Tag: Mortgage

  • 1,800 ಕೋಟಿಗೆ ಅಡಮಾನವಿಟ್ಟಿದ್ದ 11 ಕಟ್ಟಡಗಳನ್ನು ವಾಪಸ್ ಪಡೆದ BBMP

    1,800 ಕೋಟಿಗೆ ಅಡಮಾನವಿಟ್ಟಿದ್ದ 11 ಕಟ್ಟಡಗಳನ್ನು ವಾಪಸ್ ಪಡೆದ BBMP

    ಬೆಂಗಳೂರು: ಸತತ ಛೀಮಾರಿಯಿಂದಲೇ ಸುದ್ದಿಯಲ್ಲಿರುವ ಬಿಬಿಎಂಪಿ ಕೊನೆಗೂ ತನ್ನ ಅಡಮಾನವಿಟ್ಟಿದ್ದ ಕಟ್ಟಡಗಳನ್ನು ಮರಳಿ ಪಡೆದಿದೆ.

    ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಟಾಪಟಿಗೆ ಬಿಬಿಎಂಪಿ ಕಟ್ಟಡ ಅಡಮಾನ ವಿಚಾರ ದೊಡ್ಡ ಅಸ್ತ್ರವಾಗಿತ್ತು. 2015-16ರ ಅವಧಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಬಿಬಿಎಂಪಿ ತನ್ನ ಅಧೀನದ 11 ಕಟ್ಟಡಗಳನ್ನು ಹುಡ್ಕೋ ಸಂಸ್ಥೆಗೆ 1,796 ಕೋಟಿ ರೂ.ಗಳಿಗೆ ಅಡಮಾನಕ್ಕೆ ಇಟ್ಟಿತ್ತು. ಇದೀಗ ಸಂಪೂರ್ಣ ಸಾಲ ಮುಕ್ತಗೊಂಡಿರುವ ಪಾಲಿಕೆ 11 ಕಟ್ಟಡಗಳನ್ನು ಬಿಡಿಸಿಕೊಂಡಿದೆ.

    ಯಾವುದೆಲ್ಲ ಅಡಮಾನ?
    ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಬಿಬಿಎಂಪಿ ಕೆಂಪೇಗೌಡ ಮ್ಯೂಸಿಯಂ, ಮೆಯೋಹಾಲ್, ಜಾನ್ಸನ್ ಮಾರುಕಟ್ಟೆ, ಸ್ಲಾಟರ್ ಹೌಸ್, ರಾಜಾಜಿನಗರ ಕಾಂಪ್ಲೆಕ್ಸ್, ಮಲ್ಲೇಶ್ವರ ಮಾರುಕಟ್ಟೆ, ಕೃಷ್ಣರಾಜೇಂದ್ರ ಮಾರುಕಟ್ಟೆ, ದಾಸಪ್ಪ ಕಟ್ಟಡ, ಪಬ್ಲಿಕ್ ಯುಟಿಲಿಟಿ ಕಟ್ಟಡ, ಬಿಬಿಎಂಪಿ ಪೂರ್ವ ಕಚೇರಿ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಗಳನ್ನು 2015-16ರಲ್ಲಿ ಅಡಮಾನವಿಟ್ಟಿತ್ತು. ಇದನ್ನೂ ಓದಿ: ಮೈಸೂರು ದಸರಾ ಅದ್ಧೂರಿ ಆಚರಣೆಗೆ ಸರ್ಕಾರದ ಸಿದ್ಧತೆ – ಸೆಪ್ಟೆಂಬರ್ 26ರಿಂದ ನಾಡಹಬ್ಬ

    ಯಾವುದೆಲ್ಲ ವಾಪಸ್?
    ನಂತರದ ವರ್ಷಗಳಲ್ಲಿ ಆರ್ಥಿಕ ಚೇತರಿಕೆ ಕಂಡಿದ್ದ ಬಿಬಿಎಂಪಿ 11 ಕಟ್ಟಡಗಳನ್ನು ಹಂತ-ಹಂತವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕೆಂಪೇಗೌಡ ಮ್ಯೂಸಿಯಂ, ಮೆಯೋಹಾಲ್, ಜಾನ್ಸನ್ ಮಾರುಕಟ್ಟೆಯನ್ನು 362.03 ಕೋಟಿ ರೂ., ಬಡ್ಡಿ 163.61 ಕೋಟಿ ರೂ. ಪಾವತಿಸಿ ಹುಡ್ಕೊದಿಂದ ಪಾಲಿಕೆಗೆ 2016-17ರಲ್ಲಿ ವಾಪಸ್ ಪಡೆದುಕೊಂಡಿತು. ಇದನ್ನೂ ಓದಿ: ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿ ಕೃತಜ್ಞತೆ ಅರ್ಪಿಸಿದ ನೂತನ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ

    ಹಾಗೆಯೇ 2017-18ರಲ್ಲಿ ಮಲ್ಲೇಶ್ವರಂ ಮಾರುಕಟ್ಟೆ, 2018-19ರಲ್ಲಿ ಸ್ಲಾಟರ್ ಹೌಸ್, ರಾಜಾಜಿನಗರ ಕಾಂಪ್ಲೆಕ್ಸ್ ವಾಪಸ್ ಮತ್ತು 2017-18ರಲ್ಲಿ ಕಡಿಮೆ ಬಡ್ಡಿದರಕ್ಕೆ ಎಸ್‌ಬಿಐನಲ್ಲಿ ಅಡಮಾನಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದೀಗ 11 ಕಟ್ಟಡಗಳನ್ನೂ ತನ್ನ ವ್ಯಾಪ್ತಿಗೆ ತೆಗೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • 10 ಕೋಟಿ ಬೆಲೆಯ ಆಸ್ತಿ ಅಡವಿಟ್ಟ ಸೋನು ಸೂದ್

    10 ಕೋಟಿ ಬೆಲೆಯ ಆಸ್ತಿ ಅಡವಿಟ್ಟ ಸೋನು ಸೂದ್

    – ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಕ್ರಮ

    ಮುಂಬೈ: ಲಾಕ್‍ಡೌನ್ ವೇಳೆ ವಲಸೆ ಕಾರ್ಮಿಕರಿಗೆ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಬಾಲಿವುಡ್ ನಟ ಸೋನು ಸೂದ್ ನೆರವಾಗಿದ್ದರು. ಈ ಕುರಿತು ಸಾಕಷ್ಟು ಮೆಚ್ಚುಗೆ ಸಹ ವ್ಯಕ್ತವಾಗಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸೋನು ಸೂದ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು 10 ಕೋಟಿ ರೂ.ಆಸ್ತಿಯನ್ನು ಅಡವಿಟ್ಟಿದ್ದಾರೆ.

    ಮುಂಬೈನ ವಿವಿಧ ಪ್ರದೇಶಗಳಲ್ಲಿರುವ 8 ಆಸ್ತಿಗಳನ್ನು ಸೋನು ಸೂದ್ ಅಡವಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು 10 ಕೋಟಿ ರೂ. ಅವಶ್ಯವಿದ್ದಿದ್ದರಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಸಾಲ ಪಡೆಯಲು ಜುಹು ಪ್ರದೇಶದಲ್ಲಿನ ಆಸ್ತಿಗಳನ್ನು ಅಡವಿಟ್ಟಿದ್ದು, 2 ಅಂಗಡಿ ಹಾಗೂ 6 ಫ್ಲ್ಯಾಟ್‍ಗಳನ್ನು ಅಡವಿಟ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಸೆಪ್ಟೆಂಬರ್ 15ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ನವೆಂಬರ್ 24ರಂದು ರಿಜಿಸ್ಟರ್ ಆಗಿದೆ. ಈ ದಾಖಲೆಯನ್ನಾಧರಿಸಿ ವರದಿ ಮಾಡಲಾಗಿದ್ದು, ಇಸ್ಕಾನ್ ದೇವಸ್ಥಾನದ ಬಳಿ ಎ.ಬಿ.ನಾಯರ್ ರಸ್ತೆಯಲ್ಲಿರುವ ಕಟ್ಟಡವನ್ನು ಸಹ ಅಡಮಾನ ಇಡಲಾಗಿದೆ. ಸಾಲ ಪಡೆಯಲು 5 ಲಕ್ಷ ರೂ.ಗಳ ನೋಂದಣಿ ಮೊತ್ತವನ್ನು ಸಹ ಪಾವತಿಸಲಾಗಿದೆ.

    ಆಸ್ತಿಗಳು ಸೋನು ಸೂದ್ ಹಾಗೂ ಅವರ ಪತ್ನಿ ಮಾಲೀಕತ್ವದಲ್ಲೇ ಇರುತ್ತವೆ. ಪ್ರತಿ ತಿಂಗಳು ಬಾಡಿಗೆಯನ್ನು ಸಹ ಪಡೆಯಬಹುದು. ಆದರೆ 10 ಕೋಟಿ ರೂ.ಗಳ ಸಾಲಕ್ಕೆ ಬಡ್ಡಿ ಹಾಗೂ ಅಸಲನ್ನು ಪಾವತಿಸಬೇಕಾಗುತ್ತದೆ.

    ತಮ್ಮ ಸಹಾಯದ ಗುಣಗಳ ಮೂಲಕವೇ ಲಾಕ್‍ಡೌನ್ ಸಮಯದಲ್ಲಿ ಹೀರೋ ಆಗಿದ್ದ ಸೋನು ಸೂದ್, ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ನೂರಾರು ವಲಸೆ ಕಾರ್ಮಿಕರು ಅವರ ಊರುಗಳಿಗೆ ತೆರಳಲು ಸಹಾಯ ಮಾಡಿದ್ದಾರೆ. ಅಲ್ಲದೆ ಮಕ್ಕಳ ಓದಿಗೆ, ಹಲವರಿಗೆ ಸರ್ಜರಿ ಸೇರಿದಂತೆ ವಿವಿಧ ರೀತಿಯ ಸಹಾಯವನ್ನು ಮಾಡಿದ್ದಾರೆ. ಈ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ.

    ಇತ್ತೀಚೆಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್‍ಡಿಪಿ)ದ ಭಾಗವಾಗಿ ಪ್ರತಿಷ್ಠಿತ ಎಸ್‍ಡಿಜಿ ಸ್ಪೆಷಲ್ ಮಾನವೀಯ ಕಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಮೂಲಕ ವಿಶ್ವಸಂಸ್ಥೆ ಮಟ್ಟದಲ್ಲಿ ಸಹ ಸೋನು ಸೂದ್ ಗುರುತಿಸಿಕೊಂಡಿದ್ದು, ಇದೀಗ ಸಹಾಯ ಮಾಡಲು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ತಮ್ಮ ಆಸ್ತಿಗಳನ್ನೇ ಅಡವಿಟ್ಟು ಕಷ್ಟದಲ್ಲಿರುವವರಿಗೆ ಸ್ಪಂದಿಸಲು ಮುಂದಾಗಿದ್ದಾರೆ.