Tag: Morning Consult

  • ಜಾಗತಿಕ ನಾಯಕರ ಪಟ್ಟಿ ರಿಲೀಸ್‌ – ಮೋದಿಯೇ ನಂಬರ್‌ 1

    ಜಾಗತಿಕ ನಾಯಕರ ಪಟ್ಟಿ ರಿಲೀಸ್‌ – ಮೋದಿಯೇ ನಂಬರ್‌ 1

    ನವದೆಹಲಿ: ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶ್ವ ನಾಯಕರ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

    ಯುಎಸ್ ಮೂಲದ ಕನ್ಸಲ್ಟೆನ್ಸಿ ಸಂಸ್ಥೆಯ ‘ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್’ ಪ್ರಕಾರ ಭಾರತದಲ್ಲಿ ಶೇ.76 ರಷ್ಟು ಜನರು ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2ನೇ ಸ್ಥಾನವನ್ನು ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್‌ ಮ್ಯಾನುಯಲ್‌ ಲೋಪೆಜ್ ಒಬ್ರಡಾರ್ ಪಡೆದಿದ್ದಾರೆ. ಅವರ ನಾಯಕತ್ವಕ್ಕೆ ಶೇ.66 ಬೆಂಬಲ ವ್ಯಕ್ತವಾಗಿದೆ. ಇದನ್ನೂ ಓದಿ: ‘ಸೋ ಬ್ಯೂಟಿಫುಲ್‌’..: ಸಂಸತ್‌ ಭವನ ಕಣ್ತುಂಬಿಕೊಂಡು ಖುಷಿಪಟ್ಟ ಇನ್ಫೋಸಿಸ್‌ ಸುಧಾಮೂರ್ತಿ

    58% ನೊಂದಿಗೆ ಸ್ವಿಟ್ಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ ಮೂರನೇ ಸ್ಥಾನ ಪಡೆದಿದ್ದಾರೆ. ಹಿಂದಿನ ಸಮೀಕ್ಷೆಗಳಲ್ಲೂ ಪ್ರಧಾನಿ ಮೋದಿ ಜಾಗತಿಕ ರೇಟಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್ 37% ಅನುಮೋದನೆ ಹೊಂದಿದ್ದಾರೆ.

    ಕೆನಡಾದ ಪಿಎಂ ಜಸ್ಟಿನ್ ಟ್ರುಡೊಗೆ 31%, ಭಾರತದ ಅಳಿಯನೂ ಆಗಿರುವ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ರೇಟಿಂಗ್ 25% ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ 24 % ರೇಟಿಂಗ್‌ ಮೂಲಕ ನಂತರದ ಸ್ಥಾನಗಳಲ್ಲಿದ್ದಾರೆ. ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ನಿಧನಕ್ಕೆ ಪಿಎಂ ಮೋದಿ ಸಂತಾಪ

    ಪ್ರಧಾನಿ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು (BJP) ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ವಿಜಯ ದಾಖಲಿಸಿದರು. ನಂತರ ಈ ರೇಟಿಂಗ್‌ಗಳು ಬಂದಿವೆ. ಪ್ರಧಾನಿ ಮೋದಿ ಇತ್ತೀಚೆಗೆ ಯುಎಇಯಲ್ಲಿ ನಡೆದ COP-28 ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

  • ಈಗಲೂ ಮೋದಿ ನಂ.1 ಜನಪ್ರಿಯ ನಾಯಕ

    ಈಗಲೂ ಮೋದಿ ನಂ.1 ಜನಪ್ರಿಯ ನಾಯಕ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ಈಗಲೂ ನಂ.1 ಜನಪ್ರಿಯ ನಾಯಕ(Most Popular World Leader) ಪಟ್ಟದಲ್ಲೇ ಮುಂದುವರಿದಿದ್ದಾರೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

    ಜನರು ಮೆಚ್ಚಿದ ಗಣ್ಯರ ಪೈಕಿ ಜಗತ್ತಿನಲ್ಲೇ ನಂ.1 ಎಂಬ ಪಟ್ಟದಲ್ಲಿ ಮುಂದುವರಿಯುವುದರ ಜೊತೆಗೆ ಮೋದಿ ಜನಪ್ರಿಯತೆ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಮಾರ್ನಿಂಗ್ ಕನ್ಸಲ್ಟ್‌(Morning Consult) ಹೇಳಿದೆ.

    22 ದೇಶಗಳ ನಾಯಕರ ಸಾಧನೆ ಆಧರಿಸಿ ಸಂಸ್ಥೆ ಆನ್‌ಲೈನ್‌ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಶೇ.77ರಷ್ಟು ಅಪ್ರೂವಲ್‌ ರೇಟಿಂಗ್‌ನೊಂದಿಗೆ ಜಗತ್ತಿನಲ್ಲೇ ಅತಿ ಹೆಚ್ಚು ಅಂಕ ಪಡೆದ ದೇಶದ ನಾಯಕರಾಗಿ ಮೋದಿ ಹೊರಹೊಮ್ಮಿದ್ದಾರೆ.

    ಸತತ 8 ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿರುವ ಮೋದಿ ಕಳೆದ ಆಗಸ್ಟ್‌ ಮತ್ತು ಜನವರಿಯಲ್ಲಿ ಪ್ರಕಟಗೊಂಡಿದ್ದ ವರದಿಯಲ್ಲೂ ಮೊದಲ ಸ್ಥಾನವನ್ನು ಪಡೆದಿದ್ದರು. ಮೋದಿಯವರಿಗೆ ಜನವರಿಯಲ್ಲಿ ಶೇ.72, ಆಗಸ್ಟ್‌ನಲ್ಲಿ ಶೇ.75ರಷ್ಟು ಅಪ್ರೂವಲ್‌ ರೇಟಿಂಗ್‌ ಸಿಕ್ಕಿತ್ತು. ಇದನ್ನೂ ಓದಿ: ಬಾವ್ಲಾ ರ‍್ಯಾಲಿ ವೇಳೆ ಮೋದಿಗೆ ಭದ್ರತಾ ಲೋಪ – ನಿಯಮ ಉಲ್ಲಂಘಿಸಿ ಡ್ರೋನ್ ಹಾರಿಸಿದ ಮೂವರು ವಶಕ್ಕೆ

    ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬ್ರೆಜಿಲ್, ಕೆನಡಾ, ಜೆಕ್ ರಿಪಬ್ಲಿಕ್, ಫ್ರಾನ್ಸ್, ಜರ್ಮನಿ, ಭಾರತ, ಐರ್ಲೆಂಡ್, ಇಟಲಿ, ಜಪಾನ್, ಮೆಕ್ಸಿಕೋ, ನೆದರ್‌ಲ್ಯಾಂಡ್‌, ನಾರ್ವೆ, ಪೋಲೆಂಡ್, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕ ದೇಶವನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗಿತ್ತು.

    ಟಾಪ್‌ 5 ಸ್ಥಾನದಲ್ಲಿ ಯಾರಿದ್ದಾರೆ?
    ನರೇಂದ್ರ ಮೋದಿ(ಶೇ.77), ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಥೊನಿ ಅಲ್ಬನೀಸೆ (ಶೇ.56), ಅಮೆರಿಕದ ಅಧ್ಯಕ್ಷ ಜೋ ಬೈಡನ್‌(ಶೇ.41), ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ(ಶೇ.38), ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌(ಶೇ.36), ಜಪಾನ್‌ ಪ್ರಧಾನಿ ಫ್ಯೂಮಿಯೋ ಕಿಶಿಡಾ (ಶೇ.23) ಅನಕ್ರಮವಾಗಿ ಮೊದಲ 5 ಸ್ಥಾನವನ್ನು ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಶ್ವ ನಾಯಕರ ಪೈಕಿ ಶೇ.66 ಅಂಕದೊಂದಿಗೆ ಮೋದಿ ನಂಬರ್ 1

    ವಿಶ್ವ ನಾಯಕರ ಪೈಕಿ ಶೇ.66 ಅಂಕದೊಂದಿಗೆ ಮೋದಿ ನಂಬರ್ 1

    ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವದ 13 ದೇಶಗಳ ನಾಯಕರ ಪೈಕಿ ಶೇ.66 ಅಂಕಗಳೊಂದಿಗೆ ನಂ 1 ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ಹಲವು ದೇಶಗಳ ನಾಯಕರನ್ನು ಹಿಂದಿಕ್ಕಿದ್ದಾರೆ.

    ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್ ಎಂಬ ಡೇಟಾ ಇಂಟೆಲಿಜೆನ್ಸ್ ಸಂಸ್ಥೆ ಈ ರೇಟಿಂಗ್‍ನ್ನು ಮೋದಿಗೆ ನೀಡಿದೆ. ಈ ಸಂಸ್ಥೆ ಪ್ರತಿ ವರ್ಷ ವಿಶ್ವದ ಅಗ್ರಗಣ್ಯ ನಾಯಕರ ಬಗ್ಗೆ ರೇಟಿಂಗ್ ಕಲೆಹಾಕುತ್ತದೆ. ಈ ಪೈಕಿ ಮೋದಿ ಅವರಿಗೆ ಶೇ.66 ರೇಟಿಂಗ್ ಪಡೆದುಕೊಂಡು ಮೊದಲ ಸ್ಥಾನ ಪಡೆದಿದ್ದಾರೆ. ಮೋದಿ ಅವರು ಭಾರತದಲ್ಲಿ ಕೊರೊನಾ ಎರಡನೇ ಅಲೆಯನ್ನು ದಿಟ್ಟವಾಗಿ ಎದುರಿಸಲು ತೆಗೆದುಕೊಂಡ ನಿರ್ಧಾರ ಮತ್ತು ದೇಶವನ್ನು ಮುನ್ನಡೆಸುತ್ತಿರುವ ರೀತಿಗೆ ಈ ರೇಟಿಂಗ್ ಬಂದಿದೆ ಎಂದು ವರದಿಯಾಗಿದೆ. ಈ ನಡುವೆ ಶೇ.28 ರೇಟಿಂಗ್ ಮೋದಿಯವರ ವಿರುದ್ಧ ಬಂದಿದೆ. ಇದನ್ನೂ ಓದಿ: ಕೃಷಿ ಕಾನೂನು ವಾಪಸ್ ಪಡೆಯಲ್ಲ: ಕೇಂದ್ರ ಕೃಷಿ ಸಚಿವ ತೋಮರ್

    ಮೋದಿ ಬಳಿಕ ಅಧಿಕ ರೇಟಿಂಗ್ ಪಡೆದವರ ಪೈಕಿ ಶೇ. 65 ರೇಟಿಂಗ್ ನೊಂದಿಗೆ ಇಟಲಿಯ ಪ್ರಧಾನಿ ಮಾರಿಯೋ ದಾರ್ಗಿ ಎರಡನೇ ಸ್ಥಾನದಲ್ಲಿದ್ದಾರೆ. ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶೇ 63 ರೇಟಿಂಗ್ ಪಡೆದರೆ, ಶೇ 54 ರೇಟಿಂಗ್ ಪಡೆದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ 4ನೇ ಸ್ಥಾನದಲ್ಲಿದ್ದಾರೆ. ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಶೇ.53 ರೇಟಿಂಗ್ ಪಡೆದು ಐದನೇ ಸ್ಥಾನದಲ್ಲಿದ್ದಾರೆ. ಯುಎಸ್ ನ ಅಧ್ಯಕ್ಷ ಜೋ ಬಿಡೆನ್ ಶೇ. 53 ರೇಟಿಂಗ್ ಪಡೆದು ಆರನೇ ಸ್ಥಾನ ಪಡೆದುಕೊಂಡಿದ್ದಾರೆ.