Tag: mother in law

  • ಅತ್ತೆ ಸಮಾಧಾನಕ್ಕಾಗಿ ನೇಣಿನ ಕುಣಿಕೆಯಲ್ಲಿ ತೂಗಾಡಿದ ಸೊಸೆ

    ಅತ್ತೆ ಸಮಾಧಾನಕ್ಕಾಗಿ ನೇಣಿನ ಕುಣಿಕೆಯಲ್ಲಿ ತೂಗಾಡಿದ ಸೊಸೆ

    – ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಮಹಿಳೆ

    ಟೆಹ್ರಾನ್: ಹೃದಯಾಘಾತದಿಂದ ಸತ್ತಿರುವ ಸೊಸೆಯನ್ನು ಅತ್ತೆಯ ಸಮಾಧಾನಕ್ಕಾಗಿ ಮತ್ತೆ ನೇಣಿಗೆ ಏರಿಸಿರುವ ಘಟನೆ ಇರಾನ್‍ನಲ್ಲಿ ನಡೆದಿದೆ.

    ಜಹ್ರಾನ್ ಇಸ್ಮಾಯಿಲಿ ಮಹಿಳೆ ತನ್ನ ಪತಿ ಇತರ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಾನೆ ಎಂದು ಗಂಡನನ್ನು ಕೊಲೆ ಮಾಡಿದ್ದಳು. ಈ ತಪ್ಪಿಗಾಗಿ ಇಸ್ಮಾಯಿಲಿಗೆ ಇರಾನ್ ನ್ಯಾಯಾಲಯವು ಮರಣದಂಡನ ಶಿಕ್ಷೆಯನ್ನು ನೀಡಿತ್ತು.

     

    ಆದರೆ ಇಸ್ಮಾಯಿಲಿ ನೇಣು ಶಿಕ್ಷೆಗೆ ಗುರಿಯಾಗುವ ಕೆಲವು ಗಂಟೆ ಮೊದಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಆದರೆ ಇತ್ತ ಮಗನನ್ನು ಕೊಂದ ಸೊಸೆಯನ್ನು ನೇಣುಹಾಕುವ ದಿನಗಳಿಗಾಗಿ ಅತ್ತೆ ಕಾಯುತ್ತಿದ್ದಳು. ಅತ್ತೆ ಸೊಸೆ ನೇಣಿಗೆ ಹಾಕುವ ದಿನಗಳಿಗಾಗಿ ಲೆಕ್ಕ ಹಾಕುತ್ತಿರುವುದುನ್ನು ತಿಳಿದ ಅಧಿಕಾರಿಗಳು ಈ ಮೊದಲೇ ಪ್ರಾಣ ಬಿಟ್ಟಿರುವ ಇಸ್ಮಾಯಿಲಿಯನ್ನು ಮೊತ್ತೊಮ್ಮೆ ನೇಣಿನ ಕುಣಿಕೆ ಬಿಗಿದಿದ್ದಾರೆ. ಅತ್ತೆ ಸೊಸೆ ಸಾವಿನ ವಿಚಾರವನ್ನು ಕೇಳಿ ನಿಟ್ಟುಸಿರು ಬಿಟ್ಟಿದ್ದಾಳೆ.

  • ಪ್ರತಿನಿತ್ಯ ಚುಚ್ಚು ಮಾತು – ಅತ್ತೆಯ ಕಣ್ಣು ಕಿತ್ತು ಕೊಲೆಗೈದ ಸೊಸೆ

    ಪ್ರತಿನಿತ್ಯ ಚುಚ್ಚು ಮಾತು – ಅತ್ತೆಯ ಕಣ್ಣು ಕಿತ್ತು ಕೊಲೆಗೈದ ಸೊಸೆ

    – ಅತ್ತೆಯ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಸೊಸೆ

    ಪಾಟ್ನಾ: ಅತ್ತೆಗೆ ಚಾಕುವಿನಿಂದ ಇರಿದು ಕಣ್ಣು ಕಿತ್ತು ಕೊಲೆ ಮಾಡಿದ ಸೊಸೆ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಸಿರುವ ಘಟನೆ ಬಿಹಾರದ ಪಾಟ್ನಾ ಸಮೀಪದ ಪರ್ಸಾ ಬಜಾರ್ ಗ್ರಾಮದಲ್ಲಿ ನಡೆದಿದೆ.

    ಸೊಸೆಯಿಂದ ಹತ್ಯೆಗೊಳಗಾದ ಅತ್ತೆಯನ್ನು ಧರ್ಮಶೀಲ ದೇವಿ ಎಂದು ಗುರುತಿಸಲಾಗಿದೆ. ಅತ್ತೆಯನ್ನು ಹತ್ಯೆಗೈದ ಆರೋಪಿ ಸೊಸೆ ಲಲಿತಾ(33) ಆಗಿದ್ದಾಳೆ. ಮಗು ಇಲ್ಲ ಎಂದು ಮನಬಂದಂತೆ ಮಾತಾಡುತ್ತಿದ್ದ ಅತ್ತೆಯ ಮಾತಿನಿಂದ ಮನನೊಂದ ಸೊಸೆ ಈ ಕೃತ್ಯ ಎಸಗಿದ್ದಾಳೆ.

     

    ಅತ್ತೆ ಚುಚ್ಚು ಮಾತುಗಳಿಂದ ಪ್ರತಿನಿತ್ಯ ಸೊಸೆಗೆ ಕಿರುಕುಳವನ್ನು ನೀಡುತ್ತಿದ್ದಳು. ಮಗುವಾಗಿಲ್ಲ ಎಂಬ ಕೊರಗು ಲಲಿತಾಳಿಗೆ ಇತ್ತು. ಅತ್ತೆಯ ಮಾತುಗಳು ಇನ್ನಷ್ಟು ನೋವನ್ನುಂಟು ಮಾಡುತ್ತಿದ್ದವು. ಈ ಎಲ್ಲಾ ವಿಚಾರದಿಂದ ಮನನೊಂದ ಮಹಿಳೆ ಪತಿ ಮತ್ತು ಮಾವ ಇಲ್ಲದ ಸಮಯವನ್ನು ನೋಡಿಕೊಂಡು ಅತ್ತೆಯನ್ನು ಕೊಲೆ ಮಾಡುವ ಸಂಚು ರೂಪಿಸಿದ್ದಳು.

    ಅತ್ತೆಗೆ ಚಾಕುವಿನಿಂದ ಇರಿದು, ಕಣ್ಣುಗಳನ್ನು ಕಿತ್ತು ಹೊರಗೆ ಎಳೆದು ಭೀಕರವಾಗಿ ಹತ್ಯೆ ಮಾಡಿದ್ದಾಳೆ. ಇದಾದ ಬಳಿಕ ಸುಮ್ಮನಾಗದ ಸೊಸೆ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಈ ಸಂದರ್ಭದಲ್ಲಿ ನೆರೆಹೊರೆಯವರು ಬಂದು ಆಕೆಯನ್ನು ರಕ್ಷಿಸಿದ್ದಾರೆ.

  • ಮದ್ವೆಯಾಗದೇ ಸಂಸಾರ – ತಾಳಿ ಕಟ್ಟು ಅಂದಿದ್ದಕ್ಕೆ ಗೆಳತಿ, ಅತ್ತೆಯ ಕೊಲೆ

    ಮದ್ವೆಯಾಗದೇ ಸಂಸಾರ – ತಾಳಿ ಕಟ್ಟು ಅಂದಿದ್ದಕ್ಕೆ ಗೆಳತಿ, ಅತ್ತೆಯ ಕೊಲೆ

    – ಇಬ್ಬರ ಕತ್ತು ಕೊಯ್ದು ಕೊಂದು ಪೊಲೀಸರಿಗೆ ಶರಣಾದ

    ಚಿಕ್ಕಬಳ್ಳಾಪುರ: ಪ್ರಿಯತಮೆ ಮತ್ತು ಆಕೆಯ ತಾಯಿಯನ್ನ ಕೊಂದು ಆರೋಪಿ ಪೊಲೀಸರಿಗೆ ಶರಣಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ನಡೆದಿದೆ.

    ಲಕ್ಷ್ಮಿದೇವಿ (50) ಮತ್ತು ರಮಾದೇವಿ (30) ಮೃತ ತಾಯಿ ಮಗಳು. ಓರಿಸ್ಸಾ ಮೂಲದ ಮಲಯಫರೀದ್ ಮದುವೆಯಾಗದೇ ರಮಾದೇವಿ ಸಂಸಾರ ನಡೆಸುತ್ತಿದ್ದನು. ಮದುವೆಗೂ ಮುನ್ನವೇ ಜೋಡಿ ಮಗುವಾಗಿತ್ತು. ಐದು ತಿಂಗಳು ಮಗುವಾದ್ರು ಮಲಯಫರೀದ್ ಮದುವೆಯಾಗಲು ಹಿಂದೇಟು ಹಾಕಿದ್ದನು.

    5 ತಿಂಗಳ ಮಗುವಿದ್ದ ಕಾರಣ ಮಗಳನ್ನ ಮದುವೆ ಆಗುವಂತೆ ಲಕ್ಷ್ಮಿದೇವಿ ಒತ್ತಾಯಿಸುತ್ತಿದ್ದರು. ಮಧ್ಯರಾತ್ರಿ ತಾಯಿ ಮತ್ತು ಮಗಳ ಕತ್ತುಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಮಗುವಿನ ಜೊತೆ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಎರಡು ಮೃತದೇಹಗಳನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ತನಿಖೆ ನಡೆಸುತ್ತಿದ್ದಾರೆ.

     

  • ಅತ್ತೆಯಿಂದ ಅಳಿಯನಿಗೆ ಎಕೆ-47 ಗಿಫ್ಟ್ – ವಿಡಿಯೋ ವೈರಲ್

    ಅತ್ತೆಯಿಂದ ಅಳಿಯನಿಗೆ ಎಕೆ-47 ಗಿಫ್ಟ್ – ವಿಡಿಯೋ ವೈರಲ್

    ಇಸ್ಲಾಮಾಬಾದ್: ಮದುವೆ ಮುಗಿದ ನಂತರ ತನ್ನ ಅಳಿಯನಿಗೆ ಅತ್ತೆಯೊಬ್ಬರು ಎಕೆ-47 ಗನ್ ಗಿಫ್ಟ್ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಮದುವೆಯಲ್ಲಿ ಅಳಿಯನಿಗೆ ಅತ್ತೆ-ಮಾವ ವರದಕ್ಷಿಣೆ ಎಂದು ಕಾರು, ಬೈಕ್ ಅನ್ನು ಗಿಫ್ಟ್ ಆಗಿ ನೀಡುತ್ತಾರೆ. ಆದರೆ ಇಲ್ಲೊಬ್ಬರು ಅತ್ತೆ ಎಕೆ-47 ಗನ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಈ ಗಿಫ್ಟ್ ನೀಡುತ್ತಿರುವ ವಿಡಿಯೋವನ್ನು ಸೈಯದ್ ಎಂಬವರು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.

    https://twitter.com/HussainIkhteyar/status/1331643120543535105

    ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ, ಮದುವೆ ಮುಗಿದ ಬಳಿಕ ವಧು-ವರ ಚೇರ್ ಮೇಲೆ ಕುಳಿತಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ವಧುವಿನ ತಾಯಿ ಮೊದಲಿಗೆ ವರನ ಹಣೆಗೆ ಮುತ್ತಿಡುತ್ತಾಳೆ. ನಂತರ ಆತನಿಗೆ ಎಕೆ-47 ಗನ್ ಅನ್ನು ಉಡುಗೊರೆಯಾಗಿ ನೀಡಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾಳೆ. ಅಲ್ಲಿಂದ ಜನರೆಲ್ಲ ಅಗ ಕಿರುಚುತ್ತಾರೆ. ನಂತರ ಆಕೆ ವಧು-ವರರಿಗೆ ಆಶೀರ್ವಾದ ಮಾಡಿ ಹೋಗುತ್ತಾರೆ.

    ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ವ್ಯಕ್ತಿ ನಮ್ಮನ್ನು ಅರ್ಥ ಮಾಡಿಕೊಳ್ಳುವ ಅತ್ತೆ ಸಿಗಬೇಕು ಎಂದು ಬರೆದುಕೊಂಡಿದ್ದಾನೆ. ಸದ್ಯ ಈ ವಿಡಿಯೋ ಪಾಕಿಸ್ತಾನದಿಂದ ಟ್ವಿಟ್ಟರಿಗೆ ಅಪ್ಲೋಡ್ ಆಗಿದ್ದು, ಯಾವಾಗ ನಡೆದಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

  • ಪತ್ನಿ ಕರ್ಕೊಂಡು ಬಂದ ಅತ್ತೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದ ಅಳಿಯ

    ಪತ್ನಿ ಕರ್ಕೊಂಡು ಬಂದ ಅತ್ತೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದ ಅಳಿಯ

    ಕಲಬುರಗಿ: ಪತ್ನಿ ವಿಚಾರದಲ್ಲಿ ಅತ್ತೆ ಹಾಗೂ ಅಳಿಯನ ಮಧ್ಯೆ ಗಲಾಟೆ ನಡೆದಿದ್ದು, ಮಗಳನ್ನು ಕಳುಹಿಸಲು ಬಂದಿದ್ದ ಅತ್ತೆಯ ಮೇಲೆಯೇ ಕಲ್ಲು ಎತ್ತಿ ಹಾಕಿ ಅಳಿಯ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

    ಜಿಲ್ಲೆಯ ಕಮಲಾಪುರ ತಾಲೂಕಿನ ಭೀಮನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಲಕ್ಷ್ಮಿಬಾಯಿ(45) ಕೊಲೆಯಾದ ಮಹಿಳೆ. ಆರೋಪಿ ರಾಮು(55) ಅತ್ತೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ವಿಕೃತಿ ಮೆರೆದಿದ್ದಾನೆ.

    ಈ ಹಿಂದೆ ಪತಿ, ಪತ್ನಿ ಮಧ್ಯೆ ಜಗಳವಾಗೊತ್ತು. ಹೀಗಾಗಿ ಪತ್ನಿ ತವರು ಮನೆ ಸೇರಿದ್ದಳು. ಇದೀಗ ಅಳಿಯನ ಬಳಿ ಮಾತನಾಡಿ, ಜಗಳ ಬಗೆ ಹರಿಸಿ ಬರುತ್ತೇನೆ ಎಂದು ಮಗಳನ್ನು ಗಂಡನ ಮನೆಗೆ ಕರೆ ತಂದಿದ್ದಳು. ಇಬ್ಬರ ಜಗಳ ಬಗೆಹರಿಸಿ, ರಾಜಿ ಮಾಡಿ, ಮಗಳನ್ನು ಬಿಟ್ಟು ಹೋಗಲು ಬಂದಿದ್ದಳು. ಆದರೆ ಈ ವೇಳೆ ಅಳಿಯ ಹಾಗೂ ಅತ್ತೆ ಮಧ್ಯೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ರಾಮು ತನ್ನ ಅತ್ತೆ ಲಕ್ಷ್ಮಿಬಾಯಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

    ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಿಂದ ಭೀಮನಾಳ ಗ್ರಾಮಕ್ಕೆ ಮಗಳನ್ನು ಕಳುಹಿಸಲು ಲಕ್ಷ್ಮಿಬಾಯಿ ಬಂದಿದ್ದಳು. ಈ ವೇಳೆ ದುರ್ಘಟನೆ ಸಂಭವಿಸಿದೆ. ಕೊಲೆ ಮಾಡುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿ, ಅತ್ತೆ, ನಾದಿನಿಯಿಂದಾಗಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

    ಪತ್ನಿ, ಅತ್ತೆ, ನಾದಿನಿಯಿಂದಾಗಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

    – ಇಂದು ಬೆಳಗ್ಗೆ ಕೆರೆಯಲ್ಲಿ ಶವ ಪತ್ತೆ
    – ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟ

    ಭೋಪಾಲ್: ಮಧ್ಯ ಪ್ರದೇಶದ ಭವರ್ಕುವಾದ ಪಿಪಲಿಯಾ ಕೆರೆಯಲ್ಲಿ ಇಂದು ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನ ಬಳಿ ಡೆತ್ ನೋಟ್ ಲಭ್ಯವಾಗಿದ್ದು, ಪತ್ನಿ, ಅತ್ತೆ ಮತ್ತು ನಾದಿನಿಯಿಂದಾಗಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ಪತ್ರದಲ್ಲಿ ಬರೆಯಲಾಗಿದೆ.

    ಪ್ರತಾಪನಗರದ ನಿವಾಸಿ 33 ವರ್ಷದ ರಾಜಕುಮಾರ್ ಉರ್ಫ್ ರಾಜು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ರಾಜಕುಮಾರ್ ಕೇಟರಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಕೆಲಸದ ವಿಷಯವಾಗಿ ಸೋಮವಾರ ಮನೆಯಿಂದ ಹೊರ ಹೋಗಿದ್ದ ರಾಜಕುಮಾರ್ ಮಂಗಳವಾರ ರಾತ್ರಿಯಾದ್ರೂ ಹಿಂದಿರುಗಿರಲಿಲ್ಲ. ಇಂದು ಬೆಳಗ್ಗೆ ಪಿಪಲಿಯಾ ಕೆರೆಯಲ್ಲಿ ರಾಜಕುಮಾರ್ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಬೆಂಗಳೂರಿನ ರೌಡಿ ಬಾಂಬೆ ಸಲೀಂ ಪತ್ನಿ ಜೊತೆ ಚಾಟಿಂಗ್- ಯುವಕನ ಭೀಕರ ಕೊಲೆ

    ಸೂಸೈಡ್ ನೋಟ್ ನಲ್ಲಿ ಏನಿತ್ತು?: ನನ್ನ ಹೆಸರು ರಾಜಕುಮಾರ್, ಪತ್ನಿ ಕುಟುಂಬಸ್ಥರ ಕಿರುಕುಳದಿಂದ ಸೂಸೈಡ್ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಸಾವಿನ ಬಗ್ಗೆ ಯಾರಿಗೂ ತೊಂದರೆ ಕೊಡಬೇಕು. ತೊಂದರೆ ಕೊಡುವದಿದ್ದರೆ ಪತ್ನಿ, ಅತ್ತೆ ಮತ್ತು ನಾದಿನಿಗೆ ನೀಡಿ. ಯಾಕೆಂದರೆ ಅವರಿಂದಲೇ ನಾನು ಸಾಯುತ್ತಿದ್ದೇನೆ ಎಂದು ಬರೆಯುವ ಮೂಲಕ ತಮ್ಮ ಸಾವಿಗೆ ಮೂವರು ಕಾರಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಯಿ ಚೈನ್‍ನಿಂದ ಕತ್ತು ಹಿಸುಕಿ, ಚಾಕುವಿನಿಂದ ಇರಿದು ಪತ್ನಿಯ ಕೊಲೆಗೈದ!– ಎರಡು ತಿಂಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದ ಜೋಡಿ

  • ಅತ್ತೆಯ ಜುಟ್ಟು ಹಿಡಿದು ಮನೆಯಿಂದ ಹೊರಗೆ ಎಳ್ಕೊಂಡು ಬಂದು ಥಳಿಸಿದ ಸೊಸೆ!

    ಅತ್ತೆಯ ಜುಟ್ಟು ಹಿಡಿದು ಮನೆಯಿಂದ ಹೊರಗೆ ಎಳ್ಕೊಂಡು ಬಂದು ಥಳಿಸಿದ ಸೊಸೆ!

    – ಸಾಮಾಜಿಕ ಜಾಲತಾಣದಲ್ಲಿ ಕ್ರೂರತೆಯ ವೀಡಿಯೋ ವೈರಲ್

    ಹೈದಾರಾಬಾದ್: ಸೊಸೆಯೊಬ್ಬಳು ತನ್ನ 55 ವರ್ಷದ ಅತ್ತೆಯ ಜುಟ್ಟು ಹಿಡಿದು ಮನೆಯಿಂದ ಹೊರಗಡೆ ಎಳೆದಾಡಿಕೊಂಡು ಬಂದು ಹಿಗ್ಗಾಮುಗ್ಗ ಥಳಿಸಿದ ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

    ಪಾಪಿ ಸೊಸೆ ಉಜ್ಮಾ ಬೇಗಂ, ಅತ್ತೆ ತಶಾನಿಮಾ ಸುಲ್ತಾನಾ ಅವರ ಮೇಲೆ ಹಲ್ಲೆ ಮಾಡಿದ್ದಾಳೆ. ಈ ಘಟನೆ ಹುಮಾಯೂನ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫಿರೋಜ್ ಗಾಂಧಿ ನಗರದಲ್ಲಿ ನಡೆದಿದೆ. ಘಟನೆ ಸಂಬಂಧ ಸೊಸೆ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸೊಸೆ ತನ್ನ ಅತ್ತೆ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ತಶಾನಿಮಾ ಸುಲ್ತಾನಾ ಮತ್ತು ಅಹ್ಮದ್ ಸಯೀದ್ ಖಾನ್ ಅವರ ಪುತ್ರ ಉಬೈದ್ ಅಲಿ ಖಾನ್ ಕಳೆದ ಒಂದು ದಶಕದಿಂದ ಸೌದಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಉಬೈದ್ ಅವರಿಗೆ 2019ರಲ್ಲಿ ಉಜ್ಮಾ ಬೇಗಂ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾರೆ. ಎರಡನೇ ವಿವಾಹದ ಒಂದು ತಿಂಗಳ ಬಳಿಕ ಉಬೈದ್ ಸೌದಿಗೆ ತೆರಳಿದ್ದಾರೆ.

    ಇತ್ತ ಎರಡನೇ ಪತ್ನಿ ಉಜ್ಮಾ ಬೇಗಂ, ಉಬೈದ್ ವೃದ್ಧ ತಾಯಿ ತಶಾನಿಮಾ ಸುಲ್ತಾನಾಗೆ ಕಿರುಕುಳ ನೀಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಹುಮಾಯೂನ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋ ಅಕ್ಟೋಬರ್ 8ರಂದು ಹೈದರಾಬಾದ್ ನ ಮಲ್ಲೆಪಲ್ಲಿಯಲ್ಲಿ ನಡೆದಿದ್ದಾಗಿದೆ. ಉಜ್ಮಾ ಬೇಗಂ ಹಾಗೂ ತಶಾನಿಮಾ ಮಧ್ಯೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿದ್ದು, ಈ ವೇಳೆ ಉಜ್ಮಾ ಸಿಟ್ಟಿನಿಂದ ತನ್ನ ಅತ್ತೆಯ ತಲೆಗೂದಲು ಹಿಡಿದು ಮನೆಯಿಂದ ಹೊರಗಡೆ ಎಳೆದುಕೊಂಡು ಬಂದಿದ್ದಾಳೆ. ಅಲ್ಲದೆ ಕೂದಲು ಹಿಡಿದುಕೊಂಡು ಹಿಗಾಮುಗ್ಗ ಹಲ್ಲೆ ಮಾಡಿದ್ದಾಳೆ. ಈ ವೇಳೆ ಉಜ್ಮಾನಿಗೆ ಆಕೆಯ ತಾಯಿ ಕೂಡ ಸಾಥ್ ನೀಡಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಇನ್ನೊಂದು ವಿಚಾರ ಎಂದರೆ, ಉಜ್ಮಾ ಹಲ್ಲೆ ಮಾಡುತ್ತಿರುವುದನ್ನು ಬಾಲಕನೊಬ್ಬ ತನ್ನ ಮೊಬೈಲ್ ನಲ್ಲಿ ವೀಡಿಯೋ ಮಾಡುವುದನ್ನು ಕೂಡ ನಾವು ಕಾಣಬಹುದಾಗಿದೆ. ಉಜ್ಮಾ ತನ್ನ ಅತ್ತೆ ಮೇಲೆ ರೌದ್ರ ನರ್ತನ ತೋರುತ್ತಿದ್ದಂತೆಯೇ ಇನ್ನೊಬ್ಬ ಮಹಿಳೆ ಅಂದರೆ ಉಜ್ಮಾ ತಾಯಿ ಕೂಡ ಮಗಳ ಜೊತೆ ಸೇರಿಕೊಂಡು ವೃದ್ಧೆಗೆ ಥಳಿಸಿತ್ತಿರುವಾಗ ಬಾಲಕ ವೀಡಿಯೋ ಮಾಡಿರುವುದನ್ನು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ. ಘಟನೆ ಬೆಳಕಿಗೆ ಬಂದ ಬಳಿಕ ಹೈದರಾಬಾದ್ ಪೊಲೀಸರು ಹೊಸದಾಗಿ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  • ವಿಧವೆ ಅತ್ತೆಯನ್ನ ರೇಪ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಅಳಿಯ

    ವಿಧವೆ ಅತ್ತೆಯನ್ನ ರೇಪ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಅಳಿಯ

    – ಅತ್ತೆಯ ಮನೆಗೆ ಹೋಗಿ ಅತ್ಯಾಚಾರ

    ಚೆನ್ನೈ: 39 ವರ್ಷದ ಅಳಿಯನೊಬ್ಬ ತನ್ನ 50 ವರ್ಷದ ವಿಧವೆ ಅತ್ತೆಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಪನ್ರುತಿ ಗ್ರಾಮದಲ್ಲಿರುವ ಅತ್ತೆಯ ಮನೆಯಲ್ಲಿಯೇ ಆರೋಪಿ ಅಳಿಯ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ಈ ಬಗ್ಗೆ ದೂರು ನೀಡುತ್ತಿದ್ದಂತೆ ಆರೋಪಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.

    ಏನಿದು ಪ್ರಕರಣ?
    ಆರೋಪಿಯೂ ಕೂಡ ಅದೇ ಗ್ರಾಮದ ನಿವಾಸಿಯಾಗಿದ್ದು, ಭಾನುವಾರ ಆರೋಪಿ ತನ್ನ ಅತ್ತೆಯ ಮನೆಗೆ ಹೋಗಿದ್ದಾನೆ. ಅಲ್ಲಿ ಏಕಾಏಕಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಸಂತ್ರಸ್ತೆ ಆಂತರಿಕ ಗಾಯಗಳಿಂದ ಬಳಲುತ್ತಿದ್ದು, ಕೂಡಲೇ ಆಕೆಯನ್ನು ಕಡಲೂರು ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಸಂತ್ರಸ್ತೆಯನ್ನು ಪರೀಕ್ಷೆ ಮಾಡಿದ ನಂತರ ಆಸ್ಪತ್ರೆಯ ಅಧಿಕಾರಿಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದು ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳ ತಂಡವು ಸಂತ್ರಸ್ತೆಯನ್ನು ಭೇಟಿ ಮಾಡಿದ್ದು, ಪ್ರಾಥಮಿಕ ವಿಚಾರಣೆ ನಡೆಸಿದೆ. ಸಂತ್ರಸ್ತೆ ನೀಡಿದ ಮಾಹಿತಿಯ ಆಧಾರದ ಮೇಲೆ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

    ಆರೋಪಿ ತನ್ನ ವಿರುದ್ಧ ಅತ್ತೆ ದೂರು ನೀಡಿರುವ ಬಗ್ಗೆ ತಿಳಿದುಕೊಂಡಿದ್ದಾನೆ. ಇದರಿಂದ ಪೊಲೀಸರಿಗೆ ಹೆದರಿ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಇದನ್ನು ನೋಡಿದ ನೆರೆಹೊರೆಯವರು ಕೂಡಲೇ ಆತನನ್ನು ಕಾಪಾಡಿದ್ದಾರೆ. ಸದ್ಯಕ್ಕೆ ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಅಳಿಯನ ಜೊತೆ ಅತ್ತೆಯ ಕಳ್ಳ ಸಂಬಂಧ- ಅಡ್ಡಿಯಾದ ಗಂಡನನ್ನೇ ಕೊಂದ್ಳು

    ಅಳಿಯನ ಜೊತೆ ಅತ್ತೆಯ ಕಳ್ಳ ಸಂಬಂಧ- ಅಡ್ಡಿಯಾದ ಗಂಡನನ್ನೇ ಕೊಂದ್ಳು

    -ಕೊಂದು ಪಕ್ಕದ್ಮನೆಯಲ್ಲಿ ಶವ ನೇತಾಕಿದ್ರು
    -ಅತ್ತೆ ಮೇಲಿನ ವ್ಯಾಮೋಹಕ್ಕೆ ತನ್ನೂರು ತೊರೆದಿದ್ದ ಅಳಿಯ
    -ಸುಳ್ಳು ಕಥೆ ಹೇಳಿದ ಅಪ್ರಾಪ್ತ ಮಗ

    ಪಾಟ್ನಾ/ವೈಶಾಲಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಅಳಿಯನ ಜೊತೆ ಸೇರಿ ಮಹಿಳೆ ಕೊಲೆ ಮಾಡಿರುವ ಘಟನೆ ವೈಶಾಲಿ ಜಿಲ್ಲೆಯ ದೇಸ್ರಿ ಠಾಣಾ ವ್ಯಾಪ್ತಿಯ ಮುರೌವತಪುರನಲ್ಲಿ ನಡೆದಿದೆ.

    50 ವರ್ಷದ ತಿಲಕ್ ರಾಯ್ ಕೊಲೆಯಾದ ವ್ಯಕ್ತಿ. ತಿಲಕ್ ಪತ್ನಿ ಸವಿತಾ ಅಳಿಯ ಮೋಹನ್ ರಾಯ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಳಿಯ ಮೋಹನ್ ನಿಂದ ದೂರವಿರುವಂತೆ ತಿಲಕ್ ಪತ್ನಿಗೆ ಎಚ್ಚರಿಕೆ ಸಹ ನೀಡಿದ್ದನು. ರಾತ್ರಿ ನಶೆಯಲ್ಲಿ ಪತಿಯನ್ನು ಸವಿತಾ ಮತ್ತು ಮೋಹನ್ ಥಳಿಸಿ ಕೊಂದಿದ್ದಾರೆ. ತಮ್ಮ ಮೇಲೆ ಅನುಮಾನ ಬರದಿರಲಿ ಅಂತ ಪಕ್ಕದಲ್ಲಿಯ ನಿರ್ಮಾಣ ಹಂತಹ ಮನೆಯಲ್ಲಿ ಶವವನ್ನ ನೇತು ಹಾಕಿ ಮನೆ ಸೇರಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ಶವ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ವೇಳೆ ಸವಿತಾಳ ಅಪ್ರಾಪ್ತ ಮಗ, ತಂದೆ ಪ್ರತಿದಿನ ಕುಡಿದು ಬಂದು ನಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದರು. ನಿನ್ನೆ ರಾತ್ರಿಯೂ ಪಾನಮತ್ತನಾಗಿ ಬಂದ ತಂದೆ ನಮ್ಮ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರ ಹೋಗಿದ್ದರು. ಈ ವೇಳೆ ನೇಣು ಹಾಕಿಕೊಂಡಿರಬಹುದು ಎಂದು ಹೇಳಿದ್ದನು. ಇದನ್ನೂ ಓದಿ: ಸೊಸೆ ಜೊತೆ ಮಾವನ ಸರಸ- ವಿಷ್ಯ ತಿಳಿದು ಇಬ್ಬರನ್ನೂ ಬರ್ಬರವಾಗಿ ಕೊಂದ ಮಗ

    ಶವದ ಮೇಲೆ ಗಾಯದ ಗುರುತುಗಳು ಕಂಡು ಅನುಮಾನಗೊಂಡ ತಿಲಕ್ ಸೋದರ ಪೊಲೀಸ್ ಠಾಣೆಗೆ ತೆರಳಿ ಅತ್ತಿಗೆ, ಅಳಿಯ ಮೋಹನ್ ಮತ್ತು ಮಗನ ವಿರುದ್ಧ ದೂರು ದಾಖಲಿಸಿದ್ದರು. ಅನುಮಾನದ ಮೇಲೆ ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಾವನ ಜೊತೆ 10 ತಿಂಗ್ಳ ಮಗುವಿನ ಸಮೇತ ಸೊಸೆ ಎಸ್ಕೇಪ್

    ಅಳಿಯ ಮೋಹನ್ ಜೊತೆ ಅಕ್ರಮ ಸಂಬಂಧ ಹೊಂದಿರೋದನ್ನ ಅತ್ತೆ ಸವಿತಾ ಒಪ್ಪಿಕೊಂಡಿದ್ದಾಳೆ. ಅತ್ತೆಯ ಮೇಲಿನ ವ್ಯಾಮೋಹದಿಂದ ಸಮಸ್ತಿಪುರದ ನಿವಾಸಿಯಾಗಿದ್ದ ಮೋಹನ್ ರಾಯ್ ಮುರೌವತಪುರನಲ್ಲಿಯೇ ಉಳಿದುಕೊಂಡಿದ್ದನು. ಇಬ್ಬರ ಅಕ್ರಮ ಸಂಬಂಧ ವಿಷಯ ತಿಳಿದ ತಿಲಕ್ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು.  ಇದನ್ನೂ ಓದಿ: ಮಗನೊಂದಿಗೆ ಸೆಕ್ಸ್ ಮಾಡದಂತೆ ಸೊಸೆಯನ್ನ ತಡೆದ ಮಾವ

  • ಪತ್ನಿ, ನಾದಿನಿಯನ್ನ ಕೊಂದು ಮೃತದೇಹಗಳ ಜೊತೆ ಸೆಕ್ಸ್

    ಪತ್ನಿ, ನಾದಿನಿಯನ್ನ ಕೊಂದು ಮೃತದೇಹಗಳ ಜೊತೆ ಸೆಕ್ಸ್

    – ಅತ್ತೆಯನ್ನೂ ಬಿಡದ 27ರ ಕಾಮುಕ
    – 3 ದಿನ ವಿಭಿನ್ನ ಸ್ಥಳದಲ್ಲಿ ಮೂವರ ಶವ ಪತ್ತೆ

    ಚಂಡೀಗಢ: 27 ವರ್ಷದ ಕಾಮುಕನೊಬ್ಬ ತನ್ನ ಹೆಂಡತಿ, ನಾದಿನಿ ಮತ್ತು ಅತ್ತೆ ಮೂವರನ್ನು ಕೊಲೆ ಮಾಡಿದ್ದಾನೆ. ನಂತರ ಅವರ ಮೃತದೇಹಗಳ ಜೊತೆ ಸೆಕ್ಸ್ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ನಡೆದಿದೆ.

    ಇದೀಗ ಪೊಲೀಸರು ಆರೋಪಿಯನ್ನು ಬಂಧಿಸುವ ಮೂಲಕ ತ್ರಿವಳಿ ಕೊಲೆ ರಹಸ್ಯವನ್ನು ಭೇದಿಸಿದ್ದಾರೆ. ಸೆಪ್ಟೆಂಬರ್ 6 ರಂದು ಜಿಲ್ಲೆಯ ಸಮಲ್ಖ ಪಟ್ಟಣದಲ್ಲಿ ಈ ಕೊಲೆ ನಡೆದಿದೆ. ಆರೋಪಿಯನ್ನು ನೂರ್ ಹಸನ್ (27) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ ಆರೋಪಿ ಶವಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.

    ಮೂವರು ಮೃತದೇಹಗಳು ಸೆಪ್ಟೆಂಬರ್ 6, 7 ಮತ್ತು 8 ರಂದು ಮೂರು ವಿಭಿನ್ನ ಸ್ಥಳಗಳಲ್ಲಿ ಪತ್ತೆಯಾಗಿದ್ದವು. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗಾಗಿ ಸೆಪ್ಟೆಂಬರ್ 11 ರಂದು ಪಾಣಿಪತ್ ಉಪ ಪೊಲೀಸ್ ವರಿಷ್ಠಾಧಿಕಾರಿ ಅಡಿಯಲ್ಲಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ.

    ಆರೋಪಿ ಸೆಪ್ಟೆಂಬರ್ 5 ರಂದು ಮೊದಲು ತನ್ನ ಹೆಂಡತಿ ಮತ್ತು ನಾದಿನಿಯನ್ನು ಕೊಲೆ ಮಾಡಿದ್ದಾನೆ. ನಂತರ ಅವರ ದೇಹಗಳನ್ನು ಬೇರೆ ಬೇರೆ ಸ್ಥಳಗಳಿಗೆ ಎಸೆದಿದ್ದಾನೆ. ಸೆಪ್ಟೆಂಬರ್ 8 ರಂದು ಬರ್ಷಮ್ ಗ್ರಾಮದಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗಿ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ಗುರುತನ್ನು ಪತ್ತೆ ಮಾಡಬಾರದೆಂದು ಮೃತದೇಹವನ್ನು ಸುಡಲು ಪ್ರಯತ್ನಿಸಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.

    ಆರೋಪಿ ನೂರ್ ಹಸನ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಮಲ್ಖ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಆದರೆ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಟ್ಟಿದ್ದ. ಅಲ್ಲದೇ ತನ್ನ ಸಂಬಂಧಕ್ಕೆ ಅತ್ತೆಯ ಮನೆಯವರ ಬೆಂಬಲ ಪಡೆಯುತ್ತಿದ್ದಾಳೆ ಎಂದು ಶಂಕಿಸಿ ಈ ಕೊಲೆಗಳನ್ನು ಮಾಡಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

    ವಿಚಾರಣೆ ವೇಳೆ ಮೂವರು ಮಹಿಳೆಯರನ್ನು ಕೊಂದು ಅವರ ಶವಗಳ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.