Tag: mosquitoes

  • ದೊಡ್ಡ ದೊಡ್ಡ ಡ್ರೋನ್ ಬಳಸಿ ಹವಾಯ್‌ಗೆ ಸೊಳ್ಳೆಗಳ ಬಿಡುಗಡೆ – ಇಲ್ಲದಿದ್ರೆ ಈ ಪ್ರಭೇದವೇ ನಾಶವಾಗುತ್ತಂತೆ!

    ದೊಡ್ಡ ದೊಡ್ಡ ಡ್ರೋನ್ ಬಳಸಿ ಹವಾಯ್‌ಗೆ ಸೊಳ್ಳೆಗಳ ಬಿಡುಗಡೆ – ಇಲ್ಲದಿದ್ರೆ ಈ ಪ್ರಭೇದವೇ ನಾಶವಾಗುತ್ತಂತೆ!

    ಲಗಿದ್ದಾಗ ಅಥವಾ ಕುಳಿತಿದ್ದಾಗ ‘ಗುಯ್..’ ಅಂತ ಕಿವಿ ಹತ್ತಿರ ಸುಳಿಯುವ ಸೊಳ್ಳೆಗಳು ಅಂದ್ರೆ ಎಂತಹವರಿಗೂ ಹಿಂಸೆ. ಸಾಕಪ್ಪಾ.. ಸಾಕು ಈ ಸೊಳ್ಳೆಗಳ ಕಾಟ ಎನಿಸದೇ ಇರದು. ಮೈಮೇಲೆ ಕೂತು ಸೂಜಿ ಚುಚ್ಚಿ ರಕ್ತ ಹೀರುವಾಗ ಅದೆಷ್ಟು ಸೊಳ್ಳೆಯನ್ನು ಹೊಡೆದು ಕೊಂದಿಲ್ಲ. ಅದಕ್ಕೆ ಲೆಕ್ಕವೇ ಇಲ್ಲ. ಸೊಳ್ಳೆ ಸಂತಾನ ಇಲ್ಲದಿದ್ರೆ ಎಷ್ಟು ಆರಾಮಾಗಿ ನಿದ್ರೆ ಮಾಡಬಹುದಿತ್ತಲ್ವಾ ಅಂತ ಯೋಚಿಸಿದವರಿಲ್ಲ. ಸೊಳ್ಳೆಗಳು ಹತ್ತಿರ ಸುಳಿದಾಡಿದರೆ ಶತ್ರುಗಳಿಗಿಂತ ಹೆಚ್ಚು. ಅವುಗಳನ್ನು ಕೊಲ್ಲಲು ಸೊಳ್ಳೆಬತ್ತಿ, ಸೊಳ್ಳೆ ಬ್ಯಾಟ್ ಬಳಕೆಗೇನು ಕಮ್ಮಿಯಿಲ್ಲ. ಒಟ್ಟಾರೆ, ಸೊಳ್ಳೆ ಅಂದ್ರೆ ಕಿರಿಕಿರಿ.

    ನಿಮಗೆ ಗೊತ್ತಾ? ಸೊಳ್ಳೆಯಿಂದ ಜೀವಸಂಕುಲ ಉಳಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು. ಆ ನಿಟ್ಟಿನಲ್ಲಿ ಒಂದು ಕಾರ್ಯವನ್ನೂ ವಿಜ್ಞಾನಿಗಳು ಮಾಡಿದ್ದಾರೆ. ಈ ಪ್ರಯೋಗ ಅಮೆರಿಕಗೆ ಸೇರಿದ ಹವಾಯ್ (Hawaii) ದ್ವೀಪದಲ್ಲಿ ಅಂತಹದ್ದೊಂದು ಪ್ರಯೋಗ ಮಾಡಿದ್ದಾರೆ. ಏನಿದು ಪ್ರಯೋಗ? ಸೊಳ್ಳೆಗಳಿಂದಾಗುವ ಪ್ರಯೋಜನ ಏನು? ಜೀವಸಂಕುಲ ಉಳಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ಡ್ರೋನ್ ಬಳಸಿ ಸೊಳ್ಳೆ ರಿಲೀಸ್!
    ಹವಾಯಿಯ ದೂರದ ಕಾಡುಗಳಲ್ಲಿ ವಿಜ್ಞಾನಿಗಳು ದೈತ್ಯ ಡ್ರೋನ್ ಬಳಸಿ ಸೊಳ್ಳೆಗಳ ಹಿಂಡುಗಳನ್ನು ಬಿಡುತ್ತಿದ್ದಾರೆ. ಇದೊಂಥರ ವಿಚಿತ್ರ ಪರಿಪಾಠ ಅಂತ ಅನ್ನಿಸಬಹುದು. ಆದರೆ, ಅದರಲ್ಲೊಂದು ಉದ್ದೇಶ ಇದೆ. ವಿಜ್ಞಾನಿಗಳು ಹವಾಯಿಯಲ್ಲಿ ಜೀವವನ್ನು ಪುನರುತ್ಥಾನಗೊಳಿಸಲು ಈ ಕೀಟಗಳನ್ನು ಬಿಡುತ್ತಿದ್ದಾರೆ.

    ಅಳಿವಿನ ಅಂಚಿನಲ್ಲಿ ಹನಿಕ್ರೀಪರ್ಸ್?
    ಈ ಸುಂದರ ಉಷ್ಣವಲಯದ ದ್ವೀಪವು ಅಳಿವಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಒಂದು ಕಾಲದಲ್ಲಿ ಹವಾಯಿಯಲ್ಲಿ ಹೇರಳವಾಗಿದ್ದ ಹನಿಕ್ರೀಪರ್ಸ್ (Honeycreepers) ಹೆಸರಿನ ವರ್ಣರಂಜಿತ ಹಾಡುಹಕ್ಕಿಗಳು, ಆಕ್ರಮಣಕಾರಿ ಸೊಳ್ಳೆಗಳಿಂದ ಹರಡುವ ಪಕ್ಷಿ ಮಲೇರಿಯಾಗೆ ಬಲಿಯಾಗುತ್ತಿವೆ. ಪಕ್ಷಿಗಳು ಬದುಕುಳಿಯಲು ಹೆಣಗಾಡುತ್ತಿವೆ. ಈ ಪಕ್ಷಿಗಳ ಸಂತಾನ ಮತ್ತೆ ವೃದ್ಧಿಯಾಗಬೇಕೆಂದು ವಿಜ್ಞಾನಿಗಳು ಯೋಜನೆಯೊಂದನ್ನು ರೂಪಿಸಿದ್ದಾರೆ. ಪಕ್ಷಿಗಳ ಸಂತಾನೋತ್ಪತ್ತಿಗೆ ಅಡ್ಡಿಪಡಿಸುವ ಬ್ಯಾಕ್ಟೀರಿಯಾದ ತಳಿಗಳನ್ನು ಬೇರೆಡೆಗೆ ಸಾಗಿಸಲು, ಪ್ರಯೋಗಾಲಯದಲ್ಲಿ ಸಾಕಿದ ಮತ್ತು ಕಚ್ಚದ ಗಂಡು ಸೊಳ್ಳೆಗಳನ್ನು ಬಿಡಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

    ಮಲೇರಿಯಾ ಹರಡುತ್ತಿರುವ ಹನಿಕ್ರೀಪರ್ ಆವಾಸಸ್ಥಾನಗಳಿಗೆ ಈ ವಿಶೇಷ ಗಂಡು ಸೊಳ್ಳೆಗಳನ್ನು (Mosquitoes) ನಿರಂತರವಾಗಿ ಬಿಡುಗಡೆ ಮಾಡಲಾಗುತ್ತಿದೆ. ಆ ಮೂಲಕ ವಿಜ್ಞಾನಿಗಳು ಕಚ್ಚುವ ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ರೋಗ ಹರಡುವಿಕೆಯನ್ನು ನಿಗ್ರಹಿಸಲು ಕ್ರಮಕೈಗೊಂಡಿದ್ದಾರೆ.

    ಏನಿದು ಬರ್ಡ್ಸ್, ನಾಟ್ ಸೊಳ್ಳೆಗಳು ಯೋಜನೆ?
    ‘ಬರ್ಡ್ಸ್, ನಾಟ್ ಸೊಳ್ಳೆಗಳು’ ಯೋಜನೆ ಮೂಲಕ ಈ ಕ್ರಮವಹಿಸಲಾಗಿದೆ. ಇದು ಸ್ಥಳೀಯ ಹವಾಯಿಯನ್ ಪಕ್ಷಿಗಳನ್ನು ರಕ್ಷಿಸಲು ಕೆಲಸ ಮಾಡುವ ಸಂಸ್ಥೆಗಳ ಒಕ್ಕೂಟವಾಗಿದೆ. ಯೋಜನೆಯನ್ನು 2023ರ ನವೆಂಬರ್‌ನಲ್ಲಿ ಪ್ರಾರಂಭಿಸಲಾಯಿತು. ಮಾಯಿ ಮತ್ತು ಕೌಯಿಯಲ್ಲಿನ ಹನಿಕ್ರೀಪರ್ ಆವಾಸಸ್ಥಾನಗಳಲ್ಲಿ 40 ಮಿಲಿಯನ್‌ಗಿಂತಲೂ ಹೆಚ್ಚು ಗಂಡು ಸೊಳ್ಳೆಗಳನ್ನು ಬಿಡುಗಡೆ ಮಾಡಿದ್ದಾರೆ.

    ಈ ಸೊಳ್ಳೆಗಳನ್ನು ಬಿಡುವುದರಿಂದ ಪಕ್ಷಿಗಳ ಆವಾಸಸ್ಥಾನದ ಕಾಡುಗಳಿಗೆ ಬೇರೆ ಸೊಳ್ಳೆಗಳು ಹೋಗಲು ಸಾಧ್ಯವಿಲ್ಲ ಎಂದು ಡ್ರೋನ್ ಕಾರ್ಯವನ್ನು ಮುನ್ನಡೆಸುತ್ತಿರುವ ಅಮೆರಿಕನ್ ಬರ್ಡ್ ಕನ್ಸರ್ವೆನ್ಸಿಯ ಹವಾಯಿ ಕಾರ್ಯಕ್ರಮ ನಿರ್ದೇಶಕ ಕ್ರಿಸ್ ಫಾರ್ಮರ್ ತಿಳಿಸಿದ್ದಾರೆ.

    ಆಕ್ರಮಣಕಾರಿ ಸೊಳ್ಳೆಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಅನೇಕ ಸ್ಥಳೀಯ ಪಕ್ಷಿ ಪ್ರಭೇದಗಳು ಶಾಶ್ವತವಾಗಿ ಕಣ್ಮರೆಯಾಗುತ್ತವೆ. ಕನಿಷ್ಠ 33 ಜಾತಿಯ ಹನಿಕ್ರೀಪರ್‌ಗಳು ಈಗ ಅಳಿದುಹೋಗಿವೆ. ಮೌಯಿಯಲ್ಲಿರುವ ಕಿವಿಕಿಯು, ಅಕೊಹೆಕೊಹೆ ಮತ್ತು ಕೌಯಿಯಲ್ಲಿರುವ ಅಕೆಕೆ ಸೇರಿದಂತೆ ಉಳಿದಿರುವ 17 ಜಾತಿಗಳಲ್ಲಿ ಹಲವು ಪಕ್ಷಿಗಳು ಅಳಿವಿನಂಚಿನಲ್ಲಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

    ಸಂತಾನೋತ್ಪತ್ತಿ ಸಮಸ್ಯೆ ಇರುವ ಸೊಳ್ಳೆಗಳನ್ನು ಬಿಡುಗಡೆ ಮಾಡುವುದರಿಂದ ನಿರೀಕ್ಷಿತ ಫಲಿತಾಂಶ ಸಿಗುತ್ತದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಆದರೆ, ಹನಿಕ್ರೀಪರ್ ಸಂಖ್ಯೆಯನ್ನು ಉಳಿಸಲು ಈ ಸೊಳ್ಳೆಗಳಿಗೆ ಸಾಧ್ಯವಾಗಬಹುದು ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

    ಹವಾಯ್‌ಗೆ ಮಾರಕ ಸೊಳ್ಳೆಗಳು ಬಂದಿದ್ಹೇಗೆ?
    ಸಾಮಾನ್ಯವಾಗಿ, ಸೊಳ್ಳೆಗಳು ಹವಾಯಿಯಲ್ಲಿ ವಾಸಿಸುವುದಿಲ್ಲ. ಆದರೆ 1826 ರಲ್ಲಿ ಒಂದು ತಿಮಿಂಗಿಲ ಬೇಟೆಯ ಹಡಗು ಆಕಸ್ಮಿಕವಾಗಿ ಅವುಗಳನ್ನು ದ್ವೀಪಗಳಿಗೆ ತಂದು ಬಿಟ್ಟಿವೆ. ಅವು ಬೆಚ್ಚಗಿನ, ಆರ್ದ್ರ ವಾತಾವರಣದಲ್ಲಿ ವೃದ್ಧಿಯಾಗಿ ಅಭಿವೃದ್ಧಿ ಹೊಂದಿದವು. ಈಗ ಪಕ್ಷಿ ಪ್ರಭೇದಕ್ಕೆ ಕಂಟಕವಾಗಿ ಪರಿಣಮಿಸಿವೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಗಾದೆಯಂತೆ, ಆಕ್ರಮಣಕಾರಿ ಸೊಳ್ಳೆಗಳನ್ನು ಮಟ್ಟ ಹಾಕಲು ಸಾಕಿದ ಸೊಳ್ಳೆಗಳ ಅಸ್ತ್ರ ಪ್ರಯೋಗವನ್ನು ವಿಜ್ಞಾನಿಗಳು ಮಾಡುತ್ತಿದ್ದಾರೆ.

  • ಆಸ್ಪತ್ರೆಯಲ್ಲಿ ಪತ್ನಿಗೆ ಸೊಳ್ಳೆ ಕಚ್ಚಿದ್ದಕ್ಕೆ ಪೊಲೀಸರ ಸಹಾಯ ಕೇಳಿದ ವ್ಯಕ್ತಿ

    ಆಸ್ಪತ್ರೆಯಲ್ಲಿ ಪತ್ನಿಗೆ ಸೊಳ್ಳೆ ಕಚ್ಚಿದ್ದಕ್ಕೆ ಪೊಲೀಸರ ಸಹಾಯ ಕೇಳಿದ ವ್ಯಕ್ತಿ

    ಲಕ್ನೋ: ಆಸ್ಪತ್ರೆಯಲ್ಲಿ (Hospital) ಪತ್ನಿಗೆ ಸೊಳ್ಳೆ (Mosquitoes) ಕಚ್ಚುತ್ತಿದೆ ಎಂದು ವ್ಯಕ್ತಿಯೊಬ್ಬ ಪೊಲೀಸರ ಬಳಿ ಸಹಾಯ ಕೇಳಿದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಚಂದೌಸಿಯ ರಾಜ್ ಮೊಹಲ್ಲಾದ ನಿವಾಸಿ ಅಸದ್ ಖಾನ್ ಪೊಲೀಸರ ಬಳಿ ಸಹಾಯ ಕೇಳಿದ ವ್ಯಕ್ತಿ. ಈತ ಪತ್ನಿಗೆ (Wife) ಹೆಣ್ಣು ಮಗು ಜನಿಸಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಚಂದೌಸಿಯ ಹರಿ ಪ್ರಕಾಶ್ ನರ್ಸಿಂಗ್ ಹೋಮ್‍ಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಆಕೆಗೆ ಹೆಚ್ಚು ಸೊಳ್ಳೆ ಕಡಿದಿತ್ತು. ಇದನ್ನು ಗಮನಿಸಿದ ಅಸದ್ ಖಾನ್ ಟ್ವೀಟ್ ಮಾಡಿದ್ದು, ಸಹಾಯಕ್ಕಾಗಿ ಉತ್ತರಪ್ರದೇಶದ ಪೊಲೀಸರಿಗೆ ಟ್ಯಾಗ್ ಮಾಡಿದ್ದಾನೆ.

    ಟ್ವೀಟ್‍ನಲ್ಲಿ ಏನಿದೆ?: ನನ್ನ ಹೆಂಡತಿ ಚಂದೌಸಿಯಲ್ಲಿರುವ ಹರಿ ಪ್ರಕಾಶ್ ನಸಿರ್ಂಗ್ ಹೋಮ್‍ನಲ್ಲಿ ಪುಟ್ಟ ದೇವತೆಗೆ ಜನ್ಮ ನೀಡಿದ್ದಾಳೆ. ನನ್ನ ಹೆಂಡತಿ ನೋವಿನಿಂದ ಬಳಲುತ್ತಿದ್ದಾಳೆ. ಜೊತೆಗೆ ಆಕೆಗೆ ಹಲವಾರು ಸೊಳ್ಳೆಗಳು ಕಚ್ಚುತ್ತಿವೆ. ದಯವಿಟ್ಟು ನನಗೆ ತಕ್ಷಣ ಮಾರ್ಟೀನ್ ಕಾಯಿಲ್ ಅನ್ನು ಒದಗಿಸಿ ಎಂದು ಟ್ವೀಟ್ ಮಾಡಿದ್ದಾನೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಆಟೋ ಚಾಲಕನ ಮನೆಗೆ ಬೆಳಕಾದ ಗುರು ಬೆಳದಿಂಗಳು ಟ್ರಸ್ಟ್

    ಘಟನೆಗೆ ಸಂಬಂಧಿಸಿ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸ್ ಪ್ರಧಾನ ಕಚೇರಿಯಿಂದ ಸೂಚನೆ ಪಡೆದ ಪೊಲೀಸರು ಸೊಳ್ಳೆ ನಿವಾರಕ ಕಾಯಿಲ್‍ನೊಂದಿಗೆ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ತಲುಪಿಸಿದರು. ವಿಷಯವನ್ನು ಅರಿತು ಸಹಾಯ ಮಾಡಿದ ಪೊಲೀಸರಿಗೆ ಅಸಾದ್ ಧನ್ಯವಾದ ತಿಳಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಅಸದ್, ನನ್ನ ಹೆಂಡತಿ ನಮ್ಮ ಮಗುವಿಗೆ ಜನ್ಮ ನೀಡಲು ಆಸ್ಪತ್ರೆಯಲ್ಲಿದ್ದಳು. ಆಕೆ ಅನುಭವಿಸುತ್ತಿದ್ದ ನೋವಿನ ಜೊತೆಗೆ ಸೊಳ್ಳೆಗಳು ಕಚ್ಚುತ್ತಿದ್ದವು. ಸಮಯ ಬೆಳಗ್ಗೆ 2: 45 ಆಗಿದ್ದರಿಂದ ಯುಪಿ ಪೊಲೀಸರನ್ನು ಹೊರತುಪಡಿಸಿ ಬೇರೆಯವರ ಸಹಾಯವನ್ನು ಪಡೆಯಲು ನಾನು ಯೋಚಿಸಲಿಲ್ಲ. ಆದರೆ ನಾನು ಟ್ವೀಟ್ ಮಾಡಿದ ಕೂಡಲೇ ನನಗೆ ಇನ್ನೊಂದು ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿತು. ಅದರ ನಂತರ, ಅವರು ಸೊಳ್ಳೆ ನಿವಾರಕ ಕಾಯಿಲ್ ಅನ್ನು 10 ರಿಂದ 15 ನಿಮಿಷಗಳಲ್ಲಿ ತಲುಪಿಸಿದರು. ಈ ಹಿನ್ನೆಲೆಯಲ್ಲಿ ಯುಪಿ ಪೊಲೀಸರಿಗೆ ಸಹಾಯಕ್ಕೆ ಧನ್ಯವಾದ ಹೇಳುತ್ತೇನೆ ಎಂದರು. ಇದನ್ನೂ ಓದಿ: ಪಕ್ಷದಲ್ಲೇ ಉಳಿದುಕೊಳ್ಳುವಂತೆ ನಾರಾಯಣಗೌಡರಿಗೆ ಯಡಿಯೂರಪ್ಪ ಬುದ್ಧಿವಾದ

  • ಸೊಳ್ಳೆ ಔಷಧಿ ಸಿಂಪಡಿಸಿದವರಿಗೆ ಬಿಲ್ ಬಾಕಿ ಆರೋಪ – ಬಿಬಿಎಂಪಿ ವಿರುದ್ಧ ಪೊಲೀಸ್ ಠಾಣೆಗೆ ದೂರು

    ಸೊಳ್ಳೆ ಔಷಧಿ ಸಿಂಪಡಿಸಿದವರಿಗೆ ಬಿಲ್ ಬಾಕಿ ಆರೋಪ – ಬಿಬಿಎಂಪಿ ವಿರುದ್ಧ ಪೊಲೀಸ್ ಠಾಣೆಗೆ ದೂರು

    ಬೆಂಗಳೂರು: ಟೆಂಡರ್ ಕೂಗೋದು, ಟೆಂಡರ್ ಆದ್ಮೇಲೆ ಬಿಲ್ ಬಾಕಿ ವಿಚಾರಗಳು ಆಗಾಗ ಬಿಬಿಎಂಪಿಯಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಈಗ ಬಿಬಿಎಂಪಿ (BBMP) ಸೊಳ್ಳೆ ಔಷಧಿ ಸಿಂಪಡಿಸಿದ ಬಿಲ್‍ಗಾಗಿ ಗಲಾಟೆಯಾಗಿದೆ. ದಯಮಾಡಿ ಹಣ ಬಿಡುಗಡೆ ಮಾಡಿ ಅಂದ್ರೆ ಅಧಿಕಾರಿ ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂಬ ಪ್ರಕರಣ ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದೆ.

    ಸೊಳ್ಳೆ ಔಷಧಿ (Mosquito Spray) ಸಿಂಪಡಿಸಿದ ಬಿಲ್ ಕೇಳಿದ್ರೆ ಬಿಬಿಎಂಪಿ ಅಧಿಕಾರಿಗಳು ದರ್ಪ ಪ್ರದರ್ಶಿಸಿರುವ ಆರೋಪ ಕೇಳಿಬಂದಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ದೂರು ದಾಖಲಿಸಿದ್ದು, ಟೆಂಡರ್ ಕರೆಯದೆ, ಬಾಕಿ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಬಿಬಿಎಂಪಿ ಸೊಳ್ಳೆ ಔಷಧಿ ಸಿಂಪಡಿಸಿದ ಬಿಲ್‍ಗಾಗಿ ಆಗ್ರಹಿಸಿದಾಗ ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ. ಕಳೆದ 2 ವರ್ಷಗಳಿಂದ 5 ಕೋಟಿ ಬಿಲ್ ಬಾಕಿಯನ್ನು ಬಿಬಿಎಂಪಿ ಉಳಿಸಿಕೊಂಡಿದೆ. ಈ ಬಿಲ್ ಕ್ಲಿಯರ್ ಮಾಡಲು ಮನವಿ ಮಾಡಿಕೊಳ್ಳಲು ಹೋದಾಗ ಸ್ಪೆಷಲ್ ಕಮಿಷನರ್ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

    ನಿನ್ನೆ ಬಾಕಿ ಬಿಲ್ ಕೇಳುವುದಕ್ಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತರ ಕಚೇರಿಗೆ ಹೋದಾಗ ಮಾರ್ಷಲ್‍ಗಳಿಂದ ವಿಶೇಷ ಆಯುಕ್ತರು ನಮ್ಮ ಮೇಲೆ ದೌರ್ಜನ್ಯ ಮಾಡಿ, ಹೊರಗೆ ದೂಡಿದ್ದಾರೆ. ಮ್ಯಾನ್ ಹ್ಯಾಂಡ್ಲಿಂಗ್ ಮಾಡಿಸುವುದರ ಮೂಲಕ ಬಿಬಿಎಂಪಿ ಸ್ಪೆಷಲ್ ಕಮಿಷನರ್ ಜಯರಾಂ ರಾಯ್ಪುರ ದೌರ್ಜನ್ಯ ಮಾಡಿದ್ದಾರೆ. ಹಲವಾರು ದಿನಗಳಿಂದ ಬಿಲ್ ಪಾವತಿಗೆ ಮನವಿ ಮಾಡುತ್ತಲೇ ಇದ್ದೇವೆ. ಈ ಬಗ್ಗೆ ನಿನ್ನೆ 30ಕ್ಕೂ ಹೆಚ್ಚು ಸಿಬ್ಬಂದಿ ಬಾಕಿ ಮೊತ್ತ ಪಡೆಯಲು ಹೋದಾಗ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರಸ್ತುತ ಸಾಲಿಗೆ 243 ವಾರ್ಡ್‍ಗೆ ಸೊಳ್ಳೆ ಔಷಧಿ ಸಿಂಪಡಣೆ ಟೆಂಡರ್ ಕರೆಯಬೇಕಿದ್ದ ಬಿಬಿಎಂಪಿ, ಇದುವರೆಗೂ ಕರೆದಿಲ್ಲ. ಆದರೆ 198 ವಾರ್ಡ್‍ಗಷ್ಟೇ ಟೆಂಡರ್ ಕರೆದು ಗೋಲ್ಮಾಲ್ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. ಇದನ್ನೂ ಓದಿ: ಭಾರತವು ಹಿಂದೂ ಬೆಳವಣಿಗೆ ದರದ ಅಪಾಯಕ್ಕೆ ಹತ್ತಿರದಲ್ಲಿದೆ : ಚರ್ಚೆಗೆ ಗ್ರಾಸವಾಯ್ತು ರಘುರಾಮ್‌ ರಾಜನ್‌ ಹೇಳಿಕೆ

    ಈ ಬಗ್ಗೆ ವಿಶೇಷ ಆಯುಕ್ತ ಜಯರಾಮ್ ರಾಯಪುರ ಮಾತನಾಡಿ, 198 ವಾರ್ಡ್‌ಗಳಿಗೆ ಟೆಂಡರ್ ಕರೆದಿದ್ದೇವೆ. ಈಗ ಹೊಸ ಟೆಂಡರ್ 243 ವಾರ್ಡ್‌ಗಳಿಗೆ ಕರೆಯುತ್ತೇವೆ. ಆದರೆ ಇವರು ಕೋರ್ಟಿನಲ್ಲಿ ಸ್ಟೇ ತಂದಿದ್ದಾರೆ. ಸ್ಟೇ ವೆಕೆಟ್ ಆಗಬೇಕು. ನಂತರವಷ್ಟೇ ಟೆಂಡರ್ ಕರೆಯುತ್ತೇವೆ. ನಾವು ಯಾರನ್ನೂ ತಪ್ಪಾಗಿ ನಡೆಸಿಕೊಂಡಿಲ್ಲ ಎಂದರು. ಇದನ್ನೂ ಓದಿ: ಮದುವೆ ಆಗ್ತೀನಿ ಅಂತಾ ನಂಬಿಸಿ ಯುವತಿಯನ್ನು 7 ತಿಂಗಳ ಗರ್ಭಿಣಿ ಮಾಡಿ ಕೈಕೊಟ್ಟ

  • ಕಾರ್ ಕಿಟಕಿ ಮುಚ್ಚೋದು ಮರೆತಿದ್ದ ಮೀನುಗಾರ ವಾಪಸ್ ಬಂದು ನೋಡಿದಾಗ ದಂಗಾದ!

    ಕಾರ್ ಕಿಟಕಿ ಮುಚ್ಚೋದು ಮರೆತಿದ್ದ ಮೀನುಗಾರ ವಾಪಸ್ ಬಂದು ನೋಡಿದಾಗ ದಂಗಾದ!

    ನೆಯಲ್ಲಿ ಸಂಜೆಯಾದ್ರೆ ಸೊಳ್ಳೆ ಬರುತ್ತೆ ಅಂತ ಬಾಗಿಲು, ಕಿಟಕಿಗಳನ್ನ ಮುಚ್ಚಿಬಿಡ್ತೀವಿ. ಒಂದು ವೇಳೆ ಅವು ಒಳಗೆ ಬಂದ್ರೂ ಸೊಳ್ಳೇಬತ್ತಿ ಹಚ್ಚಿ ಅಥವಾ ಸೊಳ್ಳೇಬ್ಯಾಟ್ ಹಿಡಿದು ಸೊಳ್ಳೆಗಳನ್ನ ಸದೆಬಡಿಯಲು ನಿಂತುಬಿಡ್ತೀವಿ. ಆದ್ರೆ ಈ ವಿಡಿಯೋ ನೋಡಿದ್ರೆ ಮಾತ್ರ ನೀವು ಹೌಹಾರಿಬಿಡ್ತೀರ.

    ಮೀನುಗಾರರೊಬ್ಬರು ರಾತ್ರಿ ವೇಳೆ ಮೀನು ಹಿಡಿಯಲು ಹೋಗಿದ್ದು, ತಮ್ಮ ಕಾರ್ ಕಿಟಕಿ ಮುಚ್ಚೋದನ್ನ ಮರೆತು ಹಾಗೇ ಬಿಟ್ಟು ಹೋಗಿದ್ರು. ಅವರು ವಾಪಸ್ ಬಂದು ನೋಡಿದಾಗ ಕಾರ್ ತುಂಬೆಲ್ಲಾ ಸೊಳ್ಳೆಗಳೇ. ಅದೂ ಹತ್ತೋ ಇಪತ್ತೋ ಸೊಳ್ಳೆಯಲ್ಲ. ಸಾವಿರಾರು ಸೊಳ್ಳೆಗಳು.

    ಅದ್ರಲ್ಲೂ ಕಾರ್‍ನೊಳಗೆ ಲೈಟ್ ಆಫ್ ಆಗಿರಲಿಲ್ಲ. ಆ ವ್ಯಕ್ತಿ ಬಣ್ಣಬಣ್ಣದ ಅಲಂಕಾರಿಕ ಲೈಟ್ ಕೂಡ ಕಾರ್‍ನೊಳಗೆ ಹಾಕಿದ್ದರಿಂದ ಸೊಳ್ಳೆಗಳು ಅದಕ್ಕೆ ಆಕರ್ಷಿತವಾಗಿ ಕಾರ್‍ನೊಳಗೆ ನುಗ್ಗಿವೆ. ಇನ್ನು ಆ ಮೀನುಗಾರ ಕಾರಿನ ಬಾಗಿಲು ತೆಗೆದು ಸೀಟ್ ಮೇಲಿದ್ದ ಸೊಳ್ಳೆಗಳನ್ನ ಕೈಯಲ್ಲೇ ತೆಗೆದು ತೋರಿಸ್ತಾರೆ.

    https://www.youtube.com/watch?v=mBdqj85o7E0