Tag: Moscow

  • ವಾಕಿಂಗ್ ಹೋಗೋದಾಗಿ ಹೇಳಿ ಮಗನನ್ನು ಜಿರಳೆ ತುಂಬಿದ ಕೋಣೆಯಲ್ಲಿ ಬಿಟ್ಟು ಹೋದ್ಳು!

    ವಾಕಿಂಗ್ ಹೋಗೋದಾಗಿ ಹೇಳಿ ಮಗನನ್ನು ಜಿರಳೆ ತುಂಬಿದ ಕೋಣೆಯಲ್ಲಿ ಬಿಟ್ಟು ಹೋದ್ಳು!

    – ಹೀಂದಿರುಗಿ ಬಂದಾಗ ತಾಯಿಗೆ ಕಾದಿತ್ತು ಶಾಕ್

    ಮಾಸ್ಕೋ: ತಾಯಿಯೊಬ್ಬಳು ತನ್ನ 10 ವರ್ಷದ ಮಗನನ್ನು 8 ದಿನಗಳ ಕಾಲ ಜಿರಳೆಗಳು ತುಂಬಿದ್ದ ಕೋಣೆಯಲ್ಲಿ ಕೂಡಿಹಾಕಿದ ಘಟನೆ ಮಾಸ್ಕೋದಲ್ಲಿ ನಡೆದಿದೆ.

    ಬಾಲಕನನ್ನು ಮಿಖೈಲ್ (10) ಎಂದು ಗುರುತಿಸಲಾಗಿದೆ. ಈತನನ್ನು ತಾಯಿ ನಟಲ್ಯಾ ಅಜರೆನ್ಕೋವಾ(31) ಮಾಸ್ಕೋದ ಪೆರೆಡೆಲ್ಕಿನೋ ಏರಿಯಾದಲ್ಲಿರುವ ಅಪಾರ್ಟ್‍ಮೆಂಟ್ ನಲ್ಲಿ ಜಿರಳೆಗಳು ತುಂಬಿದ್ದ ಕೋಣೆಯಲ್ಲಿ ಕೂಡಿಹಾಕಿದ್ದಾಳೆ. ನಂತರ ವಾಕಿಂಗ್ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಹಾಕಿದ್ದಾಳೆ. ಹೀಗೆ ಹೋದವಳು 8 ದಿನಗಳ ಬಳಿಕ ಮನೆಗೆ ಬಂದಾಗ ಆಕೆಗೆ ಅಚ್ಚರಿ ಕಾದಿತ್ತು.

    ಇತ್ತ ಕತ್ತಲೆ ಕೋಣೆಯಲ್ಲಿ ಒಂಟಿಯಾಗಿದ್ದ ಮಿಖೈಲ್ ಹೊಟ್ಟೆಗೆ ಸರಿಯಾಗಿ ಊಟವಿಲ್ಲದೆ ಬಳಲಿದ್ದನು. ಅಲ್ಲದೆ ಜಿರಳೇಗಳು ಮುತ್ತಿಕೊಂಡಿದ್ದ ಮನೆಯಲ್ಲಿ ಬಾಲಕನಿಗೆ ನರಕ ದರ್ಶನವಾಗಿದೆ. 4 ದಿನಗಳ ಕಾಲ ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಕೂಗಾಡ ತೊಡಗಿದನು. ಬಾಲಕನ ಅಲಳು ಕೇಳಿಸಿಕೊಂಡ ನೆರಮನೆಯವರು ಬಂದು ಆತನನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ನೆರೆ ಮನೆಯವರು ಬಾಲಕನಿಗೆ ತಿನ್ನಲು ಆಹಾರ ಮತ್ತು ಜ್ಯೂಸ್ ನೀಡಿದ್ದಾರೆ.

    ಬಾಲಕನನ್ನು ರಕ್ಷಣೆ ಮಾಡಿದ ನಂತರ ಮಗುವಿನ ತಾಯಿಗಾಗಿ ನೆರೆಹೊರೆಯವರು ಕಾದಿದ್ದಾರೆ. ಆದರೆ ಮಹಿಳೆ ಬರದೇ ಇರುವುದನ್ನು ಗಮನಿಸಿ ತುರ್ತು ಸೇವೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಾಲಕನ ತಾಯಿ 2 ದಿನಕ್ಕಾಗಿ ಗೆಳೆಯರ ಮನೆಗೆ ಹೋದವಳು 8 ದಿನಗಳ ನಂತರ ಮರಳಿ ಮನೆಗೆ ಬಂದಿದ್ದಾಳೆ. ತಾಯಿ ಮಗನನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಎಲ್ಲಿ ಹೋಗಿದ್ದಳು ಎಂಬುದು ಮಾತ್ರ ನಿಗೂಢವಾಗಿದೆ.

    ಸದ್ಯ ಪಾಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದು, ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನನ್ನ ಮಗು ನನಗೆ ಬೇಕು. ನನ್ನ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇನೆ ಎಂದು ಆರೋಪಿ ತಾಯಿ ಪೊಲೀಸರಿಗೆ ಹೇಳಿದ್ದಾಳೆ. ಆದರೆ ಮಹಿಳೆಗೆ ಜೈಲು ಶಿಕ್ಷೆಯಾಗಿದೆ.

    ಕೇವಲ ಅಕ್ಕಿ ಮಾತ್ರ ನನಗೆ ತಿನ್ನಲು ಇಟ್ಟು ನನ್ನೊಬ್ಬನನ್ನೇ ಬಿಟ್ಟು ತಾಯಿ ನಾಯಿಯನ್ನು ವಾಕಿಂಗ್‍ಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಅಡುಗೆ ಮಾಡಿಕೊಳ್ಳಲು ನೀರು ಇರಲಿಲ್ಲ ಎಂದು ಮಿಖೈಲ್ ತನ್ನ ಅಳಲು ತೋಡಿಕೊಂಡಿದ್ದಾನೆ.

  • ತನ್ನ ಪ್ರೀತಿ ಸಾಬೀತುಪಡಿಸಲು ಮಾಜಿ ಗೆಳತಿಯ ಕೊಂದ- ಪೊದೆಯಲ್ಲಿ ಅವಿತುಕೊಂಡ್ರೂ ಬಿಡ್ಲಿಲ್ಲ

    ತನ್ನ ಪ್ರೀತಿ ಸಾಬೀತುಪಡಿಸಲು ಮಾಜಿ ಗೆಳತಿಯ ಕೊಂದ- ಪೊದೆಯಲ್ಲಿ ಅವಿತುಕೊಂಡ್ರೂ ಬಿಡ್ಲಿಲ್ಲ

    – ಸ್ನೇಹಿತನಿಗೆ ಫೋನ್ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ಳು
    – ಕುಡಿದ ಮತ್ತಿನಲ್ಲಿ ತಮಾಷೆ ಮಾಡಿದ್ದಾಳೆ ಅಂದ್ಕೊಂಡ

    ಮಾಸ್ಕೋ: ಯುವಕನೊಬ್ಬ ಪ್ರಿಯತಮೆಗೆ ತನ್ನ ಪ್ರೀತಿಯನ್ನು ಸಾಬೀತುಪಡಿಸುವ ಸಲುವಾಗಿ ಮಾಜಿ ಗೆಳತಿಯನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

    ನೋವೊಸಿಬಿರ್ಸ್ಕ್ ಪ್ರದೇಶದ ಸುಜುನ್ ಗ್ರಾಮದ ಬಳಿ ಈ ಹತ್ಯೆ ನಡೆದಿದೆ. ಅನಸ್ತಾಸಿಯಾ ಪೊಸ್ಪೆಲೋವಾ ಕೊಲೆಯಾದ ಮಾಜಿ ಗೆಳತಿ. ಆರೋಪಿ ಅಲೆಕ್ಸೆ ಪೆಟ್ರೋವ್ (20) ತನ್ನ ಪ್ರೀತಿಯನ್ನು ಪ್ರಿಯತಮೆಯ ಮುಂದೆ ಸಾಬೀತು ಪಡಿಸಲು ಕಾಡಿನಲ್ಲಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಪೆಟ್ರೋವ್ ಮತ್ತು ಮೃತ ಅನಸ್ತಾಸಿಯಾ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಇದಾದ ಬಳಿಕ ಆರೋಪಿ ಕಾರ್ಪೋವಾಳನ್ನು ಪ್ರೀತಿಸುತ್ತಿದ್ದನು. ಜೂನ್ 14 ರಂದು ಈ ಜೋಡಿ ಅನಸ್ತಾಸಿಯಾಳನ್ನು ಪಾರ್ಟಿಗೆ ಬರುವಂತೆ ಕರೆದಿದ್ದಾರೆ. ಅದಕ್ಕೆ ಅನಸ್ತಾಸಿಯಾ ಕೂಡ ಒಪ್ಪಿದ್ದು, ಆಕೆಯನ್ನು ಕಾಡಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಎಲ್ಲರೂ ಮದ್ಯಪಾನ ಮಾಡಲು ಪ್ರಾರಂಭಿಸಿದರು.

    ಇದೇ ವೇಳೆ ಆರೋಪಿ ಪೆಟ್ರೋವ್ ತನ್ನ ಜೇಬಿನಿಂದ ಚಾಕುವನ್ನು ತೆಗೆದು ಅನಸ್ತಾಸಿಯಾಳ ಕುತ್ತಿಗೆಗೆ ಹಲವಾರು ಬಾರಿ ಇರಿದಿದ್ದಾನೆ. ಇದರಿಂದ ಭಯಭೀತಳಾದ ಅನಸ್ತಾಸಿಯಾ ಆರೋಪಿ ಪೆಟ್ರೋವ್‍ನನ್ನು ತಳ್ಳಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಆದರೆ ಚಾಕುವಿನಿಂದ ಇರಿದಿದ್ದರಿಂದ ಗಾಯಗಳಾಗಿ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಆಕೆ ಕಾಡಿನಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಗ ಅನಸ್ತಾಸಿಯಾ ಸಹಾಯಕ್ಕಾಗಿ ತನ್ನ ಸ್ನೇಹಿತನಿಗೆ ಫೋನ್ ಮಾಡಿದ್ದು, ನನಗೆ ಸಹಾಯ ಮಾಡು, ನಾನು ಕಾಡಿನಲ್ಲಿದ್ದೇನೆ. ನನ್ನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ಇವರು ನನ್ನನ್ನು ಕೊಲೆ ಮಾಡುತ್ತಾರೆ. ದಯವಿಟ್ಟು ನನಗೆ ಸಹಾಯ ಮಾಡು ಎಂದು ಅಂಗಲಾಚಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕುಡಿದ ಮತ್ತಿನಲ್ಲಿ ತಮಾಷೆ ಮಾಡುತ್ತಿದ್ದಾಳೆ ಎಂದು ಸ್ನೇಹಿತ ನಂಬಲಿಲ್ಲ. ಕೊನೆಗೆ ಅನಸ್ತಾಸಿಯಾ ಕಾಡಿನಲ್ಲಿ ಪೊದೆಯೊಳಗೆ ಅಡಗಿಕೊಂಡಳು. ಆದರೆ ಆರೋಪಿ ಪೆಟ್ರೋವ್ ಆಕೆಯನ್ನ ಪತ್ತೆ ಮಾಡಿ ಅವಳ ಕುತ್ತಿಗೆಯ ಮೇಲೆ ಕಾಲಿಟ್ಟು, ಚಾಕುವಿನಿಂದ ಎದೆಗೆ ಚುಚ್ಚಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆರೋಪಿ ಮತ್ತು ಆಕೆಯ ಗೆಳತಿ ಕಾರ್ಪೋವಾ ಶವವನ್ನು ಪೊದೆಗಳಲ್ಲಿ ಅಡಗಿಸಿ ವಾಪಸ್ ಆಗಿದ್ದಾರೆ. ನಂತರ ಅವರೇ ಅನಸ್ತಾಸಿಯಾ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

    ತಮ್ಮ ಮೇಲೆ ಅನುಮಾನ ಬರಬಾರದೆಂದು ಪೊಲೀಸರ ಜೊತೆ ಅನಸ್ತಾಸಿಯಾಗಾಗಿ ಹುಡುಕಾಡಿದ್ದಾರೆ. ಇತ್ತೀಚೆಗೆ ನಂತರ ಗಾಯಗೊಂಡ ಮೃತಪಟ್ಟಿರುವ ಯುವತಿಯ ಶವ ಕಾಡಿನ ಪೊದೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಅನುಮಾನದ ಮೇರೆಗೆ ಇಬ್ಬರನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ಆಗ ಇಬ್ಬರು ಈ ಕೊಲೆಯನ್ನು ತಾವೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

    ಆರೋಪಿ ಕಾರ್ಪೋವಾ, ಅನಸ್ತಾಸಿಯಾ ಮತ್ತು ಪೆಟ್ರೋವ್ ಸಂಬಂಧದ ಬಗ್ಗೆ ಅಸೂಯೆ ಪಟ್ಟಿದ್ದಳು. ಇದೇ ವಿಚಾರಕ್ಕೆ ಪೆಟ್ರೋವ್ ಜೊತೆ ಜಗಳ ಮಾಡುತ್ತಿದ್ದಳು. ಅಲ್ಲದೇ ಪೆಟ್ರೋವ್‍ಗೆ ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಮತ್ತು ಈ ಜಗಳವನ್ನು ನಿಲ್ಲಿಸಲು ಅನಸ್ತಾಸಿಯಾಳನ್ನು ಕೊಲೆ ಮಾಡಬೇಕು ಎಂದು ಹೇಳಿದ್ದಾಳೆ. ಆಗ ಆರೋಪಿ ತನ್ನ ಪ್ರೀತಿಯನ್ನು ಸಾಬೀತು ಮಾಡಲು ಮಾಜಿ ಗೆಳತಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸದ್ಯಕ್ಕೆ ಆರೋಪಿ ಪೆಟ್ರೋವ್ ಮತ್ತು ಕಾರ್ಪೋವಾ ವಿರುದ್ಧ ಕ್ರಿಮಿನಲ್ ಕ್ರೇಸ್ ದಾಖಲಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ.

  • ಹುಟ್ಟುಹಬ್ಬದ ಪಾರ್ಟಿಯಲ್ಲಿ ಡ್ರೈ ಐಸ್‍ನಿಂದ ದುರಂತ

    ಹುಟ್ಟುಹಬ್ಬದ ಪಾರ್ಟಿಯಲ್ಲಿ ಡ್ರೈ ಐಸ್‍ನಿಂದ ದುರಂತ

    – ಬರ್ತ್ ಡೇ ಗರ್ಲ್ ಪತಿ ಸೇರಿ ಮೂವರು ದುರ್ಮರಣ
    – ನೋವಿನ ಕತೆ ಬಿಚ್ಚಿಟ್ಟ ಪತ್ನಿ

    ಮಾಸ್ಕೋ: ಹುಟ್ಟುಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಸಲುವಾಗಿ ಡ್ರೈ ಐಸನ್ನು ಸ್ವಿಮ್ಮಿಂಗ್ ಪೂಲ್‍ಗೆ ಸುರಿದ ನಂತರ ಮೂವರು ಮೃತಪಟ್ಟಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

    ಯೆಕಟೆರಿನಾ ಡಿಡೆಂಕೊ ಹುಟ್ಟುಹಬ್ಬದ ಪಾರ್ಟಿಯಲ್ಲಿ ಈ ಅವಘಡ ಸಂಭವಿಸಿದೆ. ಇನ್‍ಸ್ಟಾಗ್ರಾಂನಲ್ಲಿ ತುಂಬಾ ಆಕ್ಟೀವ್ ಆಗಿದ್ದು, ತುಂಬಾ ಫೇಮಸ್ ಆಗಿದ್ದರು. ಹೀಗಾಗಿ ಡಿಡೆಂಕೊ ತನ್ನ 29 ನೇ ಹುಟ್ಟುಹಬ್ಬದ ಪಾರ್ಟಿಯನ್ನು ತನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪೂಲ್ ಕಾಂಪ್ಲೆಕ್ಸ್ ನಲ್ಲಿ ಆಯೋಜನೆ ಮಾಡಿದ್ದರು. ಅಲ್ಲಿ ಎಲ್ಲರೂ ತುಂಬಾ ಸಂಭ್ರಮದಿಂದ ಇದ್ದರು.

    ಪಾರ್ಟಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ಮತ್ತು ವಿಶ್ಯುವಲ್ ಎಫೆಕ್ಟ್ ಚೆನ್ನಾಗಿರಲಿ ಎಂಬ ಕಾರಣಕ್ಕೆ 25 ಕೆ.ಜಿ ಡ್ರೈ ಐಸನ್ನು ಸ್ವಿಮ್ಮಿಂಗ್ ಪೂಲ್‍ಗೆ ಹಾಕಲಾಗಿತ್ತು. ಆದರೆ ಡ್ರೈ ಐಸನ್ನು ಸ್ವಿಮ್ಮಿಂಗ್ ಪೂಲ್‍ಗೆ ಹಾಕುತ್ತಿದ್ದಂತೆ ಸುತ್ತಲು ಹೊಗೆ ಆವರಿಸಿಕೊಂಡಿದೆ. ನಂತರ ನೋಡ ನೋಡುತ್ತಿದ್ದಂತೆ ಡಿಡೆಂಕೊ ಪತಿ ಸೇರಿದಂತೆ ಮೂವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

    ಅಷ್ಟೇ ಅಲ್ಲದೇ ಈ ಅವಘಡದಿಂದ ಅನೇಕರು ಗಾಯಗೊಂಡಿದ್ದಾರೆ. ಈ ಅವಘಡದ ಬಗ್ಗೆ ಇಬ್ಬರು ಮಕ್ಕಳ ತಾಯಿ ಯೆಕಟೆರಿನಾ ಡಿಡೆಂಕೊ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಮಗಳು ‘ಡ್ಯಾಡಿ ಎಲ್ಲಿದ್ದಾರೆಂದು’ ಕೇಳುತ್ತಿದ್ದಾಳೆ. ಇದನ್ನು ಕೇಳುವಾಗ ನನ್ನ ಕರುಳೇ ಹಿಂಡಿದಂತಾಗುತ್ತದೆ ಎಂದು ಅಳುತ್ತಾ ತನ್ನ ನೋವಿನ ಕತೆಯನ್ನು ಬಿಚ್ಚಿಟ್ಟಿದ್ದಾರೆ.

    ಡ್ರೈ ಐಸ್ ಘನೀಕೃತ ಇಂಗಾಲದ ಡೈ ಆಕ್ಸೈಡ್. ಇದೇ ಡ್ರೈ ಐಸನ್ನು ನೀರಿಗೆ ಹಾಕಿರೆ ನೀರಿನಲ್ಲಿ ಹೊಗೆ ಆವರಿಸಿಕೊಳ್ಳುತ್ತದೆ. ನಾವು ಕೈಯಲ್ಲಿ ಹಿಡಿದುಕೊಂಡರೆ ಹೇಗೆ ನೀರಾಗಿ ಕರಗುತ್ತದೋ, ಅಂತೆಯೇ ಈ ಡ್ರೈ ಐಸ್‍ನಿಂದ ಕಾರ್ಬನ್ ಡೈ ಆಕ್ಸೈಡ್ ಹೊಗೆಯ ರೂಪದಲ್ಲಿ ಹೊರಬರುತ್ತದೆ.

    ಘಟನೆಯ ಬಗ್ಗೆ ಮಾತನಾಡಿದ ರಷ್ಯಾದ ತನಿಖಾ ಸಮಿತಿಯ ವಕ್ತಾರ ಯುಲಿಯಾ ಇವನೊವಾ, ಇತರರು ಈ ಅವಘಡದಿಂದ ಗಾಯಗೊಂಡಿದ್ದಾರೆ. ಆದರೆ ಎಷ್ಟು ಮಂದಿ ಎಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.

    ಯೆಕಟೆರಿನಾ ಡಿಡೆಂಕೊ ಫಾರ್ಮಸಿಸ್ಟ್ ಆಗಿದ್ದು, ಇನ್‍ಸ್ಟ್ರಾಗ್ರಾಂನಲ್ಲಿ ಔಷಧೀಯ ಉತ್ಪನ್ನಗಳಿಂದ ಹಣವನ್ನು ಹೇಗೆಲ್ಲಾ ಉಳಿಸಬಹುದು ಎಂದು ತಿಳಿಸಿಕೊಡುತ್ತಿದ್ದರು. ಇವರ ಇನ್‍ಸ್ಟಾಗ್ರಾಂನಲ್ಲಿ 1.5 ಮಿಲಿಯಲ್‍ಗಿಂತಲೂ ಅಧಿಕ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ.

  • ತಂದೆ 98 ಸಾವಿರ ಕೋಟಿ ರೂ. ಒಡೆಯನಾದ್ರೂ ಮಗ ಬಾಡಿಗೆ ಮನೆಯಲ್ಲಿ ವಾಸ

    ತಂದೆ 98 ಸಾವಿರ ಕೋಟಿ ರೂ. ಒಡೆಯನಾದ್ರೂ ಮಗ ಬಾಡಿಗೆ ಮನೆಯಲ್ಲಿ ವಾಸ

    – ಪ್ರತಿದಿನ ಟ್ಯಾಕ್ಸಿ, ಮೆಟ್ರೋದಲ್ಲಿ ಆಫೀಸ್‍ಗೆ ಪ್ರಯಾಣ
    – ತನ್ನದೇ ಹೆಸರು ಮಾಡಬೇಕೆಂಬ ಬಯಕೆ

    ಮಾಸ್ಕೋ: ತಂದೆ 98 ಸಾವಿರ ಕೋಟಿಯ ಒಡೆಯನಾದರೂ ರಷ್ಯಾದ ವ್ಯಕ್ತಿಯೊಬ್ಬ ಬಾಡಿಗೆ ಮನೆಯಲ್ಲಿ ವಾಸಿಸುವ ಮೂಲಕ ವಿಶ್ವಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ರಷ್ಯಾದ 11ನೇ ಶ್ರೀಮಂತನಾಗಿರುವ ಮಿಖಾಯಿಲ್ ಫ್ರಿಡ್‍ಮ್ಯಾನ್ 13.7 ಬಿಲಿಯನ್ ಡಾಲರ್ (98 ಸಾವಿರ ಕೋಟಿ ರೂ.)ಯ ಒಡೆಯ. ಹೀಗಿದ್ದರೂ ಸಹ ಅವರ 19 ವರ್ಷದ ಮಗ ಅಲೆಕ್ಸಾಂಡರ್ ಫ್ರಿಡ್‍ಮ್ಯಾನ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

    ಅಲೆಕ್ಸಾಂಡರ್ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಎರಡು ರೂಮ್ ಇರುವ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಪ್ರತಿ ತಿಂಗಳು ಆ ಮನೆಗೆ 500 ಡಾಲರ್ (35 ಸಾವಿರ ರೂ.) ಬಾಡಿಗೆ ನೀಡುತ್ತಿದ್ದಾರೆ. ಅಲೆಕ್ಸಾಂಡರ್ ಕೋಟ್ಯಧೀಶನ ಮಗನಾಗಿದ್ದು, ದುಬಾರಿ ಕಾರನ್ನು ಖರೀದಿಸಬಹುದಿತ್ತು. ಆದರೆ ಅವರು ಕಾರನ್ನು ಖರೀದಿಸಲಿಲ್ಲ. ಅಲೆಕ್ಸಾಂಡರ್ ಟ್ಯಾಕ್ಸಿ ಅಥವಾ ಮೆಟ್ರೋದಲ್ಲಿ ತಮ್ಮ ಆಫೀಸ್‍ಗೆ ಪ್ರಯಾಣಿಸುತ್ತಾರೆ.

    ನನ್ನ ಸ್ವಂತ ಸಂಪಾದನೆಯಿಂದ ನಾನು ನನ್ನ ಉಡುಪುಗಳನ್ನು ಖರೀದಿಸಿದ್ದೇನೆ. ನಾನು ನನ್ನದೆ ಆದ ಹೆಸರನ್ನು ಮಾಡಬೇಕು ಎಂದು ಬಯಸುತ್ತೇನೆ. ಕಳೆದ ವರ್ಷ ಲಂಡನ್‍ನ ಹೈಸ್ಕೂಲ್‍ವೊಂದರಲ್ಲಿ ಪದವಿ ಪಡೆದು ಮಾಸ್ಕೋಗೆ ಹಿಂತಿರುಗಿದೆ. 5 ತಿಂಗಳ ಹಿಂದೆ ನಾನು ಐವರು ಉದ್ಯೋಗಿಗಳೊಂದಿಗೆ ಸುಮಾರು 3 ಕೋಟಿ ರೂ.ಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿದೆ. ನಾನು ಹುಕ್ಕಾ ಉತ್ಪನ್ನಗಳನ್ನು ಪೂರೈಸುವ ವ್ಯವಹಾರವನ್ನು ಹೊಂದಿದ್ದೇನೆ.

    ಅಲೆಕ್ಸಾಂಡರ್ ಅವರ ತಂದೆ ಮಿಖಾಯಿಲ್ ಹಲವು ದೊಡ್ಡ ಮಾಲೀಕರಾಗಿದ್ದು, ಕೆಲವು ಚಿಲ್ಲರೆ ಅಂಗಡಿಗಳನ್ನು ಸಹ ಹೊಂದಿದ್ದಾರೆ. ಬೇರೆ ಗ್ರಾಹಕರಿಗೆ ಹೊರತುಪಡಿಸಿ ಅಲೆಕ್ಸಾಂಡರ್ ತಮ್ಮ ತಂದೆಯ ಚಿಲ್ಲರೆ ಅಂಗಡಿಗೂ ವಸ್ತುಗಳನ್ನು ಸಪ್ಲೈ ಮಾಡುತ್ತಾರೆ. ಜನರು ಅಲೆಕ್ಸಾಂಡರ್ ಅವರ ತಂದೆಯ ಹೆಸರಿನ ಬದಲಾಗಿ ಅವರ ಪರಿಶ್ರಮ ನೋಡಿ ಅವರು ಮಾರಾಟ ಮಾಡುವ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

    ನಿಮ್ಮ ತಂದೆಯಿಂದ ಏನನ್ನೂ ಕಲಿತ್ತಿದ್ದೀರಾ ಎಂದು ಅಲೆಕ್ಸಾಂಡರ್ ಅವರನ್ನು ಪ್ರಶ್ನಿಸಿದಾಗ, ನಾವು ನಮ್ಮ ವ್ಯವಹಾರವನ್ನು ನ್ಯಾಯಯುತ ರೀತಿಯಲ್ಲಿ ನಡೆಸುತ್ತೇವೆ. ನನ್ನ ತಂದೆ ಯಾವಾಗಲೂ ನನ್ನ ಎಲ್ಲ ಯೋಜನೆಗಳಲ್ಲಿ ಪಾಲುದಾರ ಅಂತಾ ಹೇಳುತ್ತಾರೆ ಎಂದು ಅಲೆಕ್ಸಾಂಡರ್ ತಿಳಿಸಿದ್ದಾರೆ.

  • ‘ಫ್ರೀ ಪೆಟ್ರೋಲ್ ಬೇಕಾದ್ರೆ ಬಿಕಿನಿ ಧರಿಸಿ ಬನ್ನಿ’ – ಎದ್ನೋ ಬಿದ್ನೋ ಓಡಿ ಬಂದ ಪುರುಷರು

    ‘ಫ್ರೀ ಪೆಟ್ರೋಲ್ ಬೇಕಾದ್ರೆ ಬಿಕಿನಿ ಧರಿಸಿ ಬನ್ನಿ’ – ಎದ್ನೋ ಬಿದ್ನೋ ಓಡಿ ಬಂದ ಪುರುಷರು

    ಮಾಸ್ಕೋ: ಯುವತಿಯರು ಬಿಕಿನಿ ಧರಿಸುವುದು ಕಾಮನ್. ಆದರೆ ರಷ್ಯಾದಲ್ಲಿ ಯುವಕರು ಬಿಟ್ಟಿ ಪೆಟ್ರೋಲ್ ಸಿಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಬಿಕಿನಿ ಧರಿಸಿ ವಿಶ್ವಾದ್ಯಂತ ಒಂದೇ ದಿನದಲ್ಲಿ ಸುದ್ದಿಯಾಗಿದ್ದಾರೆ.

    ರಷ್ಯಾದ ಸಮಾರಾದಲ್ಲಿರುವ ಓಲ್ವಿ ಗ್ಯಾಸ್ ಸ್ಟೇಷನ್ ಹೊಸ ವಿನೂತನ ಮಾರ್ಕೆಟಿಂಗ್ ತಂತ್ರಕ್ಕೆ ಕೈ ಹಾಕಿತ್ತು. ಅದೇನೆಂದರೆ ಬಿಕಿನಿ ಧರಿಸಿ ಪೆಟ್ರೋಲ್ ಬಂಕ್ ಬಳಿ ಬಂದವರಿಗೆ ಉಚಿತವಾಗಿ ಪೆಟ್ರೋಲ್ ಪೂರೈಸಲಾಗುತ್ತದೆ ಎಂದು ಪ್ರಕಟಿಸಿತ್ತು. ಆದರೆ ಬಿಕಿನಿಯನ್ನು ಮಹಿಳೆಯರು ಅಥವಾ ಪುರುಷರು ಇಬ್ಬರಲ್ಲಿ ಯಾರು ಧರಿಸಬೇಕು ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿರಲಿಲ್ಲ.

    ಸಂಸ್ಥೆ ನೀಡಿದ್ದ ಆಫರಿನಿಂದ ಅನೇಕ ಪುರುಷರು ಅನುಕೂಲ ಪಡೆದುಕೊಂಡು, ಬಣ್ಣ ಬಣ್ಣದ ಬಿಕಿನಿ ಧರಿಸಿ ಓಲ್ವಿ ಗ್ಯಾಸ್ ಸ್ಟೇಷನ್‍ಗೆ ಬಂದಿದ್ದಾರೆ. ಅದರಲ್ಲೂ ಕೆಲವರಂತೂ ವಿಭಿನ್ನವಾದ ಬಿಕಿನಿ ಧರಿಸಿಕೊಂಡು, ಹುಡುಗಿಯರ ರೀತಿ ಹೀಲ್ಸ್ ಹಾಕಿಕೊಂಡು ಸ್ಟೈಲಿಶ್ ಆಗಿ ಉಚಿತ ಪೆಟ್ರೋಲ್ ಕೇಳಲು ಹೋಗಿದ್ದರು.

    ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಿಕಿನಿ ಧರಿಸಿದ ಪುರುಷರ ಫೋಟೋಗಳು ವೈರಲ್ ಆಗುತ್ತಿದೆ. ಆದರೆ ಇದನ್ನು ನೋಡಿ ಮಾಲೀಕರು ಆಶ್ಚರ್ಯಪಟ್ಟು, ತಾವು ಮಾಡಿದ್ದ ಹೊಸ ಮಾರ್ಕೆಟಿಂಗ್ ತಂತ್ರದ ನಿಯಮವನ್ನು ಕೇವಲ ಮೂರು ಗಂಟೆಗಳಲ್ಲೇ ನಿಲ್ಲಿಸಿದ್ದಾರೆ. ಆದರೆ ಈ ಮೂರು ಗಂಟೆಯಲ್ಲಿ ಅನೇಕ ಪುರುಷರು ವಿಭಿನ್ನವಾಗಿ ಬಿಕಿನಿ ಧರಿಸುವ ಮೂಲಕ ಸುದ್ದಿಯಾಗಿದ್ದರು.

  • ವಿಮಾನದಲ್ಲಿ ಜೋಡಿಯ ಸೆಕ್ಸ್- ವಿಡಿಯೋ ಸೆರೆ ಹಿಡಿದ ಮಹಿಳಾ ಸಿಬ್ಬಂದಿ

    ವಿಮಾನದಲ್ಲಿ ಜೋಡಿಯ ಸೆಕ್ಸ್- ವಿಡಿಯೋ ಸೆರೆ ಹಿಡಿದ ಮಹಿಳಾ ಸಿಬ್ಬಂದಿ

    ಮಾಸ್ಕೋ: ವಿಮಾನದಲ್ಲಿ ಸುತ್ತಲೂ ಪ್ರಯಾಣಿಕರು ಕುಳಿತಿದ್ದರೂ ಜೋಡಿಯೊಂದು ಸೆಕ್ಸ್ ಮಾಡುತ್ತಿತ್ತು. ಇದನ್ನು ನೋಡಿದ ಮಹಿಳಾ ಫ್ಲೈಟ್ ಅಟೆಂಡರ್ ತಕ್ಷಣ ಅವರಿಬ್ಬರು ಸೆಕ್ಸ್ ಮಾಡುವುದನ್ನು ಬಲವಂತವಾಗಿ ನಿಲ್ಲಿಸಿರುವ ಘಟನೆ ರಷ್ಯಾದ ವ್ಲಾಡಿವೋಸ್ಟಾಕ್‍ ನಲ್ಲಿ ನಡೆದಿದೆ.

    41ವರ್ಷದ ವ್ಯಕ್ತಿ ಮತ್ತು 43 ವರ್ಷದ ಮಹಿಳೆ ಸೆಕ್ಸ್ ಮಾಡಲು ಮುಂದಾಗಿದ್ದರು. ಇವರಿಬ್ಬರು ವಿಮಾನ ಹತ್ತುವ ಮೊದಲು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದರು ಎಂದು ವರದಿಯಾಗಿದೆ. ವರದಿಗಳ ಪ್ರಕಾರ ಮದ್ಯಪಾನ ಮಾಡಿ ಸೆಕ್ಸ್ ಮಾಡಿದ್ದಾರೆ ಎಂದು ಫ್ಲೈಟ್ ಸಿಬ್ಬಂದಿ ಆರೋಪಿಸಿದ್ದಾರೆ.

    ವಿಮಾನದಲ್ಲಿ ಮಹಿಳೆ ಮತ್ತು ವ್ಯಕ್ತಿ ಅಕ್ಕಪಕ್ಕ ಕುಳಿತಿದ್ದರು. ನಂತರ ಇಬ್ಬರೂ ಅಪ್ಪಿಕೊಂಡು ಪರಸ್ಪರ ಕಿಸ್ ಮಾಡುತ್ತಾ ಸೆಕ್ಸ್ ಮಾಡುತ್ತಿದ್ದರು. ಸುತ್ತಲೂ ಪ್ರಯಾಣಿಕರು ಕುಳಿತಿದ್ದರೂ ಲೆಕ್ಕಿಸದೇ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ಇದನ್ನು ಅಲ್ಲಿದ್ದ ಮಹಿಳಾ ಫ್ಲೈಟ್ ಅಟೆಂಡೆಂಟ್ ನೋಡಿ ತಕ್ಷಣ ಇಬ್ಬರಿಗೂ ಸೆಕ್ಸ್ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದಾರೆ.

    ಇದು ಸಾರ್ವಜನಿಕ ಸ್ಥಳವಾಗಿದ್ದು, ಎಲ್ಲ ವಯೋಮಾನದ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ನೀವು ಈ ರೀತಿಯಾಗಿ ಲೈಂಗಿಕ ಸಂಪರ್ಕ ಹೊಂದುವುದು ತಪ್ಪು. ನಾವು ತಕ್ಷಣವೇ ಪೊಲೀಸರಿಗೆ ಈ ಬಗ್ಗೆ ದೂರು ನೀಡುತ್ತೇನೆ ಎಂದು ಹೇಳಿ ಆಕೆಯೇ ಇದೆಲ್ಲವನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಮಹಿಳೆ ವೀಡಿಯೊದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಆ ವ್ಯಕ್ತಿ ಯಾವ ಮಹಿಳೆ? ಎಂದು ಅವರನ್ನೇ ಪ್ರಶ್ನೆ ಕೇಳಿದ್ದಾನೆ.

    ಪೊಲೀಸರು ಈ ಜೋಡಿಯ ಹೆಸರನ್ನು ಬಹಿರಂಗಪಡಿಸಲಿಲ್ಲ. ಆದರೆ ವ್ಯಕ್ತಿ ವ್ಲಾಡಿವೋಸ್ಟಾಕ್ ನಿವಾಸಿಯಾಗಿದ್ದು, ಮಹಿಳೆ ನಖೋಡ್ಕಾದವಳು ಎಂದು ಹೇಳಲಾಗಿದೆ. ಇಬ್ಬರೂ ವಿಮಾನದಿಂದ ಇಳಿದ ತಕ್ಷಣ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.  ಈ ವೇಳೆ ಇಬ್ಬರೂ ಮದ್ಯ ಸೇವನೆ ಮಾಡಿರುವುದು ತಿಳಿದು ಬಂದಿದೆ.

  • ಕಿಟಕಿ ಬಳಿ ಜೋಡಿಯಿಂದ ಸೆಕ್ಸ್ – 9ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

    ಕಿಟಕಿ ಬಳಿ ಜೋಡಿಯಿಂದ ಸೆಕ್ಸ್ – 9ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

    ಮಾಸ್ಕೋ: ಜೋಡಿಯೊಂದು ಕಿಟಕಿ ಬಳಿ ಸೆಕ್ಸ್ ಮಾಡುತ್ತಿದ್ದ ವೇಳೆ 9ನೇ ಮಹಡಿಯಿಂದ ಬಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟು, ವ್ಯಕ್ತಿ ಬದುಕುಳಿದ ಘಟನೆ ರಷ್ಯಾದ ಸೆಂಟ್ ಪೀಟರ್ಸ್‍ಬಗ್‍ನಲ್ಲಿ ನಡೆದಿದೆ.

    ಸ್ಥಳೀಯರ ಪ್ರಕಾರ ಜೋಡಿಗಳಿದ್ದ ಫ್ಲಾಟ್‍ನಲ್ಲಿ ವೈಲ್ಡ್ ಪಾರ್ಟಿ ನಡೆಯುತ್ತಿತ್ತು. ಮೊದಲು 9ನೇ ಮಹಡಿಯ ಕಿಟಕಿಯಿಂದ ಟಿವಿ ಕೆಳಗೆ ಬಿತ್ತು. ನಂತರ ಮಹಿಳೆ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಳಿಕ ವ್ಯಕ್ತಿ ಆಕೆಯ ಮೇಲೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

    ಪೊಲೀಸರು ಮಹಿಳೆಯ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಮಹಿಳೆಯ ಮೇಲೆ ಯಾವುದೇ ಬಟ್ಟೆ ಇರಲಿಲ್ಲ. ನಗ್ನನಾಗಿದ್ದ ವ್ಯಕ್ತಿ ಬೀಳುತ್ತಿದ್ದಂತೆ ಎದ್ದು ಮತ್ತೆ ಪಾರ್ಟಿಗೆ ಹೋಗಿದ್ದಾನೆ ಎಂದು ಸ್ಥಳೀಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಈ ಘಟನೆ ನಡೆದ ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಪಾರ್ಟಿ ಮಾಡುತ್ತಿದ್ದವರು ಅವರ ಮೇಲೆ ನೆಲ ಒರೆಸುವ ಕಸಬರಿಗೆ ಎಸೆದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಜೋಡಿ ಕಿಟಕಿಯ ಬಳಿ ದೈಹಿಕ ಸಂಬಂಧ ಬೆಳೆಸುತಿತ್ತು. ಹಾಗಾಗಿ ಅವರು ಕೆಳಗೆ ಬಿದ್ದಿದ್ದಾರೆ ಎನ್ನುವ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಜೋಡಿ ಕೆಳಗೆ ಬೀಳುವಾಗ ಫ್ಲಾಟ್‍ನಲ್ಲಿ ಇನ್ನು ಇಬ್ಬರು ಪುರುಷರು ಇದ್ದು, ಅವರು ಈ ಘಟನೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಈಗ ತನಿಖೆ ನಡೆಸುತ್ತಿದ್ದಾರೆ.

  • 3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ  ಅಪಾರ್ಟ್‌ಮೆಂಟ್‌  ಗೆದ್ದ 6ರ ಪೋರ

    3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ ಅಪಾರ್ಟ್‌ಮೆಂಟ್‌ ಗೆದ್ದ 6ರ ಪೋರ

    ಮಾಸ್ಕೋ: ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಪುಶ್ ಅಪ್ಸ್ ಮಾಡುವುದರಿಂದ ಸ್ನಾಯುಗಳು ಗಟ್ಟಿಯಾಗಿ ಶಕ್ತಿಯುತವಾಗುತ್ತೆ. ಆದರೆ ರಷ್ಯಾದಲ್ಲಿ 6 ವರ್ಷದ ಬಾಲಕನೊಬ್ಬ ಬ್ರೇಕ್ ಕೊಡದೆ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ  ಅಪಾರ್ಟ್‌ಮೆಂಟ್‌  ಒಂದನ್ನ ತನ್ನದಾಗಿಸಿಕೊಂಡಿದ್ದಾನೆ.

    ಹೌದು. ಏನಪ್ಪ 6 ವರ್ಷದ ಪುಟಾಣಿ ಹುಡುಗ 3 ಸಾವಿರ ಪುಶ್ ಅಪ್ಸ್ ಮಾಡಿದ್ದಾನಾ ಅಂತ ಶಾಕ್ ಆಗೋದು ಸಾಮಾನ್ಯ. ಆದರೆ ಆಶ್ಚರ್ಯ ಎನಿಸಿದರು ಇದು ಸತ್ಯ. ರಷ್ಯಾದ ನೋವಿ ರೆದಾಂತ್ ನಿವಾಸಿ ಇಬ್ರಾಹಿಂ ಲ್ಯೋನೋವ್(6) ಬಿಡುವಿಲ್ಲದೇ ಬರೋಬ್ಬರಿ 3,270 ಪುಶ್ ಅಪ್ಸ್ ಮಾಡಿ, ಐಷಾರಾಮಿ  ಅಪಾರ್ಟ್‌ಮೆಂಟ್‌  ಗಳಿಸಿದ್ದಾನೆ. ಸದ್ಯ ಬಾಲಕ ಬ್ರೇಕ್ ಫ್ರೀ ಪುಶ್ ಅಪ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಬಾಲಕನ ಫಿಟ್ನೆಸ್ ಗೆ ಫಿದಾ ಆಗಿಬಿಟ್ಟಿದ್ದಾರೆ.

    ಇಬ್ರಾಹಿಂ ಹಾಗೂ ಆತನ ತಂದೆ ಇಬ್ಬರೂ ಕ್ರೀಡಾ ಕ್ಲಬ್‍ನ ಸದಸ್ಯರಾಗಿದ್ದು, ಈ ಪುಶ್ ಅಪ್ಸ್ ಸ್ಪರ್ಧೆಗಾಗಿಯೇ ಬಹಳಷ್ಟು ಶ್ರಮಿಸಿದ್ದರು ಎನ್ನಲಾಗಿದೆ. ಇಬ್ರಾಹಿಂ ಲ್ಯೋನೋವ್ ತನಗೆ ಬಂದಿದ್ದ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಸತತ 3,270 ಪುಶ್ ಅಪ್ಸ್ ಮಾಡಿ ತನ್ನ ಫಿಟ್ನೆಸ್ ನಿಂದಲೇ ಸ್ಥಳೀಯ ಕ್ರೀಡಾ ಸಂಸ್ಥೆಯ ಗಮನ ಸೆಳೆದಿದ್ದಾನೆ. ಬಾಲಕನ ಫಿಟ್ನೆಸ್ ಕಂಡು ಆಶ್ಚರ್ಯಪಟ್ಟ ಕ್ರೀಡಾ ಸಂಸ್ಥೆ ಇಬ್ರಾಹಿಂಗೆ ದೊಡ್ಡ ಐಶಾರಾಮಿ  ಅಪಾರ್ಟ್‌ಮೆಂಟ್‌  ಒಂದನ್ನು ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸಿದೆ.

    ಚಿಕ್ಕ ವಯಸ್ಸಿನಲ್ಲೆ ಈ ರೀತಿ ಅಸಾಮಾನ್ಯ ಸಾಧನೆ ಮಾಡಿರುವ ಬಾಲಕನ ರಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲೂ ದಾಖಲೆ ನಿರ್ಮಿಸಿದ್ದಾನೆ. ಇನ್ನೂ ಆಚ್ಚರಿಯ ಸಂಗತಿ ಏನೆಂದರೆ ಕೇವಲ ಇಬ್ರಾಹಿಂ ಮಾತ್ರವಲ್ಲ ಇಲ್ಲಿನ ಹಲವು ಮಕ್ಕಳು ಈ ರೀತಿ ಪುಶ್ ಅಪ್ಸ್ ಸ್ಪರ್ಧೆಯಲ್ಲಿ ಗೆದ್ದು ಐಶಾರಾಮಿ ಉಡುಗೊರೆಯನ್ನು ಪಡೆದಿದ್ದಾರೆ.

    2018ರಲ್ಲಿ 5 ವರ್ಷದ ಬಾಲಕನೊಬ್ಬ ಬರೋಬ್ಬರಿ 4,150 ಪುಶ್ ಅಪ್ಸ್ ಮಾಡುವ ಮೂಲಕ ಮರ್ಸಿಡೀಸ್ ಕಾರನ್ನು ಗೆದ್ದಿದ್ದನು. ಈ ವೇಳೆ ರಷ್ಯಾದ ಪ್ರಧಾನಿ ಅವರು ಬಾಲಕನಿಗೆ ಈ ಕಾರಿನ ಕೀಯನ್ನು ಹಸ್ತಾಂತರಿಸಿದ್ದರು.

  • ನೋಡನೋಡುತ್ತಿದ್ದಂತೆ ಹೊತ್ತಿ ಉರಿದ ವಿಮಾನ- 41 ಪ್ರಯಾಣಿಕರು ಸುಟ್ಟು ಭಸ್ಮ: ವಿಡಿಯೋ

    ನೋಡನೋಡುತ್ತಿದ್ದಂತೆ ಹೊತ್ತಿ ಉರಿದ ವಿಮಾನ- 41 ಪ್ರಯಾಣಿಕರು ಸುಟ್ಟು ಭಸ್ಮ: ವಿಡಿಯೋ

    ಮಾಸ್ಕೋ: ತುರ್ತು ಭೂ ಸ್ಪರ್ಶ ವೇಳೆ ವಿಮಾನದ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡು 41 ಪ್ರಯಾಣಿಕರು ಸಜೀವ ದಹನಗೊಂಡ ಘಟನೆ ರಷ್ಯಾದ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ರಷ್ಯಾ ನಿರ್ಮಿತ ಸುಖೋಯ್ ಸೂಪರ್‍ಜೆಟ್ 100 ವಿಮಾನದಲ್ಲಿ ಒಟ್ಟು 73 ಮಂದಿ ಪ್ರಯಾಣಿಕರು, ಐವರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಮೊದಲ ಬಾರಿಗೆ ತುರ್ತು ಭೂ ಸ್ಪರ್ಶ ಮಾಡಲು ಯತ್ನಿಸಿದ ಪೈಲಟ್‍ಗೆ ಸಾಧ್ಯವಾಗಿಲ್ಲ. ಬಳಿಕ ಮತ್ತೊಮ್ಮೆ ತುರ್ತು ಭೂ ಸ್ಪರ್ಶ ಮಾಡುವಾಗ ನೆಲಕ್ಕೆ ಟೈರ್ ತಗುಲಿ ಬೆಂಕಿ ಹೊತ್ತಿಕೊಂಡಿದೆ.

    https://twitter.com/PorterMedium/status/1125125685989781504

    ಕಪ್ಪು ದಟ್ಟ ಹೊಗೆ ವಿಮಾನ ನಿಲ್ದಾಣದಲ್ಲಿ ಆವರಿಸಿತ್ತು. ನಾಲ್ವರು ಮಕ್ಕಳು ಸೇರಿದಂತೆ 41 ಮಂದಿ ನೋಡು ನೋಡುತ್ತಿದ್ದಂತೆ ಸಜೀವ ದಹನವಾಗಿದ್ದಾರೆ. ಅದೃಷ್ಟವಶಾತ್ ವಿಮಾನ ಸ್ಫೋಟಗೊಂಡಿಲ್ಲ. ವಿಮಾನ ನಿಂತ ಬಳಿಕ ತುರ್ತು ನಿರ್ಗಮನ ಮೂಲಕ ಹಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    https://twitter.com/PorterMedium/status/1125129682092011521

    ರಷ್ಯಾದ ತನಿಖಾ ತಂಡದ ವಕ್ತಾರ ಎಲಿನಾ ಮಾರ್ಕೊಸ್‍ಕಾಯ ಬೆಳಗಿನ ಜಾವ 41 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಆದರೆ ಆರೋಗ್ಯ ಸಚಿವ ವೆರೋನಿಕಾ ಸ್ಕೋವರ್ತಸೋವಾ 38 ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದು, 40 ಮಂದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಉತ್ತರ ಮರ್ಮನ್ಸ್ಕ್ ನಗರದ ಶೆರ್ಮೆಟಿವೋ ವಿಮಾನ ನಿಲ್ದಾಣದಿಂದ ಈ ವಿಮಾನ ಹಾರಾಟ ಆರಂಭಿಸಿತ್ತು. ಬಳಿಕ ವಿಮಾನದಲ್ಲಿ ತಾಂತ್ರಿಕ ಉಂಟಾಗಿ ಅದು ಹಿಂತಿರುಗಿತ್ತು. ಹಿಂತಿರುಗುತ್ತಿದ್ದಾಗ ವಿಮಾನದಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ತುರ್ತು ಭೂ ಸ್ಪರ್ಶ ಮಾಡಿದ್ದಾರೆ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ತಿಳಿಸಿದ್ದಾರೆ.

    ಸದ್ಯ ಬೆಂಕಿ ಹೊತ್ತಿಕೊಂಡ ವಿಡಿಯೋ ವೈರಲ್ ಆಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲು ರಷ್ಯಾ ಸರ್ಕಾರ ವಿಶೇಷ ತನಿಖಾ ತಂಡವನ್ನು ರೂಪಿಸಿದೆ.

  • 2 ಹಡಗಿನಲ್ಲಿ ಆಕಸ್ಮಿಕ ಬೆಂಕಿ ಅವಘಡ – 11 ಮಂದಿ ದುರ್ಮರಣ

    2 ಹಡಗಿನಲ್ಲಿ ಆಕಸ್ಮಿಕ ಬೆಂಕಿ ಅವಘಡ – 11 ಮಂದಿ ದುರ್ಮರಣ

    ಮಾಸ್ಕೋ: ಟರ್ಕಿಷ್, ಲಿಬಿಯನ್ ಹಾಗೂ ಭಾರತೀಯ ನಾವಿಕರು ಕಾರ್ಯ ನಿರ್ವಹಿಸುತ್ತಿದ್ದ 2 ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ 11 ಮಂದಿ ಸಾವನ್ನಪ್ಪಿರುವ ದುರ್ಘಟನೆ ರಷ್ಯಾದ ಕೆರ್ಚ್ ಜಲಸಂಧಿ ಬಳಿ ಸೋಮವಾರದಂದು ನಡೆದಿದೆ.

    ಸೋಮವಾರದಂದು ರಷ್ಯಾದ ಪ್ರಾದೇಶಿಕ ಜಲಮಾರ್ಗದಲ್ಲಿ ಈ ದುರಂತ ಸಂಭವಿಸಿದೆ. ದುರಂತಕ್ಕೆ ಒಳಗಾದ 2 ಹಡಗುಗಳ ಮೇಲೆ ಕೂಡ ತಾಂಜಾನಿಯನ್ ಭಾವುಟವನ್ನು ಅಳವಡಿಸಲಾಗಿತ್ತು. 2 ಹಡಗುಗಳ ಪೈಕಿ ಒಂದು ಲಿಕ್ವಿಫಾಯ್ದ್ ನ್ಯಾಚುರಲ್ ಗಾಸ್(ಎಲ್‍ಎನ್‍ಜಿ) ಸಾಗಿಸುತ್ತಿದ್ದರೆ, ಇನ್ನೊಂದು ಹಡಗು ಟ್ಯಾಂಕರ್ ಗಳನ್ನು ಸಾಗಿಸುತ್ತಿತ್ತು. ಒಂದು ಎಲ್‍ಎನ್‍ಜಿ ತುಂಬಿದ್ದ ಹಡಗಿನಿಂದ ಟ್ಯಾಕರ್ ಹಡಗಿಗೆ ಇಂಧನವನ್ನು ವರ್ಗಾವಣೆ ಮಾಡುತ್ತಿದ್ದಾಗ ಈ ಅಗ್ನಿ ಅವಘಡ ಸಂಭವಿಸಿದೆ. ಇದನ್ನೂ ಓದಿ:ಕೂರ್ಮಗಡ ಬೋಟ್ ದುರಂತ- ಸಾವಿನ ಸಂಖ್ಯೆ 13ಕ್ಕೆ ಏರಿಕೆ

    ಒಂದು ಹಡಗಿನಲ್ಲಿ 8 ಮಂದಿ ಭಾರತೀಯರು ಹಾಗೂ 9 ಮಂದಿ ಟರ್ಕಿ ನಾವಿಕರು ಸೇರಿ ಒಟ್ಟು 17 ಮಂದಿ ಇದ್ದರು. ಇನ್ನೊಂದರಲ್ಲಿ 7 ಮಂದಿ ಭಾರತೀಯರು, 7 ಮಂದಿ ಟರ್ಕಿ ನಾವಿಕರು ಹಾಗೂ ಓರ್ವ ಲಿಬಿಯಾದ ನಾವಿಕ ಸೇರಿ ಒಟ್ಟು 15 ಮಂದಿ ಕಾರ್ಯ ನಿರ್ವಹಿಸುತ್ತಿದ್ದರು.

    ಈ ದುರ್ಘಟನೆಯಿಂದ ಭಾರತೀಯರು ಸೇರಿದಂತೆ ಒಟ್ಟು 11 ಮಂದಿ ಮೃತಪಟ್ಟಿದ್ದು, 9 ಮಂದಿ ಕಾಣೆಯಾಗಿದ್ದಾರೆ. ಅಲ್ಲದೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಲವು ನಾವಿಕರು ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದು ಇವರೆಗೆ 12 ಮಂದಿಯನ್ನು ರಕ್ಷಣಾ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ. ಹಾಗೆಯೇ ಕಾಣೆಯಾದವರನ್ನು ಹುಡುಕುವ ಕೆಲಸವನ್ನು ರಕ್ಷಣಾ ಪಡೆ ಮುಂದುವರಿಸಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv