದ್ರಶೇಖರ್ ಗೂಂಡಾಗಳೊಂದಿಗೆ ಕಿಡ್ನಾಪ್ ಮಾಡಿಸಿದ್ದನು ಎನ್ನಲಾಗಿದೆ.

    ಕಿಡ್ನಾಪ್ ಮಾಡಿದ 15 ಜನರ ತಂಡ ಈಕೆಯನ್ನು ತಮಿಳುನಾಡಿನ ತಿರುಪ್ಪುರದಲ್ಲಿ ಕೂಡಿ ಹಾಕಿ, ಈಕೆಯ ತಲೆಯನ್ನು ಬೋಳಿಸಿ ಚಿತ್ರಹಿಂಸೆ ನೀಡಿದ್ದಾರೆ. ನಂತರ ಕಲಾವತಿಯ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ನಿನ್ನನ್ನು ಊರಿಗೆ ಕಳುಹಿಸುತ್ತೇನೆ ಎಂದು ಪಾಲಕ್ಕಾಡ್ ರೈಲ್ವೆ ಸ್ಟೇಷನ್‍ಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ತಮಿಳುನಾಡಿನ ರೈಲು ಎಂದು ಸುಳ್ಳು ಹೇಳಿ ಮಂಗಳೂರಿನ ರೈಲನ್ನು ಹತ್ತಿಸಿದ್ದಾರೆ. ಫೆ. 22ರಂದು ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ. ನಂತರ ಮೂರು ದಿನ ರೈಲ್ವೆ ನಿಲ್ದಾಣದಲ್ಲೇ ಉಪವಾಸ ಇದ್ದುಕೊಂಡು ಕಾಲ ಕಳೆದು ಬಳಿಕ ಮಂಗಳೂರಿನಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಬಂದಿದ್ದಾರೆ.

    ರೈಲು ನಿಲ್ದಾಣದಿಂದ ನಡೆದುಕೊಂಡೇ ನ್ಯಾಯಾಲಯಕ್ಕೆ ಬಂದು ಅಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ ಎ.ಜಿ ಶಿಲ್ಪಾ ಅವರನ್ನು ಸಂಪರ್ಕಿಸಿ, ಕಮಲ ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಇನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರ ಬಗ್ಗೆ ವಿಚಾರಿಸಿದ್ದಾರೆ. ಕಲಾವತಿಗೆ ಉಚಿತ ಕಾನೂನು ಸಲಹೆಗಳನ್ನು ನೀಡಿದ್ದಾರೆ. ಬಳಿಕ ಒಬ್ಬ ವಕೀಲೆಯನ್ನು ನೇಮಿಸಿ, ಬಳಿಕ ವರ್ತಮಾನಗಳನ್ನು ಸ್ವೀಕರಿಸಿ ಎಂದು ಮಂಗಳೂರು ಮಹಿಳಾ ಪೊಲೀಸರಿಗೆ ತಿಳಿಸಿದ್ದಾರೆ.

    ಸದ್ಯ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವೃದ್ಧೆಯ ಬಳಿ ಅಳಿಯ ಚಂದ್ರಶೇಖರನ ವಿಳಾಸ ಕೂಡ ಸರಿಯಾಗಿ ಗೊತ್ತಿಲ್ಲ. ಫೋನ್ ನಂಬರ್ ಮರೆತುಹೋಗಿದೆ. ಯಾವ ಗುರುತಿನ ಚೀಟಿಗಳು ಕೂಡ ಇಲ್ಲಿ. ಹೀಗಾಗಿ ಪೊಲೀಸರು ಪಾಪಿ ಚಂದ್ರಶೇಖರ್ ನನ್ನು ಹಿಡಿದು ಈಕೆಗೆ ನ್ಯಾಯ ಕೊಡಿಸುವ ಅವಶ್ಯಕತೆಯಿದೆ.

  • ಅತ್ತೆ ಕೊಲೆ- ಅಕ್ರಮ ಸಂಬಂಧಕ್ಕೆ ಸೇತುವೆ ಆಗಿದ್ದು ರಾಂಗ್ ನಂಬರ್

    ಅತ್ತೆ ಕೊಲೆ- ಅಕ್ರಮ ಸಂಬಂಧಕ್ಕೆ ಸೇತುವೆ ಆಗಿದ್ದು ರಾಂಗ್ ನಂಬರ್

    -ತಪ್ಪಿ ಬಂದ ಕರೆಗೆ ರಾಂಗ್ ಕನೆಕ್ಷನ್ ಕೊಟ್ಟ
    -ಸೊಸೆಯ ಪಲ್ಲಂಗದಾಟ ನೋಡಿದ ಅತ್ತೆ

    ಬೆಂಗಳೂರು: ಬಾವನ ನಂಬರಿಗೆ ಕರೆ ಮಾಡುವುದಕ್ಕೆ ಹೋಗಿ ರಾಂಗ್ ನಂಬರಿಗೆ ಕರೆ ಮಾಡಿದ್ದೆ ಆರೋಪಿಗಳಿಬ್ಬರ ಅಕ್ರಮ ಸಂಬಂಧಕ್ಕೆ ರಹದಾರಿ ಮಾಡಿಕೊಟ್ಟಿತ್ತು.

    2018ರಲ್ಲಿ ಕೊಲೆ ಆರೋಪಿ ಸೌಂದರ್ಯ ತನ್ನ ಬಾವನಿಗೆ ಕರೆ ಮಾಡಿದ್ದಾಳೆ. ಆಕಸ್ಮಿಕವಾಗಿ ಅದು ಆರೋಪಿ ನವೀನ್ ಜಡೇಸ್ವಾಮಿಗೆ ಹೋಗಿದೆ. ವೃತ್ತಿಯಲ್ಲಿ ಲೈನ್‍ಮ್ಯಾನ್ ಆಗಿದ್ದ ಆರೋಪಿ ಜಡೇಸ್ವಾಮಿ ರಾಂಗ್ ಕಲೆಕ್ಷನ್ ಕೊಟ್ಟೆ ಬಿಟ್ಟಿದ್ದಾನೆ. ರಾಂಗ್ ಕಲೆಕ್ಷನ್ ಅಮರ ಪ್ರೇಮಿಗಳಿಬ್ಬರಿಗೆ ಜೈಲು ಸೇರುವಂತೆ ಮಾಡಿದೆ. ಸೌಂದರ್ಯ ಎರಡು ವರ್ಷಗಳಿಂದ ತನ್ನ ಸೌಂದರ್ಯವನ್ನು ಲೈನ್‍ಮ್ಯಾನ್ ಜಡೇಸ್ವಾಮಿಗೆ ದಾರೆ ಏರೆದಿದ್ದಾಳೆ. ಅದು ಮೊನ್ನೆ ಕೊಲೆ ಆಗುವ ತನಕ ಯಾರಿಗೂ ಗೊತ್ತಿರಲಿಲ್ಲ. ಇದನ್ನೂ ಓದಿ: ಪ್ರಿಯಕರನೊಂದಿಗೆ ಅತ್ತೆಯ ಕೈಗೆ ಸಿಕ್ಕಿಬಿದ್ದಳು- ಸೊಸೆಯಿಂದ ಅತ್ತೆಯ ಕೊಲೆ

    ಪತಿ ಹಾಗೂ ಅತ್ತೆ ರಾಜಮ್ಮಳಿಗೆ ಗೊತ್ತೆ ಆಗದಂತೆ ಇಬ್ಬರು ಕಣ್ಣಾಮುಚ್ಚಾಲೆ ಆಟ ಆಡಿದ್ದಾರೆ. ಕಳೆದ ವಾರ ಸೌಂದರ್ಯ ಹಾಗೂ ಪ್ರಿಯಕರ ಪಲ್ಲಂಗದಾಟದಲ್ಲಿ ತೊಡಗಿದ್ದಾಗ ಅತ್ತೆ ರಾಜಮ್ಮನ ಕೈಯಲ್ಲಿ ರೆಡ್ ಹ್ಯಾಂಡ್ ಹಾಗಿ ಸಿಕ್ಕಿ ಬಿದ್ದಿದ್ದಾರೆ. ಕಳೆದ ಒಂದೂವರೆ ಎರಡು ವರ್ಷದಿಂದ ಕಾಪಾಡಿಕೊಂಡ ಬಂದ ಅಕ್ರಮ ಸಂಬಂಧ ರಹಸ್ಯ ಬಯಲಾಗಿದ್ದು, ಇಬ್ಬರಲ್ಲೂ ಆತಂಕ ಹುಟ್ಟಿಸಿದೆ. ಸೌಂದರ್ಯ ಪತಿಗೆ ಇಬ್ಬರ ಲವ್ವಿಡವ್ವಿ ವಿಚಾರವನ್ನು ಹೇಳುತ್ತಾಳೆ ಎಂದು ಹೇಳಿದ್ದಕ್ಕೆ ಆರೋಪಿ ನವೀನ್ ಜಡೆಸ್ವಾಮಿ, ರಾಜಮ್ಮ ಎಲೆ ಅಡಿಕೆ ಜಜ್ಜುಲು ಬಳಸುತ್ತಿದ್ದ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ.

    ಪತಿ ಮನೆಗೆ ಬಂದಾಗ ಯಾರೋ ಕೊಲೆ ಮಾಡಿ ಹೋಗಿದ್ದಾರೆ ಎಂದು ಪತಿಗೆ ನಂಬಿಸಿದ್ದಾಳೆ. ಪತಿ ತನ್ನ ಪತ್ನಿ ಮೇಲೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದರಿಂದ ಆರೋಪಿ ಸೌಂದರ್ಯಳ ಮಾತು ನಂಬಿ ಘಟನೆ ಬಗ್ಗೆ ಬ್ಯಾಟರಾಯನಪುರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದಾಗ ಪೊಲೀಸರು ಕೂಡ ಚಿನ್ನಾಭರಣಕ್ಕಾಗಿ ಕಳ್ಳರು ಕೃತ್ಯ ಎಸಗಿರಬೇಕು ಎಂದುಕೊಂಡು ತಲೆ ಕೆಡಿಸಿಕೊಂಡಿರುತ್ತಾರೆ.

    ಪೊಲೀಸರು ಘಟನೆಯನ್ನು ಮೊದಲು ಆರೋಪಿ ಸೌಂದರ್ಯ ನೋಡಿದ್ದರಿಂದ ಘಟನೆಯ ಬಗ್ಗೆ ಮಾಹಿತಿ ಪಡೆಯಲು ಠಾಣೆಗೆ ಕರೆದಿದ್ದಾರೆ. ಈ ವೇಳೆ ಸೌಂದರ್ಯ ನಡುವಳಿಕೆ ಪೊಲೀಸರಿಗೆ ಇವಳ ಕೈವಾಡ ಇರಬಹುದೆಂದು ಶಂಕಿಸಿ ವಿಚಾರಣೆ ಚುರುಕುಗೊಳಿಸಿದಾಗ ನವೀನ್ ಜೊತೆ ಇದ್ದ ಅಕ್ರಮ ಸಂಬಂಧ ರಹಸ್ಯ ಬಿಚ್ಚಿಟ್ಟಿದ್ದಾಳೆ. ಅಕ್ರಮ ಸಂಬಂಧ ವಿಚಾರ ಅತ್ತೆ ರಾಜಮ್ಮ ಪತಿಗೆ ಹೇಳುತ್ತಾಳೆ ಎನ್ನುವ ಕಾರಣಕ್ಕೆ ಇಬ್ಬರು ಸೇರಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

  • ಪ್ರಿಯಕರನೊಂದಿಗೆ ಅತ್ತೆಯ ಕೈಗೆ ಸಿಕ್ಕಿಬಿದ್ದಳು- ಸೊಸೆಯಿಂದ ಅತ್ತೆಯ ಕೊಲೆ

    ಪ್ರಿಯಕರನೊಂದಿಗೆ ಅತ್ತೆಯ ಕೈಗೆ ಸಿಕ್ಕಿಬಿದ್ದಳು- ಸೊಸೆಯಿಂದ ಅತ್ತೆಯ ಕೊಲೆ

    -ಅತ್ತೆ, ಗಂಡ ಇಲ್ಲದಿದ್ದಾಗ ಇನಿಯನನ್ನ ಕರೆಸಿಕೊಂಡ್ಳು
    -ಮನೆಯಲ್ಲೇ ಗೆಳೆಯನೊಂದಿಗೆ ಸರಸ ಸಲ್ಲಾಪ

    ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ಸ್ವಂತ ಅತ್ತೆಯನ್ನೇ ಕೊಲೆ ಮಾಡಿದ್ದ ಸೊಸೆಯನ್ನು ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

    ಸೌಂದರ್ಯ ಅತ್ತೆಯನ್ನೇ ಕೊಲೆ ಮಾಡಿ ಹೈಡ್ರಾಮ ಆಡಿದ್ದ ಖತಾರ್ನಾಕ್ ಸೊಸೆ. ಬ್ಯಾಟರಾಯನಪುರದಲ್ಲಿ ಫೆಬ್ರವರಿ 19 ರಂದು ವೃದ್ಧೆ ರಾಜಮ್ಮ ಮನೆಯಲ್ಲಿದ್ದ ವೇಳೆ ಬರ್ಬರವಾಗಿ ಕೊಲೆಯಾಗಿದ್ದರು. ಈ ವೇಳೆ ಗಂಡನಿಗೆ ಕರೆ ಮಾಡಿದ ಸೊಸೆ ಸೌಂದರ್ಯ ಅತ್ತೆ ಒಬ್ಬಳೇ ಮನೆಯಲ್ಲಿದ್ದ ವೇಳೆ ಯಾರೋ ಅಪರಿಚಿತರು, ಚಿನ್ನಾಭರಣಕ್ಕಾಗಿ ಅತ್ತೆ ರಾಜಮ್ಮಳನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಳು.

    ವಿಷಯ ತಿಳಿದ ಸ್ಥಳಕ್ಕೆ ಬಂದ ಸಂಬಂಧಿಕರು ಹಾಗೂ ಪೊಲೀಸರ ಮುಂದೆ ಸೊಸೆ ಸೌಂದರ್ಯ ಕಣ್ಣೀರು ಹಾಕಿ ಹೈಡ್ರಾಮಾ ಮಾಡಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸೊಸೆಯ ನಡುವಳಿಕೆಯಿಂದ ಅನುಮಾನಗೊಂಡ ವಿಚಾರಣೆ ನಡೆಸಿದ ವೇಳೆ ಸ್ಫೋಟಕ ಸತ್ಯ ಹೊರಬಿದ್ದಿದೆ. ಸೊಸೆ ಸೌಂದರ್ಯ ಮದುವೆಯಾಗಿ ಗಂಡನಿದ್ದರು ಮತ್ತೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.

    ಫೆಬ್ರವರಿ 19 ರಂದು ಗಂಡ ಕೆಲಸಕ್ಕೆ ಹೋದ ವೇಳೆ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಸೊಸೆ ಸೌಂದರ್ಯ ಮನೆಯಲ್ಲೇ ಸರಸ ಸಲ್ಲಾಪದಲ್ಲಿ ತೊಡಗಿದ್ದಳು. ಈ ವೇಳೆ ಹೊರ ಹೋಗಿದ್ದ ಅತ್ತೆ ರಾಜಮ್ಮ ಸೊಸೆಯ ಕಳ್ಳಾಟವನ್ನು ಕಣ್ಣಾರೆ ನೋಡಿದ್ದರು. ಈ ವಿಷಯವನ್ನು ಗಂಡನಿಗೆ ಹೇಳುತ್ತಾಳೆ ಎಂದು ಭಯಬಿದ್ದು ಅತ್ತೆಯ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಚಿನ್ನಾಭರಣಕ್ಕಾಗಿ ಯಾರೋ ಕೊಲೆ ಮಾಡಿದ್ದಾರೆ ಎಂದು ಡ್ರಾಮಾ ಮಾಡಿದ್ದಳು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಟರಾಯನಪುರ ಪೊಲೀಸರು ಸೊಸೆ ಸೌಂದರ್ಯ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

  • ನಾಳೆ ಮದುವೆ ಆಗ್ಬೇಕಿದ್ದ ಬಾಮೈದನ ಮೇಲೆ ಮಚ್ಚು ಬೀಸಿದ ಬಾವ

    ನಾಳೆ ಮದುವೆ ಆಗ್ಬೇಕಿದ್ದ ಬಾಮೈದನ ಮೇಲೆ ಮಚ್ಚು ಬೀಸಿದ ಬಾವ

    – ಅತ್ತೆಯ ಎರಡೂ ಕೈಗಳಿಗೂ ಅಳಿಯನಿಂದ ಮಚ್ಚೇಟು

    ಮೈಸೂರು: ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿಯೋರ್ವ ಗುರುವಾರ ಮದುವೆಯಾಗಬೇಕಿದ್ದ ತನ್ನ ಬಾಮೈದನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ, ಅತ್ತೆಯ ಎರಡು ಕೈಗಳಿಗೂ ಮಚ್ಚಿನಿಂದ ಗಾಯಗೊಳಿಸಿದ ಘಟನೆ ಮೈಸೂರಿನ ಎಚ್.ಡಿ ಕೋಟೆಯ ಯರಹಳ್ಳಿಯಲ್ಲಿ ನಡೆದಿದೆ.

    ಆರೋಪಿಯನ್ನು ಕೆಂಡಗಣ್ಣ ಎಂದು ಗುರುತಿಸಲಾಗಿದ್ದು, ತನ್ನ ಬಾಮೈದ ಯರಹಳ್ಳಿ ನಿವಾಸಿ ಮನು ಹಾಗೂ ಅತ್ತೆ ಹೇಮಾವತಿ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ. ಮಲಗಿದ್ದ ವೇಳೆ ಅತ್ತೆ, ಬಾಮೈದನ ಮೇಲೆ ಕೆಂಡಗಣ್ಣ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಮನು, ಹೇಮಾವತಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

    ಗುರುವಾರ ಮನು ವಿವಾಹ ನಡೆಯಬೇಕಿತ್ತು. ಮದುವೆ ಆಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಮನು ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಕೆಂಡಗಣ್ಣ ಮಚ್ಚಿನಿಂದ ಹಲ್ಲೆ ನಡೆಸಿದ ಪರಿಣಾಮ ಮನು ಕತ್ತಿನ ಮೇಲ್ಭಾಗದಲ್ಲಿ ಗಾಡವಾಗಿ ಮಚ್ಚಿನ ಏಟು ಬಿದಿದ್ದು, ಮನು ಕಿವಿ ಕೂಡ ಕಟ್ ಆಗಿದೆ. ಇತ್ತ ಅತ್ತೆಯ ಎರಡೂ ಕೈಗಳಿಗೂ ಕೆಂಡಗಣ್ಣ ಮಚ್ಚಿನಿಂದ ಗಾಯಗೊಳಿದ್ದಾನೆ.

    ಈ ಸಂಬಂಧ ಮೈಸೂರಿನ ಎಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಗುರುವಾರ ನಡೆಯಬೇಕಿದ್ದ ಮನು ವಿವಾಹ ನಿಂತು ಹೋಗಿದೆ.