Tag: mother in law

  • ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ ಅತ್ತೆ ಕೊಂದಿದ್ದ ಸೊಸೆ ಅರೆಸ್ಟ್

    ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ ಅತ್ತೆ ಕೊಂದಿದ್ದ ಸೊಸೆ ಅರೆಸ್ಟ್

    ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಸೊಸೆ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ರಶ್ಮಿ, ಪುರುಷೋತ್ತಮ್, ಅಕ್ಷಯ್ ಬಂಧಿತ ಆರೋಪಿಗಳು. ಈ ಮೂವರನ್ನು ಬ್ಯಾಡರಹಳ್ಳಿ ಪೊಲೀಸರು (Byadarahalli Police Station) ಬಂಧಿಸಿದ್ದಾರೆ.

    ಘಟನೆ ಏನು..?: ರಶ್ಮಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತನ ಜೊತೆ ಸೇರಿ ಅತ್ತೆ ಲಕ್ಷ್ಮಮ್ಮನನ್ನ ಕೊಂದಿದ್ದಳು. ಇದನ್ನೂ ಓದಿ: 10 ಲಕ್ಷ ರೂ. ಖರ್ಚು ಮಾಡಿ ತನ್ನನ್ನು ತಾನೇ ಮದುವೆಯಾದ ಮಹಿಳೆ

    ಆರೋಪಿ ರಶ್ಮಿಯು ಮಂಜುನಾಥ್ ಎಂಬಾತನನ್ನು ಮದುವೆಯಾಗಿದ್ದಳು. ಆದರೆ ಕ್ರಮೇಣ ತಮ್ಮ ಮನೆಯ ಮೇಲೆ ಬಾಡಿಗೆಗೆ ಇದ್ದ ಅಕ್ಷಯ್ ಜೊತೆ ಸಂಪರ್ಕ ಹೊಂದಿದ್ದಳು. ಇತ್ತ ಮನೆಯ ಹಣದ ವ್ಯವಹಾರ ಸಂಬಂಧ ಲಕ್ಷ್ಮಮ್ಮ ಹಾಗೂ ರಶ್ಮಿ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ತಾನೇ ಮನೆ ವ್ಯವಹಾರ ನೋಡಿಕೊಳ್ಳಬೇಕು ಎಂದು ರಶ್ಮಿ ಕಾದು ಕುಳಿತಿದ್ದಳು. ಅದರಂತೆ ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೇ ಕೊಲೆ ಮಾಡುವ ಪ್ಲಾನ್ ಮಾಡಿದ್ದಳು.

    ಅಕ್ಟೋಬರ್ 10ರಂದು ಪ್ರಿಯಕರ ಅಕ್ಷಯ್ ಮತ್ತು ಆತನ ಸ್ನೇಹಿತ ಪುರುಷೋತ್ತಮ್ ಜೊತೆ ಸೇರಿ ಉಸಿರುಗಟ್ಟಿಸಿ ಅತ್ತೆಯನ್ನು ಕೊಲೆ ಮಾಡಿದ್ದಳು. ನಂತರ ಹಾರ್ಟ್ ಅಟ್ಯಾಕ್ ಅಂತಾ ಸೀನ್ ಕ್ರಿಯೇಟ್ ಮಾಡಿದ್ದರು.

    ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೈಪರ್ ಟೆನ್ಷನ್, ಮೂಡ್ ಸ್ವಿಂಗ್ ಖಾಯಿಲೆಯಿಂದ ಬಳಲುತ್ತಿರೋ ಪತ್ನಿಯಿಂದ ಪತಿಗೆ ಕಿರುಕುಳ

    ಹೈಪರ್ ಟೆನ್ಷನ್, ಮೂಡ್ ಸ್ವಿಂಗ್ ಖಾಯಿಲೆಯಿಂದ ಬಳಲುತ್ತಿರೋ ಪತ್ನಿಯಿಂದ ಪತಿಗೆ ಕಿರುಕುಳ

    ಬೆಂಗಳೂರು: ಹೈಪರ್ ಟೆನ್ಷನ್ ಹಾಗೂ ಮೂಡ್ ಸ್ವಿಂಗ್ ಖಾಯಿಲೆಯಿಂದ ಬಳಲುತ್ತಿರುವ ಪತ್ನಿಯು ಪತಿಗೆ ಕಿರುಕುಳ ನೀಡಿರುವ ಪ್ರಕರಣವೊಂದು ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    ಪತ್ನಿ ಹಾಗೂ ಅತ್ತೆಯ ಕಿರುಕುಳ ಹಾಗೂ ಹಲ್ಲೆಯಿಂದ ಬೇಸತ್ತು ಕರುಣಾಕರನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ದನಗಳ ಮೈ ತೊಳೆಯಲು ಹೋದ ರೈತ ನೀರು ಪಾಲು

    ಮ್ಯಾಟ್ರಿಮೋನಿಯಲ್ಲಿ ಲೇಖನಾಶ್ರೀ ಪರಿಚಯವಾಗಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಕರುಣಾಕರಣ್ ಮದುವೆಯಾಗಿದ್ದ. ಇದೀಗ ಪತ್ನಿ ಹಾಗೂ ಆಕೆಯ ತಾಯಿ ಐದು ವರ್ಷದ ಹಿಂದಿನ ಕೆಲ ಖಾಸಗಿ ಫೋಟೋಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಕರುಣಾಕರನ್ ದೂರಿದ್ದಾರೆ.

    ಐದು ವರ್ಷದ ಫೋಟೋಗಳನ್ನ ಇಟ್ಟುಕೊಂಡು ತೊಂದರೆ ನೀಡಿದ್ದ ಹಿನ್ನೆಲೆಯಲ್ಲಿ ಕರುಣಾಕರನ್ ಚೆನ್ನೈಗೆ ತೆರಳಿದ್ದ. ಈ ವೇಳೆ ಪತ್ನಿ ಹಾಗೂ ಅತ್ತೆ ಮಿಸ್ಸಿಂಗ್ ಕಂಪ್ಲೆಂಟ್ ಕೂಡ ನೀಡಿದ್ದರು. ನಂತರ ಮನೆಗೆ ಬಂದಾಗ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಪತ್ನಿ ಹಾಗೂ ಅತ್ತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರುಣಾಕರನ್ ದೂರಿನಲ್ಲಿ ತಿಳಿಸಿದ್ದಾರೆ.

    ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗಳಿಗೆ ವಿಚ್ಛೇದನ ಕೊಡಲು ಪ್ರೋತ್ಸಾಹಿಸಿದ ಅತ್ತೆಯನ್ನೇ ಹತ್ಯೆಗೈದ ಅಳಿಯ

    ಮಗಳಿಗೆ ವಿಚ್ಛೇದನ ಕೊಡಲು ಪ್ರೋತ್ಸಾಹಿಸಿದ ಅತ್ತೆಯನ್ನೇ ಹತ್ಯೆಗೈದ ಅಳಿಯ

    ಅಮರಾವತಿ: ಮಗಳನ್ನು ವಿಚ್ಛೇದನ (Divorce) ಕೊಡುವಂತೆ ಪ್ರೋತ್ಸಾಹಿಸಿದ ಕಾರಣಕ್ಕಾಗಿ ಅತ್ತೆಯನ್ನೇ (Mother-In-Law) ಅಳಿಯ ಹತ್ಯೆ ಮಾಡಿದ ಘಟನೆ ಆಂಧ್ರಪ್ರದೇಶದ (Andhra Pradesh) ವಿಜಯವಾಡದ (Vijayawada) ಫ್ಲೈಓವರ್ (Flyover) ಮೇಲೆ ಶನಿವಾರ ನಡೆದಿದೆ.

    ನಾಗಮಣಿ (47) ಕೊಲೆಯಾದ ಮಹಿಳೆ. ಆರೋಪಿ ರಾಜೇಶ್ (37) ಸುಮಾರು 9 ಗಂಟೆಯ ವೇಳೆಗೆ ಆತನ ಅತ್ತೆಯನ್ನು ಚನುಮೋಲು ವೆಂಕಟರಾವ್ ಫ್ಲೈಓವರ್ ಮೇಲೆ ಕೊಂದಿದ್ದಾನೆ. ಆರೋಪಿ ರಾಜೇಶ್‌ಗೆ ಆತನ ಹೆಂಡತಿ ವಿಚ್ಛೇದನ ನೀಡಲು ಮುಂದಾಗಿದ್ದಳು. ಈ ವಿಚ್ಛೇದನದ ಅರ್ಜಿ ನ್ಯಾಯಾಲಯದಲ್ಲಿ ಬಾಕಿ ಇದ್ದು, ಮಗಳಿಗೆ ವಿಚ್ಛೇದನ ನೀಡುವಂತೆ ಪ್ರೋತ್ಸಾಹಿಸಿದ್ದಕ್ಕಾಗಿ ನಾಗಮಣಿಯನ್ನು ಹತ್ಯೆ ಮಾಡಿದ್ದಾನೆ ಎಂದು ವಿಜಯವಾಡ ಪಶ್ಚಿಮ ಎಸಿಪಿ ಹನುಮಂತ ರಾವ್ ತಿಳಿಸಿದ್ದಾರೆ. ಇದನ್ನೂ ಓದಿ: ನವಜೋಡಿ ಸೇರಿ ಐವರು ಸಂಬಂಧಿಗಳನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ

    ಪೊಲೀಸರ ಪ್ರಕಾರ, ವಿಚ್ಛೇದನ ನೀಡುವಂತೆ ತನ್ನ ಮಗಳಿಗೆ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಿದ ಹಿನ್ನೆಲೆ ರಾಜೇಶ್ ನಾಗಮಣಿಯ ಮೇಲೆ ದ್ವೇಷ ಹೊಂದಿದ್ದ. ತಾನು ಪತ್ನಿಯಿಂದ ದೂರವಾಗಲು ಅತ್ತೆ-ಮಾವಂದಿರೇ ಕಾರಣ ಎಂದು ಭಾವಿಸಿ ಅತ್ತೆಯನ್ನು ತೆಂಗಿನಕಾಯಿ ತುಂಡರಿಸುವ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: 20 ಜನರ ಮೇಲೆ ದಾಳಿ ಮಾಡಿದ್ದ ಮೋಸ್ಟ್ ವಾಂಟೆಡ್ ಕೋತಿ ಕೊನೆಗೂ ಸೆರೆ

    ಘಟನೆಯಿಂದ ನಾಗಮಣಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆರೋಪಿಯ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ರಾಜೇಶ್ ಮನೆಮನೆಗೆ ಬಟ್ಟೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದು, ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಮಾಜಿ ಪ್ರಿಯಕರನ ಕಿಡ್ನಾಪ್ – 21 ಲಕ್ಷ ರೂ. ದೋಚಿದ ಪ್ರಿಯತಮೆ

  • ಪತ್ನಿಯನ್ನು ಕರೆತರಲು ಹೋಗಿ ಅತ್ತೆಗೆ ಚಾಕು ಇರಿದು ಪರಾರಿಯಾದ!

    ಪತ್ನಿಯನ್ನು ಕರೆತರಲು ಹೋಗಿ ಅತ್ತೆಗೆ ಚಾಕು ಇರಿದು ಪರಾರಿಯಾದ!

    ಬೆಂಗಳೂರು: ವ್ಯಕ್ತಿಯೊಬ್ಬ ತವರು ಮನೆಗೆ ತೆರಳಿದ್ದ ತನ್ನ ಪತ್ನಿಯನ್ನು ಕರೆದುಕೊಂಡು ಬರಲೆಂದು ಹೋಗಿ ಅತ್ತೆಗೆ ಚಾಕು ಇರಿದ (Mother-in-Law was Stabbed By Son In Law) ಪರಾರಿಯಾಗುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಗೀತಾ ಅಳಿಯ ಮನೋಜ್ ನಿಂದ ಚಾಕು ಇರಿತಕ್ಕೊಳಾಗದ ಅತ್ತೆ. ಈ ಘಟನೆ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ನಡೆದಿದೆ. ಕೋಲಾರ ಮೂಲದ ಮನೋಜ್ ಬೌನ್ಸರ್ (Bouncer) ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಮಂಡ್ಯ ಮೂಲದ ವರ್ಷಿತಾ ಪರಿಚಯವಾಗಿ ಮನೆಯವರ ವಿರೋಧದ ನಡುವೆ ಪ್ರೀತಿಸಿ (Love Marriage) ಮದುವೆಯಾಗಿದ್ದರು. ಮದುವೆಯ ನಂತರ ಕುಡಿದು ಬಂದು ಗಲಾಟೆ ಮಾಡ್ತಾನೆ ಅನ್ನೋ ಕಾರಣಕ್ಕೆ ಪತ್ನಿ ಗಂಡನ ಮನೆ ಬಿಟ್ಟು ತವರು ಮನೆಗೆ ಬಂದಿದ್ದ.

    ಹೆಂಡತಿಯನ್ನು ಜೊತೆಗೆ ಕಳುಹಿಸಿ ಕೊಡುವಂತೆ ಅತ್ತೆಯ ಜೊತೆಗೆ ಗಲಾಟೆ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಅಳಿಯ ಅತ್ತೆಗೆ ಚಾಕು ಇರಿದು ಪರಾರಿಯಾಗಿದ್ದಾನೆ.

    ಸದ್ಯ ಆರೋಪಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನಿಗೋಸ್ಕರ ಪತಿಯನ್ನೇ ಮುಗಿಸಿದ ಖತರ್ನಾಕ್ ಲೇಡಿ – ಕೊನೆಗೇನಾಯ್ತು ನೋಡಿ..

  • ಬಿಸಿ ಟೀ ತಂದುಕೊಡದ್ದಕ್ಕೆ ಗದರಿದ ಅತ್ತೆ- ರಾಡ್‍ನಿಂದ ಹೊಡೆದು ಕೊಲೆಗೈದ ಸೊಸೆ

    ಬಿಸಿ ಟೀ ತಂದುಕೊಡದ್ದಕ್ಕೆ ಗದರಿದ ಅತ್ತೆ- ರಾಡ್‍ನಿಂದ ಹೊಡೆದು ಕೊಲೆಗೈದ ಸೊಸೆ

    ಚೆನ್ನೈ: ಬಿಸಿ ಟೀ (Tea) ತಂದುಕೊಡದ್ದಕ್ಕೆ ಗದರಿದ ಅತ್ತೆಯನ್ನೇ ಸೊಸೆ ರಾಡ್‍ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ.

    ಕೊಲೆಯಾದವರನ್ನು ವಿರಾಲಿಮಲೈ ಮೂಲದ ಪಳನಿಯಮ್ಮಾಳ್ ಎಂದು ಗುರುತಿಸಲಾಗಿದೆ. ಇವರು ತಮಿಳುನಾಡಿನ ಪುದುಕೋಟೆ (Pudukote Tamilnadu) ಜಿಲ್ಲೆಯವರು. ಇವರನ್ನು ಸೊಸೆ ಕನಕು ಕೊಲೆ ಮಾಡಿದ್ದಾಳೆ.

    ನಡೆದಿದ್ದೇನು..?: ಪಳನಿಯಮ್ಮಾಳ್‍ಗೆ ಟೀ ತರಲು ಸೊಸೆಯನ್ನು ಅಂಗಡಿಗೆ ಕಳುಹಿಸುತ್ತಿದ್ದಳು. ಹಿಂದಿನ ದಿನವೂ ಇದೇ ರೀತಿಯಲ್ಲಿ ಪಳನಿಯಮ್ಮಾಳ್ ತನ್ನ ಸೊಸೆಯನ್ನು ಟೀ ತರಲು ಕಳುಹಿಸಿದ್ದರು. ಆದರೆ ಅಂದು ಅತ್ತೆ ಪಳನಿಯಮ್ಮಾಳ್ ಬಿಸಿ ಟೀ ತಂದಿಲ್ಲ ಎಂದು ಗದರಿಸಿದ್ದಾಳೆ. ಇದರಿಂದ ಕೋಪಗೊಂಡ ಸೊಸೆ ಕನಕು ಸೈಕಲ್ ರಿಪೇರಿಗೆ ಬಳಸುವ ಕಬ್ಬಿಣದ ರಾಡ್‍ನಿಂದ ಪಳನಿಯಮ್ಮಾಳ್ ತಲೆಗೆ ಜೋರಾಗಿ ಹೊಡೆದಿದ್ದಾಳೆ. ಇದರಿಂದ ಪಳನಿಯಮ್ಮಾಳ್ ತೀವ್ರ ರಕ್ತಸ್ರಾವದಿಂದಾಗಿ ಮೂರ್ಛೆ ಹೋಗಿದ್ದಾರೆ.

    ಸಾಂದರ್ಭಿಕ ಚಿತ್ರ

    ಗಂಭೀರವಾಗಿ ಗಾಯಗೊಂಡಿದ್ದ ಅತ್ತೆ ಪಳನಿಯಮ್ಮಾಳ್‍ಳನ್ನು ನೆರೆಹೊರೆಯವರು ಸೇರಿ ಸ್ಥಳೀಯ ವಿರಾಲಿಮಲೈ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಲ್ಲಿ ಚಿಕಿತ್ಸೆ ಫಲಿಸಿದ ಪರಿಣಾಮ ಸಂಬಂಧಿಕರು ಪಳನಿಮ್ಮಾಳ್ ಅವರನ್ನು ತಿರುಚ್ಚಿ ಆಸ್ಪತ್ರೆಗೆ ದಾಖಲಿದ್ದಾರೆ. ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಭಾರೀ ಅಗ್ನಿ ಅವಘಡ- ಹೊತ್ತಿ ಉರಿದ ಪ್ಲಾಸ್ಟಿಕ್ ಗೊಡಾನ್

    ಅಸ್ವಸ್ಥ ಸೊಸೆ: ಮಾನಸಿಕ ಅಸ್ವಸ್ಥೆಯಾಗಿರುವ ಕನಕುಗೆ ಪ್ರತಿನಿತ್ಯ ಔಷಧಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಆಕೆ ಮಾತ್ರೆ ತೆಗದುಕೊಂಡಿರಲಿಲ್ಲ. ಹೀಗಾಗಿ ಅತ್ತೆ ಗದರಿದ್ದಕ್ಕೆ ಸಿಟ್ಟು ಬಂದು ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದಾಳೆ.

    ಘಟನೆ ಬಳಿಕ ಕನಕು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಸೊಸೆ ಸ್ನೇಹ ಬಯಸೋ ಅತ್ತೆಗೆ ಈ ಗುಣ ಇರುತ್ತಂತೆ..

    ಸೊಸೆ ಸ್ನೇಹ ಬಯಸೋ ಅತ್ತೆಗೆ ಈ ಗುಣ ಇರುತ್ತಂತೆ..

    ಸಂಸಾರದಲ್ಲಿ ಅತ್ತೆ-ಸೊಸೆ ಅಂದ್ರೆ ಥಟ್ಟನೆ ನೆನಪಾಗೋದು ಹಾವು-ಮುಂಗುಸಿ. ಬಹುಪಾಲು ಮನೆಗಳಲ್ಲಿ ಅತ್ತೆ-ಸೊಸೆ ಸದಾ ಜಗಳ ಇದ್ದೇ ಇರುತ್ತೆ. ಒಬ್ಬರಿಗೆ ಒಬ್ಬರನ್ನು ಕಂಡ್ರೆ ಹಾಗಲ್ಲ. ಒಬ್ಬರ ಕೆಲಸ, ಕಾರ್ಯಗಳು ಇನ್ನೊಬ್ಬರಿಗೆ ಆಗಲ್ಲ. ಪರಸ್ಪರರಲ್ಲಿ ತಪ್ಪು ಹುಡುಕುವುದು, ಕೊಂಕು ಮಾತು… ಹೀಗೆ ಒಂದಲ್ಲಾ ಒಂದು ರಗಳೆ. ಥೇಟ್‌ ಈಗಿನ ಧಾರಾವಾಹಿಗಳ ಥರಾನೆ ಅಂದುಕೊಳ್ಳಿ.

    ಆದ್ರೆ ಎಲ್ಲಾ ಮನೆಗಳಲ್ಲೂ ಅತ್ತೆ-ಸೊಸೆ ಜಗಳ ಇರುತ್ತೆ ಅಂದುಕೊಳ್ಳೋದು ತಪ್ಪು. ಎಷ್ಟೋ ಕಡೆ ಮಾದರಿ ಅತ್ತೆ-ಸೊಸೆಯರಿರುತ್ತಾರೆ. ಅವರನ್ನು ನೋಡಿದ್ರೆ ಸಾಕು, ಅತ್ತೆ-ಸೊಸೆ ಅಂದ್ರೆ ಹೀಗಿರಬೇಕು ಎಂದುಕೊಳ್ಳುವಷ್ಟು ಅನ್ಯೋನ್ಯವಾಗಿರುತ್ತಾರೆ. ಈಗಿನ ಕಾಲದ ಎಷ್ಟೋ ಸೊಸೆಯಂದಿರಿಗೆ ತಮ್ಮ ಅತ್ತೆ (Mother In Law) ನಡತೆ, ಗುಣಗಳನ್ನು ಅರಿತುಕೊಳ್ಳವುದಕ್ಕೂ ಕಷ್ಟ ಪಡ್ತಾರೆ. ಅತ್ತೆಯನ್ನು ಅರ್ಥ ಮಾಡಿಕೊಳ್ಳೋದೆ ಕಷ್ಟ ಅಂತಾರೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    ಒಳ್ಳೆ ಮನಸ್ಸಿನ ಅತ್ತೆಯಂದಿರು ತನ್ನ ಸೊಸೆ ಜೊತೆ ಸ್ನೇಹಿತೆಯಂತೆ ಇರಲು ಇಷ್ಟ ಪಡ್ತಾರೆ. ಸೊಸೆ (Daughter In Law) ಜೊತೆ ಅವರ ನಡವಳಿಕೆಗಳೇ ಅದನ್ನು ಸೂಚಿಸುತ್ತದೆ. ನಿಮ್ಮ ಅತ್ತೆಗೆ ಈ ಗುಣಗಳಿದ್ರೆ, ಖಂಡಿತವಾಗಿಯೂ ಅವರು ನಿಮ್ಮೊಟ್ಟಿಗೆ ಸ್ನೇಹದಿಂದಿರಲು ಪ್ರಯತ್ನಿಸುತ್ತಿದ್ದಾರೆ ಅಂತಾ ಅರ್ಥ. ಅತ್ತೆಯ ಅಂತಹ ಗುಣಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಸೊಸೆಯರಿಗೆ ಇಲ್ಲಿದೆ ನೋಡಿ ಮಾಹಿತಿ.

    ನಿಮ್ಮ ಅಭಿಪ್ರಾಯಗಳನ್ನ ಗೌರವಿಸುತ್ತಾರೆ
    ಎಷ್ಟೋ ಮಂದಿ ಅತ್ತೆಯಂದಿರು, ನೀವು (ಸೊಸೆ) ಏನೋ ಯೋಚಿಸುತ್ತಿದ್ದೀರಿ, ಏನನ್ನೋ ಹೇಳಲು ಬಯಸುತ್ತಿದ್ದೀರಿ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಆಗ ಅವರು ನಿಮ್ಮ ಅಭಿಪ್ರಾಯಗಳಿಗೆ ಅಡ್ಡಿ ಪಡಿಸುವುದಿಲ್ಲ. ನಿಮ್ಮ ಭಿನ್ನಾಭಿಪ್ರಾಯಗಳನ್ನೂ ಅವರು ಗೌರವಿಸುತ್ತಾರೆ. ಈ ಗುಣವಿರುವ ಅತ್ತೆಯಂದಿರು ಸೊಸೆಯರೊಟ್ಟಿಗೆ ಸ್ನೇಹ ಬಾಂಧವ್ಯದಿಂದ ಇರುತ್ತಾರೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ
    ಅತ್ತೆ ನಿಮ್ಮ ಜೀವನ, ಕೆಲಸ, ಆಸಕ್ತಿಗಳು, ಹವ್ಯಾಸಗಳು ಮತ್ತು ವೃತ್ತಿಜೀವನದ ಬಗ್ಗೆ ವಿಚಾರಿಸುತ್ತಿದ್ದರೆ, ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬುದರ ಸಂಕೇತ. ನಿಮ್ಮ ಬೇಕು ಬೇಡಗಳನ್ನೂ ಆಲಿಸುತ್ತಾರೆ. ಈ ಗುಣ ಇಬ್ಬರ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೆ.

    ತನಗೆ ಹೋಲಿಕೆ ಮಾಡಿಕೊಳ್ಳಲ್ಲ
    ಎಷ್ಟೋ ಅತ್ತೆಯಂದಿರು ತನಗೆ ಹೋಲಿಸಿಕೊಂಡು ಸೊಸೆಯಂದಿರನ್ನು ಹೀಯಾಳಿಸುವುದೇ ಹೆಚ್ಚು. “ನಮ್ಮ ಕಾಲದಲ್ಲಿ ಹಾಗಿದ್ದೆ, ಹೀಗಿದ್ದೆ” ಅಂತಾ ಹೇಳುತ್ತಿರುತ್ತಾರೆ. ಆದರೆ ಪ್ರಬುದ್ಧ ಮನಸ್ಸಿನ ಅತ್ತೆಯಂದಿರು ತನಗೆ ಎಂದಿಗೂ ಸೊಸೆಯನ್ನು ಹೋಲಿಕೆ ಮಾಡಿಕೊಳ್ಳಲ್ಲ. ನಿಮ್ಮ ಕೆಲಸ, ಕಾರ್ಯಗಳನ್ನು ಗೌರವಿಸುತ್ತಾರೆ. ಸೊಸೆಯ ಅಭಿಪ್ರಾಯವನ್ನೂ ಗೌರವಿಸುತ್ತಾರೆ.

    ನೀವು ಎದುರಿಗೆ ಇಲ್ಲದಿದ್ರೂ ಗೌರವಿಸ್ತಾರೆ
    ಕೆಲವರು ಸೊಸೆ ಎದುರಿಗಿದ್ದಾಗ ಹೊಗಳುವುದು, ಅವರ ಇಲ್ಲದಿದ್ದಾಗ ತೆಗಳುವ ಕೆಲಸ ಮಾಡ್ತಾರೆ. ನಿಮ್ಮ (ಸೊಸೆ) ಜೊತೆ ಇದ್ದಾಗ ಪ್ರೀತಿಯಿಂದ ಮಾತನಾಡಿ, ನೀವು ಹೊರಗೆ ಹೋಗಿದ್ರೆ ನಿಮ್ಮ ಇಲ್ಲಸಲ್ಲದ ಆರೋಪ ಮಾಡ್ತಾರೆ. ಆದರೆ ಒಳ್ಳೆ ಮನಸ್ಸಿನ ಅತ್ತೆಯರು, ನೀವು ಹೊರಗಿದ್ದಾಗಲೂ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರುತ್ತಾರೆ. ನಿಮ್ಮನ್ನು ಸದಾ ಗೌರವಿಸುತ್ತಾರೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    ನಿಮ್ಮ ಮಿತಿಗಳನ್ನ ಅರ್ಥ ಮಾಡಿಕೊಳ್ತಾರೆ
    ನಿಮ್ಮೊಟ್ಟಿಗೆ ಉತ್ತಮ ಬಾಂಧವ್ಯ ಬಯಸುವ ಅತ್ತೆಯರು, ಯಾವುದೇ ರೀತಿಯಲ್ಲೂ ನಿಮ್ಮ ಕೆಲಸಗಳಿಗೆ ಹಸ್ತಕ್ಷೇಪ ಮಾಡುವುದಿಲ್ಲ. ಮನೆಯಲ್ಲಿ ನಿಮ್ಮ ಜವಾಬ್ದಾರಿ, ವ್ಯವಹರಿಸುವ ರೀತಿ ಎಲ್ಲವನ್ನೂ ಅರಿತುಕೊಳ್ಳುತ್ತಾರೆ. ನಿಮ್ಮ ಮಿತಿಗಳನ್ನು ಅರ್ಥ ಮಾಡಿಕೊಳ್ತಾರೆ. ನಿಮ್ಮ ಯಾವುದೇ ಕೆಲಸಗಳಿಗೆ ಅವರು ಮಧ್ಯೆ ಪ್ರವೇಶ ಮಾಡಲ್ಲ. ಸದಾ ಸೊಸೆಯ ಸ್ನೇಹ, ಪ್ರೀತಿ, ನಂಬಿಕೆ ಗಳಿಸಲು ಪ್ರಯತ್ನಿಸುವ ಅತ್ತೆಯರಿಗೆ ಈ ಮೇಲಿನ ಗುಣಗಳಿರುತ್ತೆ. ಅಂತಹ ಅತ್ತೆಯರ ಮೇಲೆ ಸೊಸೆಯಂದಿರು ಅನುಮಾನ ಪಡಬಾರದು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮನೆ ಬಿಟ್ಟು ಹೋಗದ ಅತ್ತೆ ಮೇಲೆ ಸೊಸೆಯಿಂದ ಮಾರಣಾಂತಿಕ ಹಲ್ಲೆ – ವೃದ್ಧೆ ಸ್ಥಿತಿ ಚಿಂತಾಜನಕ

    ಮನೆ ಬಿಟ್ಟು ಹೋಗದ ಅತ್ತೆ ಮೇಲೆ ಸೊಸೆಯಿಂದ ಮಾರಣಾಂತಿಕ ಹಲ್ಲೆ – ವೃದ್ಧೆ ಸ್ಥಿತಿ ಚಿಂತಾಜನಕ

    ತುಮಕೂರು: ಮನೆ ಬಿಟ್ಟು ಹೋಗದ ಅತ್ತೆಯ ಮೇಲೆ ಸೊಸೆ ಕಬ್ಬಿಣ ಪೈಪ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಟ್ಟಣದ ಕೆಆರ್‌ಎಸ್ ಆಗ್ರಹಾರದಲ್ಲಿ (K.R.Agrahara) ನಡೆದಿದೆ.

    ಹಲ್ಲೆಗೊಳಗಾದ ಮಹಿಳೆಯನ್ನು 65 ವರ್ಷದ ಚಿಕ್ಕತಾಯಮ್ಮ ಎಂದು ಗುರುತಿಸಲಾಗಿದೆ. ಚಿಕ್ಕತಾಯಮ್ಮ ಅವರಿಗೆ ಶಿವಕುಮಾರ್ ಹಾಗೂ ಎನ್.ಶಂಕರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಶಿವಕುಮಾರ್ ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದರೆ, ಇನ್ನೊಬ್ಬ ಮಗ ಎನ್.ಶಂಕರ್ ಜೊತೆ ಚಿಕ್ಕತಾಯಮ್ಮ ಕೆ.ಆರ್.ಎಸ್ ಆಗ್ರಹಾರದ ರೇವಣ್ಣ ಎಂಬವರ ಮನೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. ಶಂಕರ್ ಅವರು ಸೌಮ್ಯಳೊಂದಿಗೆ ಮದುವೆಯಾಗಿದ್ದು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ ಹೊಡೆದು ಬೈಕ್‌ ಸವಾರ ಸಾವು – ಅಪಘಾತ ಜಾಗದಲ್ಲಿ ಬಿದ್ದಿತ್ತು ಮದ್ಯದ ಬಾಟಲಿಗಳು

    ಬೆಂಗಳೂರಿನಲ್ಲಿ ಇರುವ ಶಿವಕುಮಾರ್ ಅವರ ಮನೆಗೆ ಹೋಗು ಎಂದು   ಸೊಸೆ ಸೌಮ್ಯ, ತನ್ನ ಅತ್ತೆ ಚಿಕ್ಕತಾಯಮ್ಮನಿಗೆ ಒತ್ತಾಯ ಮಾಡುತ್ತಾ ಪದೇ, ಪದೇ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಈ ಸಂಬಂಧ ಹಲವು ಬಾರಿ ಸೌಮ್ಯಳಿಗೆ ಮನೆಯ ಅಕ್ಕಪಕ್ಕದವರು ಬುದ್ದಿವಾದ ಹೇಳಿದರು. ಹೀಗಿದ್ದರೂ ನವೆಂಬರ್ 4ರಂದು ಶುಕ್ರವಾರ ಬೆಳಗ್ಗೆ 9-30 ಗಂಟೆ ಸಮಯದಲ್ಲಿ ಚಿಕ್ಕತಾಯಮ್ಮ ಅವರ ಮನೆಯಲ್ಲಿ ಏನೋ ಗಲಾಟೆ ನಡೆಯುತ್ತಿರುವ ಶಬ್ದ ಕೇಳಿ ಬಂದಿದೆ. ಅಷ್ಟರಲ್ಲಿ ಶಂಕರ್ ಅವರ ಮಕ್ಕಳಾದ ಗೌತಮಿ ಮತ್ತು ಸಹನಾ ಮನೆಯಿಂದ ಹೊರಗಡೆ ಬಂದು ನಮ್ಮ ಅಮ್ಮ ಅಜ್ಜಿಗೆ ಹೊಡೆಯುತ್ತಿದ್ದಾರೆ ಎಂದು ಅಳುತ್ತಿದ್ದರು.

    ಮನೆಯ ಪಕ್ಕದ ನಾಗೇಂದ್ರ ಹಾಗೂ ಹೆಚ್.ವಿ.ಲಕ್ಷ್ಮಣ್‍ಗೌಡ ಅವರು ಚಿಕ್ಕತಾಯಮ್ಮ ಅವರ ಮನೆ ಒಳಗೆ ಹೋಗಿ ನೋಡಿದಾಗ ಸೊಸೆ ಸೌಮ್ಯ ಅವರು ಕೈಯಲ್ಲಿ ಅತ್ತೆ ಜುಟ್ಟನ್ನು ಹಿಡಿದು ಎಳೆದಾಡುತ್ತಾ ಕಬ್ಬಿಣದ ಪೈಪ್‍ನಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ರಕ್ತ ಬರುವಂತೆ ಹೊಡೆದಿರುವುದಲ್ಲದೇ ಬೆಂಗಳೂರಿಗೆ ಹೋಗು ಎಂದರೂ ಹೋಗಲ್ಲ ಅಂತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಕೊಲೆ ಮಾಡಿಯೇ ತೀರುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟ್ಯಾಟೂ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡ್ಬೇಡಿ – ವೈದ್ಯರ ಎಚ್ಚರಿಕೆ

    ಅಷ್ಟರಲ್ಲಿ ಎಚ್.ವಿ.ಲಕ್ಷ್ಮಣ್‍ಗೌಡ ಹಾಗೂ ನಾಗೇಂದ್ರ ಸೌಮ್ಯ ಕೈಯಲ್ಲಿದ್ದ ಕಬ್ಬಿಣದ ಪೈಪ್ ಅನ್ನು ಕಿತ್ತುಕೊಂಡು ತೀವ್ರವಾಗಿ ಗಾಯಗೊಂಡಿದ್ದ, ಚಿಕ್ಕತಾಯಮ್ಮನನ್ನು ಅಂಬುಲೆನ್ಸ್‌ನಲ್ಲಿ ಕರೆದೊಯ್ದು ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿಕ್ಕತಾಯಮ್ಮನ ಸ್ಥಿತಿ ಚಿಂತಾಜನಕವಾಗಿದ್ದು, ಈ ಸಂಬಂಧ ಹೆಚ್.ವಿ.ಲಕ್ಷ್ಮಣಗೌಡ ಕುಣಿಗಲ್ ಠಾಣೆಗೆ ದೂರು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊಲ್ಲಲು ಸ್ಕೆಚ್ ಹಾಕಿದ್ದು ಪತ್ನಿಯನ್ನ, ಆದ್ರೆ ಸತ್ತಿದ್ದು ಅತ್ತೆ

    ಕೊಲ್ಲಲು ಸ್ಕೆಚ್ ಹಾಕಿದ್ದು ಪತ್ನಿಯನ್ನ, ಆದ್ರೆ ಸತ್ತಿದ್ದು ಅತ್ತೆ

    ಭೋಪಾಲ್: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಲ್ಲುವ ಸಲುವಾಗಿ ಕಬ್ಬಿಣದ ಬಾಗಿಲಿಗೆ ವಿದ್ಯುತ್ ತಂತಿಯನ್ನು ಅಳವಡಿಸಿದ್ದನು. ಆದರೆ ಪತ್ನಿ ಬದಲಿಗೆ ಆಕೆಯ ತಾಯಿ ಬಾಗಿಲನ್ನು ಸ್ಪರ್ಶಿಸಿ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಬೇತುಲ್ ( Betul) ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ಕೊತ್ವಾಲಿ ಪೊಲೀಸ್ ಠಾಣೆ (Kotwali police station) ವ್ಯಾಪ್ತಿಯ ಸೈಖೇಡಾ (Saikheda) ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮದ್ಯ ವ್ಯಸನನಾಗಿದ್ದು, ಆಗಾಗ ಪತ್ನಿಯೊಂದಿಗೆ ಜಗಳವಾಡುತ್ತಿದ್ದನು. ಭಾನುವಾರ ರಾತ್ರಿ ಕೂಡ ಇದೇ ವಿಚಾರವಾಗಿ ದಂಪತಿ ನಡುವೆ ಮತ್ತೆ ಜಗಳವಾಗಿತ್ತು. ಇದರಿಂದ ಬೇಸತ್ತು ಹೆಂಡತಿ ತನ್ನ ತಾಯಿಯ ಮನೆಗೆ ಹೋಗಿದ್ದಳು. ಇದನ್ನೂ ಓದಿ: 8 ಜನರಿಗೆ ಅಂಗಾಂಗ ದಾನ – ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ

    ತನ್ನ ಪತ್ನಿ ಮನೆಯಿಂದ ಹೊರಟಿದ್ದಕ್ಕೆ ಕೋಪಗೊಂಡ ಆರೋಪಿ ತನ್ನ ಅತ್ತೆಯ ಮನೆಗೆ ಹೋಗಿ ಅಲ್ಲಿ ಕಬ್ಬಿಣದಿಂದ ತಯಾರಿಸಲಾಗಿದ್ದ ಬಾಗಿಲಿಗೆ ವಿದ್ಯುತ್ ತಂತಿಯಿಂದ ಜೋಡಿಸಿ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ. ಆದರೆ ಅಚಾನಕ್ ಆಗಿ ಆತನ ಅತ್ತೆ ಬಾಗಿಲನ್ನು ಸ್ಪರ್ಶಿಸಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೊರಾರ್ಜಿ ದೇಸಾಯಿ ಶಾಲೆಯಲ್ಲಿ RSS ಶಿಬಿರಕ್ಕೆ ಅವಕಾಶ ಆರೋಪ- ಅನುಮತಿ ಕೊಟ್ಟಿಲ್ಲ ಎಂದ ಕೋಟಾ

    ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಹಿಡಿಯುವ ಪ್ರಯತ್ನ ನಡೆಸಲಾಗುತ್ತಿದೆ. ಅಲ್ಲದೇ ಆರೋಪಿ ವಿರುದ್ಧ ಸೂಕ್ತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಪಲಾ ಸಿಂಗ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿ ನಾಯಿ ಸಾಕುವ ವಿಚಾರಕ್ಕೆ ಜಗಳ- ತಾಯಿ, ಮಗಳು ಆತ್ಮಹತ್ಯೆ

    ಮನೆಯಲ್ಲಿ ನಾಯಿ ಸಾಕುವ ವಿಚಾರಕ್ಕೆ ಜಗಳ- ತಾಯಿ, ಮಗಳು ಆತ್ಮಹತ್ಯೆ

    ಬೆಂಗಳೂರು: ಮನೆಯಲ್ಲಿ ನಾಯಿ (Dog) ಸಾಕುವ ವಿಚಾರಕ್ಕೆ ನಡೆದಿದ್ದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾದ ವಿಚಿತ್ರ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ದಿವ್ಯಾ ಹಾಗೂ ಆಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡವರು. ನಾಯಿ ವಿಚಾರಕ್ಕೆ ಅತ್ತೆ-ಮಾವನ ಜೊತೆ ದಿವ್ಯಾಳಿಗೆ ಜಗಳವಾಗಿದೆ. ಈ ಜಗಳವು ದಿವ್ಯಾ ನೇಣಿಗೆ ಕೊರಳೊಡ್ಡುವ ಮೂಲಕ ಅಂತ್ಯವಾಗಿದೆ. ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ದಿವ್ಯಾ ಮನೆಯಲ್ಲಿ ನಾಯಿ ಸಾಕುತ್ತಿದ್ದರು. ಇತ್ತ ಉಸಿರಾಟ (Breathing) ಸಂಬಂಧದ ಕಾಯಿಲೆಯಿಂದ ದಿವ್ಯಾ ಬಳಲುತ್ತಿದ್ದರು. ಈ ಮಧ್ಯೆ ವೈದ್ಯ (Doctor) ರು ಮನೆಯಲ್ಲಿ ನಾಯಿ ಇದ್ದರೆ ಕಾಯಿಲೆ ವಾಸಿಯಾಗಲ್ಲ ಎಂದಿದ್ದರು. ಹೀಗಾಗಿ ನಾಯಿಯನ್ನ ಯಾರಿಗಾದರೂ ನೀಡಿ ಎಂದು ಅತ್ತೆ-ಮಾವನಿಗೆ ದಿವ್ಯಾ ಹೇಳಿದ್ದರು. ಇದನ್ನೂ ಓದಿ: ದಯವಿಟ್ಟು ನನ್ನನ್ನು ಬದುಕಲು ಬಿಡಿ: ವಿಚಾರಣೆ ವೇಳೆ ಕಣ್ಣೀರು ಹಾಕಿದ ಪಾರ್ಥ ಚಟರ್ಜಿ

    ಆದರೆ ನಾಯಿಯನ್ನ ಮನೆಯಿಂದ ಕಳಿಸಲು ಅತ್ತೆ-ಮಾವ ಒಪ್ಪಲಿಲ್ಲ. ಇದೇ ವಿಚಾರಕ್ಕೆ ದಿವ್ಯಾ ಹಾಗೂ ಅತ್ತೆ-ಮಾವನ ನಡುವೆ ಗಲಾಟೆ ನಡೆದಿದೆ. ಇದರಿಂದ ಮನನೊಂದ ದಿವ್ಯಾ ತನ್ನ ಮಗಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಈ ಸಂಬಂಧ ಗೋವಿಂದಪುರ ಠಾಣೆ (Govindpura Police Station)ಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ಕಂಬಕ್ಕೆ ಕಟ್ಟಿ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ – ರಸ್ತೆಯಲ್ಲೇ ಧರಧರನೇ ಎಳೆದಾಡಿದ

    ವಿದ್ಯುತ್ ಕಂಬಕ್ಕೆ ಕಟ್ಟಿ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ – ರಸ್ತೆಯಲ್ಲೇ ಧರಧರನೇ ಎಳೆದಾಡಿದ

    ಲಕ್ನೋ: ತನ್ನ ಸ್ವಂತ ಪತ್ನಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ವ್ಯಕ್ತಿಯೊಬ್ಬ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಜುಲೈ 14 ರಂದು ಆಗ್ರಾದ ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಸೇನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. 22 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ಕುಸುಮಾ ದೇವಿ ಅವರನ್ನು ಪತಿ ಶಯಂಬಿಹಾರಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾನೆ. ನಂತರ ಆಕೆಯನ್ನು ಸಡಿಲಗೊಳಿಸಿ ತನ್ನ ಹಿಂದೆ ಧರಧರನೇ ಎಳೆದುಕೊಂಡು ಹೋಗಿರುವುದನ್ನು ಕಾಣಬಹುದಾಗಿದೆ.

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಆರೋಪಿ ಹಾಗೂ ಆತನ ತಾಯಿ ವಿರುದ್ಧ ಮಹಿಳೆ ದೂರು ದಾಖಲಿಸಿದ್ದು, ಇದೀಗ ನಾಪತ್ತೆಯಾಗಿದ್ದಾರೆ ಎಂದು ಸಿಕಂದರಾ ಪೊಲೀಸ್ ಠಾಣೆಯ ಉಸ್ತುವಾರಿ ಆನಂದ್ ಕುಮಾರ್ ಶಾಹಿ ತಿಳಿಸಿದ್ದಾರೆ.

    ಜುಲೈ 14 ರಂದು ಪತಿ ಮತ್ತು ಅತ್ತೆ ಸೇರಿಕೊಂಡು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಕುಸುಮಾ ದೇವಿ ಅವರು ದೂರು ನೀಡಿದ್ದರು. ಇದೀಗ ಶ್ಯಾಂಬಿಹಾರಿ ಮತ್ತು ಆತನ ತಾಯಿ ಬರ್ಫಾ ದೇವಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಉದ್ದೇಶಪೂರ್ವಕವಾಗಿ ಅವಮಾನಿಸುವುದು), 342 (ತಪ್ಪಾದ ಬಂಧನ) ಮತ್ತು 354 ((ಮಹಿಳೆಯರ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲದಿಂದ ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]