– ವ್ಯಾಪಕ ಕಾರ್ಯಾಚರಣೆ – 700 ಜನ ಅರೆಸ್ಟ್ ಟೆಹ್ರಾನ್: ಇಸ್ರೇಲ್ (Israel) ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮೂವರನ್ನು ಗಲ್ಲಿಗೇರಿಸಲಾಗಿದೆ ಎಂದು ಇರಾನ್ (Iran) ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡ ಒಂದು ದಿನದ ಬಳಿಕ ಈ ಬೆಳವಣಿಗೆಯಾಗಿದೆ. ಗಲ್ಲಿಗೇರಿಸಲಾದ ಮೂವರು ವ್ಯಕ್ತಿಗಳನ್ನು ಇದ್ರಿಸ್ ಅಲಿ, ಆಜಾದ್ ಶೋಜೈ ಮತ್ತು ರಸೂಲ್ ಅಹ್ಮದ್ ರಸೂಲ್ ಎಂದು ಗುರುತಿಸಲಾಗಿದೆ. ಈ ಮೂವರು ಶಸ್ತ್ರಾಸ್ತ್ರಗಳನ್ನು ಇರಾನ್‌ಗೆ ತರಲು ಯತ್ನಿಸಿದ್ದರು. ಈ ಮೂಲಕ ಇಸ್ರೇಲ್‌ಗೆ ಸಹಕಾರ ಒದಗಿಸಿದ್ದರು ಎಂದು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ಮೂವರನ್ನು ಟರ್ಕಿ ಗಡಿಯ ಸಮೀಪದ ಉರ್ಮಿಯಾದಲ್ಲಿ ಇಂದು (ಜೂ.25ರಂದು) ಮರಣದಂಡನೆ ವಿಧಿಸಲಾಗಿದೆ. ಇದನ್ನೂ ಓದಿ: 12 ದಿನಗಳ ಇಸ್ರೇಲ್-ಇರಾನ್ ಸಂಘರ್ಷಕ್ಕೆ ಅಂತ್ಯ – ಮೂರು ದೇಶಗಳಿಗೆ ಸಿಕ್ಕಿದ್ದೇನು?
ಶಿಕ್ಷೆಗೆ ಗುರಿಯಾದ ಮೂವರು ನೀಲಿ ಜೈಲು ಸಮವಸ್ತ್ರದಲ್ಲಿರುವ ಫೋಟೋಗಳನ್ನು ಇರಾನ್‌ನ ಕೋರ್ಟ್ ಹಂಚಿಕೊಂಡಿದೆ. ಇನ್ನೂ ಸಂಘರ್ಷದ (Iran Israel Conflict) ಸಮಯದಲ್ಲಿ, ಇಸ್ರೇಲ್ ಜೊತೆ ಸಂಬಂಧ ಹೊಂದಿರುವ ಆರೋಪದ ಮೇಲೆ ಕನಿಷ್ಠ 700 ಜನರನ್ನು ಬಂಧಿಸಲಾಗಿದೆ.
ಮೊಸಾದ್ ಜೊತೆ ಸಂಪರ್ಕ – ಗೂಢಚಾರಿಗೆ ಗಲ್ಲು
ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ (Mossad) ಜೊತೆ ಸಂಪರ್ಕದಲ್ಲಿದ್ದ ಗೂಢಚಾರಿಯನ್ನು ಸಹ ಗಲ್ಲಿಗೇರಿಸಲಾಗಿದೆ. ಸುಪ್ರೀಂ ಕೋರ್ಟ್ ಸಂಪೂರ್ಣ ವಿಚಾರಣೆ ನಡೆಸಿ ಅಪರಾಧಿಗೆ ಈ ಶಿಕ್ಷೆ ವಿಧಿಸಿದೆ. ಗಲ್ಲಿಗೇರಿಸಲಾದ ಗೂಢಚಾರಿಗೆಯನ್ನು ಮಜೀದ್ ಮೊಸಾಯೆಬಿ ಎಂದು ಗುರುತಿಸಲಾಗಿದೆ ಎಂದು ನ್ಯಾಯಾಂಗದ ಮಿಜಾನ್ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಈತ ಮೊಸಾದ್‌ಗೆ ಇರಾನ್‌ನ ಸೂಕ್ಷ್ಮ ಮಾಹಿತಿಯನ್ನು ಕಳಿಸುತ್ತಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಧ್ಯರಾತ್ರಿ 4 ದೇಶಗಳ ಮಾತುಕತೆ – ಇಸ್ರೇಲ್, ಇರಾನ್ ಮಧ್ಯೆ ಕದನ ವಿರಾಮ ಆಗಿದ್ದು ಹೇಗೆ?
ಟೆಹ್ರಾನ್: 12 ಗಂಟೆಯ ಒಳಗಡೆ ಇರಾನ್ (Iran) ತೊರೆಯಿರಿ. ಇಲ್ಲದೇ ಇದ್ದರೆ ನಿಮ್ಮನ್ನು ಹತ್ಯೆ ಮಾಡಲಾಗುವುದು ಎಂದು ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) 20 ಕಮಾಂಡರ್‌ಗಳಿಗೆ ಇಸ್ರೇಲ್ (Israel) ಗುಪ್ತಚರ ಸಂಸ್ಥೆ ಮೊಸಾದ್ (Mossad) ಕರೆ ಮಾಡಿ ನೇರವಾಗಿ ಬೆದರಿಕೆ ಹಾಕಿದೆ.
The Washington Post has published an audio file in which Mossad agents contact 20 IRGC commanders and give them 12 hours to flee Iran, or they and their families will be killed. pic.twitter.com/Q1n01AUV8Y
ಆಡಿಯೋದಲ್ಲಿ ಏನಿದೆ?
ನಿಮ್ಮ ಪತ್ನಿ ಮತ್ತು ಮಗುವಿನೊಂದಿಗೆ ತಪ್ಪಿಸಿಕೊಳ್ಳಲು ನಿಮಗೆ 12 ಗಂಟೆಗಳ ಸಮಯವಿದೆ ಎಂದು ನಾನು ಈಗ ನಿಮಗೆ ಸಲಹೆ ನೀಡಬಲ್ಲೆ. ನೀವು ಈಗ ನಮ್ಮ ಪಟ್ಟಿಯಲ್ಲಿದ್ದೀರಿ. ನಿಮ್ಮ ಕುಟುಂಬದ ಮೇಲೆ ನಾವು ಯಾವುದೇ ಕ್ಷಣದಲ್ಲಿ ದಾಳಿ ಮಾಡಬಹುದು. ನಿಮ್ಮ ಸಂಬಂಧಿಕರಿಗಿಂತ ನಾವು ನಿಮಗೆ ಬಹಳ ಹತ್ತಿರದಲ್ಲಿದ್ದೇವೆ. ಇದನ್ನೂ ಓದಿ: 1 ಸಾವಿರ ಕಿ.ಮೀ. ದೂರದಿಂದ ದಾಳಿ – ಕಾರಿನಲ್ಲಿ ಹೋಗುತ್ತಿದ್ದಾಗಲೇ ಇರಾನ್ ಟಾಪ್ ಸೇನಾ ನಾಯಕ ಹತ್ಯೆ
ಈಗಾಗಲೇ ಹಲವು ಕಮಾಂಡರ್, ವಿಜ್ಞಾನಿಗಳನ್ನು ನಾವು ಹತ್ಯೆ ಮಾಡಿರುವುದು ನಿಮಗೆ ಗೊತ್ತಿರಬಹುದು. ನಿಮ್ಮನ್ನು ಹತ್ಯೆ ಮಾಡುವುದು ನಮಗೆ ಕಷ್ಟದ ಕೆಲಸವಲ್ಲ. ನಿಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಜೀವ ಉಳಿಸಿಕೊಳ್ಳಲು ನಿಮಗೆ ಕೊನೆಯ ಆಯ್ಕೆ ನೀಡುತ್ತಿದ್ದೇವೆ ಎಂದು ಆಡಿಯೋದಲ್ಲಿ ಎಚ್ಚರಿಕೆ ನೀಡಲಾಗಿದೆ.
– ದೇಶಾದ್ಯಂತ ಗೂಢಚಾರಿಣಿ ಫೋಟೋ ಪ್ರಕಟಿಸಿದ ಇರಾನ್ – ಇಸ್ರೇಲ್ ದಾಳಿ ಬೆನ್ನಲ್ಲೇ ಇರಾನ್‌ನಿಂದ ಕಣ್ಮರೆ
ಟೆಲ್ ಅವಿವ್: ಪುಟ್ಟ ದೇಶ ಇಸ್ರೇಲ್ (Israel) ಇರಾನ್ (Iran) ಮೇಲೆ ಇಷ್ಟೊಂದು ನಿಖರವಾಗಿ ದಾಳಿ ಮಾಡಿದರ ಹಿಂದೆ ಮೊಸಾದ್ (Mossad) ಮಹಿಳಾ ಗೂಢಚಾರಿಣಿ ಕೆಲಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು. ಫ್ರಾನ್ಸ್ ಮೂಲದ ಕ್ಯಾಥರೀನ್ ಪೆರೆಜ್ ಶಕ್ಡಮ್ (Catherine Perez Shakdam) ಎಂಬಾಕೆ ಎರಡು ವರ್ಷದ ಹಿಂದೆ ಮೊಸಾದ್‌ನಿಂದ ತರಬೇತಿ ಪಡೆದು ರಹಸ್ಯವಾಗಿ ಇರಾನ್ ಪ್ರವೇಶಿಸಿದ್ದಳು. ನೋಡಲು ಸುಂದರವಾಗಿದ್ದ ಈಕೆ ಮೂಲತ: ಯಹೂದಿ. ಕ್ಯಾಥರೀನ್ ಶಿಯಾ ಇಸ್ಲಾಂಗೆ ಮತಾಂತರಗೊಂಡು ನಿಧಾನವಾಗಿ ಇರಾನಿನ ಉನ್ನತ ಅಧಿಕಾರಿಗಳು ಮತ್ತು ಅವರ ಕುಟುಂಬಗಳಿಗೆ ಹತ್ತಿರವಾಗಿದ್ದಳು.
ನಾನು ಇಸ್ಲಾಂ ಧರ್ಮದ ಬಗ್ಗೆ ಮತ್ತು ಇರಾನ್ ದೇಶದ ಆಡಳಿತದ ಬಗ್ಗೆ ಒಲವು ಹೊಂದಿದ್ದೇನೆ ಎಂದು ಹೇಳಿ ಇಸ್ಲಾ ಧರ್ಮ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಳು. ಮತಾಂತರಗೊಂಡ ಬಳಿಕ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿದ್ದ ಈಕೆ ಸರ್ಕಾರಿ ಅಧಿಕಾರಿಗಳ ಪತ್ನಿಯರನ್ನು ಭೇಟಿಯಾಗಿ ಮಾತನಾಡಲು ಆರಂಭಿಸಿದ್ದಳು. ನಂತರದ ದಿನಗಳಲ್ಲಿ ಈಕೆ ಎಷ್ಟು ವಿಶ್ವಾಸ ಗಳಿಸಿದ್ದಳು ಎಂದರೆ ಸೇನಾ ನಾಯಕರ ಮನೆಗೆ ನಿಯಮಿತ ಹೋಗುವ ಮಟ್ಟಕ್ಕೆ ಆಪ್ತತೆ ಬೆಳೆದಿತ್ತು. ಇದನ್ನೂ ಓದಿ: ಇರಾನ್‌ಗೆ ಅಣ್ವಸ್ತ್ರ ನೀಡಲು ಮುಂದೆ ಬಂದ ಹಲವು ದೇಶಗಳು!
ಈಕೆಯ ಬರಹಗಳು ನಿಯಮಿತವಾಗಿ ಪ್ರೆಸ್ ಟಿವಿ, ಟೆಹ್ರಾನ್ ಟೈಮ್ಸ್ ಮತ್ತು ಖಮೇನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದವು. ಬರಹಗಾರ್ತಿ, ಪತ್ರಕರ್ತೆ ಮತ್ತು ಚಿಂತಕಿಯಾಗಿ ಪ್ರವೇಶಿಸಿದ್ದ ಕ್ಯಾಥರೀನ್ ಲೇಖನದ ಮೂಲಕ ಇರಾನಿನ ಸರ್ವೋಚ್ಚ ನಾಯಕ ಅಲಿ ಖಮೇನಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಳು.
ಸೇನೆಯಲ್ಲಿರುವ ಉನ್ನತ ನಾಯಕರ ಮನೆಗೆ ಅಷ್ಟು ಸುಲಭವಾಗಿ ಯಾರನ್ನು ಬಿಡುವುದಿಲ್ಲ. ಆದರೆ ಬಿಗಿ ಭದ್ರತೆ ಕಲ್ಪಿಸಿದ್ದ ಈ ಮನೆಗೆ ಕ್ಯಾಥರೀನ್ ಬಹಳ ಸಲೀಸಾಗಿ ಹೋಗುತ್ತಿದ್ದಳು. ಮನೆಗೆ ಭೇಟಿ ನೀಡುವುದರ ಜೊತೆಗೆ ಆಕೆ ಉನ್ನತ ಕಮಾಂಡರ್‌ಗಳ ಬಗ್ಗೆ ಗುಪ್ತಚರ ಮಾಹಿತಿಯನ್ನು ಸದ್ದಿಲ್ಲದೆ ಸಂಗ್ರಹಿಸುತ್ತಿದ್ದಳು. ಸೇನಾ ನಾಯಕರ ಮನೆ ಮಾತ್ರವಲ್ಲ ಸಾಮಾನ್ಯವಾಗಿ ಯಾರಿಗೂ ಪ್ರವೇಶ ಇಲ್ಲದ ಅಥವಾ ಕಠಿಣ ಪರಿಶೀಲನೆಯ ನಂತರ ಪ್ರವೇಶಿಸಬಹುದಾಗಿದ್ದ ಖಾಸಗಿ ಸ್ಥಳಗಳಿಗೆ ಈಕೆ ಬಹಳ ಸಲೀಸಲಾಗಿ ತೆರಳುತ್ತಿದ್ದಳು. ಇದನ್ನೂ ಓದಿ: ವಿಶ್ವದ ಪವರ್‌ಫುಲ್ ವೆಪೆನ್ ʻಬಂಕರ್ ಬಸ್ಟರ್ʼ – 14,000 ಕೆಜಿ ತೂಕದ ಬಾಂಬ್ ಬಳಸಿ ಇರಾನ್ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ
ಇರಾನ್ ಏಜೆನ್ಸಿಗಳು ಸಂದರ್ಶಕರ ಫೋನ್ ಇತ್ಯಾದಿಗಳನ್ನು ಪರಿಶೀಲಿಸುತ್ತಿದ್ದರೂ ಕ್ಯಾಥರೀನ್ ಸೂಕ್ಷ್ಮ ಪ್ರದೇಶಗಳಿಗೆ ತೆರಳಿ ರಹಸ್ಯ ಮಾಹಿತಿಯನ್ನು ಸಂಗ್ರಹಿಸಿ ನೇರವಾಗಿ ಮೊಸಾದ್‌ಗೆ ಕಳುಹಿಸುತ್ತಿದ್ದಳು. ಕಳೆದ ಮೂರು ವಾರಗಳಲ್ಲಿ ಸೇನಾ ಮುಖ್ಯಸ್ಥರಿಂದ ಹಿಡಿದು ಐಆರ್‌ಜಿಸಿ ನಾಯಕರವರೆಗೆ 9 ಉನ್ನತ ಇರಾನಿನ ಮಿಲಿಟರಿ ಕಮಾಂಡರ್‌ಗಳನ್ನು ಇಸ್ರೇಲ್ ಕೊಂದು ಹಾಕಿದೆ. ಪ್ರತಿ ಬಾರಿಯೂ, ಇಸ್ರೇಲಿ ಜೆಟ್‌ಗಳು ಈ ಅಧಿಕಾರಿಗಳು ನೆಲೆಸಿದ್ದ ನಿಖರವಾಗಿ ಕಟ್ಟಡವನ್ನು ಗುರಿಯಾಗಿಸಿಕೊಂಡು ಮಾರಕ ದಾಳಿಗಳನ್ನು ನಡೆಸಿವೆ.
ಈಕೆ ಕಳುಹಿಸಿದ ಮಾಹಿತಿ ಆಧಾರದಲ್ಲೇ ಇಸ್ರೇಲ್ ಕೆಲ ದಿನಗಳಿಂದ ಸೇನಾ ನಾಯಕರ ಮತ್ತು ವಿಜ್ಞಾನಿಗಳ ಮನೆ ಮೇಲೆ ನಿಖರ ದಾಳಿ ಮಾಡಿರಬಹುದು ಎಂದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಈಗ ಎಲ್ಲಿದ್ದಾಳೆ?
ಇಸ್ರೇಲ್ ದಾಳಿ ಆರಂಭಿಸುತ್ತಿದ್ದಂತೆ ಸೇನಾ ನಾಯಕರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಸುರಕ್ಷಿತ ಸ್ಥಳಕ್ಕೆ ತೆರಳಿದ್ದರೂ ಇಸ್ರೇಲ್ ಆ ಜಾಗಕ್ಕೆ ನಿಖರವಾಗಿ ದಾಳಿ ಮಾಡಿ ಹತ್ಯೆ ಮಾಡುತ್ತಿತ್ತು.
ಇಸ್ರೇಲ್ ದಾಳಿಗೆ ಬೆಚ್ಚಿಬಿದ್ದ ಇರಾನ್ ಗುಪ್ತಚರ ಸಂಸ್ಥೆ ತನಿಖೆ ಆರಂಭಿಸಿತು. ತನಿಖೆ ಆರಂಭಿಸಿದಾಗ ಅಧಿಕಾರಿಗಳು ಕ್ಯಾಥರೀನ್ ಜೊತೆ ತೆಗೆಸಿದ್ದ ಫೋಟೋಗಳು ನಂತರ ಆಕೆ ನಿಯಮಿತವಾಗಿ ಮನೆಗೆ ಭೇಟಿ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ಬಯಲಾಗುತ್ತಿದ್ದಂತೆ ಇರಾನ್ ಆಕೆಯ ಪತ್ತೆಗೆ ಬಲೆ ಬೀಸಿದೆ. ಆದರೆ ಅಷ್ಟು ಹೊತ್ತಿಗಾಗಲೇ ಆಕೆ ಇರಾನ್‌ನಿಂದ ಕಣ್ಮರೆಯಾಗಿದ್ದಳು.
ಇರಾನ್‌ನ ಗುಪ್ತಚರ ಸಂಸ್ಥೆ ಈಕೆಯ ಪೋಸ್ಟರ್‌ಗಳು ಮತ್ತು ಫೋಟೋಗಳನ್ನು ದೇಶಾದ್ಯಂತ ಪ್ರಕಟಿಸಿ ಈಕೆಯ ಸುಳಿವು ನೀಡಬೇಕೆಂದು ಕೇಳಿಕೊಂಡಿದೆ. ಒಂದೋ ಆಕೆ ತನ್ನ ಗುರುತನ್ನು ಬದಲಾಯಿಸಿರಬೇಕು ಅಥವಾ ಬೇರೆ ದೇಶಕ್ಕೆ ತೆರಳಿರಬಹುದು ಎಂದು ವರದಿಯಾಗಿದೆ. ಇರಾನಿನ ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ಫೋಟೋಗಳು ಈಗ ವೈರಲ್ ಆಗಿದೆ.
ಟೆಲ್ ಅವೀವ್: ಕೇವಲ ಗಾಜಾ ಪಟ್ಟಿಯಲ್ಲಿ (Gaza Strip) ಅಲ್ಲ ವಿಶ್ವದೆಲ್ಲೆಡೆ ಇರುವ ಹಮಾಸ್ (Hamas) ನಾಯಕರನ್ನು ಹತ್ಯೆ ಮಾಡಲು ಇಸ್ರೇಲ್ (Israel) ಈಗ ಮುಂದಾಗಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli Prime Minister Benjamin Netanyahu) ಇಸ್ರೇಲಿನ ವಿದೇಶಿ ಗುಪ್ತಚರ ಸೇವೆ ನೀಡುವ ಮೊಸಾದ್‌ಗೆ (Mossad) ವಿಶ್ವದೆಲ್ಲೆಡೆ ಇರುವ ಹಮಾಸ್ ನಾಯಕರನ್ನು ಹುಡುಕಿ ಹುಡುಕಿ ಹತ್ಯೆ ಮಾಡುವಂತೆ ಆದೇಶ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಟರ್ಕಿ, ಲೆಬನಾನ್ ಮತ್ತು ಕತಾರ್‌ನಲ್ಲಿ ನೆಲೆಸಿರುವ ಹಮಾಸ್ ನಾಯಕರನ್ನು ಪತ್ತೆ ಹಚ್ಚುವ ಕೆಲಸವನ್ನು ಗುಪ್ತಚರ ಇಲಾಖೆ ಆರಂಭಿಸಿದೆ. ಕತಾರ್ ತನ್ನ ರಾಜಧಾನಿ ದೋಹಾದಲ್ಲಿ ಕಳೆದ ಒಂದು ದಶಕದಿಂದ ರಾಜಕೀಯ ಕಚೇರಿಯನ್ನು ನಡೆಸಲು ಹಮಾಸ್‌ಗೆ ಅವಕಾಶ ಮಾಡಿಕೊಟ್ಟಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಕದನ ವಿರಾಮದ ನಡುವೆಯೂ ಗಾಜಾದಲ್ಲಿ ಐವರು ಒತ್ತೆಯಾಳುಗಳ ಸಾವು
ಸಾಮಾನ್ಯವಾಗಿ ಈ ರೀತಿಯ ಯೋಜನೆಗಳು ರಹಸ್ಯವಾಗಿರುತ್ತದೆ. ಆದರೆ ನೆತನ್ಯಾಹು ನ.22 ರಂದು ಹಿರಿಯ ಅಧಿಕಾರಿಗಳ ಜೊತೆಗೆ ನಡೆಸಿದ ಸಭೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಹಮಾಸ್ ನಾಯಕರ ವಿರುದ್ಧ ಕಾರ್ಯನಿರ್ವಹಿಸಲು ಸೂಚನೆ ನೀಡಿದ್ದೇನೆ ಎಂದು ಬಹಿರಂಗವಾಗಿ ತಿಳಿಸಿದ್ದಾರೆ.
ವಿದೇಶದಲ್ಲಿ ಹಮಾಸ್ ನಾಯಕರನ್ನು ಇಸ್ರೇಲ್ ಹತ್ಯೆ ಮಾಡುವುದು ಹೊಸದೆನಲ್ಲ. ಈ ಹಿಂದೆ ಹಲವು ರಹಸ್ಯ ಕಾರ್ಯಾಚರಣೆ ನಡೆಸಿ ನಾಯಕರನ್ನು ಹತ್ಯೆ ಮಾಡಿತ್ತು. ಲೆಬನಾನ್ ಮತ್ತು ಬೈರುತ್‌ನಲ್ಲಿದ್ದ ಪ್ಯಾಲೆಸ್ತೇನಿಯನ್ ಉಗ್ರಗಾಮಿಗಳ ಮೇಲೆ ಮಹಿಳೆಯರ ಮೂಲಕ ಇಸ್ರೇಲ್ ದಾಳಿ ನಡೆಸಿ ಕೊಂದು ಹಾಕಿತ್ತು. ಪ್ರವಾಸಿಯ ಸೋಗಿನಲ್ಲಿ ದುಬೈನಲ್ಲಿದ್ದ ಹಮಾಸ್ ನಾಯಕನನ್ನು ಹತ್ಯೆ ಮಾಡಿತ್ತು. ಸಿರಿಯಾದಲ್ಲಿ ಹಿಜ್ಬುಲ್ಲಾ ನಾಯಕನನ್ನು ಕೊಲ್ಲಲು ಇಸ್ರೇಲ್ ಕಾರ್ ಬಾಂಬ್ ಬಳಸಿತ್ತು. ಇರಾನ್‌ನಲ್ಲಿ ಪರಮಾಣು ವಿಜ್ಞಾನಿಯನ್ನು ಕೊಲ್ಲಲು ರಿಮೋಟ್-ನಿಯಂತ್ರಿತ ರೈಫಲ್ ಬಳಸಿತ್ತು.