Tag: Morph

  • ಕ್ಯಾಬಿನೆಟ್ ಸಭೆಯ ತಿರುಚಿದ ವಿಡಿಯೋ ಅಪ್ಲೋಡ್ ಮಾಡಿದ ಖಾತೆಗಳು ಬ್ಲಾಕ್

    ಕ್ಯಾಬಿನೆಟ್ ಸಭೆಯ ತಿರುಚಿದ ವಿಡಿಯೋ ಅಪ್ಲೋಡ್ ಮಾಡಿದ ಖಾತೆಗಳು ಬ್ಲಾಕ್

    ನವದೆಹಲಿ: ಕೇಂದ್ರ ಕ್ಯಾಬಿನೆಟ್ ಸಭೆಯ ತಿರುಚಿದ ವಿಡಿಯೋಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯ ಟ್ವಿಟ್ಟರ್, ಫೇಸ್‌ಬುಕ್ ಹಾಗೂ ಟೆಲಿಗ್ರಾಮ್‌ನ ಹಲವಾರು ಖಾತೆಗಳ ವಿರುದ್ಧ ಕ್ರಮ ಕೈಗೊಂಡಿದೆ.

    ಕೆಲವು ಸಾಮಾಜಿಕ ಮಾದ್ಯಮದ ಬಳಕೆದಾರರು ಮಾರ್ಫಿಂಗ್ ಮೂಲಕ ವಿಷಯಗಳನ್ನು ದೋಷಪೂರಿತವಾಗಿ ತೋರಿಸುವ ಹಾಗೂ ಸಮುದಾಯಗಳಿಗೆ ಧಕ್ಕೆ ತರುವಂತಹ ಕೆಲಸವನ್ನು ಮಾಡುತ್ತಾರೆ. ಹೀಗೆ ಹಲವಾರು ಮಾರ್ಫ್ ಮಾಡಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಇದನ್ನೂ ಓದಿ: ಸಶಸ್ತ್ರಪಡೆಗಳಲ್ಲಿ ಮಹಿಳೆಯರಿಗೆ ಅವಕಾಶ ಹೆಚ್ಚಿಸಲು ನೂರು ಸೈನಿಕ ಶಾಲೆಗಳ ಸ್ಥಾಪನೆ: ರಾಜನಾಥ್ ಸಿಂಗ್

    ಇತ್ತೀಚೆಗೆ ಮಾರ್ಫ್ ಮಾಡಿದ ಕ್ಯಾಬಿನೆಟ್‌ನ ವೀಡಿಯೋವೊಂದು ಬೇರೊಂದು ಆಡಿಯೋದೊಂದಿಗೆ ತೋರಿಸಲಾಗಿತ್ತು. ಈ ಕಾರಣಕ್ಕೆ ಟ್ವಿಟ್ಟರ್‌ನ 73 ಹ್ಯಾಂಡಲ್‌ಗಳು, ನಾಲ್ಕು ಯೂಟ್ಯೂಬ್ ವೀಡಿಯೋಗಳು, ಹಾಗೂ ಒಂದು ಇನ್‌ಸ್ಟಾಗ್ರಾಂ ಪೋಸ್ಟ್ ಅನ್ನು ತೆಗೆದು ಹಾಕಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನದ ಮಂತ್ರಿ ರಾಜೀವ್ ಚಂದ್ರಶೇಖರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: BJP ಶಾಸಕ ಪಂಕಜ್ ಗುಪ್ತಗೆ ಕಪಾಳಮೋಕ್ಷ ಮಾಡಿದ ರೈತ

    ಈ ಖಾತೆಯ ನಿರ್ವಾಹಕರನ್ನು ಗುರುತಿಸಲಾಗಿದೆ. ಅವರ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಮಹಿಳೆಯರ ವಿರುದ್ಧ ಅವಹೇಳನಕಾರಿ ವಿಷಯಗಳನ್ನು ಹಂಚುವ ಟೆಲಿಗ್ರಾಂ ಹಾಗೂ ಫೇಸ್‌ಬುಕ್ ಖಾತೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

  • ನಕಲಿ ಬೆತ್ತಲೆ ಫೋಟೋ ಇಟ್ಕೊಂಡು 100 ಮಹಿಳೆಯರಿಗೆ ಬ್ಲ್ಯಾಕ್ ಮೇಲ್

    ನಕಲಿ ಬೆತ್ತಲೆ ಫೋಟೋ ಇಟ್ಕೊಂಡು 100 ಮಹಿಳೆಯರಿಗೆ ಬ್ಲ್ಯಾಕ್ ಮೇಲ್

    – ಇನ್‍ಸ್ಟಾ ಖಾತೆಯ ಪ್ರೊಫೈಲ್ ಫೋಟೋ ಬಳಸಿ ಕೃತ್ಯ
    – ಇನ್‍ಸ್ಟಾದಲ್ಲೇ ಮೆಸೇಜ್ ಮಾಡಿ ಮಹಿಳೆಯರಿಗೆ ಬೆದರಿಕೆ

    ನವದೆಹಲಿ: ನಕಲಿ ಬೆತ್ತಲೆ ಫೋಟೋ ತೋರಿಸಿ ಬರೋಬ್ಬರಿ ನೂರಕ್ಕೂ ಹೆಚ್ಚು ಮಹಿಳೆಯರಿಗೆ ಬ್ಲ್ಯಾಕ್‍ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 26 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ದಕ್ಷಿಣ ದೆಹಲಿಯ ನಿವಾಸಿ ಸುಮಿತ್ ಝಾ ನಕಲಿ ಬೆತ್ತಲೆ ಫೊಟೋಗಳನ್ನು ಇಟ್ಟುಕೊಂಡು ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ 100ಕ್ಕೂ ಹೆಚ್ಚು ಮಹಿಳೆಯರಿಗೆ ಬೆದರಿಕೆ ಹಾಕಿದ್ದಾನೆ. ಇತ್ತೀಚೆಗೆ ಇಂತಹದ್ದೇ ಪ್ರಕರಣದಲ್ಲಿ ಸುಮಿತ್ ಝಾನನ್ನು ಛತ್ತಿಸ್‍ಗಡಲ್ಲಿ ಬಂಧಿಸಲಾಗಿತ್ತು. ಆರೋಪಿ ತಪ್ಪೊಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಈತ ಮಹಿಳೆಯರ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬೆದರಿಸುತ್ತಿದ್ದ. ಹೀಗೆ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದ ಮೊಬೈಲ್‍ನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಸುಲಿಗೆ, ಲೈಂಗಿಕ ಕಿರುಕುಳ ಹಾಗೂ ಕ್ರಿಮಿನಲ್ ಬೆದರಿಕೆ ಪ್ರಕರಣವನ್ನು ದಾಖಲಿಸಲಾಗಿದೆ. ನನ್ನ ಇನ್‍ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಿದ್ದು, ಹಣ ನೀಡದಿದ್ದರೆ ನಿನ್ನ ನಗ್ನ ಚಿತ್ರಗಳನ್ನು ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

    ಮಹಿಳೆಯ ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿರುವುದು ಮಾತ್ರವಲ್ಲದೆ ಆಕೆಯ ಖಾತೆಯ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿದ್ದವರಿಗೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ದೆಹಲಿಯ ಸೈಬರ್ ಸೆಲ್ ಪೊಲೀಸರು ಈ ಕುರಿತು ವಿಸ್ತೃತ ತನಿಖೆ ಆರಂಭಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಇಂಟರ್‍ನೆಟ್ ಕಾಲಿಂಗ್ ಸೌಲಭ್ಯ ಬಳಸಿ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದ ಎಂಬುದು ಈ ವೇಳೆ ತಿಳಿದಿದೆ.

    ಸೈಬರ್ ಸೆಲ್ ಪೊಲೀಸರು ಇನ್‍ಸ್ಟಾಗ್ರಾಮ್‍ನಿಂದ ಟೆಕ್ನಿಕಲ್ ವಿವರಗಳು ಹಾಗೂ ಟೆಲಿಕಾಂ ಕಂಪನಿ ನೀಡಿದ ಮಾಹಿತಿಯನ್ನಾಧರಿಸಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.

    ಆರೋಪಿ ಮಹಿಳೆಯರ ಇನ್‍ಸ್ಟಾಗ್ರಾಮ್ ಖಾತೆಯಲ್ಲಿನ ಪ್ರೊಫೈಲ್ ಫೋಟೋ ಬಳಸಿ, ಅವುಗಳನ್ನು ಮಾರ್ಫ್ ಮಾಡಿ, ನಕಲಿ ಪ್ರೊಫೈಲ್ ಫೋಟೋ ಕ್ರಿಯೇಟ್ ಮಾಡುತ್ತಿದ್ದ. ಬಳಿಕ ಇದೇ ಫೋಟೋ ಇಟ್ಟುಕೊಂಡು ಮಹಿಳೆಯರಿಗೆ ಬೆದರಿಕೆ ಒಡ್ಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.

    ಆರೋಪಿ ಬಳಿಕ ಮಹಿಳೆಯರಿಗೆ ಮೆಸೇಜ್ ಮಾಡಿ, ನಿಮ್ಮ ಬೆತ್ತಲೆ ಫೋಟೋ ನನ್ನ ಬಳಿ ಇದೆ ಎಂದು ಬೆದರಿಕೆ ಸಂದೇಶ ಕಳುಹಿಸುತ್ತಿದ್ದ. ಅವರು ಪ್ರೂಫ್ ಕೇಳಿದ ಬಳಿಕ ಮಾರ್ಫ್ ಮಾಡಿದ ಫೋಟೋಗಳನ್ನು ಕಳುಹಿಸುತ್ತಿದ್ದ. ಬಳಿಕ ಬೆದರಿಕೆ ಹಾಕುತ್ತಿದ್ದ. ಆರೋಪಿ ಝಾ ಪ್ರಸ್ತುತ ನೋಯ್ಡಾದಲ್ಲಿ ವಾಸಿಸುತ್ತಿದ್ದು, ಪದವೀಧರನಾಗಿದ್ದಾನೆ. ಫೀಶಿಂಗ್ ತಂತ್ರಗಳನ್ನು ಕಲಿತಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

  • ಫೋಟೋ ಎಡಿಟ್-ಯುವತಿಯೊಂದಿಗೆ ಆಕೆಯ ಭಾವಿಪತಿಯೂ ಆತ್ಮಹತ್ಯೆ

    ಫೋಟೋ ಎಡಿಟ್-ಯುವತಿಯೊಂದಿಗೆ ಆಕೆಯ ಭಾವಿಪತಿಯೂ ಆತ್ಮಹತ್ಯೆ

    ಚೆನ್ನೈ: ಯುವಕನೊಬ್ಬ ಫೋಟೋವನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಕ್ಕೆ ಮನನೊಂದು ಯುವತಿ ಮತ್ತು ಆಕೆಯನ್ನು ಮದುವೆಯಾಗಬೇಕಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.

    ರಾಧಿಕಾ(22) ಮತ್ತು ವಿಘ್ನೇಶ್ (22) ಆತ್ಮಹತ್ಯೆ ಮಾಡಿಕೊಂಡ ಜೋಡಿ. ಆರೋಪಿ ಪ್ರೇಮ್ ಕುಮಾರ್ ರಾಧಿಕಾಳ ಫೋಟೋವನ್ನು ಅಶ್ಲೀಲವಾಗಿ ಕಾಣುವಂತೆ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದನು. ಫೋಟೋಗಳು ವೈರಲ್ ಆದ ಬಳಿಕ ರಾಧಿಕಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಇತ್ತ ಯುವತಿಯ ಸಾವಿನ ನಂತರ ಆಕೆಯನ್ನು ಮದುವೆಯಾಗಬೇಕಿದ್ದ ವಿಘ್ನೇಶ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯಕ್ಕೆ ಯುವಕ ಪ್ರೇಮ್‍ಕುಮಾರ್ ಪೊಲೀಸರಿಗೆ ಶರಣಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ.

    ಇಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆ ಸಂಪೂರ್ಣವಾದ ಬಳಿಕ ಅವರ ದೇಹಗಳನ್ನು ತೆಗೆದುಕೊಳ್ಳಲು ಕುಟುಂಬದವರು ನಿರಾಕರಿಸಿದರು. ಅಷ್ಟೇ ಅಲ್ಲದೇ ಇಬ್ಬರು ಕುಟುಂಬದವರು ಕುರ್ವನ್ ಕುಪ್ಪಂನಲ್ಲಿ ಪ್ರತಿಭಟನೆ ಮಾಡಿದ್ದರು. ಈ ಪ್ರಕರಣದ ಹಿಂದಿನ ಉದ್ದೇಶ ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದೆ. ಜೋಡಿಯ ಸಾವಿನ ನಂತರ ಸ್ಥಳದಲ್ಲಿ ಎರಡು ಜಾತಿಗಳಿಗೆ ಸಂಬಂಧಪಟ್ಟ ಗಲಾಟೆ ನಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.

    ಮೃತ ರಾಧಿಕಾ ಕಡಲೂರಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು. ವಿಘ್ನೇಶ್ ಆನ್‍ಲೈನ್ ಅಂಗಡಿಗಾಗಿ ಡೆಲಿವರಿ ಎಕ್ಷಿಕ್ಯೂಟೀವ್ ಆಗಿ ಕೆಲಸ ಮಾಡುತ್ತಿದ್ದನು. ವಿಘ್ನೇಶ್ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ ರಾಧಿಕಾ ಫೋಟೋಗಳನ್ನು ಪ್ರೇಮ್‍ಕುಮಾರ್ ಮಾರ್ಫ್ ಮಾಡಿ ವೈರಲ್ ಮಾಡಿದ್ದಾನೆ ಎಂದು ವರದಿಯಾಗಿದೆ.

    ಒಂದು ತಿ0ಗಳ ಹಿಂದೆ ಪ್ರೇಮ್ ಕುಮಾರ್ ಮದುವೆಯಾಗುವ ಉದ್ದೇಶದಿಂದ ಅಪ್ರಾಪ್ತೆಯನ್ನು ಅಪಹರಿಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರೇಮ್ ಕುಮಾರ್ ವಿರುದ್ಧ ಮೃತ ವಿಘ್ನೇಶ್ ಸಾಕ್ಷಿ ಹೇಳಿದ್ದರು. ಬಲವಾದ ಸಾಕ್ಷಿ ಹಿನ್ನೆಲೆಯಲ್ಲಿ ಪ್ರೇಮ್‍ಕುಮಾರ್ ಜೈಲಿಗೆ ಹೋಗಿದ್ದನು. ಇತ್ತೀಚೆಗೆ ಬೇಲ್ ಪಡೆದುಕೊಂಡು ಪ್ರೇಮ್ ಕುಮಾರ್ ಹೊರ ಬಂದಿದ್ದನು ಎಂದು ವರದಿಯಾಗಿದೆ.

    ಇದರಿಂದ ಕೋಪಗೊಂಡಿದ್ದ ಪ್ರೇಮ್‍ಕುಮಾರ್ ರಾಧಿಕಾ ಫೋಟೋಗಳನ್ನು ವೈರಲ್ ಮಾಡಿದ್ದಾನೆ. ಬಳಿಕ ರಾಧಿಕಾ ಮತ್ತು ಪ್ರೇಮ್‍ಕುಮಾರ್ ಕುಟುಂಬಗಳು ಮಾತನಾಡಿ ಮಾರ್ಫ್ ಫೋಟೋಗಳನ್ನು ಡಿಲೀಟ್ ಮಾಡಲಾಗಿತ್ತು. ಆದರೂ ರಾಧಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಈ ಬಗ್ಗೆ ಪ್ರಶ್ನಿಸಲು ಹೋದಾಗ ವಿಘ್ನೇಶ್‍ನನ್ನು ಪ್ರೇಮಕುಮಾರ್ ಮತ್ತು ಆತನ ಸಹಚರರು ಕೊಲೆ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

    ನಾವು ಕೊಲೆ ಆರೋಪದ ಕುರಿತು ತನಿಖೆ ಆರಂಭಿಸಲಿಲ್ಲ. ಅವರು ದೂರು ನೀಡಿದಂತೆ ಫೋಟೋಗಳ ಮಾರ್ಫ್ ಮಾಡಿದ್ದಕ್ಕಾಗಿ ಎಫ್‍ಐಆರ್ ಸಲ್ಲಿಸಿದ್ದೇವೆ. ಜೊತೆಗೆ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮತ್ತು ಐಟಿ ಕಾಯಿದೆಯಡಿಯಲ್ಲಿ ಪ್ರೇಮ್‍ಕುಮಾರ್ ವಿರುದ್ಧ ಕೇಸ್ ದಾಖಲಾಗಿದೆ ಎಂದು ಇನ್ಸ್‌ಪೆಕ್ಟರ್‌ ತಿಳಿಸಿದ್ದಾರೆ.