Tag: mother goat

  • ಮನಕಲಕುವ ವಿಡಿಯೋ: ತನ್ನ ಮರಿಗಳನ್ನ ಬಲಿ ಪಡೆದ ಟ್ರಕ್ ಮುಂದೆ ಹೋಗದಂತೆ ಅಡ್ಡ ನಿಂತ ಮೇಕೆ

    ಮನಕಲಕುವ ವಿಡಿಯೋ: ತನ್ನ ಮರಿಗಳನ್ನ ಬಲಿ ಪಡೆದ ಟ್ರಕ್ ಮುಂದೆ ಹೋಗದಂತೆ ಅಡ್ಡ ನಿಂತ ಮೇಕೆ

    ತಾಯಿ ಮೇಕೆಯೊಂದು ತನ್ನ ಮರಿಗಳನ್ನ ಬಲಿ ಪಡೆದ ಟ್ರಕ್ ಮುಂದೆ ಹೋಗದಂತೆ ಅಡ್ಡ ನಿಂತು ಮೂಕವೇದನೆ ವ್ಯಕ್ತಪಡಿಸಿದ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ಕೆಂಪು ಬಣ್ಣದ ಟ್ರಕ್ ತಟಸ್ಥವಾಗಿ ನಿಂತಿದ್ದರೂ ಮೇಕೆ ಮಾತ್ರ ತನ್ನ ಅಷ್ಟೂ ಶಕ್ತಿಯನ್ನ ಹಾಕಿ ತಲೆಯನ್ನ ವಾಹನಕ್ಕೆ ಒತ್ತಿಹಿಡಿದು ಮುಂದೆ ಹೋಗದಂತೆ ಅಡ್ಡ ನಿಂತಿತ್ತು. ಮೇಕೆಯ ಮರಿಗಳ ದೇಹಗಳು ಅದರ ಹಿಂದೆ ಬಿದ್ದಿದ್ದವು.

    ಎಷ್ಟೇ ಹೊತ್ತಾದ್ರೂ ತಾಯಿ ಮೇಕೆ ಮಾತ್ರ ಅದೇ ಸ್ಥಿತಿಯಲ್ಲಿ ನಿಂತಿತ್ತು. ಈ ವಿಡಿಯೋವನ್ನ ಪೀಪಲ್ಸ್ ಡೈಲಿ ಚೈನಾ ಪತ್ರಿಕೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೋಡಿದವರು ಮರುಕ ವ್ಯಕ್ತಪಡಿಸಿದ್ದಾರೆ.

    ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.