Tag: Morocco

  • ಸಹರಾ ಮರುಭೂಮಿಯಲ್ಲಿ ಭಾರೀ ಮಳೆ – 50 ವರ್ಷದ ನಂತರ ಕೆರೆಗಳು ಭರ್ತಿ

    ಸಹರಾ ಮರುಭೂಮಿಯಲ್ಲಿ ಭಾರೀ ಮಳೆ – 50 ವರ್ಷದ ನಂತರ ಕೆರೆಗಳು ಭರ್ತಿ

    ರಬತ್: ಅಪರೂಪದದಲ್ಲಿ ಅಪರೂಪ ಎಂಬಂತೆ ಸಹರಾ ಮರಭೂಮಿಯಲ್ಲಿ (Sahara Desert) ಭಾರೀ ಮಳೆಯಾಗುತ್ತಿದ್ದು (Rain) 50 ವರ್ಷದ ನಂತರ ಕೆರೆಗಳು ಭರ್ತಿಯಾಗುತ್ತಿವೆ.

    ಹೌದು. ಉತ್ತರ ಆಫ್ರಿಕಾದಲ್ಲಿ ವಿಸ್ತಾರವಾಗಿ ಹರಡಿರುವ ಸಹರಾ ಮರಭೂಮಿಯಲ್ಲಿ ಈಗ ದಿಢೀರ್‌ ಮಳೆಯಾಗುತ್ತಿದೆ.

    ಆಗ್ನೇಯ ಮೊರಾಕ್ಕೊದಲ್ಲಿ (Morocco) ಎರಡು ದಿನಗಳ ಧಾರಾಕಾರ ಮಳೆಯ ನಂತರ ಸಹರಾ ಮರುಭೂಮಿಯ ಕೆಲವು ಭಾಗಗಳಲ್ಲಿ ತೀವ್ರ ಪ್ರವಾಹ ಸೃಷ್ಟಿಯಾಗಿದೆ. ಮೊರಕ್ಕೊ  ರಾಜಧಾನಿ ರಬತ್‌ನ ದಕ್ಷಿಣಕ್ಕೆ 450 ಕಿಮೀ ದೂರದಲ್ಲಿರುವ ಟಗೌನೈಟ್ ಗ್ರಾಮದಲ್ಲಿ ಸೆಪ್ಟೆಂಬರ್‌ನಲ್ಲಿ ಕೇವಲ 24 ಗಂಟೆಗಳಲ್ಲಿ 100 ಮಿ.ಮೀ ಮಳೆಯಾಗಿತ್ತು ಎಂದು ಮೊರಾಕ್ಕೊದ ಹವಾಮಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಝಗೋರಾ ಮತ್ತು ಟಾಟಾ ನಡುವಿನ ಕೆರೆ ಕಳೆದ 50 ವರ್ಷಗಳಿಂದ ಖಾಲಿಯಾಗಿತ್ತು. ಆದರೆ ಈಗ ಈ ಕೆರೆ ಭರ್ತಿಯಾಗಿರುವುದು ನಾಸಾ ಸೆರೆ ಹಿಡಿದ ಚಿತ್ರಗಳಿಂದ ದೃಢಪಟ್ಟಿದೆ.  ಇದನ್ನೂ ಓದಿ: ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 9 ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ಇಷ್ಟು ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದನ್ನು ನಾವು ಇಲ್ಲಿಯವರೆಗೆ ನೋಡಿಲ್ಲ. 30-50 ವರ್ಷಗಳ ಹಿಂದೆ ಸ್ವಲ್ಪ ಮಳೆಯಾಗಿತ್ತು ಎಂದು ಮೊರಾಕ್ಕೊದ ಹವಾಮಾನ ಸಂಸ್ಥೆಯ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ:ಮಹಾದೇವ್ ಆ್ಯಪ್ ಬೆಟ್ಟಿಂಗ್ ಹಗರಣದ ಮಾಸ್ಟರ್ ಮೈಂಡ್ ದುಬೈನಲ್ಲಿ ಅರೆಸ್ಟ್‌

    ಭಾರೀ ಮಳೆಯಿಂದ ಮೊರಕ್ಕೋದಲ್ಲಿ ಕಳೆದ ತಿಂಗಳು ನೆರೆ (Flood) ಸೃಷ್ಟಿಯಾಗಿ 18 ಮಂದಿ ಮೃತಪಟ್ಟಿದ್ದರು. ಆಗ್ನೇಯ ಭಾಗದಲ್ಲಿ ನಿರ್ಮಾಣವಾಗಿರುವ ಜಲಾಶಯಗಳು ಸೆಪ್ಟೆಂಬರ್‌ನಲ್ಲೇ ಭರ್ತಿಯಾಗಿದೆ ಎಂದು ವರದಿಯಾಗಿದೆ.

    ಉತ್ತರ, ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಾದ್ಯಂತ 9 ದಶಲಕ್ಷ ಚದರ ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಸಹಾರಾ ಮರುಭೂಮಿಯು ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದಾಗಿ ವಿಪರೀತ ಹವಾಮಾನ ಸಮಸ್ಯೆ ಎದುರಿಸುತ್ತಿದೆ. ಭವಿಷ್ಯದಲ್ಲಿ ಈ ಪ್ರದೇಶಗಳಲ್ಲಿ ಬಿರುಗಾಳಿ ಹೆಚ್ಚಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

     

  • ಮೊರಾಕ್ಕೋ ಭೂಕಂಪ; ಮೃತರ ಸಂಖ್ಯೆ 2,800 ಕ್ಕೆ ಏರಿಕೆ

    ಮೊರಾಕ್ಕೋ ಭೂಕಂಪ; ಮೃತರ ಸಂಖ್ಯೆ 2,800 ಕ್ಕೆ ಏರಿಕೆ

    ರಬತ್‌: ಮೊರಾಕ್ಕೋ (Morocco Earhquake) ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಭೂಕಂಪಕ್ಕೆ ಇದುವರೆಗೆ ಬಲಿಯಾದವರ ಸಂಖ್ಯೆ 2,800 ಕ್ಕೆ ಏರಿಕೆಯಾಗಿದೆ.

    ಕಳೆದ ಶುಕ್ರವಾರ 6.8 ತೀವ್ರತೆಯ ಭೂಕಂಪ ಸಂಭವಿಸಿ ಅಪಾರ ಸಾವು-ನೋವಾಗಿತ್ತು. ಬದುಕುಳಿದವರ ಪತ್ತೆಗಾಗಿ ದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಇದನ್ನೂ ಓದಿ: ಮೊರಾಕ್ಕೋ ಭೀಕರ ಭೂಕಂಪ – ಸಾವಿನ ಸಂಖ್ಯೆ 2012ಕ್ಕೆ ಏರಿಕೆ

    ಸ್ಪೇನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಕತಾರ್‌ನ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಭೂಕಂಪಕ್ಕೆ ಸಿಲುಕಿ 2,562 ಜನರು ಗಾಯಗೊಂಡಿದ್ದಾರೆ. ಮರ್ರಾಕೇಶ್‌ನಿಂದ 60 ಕಿ.ಮೀ. ದೂರದಲ್ಲಿರುವ ತಾಫೆಘಗ್ಟೆ ಎಂಬ ಪರ್ವತ ಹಳ್ಳಿಯಲ್ಲಿನ ಪ್ರತಿ ಕಟ್ಟಡವೂ ಭೂಕಂಪದಿಂದಾಗಿ ನಾಶವಾಗಿದೆ.

    ಶುಕ್ರವಾರ ತಡರಾತ್ರಿ ಮಧ್ಯ ಮೊರಾಕ್ಕೋದಲ್ಲಿ (Morocco Earthquake) 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಕಟ್ಟಡಗಳು ನೆಲಸಮವಾಗಿ ಅಪಾರ ಸಾವು-ನೋವಾಗಿತ್ತು. ದುರಂತಕ್ಕೆ ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ವಿಶ್ವ ನಾಯಕರು ವಿಷಾದ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಮೊರಾಕ್ಕೋದಲ್ಲಿ ಭೂಕಂಪ; ಮೃತರ ಸಂಖ್ಯೆ 820 ಕ್ಕೇರಿಕೆ

    ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿ ದುಃಖ ವ್ಯಕ್ತಪಡಿಸಿದ್ದರು. ಮೊರಾಕ್ಕೋಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊರಾಕ್ಕೋ ಭೀಕರ ಭೂಕಂಪ – ಸಾವಿನ ಸಂಖ್ಯೆ 2012ಕ್ಕೆ ಏರಿಕೆ

    ಮೊರಾಕ್ಕೋ ಭೀಕರ ಭೂಕಂಪ – ಸಾವಿನ ಸಂಖ್ಯೆ 2012ಕ್ಕೆ ಏರಿಕೆ

    ರಬತ್: ಮೊರಾಕ್ಕೋ (Morocco) ಭೀಕರ ಭೂಕಂಪಕ್ಕೆ (Earthquake) 2,012ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 2,059 ಜನ ಗಾಯಗೊಂಡಿದ್ದಾರೆ. ಇದರಲ್ಲಿ 1,404 ಮಂದಿ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

    ವಸತಿ ಕಳೆದುಕೊಂಡವರು ಸಿಕ್ಕ ಜಾಗದಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ. ಅವರ ರಕ್ಷಣೆಗಾಗಿ ಶ್ರಮಿಸಲಾಗುತ್ತಿದೆ. ಐತಿಹಾಸಿಕ ಕಟ್ಟಡಗಳೂ ಸೇರಿದಂತೆ ಮಸೀದಿ ಹಾಗೂ ಮನೆಗಳು ಉರುಳಿಬಿದ್ದಿವೆ. ಇವುಗಳ ಅವಶೇಷಗಳ ಅಡಿ ಹಲವಾರು ಜನ ಸಿಲುಕಿ ಮೃತಪಟ್ಟಿದ್ದಾರೆ. ಶವಗಳನ್ನು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೊರಾಕ್ಕೋದಲ್ಲಿ ಭೂಕಂಪ; ಮೃತರ ಸಂಖ್ಯೆ 820 ಕ್ಕೇರಿಕೆ

    ಶುಕ್ರವಾರ ತಡರಾತ್ರಿ ಸಂಭವಿಸಿದ ಭೂಕಂಪದಿಂದ ಈ ಮಟ್ಟದ ಹಾನಿ ಸಂಭವಿಸಿದೆ. ಈ ಭೂಕಂಪ 6.8 ರಷ್ಟು ತೀವ್ರತೆ ಹೊಂದಿತ್ತು. ಭೂಕಂಪದ ಕೇಂದ್ರಬಿಂದು ಮಾರಾಕೆಚ್‌ನ ನೈಋತ್ಯಕ್ಕೆ 72 ಕಿಮೀ ದೂರದಲ್ಲಿದೆ. ಭೂಕಂಪವು 18.5 ಕಿಮೀ ಆಳದಲ್ಲಿ ಆಗಿರುವುದು ದಾಖಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.

    ಈ ದುರಂತದಲ್ಲಿ ಸಂಬಂಧಿಗಳನ್ನು ಕಳೆದುಕೊಂಡ ಜನ ದುಃಖದಲ್ಲಿ ಕಣ್ಣೀರಿಡುವ ದೃಶ್ಯಗಳು ಎಲ್ಲಾ ಕಡೆ ಕಾಣುತ್ತಿದೆ. ಮಕ್ಕಳನ್ನು ಕಳೆದುಕೊಂಡ ತಾಯಿ ಅವರ ಹುಡುಕಾಟದಲ್ಲಿ ಅಲೆಯುವ ದೃಶ್ಯಗಳು ಕರುಳು ಹಿಂಡುವಂತಿವೆ. ಅಲ್ಲದೇ ಆಹಾರ ಹಾಗೂ ಸರಿಯಾದ ಕುಡಿಯುವ ನೀರು ಜನರಿಗೆ ಸಿಗುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರ ನಡುವೆ ಅವಶೇಷಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯಗಳು ನಡೆಯುತ್ತಿದೆ. ನೀರು ಹಾಗೂ ಆಹಾರದ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೊರಾಕ್ಕೋದಲ್ಲಿ ಪ್ರಬಲ ಭೂಕಂಪಕ್ಕೆ 300 ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊರಾಕ್ಕೋದಲ್ಲಿ ಭೂಕಂಪ; ಮೃತರ ಸಂಖ್ಯೆ 820 ಕ್ಕೇರಿಕೆ

    ಮೊರಾಕ್ಕೋದಲ್ಲಿ ಭೂಕಂಪ; ಮೃತರ ಸಂಖ್ಯೆ 820 ಕ್ಕೇರಿಕೆ

    ಕಾಸಾಬ್ಲಾಂಕಾ: ಶುಕ್ರವಾರ ತಡರಾತ್ರಿ ಮಧ್ಯ ಮೊರಾಕ್ಕೋದಲ್ಲಿ (Morocco Earthquake) ಸಂಭವಿಸಿದ 6.8 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ಮೃತಪಟ್ಟವರ ಸಂಖ್ಯೆ 820 ಕ್ಕೆ ಏರಿಕೆಯಾಗಿದೆ. ಅಪಾರ ಸಂಖ್ಯೆಯಲ್ಲಿ ಜನ ಗಾಯಗೊಂಡಿದ್ದಾರೆ.

    ಮೊರಾಕ್ಕೋದ ಆಂತರಿಕ ಸಚಿವಾಲಯ ಶನಿವಾರ ಮುಂಜಾನೆ ಹೇಳಿದ್ದು, ಭೂಕಂಪವಾದ ಪ್ರದೇಶಕ್ಕೆ ಸಮೀಪವಿರುವ ಪ್ರಾಂತ್ಯಗಳಲ್ಲಿ ಕನಿಷ್ಠ 820 ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡ 300 ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನಗರಗಳು ಮತ್ತು ಪಟ್ಟಣಗಳ ಹೊರಗೆ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಮೊರಾಕ್ಕೋದಲ್ಲಿ ಪ್ರಬಲ ಭೂಕಂಪಕ್ಕೆ 300 ಬಲಿ

    ಭೂಕಂಪದಿಂದ ಮೃತಪಟ್ಟವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಅವರು, “ಮೊರಾಕ್ಕೋದಲ್ಲಿ ಭೂಕಂಪದಿಂದ ಆಗಿರುವ ಜೀವಹಾನಿಯಿಂದ ತೀವ್ರ ನೋವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಈ ಕಷ್ಟದ ಸಮಯದಲ್ಲಿ ಮೊರಾಕ್ಕೋಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಾಗಿದೆ” ಎಂದು ತಿಳಿಸಿದ್ದಾರೆ.

    ಶುಕ್ರವಾರ ರಾತ್ರಿ 11:11 ಗಂಟೆಗೆ 6.8 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಮೊರಾಕ್ಕೋದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ಅಲರ್ಟ್ ನೆಟ್‌ವರ್ಕ್ ಇದನ್ನು ರಿಕ್ಟರ್ ಮಾಪಕದಲ್ಲಿ 7 ತೀವ್ರತೆ ಎಂದು ಇದೆ. ಇದನ್ನೂ ಓದಿ: ಮಾಲಿಯಲ್ಲಿ ಪ್ರಯಾಣಿಕ ಬೋಟ್, ಸೇನಾ ನೆಲೆಯ ಮೇಲೆ ಉಗ್ರರ ದಾಳಿ – 64 ಮಂದಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊರಾಕ್ಕೋದಲ್ಲಿ ಪ್ರಬಲ ಭೂಕಂಪಕ್ಕೆ 300 ಬಲಿ

    ಮೊರಾಕ್ಕೋದಲ್ಲಿ ಪ್ರಬಲ ಭೂಕಂಪಕ್ಕೆ 300 ಬಲಿ

    ರಬತ್: ಶುಕ್ರವಾರ ತಡರಾತ್ರಿ ಮೊರಾಕ್ಕೋದಲ್ಲಿ (Morocco) ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ (Earthquake) 300 ಜನ ಮೃತಪಟ್ಟ ವರದಿಯಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಮೊರಾಕ್ಕೋದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ಅಲರ್ಟ್ ನೆಟ್‍ವರ್ಕ್ ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿದೆ. ಪ್ರಸಿದ್ಧ ಪ್ರವಾಸಿ ತಾಣವಾದ ಮರಕೇಶ್‍ನ ನೈಋತ್ಯದ 71 ಕಿಲೋಮೀಟರ್ ದೂರದ 18.5 ಕಿಮೀ ಆಳದಲ್ಲಿದೆ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಕಂಪದ ತೀವ್ರತೆಗೆ ಪುರಾತನ ಕಟ್ಟಡಗಳು ಸೇರಿದಂತೆ ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ. ಇದನ್ನೂ ಓದಿ: ಭ್ರಷ್ಟಾಚಾರ ಕೇಸ್‌ – ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್‌

    ಭೂಕಂಪದಿಂದಾಗಿ ನಗರದಲ್ಲಿ ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಸ್ಥಗಿತಗೊಂಡಿದೆ. ಈಗ ತಾತ್ಕಾಲಿಕ ನೆಟ್‍ವರ್ಕ್ ವ್ಯವಸ್ಥೆ ಮಾಡಲಾಗಿದೆ. ಅವಶೇಷಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನೆರೆಯ ಅಲ್ಜೀರಿಯಾದಲ್ಲಿಯೂ ಭೂಕಂಪದ ಅನುಭವವಾಗಿದ್ದು, ಯಾವುದೇ ಹಾನಿ ಅಥವಾ ಸಾವುನೋವುಗಳನ್ನು ಉಂಟುಮಾಡಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

    2004 ರಲ್ಲಿ ಈಶಾನ್ಯ ಮೊರಾಕ್ಕೋದ ಅಲ್ ಹೋಸಿಮಾದಲ್ಲಿ ಭೂಕಂಪ ಸಂಭವಿಸಿದಾಗ ಕನಿಷ್ಠ 628 ಜನರು ಸಾವನ್ನಪ್ಪಿದ್ದರು ಮತ್ತು 926 ಜನರು ಗಾಯಗೊಂಡಿದ್ದರು. 1980 ರಲ್ಲಿ ನೆರೆಯ ಅಲ್ಜೀರಿಯಾದಲ್ಲಿ (Algeria) 7.3 ತೀವ್ರತೆಯ ಭೂಕಂಪವು 2,500 ಜನರ ಸಾವಿಗೆ ಕಾರಣವಾಗಿತ್ತು. ಅಲ್ಲದೇ ಕನಿಷ್ಠ 300,000 ಜನರನ್ನು ನಿರಾಶ್ರಿತರನ್ನಾಗಿ ಮಾಡಿತ್ತು. ಇದನ್ನೂ ಓದಿ: ಸೆ.11ಕ್ಕೆ ಬೆಂಗಳೂರು ಬಂದ್ – ಏನಿದೆ? ಏನಿರಲ್ಲ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊರೊಕ್ಕೊ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ

    ಮೊರೊಕ್ಕೊ ವಿರುದ್ಧ ಪಂದ್ಯ ಸೋತ ಬೆಲ್ಜಿಯಂ – ಅಭಿಮಾನಿಗಳಿಂದ ಹಿಂಸಾಚಾರ

    ಬೆಲ್ಜಿಯನ್: ಫಿಫಾ ವಿಶ್ವಕಪ್‍ನಲ್ಲಿ (FIFA World Cup) ಮೊರೊಕ್ಕೊ (Morocco) ವಿರುದ್ಧ ಬೆಲ್ಜಿಯಂ (Belgium) ಸೋತ ಬೆನ್ನಲ್ಲೇ ಬೆಲ್ಜಿಯನ್‍ನಲ್ಲಿ ಅಭಿಮಾನಿಗಳು ರೊಚ್ಚಿಗೆದ್ದು ಹಿಂಸಾಚಾರಕ್ಕಿಳಿದಿದ್ದಾರೆ.

    ಬೆಲ್ಜಿಯಂ ವಿರುದ್ಧ ಮೊರೊಕ್ಕೊ 2-0 ಅಂತರದಲ್ಲಿ ಗೆದ್ದ ಬೆನ್ನಲ್ಲೇ ಇತ್ತ ಬೆಲ್ಜಿಯಂ ರಾಜಧಾನಿ ಬೆಲ್ಜಿಯನ್‍ನಲ್ಲಿ ಫುಟ್‍ಬಾಲ್ ಅಭಿಮಾನಿಗಳು ಹಿಂಸಾಚಾರಕ್ಕೆ ಇಳಿದಿದ್ದಾರೆ. ರಸ್ತೆಯಲ್ಲಿದ್ದ ಕಾರ್, ಬೈಕ್‍ಗಳಿಗೆ ಬೆಂಕಿ ಇಟ್ಟು ಮೊರೊಕ್ಕೊ ದೇಶದ ಧ್ವಜವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೆಸ್ಸಿ ಆಟ ನೋಡಲು ಕಿಕ್ಕಿರಿದ ಅಭಿಮಾನಿಗಳು – 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಜನ!

    ಫುಟ್‍ಬಾಲ್ ಅಭಿಮಾನಿಗಳ ಕೋಪಕ್ಕೆ ಹಿಂಸಾಚಾರ ಹೆಚ್ಚುತ್ತಿದ್ದಂತೆ ಬೆಲ್ಜಿಯಂ ಪೊಲೀಸರು 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕಾಡಿದ ವರುಣ – 2ನೇ ಏಕದಿನ ಪಂದ್ಯ 12 ಓವರ್‌ಗಳಿಗೆ ಅಂತ್ಯ

    ಹಿಂಸಾಚಾರಕ್ಕೆ ಇಳಿದ ಗುಂಪೊಂದು ರಾಷ್ಟ್ರೀಯ ಹೆದ್ದಾರಿಗಿಳಿದು ದಾಂಧಲೆಗೆ ಮುಂದಾಗಿದೆ. ಘಟನೆಯಲ್ಲಿ ಪತ್ರಕರ್ತರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದು, ಪೊಲೀಸರು ಹಿಂಸಾಚಾರದ ಸ್ಥಳದಲ್ಲಿ ಟಿಯರ್ ಗ್ಯಾಸ್ ಹಾಗೂ ನೀರು ಸಿಂಪಡಿಸಿ ಜನರನ್ನು ಚದುರಿಸಿದ್ದಾರೆ. ಈಗಾಗಲೇ ಬೆಲ್ಜಿಯನ್‍ನಲ್ಲಿ ಹಲವು ನಿರ್ಬಂಧಗಳನ್ನು ಹೊರಡಿಸಲಾಗಿದ್ದು, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸ್ಥಳೀಯ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಮೆರಿಕ ರಾಯಭಾರಿಯಾಗಿ ಬೈಡೆನ್‌ನಿಂದ ಮತ್ತೊಬ್ಬ ಭಾರತೀಯನ ನಾಮನಿರ್ದೇಶನ

    ಅಮೆರಿಕ ರಾಯಭಾರಿಯಾಗಿ ಬೈಡೆನ್‌ನಿಂದ ಮತ್ತೊಬ್ಬ ಭಾರತೀಯನ ನಾಮನಿರ್ದೇಶನ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕಳೆದ ವಾರ ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಸಾಮಾಜಿಕ ಕಾರ್ಯಕರ್ತೆ ಶೇಫಾಲಿ ರಜ್ದಾನ್ ದುಗ್ಗಾಲ್‌ರ ನಾಮನಿರ್ದೇಶನ ಮಾಡಿದ್ದರು. ಇದೀಗ ಬೈಡೆನ್ ಉತ್ತರ ಆಫ್ರಿಕಾದ ಮೊರೊಕ್ಕೊ ದೇಶಕ್ಕೂ ಅಮೆರಿಕ ರಾಯಭಾರಿಯಾಗಿ ಭಾರತೀಯ ಮೂಲದ ವ್ಯಕ್ತಿಯೊಬ್ಬರನ್ನು ನಾಮನಿರ್ದೇಶನ ಮಾಡಿದ್ದಾರೆ.

    ಜೋ ಬೈಡೆನ್ ಕೇವಲ 1 ವಾರದಲ್ಲಿ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳನ್ನು ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದ್ದಾರೆ. ಪುನೀತ್ ತಲ್ವಾರ್ ಅಮೆರಿಕ ರಾಯಭಾರಿಯಾಗಿ ನಾಮನಿರ್ದೇಶನಗೊಂಡ ಭಾರತೀಯ ಮೂಲದ 2ನೇ ವ್ಯಕ್ತಿಯಾಗಿದ್ದಾರೆ. ಇದನ್ನೂ ಓದಿ: ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ಭಾರತ ಮೂಲದ ಮಹಿಳೆ ನಾಮನಿರ್ದೇಶನ

    ಪುನೀತ್ ತಲ್ವಾರ್ ಯಾರು?
    ಪುನೀತ್ ತಲ್ವಾರ್ ವಿದೇಶಾಂಗ ಇಲಾಖೆ, ಶ್ವೇತಭವನ ಮತ್ತು ಸೆನೆಟ್‌ನಲ್ಲಿ ಹಿರಿಯ ರಾಷ್ಟ್ರೀಯ ಭದ್ರತೆ ಹಾಗೂ ವಿದೇಶಾಂಗ ನೀತಿಯಲ್ಲಿ ಸ್ಥಾನಗಳನ್ನು ಹೊಂದಿದ್ದಾರೆ. ಸದ್ಯ ತಲ್ವಾರ್ ಸ್ಟೇಟ್ ಡಿಪಾರ್ಟ್ಮೆಂಟ್‌ನಲ್ಲಿ ಹಿರಿಯ ಸಲಹೆಗಾರರಾಗಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

    ತಲ್ವಾರ್ ಈ ಹಿಂದೆ ರಾಜಕೀಯ-ಮಿಲಿಟರಿ ವ್ಯವಹಾರಗಳ ಸಹಾಯಕ ರಾಜ್ಯ ಕಾರ್ಯದರ್ಶಿಯಾಗಿ, ಅಧ್ಯಕ್ಷರ ವಿಶೇಷ ಸಹಾಯಕ, ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಹಿರಿಯ ನಿರ್ದೇಶಕ ಹಾಗೂ ವಿಶ್ವಸಂಸ್ಥೆಯ ಸೆನೆಟ್‌ನಲ್ಲಿ ವಿದೇಶಿ ಸಂಬಂಧಗಳ ಸಮಿತಿಯಲ್ಲಿ ಹಿರಿಯ ವೃತ್ತಿಪರ ಸಿಬ್ಬಂದಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಮೂಲದ ಗೆಳತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗ್ಲೆನ್ ಮ್ಯಾಕ್ಸ್‌ವೆಲ್

    ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಬಿಎಸ್ ಪದವಿಯನ್ನು ಪಡೆದು, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ವ್ಯವಹಾರ (ಇಂಟರ್‌ನ್ಯಾಷನಲ್ ಅಫರ‍್ಸ್)ಗಳಲ್ಲಿ ಎಂಎ ವ್ಯಾಸಂಗ ಮಾಡಿದ್ದಾರೆ.

    ಮಾರ್ಚ್ 11 ರಂದು ಬೈಡೆನ್ ಭಾರತೀಯ ಮೂಲದ ರಾಜಕೀಯ ಕಾರ್ಯಕರ್ತೆ ಶೆಫಾಲಿ ರಜ್ದಾನ್ ದುಗ್ಗಾಲ್ ಅವರನ್ನು ನೆದರ್‌ಲ್ಯಾಂಡ್‌ನ ಅಮೆರಿಕ ರಾಯಭಾರಿಯಾಗಿ ನಾಮನಿರ್ದೇಶನ ಮಾಡಿದ್ದರು. ಶೆಫಾಲಿ ಭಾರತದ ಕಾಶ್ಮೀರದಿಂದ ಅಮೆರಿಕಗೆ ತಮ್ಮ ಸಣ್ಣ ಪ್ರಾಯದಲ್ಲಿಯೇ ವಲಸೆ ಹೋಗಿದ್ದರು. ಶೆಫಾಲಿ ಸಿನ್ಸಿನಾಟಿ, ಚಿಕಾಗೋ, ನ್ಯೂಯಾರ್ಕ್ ಹಾಗೂ ಬೋಸ್ಟನ್ ನಗರಗಳಲ್ಲಿ ಬೆಳೆದಿದ್ದರು.

  • ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ರಬತ್: ಅಪರೂಪದಲ್ಲಿ ಅಪರೂಪ ಎಂಬಂತೆ ಮೊರಕ್ಕೊದಲ್ಲಿ ಮಹಾತಾಯಿಯೊಬ್ಬಳು ಒಂದೇ ಬಾರಿ 9 ಮಂದಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.

    ಪಶ್ಚಿಮ ಆಫ್ರಿಕಾ ಖಂಡದಲ್ಲಿರುವ ಮಾಲಿ ದೇಶದ ಮಹಿಳೆ ಮಂಗಳವಾರ  5 ಹೆಣ್ಣು, 4 ಗಂಡು ಮಕ್ಕಳನ್ನು ಹೆತ್ತಿದ್ದಾಳೆ. ಆಸ್ಪತ್ರೆಗೆ ದಾಖಲಾದ ಬಳಿಕ 7 ಮಂದಿ ಮಕ್ಕಳು ಜನಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈ ನೀರಿಕ್ಷೆಗೂ ಮೀರಿ 9 ಮಂದಿ ಜನಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ.

    ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಮೊರೊಕ್ಕೊ ಆರೋಗ್ಯ ಸಚಿವಾಲಯ ತಿಳಿಸಿದೆ. ಆರೋಗ್ಯ ಸಚಿವಾಲಯ ವಕ್ತಾರರು ಪ್ರತಿಕ್ರಿಯಿಸಿ, ದೇಶದಲ್ಲಿ ಇದು ಬಹಳ ಅಪರೂಪ. ಈ ರೀತಿ 9 ಮಕ್ಕಳಿಗೆ ಒಂದೇ ಬಾರಿ ಜನ್ಮ ನೀಡಿದ್ದು ಇದೇ ಮೊದಲು ಎಂದು ತಿಳಿಸಿದ್ದಾರೆ.

    ಗರ್ಭಿಣಿಯಾದಾಗ ಆಲ್ಟ್ರಾ ಸೌಂಡ್ ಪರೀಕ್ಷೆ ಮಾಡಿದ್ದು, 7 ಮಂದಿ ಮಕ್ಕಳು ಜನಿಸಬಹುದು ಎಂಬ ನಿರೀಕ್ಷೆ ಇತ್ತು. ಒಂದು ವೇಳೆ ಡೆಲಿವರಿ ಸಮಯದಲ್ಲಿ ಯಾವುದೇ ಸಮಸ್ಯೆ ಆಗಬಾರದು ಎಂಬ ಎಂಬ ಕಾರಣಕ್ಕೆ ಮಹಿಳೆಯನ್ನು ಮೊರಕ್ಕೊ ದೇಶದ ಉತ್ತಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರು ನೀಡಿದ ಸಲಹೆಯ ಮೇರೆಗೆ ಮಾಲಿ ಸರ್ಕಾರ ಮಹಿಳೆಯನ್ನು ಮಾ.30 ರಂದು ಮೊರಕ್ಕೊ ದೇಶಕ್ಕೆ ಶಿಫ್ಟ್ ಮಾಡಿತ್ತು.

    7 ಮಂದಿ ಮಕ್ಕಳು ಜನಿಸುವುದು ಅಪರೂಪ. ಅದರಲ್ಲೂ 9 ಮಂದಿ ಜನಿಸುವುದು ಅಪರೂಪದಲ್ಲಿ ಅಪರೂಪ.

  • ರ‍್ಯಾಂಪ್‌  ಮೇಲೆ ಮಾಡೆಲ್ ಜೊತೆ ‘ಕ್ಯಾಟ್’ವಾಕ್ ಮಾಡಿ ಮೂತ್ರವಿಸರ್ಜನೆ – ವಿಡಿಯೋ

    ರ‍್ಯಾಂಪ್‌  ಮೇಲೆ ಮಾಡೆಲ್ ಜೊತೆ ‘ಕ್ಯಾಟ್’ವಾಕ್ ಮಾಡಿ ಮೂತ್ರವಿಸರ್ಜನೆ – ವಿಡಿಯೋ

    ರಾಬಟ್: ಮೊರಕ್ಕೋದಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಬೆಕ್ಕೊಂದು ವಾಕ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.

    ಮರಾಕೇಶ್‍ನಲ್ಲಿ ನಡೆದ ಕ್ರಿಶ್ಚಿಯನ್ ಡಿಯರ್ ಫ್ಯಾಷನ್ ಶೋ ನಡೆಯುವ ವೇಳೆ ಅಲ್ಲಿ ಬೆಕ್ಕೊಂದು ಮಾಡೆಲ್‍ಗಳ ಕ್ಯಾಟ್ ವಾಕ್ ವಿರುದ್ಧವಾಗಿ ನಡೆದುಕೊಂಡು ಹೋಗಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

    ಶೋಗೆ ಬಂದಿದ್ದ ಪ್ರೇಕ್ಷಕರ ಜೋರಾಗಿ ಕಿರುಚುವ ಶಬ್ದದ ನಡುವೆಯು ಸ್ಥಳಕ್ಕೆ ಎಂಟ್ರಿ ಕೊಟ್ಟಿದೆ. ನಡೆದುಕೊಂಡು ಮುಂದೆ ಪ್ರೇಕ್ಷಕರ ಗುಂಪಿನೊಳಗೆ ಹೋಗಿ ಮೂತ್ರವಿಸರ್ಜನೆ ಮಾಡಿ ಅಲ್ಲಿಂದ ಜನರೊಳಗೆ ಕಣ್ಮರೆಯಾಗಿದೆ.

    ಫ್ಯಾಷನ್ ಶೋಗಳಲ್ಲಿ ಪ್ರಾಣಿಗಳು ಕಾಣಿಸಿಕೊಂಡಿರುವುದು ಇದೇ ಮೊದಲೆನಲ್ಲ. ಜನವರಿ ತಿಂಗಳಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಬಾಲಿವುಡ್ ನಟ ಸಿದ್ಧರ್ಥ್ ಮೊಲ್ಹೋತ್ರಾ ಪಾಲ್ಗೊಂಡಿದ್ದ ಫ್ಯಾಶನ್ ಶೋದಲ್ಲಿ ನಾಯಿಯೊಂದು ಭಾಗವಹಿಸಿತ್ತು.