Tag: mosque

  • ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!

    ಅನಧಿಕೃತ ಮಸೀದಿಯನ್ನು ಜೆಸಿಬಿಯಿಂದ ಕೆಡವಿದ UP ಮುಸ್ಲಿಮರು!

    ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಈಗ ಮುಸ್ಲಿಮರೇ ಅಕ್ರಮವಾಗಿ ನಿರ್ಮಾಣಗೊಂಡ ಮಸೀದಿಯನ್ನು (Mosque) ಜೆಸಿಬಿಯಿಂದ ಕೆಡವಿದ್ದಾರೆ. ಸಂಭಾಲ್‌ (Sambhal) ಜಿಲ್ಲೆಯ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಾ ಬುಜುರ್ಗ್ ಗ್ರಾಮದಲ್ಲಿ ಮುಸ್ಲಿಮರು ಭಾನುವಾರ ಗೌಸುಲ್ಬರಾ ಮಸೀದಿಯನ್ನು ನೆಲಸಮ ಮಾಡಿದ್ದಾರೆ.

    ಅನಧಿಕೃತವಾಗಿ  ನಿರ್ಮಾಣಗೊಂಡಿದ್ದ ಮಸೀದಿಯನ್ನು ತೆಗೆಯುವಂತೆ ಜಿಲ್ಲಾಡಳಿತ 4 ದಿನಗಳ ಡೆಡ್‌ಲೈನ್‌ ನೀಡಿತ್ತು. ಈ ಗಡುವು ಮುಗಿಯುತ್ತಿದ್ದಂತೆ ಮುಸ್ಲಿಮರೇ ಮಸೀದಿಯನ್ನು ಕೆಡವಿದ್ದಾರೆ.

    ಗೌಸುಲ್ಬರಾ ಮಸೀದಿಯನ್ನು ಕೆಡವಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಮಸೀದಿ ಸಮಿತಿಯ ಸದಸ್ಯರು ನಾವೇ ಈ ಮಸೀದಿಯನ್ನು ಕೆಡವುತ್ತೇವೆ. 4 ದಿನಗಳ ಸಮಯ ನೀಡಿ ಎಂದು ವಿನಂತಿಸಿದ್ದರು. ಇದನ್ನೂ ಓದಿ:  ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಕಲ್ಲು ತೂರಾಟ – ಇಂಟರ್ನೆಟ್ ಸ್ಥಗಿತ, 36 ಗಂಟೆಗಳ ಕಾಲ ಕರ್ಫ್ಯೂ

    ಅಕ್ಟೋಬರ್ 2 ರಂದು ಈ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮದುವೆ ಮಂಟಪವನ್ನು ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳು ಕೆಡವಿ ಹಾಕಿದ್ದರು.

  • ಮಸೀದಿಯಲ್ಲಿ ಗಣೇಶನ ಪ್ರತಿಷ್ಠಾಪನೆ; ಭಾವೈಕ್ಯತೆ ಮೆರೆದ ಗ್ರಾಮಸ್ಥರು

    ಮಸೀದಿಯಲ್ಲಿ ಗಣೇಶನ ಪ್ರತಿಷ್ಠಾಪನೆ; ಭಾವೈಕ್ಯತೆ ಮೆರೆದ ಗ್ರಾಮಸ್ಥರು

    ಗದಗ: ಮಸೀದಿಯೊಳಗೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸುವ ಮೂಲಕ ಭಾವೈಕ್ಯತೆ ಮೆರೆದ ಘಟನೆ ಜಿಲ್ಲೆಯ ರೋಣ ತಾಲೂಕಿನ ಸಂದಿಗವಾಡ (Sandigawada) ಗ್ರಾಮದಲ್ಲಿ ಕಂಡುಬಂದಿದೆ.

    ಜಾತಿ, ಧರ್ಮಗಳ ಹೆಸರಿನಲ್ಲಿ ಕಿತ್ತಾಟ ಮಾಡುವವರಿಗೆ ಸಂದಿಗವಾಡ ಗ್ರಾಮಸ್ಥರು ಮಾದರಿಯಾಗಿದೆ. ಕಳೆದ 3 ವರ್ಷಗಳಿಂದ ಸಂದಿಗವಾಡದ ಮಸೀದಿಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದಾರೆ. ಸ್ವತಃ ಮುಸ್ಲಿಂ ಯುವಕರೇ ಸೇರಿ ಗಣೇಶ ಮೂರ್ತಿಯನ್ನು ತಂದು ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದು ಗಮನಾರ್ಹವಾಗಿದೆ. ಮುಸ್ಲಿಂ ಯುವಕರ ಜೊತೆಗೆ ಹಿಂದುಗಳು ಸೇರಿ ಒಟ್ಟಾಗಿ ಗಣೇಶನ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮರಸ್ಯ, ಭಾವೈಕ್ಯತೆಯಿಂದ ಗಣೇಶ ಹಬ್ಬವನ್ನು (Ganesha Chaturthi) ಆಚರಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಒಂದು ಕಾಲು ಬಿಜೆಪಿಯಲ್ಲಿ ಇಟ್ಟಿದ್ದಾರೆ: ಯತ್ನಾಳ್ ಹೊಸ ಬಾಂಬ್

    ಮಸೀದಿಯಲ್ಲಿನ ವಿನಾಯಕನಿಗೆ ಮುಸ್ಲಿಂ ಯುವಕರೇ ಮೊದಲ ಪೂಜೆಯನ್ನು ಸಲ್ಲಿಸಿದ್ದಾರೆ. ಮಸೀದಿಯ ವಿಘ್ನೇಶ್ವರನನ್ನು ನೋಡಲು ಗದಗ ಎಸ್ಪಿ ರೋಹನ್ ಜಗದೀಶ್, ನರಗುಂದ ಡಿವೈಎಸ್ಪಿ ಪ್ರಭು, ರೋಣ ಸಿಪಿಐ ಸೇರಿದಂತೆ ಅನೇಕರು ಆಗಮಿಸಿದ್ದರು. ಇದನ್ನೂ ಓದಿ: ಸೋಮವಾರ ಮೈಸೂರಿಗೆ ರಾಷ್ಟ್ರಪತಿ ಮುರ್ಮು – ಅರಮನೆಗೆ ಭೇಟಿ, ಚಾಮುಂಡಿ ಬೆಟ್ಟದಲ್ಲೂ ವಿಶೇಷ ಪೂಜೆ

    ದೀಪಾವಳಿ, ದಸರಾ, ಯುಗಾದಿ, ಹೋಳಿ, ಜಾತ್ರೆ, ಮೊಹರಂ, ರಂಜಾನ್, ಈದ್‌ಮಿಲಾದ್, ಗಣೇಶ ಚತುರ್ಥಿ ಹೀಗೆ ಗ್ರಾಮದಲ್ಲಿ ಪ್ರತಿಯೊಂದು ಹಬ್ಬ ಹರಿದಿನಗಳನ್ನು ಯಾವುದೇ ಜಾತಿ-ಭೇದವಿಲ್ಲದೇ ಆಚರಿಸಿಕೊಂಡು ಬರುವ ಮೂಲಕ ಸಂದಿಗವಾಡ ಗ್ರಾಮಸ್ಥರು ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.

  • ಸಂಸತ್‌ ಭವನ ಪಕ್ಕದ ಮಸೀದಿಯಲ್ಲಿ ಎಸ್ಪಿ ಸಂಸದರೊಟ್ಟಿಗೆ ಅಖಿಲೇಶ್‌ ಯಾದವ್‌ ಸಭೆ – ಕೆರಳಿದ ಬಿಜೆಪಿ

    ಸಂಸತ್‌ ಭವನ ಪಕ್ಕದ ಮಸೀದಿಯಲ್ಲಿ ಎಸ್ಪಿ ಸಂಸದರೊಟ್ಟಿಗೆ ಅಖಿಲೇಶ್‌ ಯಾದವ್‌ ಸಭೆ – ಕೆರಳಿದ ಬಿಜೆಪಿ

    – ಬಿಜೆಪಿ ವಿಭಜನೆ ಮಾಡೋದನ್ನೇ ನೋಡ್ತಿದೆ ಅಂತ ಎಸ್ಪಿ ಮುಖ್ಯಸ್ಥ ತಿರುಗೇಟು
    – ಅಖಿಲೇಶ್‌ ಕ್ಷಮೆಯಾಚಿಸುವಂತೆ ವಕ್ಫ್‌ ಮಂಡಳಿ ಪಟ್ಟು

    ನವದೆಹಲಿ: ಮುಂಗಾರು ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲೇ ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್‌ ಯಾದವ್‌ (Akhilesh Yadav) ಸಂಸತ್‌ ಭವನದ ಪಕ್ಕದ ಮಸೀದಿಯಲ್ಲಿ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

    ಎಸ್ಪಿ ಸಂಸದರೊಟ್ಟಿಗೆ ಅಖಿಲೇಶ್‌ ಯಾದವ್‌ ಸಭೆ ನಡೆಸಿರುವುದನ್ನು ಬಿಜೆಪಿ (BJP) ತೀವ್ರವಾಗಿ ಖಂಡಿಸಿದೆ. ಮಸೀದಿಯನ್ನು ನಿಮ್ಮ ಸಮಾಜವಾದಿ ಪಕ್ಷದ ಕಚೇರಿಯಾಗಿ ಬದಲಾವಣೆ ಮಾಡ್ಕೊಂಡಿದ್ದೀರಾ? ಅಂತ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಶ್ನಿಸಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ವೀರರಾಣಿ ಅಬ್ಬಕ್ಕ ಹೆಸರಿನ ಮೆರಿಟೈಮ್ ವಿವಿ ಸ್ಥಾಪನೆಗೆ ಕ್ಯಾ.ಚೌಟ ಮನವಿ

    ಇದಕ್ಕೆ ಇರುಗೇಟು ನೀಡಿರುವ ಅಖಿಲೇಶ್‌ ಯಾದವ್‌, ಮದೀಸಿಗೆ ನನ್ನ ಭೇಟಿಯ ಬಗ್ಗೆ ಬಿಜೆಪಿ ವಿವಾದ ಸೃಷಿಸುತ್ತಿದೆ. ನಮಗೆ ಎಲ್ಲಾ ಧರ್ಮಗಳಲ್ಲಿಯೂ ನಂಬಿಕೆ ಇದೆ. ನಾವು ಒಗ್ಗಟ್ಟಾಗುತ್ತೇವೆ ಅನ್ನೋ ನಂಬಿಕೆ ನಮಗಿದೆ. ಆದ್ರೆ ಬಿಜೆಪಿ ವಿಭಜನೆಯಾಗಿಯೇ ಉಳಿಯಬೇಕೆಂದು ಬಯಸುತ್ತದೆ ಅಂತ ತಿರುಗೇಟು ನೀಡಿದ್ದಾರೆ.

    ಮುಂದುವರಿದು.. ಯಾವುದೇ ಧರ್ಮದಲ್ಲಿ ನಂಬಿಕೆಯಿದ್ದರೆ, ಅದು ಎಲ್ಲರನ್ನೂ ಒಗ್ಗೂಗೂಡಿಸುತ್ತದೆ. ಆದ್ರೆ ಬಿಜೆಪಿ ಜನರ ನಡುವಿನ ಅಂತರವನ್ನೇ ನೋಡಲು ಬಯಸುತ್ತೆ. ಬಿಜೆಪಿಯ ತಂತ್ರಗಳ ಬಗ್ಗೆ ಈಗ ಜನಕ್ಕೆ ಅರ್ಥವಾಗಿದೆ. ʻಧರ್ಮʼ ಅನ್ನೋದನ್ನೇ ಬಿಜೆಪಿ ಅಸ್ತ್ರವಾಗಿ ಮಾಡಿಕೊಂಡಿದೆ ಎಂದು ತಿವಿದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶು ಕಳ್ಳತನ ತಡೆಯಲು ಹೊಸ ಕ್ರಮ – ಏನಿದು ಕೋಡ್‌ ಪಿಂಕ್‌?

    ಇನ್ನೂ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ ಮಾತನಾಡಿ, ನಾವು ಈಗ ದೇವಸ್ಥಾನ ಮತ್ತು ಮಸೀದಿಗೆ ಹೋಗಲು ಬಿಜೆಪಿಯಿಂದ ಲೈಸೆನ್ಸ್‌ ಪಡೆಯಬೇಕೇ? ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ 18 ದಿನ – ಭೂಮಿಯಲ್ಲಿ ಮತ್ತೆ ನಡೆಯುವುದನ್ನ ಕಲಿಯುತ್ತಿದ್ದಾರೆ ಶುಭಾಂಶು ಶುಕ್ಲಾ

    ಮತ್ತೊಂದೆಡೆ ಅಖಿಲೇಶ್‌ ಯಾದವ್‌ ಮಸೀದಿಗೆ ಭೇಟಿ ನೀಡಿದ ವಿಚಾರಕ್ಕೆ ಉತ್ತರಾಖಂಡ್ ವಕ್ಫ್ ಮಂಡಳಿ ಕೂಡ ಅಸಮಾಧಾನ ಹೊರಹಾಕಿದೆ. ಮಸೀದಿಯೊಳಗೆ ನಡೆದ ರಾಜಕೀಯ ಸಭೆಯು ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡಿದೆ. ಅಖಿಲೇಶ್‌ ಕ್ಷಮೆಯಾಚಿಸಬೇಕೆಂದು ವಕ್ಫ್‌ ಮಂಡಳಿಯ ಅಧ್ಯಕ್ಷ ಶಾದಾಬ್ ಶಮ್ಸ್ ಒತ್ತಾಯಿಸಿದ್ದಾರೆ.

  • ಬಾಗಲಕೋಟೆ| ಅನುಮತಿ ಇಲ್ಲದೇ ಅನಧಿಕೃತ ಮಸೀದಿ ನಿರ್ಮಾಣ – ಬಿಜೆಪಿ, ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

    ಬಾಗಲಕೋಟೆ| ಅನುಮತಿ ಇಲ್ಲದೇ ಅನಧಿಕೃತ ಮಸೀದಿ ನಿರ್ಮಾಣ – ಬಿಜೆಪಿ, ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

    – ಹಿಂದೂ ಮಂದಿರ ನಿರ್ಮಾಣಕ್ಕೆ ಷರತ್ತು ಹಾಕಿ ತಡೆಯುತ್ತಾರೆ
    – ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ ಎಂದ ನಗರಸಭೆ

    ಬಾಗಲಕೋಟೆ: ಅನುಮತಿ ಇಲ್ಲದೇ ವಾರ್ಡ್‌ ನಂ.1 ರಲ್ಲಿ ಮಸೀದಿ (Mosque) ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಗೂ ಬಿಜೆಪಿ (BJP) ಕಾರ್ಯಕರ್ತರು ನಗರ ಸಭೆ ಕಾರ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

    ಈ ಮಸೀದಿ ನಿರ್ಮಾಣಕ್ಕೆ ನಗರ ಸಭೆಯಿಂದ (Bagalkote City Municipal Council) ಯಾವುದೇ ಅನುಮತಿ ಪಡೆದಿಲ್ಲ. ನಿರ್ಮಾಣ ಕಾಮಗಾರಿ ವಿರುದ್ಧ ನಗರಸಭೆ ಆಯುಕ್ತರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

    ಪೊಲೀಸರು (Police) ಹಿಂದೂ ಮಂದಿರಗಳ ನಿರ್ಮಾಣದ ವೇಳೆ ಹತ್ತಾರು ಷರತ್ತು ಹಾಕಿ ತಡೆಯುತ್ತಾರೆ. ಆದರೆ ಇಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ನಗರದಲ್ಲಿನ ಅನಧಿಕೃತ ಮಸೀದಿ ನಿರ್ಮಾಣಕ್ಕೆ ಅವಕಾಶ ಕೊಡಬಾರದು. ಕೂಡಲೇ ಆಯುಕ್ತರು ತಡೆಯದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಹಿಂದು ಜಾಗರಣ ವೇದಿಕೆ ಮುಖಂಡ ಕುಮಾರಸ್ವಾಮಿ ಹಿರೇಮಠ ಎಚ್ಚರಿಕೆ ನೀಡಿದ್ದಾರೆ ಇದನ್ನೂ ಓದಿ: ಮತಾಂತರ ಮಾಸ್ಟರ್‌ಮೈಂಡ್ಛಂಗುರ್ ಬಾಬಾನ 5 ಕೋಟಿ ಮೌಲ್ಯದ ಮನೆ ಉಡೀಸ್ ಬುಲ್ಡೋಜರ್‌ನಿಂದ ನೆಲಸಮ

    ಹಳೆ ಬಾಗಲಕೋಟೆ ಹಾಗೂ ನವನಗರ ಎರಡು ಕಡೆ 20 ಕ್ಕೂ ಅಧಿಕ ಮಸೀದಿಗಳನ್ನು ಅನಧಿಕೃತವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂಬುದು ಇವರ ಆರೋಪ. ಖಾಸಗಿ ಭೂಮಿಯಲ್ಲಿ ಮಸೀದಿ ನಿರ್ಮಾಣ ಮಾಡಬೇಕಾದರೂ ಅನುಮತಿ ಕಡ್ಡಾಯ. ಆದರೆ ಇಲ್ಲಿ ಮಸೀದಿ ಕಟ್ಟುತ್ತಿದ್ದರೂ ಅದಕ್ಕೆ ಅನುಮತಿ ಪಡೆಯುತ್ತಿಲ್ಲ. ಇನ್ನೊಂದು ಕಡೆ ಇದೆಲ್ಲ ಗೊತ್ತಿದ್ದರೂ ನಗರಸಭೆ ಆಯುಕ್ತರು, ಸಿಬ್ಬಂದಿ ಕಂಡು ಕಾಣದಂತಿರುತ್ತಾರೆ ಎಂದು ದೂರಿದ್ದಾರೆ.

    ಮಸೀದಿಗಳ ನಿರ್ಮಾಣದ ಬಗ್ಗೆ ನಗರಸಭೆ ಬಿಜೆಪಿ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದೆ. ಅನಧಿಕೃತ ಮಸೀದಿ ನಿರ್ಮಾಣಕ್ಕೆ ಅವಕಾಶ ಕೊಡಬೇಡಿ ಎಂದು ಆಯುಕ್ತರಿಗೆ ತಿಳಿಸಿದ್ದಾರೆ. ಆದರೂ ಆಯುಕ್ತರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.  ಇದನ್ನೂ ಓದಿ: ಭಾರತದ ಹಾನಿಯ ಒಂದೇ ಒಂದು ಫೋಟೋ ತೋರಿಸಿ ವಿದೇಶಿ ಮಾಧ್ಯಮಗಳ ವಿರುದ್ಧ ದೋವಲ್ಕೆಂಡಾಮಂಡಲ

    ನಗರಸಭೆ ಆಯುಕ್ತ ವಾಸಣ್ಣ ಅವರನ್ನು ಕೇಳಿದಾಗ, ನಾವು ಈ ಬಗ್ಗೆ ಯಾವುದೇ ಅನುಮತಿ ಕೊಟ್ಟಿಲ್ಲ. ಅವರು ಅನುಮತಿ ಕೇಳಿದರೂ ಅನುಮತಿ ಕೊಟ್ಟಿಲ್ಲ. ಆದರೂ ನಗರಸಭೆ ರಜಾ ದಿನದಲ್ಲಿ ಇಂತಹ ಕೃತ್ಯ ಮಾಡಿದ್ದಾರೆ. ಈ ಬಗ್ಗೆ ನೋಟಿಸ್‌ ಕೊಟ್ಟಿದ್ದೇವೆ. ಈಗಲೂ ನಾವು ನಮ್ಮ ಎಂಜಿನಿಯರ್‌ ಮೂಲಕ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಅನಧಿಕೃತ ಮಸೀದಿ ನಿರ್ಮಾಣ ಕಾರ್ಯ ಹೀಗೆ ಬಿಟ್ಟರೆ ಮುಂದೆ ಮತ್ತಷ್ಟು ಗಲಾಟೆ ನಡೆಯುವ ಸಾಧ್ಯತೆ ಇದೆ. ಆದಷ್ಟು ಬೇಗ ನಗರಸಭೆ ಅಧಿಕಾರಿಗಳು ಸೂಕ್ತ ತೀರ್ಮಾನ ಕೈಗೊಂಡು ವಿವಾದವಾಗದಂತೆ ತಡೆಯಬೇಕಿದೆ.

     

  • ಮಸೀದಿ ಕೊಠಡಿಯಲ್ಲಿ 6 ವರ್ಷದ ಮಗು ಮೇಲೆ ಅತ್ಯಾಚಾರ ಆರೋಪ – ಪ್ರಕರಣ ದಾಖಲು

    ಮಸೀದಿ ಕೊಠಡಿಯಲ್ಲಿ 6 ವರ್ಷದ ಮಗು ಮೇಲೆ ಅತ್ಯಾಚಾರ ಆರೋಪ – ಪ್ರಕರಣ ದಾಖಲು

    ಚಿಕ್ಕಬಳ್ಳಾಪುರ: 6 ವರ್ಷದ ಬಾಲಕಿ ಮೇಲೆ 55 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ (Chikkaballapura Women Police Station) ದೂರು ದಾಖಲಾಗಿದೆ.

    ಚಿಕ್ಕಬಳ್ಳಾಪುರ ನಗರದ ಶಮ್ಸ್ ಮಸೀದಿಯಾ ಕೊಠಡಿಯಲ್ಲಿ ಘಟನೆ ನಡೆದಿದೆ. ಮಸೀದಿಯೊಂದರ ಮೌಲ್ವಿಯ ತಂದೆ ಬಾಲಕಿಗೆ ಚಾಕೊಲೆಟ್‌ ಕೊಡಿಸುವುದಾಗಿ ಆಮಿಷವೊಡ್ಡಿ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಾಲಕಿಯ ತಾಯಿ ದೂರು ನೀಡಿದ ಬಳಿಕ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಪಾಕ್‌ಗೆ ಆಪರೇಷನ್ ಸಿಂಧೂರದ ಸೂಕ್ಷ್ಮ ಮಾಹಿತಿ ಹಂಚಿಕೆ – ಪಂಜಾಬ್ ವ್ಯಕ್ತಿ ಅರೆಸ್ಟ್

    ಈ ಸಂಬಂಧ ಆರೋಪಿ ಮಹಪ್ಯೂಸ್ ಬಂಧಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯ ಮಗ ಬೇರೊಂದು ಮಸೀದಿಯಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಮೌಲ್ವಿಯ ಆಶ್ರಯಕ್ಕೆ ಜಮಾತ್‌ನಿಂದ ಮಸೀದಿಯ ಕೊಠಡಿ ನೀಡಲಾಗಿತ್ತು. ಆದ್ರೆ ಮಸೀದಿಯ ಕೊಠಡಿಯನ್ನು ದುರುಪಯೋಗ ಪಡಿಸಿಕೊಂಡು ಬಾಲಕಿ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಬಾಲಕಿ ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಓವರ್‌ಟೇಕ್ ಮಾಡಲು ಹೋಗಿ ಪರಸ್ಪರ ಬೈಕ್ ಡಿಕ್ಕಿ – ಇಬ್ಬರು ಸಾವು

    ಇನ್ನೂ ಆರೋಪಿ ಮಹಪ್ಯೂಸ್ ಮೂಲತಃ ಉತ್ತರ ಪ್ರದೇಶದವನು. 20 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಬಂದು ಬೀದಿ ಬದಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಮಸೀದಿ ಬಳಿ ಆಟವಾಡಿಕೊಂಡಿದ್ದ ಬಾಲಕಿಗೆ ಆಮೀಷ ಹೊಡ್ಡಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

    ಮಸೀದಿಯ ಮೌಲ್ವಿ ಸುಹೇಬ್‌ನನ್ನ ಸ್ಥಳಿಯರು ತರಾಟೆಗೆ ತೆಗೆದುಕೊಂಡಿದ್ದು, ಮೌಲ್ವಿ ಆಶ್ರಯಕ್ಕೆ ಕೊಠಡಿ ಪಡೆದು ತಂದೆಗೆ ಯ್ಯಾಕೆ ನೀಡಿದ್ದು? ಅಂತ ಬಾಲಕಿಯ ತಾಯಿ ಆರೋಪಿಗೆ ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

  • ಭಾರತೀಯ ಯೋಧರಿಗೆ ಶಕ್ತಿ ತುಂಬಲು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

    ಭಾರತೀಯ ಯೋಧರಿಗೆ ಶಕ್ತಿ ತುಂಬಲು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

    – ವೀರ ಯೋಧರಿಗೆ ಹೋರಾಡಲು ಅಲ್ಲಾ ಶಕ್ತಿ ನೀಡಿಲಿ ಎಂದು ಪ್ರಾರ್ಥಿಸಿದ ಮುಸ್ಲಿಂ ಬಾಂಧವರು

    ಬೀದರ್/ಕೋಲಾರ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಭಾರತ ನಡೆಸುತ್ತಿರುವ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರಿಗೆ ಶಕ್ತಿ ತುಂಬಲು ಇಂದು ಮಸೀದಿಗಳಲ್ಲಿ (Mosque) ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಗಡಿ ಜಿಲ್ಲೆ ಬೀದರ್‌ನಲ್ಲಿ ವಕ್ಫ್‌ಗೆ ಸೇರಿದ ಹಾಗೂ ಇತರೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಜಾಮಿಯಾ, ಅಬ್ಧುಲ್ ಫೈಜಾ ಮಸೀದಿ ಸೇರಿದಂತೆ ಎಲ್ಲಾ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಬೀದರ್‌ನ ಚಿದ್ರಿ, ಓಲ್ಡ್ ಸಿಟಿ, ನ್ಯೂ ಬಸ್ ನಿಲ್ದಾಣ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ‘ಆಪರೇಷನ್ ಸಿಂಧೂರ’ ಇಡೀ ದೇಶದ ಸ್ವಾಭಿಮಾನ, ಧೈರ್ಯ ಹೆಚ್ಚಿಸಿದೆ: ಆರ್‌ಎಸ್‌ಎಸ್

    ಆಪರೇಷನ್ ಸಿಂಧೂರದಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ಮೂಲಕ ಶಾಂತಿಯ ಸಂದೇಶ ನೀಡುತ್ತಿರುವ ಭಾರತೀಯ ವೀರ ಯೋಧರಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆಪರೇಷನ್ ಸಿಂಧೂರ ಮೂಲಕ ಭಾರತೀಯ ಯೋಧರು ತಮ್ಮ ತಾಕತ್ತು ತೋರಿಸಿದ್ದು, ಭಾರತ ಇಂದು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ. ವೀರ ಯೋಧರಿಗೆ ಅಲ್ಲಾ ಹೋರಾಡಲು ಶಕ್ತಿ ನೀಡಿಲಿ ಎಂದು ಮಸೀದಿಯ ಪ್ರಾರ್ಥನೆ ವೇಳೆ ಮೌಲ್ವಿ ಪ್ರಾರ್ಥನೆ ಮಾಡಿದ್ದಾರೆ. ಇದನ್ನೂ ಓದಿ: ಉಗ್ರರ ನಾಶಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಭಾರತ ಸೇನೆಗೆ 10 ಲಕ್ಷ ದೇಣಿಗೆ

    ಇನ್ನು ದೇಶದ ಸೈನ್ಯ ಮತ್ತು ಸೈನಿಕರ ಆರೋಗ್ಯಕ್ಕೆ ಕೊಲಾರದ ಹಲವು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮುಸ್ಲಿಂ ಸಮುದಾಯದವರು ಶುಭ ಹಾರೈಸಿದರು. ಶುಕ್ರವಾರದ ಸಾಮೂಹಿಕ ನಮಾಜ್‌ನಲ್ಲಿ ಸೈನಿಕರಿಗಾಗಿ ವಿಶೇಷ ಪ್ರಾರ್ಥನೆ ಮಾಡಿ ಪಾಕಿಸ್ತಾನದ ವಿರುದ್ಧ ಸೈನಿಕರಿಗೆ ಶಕ್ತಿ ನೀಡಲು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರು. ಇದನ್ನೂ ಓದಿ: ಭಾರತ-ಪಾಕ್ ಯುದ್ಧ ಭೀತಿ; ಚಂಡೀಗಢ ಸರ್ಕಾರದಿಂದ 2 ತಿಂಗಳು ಪಟಾಕಿ ಬ್ಯಾನ್

  • ತಾಲಿಬಾನ್ ನಾಡಲ್ಲಿ ಕೂದಲು ಕತ್ತರಿಸಿದ್ರೂ ಶಿಕ್ಷೆ

    ತಾಲಿಬಾನ್ ನಾಡಲ್ಲಿ ಕೂದಲು ಕತ್ತರಿಸಿದ್ರೂ ಶಿಕ್ಷೆ

    – ರಂಜಾನ್ ಮಾಸದಲ್ಲಿ ಮಸೀದಿಗಳಿಗೆ ಸರಿಯಾಗಿ ಹೋಗದಿದ್ರೆ ಬಂಧನ

    ಕಾಬೂಲ್: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ (Taliban) ಅರಾಜಕತೆಯ ಪರ್ವ ಮುಂದುವರೆದಿದೆ. ರಂಜಾನ್ ಮಾಸದಲ್ಲಿ ಮಸೀದಿಗಳಿಗೆ ಸರಿಯಾಗಿ ಹೋಗದ, ಸರಿಯಾಗಿ ಹೇರ್‌ಕಟ್ ಮಾಡಿಸಿಕೊಳ್ಳದವರನ್ನು ತಾಲಿಬಾನ್ ನೈತಿಕ ವಿಭಾಗದ ಪೊಲೀಸರು ಅರೆಸ್ಟ್ ಮಾಡುತ್ತಿದ್ದಾರೆ

    ತಾಲಿಬಾನ್ ನಿಯಮಗಳ ಅನುಸಾರ ಹೇರ್‌ಕಟ್ ಮಾಡದ ಕ್ಷೌರಿಕರನ್ನು ಸಹ ಕಂಬಿ ಹಿಂದೆ ಕಳಿಸುತ್ತಿದ್ದಾರೆ. ಇಂತಹ ಬಂಧನಗಳಿಗೆ ಯಾವುದೇ ರೀತಿಯ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸುತ್ತಿಲ್ಲ. ಇದನ್ನೂ ಓದಿ: 27ನೇ ವಯಸ್ಸಿಗೆ ಬದುಕು ಮುಗಿಸಿದ ‘ಆಸ್ಟ್ರೇಲಿಯಾದ ನೆಕ್ಸ್ಟ್ ಟಾಪ್ ಮಾಡೆಲ್’ ಮಾಜಿ ಸ್ಪರ್ಧಿ

    ಎಲ್ಲಾ ಏಕಪಕ್ಷೀಯವಾಗಿ ನಡೆಯುತ್ತಿದೆ. ಇಂತಹ ಕ್ರಮಗಳಿಂದ ಸಣ್ಣ ವ್ಯಾಪಾರಿಗಳು, ಶಿಕ್ಷಣ ಸಂಸ್ಥೆಗಳು, ಸಲೂನ್‌ಗಳು, ಟೈಲರ್‌ಗಳು, ರೆಸ್ಟೋರೆಂಟ್, ಮದುವೆ ಬಾಣಸಿಗರಿಗೆ ಕೆಲಸ ಸಿಕ್ಕದಂತಾಗಿದೆ. ಆರ್ಥಿಕ ಸಮಸ್ಯೆಗಳು ಜನರನ್ನು ಹೈರಾಣು ಮಾಡುತ್ತಿವೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ಇದನ್ನೂ ಓದಿ: ಟ್ರಂಪ್‌ Vs ಕ್ಸಿ ಜಿನ್‌ಪಿಂಗ್‌ – ಈಗ ಅಮೆರಿಕದ ವಸ್ತುಗಳಿಗೆ 125% ತೆರಿಗೆ ಹಾಕಿದ ಚೀನಾ

  • ರಂಜಾನ್‌ ಈದ್‌ ಮುನ್ನ ದಿನ ಮಹಾರಾಷ್ಟ್ರದ ಮಸೀದಿಯಲ್ಲಿ ಸ್ಫೋಟ, ಇಬ್ಬರು ಅರೆಸ್ಟ್‌

    ರಂಜಾನ್‌ ಈದ್‌ ಮುನ್ನ ದಿನ ಮಹಾರಾಷ್ಟ್ರದ ಮಸೀದಿಯಲ್ಲಿ ಸ್ಫೋಟ, ಇಬ್ಬರು ಅರೆಸ್ಟ್‌

    ಮುಂಬೈ: ಈದ್-ಉಲ್-ಫಿತರ್ ಹಬ್ಬದ ಒಂದು ದಿನ ಮೊದಲು ಭಾನುವಾರ ಮಹಾರಾಷ್ಟ್ರದ (Maharastra) ಬೀಡ್ (Beed) ಜಿಲ್ಲೆಯ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ.

    ಜಿಲೆಟಿನ್ ಕಡ್ಡಿಗಳಿಂದ ಈ ಸ್ಫೋಟ ಸಂಭವಿಸಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವು ಸಂಭವಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.


    ಒಬ್ಬ ವ್ಯಕ್ತಿ ಮಸೀದಿಯ ಹಿಂಭಾಗದಿಂದ ಪ್ರವೇಶಿಸಿ ಜೆಲೆಟಿನ್ ಕಡ್ಡಿಗಳನ್ನು ಇಟ್ಟಿದ್ದ. ಇದರಿಂದಾಗಿ ಸ್ಫೋಟ ಸಂಭವಿಸಿದ್ದು ಮಸೀದಿಯ (Mosque) ಒಳಭಾಗಕ್ಕೆ ಹಾನಿಯಾಗಿದೆ.

    ಜಿಯೋರೈ ತಹಸಿಲ್‌ನ ಗ್ರಾಮದಲ್ಲಿ ಬೆಳಗಿನ ಜಾವ 2:30 ರ ಸುಮಾರಿಗೆ ಸಂಭವಿಸಿದ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ಹೇಳಿದರು, ಸ್ಫೋಟದಿಂದ ಒಳಭಾಗಕ್ಕೆ ಹಾನಿಯಾಗಿದೆ. ಇದನ್ನೂ ಓದಿ: ಮಾಸ್ಕೋ ನಡು ಬೀದಿಯಲ್ಲಿ ಪುಟಿನ್‌ ಕಾರು ಸ್ಫೋಟ – ಹತ್ಯೆಗೆ ಯತ್ನ?

    ಸ್ಫೋಟದ ಬಳಿಕ ಗ್ರಾಮದ ಮುಖ್ಯಸ್ಥರು ಬೆಳಿಗ್ಗೆ 4 ಗಂಟೆ ಸುಮಾರಿಗೆ ತಲವಾಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಬೀಡ್ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಕನ್ವತ್ ಮತ್ತು ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

    ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಗ್ರಾಮದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಿದ್ದಾರೆ.

  • ಮಸೀದಿ ಮೇಲೆ ಉಗ್ರರಿಂದ ಗುಂಡಿನ ದಾಳಿ – 44 ಸಾವು, 13 ಮಂದಿ ಗಾಯ

    ಮಸೀದಿ ಮೇಲೆ ಉಗ್ರರಿಂದ ಗುಂಡಿನ ದಾಳಿ – 44 ಸಾವು, 13 ಮಂದಿ ಗಾಯ

    ನಿಯಾಮಿ: ಶುಕ್ರವಾರ ಮಸೀದಿಯ (Mosque) ಮೇಲೆ ಇಸ್ಲಾಂ ಉಗ್ರರು (Islamist Militants) ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 44 ಜನರು ಬಲಿಯಾಗಿ 13 ಮಂದಿ ಗಾಯಗೊಂಡ ಘಟನೆ ನೈಋತ್ಯ ನೈಜರ್‌ನಲ್ಲಿ (Niger) ನಡೆದಿದೆ.

    ನೈಜರ್, ಬುರ್ಕಿನಾ ಫಾಸೊ ಮತ್ತು ಮಾಲಿಯ ತ್ರಿ-ಗಡಿ ಪ್ರದೇಶದ ಸಮೀಪದಲ್ಲಿರುವ ಕೊಕೊರೌ ಫೋಂಬಿಟಾ ಗ್ರಾಮದಲ್ಲಿ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಈ ದಾಳಿ ನಡೆದಿದೆ.

    ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆಯಾದ ಇಸ್ಲಾಮಿಕ್‌ ಸ್ಟೇಟ್‌ ಇನ್‌ ದಿ ಗ್ರೇಟರ್‌ ಸಹರಾ(ISGS) ಗುಂಪಿನ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ.

    ಭಾರೀ ಶಸ್ತ್ರಸಜ್ಜಿತ ಜಿಹಾದಿಗಳು ಮುಸ್ಲಿಮರ ಪವಿತ್ರ ರಂಜಾನ್ ತಿಂಗಳಲ್ಲಿ ಪ್ರಾರ್ಥನೆಗಾಗಿ ಜನರು ಸೇರಿದ್ದ ವೇಳೆ ಮಸೀದಿಯನ್ನು ಸುತ್ತುವರೆದು ಈ ಹತ್ಯಾಕಾಂಡ ನಡೆಸಿದ್ದಾರೆ. ಮಸೀದಿಯನ್ನು ತೊರೆಯುವ ಮೊದಲು ಹತ್ತಿರದಲ್ಲಿದ್ದ ಮಾರುಕಟ್ಟೆ ಮತ್ತು ಮನೆಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ನೈಜರ್‌ ಸರ್ಕಾರ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.  ಇದನ್ನೂ ಓದಿ: ಕಂತೆ ಕಂತೆ ನೋಟು ಪತ್ತೆಯಾದ ಜಡ್ಜ್‌ ಮೇಲೆ ದಾಖಲಾಗಿತ್ತು ಸಿಬಿಐ ಎಫ್‌ಐಆರ್‌

    2012 ರಲ್ಲಿ ಟುವಾರೆಗ್ ದಂಗೆ ನಡೆದು ಇಸ್ಲಾಮಿಸ್ಟ್ ಉಗ್ರಗಾಮಿಗಳು ಉತ್ತರ ಮಾಲಿಯಲ್ಲಿ ಭೂಪ್ರದೇಶವನ್ನು ವಶಪಡಿಸಿಕೊಂಡ ಬಳಿಕ ಪಶ್ಚಿಮ ಆಫ್ರಿಕಾದ ಸಹೇಲ್ ಪ್ರದೇಶದಲ್ಲಿ ದಂಗೆ ಪ್ರಾರಂಭವಾಯಿತು. ಅಂದಿನಿಂದ ಇದು ನೆರೆಯ ನೈಜರ್ ಮತ್ತು ಬುರ್ಕಿನಾ ಫಾಸೊಗೆ ಮತ್ತು ಇತ್ತೀಚೆಗೆ ಟೋಗೊ ಮತ್ತು ಘಾನಾದಂತಹ ಕರಾವಳಿ ಪಶ್ಚಿಮ ಆಫ್ರಿಕಾದ ದೇಶಗಳ ಉತ್ತರಕ್ಕೆ ಹರಡಿದೆ.

    ಪಟ್ಟಣಗಳು, ಹಳ್ಳಿಗಳು, ಮಿಲಿಟರಿ,ಪೊಲೀಸ್ ಪೋಸ್ಟ್‌ಗಳು ಮತ್ತು ಸೇನಾ ಬೆಂಗಾವಲು ವಾಹನಗಳ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದಾರೆ. ಈ ದಾಳಿಯಿಂದ ಇಲ್ಲಿಯವರೆಗೆ ಲಕ್ಷಾಂತರ ಜನರು ಸಾವನ್ನಪ್ಪಿದ್ದರೆ ಲಕ್ಷಾಂತರ ಮಂದಿ ಸುರಕ್ಷಿತ ಸ್ಥಳಕ್ಕೆ ವಲಸೆ ಹೋಗಿದ್ದಾರೆ.

     

  • ಪ್ರಾರ್ಥನೆ ನಡೆಸುತ್ತಿದ್ದಾಗಲೇ ಪಾಕ್‌ ಮಸೀದಿಯಲ್ಲಿ ಬಾಂಬ್‌ ಸ್ಫೋಟ – 5 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಪ್ರಾರ್ಥನೆ ನಡೆಸುತ್ತಿದ್ದಾಗಲೇ ಪಾಕ್‌ ಮಸೀದಿಯಲ್ಲಿ ಬಾಂಬ್‌ ಸ್ಫೋಟ – 5 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಇಸ್ಲಾಮಾಬಾದ್‌: ಮಸೀದಿಯ (Mosque) ಒಳಗಡೆಯೇ ಬಾಂಬ್‌ ಸ್ಫೋಟಗೊಂಡು (Bomb Blast) ಐವರು ಸಾವನ್ನಪ್ಪಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನದ (Pakistan) ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಡೆದಿದೆ.

    ನೌಶೇರಾ ಜಿಲ್ಲೆಯ ಅಕೋರಾ ಖಟ್ಟಕ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಮದರಸಾದ ಆವರಣದಲ್ಲಿರುವ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಬಾಂಬ್‌ ಸ್ಪೋಟಗೊಂಡಿದೆ.


    ಗಾಯಗೊಂಡವರಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಸಾಮಿ (ಜೆಯುಐ-ಎಸ್) ನಾಯಕ ಮೌಲಾನಾ ಹಮಿದುಲ್ ಹಕ್ ಹಕ್ಕಾನಿ ಕೂಡ ಸೇರಿದ್ದಾರೆ. ಸ್ಫೋಟ ಸಂಭವಿಸಿದಾಗ ಶುಕ್ರವಾರ ಪ್ರಾರ್ಥನೆ ಸಲ್ಲಿಸುತ್ತಾ ಮುಂದಿನ ಸಾಲಿನಲ್ಲಿದ್ದರು. ಇದನ್ನೂ ಓದಿ: 18 ವರ್ಷ ತುಂಬುವುದು ಇಷ್ಟವಿಲ್ಲ ಅಂತ ಹುಟ್ಟುಹಬ್ಬಕ್ಕೂ ಮುನ್ನವೇ ಮಗನನ್ನು ಕೊಂದ ಮಹಿಳೆ

    ಅಫ್ಘಾನ್ ತಾಲಿಬಾನ್‌ನೊಂದಿಗೆ ಮೌಲಾನಾ ಹಮಿದುಲ್ ಹಕ್ ಹಕ್ಕಾನಿ ಸಂಪರ್ಕ ಹೊಂದಿದ್ದಾರೆ. ಇಲ್ಲಿಯವರೆಗೆ ದಾಳಿಯ ಹೊಣೆಯನ್ನು ಯಾವುದೇ ಗುಂಪು ತಕ್ಷಣ ವಹಿಸಿಕೊಂಡಿಲ್ಲ. ಭಾನುವರದಿಂದ ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಆರಂಭವಾಗುವ ಮೊದಲೇ ಬಾಂಬ್‌ ದಾಳಿ ನಡೆದಿದೆ.