Tag: mother. Game

  • ಮಗನ ಗೇಮಿಂಗ್ ಚಟಕ್ಕೆ ತಂದೆ ಬಲಿ

    ಮಗನ ಗೇಮಿಂಗ್ ಚಟಕ್ಕೆ ತಂದೆ ಬಲಿ

    -ಚಾಕುವಿನಿಂದ ಚುಚ್ಚಿ ಹಲ್ಲೆ

    ವಾಷಿಂಗ್ಟನ್: ಗೇಮಿಂಗ್‍ನ್ನೇ ಚಟವನ್ನಾಗಿ ಮಾಡಿಕೊಂಡ ಮಗ ತನ್ನ ಮಲ ತಂದೆಯನ್ನು ಕೊಂದು, ಅಮ್ಮನನ್ನು ಆಸ್ಪತ್ರೆಗೆ ಸೇರುವಂತೆ ಮಾಡಿದ ಘಟನೆ ಅಮೆರಿಕಾದಲ್ಲಿ ನಡೆದಿದೆ.

    ತಂದೆಯನ್ನು ಕೊಂದ ಮಗನನ್ನು ಕ್ರಿಸ್ಟೋಫರ್(29) ಎಂದು ಗುರುತಿಸಲಾಗಿದೆ. ಈತ ಮಿಚಿಗನ್ ನಿವಾಸಿಯಾಗಿದ್ದಾನೆ. ಈತ ಒಬ್ಬ ಗೇಮರ್, ಸದಾ ಗೇಮಿಂಗ್‍ನಲ್ಲೇ ಮುಳುಗಿರುವುದು ಇವನ ಅಭ್ಯಾಸ.

    ಒಂದು ದಿನ ರಾತ್ರಿ ಕ್ರಿಸ್ಟೋಫರ್ ಗೇಮ್ ಆಡುತ್ತಾ ಕುಳಿತಿದ್ದನು. ಮಧ್ಯರಾತ್ರಿಯಾದರೂ ಇವನು ಗೇಮ್ ಆಡಿ ಮುಗಿದಿರಲಿಲ್ಲ. ತಂದೆ-ತಾಯಿ ಇಬ್ಬರಿಗೂ ನಿದ್ದೆ ಬಂದಿದ್ದರ ಹಿನ್ನೆಲೆಯಲ್ಲಿ ಗೇಮ್ ನಿಲ್ಲಿಸಿ ಮಲಗು ಎಂದು ಮಗನಿಗೆ ಹೇಳಿದ್ದಾರೆ. ಆಗ ಕ್ರಿಸ್ಟೋಫರ್‍ಗೆ ವಿಪರೀತ ಕೋಪ ಬಂದಿದೆ. ಇದೇ ವಿಚಾರವಾಗಿ ತಂದೆ-ತಾಯಿ ಜೊತೆಗೆ ಜಗಳವಾಡಲು ಪ್ರಾರಂಭಿಸಿದ್ದಾನೆ. ಈ ವೇಳೆ ತಾಯಿಯ ಮೂಗಿಗೆ ಗುದ್ದಿದ್ದಾನೆ. ಆಗ ಆಕೆಯ ರಕ್ಷಣೆ ಬಂದಿದ್ದ ತಂದೆ ಮೇಲೆ ಹಲ್ಲೆ ಮಾಡಿದ್ದಾನೆ. ಅಡುಗೆ ಮನೆಯಲ್ಲಿರುವ ಚಾಕು ತಂದು ತಂದೆಗೆ ಹಲವು ಬಾರಿ ಇರಿದಿದ್ದಾನೆ. ಈ ವೇಳೆ ಅಡ್ಡ ಬಂದ ತಾಯಿಗೂ ಚಾಕುವಿನಿಂದ ಚುಚ್ಚಿದ್ದಾನೆ.

     

    ಕೊಲೆ ಮಾಡಿದ ವಿಚಾರವನ್ನು ಕ್ರಿಸ್ಟೋಫರ್ ಪಕ್ಕದ ಮನೆಯಲ್ಲಿ ಹೇಳಿದ್ದಾನೆ. ಆಗ ಪೊಲೀಸರಿಗೆ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಕ್ರಿಸ್ಟೋಫರ್‍ನನ್ನು ಬಂಧಿಸಿದ್ದಾರೆ.