Tag: mother in law

  • ಗಂಡ ಹೆಂಡತಿ ಜಗಳಕ್ಕೆ ಅತ್ತೆ ಬಲಿ – ಕುಡಿದ ಮತ್ತಿನಲ್ಲಿ ಹೆಂಡತಿ ಅಂತ ಅತ್ತೆಗೆ ಹೊಡೆದ

    ಗಂಡ ಹೆಂಡತಿ ಜಗಳಕ್ಕೆ ಅತ್ತೆ ಬಲಿ – ಕುಡಿದ ಮತ್ತಿನಲ್ಲಿ ಹೆಂಡತಿ ಅಂತ ಅತ್ತೆಗೆ ಹೊಡೆದ

    ಬೆಂಗಳೂರು: ಗಂಡ ಹೆಂಡತಿ ಜಗಳದಲ್ಲಿ ಅತ್ತೆ ಬಲಿಯಾಗಿರುವ ಘಟನೆ ಮಾರತ್ ಹಳ್ಳಿ ಬಳಿಯ ಸಂಜಯನಗರದಲ್ಲಿ ನಡೆದಿದೆ.

    ಸೌಭಾಗ್ಯ ಮೃತ ಮಹಿಳೆಯಾಗಿದ್ದು, ಜುಲೈ 13 ರ ಬುಧವಾರ ಸಂಜೆ 7.30ಕ್ಕೆ ಈ ಘಟನೆ ನಡೆದಿದೆ. ಆರೋಪಿಯನ್ನು 35 ವರ್ಷದ ನಾಗರಾಜ ಎಂದು ಗುರುತಿಸಲಾಗಿದೆ. ಕಳೆದ 6 ವರ್ಷದ ಹಿಂದೆ ನಾಗರಾಜ ಮತ್ತು ಭವ್ಯಶ್ರೀ ವಿವಾಹವಾಗಿದ್ದರು. ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದ ನಾಗರಾಜ ಕುಡಿತ ಚಟಕ್ಕೆ ಬಿದ್ದಿದ್ದರಿಂದ ಆಗಾಗ ದಂಪತಿ ನಡುವೆ ಜಗಳವಾಗುತ್ತಿತ್ತು. ಇದರಿಂದ ಮನನೊಂದು ಗಂಡನ ಕಾಟ ತಾಳಲಾರದೇ ಭವ್ಯ ಶ್ರೀ ಸಂಜಯನಗರದಲ್ಲಿರುವ ತನ್ನ ತಾಯಿ ನಿವಾಸಕ್ಕೆ ಬಂದಿದ್ದರು.

    CRIME 2

    ಕಳೆದ ಊರು ವರ್ಷದಿಂದ ತಾಯಿ ಮನೆಯಲ್ಲಿಯೇ ವಾಸವಾಗಿದ್ದ ಭವ್ಯ ಶ್ರೀ ಈ ಮಧ್ಯೆ ವಿಚ್ಛೇದನಕ್ಕಾಗಿಯೂ ತಯಾರಿ ನಡೆಸುತ್ತಿದ್ದರು. ಈ ವಿಚಾರ ತಿಳಿದು ಮತ್ತೆ ಪತ್ನಿ ಬೇಕು ಎನಿಸಿ ಕುಡಿದ ಅಮಲಿನಲ್ಲಿ ನಾಗರಾಜ ಜುಲೈ 12ರಂದು ಮಂಗಳವಾರ ಅತ್ತೆ ಮನೆ ಬಳಿ ಬಂದು ಗಲಾಟೆ ಮಾಡಿದ್ದಾನೆ. ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸಿಕೊಡುವಂತೆ ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ

    KILLING CRIME

    ಈ ವೇಳೆ ಸೌಭಾಗ್ಯ ಕುಟುಂಬಸ್ಥರು ಬುದ್ಧಿ ಹೇಳಿ ನಾಗರಾಜ ಅನ್ನು ವಾಪಸ್ ಕಳುಹಿಸಿದ್ದರು. ಆದರೆ ಬುದ್ಧಿ ಕಲಿಯದ ಆಸಾಮಿ ಅತ್ತೆ ಮನೆಯವರಿಗೆ ಬುದ್ಧಿ ಕಲಿಸಲು ಪಣತೊಟ್ಟು ಆರೋಪಿ ಅತ್ತೆಗೆ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

    ಸಂಜಯನಗರದಲ್ಲಿ ಸೊಪ್ಪು ವ್ಯಾಪಾರ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದ ಸೌಭಾಗ್ಯ ಅವರನ್ನು ಸೊಪ್ಪು ವ್ಯಾಪಾರ ಮಾಡುತ್ತಿದ್ದ ಜಾಗಕ್ಕೆ ಬಂದು ನಾಗರಾಜ್ ಏಕಾಏಕಿ ಸುತ್ತಿಗೆಯಿಂದ ಐದಾರು ಬಾರಿ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಬೀರವಾಗಿ ಗಾಯಗೊಂಡ ಸೌಭಾಗ್ಯ ಸ್ಥಳದಲ್ಲೇ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾರೆ. ನಂತರ ಕೂಡಲೇ ಅವರನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೌಭಾಗ್ಯ ಸಾವನ್ನಪ್ಪಿದ್ದಾರೆ.

    ಇದೀಗ ಘಟನೆ ಸಂಬಂಧ ಹೆಚ್‍ಎಎಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ನಾಗರಾಜ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ವಿಚಾರಣೆ ವೇಳೆ ಆರೋಪಿ ನನಗೆ ನನ್ನ ಅತ್ತೆಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ನನ್ನ ಹೆಂಡತಿ ಕೊಲ್ಲುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದೆ. ಆದರೆ ಕುಡಿದ ಮತ್ತಲ್ಲಿ ಯಾರು ಎನ್ನುವುದೇ ಗೊತ್ತಾಗಿಲ್ಲ. ಹೆಂಡತಿ ಅಂತಾ ಅತ್ತೆಗೆ ಹೊಡೆದುಬಿಟ್ಟೆ ಎಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಪತ್ನಿ, ಅತ್ತೆ ಮೇಲೆ ಗುಂಡು ಹಾರಿಸಿ ಸಂತ್ರಸ್ತನಂತೆ ನಾಟಕವಾಡಿದ

    ಪತ್ನಿ, ಅತ್ತೆ ಮೇಲೆ ಗುಂಡು ಹಾರಿಸಿ ಸಂತ್ರಸ್ತನಂತೆ ನಾಟಕವಾಡಿದ

    ಮುಂಬೈ: ಹಣದ ವಿಚಾರವಾಗಿ ನಡೆದ ಜಗಳದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿ ಹಾಗೂ ಅತ್ತೆಯ ಮೇಲೆ ಗುಂಡು ಹಾರಿಸಿ, ಕೊನೆಗೆ ಅನುಮಾನದಿಂದ ತಪ್ಪಿಸಿಕೊಳ್ಳಲು ತನ್ನ ಕೈಗೆ ಗುಂಡು ಹಾರಿಸಿಕೊಂಡು ನಾಟಕವಾಡಿದ ಘಟನೆ ಮಹಾರಾಷ್ಟ್ರದ ಧಾರವಿಯಲ್ಲಿ ನಡೆದಿದೆ.

    ಖಯ್ಯಮ್ಮುದಿನ್ ಸೈಯದ್(32) ಆರೋಪಿ. ಕೆಲ ದಿನಗಳ ಹಿಂದೆ ಈ ಹಣಕ್ಕಾಗಿಯೇ ಪತ್ನಿ ನಜ್ನಿನ್(30) ಜೊತೆ ಜಗಳವಾಡಿದ್ದ. ಆಗ ಆಕೆ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದಳು. ಈ ಹಿನ್ನೆಲೆಯಲ್ಲಿ ತನ್ನ ಪತ್ನಿ ನಜ್ನಿನ್ ಜೊತೆ ಪಿಎಂಜಿಪಿ ಕಾಲೋನಿಯಲ್ಲಿಯರುವ ತನ್ನ ಅತ್ತೆಯ ಮನೆಗೆ ಬಂದಿದ್ದ. ಈ ವೇಳೆ ಸೈಯ್ಯದ್ ನಜ್ನಿನ್ ಬಳಿ 40,000 ರೂ.ವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ. ಆದರೂ ಕೊಡಲಿಲ್ಲವೆಂದು ಕೋಪದಿಂದ ಅತ್ತೆಯಮನೆಯಿಂದ ಹೊರನಡೆದಿದ್ದಾನೆ.

    crime

    ಈ ವೇಳೆ ನಜ್ನಿನ್ ಹಾಗೂ ಆಕೆಯ ತಾಯಿ ಸೈಯ್ಯದ್‍ನನ್ನು ಅವಾಚ್ಯ ಶಬ್ದದಿಂದ ನಿಂದಿಸಿದರು. ಇದನ್ನು ಕೇಳಿದ ಆತ ಅವರಿಬ್ಬರ ಮೇಲೆ ತನ್ನ ಜೇಬಿನಲ್ಲಿದ್ದ ರಿವಾಲ್ವರ್‍ನ್ನು ತೆಗೆದು ಗುಂಡಿನ ದಾಳಿ ನಡೆಸಿದ್ದಾನೆ. ಅದೃಷ್ಟವಶಾತ್ ಗುಂಡು ಯಾರಿಗೂ ತಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಅತ್ತೆ ಪೊಲೀಸರಿಗೆ ದೂರು ನೀಡಿದ್ದರು.

    ಇದಾದ ಬಳಿಕ ಸಯ್ಯದ್ ಯಾರಿಗೂ ತನ್ನ ಮೇಲೆ ಅನುಮಾನ ಬಾರದಿರಲಿ ಎಂದು ಪೊಲೀಸರಿಗೆ ಕರೆ ಮಾಡಿದ್ದಾನೆ. ಈ ವೇಳೆ ತನ್ನ ಸೋದರ ಮಾವ ಪಪ್ಪು, ಅಲಿಯಾಸ್ ಶೋಯೆಬ್ ಶೇಖ್ ತನ್ನ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದಾಗಿ ತನ್ನ ಕೈಗೆ ಗಾಯವಾಗಿದೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ರಾಜಪಕ್ಸೆ ಶ್ರೀಲಂಕಾದಿಂದ ಹೊರಹೋಗಲು ನಾವು ಸಹಕಾರ ನೀಡಿಲ್ಲ ಎಂದ ಭಾರತ

    crime

    ಧಾರವಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಈ ಬಗ್ಗೆ ಮಾತನಾಡಿ, ಸಯ್ಯದ್ ಎಡಗೈಗೆ ಸ್ವಪ್ರೇರಿತವಾಗಿ ಗುಂಡು ಹಾರಿಸಿಕೊಂಡಿದ್ದು, ಆತನನ್ನು ಒಂದು ದಿನ ಆಸ್ಪತ್ರೆಯ ನಿಗಾ ಇರಿದ್ದೇವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವ್ಯಕ್ತಿಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಲು ಒತ್ತಾಯ- ಓರ್ವನ ಬಂಧನ

    Live Tv
    [brid partner=56869869 player=32851 video=960834 autoplay=true]

  • ಹೆಂಡತಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ – ಆಸ್ತಿಗಾಗಿ ಅತ್ತೆಗೂ ಕಾಟ

    ಹೆಂಡತಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ – ಆಸ್ತಿಗಾಗಿ ಅತ್ತೆಗೂ ಕಾಟ

    ಬೆಂಗಳೂರು: ಈ ತಾಯಿ ಮಗನನ್ನು ಕಳೆದುಕೊಂಡು ಇಳಿವಯಸ್ಸಿನಲ್ಲೂ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸೊಸೆಯ ಕಾಟದಿಂದಾಗಿ ಬದುಕೇ ಬರಡಾಗಿದೆ. ಸೊಸೆ ಎಂದು ಬಂದ ಆ ಖತರ್ನಾಕ್ ಲೇಡಿ ಇಡೀ ಕುಟುಂಬದ ನೆಮ್ಮದಿಯನ್ನೇ ಬೀದಿ ಪಾಲು ಮಾಡಿದ್ದಾಳೆ.

    ಹೌದು ಈಕೆಯ ಹೆಸರು ರೇಣುಕಮ್ಮಾ. ವಯಸ್ಸು 60 ದಾಟಿದೆ. ಕೆಂಗೇರಿ ಬಳಿಯ ಸೂಲಿಕೆರೆಯಲ್ಲಿ ವಾಸವಾಗಿರುವ ಇವರ ಮಗ ಇತ್ತೀಚೆಗಷ್ಟೇ ಹೆಂಡತಿಯ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗಲೂ ತನ್ನ ಕಂದನ ನೆನೆದು ಈ ಜೀವ ಕಣ್ಣೀರು ಹಾಕುತ್ತಿದೆ. ಇಡೀ ಬದುಕೇ ಈಗ ಅಲ್ಲೋಲಕಲ್ಲೋಲವಾಗಿದೆ.

    ಹೆಂಡತಿಯ ಕಾಟದಿಂದ ಬದುಕೇ ಸಾಕು ಎಂದು ಮಗ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಸೊಸೆಯ ಕಾರಣದಿಂದ ಈ ಬಡ ಜೀವ ಹೆತ್ತ ಮಗುವನ್ನೂ ಕಳೆದುಕೊಂಡಿದೆ. ಬದುಕು ದುಸ್ತರವಾಗಿದೆ. ಇವರ ಮಗ ಮಂಜುನಾಥ್ ಜೂನ್ 1 ರಂದು ಮನನೊಂದು ಡೆತ್ ನೋಟ್ ಬರೆದಿಟ್ಟು ಪ್ರಾಣ ಚೆಲ್ಲಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದೆ ಸೊಸೆ ಅನಸೂಯ.

    ಈ ಅನಸೂಯ ಖತರ್ನಾಕ್ ಲೇಡಿ. ಮದುವೆಯಾಗಿ ಬಂದ ದಿನವೇ ದುಡ್ಡಿಗಾಗಿ ತನ್ನ ಅಸಲಿ ಮುಖವನ್ನು ಗಂಡ ಹಾಗೂ ಅತ್ತೆಗೆ ತೋರಿಸಿದ್ದಾಳೆ. ಮದುವೆಯ ದಿನದಂದೇ ಶುರುವಾದ ಕಲಹ ಸುಮಾರು 3-4 ವರ್ಷಗಳು ನಡೆದಿದೆ. ಕೊನೆಗೆ ಹೆಂಡತಿಯ ಹಿಂಸೆಗೆ ಡೆತ್ ನೋಟ್ ಬರೆದಿಟ್ಟು ಮಂಜುನಾಥ್ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾರೆ. ಇವಳ ಕಾಟ ಎಂಥದ್ದು ಎಂದರೆ, ರೌಡಿಗಳನ್ನು ಮನೆಗೆ ಕರೆಸಿ, ಪ್ರತಿನಿತ್ಯ ಪತಿ ಮಂಜುನಾಥ್ ಹಾಗೂ ತಾಯಿ ರೇಣುಕಮ್ಮಗೆ ದುಡ್ಡು, ಜಮೀನು ಅಂತ ಕಿರುಕುಳ ಕೊಡಿಸುತ್ತಿದ್ದಳು. ಗಂಡ ಸತ್ತ ಬಳಿಕವೂ ಇದೀಗ ಅನಸೂಯ ತನ್ನ ಅತ್ತೆಗೆ ಆಸ್ತಿ ಕೊಡುವಂತೆ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಬೈಕ್ ಜಪ್ತಿ ಮಾಡಿ ವಿಮೆ ಮಾಡಿಸಿದ ಪೊಲೀಸರು – ಕಣ್ಣೀರಿಟ್ಟ ಸವಾರ

    ಜೂನ್ 1ರಂದು ಡೆತ್ ನೋಟ್ ಬರೆದಿಟ್ಟು ಕೆಂಗೇರಿ ಬಳಿಯ ರಾಮಸಂದ್ರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ್, ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಹೆಂಡತಿ ಅನಸೂಯಾ ಕಾರಣ ಎಂದು ಬರೆದಿದ್ದರು. ಅಲ್ಲದೆ ತನ್ನ ಆಸ್ತಿ, ಹಣ ಯಾವುದನ್ನೂ ಹೆಂಡತಿಗೆ ಕೊಡಬಾರದು, ತಾಯಿಗೆ ಕೊಡಬೇಕು ಎಂದು ಹೇಳಿದ್ದರು. ಮಂಜುನಾಥ್ ಜೊತೆಗಿನ ಖಾಸಗಿ ವೀಡಿಯೋ ಮುಂದಿಟ್ಟುಕೊಂಡು ಪುಡಿ ರೌಡಿಗಳ ಜೊತೆ ಸೇರಿ ಬ್ಲಾಕ್‌ಮೇಲ್ ಕೂಡ ಮಾಡುತ್ತಿದ್ದಳು. ಸೈಟು, ಆಸ್ತಿಯನ್ನೆಲ್ಲಾ ತನ್ನ ಹೆಸರಿಗೆ ಬರೆದುಕೊಡುವಂತೆ ಮದುವೆಯ ಮರುದಿನವೇ ಕಿರುಕುಳ ಕೊಟ್ಟಿದ್ದಳು. ಇದರಿಂದ ಮನನೊಂದು ಮಂಜುನಾಥ್ ಒಂದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವ್ಯವಸ್ಥೆಯನ್ನು ಪ್ರಶ್ನಿಸಿದವರ ವಿರುದ್ಧ ಕೇಸ್ ಹಾಕುವುದು, ಬೆದರಿಸುವುದು ಮಾಡುತ್ತಿದ್ದಾರೆ: ಪ್ರಿಯಾಂಗ್ ವಿರುದ್ಧ ಮಣಿಕಂಠ್ ಕಿಡಿ

    ಈ ಹಿಂದೆ ಮಂಜುನಾಥ್ ಒಂದು ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ಅನಸೂಯಾಳನ್ನು ವರಿಸಿಕೊಂಡಿದ್ದರು. ಅನಸೂಯಾಳನ್ನು ಮದುವೆಯಾಗಿ ಕೆಲವೇ ವರ್ಷಕ್ಕೆ ಮನನೊಂದು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಜೈಲಿಗೂ ಹೋಗಿ ಬಂದಿದ್ದ ಮಂಜುನಾಥ್ ಎರಡನೇ ಪತ್ನಿ ಅನಸೂಯಾ, ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಮೃತ ಮಂಜುನಾಥ್ ತಾಯಿ ರೇಣುಕಮ್ಮಾರನ್ನು ಟಾರ್ಗೆಟ್ ಮಾಡಿದ್ದಾಳೆ. ಮಂಜುನಾಥ್ ಆಸ್ತಿ, ಹಣ ಎಲ್ಲವನ್ನೂ ತನಗೆ ಕೊಡುವಂತೆ ಕಿರುಕುಳ ಕೊಡುತ್ತಿದ್ದಾಳೆ. ಯಾರ ಆಶ್ರಯವೂ ಇಲ್ಲದೆ ರೇಣುಕಮ್ಮಾ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಯಾದ ಒಂದು ತಿಂಗಳಲ್ಲೇ ನವವಿವಾಹಿತೆ 4 ತಿಂಗಳ ಗರ್ಭಿಣಿ – ಪತಿ, ಅತ್ತೆ ಶಾಕ್

    ಮದುವೆಯಾದ ಒಂದು ತಿಂಗಳಲ್ಲೇ ನವವಿವಾಹಿತೆ 4 ತಿಂಗಳ ಗರ್ಭಿಣಿ – ಪತಿ, ಅತ್ತೆ ಶಾಕ್

    ಲಕ್ನೋ: ಮದುವೆಯಾಗಿ ಕೇವಲ ಒಂದೂವರೆ ತಿಂಗಳಷ್ಟೇ ಆಗಿದೆ. ಆದರೆ ನವವಿವಾಹಿತೆ ನಾಲ್ಕು ತಿಂಗಳ ಗರ್ಭಿಣಿಯಾಗಿರುವುದನ್ನು ತಿಳಿದ ಪತಿ ಮತ್ತು ಅತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್‍ಗಂಜ್‍ನಲ್ಲಿ ನಡೆದಿದೆ.

    ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನವವಿವಾಹಿತೆಗೆ ಸೋನೋಗ್ರಫಿ ಮಾಡಲಾಯಿತು. ಈ ವೇಳೆ ಗರ್ಭಿಣಿಯಾಗಿರುವ ವಿಚಾರ ತಿಳಿದ ಅತ್ತೆ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಮೋದಿ ‘ಮಾಫಿವೀರ್’ ಆಗಿ ದೇಶದ ಯುವಕರ ಕ್ಷಮೆ ಕೇಳಬೇಕು: ರಾಹುಲ್ ಗಾಂಧಿ

    ಇದೀಗ ಪತ್ನಿ ವಿರುದ್ಧ ಆಕೆಯ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಒಂದೂವರೆ ತಿಂಗಳ ಹಿಂದೆ ಗ್ರಾಮದ ಸಂಬಂಧಿಯೊಬ್ಬರ ಮೂಲಕ ಪಕ್ಕದ ಜಿಲ್ಲೆಯ ಹುಡುಗಿಯನ್ನು ಮದುವೆಯಾಗಿರುವುದಾಗಿ ತಿಳಿಸಿದ್ದಾರೆ. ಆದರೆ ಮದುವೆಯಾದ ಒಂದು ತಿಂಗಳಿನಲ್ಲಿಯೇ ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿರುವುದನ್ನು ತಿಳಿದು ವಂಚನೆಗೊಳಗಾಗಿರುವುದಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ‘ಅಗ್ನಿಪಥ್’ ವಿರೋಧದ ನಡುವೆ ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ

    ಮಗಳು ಗರ್ಭಿಣಿಯಾಗಿರುವ ವಿಚಾರ ಮೊದಲೇ ಆಕೆಯ ಕುಟುಂಬಸ್ಥರಿಗೆ ತಿಳಿದಿತ್ತು. ಆದರೂ ಈ ವಿಚಾರವನ್ನು ಮರೆ ಮಾಚಿ ಮದುವೆ ಮಾಡಿದ್ದಾರೆ ಎಂದು ನವವಿವಾಹಿತೆ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ ಎಂದು ಕೊಲ್ಹುಯಿ ಎಸ್‍ಎಚ್‍ಒ ಅಭಿಷೇಕ್ ಸಿಂಗ್ ಹೇಳಿದ್ದಾರೆ.

    Live Tv

  • ಮಕ್ಕಳಾಗ್ತಿಲ್ಲವೆಂದು ಸೊಸೆ ಕೋಣೆಗೆ ಇಬ್ಬರು ಪುತ್ರರನ್ನು ಬಿಟ್ಟ ಪಾಪಿ ಅತ್ತೆ!

    ಮಕ್ಕಳಾಗ್ತಿಲ್ಲವೆಂದು ಸೊಸೆ ಕೋಣೆಗೆ ಇಬ್ಬರು ಪುತ್ರರನ್ನು ಬಿಟ್ಟ ಪಾಪಿ ಅತ್ತೆ!

    ಲಕ್ನೋ: ಮಕ್ಕಳಾಗುತ್ತಿಲ್ಲವೆಂದು ಪಾಪಿ ಅತ್ತೆಯೊಬ್ಬಳು ಸೊಸೆಯಿದ್ದ ಕೋಣೆಗೆ ತನ್ನ ಮತ್ತಿಬ್ಬರ ಪುತ್ರರಿಬ್ಬರನ್ನು ಕಳುಹಿಸಿ ಅತ್ಯಾಚಾರ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಕೊತ್ವಾಲಿ ಪ್ರದೇಶದಲ್ಲಿ ನಡೆದಿದೆ.

    police (1)

    ಪಾಪಿ ಅತ್ತೆಗೆ ಮೂವರು ಗಂಡು ಮಕ್ಕಳು. ಓರ್ವ ಮಗನಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಆಕೆ ತನ್ನ ಸೊಸೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾಳೆ. ಇದರ ಸಲುವಾಗಿ ಸೊಸೆ ಮಲಗಿದ್ದ ಸಂದರ್ಭದಲ್ಲಿ ತನ್ನ ಇಬ್ಬರು ಪುತ್ರರನ್ನು ಆಕೆಯ ಕೋಣೆಗೆ ಕುಳಹಿಸಿದ್ದಾಳೆ. ಈ ಮೂಲಕ ಸೊಸೆಯ ಮೇಲೆ ಅತ್ಯಾಚಾರ ಮಾಡಲು ಪ್ರೇರೇಪಿಸಿದ್ದಾಳೆ. ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ ತನಿಖೆ CBIಗೆ ವಹಿಸುವಂತೆ ಬಿಜೆಪಿ ಒತ್ತಾಯ

    ಘಟನೆಯ ಬಳಿಕ ಸೊಸೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ದೂರಿನಲ್ಲಿ ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮೈದುನರಿಬ್ಬರು 2 ದಿನ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ- ಕೊಲೆ ಆರೋಪ

    ಈ ಬಗ್ಗೆ ತನಿಖೆ ನಡೆಸಿದಾಗ ಮೊಮ್ಮಗ ಬೇಕೆಂಬ ಆಸೆಗೆ ಮಹಿಳೆ ತನ್ನ ಸೊಸೆಯೊಂದಿಗೆ ಈ ದುಷ್ಕøತ್ಯ ಎಸಗಿರುವುದು ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಎಸ್ಪಿ ಸಿಟಿ ರಾಕೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಘಟನೆಯ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.

  • ವರ, ಅತ್ತೆ ಮನೆಯವರನ್ನು ಕೂಡಿ ಹಾಕಿ ರಾತ್ರೋರಾತ್ರಿ ಚಿನ್ನಾಭರಣ ಜೊತೆ ವಧು ಎಸ್ಕೇಪ್

    ವರ, ಅತ್ತೆ ಮನೆಯವರನ್ನು ಕೂಡಿ ಹಾಕಿ ರಾತ್ರೋರಾತ್ರಿ ಚಿನ್ನಾಭರಣ ಜೊತೆ ವಧು ಎಸ್ಕೇಪ್

    ಲಕ್ನೋ: ವರ ಮತ್ತು ಅತ್ತೆ ಮನೆಯವರನ್ನು ಮನೆಯೊಳಗೆ ಕೂಡಿ ಹಾಕಿ ಚಿನ್ನಾಭರಣ ದೋಚಿಕೊಂಡು ವಧು ರಾತ್ರೋ, ರಾತ್ರಿ ಪರಾರಿಯಾಗಿರುವ ಘಟನೆ ಆಗ್ರಾದಲ್ಲಿ ನಡೆದಿದೆ.

    ಏಪ್ರಿಲ್ 25ರಂದು ಆಗ್ರಾದ ಶಾಹಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮದುವೆಯಾಗಿ ಅತ್ತೆ ಮನೆಗೆ ಬಂದ ಕೇವಲ 10 ಗಂಟೆಗಳಲ್ಲೇ ವಧು ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾಳೆ. ಇದನ್ನೂ ಓದಿ: ಕಾತುವಕುಲಾ ರೆಂಡು ಕಾದಲ್’ ರಿಲೀಸ್: ತಿರುಪತಿ ಆಶೀರ್ವಾದ ಪಡೆದ ನಯನತಾರಾ, ವಿಘ್ನೇಶ್ ಶಿವನ್

    ಬೆಳ್ಳಿ ಕುಶಲಕರ್ಮಿಕನಾಗಿದ್ದ ಯುವಕ ವಧುವನ್ನು ಹುಡುಕುತ್ತಿದ್ದರು. ಇದೇ ವೇಳೆ ತಾಜ್‍ಗಂಜ್‍ನ ಕಾರ್ಖಾನೆಯ ಉದ್ಯೋಗಿಯೊಬ್ಬರು ತಮ್ಮ ಅತ್ತಿಗೆಗೆ ಎರಡು ತಿಂಗಳಿನಿಂದ ವರನನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದರು. ನಂತರ ಎರಡು ಕಡೆಯವರು ಭೇಟಿಯಾಗಿ ಮದುವೆಗೆ ಒಪ್ಪಿದರು. ಇದನ್ನೂ ಓದಿ:  90 ವರ್ಷದ ಬುದ್ಧಿಮಾಂದ್ಯ ತಾಯಿ, ಮಗನನ್ನು ಗುರುತಿಸುವ ಭಾವನಾತ್ಮಕ ವೀಡಿಯೋ ವೈರಲ್ 

    POLICE JEEP

    ವಧುವಿನ ಸೋದರ ಮಾವ, ಹುಡುಗಿ ಮನೆಯವರು ಬಡವರಾಗಿದ್ದು, ಮದುವೆಯ ವೆಚ್ಚವನ್ನು ಭರಿಸಲಾಗುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ವರನ ಮನೆಯವರು ಇಬ್ಬರೂ ಕಡೆಯವರ ಮದುವೆಯ ವೆಚ್ಚದ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡರು. ಬಳಿಕ ಏಪ್ರಿಲ್ 25 ರಂದು ಗೋರಖ್‍ಪುರದಲ್ಲಿ ಜೋಡಿ ಸಂಪ್ರದಾಯ ಪ್ರಕಾರ ವಿವಾಹವಾದರು. ಏಪ್ರಿಲ್ 26ರ ಬೆಳಗ್ಗೆ ವಧುವನ್ನು ವರನ ಕಡೆಯವರು ಆಗ್ರಾದಲ್ಲಿರುವ ತಮ್ಮ ಮನೆಗೆ ಕರೆದೊಯ್ದರು.

    ಏಪ್ರಿಲ್ 26ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ವಧು ನಿಧಾನವಾಗಿ ಎದ್ದು, ಮನೆಯ ಅಂಗಳದ ಗೋಡೆಯನ್ನು ಹತ್ತಿ ಪರಾರಿಯಾಗಿದ್ದಾಳೆ. ವಧು ಪರಾರಿಯಾಗುವ ಮುನ್ನ ತನ್ನ ಅತ್ತೆ ಮತ್ತು ವರನ ಕೋಣೆಯ ಬಾಗಿಲಿಗೆ ಹೊರಗಿನಿಂದ ಬೀಗ ಓಡಿಹೋಗಿದ್ದಾಳೆ. ಈ ವಿಚಾರ ತಿಳಿದ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ತಡರಾತ್ರಿ ವಧು ಹೊರಗೆ ಹೋಗುತ್ತಿರುವುದನ್ನು ಕಂಡ ಕಾಲೋನಿ ವಾಚ್‍ಮನ್ ಅನುಮಾನಗೊಂಡು ಗೇಟ್ ತೆರೆಯಲು ನಿರಾಕರಿಸಿದ್ದಾನೆ ಮತ್ತು ವಧುವನ್ನು ಪ್ರಶ್ನಿಸಲು ಮುಂದಾಗಿದ್ದಾನೆ. ಆಗ ವಾಚ್‍ಮನ್‍ಗೆ ವಧು ಬೆದರಿಕೆಯೊಡ್ಡಿ ಹೋಗಿದ್ದಾಳೆ.

    ಕೊನೆಗೆ ಬಾಗಿಲು ಒಡೆದು ಹಾಕಿ ವರ ಮತ್ತು ಆತನ ಕುಟುಂಬಸ್ಥರು ಮನೆಯಿಂದ ಹೊರಬಂದು ರಾತ್ರಿಯಿಡೀ ವಧುವನ್ನು ಹುಡುಕಾಡಿದ್ದಾರೆ. ಆದರೆ ವಧು ಪತ್ತೆಯಾಗಲಿಲ್ಲ. ಇದರಿಂದ ಬೇಸರಗೊಂಡ ಕುಟುಂಬಸ್ಥರು ಠಾಣೆಗೆ ಬಂದು ದೂರು ನೀಡಿದ್ದಾರೆ. ಸದ್ಯ ಪೊಲೀಸರು ಕಾಲೋನಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

  • ಸೊಸೆ ಮೇಲಿನ ಕೋಪಕ್ಕೆ ಮೊಮ್ಮಗಳನ್ನು ಬಲಿ ಪಡೆದ ಅತ್ತೆ

    ಸೊಸೆ ಮೇಲಿನ ಕೋಪಕ್ಕೆ ಮೊಮ್ಮಗಳನ್ನು ಬಲಿ ಪಡೆದ ಅತ್ತೆ

    ತುಮಕೂರು: ಸೊಸೆ ಮೇಲಿನ ಕೋಪಕ್ಕೆ ಏನೂ ಅರಿಯದ 2 ವರ್ಷದ ಪುಟಾಣಿ ಮೊಮ್ಮಗಳನ್ನು ಅತ್ತೆ ಬಲಿ ಪಡೆದಿರುವ ಅಮಾನವೀಯ ಘಟನೆ ಕುಣಿಗಲ್ ತಾಲೂಕಿನ ಸಾಸಲು ಗ್ರಾಮದಲ್ಲಿ ನಡೆದಿದೆ.

    ತ್ರಿಷಾ ಮೃತಪಟ್ಟ ಮಗು. ಹುಚ್ಚು ನಾಯಿ ಕಡಿತಕ್ಕೆ ಒಳಗಾದ 1 ತಿಂಗಳು 10 ದಿನದ ನಂತರ ಮಗು ಮೃತಪಟ್ಟಿದೆ. ಆರೋಪಿ ಜಯಮ್ಮ, ಹಸು ಮೇಯಿಸಲು ಹೊಲದ ಬಳಿ ಹೋಗುವಾಗ ತನ್ನ ಜೊತೆ ಮಗುವನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಹುಚ್ಚು ನಾಯಿಯೊಂದು ಹಸು ಹಾಗೂ ಮಗುವಿಗೆ ಕಚ್ಚಿದೆ. ಆದರೆ ಸೊಸೆ ಮೇಲಿನ ಕೋಪದಿಂದ ಈ ವಿಚಾರವನ್ನು ಯಾರಿಗೂ ಹೇಳದೇ ಜಯಮ್ಮ ಮುಚ್ಚಿಟ್ಟಿದ್ದರು. ಹುಚ್ಚು ನಾಯಿ ಕಡಿದ ಮೂರೇ ದಿನಕ್ಕೆ ಹಸು ಮೃತಪಟ್ಟಿತ್ತು. ಕಳೆದ ಒಂದು ವಾರದ ಹಿಂದೆ ಮಗು ತ್ರಿಷಾ ರಕ್ತ ವಾಂತಿ ಮಾಡಿಕೊಂಡಿತ್ತು. ಈ ವೇಳೆ ಪಾಲಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿಗೆ ಯಾವುದೋ ಬೆಕ್ಕು, ಇಲ್ಲ ನಾಯಿ ಕಚ್ಚಿರುವ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದರು. ಮಗು ಗಂಭೀರ ಸ್ಥಿತಿ ತಲುಪಿದ ಬಳಿಕ ಜಯಮ್ಮ ಹುಚ್ಚು ನಾಯಿ ಕಡಿದ ಬಗ್ಗೆ ಬಾಯ್ಬಿಟ್ಟರು. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಿಜೆಪಿ ಏಜೆಂಟ್: ಕಾಂಗ್ರೆಸ್

    ಘಟನೆ ನಡೆದು 1 ತಿಂಗಳು 10 ದಿನಗಳ ಬಳಿಕ ಎಲ್ಲ ವಿಚಾರವನ್ನು ಜಯಮ್ಮ ತಿಳಿಸಿದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ. ಮಗ ಪುಟ್ಟರಾಜುವಿಗೆ 2 ವರ್ಷದ ಹಿಂದೆ ಚಿಕ್ಕಮ್ಮ ಅವರ ಜೊತೆ ವಿವಾಹವಾಗಿತ್ತು. ಆದರೆ ಮಗನ ವಿವಾಹದ ಬಗ್ಗೆ ಜಯಮ್ಮ ಅಸಮಾಧಾನ ಹೊಂದಿದ್ದರು. ಅತ್ತೆ-ಸೊಸೆಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜಗಳದಲ್ಲಿ ಮಗುವಿಗೆ ಹುಚ್ಚು ನಾಯಿ ಕಡಿದ ವಿಷಯವನ್ನು ಅತ್ತೆ ಬಚ್ಚಿಟ್ಟಿದ್ದರು. ಇದೀಗ ಒಂದು ಎಡವಟ್ಟು ಮಗುವಿನ ಪ್ರಾಣ ಕಸಿದಿದೆ. ಈ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಯಾವುದೇ ಧರ್ಮದ ಬಗ್ಗೆ ಅಗೌರವ ತೋರಿದ್ರೆ ಸಹಿಸುವುದಿಲ್ಲ: ಭಗವಂತ್ ಮಾನ್

  • ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಮಚ್ಚಿನಿಂದ ಕೊಚ್ಚಿ ಹೆಂಡತಿ, ಅತ್ತೆ ಕೊಲೆ

    ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಮಚ್ಚಿನಿಂದ ಕೊಚ್ಚಿ ಹೆಂಡತಿ, ಅತ್ತೆ ಕೊಲೆ

    ಬೆಂಗಳೂರು: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದ ವ್ಯಕ್ತಿಯೋರ್ವ ಪತ್ನಿ ಹಾಗೂ ಅತ್ತೆಯನ್ನು ಕೊಂದಿರುವ ಘಟನೆ ಗೋವಿಂದರಾಜ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಸಾವಿತ್ರಿ ಹಾಗೂ ಸರೋಜಮ್ಮ ಎಂದು ಗುರುತಿಸಲಾಗಿದ್ದು, ರವಿಕುಮಾರ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಹೆಂಡತಿಯ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದ ರವಿಕುಮಾರ್, ಪದೇ ಪದೇ ಹೆಂಡತಿಗೆ ಬುದ್ಧಿವಾದ ಹೇಳಿದ್ದನು. ಆದರೂ ಹೆಂಡತಿ ತನ್ನ ಛಾಳಿಯನ್ನು ತಿದ್ದುಕೊಳ್ಳದ ಹಿನ್ನೆಲೆ ಮೊದಲು ವಾಸ ಮಾಡುತ್ತಿದ್ದ ಮನೆಯನ್ನು ಖಾಲಿ ಮಾಡಿ ಬೇರೆ ಕಡೆ ಮನೆ ಮಾಡಿದನು. ಬಳಿಕವೂ ಹೆಂಡತಿ ತನ್ನ ಹಳೇ ಗೆಳಯನನ್ನು ಬಿಟ್ಟಿರಲಿಲ್ಲ. ಇದರಿಂದ ಬೇಸತ್ತ ರವಿಕುಮಾರ್ ಇಂದು ಮಕ್ಕಳನ್ನು ಸ್ವತಃ ತಾನೇ ಸ್ಕೂಲ್‍ಗೆ ಬಿಟ್ಟಿದ್ದಾನೆ. ಇದನ್ನೂ ಓದಿ:  ಉಗ್ರರ ಪತ್ತೆಗೆ ಗಾಜಿಯಾಬಾದ್ ಕವಿಯನ್ನು ನೇಮಿಸಿಕೊಳ್ಳಿ: ಕೇಜ್ರಿವಾಲ್ ವ್ಯಂಗ್ಯ

    ನಂತರ ಸ್ಕೂಲಿನಿಂದ ಮನೆಗೆ ಬಂದು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಎಳ ನೀರು ಕೊಚ್ಚುವ ಮಚ್ಚಿನಿಂದ ಪತ್ನಿ ಸಾವಿತ್ರಿ ಮತ್ತು ಆಕೆಯ ತಾಯಿ ಸರೋಜಮ್ಮ ಇಬ್ಬರನ್ನೂ ಕೊಚ್ಚಿ ಕೊಂದಿದ್ದಾನೆ. ಕೊಲೆ ಮಾಡಿ ತಕ್ಷಣ ತಾನೇ ತನ್ನ ಸ್ಕೂಟರ್ ಮೂಲಕ ಪೊಲೀಸ್ ಠಾಣೆಗೆ ತೆರಳಿ ಹೆಂಡತಿಯನ್ನು ಹತ್ಯೆ ಮಾಡಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾನೆ. ಇದನ್ನೂ ಓದಿ:  ಉಗ್ರರ ಪತ್ತೆಗೆ ಗಾಜಿಯಾಬಾದ್ ಕವಿಯನ್ನು ನೇಮಿಸಿಕೊಳ್ಳಿ: ಕೇಜ್ರಿವಾಲ್ ವ್ಯಂಗ್ಯ

     

  • ಅಳಿಯನ ಆಸ್ತಿ ಮೇಲೆ ಅತ್ತೆಯ ಕಣ್ಣು – ಮನನೊಂದು ಅಳಿಯ ಆತ್ಮಹತ್ಯೆ

    ಅಳಿಯನ ಆಸ್ತಿ ಮೇಲೆ ಅತ್ತೆಯ ಕಣ್ಣು – ಮನನೊಂದು ಅಳಿಯ ಆತ್ಮಹತ್ಯೆ

    ಬೆಂಗಳೂರು/ನೆಲಮಂಗಲ: ಅಳಿಯನ ಆಸ್ತಿಯನ್ನು ಕಬಳಿಸುವ ದುರುದ್ದೇಶದಿಂದ ಸಂಚು ಹಾಕಿದ ಅತ್ತೆ ಪ್ರತಿನಿತ್ಯ ತನ್ನ ಮಗಳ ಪತಿಯನ್ನು ಮನೆಯಲ್ಲಿ ಕೂಡಿ ಹಾಕಿ ಟಾರ್ಚರ್ ಕೊಟ್ಟ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯ ತೋಟನಹಳ್ಳಿಯಲ್ಲಿ ನಡೆದಿದೆ.

    Nela mangala

    ಮೃತ ದುರ್ದೈವಿಯನ್ನು ಆನಂದ್ ಕುಮಾರ್ ಎಂದು ಗುರುತಿಸಲಾಗಿದ್ದು, ಇನ್ನೂ ಅತ್ತೆಯ ಜೊತೆಗೆ ತನ್ನ ಪತ್ನಿ ನೀಲಮ್ಮ ಕೂಡ ಕೈ ಜೋಡಿಸಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅತ್ತೆ ಗಂಗಮ್ಮ, ಬಾಮೈದ ಗಂಗರಾಜು ಹೆಸರು ಪ್ರಸ್ತಾಪಿಸಿ ಮನನೊಂದು ಆನಂದ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಹಿಜಬ್ ನೆಪವೊಡ್ಡಿ ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡಲಾಗ್ತಿದೆ: ಮುಫ್ತಿ

    Nela mangala

    ಆತ್ಮಹತ್ಯೆಗೂ ಮೊದಲು ತನ್ನ ಮೊಬೈಲ್‍ನ ವೀಡಿಯೋದಲ್ಲಿ ತನಗೆ ನೀಡಿದ್ದ ಹಿಂಸೆ ಬಗ್ಗೆ ಮಾತನಾಡಿರುವ ಮೃತ ವ್ಯಕ್ತಿ ಜೊತೆಗೆ ತನ್ನ ಆಸ್ತಿಯನ್ನು ತಮ್ಮನ ಮಕ್ಕಳಿಗೆ ನೀಡಬೇಕು ಎಂದು ಡೆತ್ ನೋಟ್‍ನಲ್ಲಿ ಉಲ್ಲೇಖ ಮಾಡಿದ್ದಾರೆ ಮತ್ತು ಯಾವುದೇ ಕಾರಣಕ್ಕೂ ಆಸ್ತಿ ಹೆಂಡತಿ ಹಾಗೂ ಅತ್ತೆಗೆ ಸಿಗದಂತೆ ಕಾನೂನು ರೀತಿಯಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಈ ಸಂಬಂಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಅತ್ತೆಯನ್ನು ಕೊಂದು, ಮೃತ ದೇಹಕ್ಕೆ ಬೆಂಕಿ ಹಚ್ಚಿದ ಸೊಸೆ

    ಅತ್ತೆಯನ್ನು ಕೊಂದು, ಮೃತ ದೇಹಕ್ಕೆ ಬೆಂಕಿ ಹಚ್ಚಿದ ಸೊಸೆ

    ಚೆನ್ನೈ: ಅತ್ತೆಯನ್ನು ಸ್ಕ್ರ್ಯೂಡ್ರೈವರ್‌ನಿಂದ ಇರಿದು ಕೊಂದು ನಂತರ ಮೃತ ದೇಹಕ್ಕೆ ಬೆಂಕಿ ಹಚ್ಚಿದ ಸೊಸೆ, ಬೆಂಕಿ ದುರಂತದಿಂದ ಅತ್ತೆ ಸಾವನ್ನಪ್ಪಿದ್ದಾರೆ ಎಂಬಂತೆ ಬಿಂಬಿಸಲು ಪ್ರಯತ್ನಿಸಿ ಸಿಕ್ಕಿ ಬಿದ್ದಿರುವ ಘಟನೆ ತಮಿಳುನಾಡಿನ ವಿಶ್ವಾಸ್‍ನಗರದಲ್ಲಿ ನಡೆದಿದೆ.

    ನವೀನಾ (46) ಮೃತ ಅತ್ತೆ. 27 ವರ್ಷದ ಸೊಸೆ ರೇಷ್ಮಾ ಅತ್ತೆಯನ್ನು ಕೊಂದ ಆರೋಪಿಯಾಗಿದ್ದಾಳೆ. ನವೀನಾ ತಾಯಿ ಎಸ್.ಶಕಿಂಶಾ ಪೊಲೀಸರಿಗೆ ದೂರು ನೀಡಿದ್ದು, ತನ್ನ ಮಗಳು ಬೆಂಕಿಯಿಂದ ಸುಟ್ಟ ಗಾಯದಿಂದ ಸತ್ತಿದ್ದಾಳೆ. ಆದರೆ ಆಕೆಯ ತಲೆ ಮೇಲೆ ಗಾಯವಾಗಿದೆ. ನನ್ನ ಮಗಳಿಗೆ ಹೀಗೆ ಆಗುವಾಗ ಆಕೆಯ ಸೊಸೆ ರೇಷ್ಮಾ ಮತ್ತು ಅವಳ 2ವರ್ಷದ ಮಗ ಅಲ್ಲಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: NEW YEAR ಬಾಡೂಟಕ್ಕೆ ಕುರಿ ಕದ್ದ ಎಎಸ್‌ಐ!

    ಪೊಲೀಸರು ರೇಷ್ಮಾಳನ್ನು ವಿಚಾರಣೆಗೆ ಒಳಪಡಿಸಿದಾಗ, ನವೀನಾ ಮೊದಲು ಅಡುಗೆ ಮನೆಯಲ್ಲಿ ನೆಲದ ಮೇಲೆ ಬಿದ್ದರು. ನಂತರ ತನ್ನನ್ನು ಎತ್ತುವಂತೆ ನನ್ನ ಬಳಿ ಕೇಳಿದಳು. ಆದರೆ ಸ್ವಲ್ಪ ತಡವಾಗುತ್ತಿದ್ದಂತೆ ನನ್ನನ್ನು ನಿಂದಿಸಲು ಪ್ರಯತ್ನ ಪಟ್ಟಳು. ಆಗ ನನಗೆ ಕೋಪ ಬಂದು, ಅಲ್ಲಿಯೇ ಇದ್ದ ಸ್ಕ್ರ್ಯೂಡ್ರೈವರ್‌ನಿಂದ ಹಲವು ಬಾರಿ ಇರಿದು, ಹೊಡೆದು ಕೊಂದೆ. ನಂತರ ಅದನ್ನು ಬೆಂಕಿ ಅನಾಹುತವೆಂದು ಬಿಂಬಿಸಲು ಯತ್ನಿಸಿದೆ ಎಂದು ಒಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

    ಸದ್ಯ ರೇಷ್ಮಾಳನ್ನು ಪೊಲೀಸರು ಬಂಧಿಸಿದ್ದಾರೆ. ಅತ್ತೆ ನವೀನಾ ದೇಹವನ್ನು ಪೋಸ್ಟ್ ಮಾರ್ಟಮ್‍ಗೆ ಕಳುಹಿಸಲಾಗಿದೆ.