Tag: Moscow

  • ಎಲ್ಲ ಉಕ್ರೇನ್ ಪ್ರಜೆಗಳಿಗೆ ವೇಗವಾಗಿ ರಷ್ಯಾದ ಪೌರತ್ವ ಕೊಡಲು ಮುಂದಾದ ಪುಟಿನ್

    ಎಲ್ಲ ಉಕ್ರೇನ್ ಪ್ರಜೆಗಳಿಗೆ ವೇಗವಾಗಿ ರಷ್ಯಾದ ಪೌರತ್ವ ಕೊಡಲು ಮುಂದಾದ ಪುಟಿನ್

    ಮಾಸ್ಕೋ: ರಷ್ಯಾದ ಸೇನೆ ಪ್ರಮುಖ ಉಕ್ರೇನಿಯನ್ ನಗರವನ್ನು ಆಕ್ರಮಿಸಿಕೊಳ್ಳುತ್ತಿದ್ದಂತೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೋಮವಾರ ಎಲ್ಲ ಉಕ್ರೇನಿಯನ್ನರಿಗೆ ರಷ್ಯಾದ ಪೌರತ್ವವನ್ನು ಪಡೆಯುವ ವೇಗದ ವಿಧಾನವನ್ನು ವಿಸ್ತರಿಸಿದರು.

    ಈ ಯೋಜನೆಯೂ ಯುದ್ಧದಿಂದ ಹಾನಿಗೊಳಗಾದ ಉಕ್ರೇನ್ ಮೇಲೆ ಮಾಸ್ಕೋದ ಪ್ರಭಾವವನ್ನು ಬಲಪಡಿಸುವ ಮತ್ತೊಂದು ಪ್ರಯತ್ನವಾಗಿದೆ. ಇಲ್ಲಿವರೆಗೂ ಉಕ್ರೇನ್‍ನ ಪ್ರತ್ಯೇಕತಾವಾದಿ ಪೂರ್ವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶದ ನಿವಾಸಿಗಳು, ಹಾಗೆಯೇ ದಕ್ಷಿಣದ ಝಪೊರಿಝಿಯಾ ಮತ್ತು ಖೆರ್ಸನ್ ಪ್ರದೇಶದ ನಿವಾಸಿಗಳು ಮತ್ತು ಈಗ ರಷ್ಯಾದ ನಿಯಂತ್ರಣದಲ್ಲಿರುವ ಹೆಚ್ಚಿನ ಭಾಗದ ಜನರು ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಹಿನ್ನೆಲೆ ಪುಟಿನ್ ಅವರು ಇದರ ವಿಧಾನವನ್ನು ವೇಗವಾಗಿ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ – ಮಳೆ ದೇವನಿಗೆ ಸ್ಥಳೀಯರಿಂದ ವಿಶೇಷ ಪೂಜೆ 

    ಉಕ್ರೇನಿಯನ್ ವಿದೇಶಾಂಗ ಸಚಿವ ಡಿಮಿಟ್ರೋ ಕ್ಲುಬಾ ಅವರು ಪಾಸ್‍ಪೋರ್ಟ್ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದು ಉಕ್ರೇನ್‍ನಲ್ಲಿರುವ ನಿವಾಸಿಗಳಿಗೂ ಅನ್ವಯಿಸುತ್ತದೆ.

    ನಮ್ಮ ರಾಜ್ಯದ ಆಕ್ರಮಿತ ಪ್ರದೇಶಗಳ ನಿವಾಸಿಗಳ ಕುತ್ತಿಗೆಗೆ ಕುಣಿಕೆಯನ್ನು ಬಿಗಿಗೊಳಿಸಲು ಪಾಸ್‍ಪೋರ್ಟ್‍ಗಳನ್ನು ನೀಡಲು ರಷ್ಯಾ ಸರಳೀಕೃತ ವಿಧಾನವನ್ನು ಬಳಸುತ್ತಿದೆ. ಆಕ್ರಮಿತ ಆಡಳಿತಗಳು ಮತ್ತು ರಷ್ಯಾದ ಆಕ್ರಮಣಕಾರಿ ಸೈನ್ಯದ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಈ ಮೂಲಕ ಒತ್ತಾಯಿಸುತ್ತಿದೆ ಎಂದು ಉಕ್ರೇನ್‍ನ ವಿದೇಶಿ ಸಚಿವಾಲಯ ಹೇಳಿಕೆಯಲ್ಲಿ ಸೇರಿಸಿದೆ.

    2019 ರ ನಡುವೆ, ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ದ 7,20,000 ಜನರಲ್ಲಿ ಸುಮಾರು 18% ಜನರು ರಷ್ಯಾದ ಪಾಸ್‍ಪೋರ್ಟ್‍ಗಳನ್ನು ಸ್ವೀಕರಿಸಿದ್ದಾರೆ. ಇದನ್ನೂ ಓದಿ:  ʼಬೆಲ್ಲದ ದೋಸೆʼ ಮಾಡುವ ಸೂಪರ್‌ ವಿಧಾನ 

    Live Tv
    [brid partner=56869869 player=32851 video=960834 autoplay=true]

  • ಬಿಗಡಾಯಿಸುತ್ತಿದೆಯಾ ಪುಟಿನ್ ಆರೋಗ್ಯ? – ವೇದಿಕೆಯಲ್ಲಿ ಕಾಲು ನಡುಗುವ ವೀಡಿಯೋ ವೈರಲ್

    ಬಿಗಡಾಯಿಸುತ್ತಿದೆಯಾ ಪುಟಿನ್ ಆರೋಗ್ಯ? – ವೇದಿಕೆಯಲ್ಲಿ ಕಾಲು ನಡುಗುವ ವೀಡಿಯೋ ವೈರಲ್

    ಮಾಸ್ಕೋ: ಉಕ್ರೇನ್ ಮೇಲೆ ಯುದ್ಧ ಸಾರಿ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೆಲವು ದಿನಗಳಿಂದ ಆರೋಗ್ಯದ ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಹೊಸದೊಂದು ವೀಡಿಯೋ ಕೂಡಾ ಇದೀಗ ವೈರಲ್ ಆಗುತ್ತಿದೆ.

    ವ್ಲಾಡಿಮಿರ್ ಪುಟಿನ್ ಭಾನುವಾರ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಸ್ಥಿರವಾಗಿ ನಿಲ್ಲಲು ಹೆಣಗಾಡಿದ್ದಾರೆ. ತಮ್ಮ ಕಾಲುಗಳು ನಡುಗುತ್ತಿದ್ದಂತೆ ವೇದಿಕೆಯ ಡಯಾಸ್ ಅನ್ನು ಹಿಡಿದು, ಹಿಂದೆ-ಮುಂದೆ ತೂಗಾಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮೊದಲ ಖಾಸಗಿ ರೈಲು ಸಂಚಾರ ಆರಂಭ- ಖಾಸಗೀಕರಣಕ್ಕೆ ರೈಲ್ವೆ ನೌಕರರ ವಿರೋಧ

    ಚಲನಚಿತ್ರ ನಿರ್ಮಾಪಕಿ ನಿಕಿತಾ ಮಿಖೈಲೋವ್ ಅವರಿಗೆ ಪ್ರಶಸ್ತಿ ನೀಡಿದ ಬಳಿಕ ಪುಟಿನ್ ಅಸಹಜವಾಗಿ ವರ್ತಿಸಿದ್ದಾರೆ. ಭಾಷಣ ಮಾಡುವ ಸಂದರ್ಭ ಅಸ್ಥಿರವಾಗಿ ನಿಂತಿರುವ ವೀಡಿಯೋ ವೈರಲ್ ಆಗುತ್ತಿದ್ದು, ಇದೀಗ ಅವರ ಆರೋಗ್ಯದ ಬಗ್ಗೆ ಹೊಸ ಜಿಜ್ಞಾಸೆ ಉಂಟುಮಾಡಿದೆ.

    ಕೆಲವು ದಿನಗಳ ಹಿಂದೆ ಪುಟಿನ್‌ಗೆ ಕ್ಯಾನ್ಸರ್ ಕಾಯಿಲೆ ಇದ್ದು, ಅವರು ಹೆಚ್ಚೆಂದರೆ 3 ವರ್ಷ ಬದುಕಬಹುದು ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿತ್ತು. ಪುಟಿನ್‌ಗೆ 69 ವರ್ಷ ಆಗಿದ್ದು, ಅವರ ಕಣ್ಣಿನ ದೃಷ್ಟಿಯೂ ಗಂಭೀರವಾಗಿ ಹದಗೆಟ್ಟಿದೆ ಹಾಗೂ ಬೆರಳುಗಳು ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ಗುಪ್ತಚರ ಇಲಾಖೆ ಮೂಲಗಳಿಂದ ಮಾಧ್ಯಮಗಳು ವರದಿ ಮಾಡಿತ್ತು. ಇದನ್ನೂ ಓದಿ: 5ಜಿ ತರಂಗಾಂತರ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ

    ಪುಟಿನ್ ಅವರ ಹದಗೆಡುತ್ತಿರುವ ಆರೋಗ್ಯದ ಕಾರಣ ವೈದ್ಯರು ಸಾರ್ವಜನಿಕವಾಗಿ ಹೆಚ್ಚು ಸಮಯ ಕಾಣಿಸಿಕೊಳ್ಳದಂತೆ ಹೇಳಿರುವುದಾಗಿ ತಿಳಿದುಬಂದಿದೆ.

    Live Tv

  • 1945 ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ

    1945 ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ

    ಮಾಸ್ಕೋ: ಎರಡನೇ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ಸೋಲಿನ 77ನೇ ವಾರ್ಷಿಕೋತ್ಸವವನ್ನು ರಷ್ಯಾ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಮಾಜಿ ಸೋವಿಯತ್ ರಾಷ್ಟ್ರಗಳಿಗೆ ಅಭಿನಂದನೆ ಸಲ್ಲಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ‘1945 ರಲ್ಲಿದ್ದಂತೆ, ಗೆಲುವು ನಮ್ಮದೇ ಎಂದು ಉಕ್ರೇನ್ ವಿರೋಧ ಭಾನುವಾರ ಪ್ರತಿಜ್ಞೆ ಮಾಡಿದರು.

    ಎರಡನೇ ಮಹಾಯುದ್ಧದ ಜಯವನ್ನು ಕುರಿತು ಸಭೆಯನ್ನು ಉದ್ದೇಶಿ ಮಾತನಾಡಿದ ಪುಟಿನ್, ಸೈನಿಕರು 1945ರಲ್ಲಿ ಹೋರಾಟ ಮಾಡಿದಂತೆ ಈಗ ನಮ್ಮ ಸೈನಿಕರು ಗೆಲುವು ನಮ್ಮದೇ ಎಂಬ ವಿಶ್ವಾಸದಿಂದ ಉಕ್ರೇನ್‌ನಲ್ಲಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಭೂಮಿಯನ್ನು ನಾಜಿ ಎಂಬ ಕೆಟ್ಟಶಕ್ತಿಗಳಿಂದ ಮುಕ್ತಗೊಳಿಸಲು ಸೈನಿಕರು ಹೋರಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.

    ವಿವಿಧ ದೇಶಗಳ ಜನರಿಗೆ ನೋವುಂಟು ಮಾಡಿದ ನಾಜಿಸಂ ಮರುಹುಟ್ಟು ತಡೆಯುವುದು ನಮ್ಮ ಕರ್ತವ್ಯವಾಗಿದೆ. ಲೆಕ್ಕವಿಲ್ಲದಷ್ಟು ತ್ಯಾಗಗಳನ್ನು ಮಾಡಿ ನಮ್ಮ ಸೈನ್ಯವು ನಾಜಿಸಂ ಅನ್ನು ಹೊಡೆದುರುಳಿಸಿದೆ. ಆದರೆ ಈಗ ಮತ್ತೆ ಅದು ತಲೆ ಎತ್ತುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು- ಶಾಲೆಯ ಮೇಲೆ ರಷ್ಯಾ ಬಾಂಬ್ ದಾಳಿ, 60 ಮಂದಿ ಸಾವು

    ಎರಡನೇ ಮಹಾಯುದ್ಧದಲ್ಲಿ ಸೋತವರನ್ನು ಮತ್ತೆ ತಲೆ ಎತ್ತದಂತೆ ಮಾಡುವುದು ನಮ್ಮ ಪವಿತ್ರ ಕರ್ತವ್ಯವಾಗಿದೆ. ಇದು ಮಾಸ್ಕಾದ ಮಹಾನ್ ದೇಶಭಕ್ತಿಯ ಯುದ್ಧವಾಗಿದೆ ಎಂದರು.

    ಈ ವೇಳೆ ಅವರು, ಉಕ್ರೇನ್‍ನ ಎಲ್ಲ ನಿವಾಸಿಗಳು ಶಾಂತಿಯುತ ಮತ್ತು ನ್ಯಾಯಯುತ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ನಾನು ಬಯಸುತ್ತೇನೆ ಎಂದು ತಿಳಿಸಿದರು.

  • ಟೆನ್ನಿಸ್ ತಾರೆ ಮರಿಯಾ ಶರಪೋವಾರ ಬೇಬಿ ಬಂಪ್ ಫೋಟೋ ವೈರಲ್

    ಟೆನ್ನಿಸ್ ತಾರೆ ಮರಿಯಾ ಶರಪೋವಾರ ಬೇಬಿ ಬಂಪ್ ಫೋಟೋ ವೈರಲ್

    ಮಾಸ್ಕೋ: ಮಾಜಿ ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ ಅವರು ಬೇಬಿ ಬಂಪ್ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಏಪ್ರಿಲ್ 19 ರಂದು ತಮ್ಮ 35ನೇ ಹುಟ್ಟುಹಬ್ಬದ ದಿನದಿಂದು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋವು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇಬ್ಬರ ಹುಟ್ಟುಹಬ್ಬದ ಕೇಕ್ ತಿನ್ನುವುದು ಯಾವಾಗಲೂ ನನ್ನ ವಿಶೇಷತೆಯಾಗಿದೆ ಎಂದು ಹಾರ್ಟ್ ಎಮೋಜಿಗಳನ್ನು ಹಾಕಿದ್ದಾರೆ.

     

    View this post on Instagram

     

    A post shared by Maria Sharapova (@mariasharapova)

    ಟೆನ್ನಿಸ್‍ನಲ್ಲಿ ಅವರು 5 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಅವಾರ್ಡ್ ಅನ್ನು ತಮ್ಮ ಮುಡಿಗೇರಿಸಿಕೋಡಿದ್ದಾರೆ. ಶರಪೋವಾ ಅವರು 2004ರಲ್ಲಿ ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ್ದರು. 2005 ರಲ್ಲಿ ಅಗ್ರಕ್ರಮಾಂಕದ ಆಟಗಾರ್ತಿಯಾಗಿ ಹೊರಹೊಮ್ಮಿದ್ದರು. 2012ರ ಒಲಂಪಿಕ್ಸ್‍ನಲ್ಲಿ ಬೆಳ್ಳಿ ಪದಕವನ್ನು ಜಯಸಿದ್ದರು.

    ಡಿಸೆಂಬರ್‌ನಲ್ಲಿ ಬ್ರಿಟಿಷ್ ಉದ್ಯಮಿ ಅಲೆಕ್ಸಾಂಡರ್ ಗಿಲ್ಕ್ಸ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  • ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಹೆಚ್ಚಿದ ಬೆದರಿಕೆ – ಏರ್ ಇಂಡಿಯಾ ವಿಮಾನ ರದ್ದು

    ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಹೆಚ್ಚಿದ ಬೆದರಿಕೆ – ಏರ್ ಇಂಡಿಯಾ ವಿಮಾನ ರದ್ದು

    ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಬೆದರಿಕೆಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ವಿಮಾನಯಾನ ಕಂಪನಿ ಏರ್ ಇಂಡಿಯಾ ತನ್ನ ದೆಹಲಿಯಿಂದ ಮಾಸ್ಕೋಗೆ ತೆರಳಬೇಕಿದ್ದ ವಿಮಾನವನ್ನು ರದ್ದುಗೊಳಿಸಿದೆ.

    ಉಕ್ರೇನ್-ರಷ್ಯಾ ಯುದ್ಧದ ಮಧ್ಯೆ ಭಾರತ ಬೆದರಿಕೆಗಳನ್ನು ಗ್ರಹಿಸಿದ್ದು, ದೆಹಲಿ-ಮಾಸ್ಕೋ ವಿಮಾನವನ್ನು ರದ್ದುಗೊಳಿಸಿದೆ. ಈಗಾಗಲೇ ವಿಮಾನದ ಟಿಕೇಟ್‌ಗಳನ್ನು ಖರೀದಿಸಿದ್ದ ಪ್ರಯಾಣಿಕರಿಗೆ ಏರ್ ಇಂಡಿಯಾ ಸಂಪೂರ್ಣ ಮರುಪಾವತಿ ಮಾಡುತ್ತದೆ ಎಂದು ಭರವಸೆ ನೀಡಿದೆ. ಇದನ್ನೂ ಓದಿ: ಬೆಳಗಾವಿ ಆರ್‌ಎಸ್‌ಎಸ್ ಕಚೇರಿಗೆ ಗೋವಾ ಸಿಎಂ ಭೇಟಿ – ಇನ್ನೊಮ್ಮೆ ಮೋದಿ ಪ್ರಧಾನಿ ಆಗ್ತಾರೆ ಎಂದ ಸಾವಂತ್

    ರಷ್ಯಾದ ರಾಯಭಾರ ಕಚೇರಿ ಈ ಬಗ್ಗೆ ಟೆಲಿಗ್ರಾಮ್ ಮೂಲಕ ಮಾಹಿತಿ ನೀಡಿದೆ. ಭಾರತೀಯ ವಿಮಾಮಯಾನ ಸಂಸ್ಥೆ ಏರ್ ಇಂಡಿಯಾ ದೆಹಲಿ-ಮಾಸ್ಕೋ ಮಾರ್ಗದಲ್ಲಿ ಪ್ರಯಾಣಿಸಬೇಕಿದ್ದ ವಿಮಾನವನ್ನು ಸದ್ಯ ಸ್ಥಗಿತಗೊಳಿಸಿದೆ. ಈಗಿನ ಪರಿಸ್ಥಿತಿಯಲ್ಲಿ ವಿಮಾನ ಪ್ರಯಾಣ ಪುನರಾರಂಭ ಅನಿಶ್ಚಿತವಾಗಿದೆ. ರದ್ದಾದ ವಿಮಾನ ಪ್ರಯಾಣಿಕರಿಗೆ ಏರ್ ಇಂಡಿಯಾ ಟಿಕೆಟ್‌ನ ಸಂಪೂರ್ಣ ಮರುಪಾವತಿ ಮಾಡುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ‘ಬಿಗ್ ಬ್ರದರ್’ ಎಂದು ಭಾರತ, ಮೋದಿಗೆ ಧನ್ಯವಾದ ಹೇಳಿದ ಲಂಕಾ ಕ್ರಿಕೆಟಿಗ ಜಯಸೂರ್ಯ

    ವಿಮಾನ ಹಾರಾಟ ಸ್ಥಗಿತವಾಗಿದ್ದರೂ ಸದ್ಯ ತಾಷ್ಕೆಂಟ್, ಇಸ್ತಾಂಬುಲ್, ದುಬೈ, ಅಬುಧಾಬಿ, ದೋಹಾ ಹಾಗೂ ಇತರ ಸ್ಥಳಗಳ ಮೂಲಕ ಸಾರಿಗೆ ಮಾರ್ಗಗಳನ್ನು ಬಳಸಿಕೊಂಡು ದೆಹಲಿಯಿಂದ ಮಾಸ್ಕೋಗೆ ಪ್ರಯಾಣಿಸಲು ಸಾಧ್ಯವಿದೆ ಎಂದು ರಷ್ಯಾದ ರಾಯಭಾರ ಕಚೇರಿ ತಿಳಿಸಿದೆ.

  • ಉಕ್ರೇನ್ ಅಧ್ಯಕನ ಹೇಳಿಕೆ ಪ್ರಸಾರ ಮಾಡಬೇಡಿ- ಎಚ್ಚರಿಕೆ ಕೊಟ್ಟ ರಷ್ಯಾ

    ಉಕ್ರೇನ್ ಅಧ್ಯಕನ ಹೇಳಿಕೆ ಪ್ರಸಾರ ಮಾಡಬೇಡಿ- ಎಚ್ಚರಿಕೆ ಕೊಟ್ಟ ರಷ್ಯಾ

    ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸಿದೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಅವರ ಜೊತೆ ನಡೆಸಿದ ಸಂದರ್ಶನವನ್ನು ಪ್ರಕಟಿಸದಂತೆ ರಷ್ಯಾ ಮಾಧ್ಯಮಗಳಿಗೆ ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ.

    ರಷ್ಯಾ ಹೇಳಿದ್ದೇನು?: ಉಕ್ರೇನ್ ನಾಯಕನ ಸಂದರ್ಶನ ನಡೆಸಿದ ಮಾಧ್ಯಮ ಸಂಸ್ಥೆಗಳ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ರಷ್ಯಾದ ಸಂವಹನ ಕಾವಲುಪಡೆ ತಿಳಿಸಿದೆ. ರಷ್ಯಾದ ಹಲವು ಸಂಸ್ಥೆಗಳು ಝೆಲೆನ್‍ಸ್ಕಿ ಸಂದರ್ಶನ ನಡೆಸಿವೆ. ಈ ಸಂದರ್ಶನಗಳು ಪ್ರಕಟವಾಗದಂತೆ ತಡೆಯುವ ಅಗತ್ಯವಿದೆ ಎಂದು ಕಾವಲುಪಡೆಯು ಪ್ರಕಟಣೆಯಲ್ಲಿ ತಿಳಿಸಿದೆ.

    ಫೆಬ್ರವರಿ 24ರಿಂದ ರಷ್ಯಾ ದಾಳಿಯ ಪರಿಣಾಮ ಉಕ್ರೇನ್‍ನ ಸುಮಾರು 30 ಲಕ್ಷ ಜನರು ತಮ್ಮ ರಾಷ್ಟ್ರ ತೊರೆದು ವಲಸೆ ಹೋಗಿದ್ದು, ಪಶ್ಚಿಮ ರಾಷ್ಟ್ರಗಳ ಬೆಂಬಲ ಕೋರಿದ್ದಾರೆ. ನೂರಾರು ನಾಗರಿಕರು ಸಾವಿಗೀಡಾಗಿದ್ದಾರೆ ಹಾಗೂ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ರಷ್ಯಾ ಕಂಡರೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಭಯವೇ?: ಉಕ್ರೇನ್ ಅಧ್ಯಕ್ಷ

    ನ್ಯಾಟೊ ಹೊಂದಿರುವ ಶೇ 1 ರಷ್ಟು ಯುದ್ಧ ವಿಮಾನಗಳು ಮತ್ತು ಶೇ 1 ರಷ್ಟು ಟ್ಯಾಂಕರ್‌ಗಳು ಉಕ್ರೇನ್‍ಗೆ ಬೇಕಾಗಿವೆ. ನಾವು ಅದಕ್ಕಿಂತ ಹೆಚ್ಚೇನೂ ಕೇಳುತ್ತಿಲ್ಲ. ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಕ್ಷಿಪಣಿಗಳು ಮತ್ತು ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ರವಾನಿಸುವುದಾಗಿ ಹಲವು ರಾಷ್ಟ್ರಗಳು ಭರವಸೆ ನೀಡಿವೆ. ಆದರೆ ಉಕ್ರೇನ್‍ಗೆ ಯುದ್ಧ ಟ್ಯಾಂಕರ್‌ಗಳು , ವಿಮಾನಗಳು ಮತ್ತು ಜಲಾಂತರ್ಗಾಮಿಗಳ ಅವಶ್ಯಕತೆ ಇದೆ ಶಸ್ತ್ರಾಸ್ತ್ರಗಳನ್ನು ನೀಡುವಂತೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಮನವಿ ಮಾಡಿದ್ದರು.

  • ಪುಟಿನ್ ಮೆದುಳಿನ ಗಂಭೀರ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ: ಗುಪ್ತಚರ ವರದಿ

    ಪುಟಿನ್ ಮೆದುಳಿನ ಗಂಭೀರ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ: ಗುಪ್ತಚರ ವರದಿ

    ಲಂಡನ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬುದ್ಧಿಮಾಂದ್ಯತೆ, ಪಾರ್ಕಿನ್ಸನ್ ಕಾಯಿಲೆ ಅಥವಾ ಕ್ಯಾನ್ಸರ್‌ಗೆ ನೀಡುವ ಸ್ಟೀರಾಯ್ಡ್ ಚಿಕಿತ್ಸೆಯಿಂದ ಉಂಟಾಗುವ `ರಾಯ್ಡ್ ರೇಜ್’ನಿಂದ ಮೆದುಳಿನ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

    ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್, ಯುಕೆ ಮತ್ತು ಯುಎಸ್ ಅನ್ನು ಒಳಗೊಂಡಿರುವ ಐದು ದೇಶಗಳ ಗುಪ್ತಚರ ಒಕ್ಕೂಟ ರಷ್ಯಾದ ಮೂಲಗಳನ್ನು ಆಧರಿಸಿ ಡೈಲಿ ಮೇಲ್ ವರದಿ ಪ್ರಕಟಿಸಿದೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ

    ಪುಟಿನ್ ಅವರ ಇತ್ತೀಚಿನ ಭಾವಚಿತ್ರಗಳ ದೃಶ್ಯಗಳನ್ನು ಗಮನಿಸಿದರೆ ಅವರ ಕಣ್ಣು ಉಬ್ಬಿರುವುದನ್ನು ಕಾಣಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಮೆಡಿಕಲ್ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸಿಗಿಂತ ಪ್ರಾಕ್ಟಿಕಲ್ ಕ್ಲಾಸ್‍ಗಳು ಮುಖ್ಯವಾಗಿರುತ್ತದೆ: ವಿದ್ಯಾರ್ಥಿಗಳು

    ಕಳೆದ ಐದು ವರ್ಷಗಳಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಪುಟಿನ್ ಅವರು ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈ ನಿರ್ಧಾರಗಳಿಂದ ಅವರ ನಡತೆಯೂ ಬದಲಾಗಿದೆ ಎಂದು ಹೇಳಿದೆ.

  • 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

    7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!

    ಮಾಸ್ಕೋ: ರಷ್ಯಾದಲ್ಲಿ 7.47 ಕೋಟಿ ರೂ.ಗೆ ವಿಮೆ ಮಾಡಿಸಲಾಗಿದ್ದ ಪೇಂಟಿಂಗ್‍ನನ್ನು ಸೆಕ್ಯೂರಿಟಿ ಗಾರ್ಡ್ ನಾಶ ಮಾಡಿರುವ ಘಟನೆ ಮಾಸ್ಕೋದಲ್ಲಿ ನಡೆದಿದೆ.

    ಒಬ್ಲಾಸ್ಟ್ ಪ್ರದೇಶದ ಯೆಲ್ಟ್ಸಿನ್ ಕೇಂದ್ರದಲ್ಲಿ ಅನ್ನಾ ಲೆಪೋರ್ಸ್ಕಯಾ ಪೇಂಟಿಂಗ್ ಪ್ರದರ್ಶನದಲ್ಲಿ ಸೆಕ್ಯುರಿಟಿ ಗಾರ್ಡ್ ತನ್ನ ಮೊದಲ ದಿನದ ಕೆಲಸಕ್ಕೆ ಬಂದಿದ್ದನು. ಈ ವೇಳೆ ಮುಖಗಳಿಲ್ಲದ ‘ಮೂವರು ಮನುಷ್ಯರ’ ಪೇಂಟಿಂಗ್ ನೋಡಿದ್ದಾನೆ. ಅದನ್ನು ನೋಡಿ ಬೇಸರಗೊಂಡಿದ್ದು, ಬಾಲ್ ಪಾಯಿಂಟ್ ಪೆನ್‍ನಿಂದ ಕಣ್ಣುಗಳನ್ನು ಬಿಡಿಸಿ ಪೇಂಟಿಂಗ್ ಹಾಳುಮಾಡಿದ್ದಾನೆ. ಈ ಪೇಂಟಿಂಗ್‍ಗೆ 1 ಮಿಲಿಯನ್(ರೂ. 7.47 ಕೋಟಿ) ವಿಮೆ ಮಾಡಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ರಾಜ್ಯ ನಾಯಕರ ಮಧ್ಯೆ ರಮೇಶ್ ಜಾರಕಿಹೊಳಿ ಗುರುತಿಸಿದ ಅಮಿತ್ ಶಾ!

    ಸಿಬ್ಬಂದಿ ಹೆಸರನ್ನು ಹೇಳಲಿಚ್ಛಿಸದ ಖಾಸಗಿ ಕಂಪನಿಯು, ಈ ಕೃತ್ಯ ಮಾಡಿದವನಿಗೆ 60 ವರ್ಷ ವಯಸ್ಸಾಗಿದೆ. ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿಸಿದೆ.

    ಈ ಪೇಂಟಿಂಗ್ ಡಿ 7 2021 ರಂದು ‘ದಿ ವರ್ಲ್ಡ್ ಆಸ್ ನಾನ್-ಆಬ್ಜೆಕ್ಟಿವಿಟಿ, ದಿ ಬರ್ತ್ ಆಫ್ ಎ ನ್ಯೂ ಆರ್ಟ್’ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಪೇಂಟಿಂಗ್ ಬೆಲೆ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆಲ್ಫಾ ವಿಮಾ ಕಂಪನಿಯಲ್ಲಿ ಈ ಪೇಂಟಿಂಗ್‍ಗೆ 7.47 ಕೋಟಿ ರೂ. ವಿಮೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

    ಘಟನೆಯ ನಂತರ ಪೊಲೀಸರು, ಈ ಕೃತ್ಯಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪ್ರಾರಂಭಿಸಿಲಾಗಿದೆ. ಆರೋಪಿಗೆ 39,900 ರೂ. ದಂಡ ಮತ್ತು ಒಂದು ವರ್ಷ ಶಿಕ್ಷೆಯನ್ನು ವಿಧಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮಹಿಳೆ ಬೆನ್ನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ ವೀಡಿಯೋ ವೈರಲ್ – ಮಹಿಳೆ ಹೇಳಿದ್ದೇನು?

    ಈ ಕುರಿತು ಪ್ರತಿಕ್ರಿಯಿಸಿದ ಕಲಾವಿದರು, ಪೇಂಟಿಂಗ್ ತನ್ನ ಹಿಂದಿನ ವೈಭವಕ್ಕೆ ಮರುಸ್ಥಾಪಿಸುವ ಪ್ರಯತ್ನದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಅದಕ್ಕೆ ಪೇಂಟಿಂಗ್ ಮಾಸ್ಕೋಗೆ ಕಳುಹಿಸಲಾಗಿದೆ. ಪೇಂಟಿಂಗ್‍ನಲ್ಲಿ ಯಾವುದೇ ರೀತಿ ಕಲೆ ಕಾಣಿಸದಂತೆ ಮಾಡಬಹುದು ಎಂದು ಭರವಸೆಯನ್ನು ಕೊಟ್ಟಿದ್ದಾರೆ.

  • ಕೊರೊನಾ ಸೋಂಕು, ಸಾವು ಪ್ರಕರಣಗಳಲ್ಲಿ ಹೆಚ್ಚಳ- ರಷ್ಯಾ ರಾಜಧಾನಿಯಲ್ಲಿ ಲಾಕ್‌ಡೌನ್‌ ಜಾರಿ

    ಕೊರೊನಾ ಸೋಂಕು, ಸಾವು ಪ್ರಕರಣಗಳಲ್ಲಿ ಹೆಚ್ಚಳ- ರಷ್ಯಾ ರಾಜಧಾನಿಯಲ್ಲಿ ಲಾಕ್‌ಡೌನ್‌ ಜಾರಿ

    ಮಾಸ್ಕೊ: ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುತ್ತಿರುವ ಕಾರಣ ಇಂದಿನಿಂದ (ಅ.28) 11 ದಿನಗಳವರೆಗೆ ರಷ್ಯಾ ರಾಜಧಾನಿ (ಮಾಸ್ಕೊ)ಗೆ ಲಾಕ್‌ಡೌನ್‌ ಹೇರಲಾಗಿದೆ.

    LOCKDOWN

    ಲಾಕ್‌ಡೌನ್‌ ಅವಧಿಯಲ್ಲಿ ಅಂಗಡಿ, ರೆಸ್ಟೋರೆಂಟ್‌ ಹಾಗೂ ಶಾಲೆಗಳನ್ನು ತೆರೆಯದಂತೆ ಸೂಚನೆ ಹೊರಡಿಸಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ ಗೃಹ ಸಚಿವರಿಗೆ ಒಂದೇ ವರ್ಷದಲ್ಲಿ ಎರಡು ಬಾರಿ ಕೊರೊನಾ ಪಾಸಿಟಿವ್

    ಶಾಲೆಗಳು, ಶಿಶುವಿಹಾರಗಳ ಜೊತೆಗೆ ಚಿಲ್ಲರೆ ಮಾರಾಟ ಮಳಿಗೆಗಳು, ರೆಸ್ಟೋರೆಂಟ್‌ಗಳು, ಕ್ರೀಡಾ ಮತ್ತು ಮನರಂಜನಾ ಸ್ಥಳಗಳು ಸೇರಿದಂತೆ ಅಗತ್ಯವಲ್ಲದ ಸೇವೆಗಳನ್ನು ನವೆಂಬರ್‌ 7 ರವರೆಗೆ ಮುಚ್ಚಲಾಗುತ್ತದೆ.

    COVID

    ಆಹಾರ, ಔಷಧ ಮತ್ತು ಇತರೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕು ಹಾಗೂ ಸಾವು ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಈ ಕ್ರಮಕೈಗೊಂಡಿದೆ. ಇದನ್ನೂ ಓದಿ: ಪಟಾಕಿ ನಿಷೇಧಿಸಿದರೆ ನಿರ್ದಿಷ್ಟ ಸಮುದಾಯ ವಿರೋಧಿ ಎಂದರ್ಥವಲ್ಲ- ಸುಪ್ರೀಂ ಕೋರ್ಟ್‌

    ರಷ್ಯಾದಲ್ಲಿ ಈವರೆಗೆ ಕೋವಿಡ್‌ನಿಂದ 2,33,898 ಮೃತಪಟ್ಟಿದ್ದಾರೆ. ಯೂರೋಪ್‌ನಲ್ಲೇ ಅತಿ ಹೆಚ್ಚು ಸಾವು ಪ್ರಕರಣಗಳು ರಷ್ಯಾದಲ್ಲಿ ವರದಿಯಾಗಿದೆ.

  • ಹುಲಿಯ ಘರ್ಜನೆ ಗೊತ್ತು.. ಮೆಲೋಡಿಯಸ್ ಆಗಿ ಕೂಗುವುದು ಗೊತ್ತಾ?

    ಹುಲಿಯ ಘರ್ಜನೆ ಗೊತ್ತು.. ಮೆಲೋಡಿಯಸ್ ಆಗಿ ಕೂಗುವುದು ಗೊತ್ತಾ?

    ಮಾಸ್ಕೋ: 8 ತಿಂಗಳ ಹುಲಿಯೊಂದು ಘರ್ಜನೆ ಮಾಡುವ ಬದಲಾಗಿ ಮೆಲೋಡಿಯಸ್ ಆಗಿ ಸೌಂಡ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.


    ರಷ್ಯಾದ ಬುರ್ನಲ್ ಪ್ರಾಣಿ ಸಂಗ್ರಹಾಲಯದಲ್ಲಿರುವ 8 ತಿಂಗಳ ಹುಲಿ ಮರಿ ಮೆಲೋಡಿಯಸ್ ಆಗಿ ಸೌಂಡ್ ಮಾಡುವ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದೆ. 2020ರಲ್ಲಿ ಶೆರ್ಹಾನ್ ಎನ್ನುವ ಹುಲಿ 4 ಮರಿಗಳನ್ನು ಹಾಕಿತ್ತು. ಅದರಲ್ಲಿ ಒಂದು ಮರಿ ಧ್ವನಿ ಹೀಗೆ ಇರುವುದು ಆಶ್ಚರ್ಯವನ್ನುಂಟು ಮಾಡಿದೆ.

    ಹುಲಿಯ ಘರ್ಜನೆಗೆ ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಕಾಡಿನ ಯಾವುದೋ ಮೂಲೆಯಲ್ಲಿ ನಿಂತು ಒಮ್ಮೆ ಘರ್ಜಿಸಿದರೆ ನಾವು ಇದ್ದಲ್ಲೇ ಬೆವರುತ್ತೇವೆ. ಆದರೆ ಇಷ್ಟೆಲ್ಲ ಭಯವನ್ನು ಹುಟ್ಟಿಸುವ ವ್ಯಾಘ್ರ ಮೆಲೋಡಿ ವಾಯ್ಸ್‍ನಲ್ಲಿ ಕೂಗುತ್ತಾ ಇರುವುದು ಆಶ್ಚರ್ಯವನ್ನುಂಟು ಮಾಡಿದೆ.