Tag: Mosques loudspeakers

  • ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಸರ್ಕಾರದಿಂದ ಅನುಮತಿ ಪಡೆಯಿರಿ: ಮುಸ್ಲಿಂ ಸಂಘಸಂಸ್ಥೆ ಸಲಹೆ

    ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಸರ್ಕಾರದಿಂದ ಅನುಮತಿ ಪಡೆಯಿರಿ: ಮುಸ್ಲಿಂ ಸಂಘಸಂಸ್ಥೆ ಸಲಹೆ

    ಮುಂಬೈ: ರಾಜ್ಯದಲ್ಲಿರುವ ಎಲ್ಲಾ ಮಸೀದಿಗಳು ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವಂತೆ ಜಮಿಯತ್‌-ಉಲಮಾ-ಇ-ಹಿಂದ್‌ ಘಟಕ ಸಲಹೆ ನೀಡಿದೆ.

    ರಾಜ್ಯದ ಮಸೀದಿಗಳಲ್ಲಿ ಆಜಾನ್‌ ಬಳಕೆ ವಿಚಾರವಾಗಿ ಹಿಂದೂಪರ ಸಂಘಟನೆಗಳ ತೀವ್ರ ವಿರೋಧದ ನಡುವೆ ಈ ಸೂಚನೆ ನೀಡಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ಕೋರ್ಟ್‌ ಹೊರಡಿಸಿರುವ ಆದೇಶವನ್ನು ಅನುಷ್ಠಾನಗೊಳಿಸಲು ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವಾಲಯ ನಿರ್ಧರಿಸಿದೆ. ಇದನ್ನೂ ಓದಿ: 12 ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ: ಮಹಾರಾಷ್ಟ್ರ ಸಚಿವ

    mosque-loudspeakers

    ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸಲು ಅನುಮತಿ ಪಡೆದಿರಬೇಕು ಎಂಬ ಮಾರ್ಗಸೂಚಿಯನ್ನು ಹೊರಡಿಸಲು ಸರ್ಕಾರ ಮುಂದಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜಮಿಯತ್‌-ಉಲಮಾ-ಇ-ಹಿಂದ್‌ ಘಟಕದ ಕಾರ್ಯದರ್ಶಿ ಗುಲ್ಜರ್‌ ಅಜ್ಮಿ, ರಾಜ್ಯದಲ್ಲಿರುವ ಬಹುಪಾಲು ಮಸೀದಿಗಳು ಧ್ವನಿವರ್ಧಕ ಬಳಕೆಗೆ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆದಿವೆ. ಅನುಮತಿ ಪಡೆಯದೇ ಇದ್ದರೆ ಮಸೀದಿಗಳು ಕೂಡಲೇ ಅನುಮತಿ ಪಡೆಯುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಜೆಸಿಬಿ ಘರ್ಜನೆ- ಜಹಾಂಗೀರ್‌ಪುರಿಯಲ್ಲಿ ಅಕ್ರಮ ಆಸ್ತಿಗಳ ಧ್ವಂಸ

    ರಾಜ್ಯದ ಪೊಲೀಸ್‌ ಇಲಾಖೆ ತುಂಬಾ ಸಹಕಾರ ನೀಡಿದ್ದಾರೆ. ಅನುಮತಿ ನೀಡುವಲ್ಲಿಯೂ ಪೊಲೀಸರ ಸಹಕಾರ ಅಗತ್ಯವಿದೆ ಎಂದು ಅಜ್ಮಿ ಅಭಿಪ್ರಾಯಪಟ್ಟಿದ್ದಾರೆ.

    Raj Thackeray

    ಧ್ವನಿವರ್ಧಕಗಳ ಸಮಸ್ಯೆಯನ್ನು ನಿಭಾಯಿಸಲು ಮಹಾರಾಷ್ಟ್ರ ಸರ್ಕಾರವನ್ನು ಶ್ಲಾಘಿಸಿದ ಅಜ್ಮಿ ಅವರು, ರಾಜ್ಯ ಸರ್ಕಾರವು ಎಲ್ಲರಿಗೂ ನ್ಯಾಯ ಒದಗಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್ ಉಲ್ಬಣದಿಂದ ದೆಹಲಿಯಲ್ಲಿ ಶಾಲೆಗಳು ಬಂದ್? – ತಜ್ಞರ ಸಮಿತಿಯ ಸಲಹೆಗಳೇನು?

    ಮೇ 3ರೊಳಗೆ ಮಸೀದಿಗಳಲ್ಲಿ ಧ್ವನಿವರ್ಧಕಗಳ ತೆರವಿಗೆ ರಾಜ್ಯ ಸರ್ಕಾರ ಕ್ರಮವಹಿಸಬೇಕು. ಇಲ್ಲವಾದಲ್ಲಿ ಮಸೀದಿ ಹೊರಗಡೆ ಧ್ವನಿವರ್ಧಕಗಳನ್ನು ಹಾಕಿ ಹನುಮಾನ್‌ ಚಾಲೀಸಾ ಪಠಿಸಲಾಗುವುದು ಎಂದು ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

  • ಮಸೀದಿ ಸೌಂಡ್ ಬ್ಯಾನ್ ಅಭಿಯಾನಕ್ಕೆ ಮುಂದಾದ ಹಿಂದೂ ಸಂಘಟನೆಗಳು

    ಮಸೀದಿ ಸೌಂಡ್ ಬ್ಯಾನ್ ಅಭಿಯಾನಕ್ಕೆ ಮುಂದಾದ ಹಿಂದೂ ಸಂಘಟನೆಗಳು

    ಬೆಂಗಳೂರು: ಜಟ್ಕಾ ಕಟ್ ಅಭಿಯಾನ ಯಶಸ್ವಿಯಾಗಿರುವ ಹಿನ್ನೆಲೆ ಇದೀಗ ಮಸೀದಿ ಸೌಂಡ್ ಬ್ಯಾನ್ ಅಭಿಯಾನಕ್ಕೆ ಹಿಂದೂಪರ ಸಂಘಟನೆಗಳು ಸಜ್ಜಾಗಿದೆ.

    ಹಿಂದೂಪರ ಸಂಘಟನೆಗಳು ಯುಗಾದಿ ಹೊಸತೊಡುಕು ವೇಳೆ ಹಲಾಲ್ ಕಟ್ ಮಾಂಸವನ್ನು ಬಿಟ್ಟು, ಹಿಂದೂಗಳು ಜಟ್ಕಾ ಕಟ್ ಮಾಂಸವನ್ನು ಖರೀದಿಸಿ ಸೇವೆಸಬೇಕು ಎಂದು ಅಭಿಯಾನ ನಡೆಸಿದ್ದರು. ಅದರಂತೆ ಬುಧವಾರ ಹಲಾಲ್ ಕಟ್ ಮಾಂಸಕ್ಕಿಂತಲೂ ಜಟ್ಕಾ ಕಟ್ ಮಾಂಸವನ್ನು ಜನ ಹೆಚ್ಚಾಗಿ ಖರೀದಿಸಿದ್ದು, ಜಟ್ಕಾ ಕಟ್ ಅಭಿಯಾನ ಯಶಸ್ವಿಯಾಗಿದೆ.

    ಇದರ ಬೆನ್ನಲ್ಲೇ ಇದೀಗ ಮಸೀದಿ ಸೌಂಡ್ ಬ್ಯಾನ್ ಅಭಿಯಾನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಕಾನೂನಾತ್ಮಕವಾಗಿ ಹೋರಾಡಿ ಮಸೀದಿ ಸೌಂಡ್ ಬ್ಯಾನ್ ಮಾಡಲು ಮುಂದಾಗಿದ್ದಾರೆ. ಈ ಕುರಿತಂತೆ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲು ಹಿಂದೂ ಪರ ಸಂಘಟನೆ ತಯಾರಿ ನಡೆಸಿದೆ. ಇದನ್ನೂ ಓದಿ: ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸಿ: ರಾಜ್ ಠಾಕ್ರೆ

    ಎಂಎನ್‍ಎಸ್ ಹೋರಾಟ
    ಮಸೀದಿಗಳ ಮುಂದೆ ಧ್ವನಿ ವರ್ಧಕಗಳನ್ನು ತೆಗೆಸದಿದ್ದರೆ ಹನುಮಾನ್ ಚಾಲೀಸ್ ನುಡಿಸುತ್ತೇವೆ ಎಂದು ಮಹಾರಾಷ್ಟ್ರದ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಶನಿವಾರ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಭಾನುವಾರ ಮುಂಬೈನ ಘಾಟ್‍ಕೋಪರ್‍ನಲ್ಲಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಚೇರಿಯಲ್ಲಿ ಧ್ವನಿವರ್ಧಕದಿಂದ ಹನುಮಾನ್ ಚಾಲೀಸ್ ನುಡಿಸಲಾಗಿದೆ.

    ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ ಠಾಕ್ರೆ ಧ್ವನಿವರ್ಧಕಗಳನ್ನು ಬಳಸುವ ಮಸೀದಿಗಳಿಗೆ ಎಚ್ಚರಿಕೆ ನೀಡುತ್ತೇನೆ. ಧ್ವನಿವರ್ಧಕಗಳನ್ನು ತೆಗೆದು ಹಾಕಿ. ಇಲ್ಲದಿದ್ದರೆ ಮಸೀದಿಯ ಮುಂದೆ ಧ್ವನಿವರ್ಧಕಗಳನ್ನು ಹಾಕಿ ಹನುಮಾನ್ ಚಾಲೀಸ್ ನುಡಿಸುತ್ತೇವೆ ಎಂದಿದ್ದರು. ಇದನ್ನೂ ಓದಿ: ಹಲಾಲ್ ಕಟ್, ಜಟ್ಕಾ ಕಟ್ ಎಂದರೇನು?

    ನಾನು ಪ್ರಾರ್ಥನೆ ಮಾಡುವುದಕ್ಕೆ ವಿರೋಧಿಸುವುದಿಲ್ಲ. ನೀವು ನಿಮ್ಮ ಮನೆಯಲ್ಲೇ ಪ್ರಾರ್ಥನೆ ಮಾಡಬಹುದು. ಆದರೆ ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದ ಸಾರ್ವಜನಿಕರಿಗೆ, ಮಕ್ಕಳಿಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮಸೀದಿಯ ಧ್ವನಿವರ್ಧಕಗಳನ್ನು ತೆಗೆದುಹಾಕುವ ಬಗ್ಗೆ ಸರ್ಕಾರ ನಿರ್ಧರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.