Tag: Moscow

  • ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ

    ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ

    ಮಾಸ್ಕೋ: ಭಾರತ ಮತ್ತು ರಷ್ಯಾ ಸಂಬಂಧವು ನಂಬಿಕೆಯ ಮೇಲೆ ಕಟ್ಟಿರುವ ಸೇತುವೆ, ಘನವಾದ ಅಡಿಪಾಯ ಹೊಂದಿದೆ. ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ರಷ್ಯಾದ ತೈಲ (Russian Oil) ಪೂರೈಕೆಯು ಭಾರತದ ಆರ್ಥಿಕತೆಗೆ ಮುಖ್ಯವಾಗಿದೆ ಎಂದು ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ (Denis Alipov) ಹೇಳಿದ್ದಾರೆ.

    ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ ಅಂತ ಮೋದಿ (Narendra Modi) ನನಗೆ ಭರವಸೆ ನೀಡಿದ್ದಾರೆ ಎಂಬ ಟ್ರಂಪ್‌ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ. ನಮ್ಮ ಸರ್ಕಾರವು ಭಾರತದ ಹಿತಾಸಕ್ತಿಗೆ ಅನುಗುಣವಾಗಿದೆ. ಏಕೆಂದ್ರೆ ರಷ್ಯಾ ತೈಲ ಪೂರೈಕೆಯು ಭಾರತದ ಆರ್ಥಿಕತೆಗೆ (Indian Economy) ಪ್ರಯೋಜನಕಾರಿಯಾಗಿದೆ. ನಮ್ಮ ನಡುವಿನ ಕಾರ್ಯತಂತ್ರ ಹಾಗೂ ಪಾಲುದಾರಿಕೆಯು ಜಾಗತಿಕ ವ್ಯವಹಾರ ಸ್ಥಿರಗೊಳಿಸುವ ಶಕ್ತಿಯಾಗಿ ಪರಿಣಮಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಭಾರತ ಹೇಳಿದ್ದೇನು?
    ಇನ್ನೂ ಟ್ರಂಪ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತ, ದೇಶದ ಗ್ರಾಹಕರ ಹಿತಾಸಕ್ತಿ ಕಾಪಾಡುವುದು ಭಾರತ ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದೆ.

    ಟ್ರಂಪ್‌ ಹೇಳಿದ್ದೇನು?
    ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿರುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ನನಗೆ ಭರವಸೆ ನೀಡಿದ್ದಾರೆ. ಇದು ನಿಜಕ್ಕೂ ಒಂದು ಪ್ರಮುಖ ಹೆಜ್ಜೆ. ರಷ್ಯಾ-ಉಕ್ರೇನ್ ಯುದ್ಧ ತಡೆಯುವ ನಮ್ಮ ಪ್ರಯತ್ನಗಳ ಭಾಗವೂ ಆಗಿದೆ. ಚೀನಾಗೂ ಸಹ ಅದೇ ರೀತಿ ಮಾಡುವಂತೆ ನಾವು ಹೇಳಬೇಕಾಗಿದೆ ಎಂದು ಹೇಳಿದ್ದರು.

    ಅಮೆರಿಕದ ಆರೋಪ ಏನಿದೆ?
    ಭಾರತವು ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಅವರ ಬಲವಾದ ನಂಬಿಕೆ. ಅಮೆರಿಕದ ಕೆಲ ಅಧಿಕಾರಿಗಳೂ ಟ್ರಂಪ್ ಹೇಳಿಕೆಯನ್ನ ಉಲ್ಲೇಖಿಸಿ ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದರು. ಆದ್ರೆ ರಷ್ಯಾದ ಸಂಬಂಧ ಬಿಟ್ಟುಕೊಡದ ಭಾರತ ತೈಲ ಖರೀದಿ ಮುಂದುವರಿಸಿದೆ.

  • ಮೇ ತಿಂಗಳಲ್ಲಿ ರಷ್ಯಾಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ?

    ಮೇ ತಿಂಗಳಲ್ಲಿ ರಷ್ಯಾಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ?

    – 80ನೇ ಮಹಾ ದೇಶಭಕ್ತಿಯ ಯುದ್ಧದ ಮೆರವಣಿಗೆ ಕಾರ್ಯಕ್ರಮಕ್ಕೆ ಆಹ್ವಾನ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಮೇ ತಿಂಗಳಲ್ಲಿ ರಷ್ಯಾಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಲ್ಲಿಯ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವರದಿಯ ಪ್ರಕಾರ, ಪ್ರಧಾನಿ ಮೋದಿ ಮಾಸ್ಕೋದ (Moscow) ರೆಡ್ ಸ್ಕ್ವೇರ್‌ನಲ್ಲಿ (Red Square) ನಡೆಯಲಿರುವ 80ನೇ ಮಹಾ ದೇಶಭಕ್ತಿಯ ಯುದ್ಧದ (Great Patriotic War) ಮೆರವಣಿಗೆಯಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.

    ಈ ಮೆರವಣಿಗೆಯಲ್ಲಿ ಭಾರತೀಯ ಸೇನೆಯ ಒಂದು ತುಕಡಿಯೂ ಭಾಗವಹಿಸಬಹುದು. ಇದಕ್ಕಾಗಿ ಭಾರತೀಯ ಒಂದು ಸೇನಾ ತುಕಡಿಯು ಮೆರವಣಿಗೆಗೆ ಒಂದು ತಿಂಗಳ ಮೊದಲು ರಷ್ಯಾಕ್ಕೆ ತೆರಳಿ ಪರೇಡ್‌ಗೆ ಪೂರ್ವಾಭ್ಯಾಸ ಮಾಡಬಹುದು ಎಂದು ವರದಿ ಮಾಡಿವೆ. ಇದನ್ನೂ ಓದಿ: ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಮುಟ್ಟಿದ್ರೆ ಭಸ್ಮ ಆಗ್ತಾರೆ – ಸಚಿವ ಜಮೀರ್ ಬ್ಯಾಟಿಂಗ್‌

    ಪ್ರಧಾನಿ ಮೋದಿ ಮಾತ್ರವಲ್ಲದೇ ಹಲವು ದೇಶಗಳ ಮುಖ್ಯಸ್ಥರು ಈ ಮೆರವಣಿಗೆಯಲ್ಲಿ ಅತಿಥಿಗಳಾಗಿ ಭಾಗವಹಿಸಬಹುದು. ಮೇ 9ರಂದು ನಡೆಯುವ ಮೆರವಣಿಗೆಯಲ್ಲಿ ಅನೇಕ ಆಹ್ವಾನಿತ ದೇಶಗಳು ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿವೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ಡಿಮಿಟ್ರಿ ಪೆಸ್ಕೋವ್ ಅವರು ಹಲವಾರು ದೇಶಗಳ ರಾಷ್ಟ್ರಗಳ ಮುಖ್ಯಸ್ಥರನ್ನು ಮೆರವಣಿಗೆಯಲ್ಲಿ ಭಾಗವಹಿಸಲು ಆಹ್ವಾನಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ನುಸುಳುಕೋರನನ್ನು ಹೊಡೆದುರುಳಿಸಿದ ಬಿಎಸ್‌ಎಫ್

    ಎರಡನೇ ಮಹಾಯುದ್ಧದ ಸಮಯದಲ್ಲಿ ರಷ್ಯಾ ಮತ್ತು ನಾಜಿ ಜರ್ಮನಿ ನಡುವೆ ನಡೆದ ಯುದ್ಧವನ್ನು ಮಹಾ ದೇಶಭಕ್ತಿಯ ಯುದ್ಧ ಎಂದು ಕರೆಯಲಾಗುತ್ತದೆ ಎಂಬುದು ಗಮನಾರ್ಹ. ಈ ಯುದ್ಧವು 1941ರ ಜೂನ್ 22ರಿಂದ 1945ರ ಮೇ 9ರವರೆಗೆ ನಡೆಯಿತು. ಇದನ್ನು ಮಾನವ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮತ್ತು ರಕ್ತಸಿಕ್ತ ಯುದ್ಧಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಯುದ್ಧವು ಜರ್ಮನಿಯ ಸೋಲಿನೊಂದಿಗೆ ಕೊನೆಗೊಂಡಿತು. ಈ ಯುದ್ಧದ ನಂತರ, ರಷ್ಯಾ ವಿಶ್ವದ ಅತಿದೊಡ್ಡ ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮಿತು ಮತ್ತು ಜರ್ಮನಿಯ ಮಿತ್ರರಾಷ್ಟ್ರಗಳಾದ ರೊಮೇನಿಯಾ ಮತ್ತು ಹಂಗೇರಿ ಈ ಯುದ್ಧದಲ್ಲಿ ಶರಣಾಗಬೇಕಾಯಿತು. ಇದನ್ನೂ ಓದಿ: ಪತ್ನಿ ಕೊಲೆ ಮಾಡಿ ಅಂತ್ಯಕ್ರಿಯೆ – ಕೊನೆ ಕ್ಷಣದಲ್ಲಿ ಎಂಟ್ರಿ ಕೊಟ್ಟ ಪೊಲೀಸರು, ಅರೆಸ್ಟ್ ಆದ ಗಂಡ

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಧಾನಿ ಮೋದಿ ರಷ್ಯಾಕ್ಕೂ ಭೇಟಿ ನೀಡಿದ್ದರು. ಅವರು ರಷ್ಯಾ ಅಧ್ಯಕ್ಷತೆಯಲ್ಲಿ ನಡೆದ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಒಂದು ವೇಳೆ ಪ್ರಧಾನಿ ಮೋದಿ ಮೇ ತಿಂಗಳಲ್ಲಿ ರಷ್ಯಾಕ್ಕೆ ಭೇಟಿ ನೀಡಿದರೇ, ರಷ್ಯಾ ಮತ್ತು ಉಕ್ರೇನ್ ನಡುವೆ ಕದನ ವಿರಾಮದ ಕುರಿತು ಮಾತುಕತೆ ನಡೆಯುತ್ತಿರುವ ಸಮಯದಲ್ಲಿ ಅವರ ಎರಡನೇ ಭೇಟಿ ನಡೆಯಲಿದೆ. ಎರಡೂ ದೇಶಗಳ ನಡುವಿನ ಮೊದಲ ಹಂತದ ಮಾತುಕತೆ ಈ ತಿಂಗಳು ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿ ನಡೆಯಿತು. ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ನೆಲೆಸುವಂತೆ ಪ್ರಧಾನಿ ಮೋದಿ ಈಗಾಗಲೇ ಮನವಿ ಮಾಡಿದ್ದು, ಇದನ್ನು ಮತ್ತೊಮ್ಮೆ ಪ್ರತಿಪಾದಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಶ್ರೀ ಸಾಯಿ ಮಿನರಲ್ಸ್ ಗಣಿಗಾರಿಕೆ ಅಕ್ರಮ ಕೇಸ್‌ – ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ SIT

  • 1,000 ದಿನ ಪೂರೈಸಿದ ರಷ್ಯಾ-ಉಕ್ರೇನ್‌ ಯುದ್ಧ; ಪರಮಾಣು ಶಸ್ತ್ರಾಸ್ತ್ರ ಬಳಕೆ ಎಚ್ಚರಿಕೆ ನೀಡಿದ ಪುಟಿನ್‌

    1,000 ದಿನ ಪೂರೈಸಿದ ರಷ್ಯಾ-ಉಕ್ರೇನ್‌ ಯುದ್ಧ; ಪರಮಾಣು ಶಸ್ತ್ರಾಸ್ತ್ರ ಬಳಕೆ ಎಚ್ಚರಿಕೆ ನೀಡಿದ ಪುಟಿನ್‌

    ಮಾಸ್ಕೋ: 2ನೇ ವಿಶ್ವ ಮಹಾಯುದ್ಧದ ನಂತರ ಅತಿಹೆಚ್ಚು ಸಾವು-ನೋವು ಕಂಡ ರಷ್ಯಾ-ಉಕ್ರೇನ್‌ ಯುದ್ಧ (Russia Ukraine War) ಬರೋಬ್ಬರಿ 1,000 ದಿನಗಳನ್ನು ಪೂರೈಸಿದೆ. ಈ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಹೊಸ ಪರಮಾಣು ನೀತಿಯನ್ನು ಅನುಮೋದಿಸಿದ್ದಾರೆ. ಈ ಮೂಲಕ ಉಕ್ರೇನ್‌ ಮೇಲೆ ಪರಮಾಣು ಶಸ್ತ್ರಾಸ್ತ್ರ ಬಳಕೆಯ ಎಚ್ಚರಿಕೆ ನೀಡಿದ್ದಾರೆ.

    2022ರ ಫ್ರೆಬ್ರವರಿ 24ರಂದು ಶುರುವಾದ ಯುದ್ಧ 1,000 ದಿನಗಳನ್ನು ಪೂರೈಸುತ್ತಿದ್ದಂತೆ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ಪುಟಿನ್‌ ಒಪ್ಪಿಗೆ ನೀಡಿದ್ದಾರೆ. ಮಂಗಳವಾರ ಪರಿಷ್ಕೃತ ಪರಮಾಣು ಸಿದ್ಧಾಂತಕ್ಕೆ (Nuclear Deterrent Policy) ಸಹಿ ಹಾಕಿದ್ದು, ಪರಮಾಣು ಶಕ್ತಿ ಬೆಂಬಲಿತವಾಗಿರುವ ಯಾವುದೇ ರಾಷ್ಟ್ರವು ರಷ್ಯಾದ ಮೇಲೆ ನಡೆಸುವ ಸಾಂಪ್ರದಾಯಿಕ ದಾಳಿಯನ್ನು ಜಂಟಿ ದಾಳಿ ಎಂದು ಪರಿಗಣಿಸುವುದಾಗಿ ಘೋಷಿಸಿದ್ದಾರೆ.

    ರಷ್ಯಾದ ಮೇಲೆ ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ಬಳಸಲು ಅಮೆರಿಕ ಉಕ್ರೇನ್‌ಗೆ ಒಪ್ಪಿಗೆ ನೀಡಿದ ಒಂದು ದಿನದ ನಂತರ ಪುಟಿನ್‌ ಈ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ: PublicTV Explainer: ಆಗಸದಲ್ಲೂ ಹಾರುತ್ತೆ, ನೀರಲ್ಲೂ ಲ್ಯಾಂಡ್‌ ಆಗುತ್ತೆ; ಏನಿದು ಸೀ ಪ್ಲೇನ್? – ಕರ್ನಾಟಕಕ್ಕೂ ಜಲ ವಿಮಾನ ಬರುತ್ತಾ?

    ಅನಿವಾರ್ಯತೆ ಬಂದ್ರೆ ಯೋಚಿಸಲ್ಲ:
    ಇದೇ ವೇಳೆ ಕ್ರೆಮ್ಲಿನ್‌ (Kremlin) ಉಕ್ರೇನ್‌ ಅನ್ನು ಸೋಲಿಸಲು ಪ್ರತಿಜ್ಞೆ ಮಾಡಿದೆ. ಕೈವ್‌ಗೆ ಪಾಶ್ಚಿಮಾತ್ಯ ದೇಶಗಳ ಬೆಂಬಲದಿಂದ ಸಂಘರ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ದಾಳಿ ಮುಂದುವರಿಯುತ್ತದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಎಚ್ಚರಿಸಿದ್ದಾರೆ.

    ಅಲ್ಲದೇ ರಷ್ಯಾ ಯಾವಾಗಲೂ ಪರಮಾಣು ಶಸ್ತ್ರಾಸ್ತ್ರಗಳನ್ನು ಕೊನೆಯ ಅಸ್ತ್ರವಾಗಿ ಬಳಕೆ ಮಾಡಲು ನಿರ್ಧರಿಸಿದೆ. ಅನಿವಾರ್ಯ ಅನ್ನಿಸಿದ್ರೆ ಬಳಸಲು ಹಿಂದೆ ಮುಂದೆ ಯೋಚಿಸಲ್ಲ ಎಂದು ಪೆಸ್ಕೋವ್‌ ಹೇಳಿದ್ದಾರೆ. ಇದನ್ನೂ ಓದಿ: ICC Champions Trophy 2025 | ಈ ವಾರವೇ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ

    ಅಮೆರಿಕ ಉಕ್ರೇನ್‌ಗೆ ಹೇಳಿದ್ದೇನು?
    ರಷ್ಯಾ-ಉಕ್ರೇನ್‌ (Russia- Ukraine) ಯುದ್ಧ ನಿಲ್ಲಿಸುತ್ತೇನೆಂದು ನಿಯೋಜಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದರ ಹೊರತಾಗಿಯೂ ಇನ್ನೆರಡು ತಿಂಗಳು ಅಧಿಕಾರದಲ್ಲಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ (Joe Biden) ರಷ್ಯಾ ವಿರುದ್ಧ ಯುದ್ಧ ಮಾಡುವಂತೆ ಉಕ್ರೇನ್‌ಗೆ ಅನುಮತಿ ನೀಡಿದ್ದಾರೆ ಎಂದು ವರದಿಗಳು ತಿಳಿಸಿದ್ದವು. ಇದನ್ನೂ ಓದಿ: ಜನಸಂಖ್ಯೆ ಹೆಚ್ಚಳಕ್ಕೆ ರಷ್ಯಾದಲ್ಲಿ ʻಸೆಕ್ಸ್‌ ಸಚಿವಾಲಯʼ ಸ್ಥಾಪನೆಗೆ ಪ್ಲ್ಯಾನ್‌ – ಭಾರತದಲ್ಲಿ ಏನಾಗ್ತಿದೆ?

    ಮುಂಬರುವ ದಿನಗಳಲ್ಲಿ ಉಕ್ರೇನ್ ತನ್ನ ಮೊದಲ ದೀರ್ಘ-ಶ್ರೇಣಿಯ ಕ್ಷಿಪಣಿ ದಾಳಿ ನಡೆಸಲು ಯೋಜಿಸಿದೆ ಎಂದು ವರದಿಯಾಗಿದೆ. ಉತ್ತರ ಕೊರಿಯಾದ ಪಡೆಗಳನ್ನು ರಷ್ಯಾ ನಿಯೋಜಿಸಿದ ಬೆನ್ನಲ್ಲೇ ಈ ಮಹತ್ವದ ವಿದ್ಯಮಾನ ನಡೆದಿದೆ. 190 ಮೈಲುಗಳವರೆಗೆ (306 ಕಿಮೀ) ವ್ಯಾಪ್ತಿಯನ್ನು ಹೊಂದಿರುವ ಎಟಿಎಸಿಎಂಎಸ್ ರಾಕೆಟ್‌ಗಳನ್ನು ಬಳಸಿಕೊಂಡು ಮೊದಲ ದಾಳಿಯನ್ನು ಉಕ್ರೇನ್‌ ನಡೆಸುವ ಸಾಧ್ಯತೆಯಿದೆ. ಇದಕ್ಕೆ ಜೋ ಬೈಡನ್‌ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿತ್ತು.

    120 ಕ್ಷಿಪಣಿಗಳಿಂದ ದಾಳಿ:
    ಉಕ್ರೇನ್‌ನ ಇಂಧನ ಮೂಲಭೂತ ಸೌಕರ್ಯವನ್ನು ಗುರಿಯಾಗಿಸಿ ರಷ್ಯಾ ಸೇನೆ ಭಾನುವಾರ 120 ಕ್ಷಿಪಣಿಗಳನ್ನು ಹಾರಿಸಿದೆ. ಇದರಿಂದಾಗಿ ಇಬ್ಬರು ನಾಗರಿಕರು ಮೃತಪಟ್ಟದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ಇದನ್ನೂ ಓದಿ: 95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ – ಇದರ ಹಿಂದಿನ ನಿಗೂಢ ಕಾರಣವೇನು?

  • ರಷ್ಯಾ-ಉಕ್ರೇನ್‌ ನಡುವೆ ಶಾಂತಿ ಮಾತುಕತೆಗೆ ಮೋದಿ ಪ್ರಯತ್ನ; ಮಾಸ್ಕೋಗೆ ಅಜಿತ್‌ ದೋವಲ್‌

    ರಷ್ಯಾ-ಉಕ್ರೇನ್‌ ನಡುವೆ ಶಾಂತಿ ಮಾತುಕತೆಗೆ ಮೋದಿ ಪ್ರಯತ್ನ; ಮಾಸ್ಕೋಗೆ ಅಜಿತ್‌ ದೋವಲ್‌

    ನವದೆಹಲಿ: ರಷ್ಯಾ-ಉಕ್ರೇನ್‌ (Russia-Ukraine Peace) ದೇಶಗಳ ನಡುವೆ ಶಾಂತಿ ಒಪ್ಪಂದ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವ ಪ್ರಧಾನಿ ಮೋದಿ (Narendra Modi) ಅವರ ಪ್ರಯತ್ನದ ಭಾಗವಾಗಿ ಅಜಿತ್‌ ದೋವಲ್‌ ಅವರು ಮಾಸ್ಕೋಗೆ ತೆರಳುತ್ತಿದ್ದಾರೆ.

    ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಈ ವಾರ ಮಾಸ್ಕೋಗೆ (Moscow) ತೆರಳಿ ರಷ್ಯಾ-ಉಕ್ರೇನ್ ಸಂಘರ್ಷವನ್ನು ಪರಿಹರಿಸುವ ಉದ್ದೇಶದಿಂದ ಚರ್ಚೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಅಮೆರಿಕ ಪ್ರವಾಸ – ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದ ಸ್ಯಾಮ್‌ ಪಿತ್ರೋಡಾ

    ಕಳೆದ ಎರಡು ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಮತ್ತು ಉಕ್ರೇನ್‌ಗೆ ಭೇಟಿ ನೀಡಿದ್ದರು. ಉಭಯ ದೇಶಗಳ ನಾಯಕರಾದ ವ್ಲಾಡಿಮಿರ್ ಪುಟಿನ್ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಅಜಿತ್‌ ದೋವಲ್‌ ಪ್ರಯಾಣದ ಸುದ್ದಿ ಹೊರಬಿದ್ದಿದೆ.

    ಉಕ್ರೇನ್‌ ಪ್ರವಾಸದಲ್ಲಿ ಅಧ್ಯಕ್ಷ ಝೆಲೆನ್ಸ್ಕಿ ಭೇಟಿ ಬಳಿಕ ಆ.27 ರಂದು ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದರು. ಕೀವ್‌ಗೆ ತಾವು ಭೇಟಿ ಕೊಟ್ಟ ವಿಚಾರವನ್ನು ಮೋದಿ ತಿಳಿಸಿದರು. ರಾಜತಾಂತ್ರಿಕ ವಿಧಾನಗಳ ಮೂಲಕ ಎರಡೂ ದೇಶಗಳ ನಡುವೆ ಶಾಂತಿ ಮಾತುಕತೆಗೆ ಭಾರತ ಬದ್ಧ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದರು.

    ಚೀನಾ, ಭಾರತ ರಾಷ್ಟ್ರಗಳು ಮಧ್ಯಸ್ಥಿಕೆ ವಹಿಸುವುದಾದರೆ ಶಾಂತಿ ಮಾತುಕತೆಗೆ ಬದ್ಧ ಎಂದು ಈಚೆಗೆ ಪುಟಿನ್‌ ಕೂಡ ತಿಳಿಸಿದ್ದರು. ಇದನ್ನೂ ಓದಿ: 25 ವರ್ಷಗಳ ಬಳಿಕ ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರದ ಬಗ್ಗೆ ಪಾಕ್‌ ತಪ್ಪೊಪ್ಪಿಗೆ!

  • ನಾಪತ್ತೆಯಾಗಿದ್ದ ರಷ್ಯಾದ Mi-8T ಹೆಲಿಕಾಪ್ಟರ್ ಪತನ – 22 ಮಂದಿ ಸಾವು

    ನಾಪತ್ತೆಯಾಗಿದ್ದ ರಷ್ಯಾದ Mi-8T ಹೆಲಿಕಾಪ್ಟರ್ ಪತನ – 22 ಮಂದಿ ಸಾವು

    ಮಾಸ್ಕೋ: ನಾಪತ್ತೆಯಾಗಿದ್ದ ರಷ್ಯಾದ (Russia) Mi-8T ಹೆಲಿಕಾಪ್ಟರ್ ಕಮ್ಚಟ್ಕಾದ ಪೂರ್ವ ಪರ್ಯಾಯ ದ್ವೀಪದ ಬಳಿ ಪತ್ತೆಯಾಗಿದ್ದು, ಹೆಲಿಕಾಪ್ಟರ್‌ನಲ್ಲಿದ್ದ (Helicopter) 22 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    22 ಜನರನ್ನು ಹೊತ್ತ ರಷ್ಯಾದ Mi-8T ಹೆಲಿಕಾಪ್ಟರ್ ಶನಿವಾರ ವಚ್ಕಜೆಟ್ಸ್ ವಾಲ್ಕೆನೊ ಎಂಬಲ್ಲಿಂದ ಹೊರಟು ನಾಪತ್ತೆಯಾಗಿತ್ತು. ಇದಾದ ಒಂದು ದಿನಗಳ ಬಳಿಕ ಕಮ್ಚಟ್ಕಾದ ಪೂರ್ವ ಪರ್ಯಾಯ ದ್ವೀಪದಲ್ಲಿ ಪತನಗೊಂಡಿರುವುದು ಗೊತ್ತಾಗಿದೆ. ಅದಕ್ಕೆ ಪುರಕವಾಗಿ ಹೆಲಿಕಾಪ್ಟರ್‌ನ ಅವಶೇಷಗಳು ಸಿಕ್ಕಿವೆ. ಆದರೆ ಹೆಲಿಕಾಪ್ಟರ್‌ನಲ್ಲಿದ್ದ 22 ಮಂದಿಯೂ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಭಾನುವಾರ ತಿಳಿಸಿದೆ.  ಇದನ್ನೂ ಓದಿ: ʻಪಬ್ಲಿಕ್ ಟಿವಿʼ ವಿದ್ಯಾಮಂದಿರ ಪಿಜಿ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ತೆರೆ

    ಮಾಸ್ಕೋದಿಂದ (Moscow) ಸುಮಾರು 7,100 ಕಿ.ಮೀ (4,400 ಮೈಲುಗಳು) ಕಮ್ಚಟ್ಕಾದ ಪೂರ್ವ ಪರ್ಯಾಯ ದ್ವೀಪದಲ್ಲಿ ವಾರಾದ್ಯಂತದಲ್ಲಿ ಮಳೆ, ಗಾಳಿಯೊಂದಿಗೆ ಚಂಡಮಾರುತ ಹೆಚ್ಚಾಗಿತ್ತು. ಈ ಕಾರಣದಿಂದಾಗಿ ದುರಂತ ಸಂಭವಿಸಿದೆ ಅನ್ನೂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: Bengaluru | ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಆಯುಕ್ತರಿಗೆ ಡಿಸಿಎಂ 15 ದಿನಗಳ ಗಡುವು

  • ಸವಾಲಿಗೆ ಸವಾಲು ಹಾಕುವುದು ನನ್ನ ಡಿಎನ್‌ಎಯಲ್ಲಿದೆ: ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮೋದಿ ಮಾತು

    ಸವಾಲಿಗೆ ಸವಾಲು ಹಾಕುವುದು ನನ್ನ ಡಿಎನ್‌ಎಯಲ್ಲಿದೆ: ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮೋದಿ ಮಾತು

    ನವದೆಹಲಿ/ ಮಾಸ್ಕೋ: ಚುನಾವಣೆ ಸಂದರ್ಭದಲ್ಲಿ ಹತ್ತು ವರ್ಷದ ಆಡಳಿತ ಟ್ರೇಲರ್ ಎಂದು ಹೇಳಿದ್ದೆ. ಮುಂದಿನ ಹತ್ತು ವರ್ಷಗಳಲ್ಲಿ ನಾವು ಅತ್ಯಂತ ವೇಗವಾಗಿ ಬೆಳೆಯಲಿದ್ದೇವೆ. ಸೆಮಿ ಕಂಡಕ್ಟರ್‌ನಿಂದ ಹಿಡಿದು ಗ್ರೀನ್ ಎನರ್ಜಿವರೆಗೂ ಎಲ್ಲಾ ವಲಯದಲ್ಲಿ ನಾವು ಬೆಳೆಯಲಿದ್ದೇವೆ. ವಿಶ್ವದ ಹೊಸ ಅಧ್ಯಾಯವನ್ನು ನಾವು ಬರೆಯಲಿದ್ದೇವೆ ಎಂದು ಅತ್ಯಂತ ವಿಶ್ವಾಸದಿಂದ ಹೇಳಬಲ್ಲೆ. ಸವಾಲಿಗೆ ಸವಾಲು ಹಾಕುವುದು ನನ್ನ ಡಿಎನ್‌ಎಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

    ರಷ್ಯಾ (Russia) ಪ್ರವಾಸದಲ್ಲಿರುವ ಮೋದಿ ಮಾಸ್ಕೋದಲ್ಲಿ (Moscow) ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಇಂದು ಭಾರತ ಜಾಗತಿಕವಾಗಿ ಮೂರನೇ ದೊಡ್ಡ ಸ್ಟಾರ್ಟ್ಅಪ್ ಇಕೋ ಸಿಸ್ಟಮ್ ಹೊಂದಿದೆ. 2014ರಲ್ಲಿ ಮೊದಲ ಬಾರಿಗೆ ನನಗೆ ಸೇವೆ ಮಾಡುವ ಅವಕಾಶ ಸಿಕ್ಕಿತು. ಆಗ ಬಹಳ ವಿರಳ ಪ್ರಮಾಣದಲ್ಲಿ ಸ್ಟಾರ್ಟ್ಅಪ್‌ಗಳಿದ್ದವು. ಇಂದು ಲಕ್ಷಾಂತರ ಸ್ಟಾರ್ಟ್ಅಪ್‌ಗಳಿದೆ. ಭಾರತೀಯ ಯುವಕರ ಸಾಮರ್ಥ್ಯ ಕಂಡು ವಿಶ್ವವೂ ಆಕರ್ಷಿತಗೊಂಡಿದೆ ಎಂದರು.

    ವಿಶ್ವದ ಜನರು ಭಾರತಕ್ಕೆ ಬಂದು ಈ ದೇಶ ಬದಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಭಾರತ ಜಿ20 ಅಂತಹ ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ. ಭಾರತ ಕಳೆದ ಹತ್ತು ವರ್ಷದಲ್ಲಿ ವಿಮಾನ ನಿಲ್ದಾಣ ಎರಡು ಪಟ್ಟು ಹೆಚ್ಚಿಸಿದೆ. ಹತ್ತು ವರ್ಷಗಳಲ್ಲಿ 40 ಸಾವಿರ ಕಿ.ಮೀಗೂ ಅಧಿಕ ರೈಲ್ವೆಲೈನ್ ವಿದ್ಯುಧೀಕರಣ ಮಾಡಿದೆ. ಈಗ ಭಾರತದ ಶಕ್ತಿ ಎಲ್ಲರಿಗೂ ತಿಳಿಯುತ್ತಿದೆ ಎಂದು ಹೇಳಿದರು.

    ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತ ದೊಡ್ಡ ಶಕ್ತಿಯಾಗಿದೆ. ಎಲ್1 ಪಾಯಿಂಟ್‌ನಿಂದ ಭಾರತ ಸೂರ್ಯನ ಅಧ್ಯಯನ ಮಾಡುತ್ತಿದೆ. ಭಾರತ ವಿಶ್ವದ ಅತಿ ಎತ್ತರದ ರೈಲ್ವೆಬ್ರಿಡ್ಜ್ ಹೊಂದಿದೆ. ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಿದೆ. 140 ಕೋಟಿ ಜನರ ಸಾಮರ್ಥ್ಯದ ಮೇಲೆ ಮತ್ತು ಅನಿವಾಸಿ ಭಾರತೀಯರ ಮೇಲೆ ನಂಬಿಕೆ ಇರಿಸಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    140 ಕೋಟಿ ಭಾರತೀಯರನ್ನು ಕೋವಿಡ್ ಸಂಕಷ್ಟದಿಂದ ಹೊರ ತಂದಿದೆ. ಸಂಕಷ್ಟದ ಸಂದರ್ಭದಲ್ಲೂ ಆರ್ಥಿಕತೆಯನ್ನು ಸಧೃಡವಾಗಿಟ್ಟಿದೆ. ಮೂಲ ಸೌಕರ್ಯಗಳ ನಿರ್ಮಾಣದಲ್ಲಿ ನಾವು ಹೊಂದಾಣಿಕೆ ಮಾಡಿಕೊಂಡಿಲ್ಲ. ಆಯುಷ್ಮಾನ್ ಭಾರತ್ ವಿಶ್ವದ ಅತಿದೊಡ್ಡ ಹೆಲ್ತ್ ಮಿಷನ್. ಇದೆಲ್ಲವೂ 140 ಕೋಟಿ ಜನರಿಂದ ಸಾಧ್ಯವಾಗಿದೆ. ಅವರು ಕನಸು ಕಾಣುತ್ತಾರೆ, ಅದನ್ನು ನನಸು ಮಾಡಲು ಪ್ರಯತ್ನಿಸುತ್ತಾರೆ. ಜನರ ಈ ಬದಲಾವಣೆ ಅವರ ವಿಶ್ವಾಸದಲ್ಲಿ ಕಾಣುತ್ತಿದೆ ಎಂದರು.

    ಕ್ರೀಡೆಯಲ್ಲೂ ನಮ್ಮ ಆಟಗಾರರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ಯಾರಿಸ್ ಒಲಿಂಪಿಕ್‌ಗೆ ಅತ್ಯುತ್ತಮ ತಂಡ ಕಳುಹಿಸಲಾಗಿದೆ. ಅವರು ಹೇಗೆ ಪ್ರದರ್ಶನ ಮಾಡಲಿದ್ದಾರೆ ನೀವೂ ನೋಡಿ. ಇದೇ ಆತ್ಮ ವಿಶ್ವಾಸ ಭಾರತದ ಯುವ ಶಕ್ತಿ. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಪಾಲು 15% ರಷ್ಟಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಳವಾಗಲಿದೆ. ಮುಂದಿನ ಹತ್ತು ವರ್ಷ ಅತ್ಯಂತ ವೇಗವಾಗಿ ಎಲ್ಲಾ ವಲಯದಲ್ಲಿ ನಾವು ಬೆಳೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ರಷ್ಯಾದಲ್ಲಿರುವ ಜನರು ಭಾರತ-ರಷ್ಯಾ ಸಂಬಂಧ ಹೆಚ್ಚುಸುತ್ತಿದ್ದೀರಿ. ರಷ್ಯಾ-ಭಾರತದ ನಡುವಿನ ಸಂಬಂಧವನ್ನು ಕಾಪಾಡಲಾಗುತ್ತಿದೆ. ರಷ್ಯಾ ಭಾರತದ ಸುಖ-ದುಃಖದ ಜೊತೆಗಾರ. ಇದನ್ನು ಸ್ನೇಹ ಎನ್ನುತ್ತಾರೆ. ಈ ಸಂಬಂಧ ಪರಸ್ಪರ ಸ್ನೇಹ ಮತ್ತು ಗೌರವದಿಂದ ಬೆಳೆದಿದೆ. ಭಾರತದ ಯಶಸ್ವಿ ಸಂಬಂಧಕ್ಕೆ ಅಧ್ಯಕ್ಷ ಪುಟಿನ್ ಕಾರಣ. ಕಳೆದ ಹತ್ತು ವರ್ಷದಲ್ಲಿ ನಾನು ಅವರನ್ನು 17 ಬಾರಿ ಭೇಟಿಯಾಗಿದ್ದೇನೆ. ಯುದ್ಧದ ಅವಧಿಯಲ್ಲಿ ನಮ್ಮ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾಗ ಭಾರತಕ್ಕೆ ಪುಟಿನ್ ಸಹಾಯ ಮಾಡಿದರು ಎಂದು ನುಡಿದರು.

    ಎಲ್ಲಾ ರಾಷ್ಟ್ರೀಯ ಹಬ್ಬಗಳು, ಭಾರತೀಯ ಹಬ್ಬಗಳನ್ನು ಅದ್ಧೂರಿಯಾಗಿ ಇಲ್ಲಿ ಆಚರಿಸಲಾಗುತ್ತದೆ. ಮುಂದೆ ಆಗಸ್ಟ್ 15 ಕೂಡಾ ಅದ್ಧೂರಿಯಾಗಿ ಆಚರಿಸಬೇಕು. ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಆಸಕ್ತಿಯಿಂದ ರಷ್ಯನ್ನರು ಭಾಗಿಯಾಗಿದ್ದರು. ನಮ್ಮ ಆಚರಣೆಯಲ್ಲಿ ಮುಕ್ತವಾಗಿ ಭಾಗಿಯಾಗುತ್ತಾರೆ. ರಷ್ಯಾದಲ್ಲಿ ಎರಡು ಹೊಸ ಕೌನ್ಸಿಲೇಟ್ ತೆರೆಯುತ್ತೇವೆ. ಇದರಿಂದ ಪ್ರಯಾಣ ಮತ್ತು ವ್ಯಾಪಾರಕ್ಕೆ ಹೆಚ್ಚು ಸಹಕಾರವಾಗಲಿದೆ ಎಂದು ಮೋದಿ ತಿಳಿಸಿದರು.

  • ರಷ್ಯಾದಲ್ಲಿ ನಡೆದ ಭೀಕರ ದಾಳಿ ಖಂಡಿಸಿದ ಪ್ರಧಾನಿ ಮೋದಿ

    ರಷ್ಯಾದಲ್ಲಿ ನಡೆದ ಭೀಕರ ದಾಳಿ ಖಂಡಿಸಿದ ಪ್ರಧಾನಿ ಮೋದಿ

    – ‌ಐಸಿಸ್‍ಗೆ ಪುಟಿನ್‌ ಎಚ್ಚರಿಕೆ
    – ಭಯೋತ್ಪಾದಕರ ಫೋಟೋ ಬಿಡುಗಡೆ

    ನವದೆಹಲಿ: ರಷ್ಯಾ ರಾಜಧಾನಿ ಮಾಸ್ಕೋದ ಕ್ರೋಕಸ್ ಕನ್ಸರ್ಟ್ ಹಾಲ್‌ನಲ್ಲಿ (Crocus City Hall Attack) ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಖಂಡಿಸಿದ್ದಾರೆ.

    ಈ ಸಂಬಂಧ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ, ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಈ ದುಃಖದ ಸಮಯದಲ್ಲಿ ಭಾರತವು ರಷ್ಯಾದ ಒಕ್ಕೂಟದ ಸರ್ಕಾರ ಮತ್ತು ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದ್ದಾರೆ.

    ಇತ್ತ ದಾಳಿಗೆ ಸಂಬಂಧಪಟ್ಟಂತೆ ರಷ್ಯಾ ಅಧ್ಯಕ್ಷ ಪುಟಿನ್, ದಾಳಿಕೋರರು ತಕ್ಕ ಬೆಲೆ ತೆರಬೇಕಾಗುತ್ತದೆ. ಭಯೋತ್ಪಾದಕರನ್ನು ನಾವು ಸುಮ್ಮನೆ ಬಿಡಲ್ಲ ಎಂದು ದಾಳಿಯ ಹೊಣೆ ಹೊತ್ತ ಐಸಿಸ್‍ಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಉಗ್ರರ ಅಟ್ಟಹಾಸ- 70ಕ್ಕೂ ಹೆಚ್ಚು ಮಂದಿ ದುರ್ಮರಣ

    ಶುಕ್ರವಾರ ಮಧ್ಯರಾತ್ರಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಈ ಭೀಕರ ಭಯೋತ್ಪಾದಕ ದಾಳಿಯಲ್ಲಿ ಈವರೆಗೆ ಕನಿಷ್ಠ 70 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಮತ್ತು 140 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೃತ್ಯದ ಬಳಿಕ ಮಾಸ್ಕೋದ ಹೊರವಲಯದಲ್ಲಿರುವ ಕ್ರೋಕಸ್ ಕನ್ಸರ್ಟ್ ಹಾಲ್ ಮೇಲೆ ನಮ್ಮ ಯೋಧರು ದಾಳಿ ನಡೆಸಿದ್ದಾರೆ. ಸದ್ಯ ದಾಳಿಕೋರರು ಸುರಕ್ಷಿತವಾಗಿದ್ದು, ವಾಪಸ್ಸಾಗಿದ್ದಾರೆ ಎಂದು ಐಸಿಸ್ ತನ್ನ ಟೆಲಿಗ್ರಾಮ್ ನಲ್ಲಿ ಹೇಳಿಕೆ ನೀಡಿದೆ.

    ಉಗ್ರರ ಫೋಟೋ ಬಿಡುಗಡೆ: ಘಟನೆಯ ಬಳಿಕ ರಷ್ಯಾದ ಮಾಧ್ಯಮಗಳು ಭಯೋತ್ಪಾದಕರ ಫೋಟೋಗಳನ್ನು ಬಿಡುಗಡೆ ಮಾಡಿವೆ. ಉಗ್ರರ ದಾಳಿಯ ವೇಳೆ ಸ್ಥಳದಲ್ಲಿ ಇದ್ದ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿಗಳು, ದಾಳಿಕೋರರು ‘ಏಷ್ಯನ್ ಮತ್ತು ಕಕೇಶಿಯನ್’ ಜನರಂತೆ ಕಾಣುತ್ತಿದ್ದರು ಮತ್ತು ವಿದೇಶಿ ಭಾಷೆಯಲ್ಲಿ ಮಾತನಾಡುತ್ತಿದ್ದರು, ರಷ್ಯನ್ ಅಲ್ಲ. ಭಯೋತ್ಪಾದಕರು ಇಂಗುಶೆಟಿಯಾ ಸ್ಥಳೀಯರು ಎಂಬುದಾಗಿ ವರದಿ ಮಾಡಿವೆ.

  • ರಷ್ಯಾದಲ್ಲಿ ಉಗ್ರರ ಅಟ್ಟಹಾಸ- 70ಕ್ಕೂ ಹೆಚ್ಚು ಮಂದಿ ದುರ್ಮರಣ

    ರಷ್ಯಾದಲ್ಲಿ ಉಗ್ರರ ಅಟ್ಟಹಾಸ- 70ಕ್ಕೂ ಹೆಚ್ಚು ಮಂದಿ ದುರ್ಮರಣ

    ಮಾಸ್ಕೋ: ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಉಗ್ರರ ಅಟ್ಟಹಾಸ ಮೆರೆದಿದ್ದು, ಶುಕ್ರವಾರ ರಾತ್ರಿ ಮಾಲ್‌ ಒಂದರಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ (Crocus City Hall Attack) ಉಗ್ರರು ಅಮಾಯಕರ ಜೀವ ಬಲಿತೆಗೆದುಕೊಂಡಿದ್ದಾರೆ.

    ಹೌದು. ರಷ್ಯಾದ (Russia) ರಾಜಧಾನಿ ಮಾಸ್ಕೋದ (Moscow)  ಕ್ರೋಕಸ್ ಸಿಟಿ ಹಾಲ್‌ನಲ್ಲಿ ಐವರು ಬಂದೂಕುಧಾರಿಗಳು ಜನರ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ಭಯಾನಕ ಘಟನೆಯಲ್ಲಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 140ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಸ್ಥಳೀಯ ಮಾಧ್ಯಮಗಳ ಪ್ರಕಾರ, ಗುಂಡಿನ ದಾಳಿ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಸ್ಫೋಟ ಸಂಭವಿಸಿದೆ. ಹಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಮಾಸ್ಕೋದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಗುಂಡಿನ ದಾಳಿಯ ಬಳಿಕ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ರಷ್ಯಾದ ಭದ್ರತಾ ಸಂಸ್ಥೆ ಎಫ್‌ಎಸ್‌ಬಿ ಹೇಳಿದೆ. ಜೊತೆಗೆ ಅಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯವೂ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ದಾಳಿಕೋರನೊಬ್ಬ ಕೂಡ ಕಾಣಿಸಿಕೊಂಡಿದ್ದಾನೆ.

    ಇರಾಕ್ ಮತ್ತು ಸಿರಿಯಾದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ರಷ್ಯಾದ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ದಾಳಿಯಲ್ಲಿ ತನ್ನ ದೇಶದ ಕೈವಾಡವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ.

  • ರಷ್ಯಾ ಅಧ್ಯಕ್ಷ ಪುಟಿನ್‌ ಹೆಚ್ಚು ಭಯಪಡುತ್ತಿದ್ದ ಬದ್ಧವೈರಿ ‘ಅಲೆಕ್ಸಿ ನವಲ್ನಿ!’

    ರಷ್ಯಾ ಅಧ್ಯಕ್ಷ ಪುಟಿನ್‌ ಹೆಚ್ಚು ಭಯಪಡುತ್ತಿದ್ದ ಬದ್ಧವೈರಿ ‘ಅಲೆಕ್ಸಿ ನವಲ್ನಿ!’

    -‌ ಮೂರೂವರೆ ವರ್ಷದ ಹಿಂದೆ ಏರ್‌ಪೋರ್ಟಲ್ಲಿ ವಿಷ ಪ್ರಾಶನವಾಗಿತ್ತು
    – ಜೈಲಲ್ಲಿದ್ದ ನವಲ್ನಿ ಬಿಡುಗಡೆಗೆ ರಷ್ಯಾ ಸರ್ಕಾರವೇ ಮನವಿ ಮಾಡಿತ್ತು

    ಮಾಸ್ಕೋ: ರಷ್ಯಾದ (Russia) ವಿರೋಧ ಪಕ್ಷದ ನಾಯಕ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರ ವಿಮರ್ಶಕ ಅಲೆಕ್ಸಿ ನವಲ್ನಿ (Alexei Navalny) (48) ಜೈಲಿನಲ್ಲೇ ಸಾವನ್ನಪ್ಪಿದ್ದಾರೆ. ನವಲ್ನಿ ಜೈಲಿನಲ್ಲಿ 19 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದರು.

    ಆರ್ಕ್‌ಟಿಕ್ ಜೈಲು ಕಾಲೊನಿಯಲ್ಲಿ ಅವರನ್ನು ಬಂಧಿಸಿಡಲಾಗಿತ್ತು. ಜೈಲಿನಲ್ಲಿ ನಡೆದುಕೊಂಡು ಹೋಗುವಾಗ ನವಲ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಿದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಜೈಲಿನಿಂದ ಅಧಿಕೃತ ವಿವರಣೆ ಹೊರಬಿದ್ದಿದೆ. ನವಲ್ನಿ ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜೈಲು ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪತ್ನಿ ಯೂಲಿಯಾ ಹಾಗೂ ಇಬ್ಬರು ಮಕ್ಕಳನ್ನು ನವಲ್ನಿ ಅಗಲಿದ್ದಾರೆ. ಇದನ್ನೂ ಓದಿ: ರಷ್ಯಾದ ಅಧ್ಯಕ್ಷ ಪುಟಿನ್ ವೈರಿ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಸಾವು

    ಯಾರೀತ ಅಲೆಕ್ಸಿ ನವಲ್ನಿ?
    1976ರ ಜೂನ್‌ 4ರಂದು ಹುಟ್ಟಿದ ನವಲ್ನಿ ರಷ್ಯಾದ ವಿಪಕ್ಷದ ಪ್ರಮುಖ ನಾಯಕ ಹಾಗೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಖ್ಯ ರಾಜಕೀಯ ಎದುರಾಳಿ. 2021ರ ಫೆಬ್ರವರಿಯಲ್ಲಿ ವಿವಿಧ ಆರೋಪಗಳ ಮೇಲೆ ಬಂಧಿತರಾದ ನವಲ್ನಿಯನ್ನು ಮಾಸ್ಕೋದಿಂದ 235 ಕಿಲೋಮೀಟರ್ ದೂರದಲ್ಲಿರುವ ಮೆಲೆಖೋವ್‌ನಲ್ಲಿ ಜೈಲಿನಲ್ಲಿರಿಸಲಾಗಿತ್ತು. ಭ್ರಷ್ಟಾಚಾರ ವಿರೋಧಿ ಅಭಿಯಾನದ ಮೂಲಕ ರಷ್ಯಾದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ನವಲ್ನಿ ಅವರನ್ನು ‘ಪುಟಿನ್ ಹೆಚ್ಚು ಭಯಪಡುವ ವ್ಯಕ್ತಿ’ ಎಂದು ವಾಲ್ ಸ್ಟ್ರೀಟ್ ಜರ್ನಲ್ ಬಣ್ಣಿಸಿತ್ತು.

    ನವಲ್ನಿ ಜನಪ್ರಿಯ ನಾಯಕ
    ವಕೀಲರಾಗಿದ್ದ ನವಲ್ನಿ 2008ರಿಂದ ರಷ್ಯಾದ ರಾಜಕೀಯದಲ್ಲಿ ಪ್ರಮುಖರಾಗಿದ್ದಾರೆ. ತನ್ನ ಬ್ಲಾಗ್‌ನ ಮೂಲಕ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದ ಅಲೆಕ್ಸಿ ನವಲ್ನಿ, ಶೀಘ್ರವಾಗಿ ರಷ್ಯಾದ ಪುಟಿನ್ ವಿರೋಧಿ ರಾಜಕೀಯ ಚಳವಳಿಯ ಕೇಂದ್ರ ಬಿಂದುವಾದರು. 2011ರ ರಾಷ್ಟ್ರೀಯ ಸಂಸತ್ತಿನ ಚುನಾವಣೆ ವೇಳೆ ಭುಗಿಲೆದ್ದ ಜನಪ್ರಿಯ ಪ್ರತಿಭಟನೆಗಳಲ್ಲಿ ಅವರು ಜನಪ್ರಿಯ ನಾಯಕರಾಗಿದ್ದರು. ಇದನ್ನೂ ಓದಿ: ರಷ್ಯಾದ ಮಹಿಳೆಯರು 8 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಿ: ಪುಟಿನ್‌ ಕರೆ

    ಪುಟಿನ್ ಅವರ ಯುನೈಟೆಡ್ ರಷ್ಯಾ ಪಕ್ಷವನ್ನು ಕಳ್ಳರು ಮತ್ತು ಕಪಟಿಗಳ ಪಕ್ಷ ಎಂದು ಬಣ್ಣಿಸಿದ ನವಲ್ನಿ ಮಾಸ್ಕೋ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಿದರು. 2017 ರಲ್ಲಿ ರಷ್ಯಾದ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಅವರ ಅಕ್ರಮ ಗಳಿಕೆಯನ್ನು ಬಹಿರಂಗಪಡಿಸುವ ವೀಡಿಯೊವನ್ನು ನವಲ್ನಿ ಬಿಡುಗಡೆ ಮಾಡಿದ ನಂತರ ಭುಗಿಲೆದ್ದ ಭ್ರಷ್ಟಾಚಾರ ವಿರೋಧಿ ಅಭಿಯಾನದ ವೇಳೆ ಸಾವಿರಾರು ಜನರನ್ನು ಬಂಧಿಸಲಾಯಿತು. 2018ರ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ವಿರುದ್ಧ ನವಲ್ನಿ ಸ್ಪರ್ಧಿಸಿದ್ದರು. ಪುಟಿನ್ ಚುನಾವಣೆಯಲ್ಲಿ ಅಕ್ರಮವೆಸಗಿದ್ದಾರೆ. ಹೀಗಾಗಿ ಮತದಾನ ಬಹಿಷ್ಕರಿಸಿ ಎಂದಾಗ ನವಲ್ನಿಯನ್ನು ಬಂಧಿಸಿದ್ದು ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.

    ಮೊದಲು ಮರ ಕದ್ದ ಆರೋಪ!
    ಇದರ ಮಧ್ಯೆ ನವಲ್ನಿಯ ಹತ್ಯಾ ಯತ್ನವೂ ನಡೆಯಿತು. ಇದೆಲ್ಲವನ್ನೂ ನವಲ್ನಿ ಎದುರಿಸಿ ನಿಂತರು. 2013ರಲ್ಲಿ ಕಿರೋವ್‌ನಲ್ಲಿನ ಸರ್ಕಾರಿ ಮರದ ಕಂಪನಿಯಿಂದ ಮರವನ್ನು ಕದ್ದ ಆರೋಪದ ಮೇಲೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಿದರು. ಇದನ್ನೂ ಓದಿ: ಪ್ರೇಯಸಿಯನ್ನೇ ರೇಪ್‌ ಮಾಡಿ, 111 ಬಾರಿ ಇರಿದು ಕೊಂದಿದ್ದ ಪ್ರೇಮಿಯನ್ನ ಬಿಡುಗಡೆಗೊಳಿಸಿದ ಪುಟಿನ್‌

    ಸರ್ಕಾರವೇ ಮಾಡಿತ್ತು ಬಿಡುಗಡೆಗೆ ಮನವಿ!
    ಸುಳ್ಳು ಕೇಸ್‌ ಸೃಷ್ಟಿಸಿ ನವಲ್ನಿಯನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ಸಾವಿರಾರು ಜನರು ರಷ್ಯಾದ ನಗರ ನಗರಗಳಲ್ಲಿ ಬೀದಿಗಿಳಿದ ಹಿನ್ನೆಲೆಯಲ್ಲಿ ನವಲ್ನಿ ಅವರನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಬೇಕೆಂದು ಸರ್ಕಾರವು ನ್ಯಾಯಾಲಯಕ್ಕೆ ಮನವಿ ಮಾಡಿದ್ದು ಅಸಾಮಾನ್ಯ ಹೆಜ್ಜೆಯಾಗಿತ್ತು ಮತ್ತು ನವಲ್ನಿ ಜನಪ್ರಿಯತೆ ಎಷ್ಟಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ನಂತರ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿತು.

    ಏರ್‌ಪೋರ್ಟಲ್ಲಿ ಕುಡಿದ ಟೀಯಿಂದ ವಿಷಪ್ರಾಶನ!
    ಸೈಬೀರಿಯಾದಲ್ಲಿ ಚುನಾವಣೆ ಪ್ರಚಾರ ಮಾಡುವಾಗ ನವಲ್ನಿ ವಿಷ ಪ್ರಾಶನಕ್ಕೊಳಗಾದರು. 2020ರ ಆಗಸ್ಟ್‌ 20ರಂದು ಸೈಬೀರಿಯಾದ ಟಾಮ್ಸ್ಕ್‌ ನಗರದ ವಿಮಾನ ನಿಲ್ದಾಣದಲ್ಲಿ ನವಲ್ನಿ ಸೇವಿಸಿದ ಚಹಾಕ್ಕೆ ವಿಷ ಬೆರೆಸಿದ್ದಾರೆ ಎಂದು ಬೆಂಬಲಿಗರು ಶಂಕೆ ವ್ಯಕ್ತಪಡಿಸಿದರು. ವಿಮಾನ ಪ್ರಯಾಣದ ವೇಳೆ ಪ್ರಜ್ಞೆ ತಪ್ಪಿ ಬಿದ್ದ ನವಲ್ನಿಯನ್ನು ವಿಮಾನ ತುರ್ತು ಭೂಸ್ಪರ್ಶ ಮಾಡಿಸಿ, ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜರ್ಮನಿಯಲ್ಲಿ ತಜ್ಞರಿಂದ ಚಿಕಿತ್ಸೆ ಪಡೆದ ನಂತರ ಅವರು 2021ರ ಜನವರಿ 17ರಂದು ರಷ್ಯಾಕ್ಕೆ ಮರಳಿದರು. ಆದರೆ ಇದಕ್ಕೂ ಹಿಂದಿನ ಜೈಲುವಾಸದ ಅವಧಿಯಲ್ಲಿ ಪೆರೋಲ್ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಿದರು. ಪೆರೋಲ್ ಉಲ್ಲಂಘನೆಗಾಗಿ ಅವರಿಗೆ ಮೂರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದನ್ನೂ ಓದಿ: ಪುಟಿನ್‌ಗೆ ಏನೂ ಆಗಿಲ್ಲ, ಆರೋಗ್ಯವಾಗಿದ್ದಾರೆ – ಕ್ರೆಮ್ಲಿನ್‌ ಸ್ಪಷ್ಟನೆ

    ಪುಟಿನ್‌ ಬದ್ಧವೈರಿ!
    ನ್ಯಾಯಾಂಗ ನಿಂದನೆ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಕ್ಕಾಗಿ ಸಂಗ್ರಹಿಸಿದ 47 ಲಕ್ಷ ಡಾಲರ್ ವಂಚನೆ ಸೇರಿ ವಿವಿಧ ಪ್ರಕರಣಗಳನ್ನು ನವಲ್ನಿ ವಿರುದ್ಧ ದಾಖಲಿಸಲಾಯಿತು. 2022ರಲ್ಲಿ ಈ ಪ್ರಕರಣಗಳಲ್ಲಿ ಅವರಿಗೆ 9 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಿದ ಪ್ರಕರಣದಲ್ಲಿ ಅವರಿಗೆ 2023ರಲ್ಲಿ ಇನ್ನೂ 19 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಏತನ್ಮಧ್ಯೆ, ನವಲ್ನಿ ಅವರು ವಿಡಿಯೋ ಲಿಂಕ್ ಬಳಸಿ ರಷ್ಯಾದ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಪುಟಿನ್ ನಡೆಸಿದ್ದ ಉಕ್ರೇನ್ ಆಕ್ರಮಣವನ್ನು ಟೀಕಿಸಿದರು.

    ಜೈಲಲ್ಲಿದ್ದರೂ ಜನ ಬೆಂಬಲ ಕಮ್ಮಿಯಾಗಿರಲಿಲ್ಲ!
    ತೀವ್ರ ಬೆನ್ನು ನೋವು ಮತ್ತು ಬಲಗಾಲಿನ ಮರಗಟ್ಟುವಿಕೆ ಸಮಸ್ಯೆಯಿಂದ ಬಳಲುತ್ತಿದ್ದ ನವಲ್ನಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ನವಾಲ್ನಿ ಬಿಡುಗಡೆಗಾಗಿ ರಷ್ಯಾದಾದ್ಯಂತ ಹೋರಾಟಗಳು ನಡೆದವು. ಬರಹಗಾರರು, ಕಲಾವಿದರು ಮತ್ತು ಹಾಲಿವುಡ್ ತಾರೆಯರು ಸೇರಿದಂತೆ ಸೆಲೆಬ್ರಿಟಿಗಳು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಬಹಿರಂಗ ಪತ್ರ ಬರೆದು ನವಲ್ನಿ ಅವರಿಗೆ ತಕ್ಷಣ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದ್ದರು. ಇದನ್ನೂ ಓದಿ:

  • ಮೋದಿಯನ್ನ ಹೆಸರಿಸಬಹುದು ಅಂತ ಊಹಿಸೋಕು ಸಾಧ್ಯವಿಲ್ಲ – ಹಾಡಿ ಹೊಗಳಿದ ಪುಟಿನ್‌

    ಮೋದಿಯನ್ನ ಹೆಸರಿಸಬಹುದು ಅಂತ ಊಹಿಸೋಕು ಸಾಧ್ಯವಿಲ್ಲ – ಹಾಡಿ ಹೊಗಳಿದ ಪುಟಿನ್‌

    ಮಾಸ್ಕೋ: ಪ್ರಧಾನಿ ಮೋದಿ ಅವರು ಇರುವಾಗ ಭಾರತದ ವಿರುದ್ಧ ಮತ್ತು ಭಾರತೀಯರ ವಿರುದ್ಧ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಹುದು ಅಥವಾ ಪ್ರಧಾನಿ ಮೋದಿ (Narendra Modi) ಅವರನ್ನ ಹೆದರಿಸಬಹುದು ಅಂತ ಊಹಿಸೋದಕ್ಕೂ ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಹಾಡಿ ಹೊಗಳಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಪುಟಿನ್‌ ಮೋದಿ‌ ನೀತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಭದ್ರತೆ National Security) ವಿಚಾರದಲ್ಲಿ ಮೋದಿ ಅವರು ತೆಗೆದುಕೊಳ್ಳುವ ಕಠಿಣ ನಿಲುವುಗಳು ನನಗೆ ಆಗಾಗ್ಗೆ ಅಚ್ಚರಿಯನ್ನುಂಟುಮಾಡುತ್ತದೆ. ದೇಶದ ಜನರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಭಾರತದ ಪ್ರಧಾನಿ ಕಠಿಣ ನಿಲುವು ತೆಗೆದುಕೊಳ್ಳುತ್ತಾರೆ. ಮೋದಿ ಅವರ ನೀತಿಯು ದೆಹಲಿ ಮತ್ತು ಮಾಸ್ಕೋ (Moscow) ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿದೆ ಎಂದು ಒತ್ತಿ ಹೇಳಿದ್ದಾರೆ.

    ಮೋದಿ ಅವರು ಹೊರಗಿನಿಂದ ಏನಾಗುತ್ತಿದೆ ಎಂಬುದನ್ನೆಲ್ಲಾ ನಿರಂತರವಾಗಿ ಗಮನಿಸುತ್ತಿದ್ದಾರೆ. ಇತ್ತೀಚೆಗೆ ರಷ್ಯಾ-ಚೀನಾ ಸಂಬಂಧಗಳು ನಿರಂತರವಾಗಿ ಎಲ್ಲಾ ದಿಕ್ಕುಗಳಲ್ಲೂ ಅಭಿವೃದ್ಧಿಯತ್ತ ಸಾಗುತ್ತಿದೆ. ಇದಕ್ಕೆ ಮೋದಿ ಅವರ ನೀತಿಯೂ ಮುಖ್ಯ ಕಾರಣವಾಗಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಹಮಾಸ್‌ ಜೊತೆ ಗುಂಡಿನ ಚಕಮಕಿ; ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಸಾವು

    ಇತ್ತೀಚೆಗೆ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪುಟಿನ್‌ ವರ್ಚುವಲ್‌ನಲ್ಲಿ ಪಾಲ್ಗೊಂಡು ಧನ್ಯವಾದ ಅರ್ಪಿಸಿದ್ದರು. ಇದನ್ನೂ ಓದಿ: ಇದು ಯುದ್ಧದ ಸಮಯವಲ್ಲ – ಪುಟಿನ್‌ಗೆ ಪ್ರಧಾನಿ ಮೋದಿ ಸಲಹೆ

    ಈ ಹಿಂದೆ ಮೋದಿ ರಷ್ಯಾ ಭೇಟಿ ನೀಡಿದಾಗ ಹಾಗೂ ವರ್ಚುವಲ್‌ ಸಮಾರಂಭಗಳಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಉಲ್ಲೇಖಿಸಿ, ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಯುದ್ಧವನ್ನು ನಿಲ್ಲಿಸುವಂತೆಯೂ ಮೋದಿ ಮನವಿ ಮಾಡಿದ್ದರು.