Tag: Most runs

  • ಕೊಹ್ಲಿಗಿಂತಲೂ ವೇಗವಾಗಿ ರನ್ ಗಳಿಸಿ ದಾಖಲೆ ಬರೆದ ಅಯ್ಯರ್

    ಕೊಹ್ಲಿಗಿಂತಲೂ ವೇಗವಾಗಿ ರನ್ ಗಳಿಸಿ ದಾಖಲೆ ಬರೆದ ಅಯ್ಯರ್

    – 16 ಏಕದಿನ ಪಂದ್ಯಗಳಲ್ಲಿ 217 ರನ್

    ಹ್ಯಾಮಿಲ್ಟನ್: ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ ಶ್ರೇಯಸ್ ಅಯ್ಯರ್ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಮಿಂಚಿದ್ದರು. ಈ ಸರಣಿಯಲ್ಲಿ 217 ರನ್ ಗಳಿಸಿದ ಅವರು ಒಟ್ಟು 16 ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರಿಗಿಂತಲೂ ಹೆಚ್ಚು ರನ್‍ಗಳನ್ನು ವೇಗವಾಗಿ ಗಳಿಸಿದ ದಾಖಲೆ ಬರೆದ್ದಾರೆ.

    ಶ್ರೇಯಸ್ ಅಯ್ಯರ್ ಈವರೆಗೂ 16 ಅಂತರರಾಷ್ಟ್ರೀಯ ಏಕದಿನ ಪಂದ್ಯ ಆಡಿದ್ದು 1 ಶತಕ, 8 ಅರ್ಧಶತಕ ಸೇರಿ ಒಟ್ಟು 748 ರನ್ ಗಳಿಸಿ ದಾಖಲೆ ಬರೆದ್ದಾರೆ. ಭಾರತದ ಬ್ಯಾಟ್ಸ್‌ಮನ್‌ ಒಬ್ಬರು ತಮ್ಮ ವೃತ್ತಿ ಜೀವನದ ಆರಂಭದ 16 ಅಂತರರಾಷ್ಟ್ರೀಯ ಏಕದಿನ ಸರಣಿ  ಏಕದಿನ ಪಂದ್ಯಗಳಲ್ಲಿ ಗಳಿಸಿದ ಅತ್ಯಧಿಕ ರನ್ ಇದಾಗಿದೆ. ಇತ್ತ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಆರಂಭದ ಮೊದಲ 16 ಇನ್ನಿಂಗ್ಸ್ ಗಳಲ್ಲಿ 655 ರನ್ ಗಳಿಸಿದ್ದರು. ಜೊತೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿಧು 725 ರನ್ ಹಾಗೂ ಶಿಖರ್ ಧವನ್ 584 ರನ್ ಗಳಿಸಿದ್ದರು. ಇದನ್ನೂ ಓದಿ: ಕೆ.ಎಲ್.ರಾಹುಲ್ ‘112 ರನ್’ ಹಿಂದಿದೆ ಸಾಧನೆಗಳ ಪಟ್ಟಿ- ಟೀಂ ಇಂಡಿಯಾ ದಿಗ್ಗಜ ಕೀಪರ್‌ಗಳ ಪಟ್ಟಿ ಸೇರಿದ ರಾಹುಲ್

    4ನೇ ಕ್ರಮಾಂಕದಲ್ಲಿ ಅಯ್ಯರ್ ಶೈನ್:
    ಟೀಂ ಇಂಡಿಯಾ ಬಹು ದಿನಗಳಿಂದ ಎದುರಿಸುತ್ತಿದ್ದ ಸಮಸ್ಯೆಯನ್ನು ಶ್ರೇಯಸ್ ಅಯ್ಯರ್ ನಿವಾರಣೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎಲ್ಲಾ ಏಕದಿನ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ಸೇರಿದಂತೆ ಕೇವಲ ಇಬ್ಬರು ಆಟಗಾರರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಗಳಿಸಿದ್ದಾರೆ. 1988ರ ಮಾರ್ಚ್ ನಲ್ಲಿ ಮೊಹಿಂದರ್ ಅಮರನಾಥ್ ಔಟಾಗದೆ 102 ರನ್ ಗಳಿಸಿದ್ದರು. ಬುಧವಾರ ನಡೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 103 ರನ್ ಪೇರಿಸಿದರು. ಇದನ್ನೂ ಓದಿ: ‘ಏಪ್ರಿಲ್‍ನಲ್ಲಿ ಸೆಟ್ಲ್ ಮಾಡಿಕೊಳ್ಳೋಣ’- ಜೇಮ್ಸ್ ನೀಶಮ್‍ ಸವಾಲು ಸ್ವೀಕರಿಸಿದ ಕೆಎಲ್ ರಾಹುಲ್

    ಭಾರತದ ನಾಲ್ವರು ನಾಲ್ವರು ಬ್ಯಾಟ್ಸ್‌ಮನ್‌ಗಳು ಮಾತ್ರ ಕಳೆದ ಐದು ವರ್ಷಗಳಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 100+ ಗಳಿಸಿದ್ದಾರೆ. 2016ರಲ್ಲಿ ಜನವರಿ ಮನೀಶ್ ಪಾಂಡೆ ಔಟಾಗದೆ 104 ರನ್ (81 ಎಸೆತ) ಗಳಿಸಿದ್ದರು. 2017ರ ಜನವರಿಯಲ್ಲಿ ಯುವರಾಜ್ ಸಿಂಗ್ 150 ರನ್ (127 ಎಸೆತ), 2018ರ ಅಕ್ಟೋಬರ್ ನಲ್ಲಿ ಅಂಬಾಟಿ ರಾಯುಡು 100 ರನ್ (81 ಎಸೆತ) ಹಾಗೂ 2020ರ ಫೆಬ್ರವರಿಯಲ್ಲಿ ಶ್ರೇಯಾಸ್ ಅಯ್ಯರ್ 103 ರನ್ (107 ಎಸೆತ) ದಾಖಲಿಸಿದ್ದಾರೆ. ಇದನ್ನೂ ಓದಿ: ‘ಬೇಡ ಮಗಾ ಬೇಡ, ನಾರ್ಮಲ್ ಆಡು’- ಕಿವೀಸ್ ನೆಲದಲ್ಲಿ ಕನ್ನಡ ಡಿಂಡಿಮ

    2020ರಲ್ಲಿ ಹೆಚ್ಚು ರನ್ ಗಳಿಕೆ:
    ಈ ವರ್ಷ ಇಲ್ಲಿಯವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಹೆಚ್ಚು ರನ್ ಗಳಿಸಿದ ಅಗ್ರ ನಾಲ್ಕು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಭಾರತದ ಮೂವರು ಬ್ಯಾಟ್ಸ್‌ಮನ್‌ಗಳೇ ಇರುವುದು ವಿಶೇಷ. ಈ ಪಟ್ಟಿಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಅಗ್ರಸ್ಥಾನದಲ್ಲಿದ್ದರೆ, ಅಯ್ಯರ್ ಎರಡನೇ ಸ್ಥಾನದಲ್ಲಿದ್ದಾರೆ. ಕೆ.ಎಲ್.ರಾಹುಲ್ 673 ರನ್ ಹಾಗೂ ಶ್ರೇಯಸ್ ಅಯ್ಯರ್ 463 ರನ್ ದಾಖಲಿಸಿದ್ದಾರೆ. ಉಳಿದಂತೆ ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡೆಕಾಕ್ 438 ರನ್ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 419 ರನ್ ಗಳಿಸಿದ್ದಾರೆ.

    ಕೆ.ಎಲ್.ರಾಹುಲ್ ಈ ವರ್ಷ ಅದ್ಭುತ ಬ್ಯಾಟಿಂಗ್ ಹಾಗೂ ಕೀಪಿಂಗ್ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಸೈ ಎಸಿನಿಕೊಂಡಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ಕೂಡ ಅದ್ಭುತ ಬ್ಯಾಟಿಂಗ್ ತೋರಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅಯ್ಯರ್ ತಮ್ಮ ಮೊದಲ ಏಕದಿನ ಶತಕವನ್ನು ಗಳಿಸಿದರು.

  • ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ರಾಹುಲ್- ವಿಡಿಯೋ

    ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ರಾಹುಲ್- ವಿಡಿಯೋ

    ಮೌಂಟ್ ಮಾಂಗನುಯಿ: ಕನ್ನಡಿಗ ಕೆ.ಎಲ್.ರಾಹುಲ್ ನ್ಯೂಜಿಲೆಂಡ್ ಪಂದ್ಯದ ವಿರುದ್ಧದ ಕೊನೆಯ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಷ್ಟೇ ಅಲ್ಲದೆ ಮಿಂಚಿನ ವೇಗದಲ್ಲಿ ಟಾಮ್ ಬೂಸ್ ಅವರನ್ನು ರನೌಟ್ ಮಾಡಿದ್ದಾರೆ.

    ಕೆ.ಎಲ್.ರಾಹುಲ್ ಟಾಮ್ ಬೂಸ್ ಅವರನ್ನು ರನೌಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೀಪಿಂಗ್ ಆಯ್ತು, ಈಗ ಟೀಂ ಇಂಡಿಯಾ ಕ್ಯಾಪ್ಟನ್ ಜವಾಬ್ದಾರಿ ಹೊತ್ತ ಕನ್ನಡಿಗ ರಾಹುಲ್

    ಇನ್ನಿಂಗ್ಸ್ ನ 3ನೇ ಓವರ್ ಮುಕ್ತಾಯಕ್ಕೆ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕಾಲಿನ್ ಮನ್ರೊ ವಿಕೆಟ್ ಬಳಿಕ ಮೈದಾಕ್ಕಿಳಿದ ಟಾಮ್ ಬೂಸ್ ಅವರು ವಾಷಿಂಗ್ಟನ್ ಸುಂದರ್ ಎಸೆತಗಳಲ್ಲಿ ಯಾವುದೇ ರನ್ ಗಳಿಸಲಿಲ್ಲ. ಬಳಿಕ ನವದೀಪ್ ಸೈನಿ ಎಸೆದ ಇನ್ನಿಂಗ್ಸ್ ನ ನಾಲ್ಕನೇ ಓವರಿನ ಎರಡನೇ ಎಸೆತದಲ್ಲಿ ಟಿಮ್ ಸೀಫರ್ಟ್ ನೇರವಾಗಿ ಸಂಜು ಸ್ಯಾಮ್ಸನ್ ಕಡೆಗೆ ತಳ್ಳಿ ಒಂಟಿ ರನ್ ಕದಿಯಲು ಯತ್ನಿಸಿದರು. ಬಾಲ್ ಕೈಗೆ ಸಿಗುತ್ತಿದ್ದಂತೆ ಬೌಲರ್ ಸೈನಿ ಕೈಗೆ ಬಾಲ್ ಕಡೆಗೆ ಎಸೆಯದೇ ಕೀಪರ್ ಮುಂದಿನ ವಿಕೆಟ್ ಕಡೆಗೆ ಎಸೆದರು. ಈ ವೇಳೆ ದೂರದಿಂದ ವೇಗವಾಗಿ ಓಡಿ ಬಂದ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ ಬಾಲ್ ಹಿಡಿದು ಟಾಮ್ ಬೂಸ್ ಅವರನ್ನು ರನೌಟ್ ಮಾಡಿದರು.

    ನ್ಯೂಜಿಲೆಂಡ್ ಮೂರನೇ ವಿಕೆಟ್‍ಗೆ ಕೇವಲ 17 ರನ್ ಗಳಿಸಿತ್ತು. ಸಂಕಷಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಟಿಮ್ ಸೀಫರ್ಟ್ ಹಾಗೂ ರಾಸ್ ಟೇಲರ್ ಉತ್ತಮ ಜೊತೆಯಾಟ ನೀಡಿದರು. ನಾಲ್ಕನೇ ವಿಕೆಟ್‍ಗೆ ಈ ಜೋಡಿಯು 99 ರನ್‍ಗಳ ಜೊತೆಯಾಟದ ಕೊಡುಗೆ ನೀಡಿತು. ಈ ಜೋಡಿಯು ಶಿವಂ ದುಬೆ ಎಸೆದ ಇನ್ನಿಂಗ್ಸ್ ನ 10ನೇ ಓವರಿನಲ್ಲಿ ನಾಲ್ಕು ಸಿಕ್ಸರ್, ಎರಡು ಬೌಂಡರಿ ಸೇರಿ ಒಟ್ಟು 34 ರನ್ ಸಿಡಿಸಿತು. ಇದನ್ನೂ ಓದಿ: 10 ರನ್ ಅಂತರದಲ್ಲಿ 4 ವಿಕೆಟ್ ಪತನ- ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

    https://twitter.com/SMmPMm/status/1223904995784851457

    ಗೆಲುವಿನ ದಡ ಸಮೀಪಿಸಲು ಮುಂದಾಗಿದ್ದ ಸೀಫರ್ಟ್ ಹಾಗೂ ಟೇಲರ್ ಜೊತೆಯಾಟವನ್ನು ನವದೀಪ್ ಸೈನಿ ಮುರಿದರು. ಸೀಫರ್ಟ್ 50 ರನ್ (30 ಎಸೆತ, 5 ಬೌಂಡರಿ, 3 ಸಿಕ್ಸರ್) ಗಳಿಸಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ನ್ಯೂಜಿಲೆಂಡ್ ಬ್ಯಾಟ್ಸ್‍ಮನ್‍ಗಳು ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು. ಇನ್ನಿಂಗ್ಸ್ ನ 17ನೇ ಓವರಿನ ಮೊದಲ ಎಸೆತದಲ್ಲೇ ಸೈನಿ 53 ರನ್ ಗಳಿಸಿದ್ದ ಟೇಲರ್ ವಿಕೆಟ್ ಕಿತ್ತು ಪಂದ್ಯಕ್ಕೆ ತಿರುವು ನೀಡಿದರು. ಇದನ್ನೂ ಓದಿ: ಮಿಂಚಿನ ವೇಗದ ರಾಹುಲ್ ಸ್ಟಂಪಿಂಗ್‍ಗೆ ಅಭಿಮಾನಿಗಳು ಫಿದಾ- ಟ್ರೋಲ್‍ಗೆ ಸಿಲುಕಿದ ಪಂತ್ 

  • ಕೆಟ್ಟ ದಾಖಲೆಗೆ ಗುರಿಯಾದ ಶಿವಂ ದುಬೆ

    ಕೆಟ್ಟ ದಾಖಲೆಗೆ ಗುರಿಯಾದ ಶಿವಂ ದುಬೆ

    ಮೌಂಟ್ ಮಾಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ ಕ್ಲೀನ್‍ಸ್ವಿಪ್ ಮೂಲಕ ತನ್ನ ಮುಡಿಗೇರಿಸಿಕೊಂಡಿದೆ. ಆದರೆ ಮೌಂಟ್ ಮಾಂಗನುಯಿಯಲ್ಲಿ ಇಂದು ನಡೆದ ಕೊನೆಯ ಪಂದ್ಯದಲ್ಲಿ ಭಾರತ ತಂಡದ ಆಲ್‍ರೌಂಡರ್ ಶಿವಂ ದುಬೆ ಕೆಟ್ಟ ದಾಖಲೆಗೆ ಗುರಿಯಾಗಿದ್ದಾರೆ.

    ನ್ಯೂಜಿಲೆಂಡ್ ಇನ್ನಿಂಗ್ಸ್ ನ 10ನೇ ಓವರಿನಲ್ಲಿ ಬೌಲಿಂಗ್ ಮಾಡಿದ ಶಿವಂ ದುಬೆ ಕ್ರಮವಾಗಿ 6, 6, 4, 1, ನೋಬಾಲ್ + 4, 6 ಹಾಗೂ 6 ಸೇರಿ ಒಟ್ಟು 34 ರನ್ ನೀಡಿದರು. ಈ ಮೂಲಕ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ ಶಿವಂ ದುಬೆ ಎರಡನೇ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಪಟ್ಟಿಯಲ್ಲಿ ಶಿವಂ ದುಬೆ ಅಗ್ರ ಸ್ಥಾನದಲ್ಲಿದ್ದರೆ, ಸ್ಟುವರ್ಟ್ ಬಿನ್ನಿ ನಂತರ ಸ್ಥಾನದಲ್ಲಿದ್ದಾರೆ.  ಇದನ್ನೂ ಓದಿ:  10 ರನ್ ಅಂತರದಲ್ಲಿ 4 ವಿಕೆಟ್ ಪತನ- ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

    ಶಿವಂಗೆ ಮೊದಲು ಸ್ಟುವರ್ಟ್ ಬಿನ್ನಿ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರಿನಲ್ಲಿ 32 ರನ್ ನೀಡಿದ್ದರು. ಒಂದೇ ಓವರಿನಲ್ಲಿ ಅತಿ ಹೆಚ್ಚು ರನ್ ನೀಡಿದ ವಿಶ್ವದ ಬೌಲರ್‍ಗಳ ಪಟ್ಟಿಯಲ್ಲಿ ಇಂಗ್ಲೆಂಡ್‍ನ ಸ್ಟುವರ್ಟ್ ಬ್ರಾಡ್ ಅಗ್ರ ಸ್ಥಾನದಲ್ಲಿದ್ದಾರೆ. ಅವರು 2007ರಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ 36 ರನ್ ನೀಡಿದ್ದರು. ಇದನ್ನೂ ಓದಿ: ಫ್ಲಿಂಟಾಫ್ ಕಿರಿಕ್‍ಗೆ ಚಿಮ್ಮಿತು 6 ಸಿಕ್ಸ್ – ಸಿಕ್ಸರ್ ಸುರಿಮಳೆಗೈದ ಯುವಿ

    ಎರಡನೇ ಸ್ಥಾನದಲ್ಲಿ ಶಿವಂ ದುಬೆ ಇದ್ದಾರೆ. ಮೂರನೇ ಸ್ಥಾನದಲ್ಲಿ ಅಫ್ಘಾನಿಸ್ತಾನದ ಎಜತುಲ್ಲಾ ದೌಲತ್ ಜೈ ಇಂಗ್ಲೆಂಡ್ ವಿರುದ್ಧ 2012ರಲ್ಲಿ ನಡೆದ ಪಂದ್ಯದಲ್ಲಿ ಒಂದೇ ಓವರಿನಲ್ಲಿ 32 ರನ್ ನೀಡಿದ್ದರು. ದಕ್ಷಿಣ ಆಫ್ರಿಕಾದ ವೇಯ್ನ್ ಪೆರ್ನೆಲ್ ಇಂಗ್ಲೆಂಡ್ ವಿರುದ್ಧ 2012ರಲ್ಲಿ 32ರನ್, ಭಾರತದ ಸ್ಟುವರ್ಟ್ ಬಿನ್ನಿ ವೆಸ್ಟ್ ಇಂಡೀಸ್ ವಿರುದ್ಧ 2016ರಲ್ಲಿ 32 ರನ್ ಹಾಗೂ ಮ್ಯಾಕ್ಸ್ ಒ’ಡೌಡ್ ಜಿಂಬಾಬ್ವೆ ಸ್ಕಾಟ್ಲೆಂಡ್ ವಿರುದ್ಧ 2019ರಲ್ಲಿ 32 ರನ್ ನೀಡಿದ್ದರು. ಇದನ್ನೂ ಓದಿ: ಕೀಪಿಂಗ್ ಆಯ್ತು, ಈಗ ಟೀಂ ಇಂಡಿಯಾ ಕ್ಯಾಪ್ಟನ್ ಜವಾಬ್ದಾರಿ ಹೊತ್ತ ಕನ್ನಡಿಗ ರಾಹುಲ್