Tag: mother father

  • ಮುಂದುವರಿದ ಐಟಿ ವಿಚಾರಣೆ- ರಾಧಿಕಾ ಡ್ರೈವರನ್ನು ಕರೆದೊಯ್ದ ಅಧಿಕಾರಿಗಳು..!

    ಮುಂದುವರಿದ ಐಟಿ ವಿಚಾರಣೆ- ರಾಧಿಕಾ ಡ್ರೈವರನ್ನು ಕರೆದೊಯ್ದ ಅಧಿಕಾರಿಗಳು..!

    ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ನಟರ ಮನೆ ಮೇಲೆ ಗುರುವಾರ ದಾಳಿ ನಡೆಸುವ ಮೂಲಕ ಐಟಿ ಶಾಕ್ ನೀಡಿದ್ದು, ಇಂದು ಯಶ್ ಮಾವನ ಮನೆಗೆ ಮತ್ತಿಬ್ಬರು ಐಟಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ರಾಧಿಕಾ ಪಂಡಿತ್ ಕುಟುಂಬದ ಕಾರಿನ ಡ್ರೈವರನ್ನು ಅಧಿಕಾರಿಗಳು ಕರೆದೊಯ್ದಿದ್ದು, ತೀವ್ರ ಕುತೂಹಲ ಮೂಡಿಸಿದೆ. ಯಾವುದೋ ಒಂದು ವಿಳಾಸ ಕೇಳಲು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಇಂದು ಬೆಳಗ್ಗೆ ಒಟ್ಟು 6 ಜನ ಐಟಿ ಅಧಿಕಾರಿಗಳು ರಾಧಿಕಾ ಮನೆಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.

    ಕೆಜಿಎಫ್ ಚಿತ್ರ ಸಾಕಷ್ಟು ಬ್ಯುಸಿನೆಸ್ ಮಾಡಿದ ಬೆನ್ನಲ್ಲೇ ಅಧಿಕಾರಿಗಳು ದಾಳಿ ನಡೆಸಿರುವುದು ಅಚ್ಚರಿ ಮೂಡಿಸಿದೆ. ಈ ಮೂಲಕ ಯಶ್ ಹಾಗೂ ರಾಧಿಕಾ ಅವರನ್ನು ಬೇರೆ ಬೇರೆಯಾಗಿ ವಿಚಾರಣೆ ನಡೆಸಿ ಅವರಿಂದ ಹೇಳಿಕೆಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ರಾಧಿಕಾ ಮನೆಗೆ ಭದ್ರತೆ ಕಲ್ಪಿಸಿದ್ದಾರೆ.

    ಇತ್ತ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಇಂದು ಬೆಳಗ್ಗೆ ಐಟಿ ಅಧಿಕಾರಿಗಳಿಂದ ಶೋಧಕಾರ್ಯ ಮುಂದುವರಿಸಿದ್ದರು. ಹೊಸಕೆರೆಹಳ್ಳಿಯಲ್ಲಿರುವ ಯಶ್ ಮನೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಯಶ್ ಮನೆಯಲ್ಲಿ ಸಿಕ್ಕಿರುವ ದಾಖಲೆಗಳನ್ನಿಟ್ಟುಕೊಂಡು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಯಶ್ ಹೊಸಕೆರೆಹಳ್ಳಿಯಲ್ಲಿರುವ ತಮ್ಮ ಮನೆಗೆ ಮುಂಜಾನೆ ಮೂರು ಗಂಟೆಗೆ ಬಂದಿದ್ದಾರೆ. ಐಟಿ ಅಧಿಕಾರಿಗಳ ಪ್ರಶ್ನೆಗೆ ಸಹನೆಯಿಂದ ಯಶ್ ಅವರ ತಾಯಿ ಉತ್ತರಿಸಿದ್ದಾರೆ. ಯಶ್ ಅವರ ತಾಯಿ ಮನೆಯಲ್ಲಿರುವ ಚಿನ್ನ, ಆಸ್ತಿ ಪತ್ರ, ಬ್ಯಾಂಕ್‍ನ ಡಿಟೈಲ್ ನೀಡಿದ್ದಾರೆ. ಐಟಿ ಅಧಿಕಾರಿಗಳು ಯಶ್ ಮನೆಯಲ್ಲಿರುವ ಚಿನ್ನ ನಗನಾಣ್ಯ ಯಶ್ ಅವರ ತಾಯಿ ಮುಂದೆ ಲೆಕ್ಕ ಮಾಡಿದ್ದಾರೆ. 20 ಕೆಜಿಗೂ ಅಧಿಕ ಬೆಳ್ಳಿ, ಸುಮಾರು 450ಗ್ರಾಂ ಚಿನ್ನ, ಒಂದು ವಜ್ರದ ಸರ ಹಾಗೂ ಎರಡು ಪ್ಲಾಟಿನಮ್ ಸರ ಇರುವುದು ಬೆಳಕಿಗೆ ಬಂದಿದೆ.

    ಯಶ್ 8 ಬ್ಯಾಂಕ್ ಖಾತೆ ಹೊಂದಿದ್ದು, ನಾಲ್ಕು ಖಾತೆ ತಾಯಿಯೊಂದಿಗೆ ಜಂಟಿ ಖಾತೆ ಹೊಂದಿದ್ದಾರೆ. ಎರಡು ಬ್ಯಾಂಕ್ ನಲ್ಲಿ ಯಶ್ ಅವರಿಗೆ 40 ಕೋಟಿ ಸಾಲ ಇದೆ. ಬ್ಯಾಂಕ್ ನಲ್ಲಿ 13 ಕೋಟಿ, ಮತ್ತೊಂದರಲ್ಲಿ 17 ಕೋಟಿ ಸಾಲ ಇದೆ ಎಂದು ಹೇಳಲಾಗುತ್ತಿದೆ. ಮಂಡ್ಯದ ಬಳಿ ಜಮೀನೂ ಖರೀದಿ ಮಾಡಿರುವುದಾಗಿ ಯಶ್ ತಾಯಿ ಹೇಳಿದ್ದಾರೆ. ಅಲ್ಲದೇ 8 ಎಕರೆ ಯಶ್ ಮನೆ ಅವರ ಹೆಸರಲ್ಲಿ ರಿಜಿಸ್ಟರ್ ಆಗಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೃತಪಟ್ಟ ಮೂರು ವರ್ಷದ ಬಳಿಕ ತಂದೆಯಾದ ಬೆಂಗ್ಳೂರಿನ ವ್ಯಕ್ತಿ!

    ಮೃತಪಟ್ಟ ಮೂರು ವರ್ಷದ ಬಳಿಕ ತಂದೆಯಾದ ಬೆಂಗ್ಳೂರಿನ ವ್ಯಕ್ತಿ!

    ಮುಂಬೈ: ಕಾರು ಅಪಘಾತದಲ್ಲಿ ಮೃತಪಟ್ಟ ಮೂರು ವರ್ಷದ ಬಳಿಕ ವ್ಯಕ್ತಿಯೊಬ್ಬರು ತಂದೆಯಾಗಿದ್ದಾರೆ.

    ಸುಪ್ರಿಯಾ ಜೈನ್ ನವಜಾತ ಶಿಶುವಿಗೆ ಜನ್ಮಕೊಟ್ಟ ತಾಯಿ, ಗೌರವ್ ಎಸ್, ಮೃತಪಟ್ಟ ತಂದೆ. ಇವರಿಬ್ಬರೂ ಮದುವೆಯಾದ 5 ವರ್ಷಗಳ ಬಳಿಕ 2015 ರಲ್ಲಿ ಮಗುವನ್ನು ಹೊಂದಲು ನಿರ್ಧರಿಸುತ್ತಾರೆ. ಕೆಲಸ ನಿಮಿತ್ತ ಬೆಂಗಳೂರಿನಲ್ಲಿಯೇ ವಾಸವಾಗಿದ್ದ ಈ ಜೋಡಿಗೆ ಪೋಷಕರಾಗುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗಾಗಿ ಐವಿಎಫ್ (In vitro fertilisation) ಮೂಲಕ ಮಗುವನ್ನು ಪಡೆಯಲು ನಿರ್ಧರಿಸಿದ್ದರು.

    ಮಗುವಿನ ವಿಚಾರವಾಗಿ ಗೌರವ್ ಮತ್ತು ಸುಪ್ರಿಯಾ ತಮ್ಮದೇ ಆದ ಪರಿಕಲ್ಪನೆಯನ್ನು ಹೊಂದಿದ್ದರು. 2015ರಲ್ಲಿ ಗೌರವ್ ಅವರಿಗೆ ಹುಬ್ಬಳ್ಳಿಯ ಕಾರಿನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪತಿಯನ್ನು ಕಳೆದುಕೊಂಡ ಸುಪ್ರಿಯಾ ಆರಂಭದಲ್ಲಿ ಬಹಳ ಖಿನ್ನತೆಗೆ ಒಳಗಾಗಿದ್ದರು. ಕೆಲ ದಿನಗಳ ಬಳಿಕ ಅವರು ತನ್ನ ಮತ್ತು ಗೌರವ್ ನಡುವೆ ಮಗು ಪಡೆಯುವ ವಿಚಾರವನ್ನು ನಿರ್ಧರಿಸಿದ್ದೇವು ಅದನ್ನು ನಾವು ಪೂರ್ಣಗೊಳಿಸಲೇ ಬೇಕು ಎಂದು ನಿಶ್ಚಯಿಸಿದ್ದರು. ತನ್ನ ಅಮ್ಮನಿಗೆ ವಿಚಾರ ತಿಳಿಸಿ ಸಂತಸವನ್ನು ನೀಡಬೇಕೆಂದು ತೀರ್ಮಾನ ಸಹ ಮಾಡಿದ್ದರು.

    ಸುಪ್ರಿಯಾ ಮೂಲತಃ ಜೈಪುರದವರಾಗಿದ್ದು, ಐವಿಎಫ್‍ಗಾಗಿ ಶೇಖರಿಸಿದ್ದ ಪತಿಯ ವೀರ್ಯದ ಮೂಲಕ ಮಗುವನ್ನು ಹೊಂದಲು ನಿರ್ಧರಿಸಿ ಮುಂಬೈನ ಡಾ.ಫಿರೋಜ್ ಪರಿಖಾರನ್ನು ಭೇಟಿ ಮಾಡಿದರು. ಆದರೆ ಸುಪ್ರಿಯಾ ತಾಯಿಯಾಗುವುದನ್ನು ತನ್ನ ಪೋಷಕರಿಗಾಗಲಿ ಗೌರವ್ ಪೋಷಕರಿಗಾಗಲಿ ತಿಳಿಸಿರಲಿಲ್ಲ ಇದಕ್ಕಾಗಿ ಒಬ್ಬಂಟಿಯಾಗಿ ಪ್ರಯಾಣವನ್ನು ಆರಂಭಿಸಿದರು.

    ಸುಪ್ರಿಯಾ ಪತಿಯ ಸಾವಿನ ಅವಘಡದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ದುಃಖಿತರಾದ ಸುಪ್ರಿಯಾರಿಗೆ ಸಹಾಯ ಮಾಡಲು ಫಿರೋಜ್ ಪರಿಖಾ ವೈದ್ಯರ ತಂಡ ನಿರ್ಧರಿಸಿತು. ಈ ಸಂಬಂಧ ಸುಪ್ರಿಯಾರಿಗೆ ಮನೋವೈದ್ಯರಿಂದ ಮಾನಸಿಕವಾಗಿ ಸದೃಢ ಮಾಡಲಾಗಿತ್ತು. ಆದ್ರೆ ಐವಿಎಫ್ ನಲ್ಲಿ ಸಂಗ್ರಹಿಸಿದ್ದ ಪತಿಯ ವೀರ್ಯಾಣುಗಳು ಕೂಡ ಉಪಯೋಗವಾಗಲಿಲ್ಲ. ಕೊನೆಯ ಬಾಡಿಗೆಗೆ ಪಡೆದುಕೊಳ್ಳುವ ಒಂದು ಪ್ರಯತ್ನ ಮಾತ್ರ ಉಳಿದಿತ್ತು ಇಲ್ಲವಾದಲ್ಲಿ ಸುಪ್ರಿಯಾ ಅವರ ವಂಶವಾಹಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇತ್ತು.

    ಪ್ರತಿ ವರ್ಷ ಜೈನ್ ಪತಿಯ ಪುಣ್ಯ ತಿಥಿಗಾಗಿ ಬೆಂಗಳೂರು ಬರುತ್ತಿದ್ದರು. ಗೌರವ್ ಮೃತಪಟ್ಟ ಅದೇ ದಿನಾಂಕದಂದು ಸುಪ್ರಿಯಾ ಗಂಡು ಮಗುವಿನ ಜನ್ಮ ನೀಡಿದ್ದಾರೆ. ಆದರೆ ಸಂತಸಪಡಲು ಸಾಧ್ಯವಾಗದಿದ್ದರೂ ಗೆಲುವಿನ ನಗೆ ಬೀರಿದ್ದಾರೆ. ಮಗು ನೋಡಲು ಗೌರವನನ್ನೇ ಹೋಲುತ್ತಿದೆ ಎಂದು ನನಗೆ ಅನಿಸುತ್ತಿದೆ. ನಾನು ಮಗುವನ್ನು ಬಯಸುವುದಿಲ್ಲ ಗೌರವನ ಮಗುವನ್ನು ಇಷ್ಟಪಡುತ್ತೇನೆ. ನಮ್ಮ ಒಪ್ಪಂದದ ಪ್ರಕಾರ ಇಂದು ಮಗು ನಮ್ಮದು, ಮತ್ತೊಂದು ಮಗುವನ್ನು ದತ್ತು ತೆಗೆದುಕೊಳ್ಳುವುದಾಗಿ ನಿರ್ಧರಿಸಿದ್ದೆವು ಎಂದರು. ಹಾಗೂ ನಾನು ಇಂದಿನಿಂದ ಅವರ ಪುಣ್ಯ ತಿಥಿಗೆ ಹೋಗುವಿದಿಲ್ಲವೆಂದು ಸುಪ್ರಿಯಾ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv