Tag: mortuary

  • ಮಂಗಳೂರು ಆಸ್ಪತ್ರೆಯಲ್ಲಿ ಸಾವು – ಕೇರಳ ಆಸ್ಪತ್ರೆಯ ಶವಾಗಾರದಲ್ಲಿ ಪುನರ್ಜನ್ಮ!

    ಮಂಗಳೂರು ಆಸ್ಪತ್ರೆಯಲ್ಲಿ ಸಾವು – ಕೇರಳ ಆಸ್ಪತ್ರೆಯ ಶವಾಗಾರದಲ್ಲಿ ಪುನರ್ಜನ್ಮ!

    – ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದ ಮಂಗಳೂರು ಆಸ್ಪತ್ರೆ
    – ಅಂತ್ಯಸಂಸ್ಕಾರ ನಡೆಸಲು ಮುಂದಾಗಿದ್ದ ಕುಟುಂಬಸ್ಥರು

    ತಿರುವನಂತಪುರಂ: ಚಿಕಿತ್ಸೆ ಫಲಿಸದೇ ಮಂಗಳೂರು (Mangaluru) ಆಸ್ಪತ್ರೆಯಲ್ಲಿ ಮೃತಪಟ್ಟ 67 ವರ್ಷದ ವ್ಯಕ್ತಿಗೆ ಕೇರಳ (Kerala) ಆಸ್ಪತ್ರೆಯ ಶವಾಗಾರದಲ್ಲಿ (Mortuary) ಪುನರ್ಜನ್ಮ ಸಿಕ್ಕಿದೆ.

    ಪಾರ್ಶ್ವವಾಯು ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಕಣ್ಣೂರಿನ ಪಚಪೊಯ್ಕಾದ ವೆಲ್ಲುವಕ್ಕಂಡಿ ಪವಿತ್ರನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರೂ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಜೀವರಕ್ಷಕ ಸಾಧನಗಳನ್ನು ಹಿಂತೆಗೆದುಕೊಳ್ಳುವುದಾಗಿ ಕುಟುಂಬಕ್ಕೆ ಆಸ್ಪತ್ರೆ ತಿಳಿಸಿತ್ತು. ಸೋಮವಾರ ಸಂಜೆಯ ವೇಳೆ ಪವಿತ್ರನ್‌ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಘೋಷಿಸಿತ್ತು. ಇದನ್ನೂ ಓದಿ: ಮದುವೆಗೆ 4 ದಿನ ಬಾಕಿಯಿರುವಾಗಲೇ ಪೊಲೀಸರ ಮುಂದೆ ಮಗಳನ್ನ ಗುಂಡಿಕ್ಕಿ ಕೊಂದ ತಂದೆ

    ಸೋಮವಾರ ಸಂಜೆ 6:30 ರ ಸುಮಾರಿಗೆ ಅವರ ಶವವನ್ನು ಅಂಬುಲೆನ್ಸ್‌ (Ambulance) ಮೂಲಕ ಕಣ್ಣೂರಿಗೆ ಕಳುಹಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯಗೊಂಡ ಹಿನ್ನೆಲೆಯಲ್ಲಿ ರಾತ್ರಿ ಶವವವನ್ನು ಕಣ್ಣೂರಿನ ಎಕೆಜಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿ ಮಂಗಳವಾರ ಊರಿಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಲು ಕುಟುಂಬ ನಿರ್ಧರಿಸಿತ್ತು.

    ರಾತ್ರಿ 11:30ರ ಹೊತ್ತಿಗೆ ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸುತ್ತಿದ್ದಾಗ ಪವಿತ್ರನ್‌ ಕೈ ಅಲುಗಾಡುವನ್ನು ಕರ್ತವ್ಯದಲ್ಲಿದ್ದ ಅಟೆಂಡೆಂಟ್ ಜಯನ್ ಗಮನಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಯ ವೈದ್ಯಕೀಯ ತಂಡವು ದೇಹ ಪರೀಕ್ಷಿಸಿ ಪವಿತ್ರನ್ ಜೀವಂತವಾಗಿರುವುದನ್ನು ಎಂದು ದೃಢಪಡಿಸಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತಕ್ಷಣವೇ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಈಗ ಚಿಕಿತ್ಸೆಗೆ ಪವಿತ್ರನ್‌ ಸ್ಪಂದಿಸುತ್ತಿದ್ದಾರೆ ಎಂದು ವರದಿಯಾಗಿದೆ.

    ಅಟೆಂಡೆಂಟ್ ಜಯನ್ ಪ್ರತಿಕ್ರಿಯಿಸಿ, ಅಂಬುಲೆನ್ಸ್‌ನಿಂದ ದೇಹವನ್ನು ಇಳಿಸಿದಾಗ ಕೈ ಸ್ವಲ್ಪ ಚಲಿಸಿದನ್ನು ನೋಡಿದೆ. ನನಗೆ ಅನುಮಾನ ಬಂದ ವಿಚಾರವನ್ನು ನನ್ನ ಸಹೋದ್ಯೋಗಿ ಜೊತೆ ಹೇಳಿದೆ. ನಂತರ ಅವರ ಹೃದಯದ ನಾಡಿ ಮಿಡಿತ ಪರೀಕ್ಷೆ ಮಾಡಿದಾಗ ಅವರು ಜೀವಂತ ಇರುವುದು ದೃಢವಾಯಿತು ಎಂದು ತಿಳಿಸಿದರು.

    ಈಗ ಮಂಗಳೂರಿನ ಖಾಸಗಿ ಆಸ್ಪತ್ರೆ ಮಾಡಿದ ಸಾವಿನ ದೃಢೀಕರಣದ ಬಗ್ಗೆ ಹಲವು ಪ್ರಶ್ನೆಗಳು ಸೃಷ್ಟಿಯಾಗಿದೆ. ಪವಿತ್ರನ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಬೆನ್ನಲ್ಲೇ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

     

  • Viral Video| ಶವಾಗಾರದಲ್ಲೇ ಜೋಡಿಗಳ ಮಿಲನ ಮಹೋತ್ಸವ!

    Viral Video| ಶವಾಗಾರದಲ್ಲೇ ಜೋಡಿಗಳ ಮಿಲನ ಮಹೋತ್ಸವ!

    ನೋಯ್ಡಾ: ಇತ್ತೀಚಿಗೆ ಎಲ್ಲೆಡೆ ಕಾಮುಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಅನೇಕ ಪ್ರಕರಣಗಳು ಪ್ರತಿದಿನ ಕಾಣಸಿಗುತ್ತಿವೆ. ಅದೇ ರೀತಿ ಇದೀಗ ನೋಯ್ಡಾದ (Noida) ಆಸ್ಪತ್ರೆಯೊಂದರ ಶವಾಗಾರದಲ್ಲಿ (Mortuary) ಶವಗಳ ಮುಂದೇಯೇ ಕ್ಲೀನರ್ ಹಾಗೂ ಮಹಿಳೆಯೊಬ್ಬಳು ಲೈಂಗಿಕ ಕ್ರಿಯೆಯಲ್ಲಿ ಮುಳುಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವೈರಲ್ ಆಗಿದೆ.

    ನೋಯ್ಡಾ ಸೆಕ್ಟರ್ 94ರ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆಂದು ಇರಿಸಿದ್ದ ಶವದ ಮುಂದೆಯೇ ಆಸ್ಪತ್ರೆಯ ಕ್ಲೀನರ್ ಮತ್ತು ಮಹಿಳೆಯೊಬ್ಬಳು ಅಸಹಜ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಕುರಿತ 6.17 ನಿಮಿಷದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಶವ ಇರುವ ಸ್ಟ್ರೆಚರ್ ಕೆಳಗೆ ಕ್ಲೀನರ್ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಇದಕ್ಕೆ ಮಹಿಳೆ ಸಹ ಅಡ್ಡಿಪಡಿಸುವುದು ಕಂಡುಬಂದಿಲ್ಲ. ಇದರಿಂದ ಇದು ಬಲತ್ಕಾರವಾಗಿ ನಡೆಯುತ್ತಿದ್ದ ಕ್ರಿಯೆಯಲ್ಲ ಎಂಬುದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಸಂಸದ ಕಾಗೇರಿ ಪ್ರಯತ್ನ – ಪ್ರಧಾನಿ ಪರಿಹಾರ ನಿಧಿಯಿಂದ ಶಿರೂರು ಸಂತ್ರಸ್ತರಿಗೆ ವಿಶೇಷ ಅನುದಾನಕ್ಕೆ ಅನುಮತಿ

    ಮಹಿಳೆ ಜೊತೆ ಅಸಹಜ ಸ್ಥಿತಿಯಲ್ಲಿದ್ದ ಕ್ಲೀನರ್ ಅನ್ನು ಈ ವರ್ಷದ ಜೂನ್‌ನಲ್ಲಿ ಡಂಕೌರ್ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯ ಶವಾಗಾರದಲ್ಲಿ ಕೆಲಸಕ್ಕೆ ನೇಮಿಸಲಾಗಿತ್ತು. ಇನ್ನು ಆ ಶವಾಗಾರದಲ್ಲಿ ಯಾವುದೇ ಮಹಿಳಾ ಸಿಬ್ಬಂದಿ ಕೆಲಸ ಮಾಡದ ಕಾರಣ ವೀಡಿಯೋದಲ್ಲಿರುವ ಮಹಿಳೆ ಹೊರಗಿನವಳು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದನ್ನೂ ಓದಿ: Ramanagara | ನೇಣು ಬಿಗಿದುಕೊಂಡು ವಕೀಲೆ ಆತ್ಮಹತ್ಯೆ – ಕಾರಣ ಸಸ್ಪೆನ್ಸ್‌!

    ಇನ್ನು ಈ ಶವಾಗಾರಕ್ಕೆ ಪ್ರತಿದಿನ ಐದರಿಂದ ಏಳು ಶವಗಳು ಮರಣೋತ್ತರ ಪರೀಕ್ಷೆಗಾಗಿ ಬರುತ್ತವೆ. ಇವುಗಳಲ್ಲಿ ಮಹಿಳೆಯರು, ಹದಿಹರೆಯದವರು, ಹುಡುಗಿಯವರು ಮತ್ತು ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರ ಶವಗಳು ಸೇರಿವೆ. ಈ ಶವಗಾರದಲ್ಲಿ ಇಬ್ಬರು ಕಾವಲುಗಾರರು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿದೆ `ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ’ – ಒಬ್ಬಬ್ಬರ ಬಳಿ ಇರೋ ಆಸ್ತಿ ಎಷ್ಟು?

  • ಶವಾಗಾರದಲ್ಲಿ ಹೆಣಗಳ ಬೆತ್ತಲೆ ಫೋಟೋ ಸೆರೆಹಿಡಿಯುತ್ತಿದ್ದವ ಅಂದರ್

    ಶವಾಗಾರದಲ್ಲಿ ಹೆಣಗಳ ಬೆತ್ತಲೆ ಫೋಟೋ ಸೆರೆಹಿಡಿಯುತ್ತಿದ್ದವ ಅಂದರ್

    – ವೃದ್ಧೆಯ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನ

    ಮಡಿಕೇರಿ: ಕೊಡಗು (Kodagu) ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಕಡಗದಾಳು ನಿವಾಸಿ ಸೈಯದ್ (24) ಎಂಬಾತನನ್ನು ಮಾನ ಭಂಗ ಯತ್ನದ ಆರೋಪದಡಿ ಬಂಧಿಸಲಾಗಿದೆ.

    ಮಡಿಕೇರಿಯ 74 ವರ್ಷದ ವೃದ್ಧೆಯೋರ್ವರ ಮನೆಗೆ ನುಗ್ಗಿದ ಸೈಯದ್, ಮಾನ ಭಂಗಕ್ಕೆ ಯತ್ನ ಮಾಡಿರುವುದಾಗಿ ಮಡಿಕೇರಿ ನಗರ ಠಾಣೆ (Madikeri City Police) ಗೆ ವೃದ್ಧೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೈಯದ್‍ನನ್ನು ಬಂಧಿಸಿದ್ದಾರೆ.

    ಸೈಯದ್ ಇತ್ತೀಚೆಗಷ್ಟೆ ಕೆಲಸಕ್ಕೆ ರಾಜೀನಾಮೆ ನೀಡಿದ್ದನು. ಕಳೆದ ಸೆಪ್ಟೆಂಬರ್ 22 ರಂದು ರಾತ್ರಿ ಸುಮಾರು 11 ಗಂಟೆಗೆ ವೃದ್ಧೆ ಮನೆಗೆ ಆಗಮಿಸಿದ ಸೈಯದ್ ಮನೆ ಬಾಗಿಲು ಬಡಿದಿದ್ದಾನೆ. ವೃದ್ಧೆ ಬಾಗಿಲು ತೆರೆದಕ್ಷಣ ಸೈಯದ್ ಮನೆ ಒಳಗೆ ನುಗ್ಗಿ ಮಾನ ಭಂಗಕ್ಕೆ ಯತ್ನಿಸಿದ್ದಾನೆ. ವೃದ್ಧೆ ಈ ಸಂದರ್ಭದಲ್ಲಿ ಜೋರಾಗಿ ಕಿರುಚಿಕೊಂಡಿದ್ದು, ಪಕ್ಕದ ಮನೆಯವರು ಹೊರಬರುವಷ್ಟರಲ್ಲಿ ಸೈಯದ್ ತಲೆಮರೆಸಿಕೊಂಡಿದ್ದಾನೆ.

    ಈ ಸಂದರ್ಭ ತನ್ನ ಫೋನ (Mobile Phone) ನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನನ್ವಯ ಮಡಿಕೇರಿ ನಗರ ಠಾಣೆ ಉಪನಿರೀಕ್ಷಕ ಅವರು ಸೆಕ್ಷನ್ 446 ಹಾಗೂ 354ನಡಿ ಪ್ರಕರಣ ದಾಖಲಿಸಿ ಸೈಯದ್‍ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಸೈಯದ್ ಮೊಬೈಲ್ ಘೋನನ್ನು ದೂರುದಾರರು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಶವಾಗಾರದಲ್ಲಿ ಕಾರ್ಯನಿರ್ವ ಹಿಸುತ್ತಿದ್ದ ಸೈಯದ್ ಶವಾಗಾರದಲ್ಲಿನ ಮೃತ ದೇಹಗಳ ಬೆತ್ತಲೆ ಚಿತ್ರಗಳನ್ನು ತನ್ನ ಫೋನಿನಲ್ಲಿ ಸೆರೆ ಹಿಡಿಯುತ್ತಿದ್ದ ಎಂಬುದಾಗಿ ಈ ಹಿಂದೆ ಹಿಂದೂಪರ ಸಂಘಟನೆ ದೂರು ನೀಡಿದ್ದು, ಈ ಸಂಬಂಧ ತನಿಖೆ ನಡೆಸುತ್ತಿರುವುದಾಗಿ ಮಡಿಕೇರಿ ಡಿ.ವೈ.ಎಸ್.ಪಿ ಗಜೇಂದ್ರ ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶವಾಗಾರದಲ್ಲೇ ಯುವತಿಯರ ಜತೆ ಕಾಮದಾಟ – ಸತ್ತ ಮಹಿಳೆಯರ ನಗ್ನ ಫೋಟೋ ತೆಗೆದು ವಿಕೃತಿ ಮೆರೆದ

    ಶವಾಗಾರದಲ್ಲೇ ಯುವತಿಯರ ಜತೆ ಕಾಮದಾಟ – ಸತ್ತ ಮಹಿಳೆಯರ ನಗ್ನ ಫೋಟೋ ತೆಗೆದು ವಿಕೃತಿ ಮೆರೆದ

    ಮಡಿಕೇರಿ: ಪೋಸ್ಟ್ ಮಾರ್ಟಂ ಮಾಡುವ ಕೊಠಡಿಯಲ್ಲಿ ಆಸ್ಪತ್ರೆಯ (Hospital) ಯುವತಿ ಹಾಗೂ ಮಹಿಳೆಯರನ್ನು (Woman) ಕರೆಸಿ ಕಾಮದಾಟ ಹಾಗೂ ಮೃತಪಟ್ಟ ಮಹಿಳೆಯರ ನಗ್ನ ಫೋಟೋಗಳನ್ನು (Photo) ತನ್ನ ಮೊಬೈಲ್‍ನಲ್ಲಿ ತೆಗೆದುಕೊಂಡು ಶವಗಾರದಲ್ಲಿ (Mortuary) ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ವಿಕೃತಿ ಮೆರೆದಿದ್ದಾನೆ.

    ಕೊಡಗು (Kodagu) ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಈ ಘಟನೆ ನಡೆದಿದೆ. ಸೈಯ್ಯದ್ ಎಂಬಾತ ಈ ಹೇಯ ಕೃತ್ಯವನ್ನು ಎಸಗಿದ ವ್ಯಕ್ತಿಯಾಗಿದ್ದಾನೆ. ಸಯ್ಯದ್ 2021ರ ಏಪ್ರಿಲ್ ತಿಂಗಳಿನಲ್ಲಿ ಗುತ್ತಿಗೆ ಆಧಾರದಲ್ಲಿ ಶವಾಗಾರದ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದ್ದ. ಈತನಿಗೆ ಕೋವಿಡ್ ಸಂದರ್ಭದಲ್ಲಿ ತುಂಬಾ ಶ್ರಮಿಸಿದ್ದಾನೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಶಂಸಿಸಿ ಸನ್ಮಾನಿಸಿದ್ದರು.

    ಆದರೆ ಸೈಯ್ಯದ್ ಶವಾಗಾರದಲ್ಲಿ ಕೆಲಸ ಮಾಡಿಕೊಂಡೇ ಹೊರಪ್ರಪಂಚಕ್ಕೆ ಗೊತ್ತಾಗದಂತೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದ ಸೈಯದ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೆಲವು ಮಹಿಳೆಯರನ್ನು ಫೋನ್ ಕರೆಮಾಡಿ ಶವಾಗಾರಕ್ಕೆ ಕರೆಸಿಕೊಳ್ಳುತ್ತಿದ್ದ. ಶವಗಾರದಲ್ಲೇ ತನ್ನ ಹಲವು ಮಹಿಳೆಯರ ಜೊತೆ ಸೆಕ್ಸ್ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಅಪಘಾತ ಸೇರಿದಂತೆ ನಾನಾ ರೀತಿಯಲ್ಲಿ ಸತ್ತು ಶವಾಗಾರಕ್ಕೆ ಸೇರುತ್ತಿದ್ದ ಮಹಿಳೆಯರ ನಗ್ನ ಫೋಟೋಗಳನ್ನು ತೆಗೆದು ತನ್ನ ಮೊಬೈಲ್‍ನಲ್ಲೂ ಇಟ್ಟುಕೊಂಡಿದ್ದ.

    ಅಷ್ಟಕ್ಕೂ ಈ ಆಡಿಯೋಗಳು ದೊರೆತ್ತಿರುವ ವಿಷಯವೇ ಇಂಟ್ರೆಸ್ಟಿಂಗ್ ಆಗಿದೆ. ಪಾಪಿ ಸೈಯದ್ ತಿಂಗಳ ಹಿಂದೆ ಮಡಿಕೇರಿ ನಗರದ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ್ದನಂತೆ. ಈ ವೇಳೆ ಜನರಿಗೆ ಸಿಕ್ಕಿಬಿದ್ದಿದ್ದ. ಆಗ ಆತನಿಗೆ ಗೂಸಾ ಕೊಟ್ಟಿದ್ದ ಜನರು ಆತನ ಫೋನ್ ಅನ್ನು ಪೊಲೀಸ್ ವಶಕ್ಕೆ ನೀಡಿದ್ದರು. ಆತನ ಫೋನ್ ಕರೆಗಳನ್ನು ಪರಿಶೀಲಿಸಿದಾಗ ಆತನ ಯಾರೊಂದಿಗೆಲ್ಲಾ, ಏನೆಲ್ಲಾ ಮಾತನಾಡಿದ್ದಾನೆ ಎನ್ನುವುದು ಬಟಾಬಯಲಾಗಿದೆ. ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರದ ಆರೋಪ – ಅಂಡಮಾನ್ ಮಾಜಿ ಮುಖ್ಯ ಕಾರ್ಯದರ್ಶಿ ಅರೆಸ್ಟ್

    ಅಷ್ಟೇ ಅಲ್ಲದೇ ಸಾಕಷ್ಟು ಹೆಣ್ಣು ಮಕ್ಕಳು, ಮಹಿಳೆಯರನ್ನು ಸಯ್ಯದ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎನ್ನುವುದು ಗೊತ್ತಾಗಿದೆ. ಯಾರಾದರೂ ಮಹಿಳೆಯರು, ಹೆಣ್ಣುಮಕ್ಕಳು ಸತ್ತು ಅವರ ಮೃತದೇಹಗಳನ್ನು ಶವಾಗಾರಕ್ಕೆ ಹಾಕಿದರೆ, ಪೋಸ್ಟ್ ಮಾರ್ಟಂಗೂ ಮೊದಲೇ ಈ ಕಿರಾತಕ ಆ ಸತ್ತ ಮಹಿಳೆಯರ, ಹೆಣ್ಣುಮಕ್ಕಳ ಬೆತ್ತಲೇ ಮೃತದೇಹಗಳ ಫೋಟೋಗಳನ್ನು ತನ್ನ ಮೊಬೈಲ್‍ನಲ್ಲಿ ತೆಗೆದುದಿಟ್ಟುಕೊಳ್ಳುತ್ತಿದ್ದ ಎನ್ನುವ ಘೋರ ವಿಷಯವೂ ಗೊತ್ತಾಗಿದೆ. ಇದನ್ನೂ ಓದಿ: ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – 5 ಸಾವು, 13 ಮಂದಿಗೆ ಗಂಭೀರ ಗಾಯ

    ಸಯ್ಯದ್‍ನ ದುಷ್ಕೃತ್ಯ ಗೊತ್ತಾಗುತ್ತಿದ್ದಂತೆ ಸಯ್ಯದ್ ವಿರುದ್ಧ ಹಿಂದೂ ಜಾಗರಣಾ ವೇದಿಕೆಯು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಹಾಗೂ ಡೀನ್‍ಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜು ಡೀನ್ ಕಾರಿಯಪ್ಪ ಅವರು ಸಯ್ಯದ್ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಗೆ ನೀಡಿದ್ದಾರೆ. ಇದೀಗ ಘಟನೆ ಸಂಬಂಧಿಸಿ ಮಡಿಕೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತನ್ನ ವಾಟ್ಸಾಪ್ ಸ್ಟೇಟಸ್‍ನಲ್ಲೇ Rip ಎಂದು ಬರೆದು ನೇಣು ಹಾಕಿಕೊಂಡ

    ತನ್ನ ವಾಟ್ಸಾಪ್ ಸ್ಟೇಟಸ್‍ನಲ್ಲೇ Rip ಎಂದು ಬರೆದು ನೇಣು ಹಾಕಿಕೊಂಡ

    ರಾಮನಗರ: ಪ್ರೇಮ ವೈಫಲ್ಯದಿಂದಾಗಿ ಓರ್ವ ಯುವಕ ನೇಣಿಗೆ ಶರಣಾಗಿರುವ ಘಟನೆ ಅರ್ಚಕರಹಳ್ಳಿಯಲ್ಲಿ ನಡೆದಿದೆ.

    ಸೋಮಶೇಖರ್(26) ಮೃತ ಯುವಕ. ಸಾಯುವ ಮೊದಲೇ ಸೋಮಶೇಖರ್ ತನ್ನ ವಾಟ್ಸಾಪ್ ಸ್ಟೇಟಸ್‍ನಲ್ಲಿ ಬೆಳಗ್ಗೆ 12 ಗಂಟೆ ಸುಮಾರಿಗೆ ರಿಪ್ ಎಂದು ಬರೆದುಕೊಂಡಿದ್ದ. ಸಂಜೆ 5 ಗಂಟೆ ಸುಮಾರಿಗೆ ನೇಣಿಗೆ ಶರಣಾಗಿದ್ದಾನೆ. ಘಟನೆ ನಡೆದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ:  ಹಳ್ಳದಲ್ಲಿ ಕೊಚ್ಚಿ ಹೋಗಿದ್ದವ ಶವವಾಗಿ ಪತ್ತೆ – ತಕ್ಷಣವೇ ಐದು ಲಕ್ಷ ರೂ. ಪರಿಹಾರ ವಿತರಣೆ 

    ದತ್ತುಮಗ
    ಅರ್ಚಕರಹಳ್ಳಿಯ ಸೋದರಸಂಬಂಧಿಯೊಬ್ಬರಿಗೆ ಮಕ್ಕಳಿಲ್ಲದ ಕಾರಣ ಈತನನ್ನು ದತ್ತುಮಗನಂತೆ ಸಾಕುತ್ತಿದ್ದರು ಎನ್ನಲಾಗಿದೆ. ಸೋಮಶೇಖರ್ ಚನ್ನಪಟ್ಟಣ ಮೂಲದ ಯುವಕನಾಗಿದ್ದು, ಸದ್ಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸುವ ಸಲುವಾಗಿ ನಗರದ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

    ಈ ಸಂಬಂಧ ಐಜೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ:ಇಬ್ರಾಹಿಂ ಸಾಹೇಬ್ರು ಸೋತು ಸುಣ್ಣವಾಗಿದ್ದಾರೆ: ಜಮೀರ್ ತಿರುಗೇಟು 

    Live Tv
    [brid partner=56869869 player=32851 video=960834 autoplay=true]

  • ಶಾಲಾ ಬಾಲಕನ ಅನುಮಾನಾಸ್ಪದ ಸಾವು – ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

    ಶಾಲಾ ಬಾಲಕನ ಅನುಮಾನಾಸ್ಪದ ಸಾವು – ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

    ಮಡಿಕೇರಿ: ಶಾಲಾ ಬಾಲಕನೊಬ್ಬ ಅನುಮಾನಾಸ್ಪದವಾಗಿ ನೇಣು ಬಿಗಿದ ಸಾವನ್ನಪ್ಪಿದ ಘಟನೆ ಕುಶಾಲನಗರ ಸಮೀಪದ ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಬೆಂಡೆಬೆಟ್ಟ ಹಾಡಿಯಲ್ಲಿ ನಡೆದಿದೆ.

    ಗುಮ್ಮನಕೊಲ್ಲಿ ರಸ್ತೆಯ ಮೂಕಾಂಬಿಕ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಮಂಜುನಾಥ್ (15) ಮೃತ ಬಾಲಕ. ಪೋಷಕರಿಲ್ಲದ ಈತ ಕಳೆದ 5 ವರ್ಷದಿಂದ ಅಜ್ಜ, ಅಜ್ಜಿಯ ಮನೆಯಲ್ಲಿ ವಾಸವಾಗಿದ್ದ. ಗುರುವಾರ ವಾಸದ ಮನೆಯಲ್ಲಿ ವೇಲ್‍ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

    ಆದರೆ ಈತನ ಸಾವಿನ ಬಗ್ಗೆ ಸಂಬಂಧಿಕರು ಹಾಗೂ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದು, ಬಾಲಕನ ಅಜ್ಜ, ಅಜ್ಜಿ ಈತನ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಿದ್ದಾರೆ.

    ಮೃತ ಬಾಲಕನ ಮೈಮೇಲೆ ಹಲ್ಲೆ ನಡೆಸಿದ ಗುರುತುಗಳಿದ್ದು, ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ ಅಂತ ಒತ್ತಾಯಿಸಿದ್ದಾರೆ. ಈ ಸಂಬಂಧ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದ ಮುಂದೆ ಬಾಲಕನ ಅಜ್ಜ, ಅಜ್ಜಿ ವಿರುದ್ಧ ಸಂಬಂಧಿಕರು ಹರಿಹಾಯ್ದಿದ್ದು, ಪೊಲೀಸರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ಗೆ ವೀಡಿಯೋ ಶೂಟ್ ಮಾಡುತ್ತಿದ್ದ ವೇಳೆ ರೈಲು ಹರಿದು ಮೂವರು ಸಾವು

    ಬಾಲಕನ ಅಜ್ಜ ಚಂದ್ರಶೇಖರ್ ಹೇಳಿಕೆಯಂತೆ ಬಾಲಕ ಮಂಜುನಾಥ್ ನಶೆಯ ಪದಾರ್ಥ ತೆಗೆದುಕೊಳ್ಳುವ ಚಟ ಅಂಟಿಸಿಕೊಂಡಿದ್ದ. ಈ ಬಗ್ಗೆ ಹಲವು ಬಾರಿ ಬುದ್ದಿವಾದ ಹೇಳಿ ಗದರಿಸಲಾಗಿತ್ತು. ಗುರುವಾರ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಾಮೀನು ಮಂಜೂರಾಗಿದ್ದರೂ ಕಾರಾಗೃಹದಲ್ಲಿ ಕೈದಿ ನೇಣಿಗೆ ಶರಣು

    ಈ ನಡುವೆ ಬಾಲಕ ಸಾಯುವ ಮುನ್ನ ತನ್ನ ಸ್ನೇಹಿತರಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಳಿಸಿದ ವಾಯ್ಸ್ ಮೆಸೇಜ್ ಹರಿದಾಡುತ್ತಿದ್ದು, ಮೃತನ ಅತ್ತೆ ಭಾಗ್ಯ ನೀಡಿದ ದೂರಿನ ಮೇರೆಗೆ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಕುಶಾಲನಗರ ಗ್ರಾಮಾಂತರ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಮಡಿಕೇರಿಗೆ ರವಾನಿಸಿದ್ದಾರೆ.