Tag: Mosambi Juice

  • ಡೆಂಗ್ಯೂ ರೋಗಿಗೆ ಆಸ್ಪತ್ರೆಯಲ್ಲಿ ನೀಡಿದ್ದು ಮೂಸಂಬಿ ಜ್ಯೂಸ್‍ ಅಲ್ಲ, ಕಳಪೆ ಮಟ್ಟದ ಪ್ಲೇಟ್‌ಲೆಟ್‌ಗಳು: ಜಿಲ್ಲಾ ಮ್ಯಾಜಿಸ್ಟ್ರೇಟ್

    ಡೆಂಗ್ಯೂ ರೋಗಿಗೆ ಆಸ್ಪತ್ರೆಯಲ್ಲಿ ನೀಡಿದ್ದು ಮೂಸಂಬಿ ಜ್ಯೂಸ್‍ ಅಲ್ಲ, ಕಳಪೆ ಮಟ್ಟದ ಪ್ಲೇಟ್‌ಲೆಟ್‌ಗಳು: ಜಿಲ್ಲಾ ಮ್ಯಾಜಿಸ್ಟ್ರೇಟ್

    ಲಕ್ನೋ: ಮೃತ ಡೆಂಗ್ಯೂ ರೋಗಿಗೆ ಡ್ರಿಪ್‍ನಲ್ಲಿ ಮೂಸಂಬಿ ಜ್ಯೂಸ್ (Mosambi Juice) ನೀಡಿರಲಿಲ್ಲ, ಬದಲಿಗೆ ಕಳಪೆ ಮಟ್ಟದ ಪ್ಲೇಟ್‌ಲೆಟ್‌ಗಳನ್ನು ನೀಡಲಾಗಿದೆ ಎಂದು ಪ್ರಯಾಗ್‍ರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಖತ್ರಿ ತಿಳಿಸಿದರು.

    ಉತ್ತರ ಪ್ರದೇಶದ (Uttar Pradesh) ಪ್ರಯಾಗ್‍ರಾಜ್ ಖಾಸಗಿ ಆಸ್ಪತ್ರೆಯೊಂದು (Hospital) ಡೆಂಗ್ಯೂ ರೋಗಿಯೊಬ್ಬನಿಗೆ ಡ್ರಿಪ್‍ನಲ್ಲಿ ಪ್ಲೇಟ್‌ಲೆಟ್‌ಗಳು ಬದಲಿಗೆ ಮೂಸಂಬಿ ಹಣ್ಣಿನ ರಸವನ್ನು ಹಾಕಿದ್ದರಿಂದ ಆತ ಸಾವನ್ನಪ್ಪಿದ್ದ. ಈ ಘಟನೆ ಬೆನ್ನಲ್ಲೆ ಆ ಆಸ್ಪತ್ರೆಯನ್ನು ಅನಧಿಕೃತವಾಗಿ ನಿರ್ಮಿಸಿರುವುದಕ್ಕಾಗಿ ನೆಲಸಮ ಮಾಡುವುದಾಗಿ ಸರ್ಕಾರ ಆದೇಶಿಸಿತ್ತು.

    ಆದರೆ ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಘಟನೆ ಸಂಬಂಧಿಸಿ ಪ್ರಯಾಗ್‍ರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಖತ್ರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಆಸ್ಪತ್ರೆಯಿಂದ ಸಂಗ್ರಹಿಸಿದ ಮಾದರಿಯ ವರದಿ ಪ್ರಕಾರ ಅದು ಮೂಸಂಬಿ ರಸವಲ್ಲ ಬದಲಿಗೆ ಕಳಪೆ ಮಟ್ಟದ ಪ್ಲೇಟ್‌ಲೆಟ್‌ಗಳು ಎಂದು ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು.

    ವರದಿಗಳ ಪ್ರಕಾರ ಪ್ಲೇಟ್‍ಲೆಟ್‍ಗಳನ್ನು ಕಳಪೆ ಮಟ್ಟದಲ್ಲಿ ಸಂಗ್ರಹಿಸಲಾಗಿದೆ. ಅಷ್ಟೇ ಅಲ್ಲದೇ ಪ್ಲೇಟ್‍ಗಳು ಹೆಪ್ಪುಗಟ್ಟುವಿಕೆಯಿಂದಲೂ ಈ ಬಣ್ಣಕ್ಕೆ ತಿರುಗಿರಬಹುದು ಎಂದು ಹೇಳಿದರು. ಇದನ್ನೂ ಓದಿ: ಡೆಂಗ್ಯೂ ರೋಗಿಗೆ ಡ್ರಿಪ್‍ನಲ್ಲಿ ಮೊಸಂಬೆ ಜ್ಯೂಸ್ ನೀಡಿದ್ದ ಆಸ್ಪತ್ರೆಗೆ ಇದೀಗ ಬುಲ್ಡೋಜರ್ ಭಯ

    ಕಳೆದ ವಾರ 32 ವರ್ಷದ ಡೆಂಗ್ಯೂ ರೋಗಿಗೆ ಡ್ರಿಪ್‍ನಲ್ಲಿ ರಕ್ತದ ಪ್ಲೇಟ್‍ಲೆಟ್ ಬದಲಿಗೆ ಮೂಸಂಬಿ ಜ್ಯೂಸ್‍ನ್ನು ಹಾಕಿದ್ದರಿಂದ ಆತ ಸಾವನ್ನಪ್ಪಿದ್ದ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅದಾದ ಬಳಿಕ ತನಿಖೆಗೂ ಆದೇಶಿಸಲಾಗಿತ್ತು. ಅದಾದ ಬಳಿಕ ಘಟನೆಗೆ ಸಂಬಂಧಸಿ 10 ಜನರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಘಟನೆಯಾದ ಬಳಿಕ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದ್ದು, ಅಲ್ಲಿ ಈಗ ಯಾವುದೇ ರೋಗಿಗಳಿಲ್ಲ. ಇದನ್ನೂ ಓದಿ: ಡ್ರಿಪ್‍ನಲ್ಲಿ ಮೊಸಂಬಿ ಜ್ಯೂಸ್, ಡೆಂಗ್ಯೂ ರೋಗಿ ಸಾವು – ತನಿಖೆಗೆ ಆದೇಶ

    Live Tv
    [brid partner=56869869 player=32851 video=960834 autoplay=true]

  • ಡೆಂಗ್ಯೂ ರೋಗಿಗೆ ಡ್ರಿಪ್‍ನಲ್ಲಿ ಮೊಸಂಬೆ ಜ್ಯೂಸ್ ನೀಡಿದ್ದ ಆಸ್ಪತ್ರೆಗೆ ಇದೀಗ ಬುಲ್ಡೋಜರ್ ಭಯ

    ಡೆಂಗ್ಯೂ ರೋಗಿಗೆ ಡ್ರಿಪ್‍ನಲ್ಲಿ ಮೊಸಂಬೆ ಜ್ಯೂಸ್ ನೀಡಿದ್ದ ಆಸ್ಪತ್ರೆಗೆ ಇದೀಗ ಬುಲ್ಡೋಜರ್ ಭಯ

    ಲಕ್ನೋ: ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಡೆಂಗ್ಯೂ ರೋಗಿಯೊಬ್ಬ ಸಾವನ್ನಪ್ಪಿದ್ದ ಬೆನ್ನಲ್ಲೇ ಇದೀಗ ಆ ಆಸ್ಪತ್ರೆಗೆ (Hospital) ಬುಲ್ಡೋಜರ್ (Bulldozer) ಭಯ ಶುರುವಾಗಿದೆ.

    ಉತ್ತರ ಪ್ರದೇಶದ (Uttar Pradesh) ಪ್ರಯಾಗ್‍ರಾಜ್ ಖಾಸಗಿ ಆಸ್ಪತ್ರೆಯೊಂದು ಡೆಂಗ್ಯೂ ರೋಗಿಯೊಬ್ಬನಿಗೆ ಡ್ರಿಪ್‍ನಲ್ಲಿ ರಕ್ತದ ಬದಲಿಗೆ ಮೂಸುಂಬೆ ಹಣ್ಣಿನ ರಸವನ್ನು (Mosambi Juice) ಹಾಕಿದ್ದರಿಂದ ಆತ ಸಾವನ್ನಪ್ಪಿದ್ದ. ಇದೀಗ ಈ ಘಟನೆ ಬೆನ್ನಲ್ಲೆ ಆ ಆಸ್ಪತ್ರೆಯನ್ನು ಅನಧಿಕೃತವಾಗಿ ನಿರ್ಮಿಸಿರುವುದಕ್ಕಾಗಿ ನೆಲಸಮ ಮಾಡುವುದಾಗಿ ಸರ್ಕಾರ ನೋಟಿಸ್ ನೀಡಿದೆ. ಅನುಮತಿ ಪಡೆಯದೆ ಆಸ್ಪತ್ರೆ ನಿರ್ಮಿಸಲಾಗಿದ್ದು, ಶುಕ್ರವಾರದೊಳಗೆ ಆಸ್ಪತ್ರೆ ತೆರವು ಮಾಡಬೇಕು ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ದಾಖಲೆಯ ಚಳಿ- ಸ್ವೆಟರ್‌ಗಾಗಿ ಬಿಬಿಎಂಪಿಗೆ ಶಾಲಾ ಮಕ್ಕಳ ಮನವಿ

    ಕಳೆದ ವಾರ 32 ವರ್ಷದ ಡೆಂಗ್ಯೂ ರೋಗಿಗೆ ಡ್ರೀಪ್‍ನಲ್ಲಿ ರಕ್ತದ ಬದಲಿಗೆ ಮೊಸುಂಬೆ ಜ್ಯೂಸ್‍ನ್ನು ಹಾಕಿದ್ದರಿಂದ ಆತ ಸಾವನ್ನಪ್ಪಿದ್ದ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅದಾದ ಬಳಿಕ ತನಿಖೆಗೂ ಆದೇಶಿಸಲಾಗಿತ್ತು. ಅದಾದ ಬಳಿಕ ಘಟನೆಗೆ ಸಂಬಂಧಸಿ 10 ಜನರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಘಟನೆಯಾದ ಬಳಿಕ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದ್ದು, ಅಲ್ಲಿ ಈಗ ಯಾವುದೇ ರೋಗಿಗಳಿಲ್ಲ. ಇದನ್ನೂ ಓದಿ: ಡ್ರಿಪ್‍ನಲ್ಲಿ ಮೊಸಂಬಿ ಜ್ಯೂಸ್, ಡೆಂಗ್ಯೂ ರೋಗಿ ಸಾವು – ತನಿಖೆಗೆ ಆದೇಶ

    Live Tv
    [brid partner=56869869 player=32851 video=960834 autoplay=true]

  • ಡ್ರಿಪ್‍ನಲ್ಲಿ ಮೊಸಂಬಿ ಜ್ಯೂಸ್, ಡೆಂಗ್ಯೂ ರೋಗಿ ಸಾವು – ತನಿಖೆಗೆ ಆದೇಶ

    ಡ್ರಿಪ್‍ನಲ್ಲಿ ಮೊಸಂಬಿ ಜ್ಯೂಸ್, ಡೆಂಗ್ಯೂ ರೋಗಿ ಸಾವು – ತನಿಖೆಗೆ ಆದೇಶ

    ಲಕ್ನೋ: ರಕ್ತದ ಬದಲಿಗೆ ಡ್ರಿಪ್‍ನಲ್ಲಿ ಮೊಸಂಬಿ ಜ್ಯೂಸ್ (Mosambi Juice) ಹಾಕಿದ್ದರಿಂದ ಡೆಂಗ್ಯೂ ಹೊಂದಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ ಹಿನ್ನೆಲೆ ಇದೀಗ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

    ವೈರಲ್ ಆಗುತ್ತಿರುವ ವೀಡಿಯೋದಲ್ಲಿ ರಕ್ತದ ಡ್ರಿಪ್ ಬದಲಿಗೆ ಮೊಸಂಬಿ ರಸ ಹಾಕಿರುವುದನ್ನು ಕಾಣಬಹುದಾಗಿದೆ. ಪ್ರಯಾಗ್‍ರಾಜ್‍ನ (Prayagraj) ಝಲ್ವಾ (Jhalwa) ಪ್ರದೇಶದಲ್ಲಿ ಡೆಂಗ್ಯೂ ರೋಗಿಗಳಿಗೆ ನಕಲಿ ಪ್ಲಾಸ್ಮಾ ಸರಬರಾಜು ಮಾಡಲಾಗುತ್ತಿದೆ ಎಂಬುವುದರ ಬಗ್ಗೆ ಪರಿಶೀಲನೆ ನಡೆಸಲು ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ ರಾಕೇಶ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಲಿಜ್‌ ಟ್ರಸ್‌ ರಾಜೀನಾಮೆ

    ಪ್ರಯಾಗ್‍ರಾಜ್‍ನ (ಹಿಂದೆ ಅಲಹಾಬಾದ್) ಝಲ್ವಾ ಪ್ರದೇಶದ ಗ್ಲೋಬಲ್ ಆಸ್ಪತ್ರೆಯಲ್ಲಿ ಆಗುತ್ತಿರುವ ವಂಚನೆ ಕುರಿತಂತೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದು, ವೈದ್ಯರು ರಕ್ತದ ಪ್ಲಾಸ್ಮಾ ಅಗತ್ಯವಿರುವ ರೋಗಿಗಳಿಗೆ ಮೊಸಂಬಿ ರಸವನ್ನು ಡ್ರಿಪ್‍ನಲ್ಲಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವೀಡಿಯೊದಲ್ಲಿ ವ್ಯಕ್ತಿ ರಕ್ತದ ಪ್ಯಾಕ್ ಅನ್ನು ಹಿಡಿದುಕೊಂಡಿದ್ದು, ಅದನ್ನು ಹಿಂತಿರುಗಿಸಿದಾಗ ಮೊಸಂಬಿ ರಸ ಇರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಬೊಮ್ಮಾಯಿ ಕುಂಟಿಕೊಂಡು ಏನ್ ಮಾಡ್ತಾರೆ, ಬಿಎಸ್‍ವೈಗೆ ನೆನಪಿನ ಶಕ್ತಿಯೇ ಇಲ್ಲ: ಮೊಯ್ಲಿ ಲೇವಡಿ

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ (Deputy Chief Minister Brajesh Pathak) ಈ ಬಗ್ಗೆ ತನಿಖೆ ನಡೆಸಲು ನಾವು ಸಿಎಂಒ ಜೊತೆ ತಂಡವನ್ನು ರಚಿಸಿದ್ದೇವೆ ಮತ್ತು ಅವರನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಕೆಲವೇ ಗಂಟೆಗಳಲ್ಲಿ ವರದಿ ಸಲ್ಲಿಸಲಾಗುವುದು. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]