Tag: Morne Morkel

  • ಟೀಂ ಇಂಡಿಯಾ ಜೊತೆ ಸೇರಿದ ಹೊಸ ಬೌಲಿಂಗ್ ಕೋಚ್ ಮಾರ್ಕೆಲ್

    ಟೀಂ ಇಂಡಿಯಾ ಜೊತೆ ಸೇರಿದ ಹೊಸ ಬೌಲಿಂಗ್ ಕೋಚ್ ಮಾರ್ಕೆಲ್

    – ಖುಷಿ ಹಂಚಿಕೊಂಡ ವೀಡಿಯೋ ಅಪ್‌ಲೋಡ್ ಮಾಡಿದ BCCI

    ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್‌ ಸರಣಿಗೆ ನಿರೀಕ್ಷೆ ಹೆಚ್ಚುತ್ತಿದ್ದಂತೆ, ಮಹತ್ವದ ಬೆಳವಣಿಗೆಯೊಂದು ನಡೆದಿದೆ. ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ ಮೋರ್ನೆ ಮಾರ್ಕೆಲ್ (Morne Morkel), ಟೀಮ್ ಇಂಡಿಯಾಗೆ (Team India) ಹೊಸ ಬೌಲಿಂಗ್ ಕೋಚ್ ಆಗಿ ಸೇರಿಕೊಂಡಿದ್ದಾರೆ.

    ಈ ಖುಷಿ ವಿಚಾರವನ್ನು ಬಿಸಿಸಿಐ (BCCI) ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಮೊದಲ ಟೆಸ್ಟ್ ಸೆ.19 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಇದನ್ನೂ ಓದಿ: ವಿರಾಟ್ ಕೊಹ್ಲಿ ಭೇಟಿಯಾದ ತಮಿಳು ನಟಿ ರಾಧಿಕಾ ಶರತ್ ಕುಮಾರ್

    ಮೋರ್ನೆ ಮಾರ್ಕೆಲ್ ಆಗಮನವು ಟೀಮ್ ಇಂಡಿಯಾಕ್ಕೆ ಹೊಸ ಅಧ್ಯಾಯದ ಸೂಚಕವಾಗಿದೆ. ಆಗಸ್ಟ್‌ನಲ್ಲಿ ನೇಮಕಗೊಂಡ ಮಾರ್ಕೆಲ್ ಈ ಹಿಂದೆ ಪರಾಸ್ ಮಾಂಬ್ರೆ ವಹಿಸಿದ್ದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅವರ ನೇಮಕಾತಿಯು ಭಾರತದ ವೇಗದ ಬೌಲಿಂಗ್‌ನಲ್ಲಿ ಸುಧಾರಣೆ ತರುವ ಉದ್ದೇಶದ್ದಾಗಿದೆ. ಇದು ಮುಂಬರುವ ಟೆಸ್ಟ್ ಋತುವಿನಲ್ಲಿ ನಿರ್ಣಾಯಕವಾಗಿದೆ.

    ಮಾರ್ಕೆಲ್ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ದಕ್ಷಿಣ ಆಫ್ರಿಕಾಕ್ಕಾಗಿ 86 ಟೆಸ್ಟ್ ಪಂದ್ಯಗಳು, 117 ODIಗಳು ಮತ್ತು 44 T20I ಪಂದ್ಯಗಳನ್ನು ಆಡಿದ್ದಾರೆ. ಎಲ್ಲಾ ಮಾದರಿಯಲ್ಲೂ 544 ವಿಕೆಟ್‌ಗಳನ್ನು ಕಿತ್ತು ಅಂತಾರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​​ಗೆ 16 ಸದಸ್ಯರ ಭಾರತ ತಂಡ ರೆಡಿ – ಯುವ ಆಟಗಾರರಿಗೆ ಮಣೆ!

  • ಮಾರ್ನೆ ಮಾರ್ಕೆಲ್ ಈಗ ಟೀಂ ಇಂಡಿಯಾದ ಬೌಲಿಂಗ್‌ ಕೋಚ್‌

    ಮಾರ್ನೆ ಮಾರ್ಕೆಲ್ ಈಗ ಟೀಂ ಇಂಡಿಯಾದ ಬೌಲಿಂಗ್‌ ಕೋಚ್‌

    ನವದೆಹಲಿ: ದಕ್ಷಿಣ ಆಫ್ರಿಕಾದ (South Africa) ಮಾಜಿ ಕ್ರಿಕೆಟಿಗ, ವೇಗಿ ಬೌಲರ್ ಮಾರ್ನೆ ಮಾರ್ಕೆಲ್ (Morne Morkel) ಭಾರತ ಕ್ರಿಕೆಟ್ ತಂಡಕ್ಕೆ (Team India) ಬೌಲಿಂಗ್ ಕೋಚ್ (Bowling Coach) ಆಗಿ ನೇಮಕವಾಗಿದ್ದಾರೆ.

    ಈ ಹಿಂದೆ ಮಾರ್ಕೆಲ್ ಅವರು 2023ರ ಏಕದಿನ ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಐಪಿಎಲ್‌ನಲ್ಲಿ (IPL) ಕೋಲ್ಕತ್ತಾ ನೈಟ್ ರೈಡರ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಡೆರ್‌ಡೇವಿಲ್ಸ್ ತಂಡಗಳಲ್ಲಿ ಆಟವಾಡಿದ್ದರು. ಇದನ್ನೂ ಓದಿ: ವಿನೇಶ್‌ ಫೋಗಟ್‌ ʼಬೆಳ್ಳಿʼ ತೀರ್ಪು ಆ.16ಕ್ಕೆ ಮುಂದೂಡಿಕೆ

    ಭಾರತ ತಂಡದ ಹೊಸ ಕೋಚ್ ಆಗಿರುವ ಗೌತಮ್ ಗಂಭೀರ್ (Gautam Gambhir) ಸಲಹೆಯ ಮೇರೆಗೆ ಮಾರ್ಕೆಲ್‌ ಅವರನ್ನು ಆಯ್ಕೆ ಮಾಡಲಾಗಿದೆ. ಲಕ್ನೋ ತಂಡದಲ್ಲಿ ಗೌತಮ್ ಗಂಭೀರ್ ಮತ್ತು ಮಾರ್ಕೆಲ್ ಜೊತೆಯಾಗಿ ಕೆಲಸ ಮಾಡಿದ್ದರು.

    39 ವರ್ಷದ ಮಾರ್ಕೆಲ್ ದಕ್ಷಿಣ ಆಫ್ರಿಕಾ ಪರವಾಗಿ 86 ಟೆಸ್ಟ್, 117 ಏಕದಿನ, 44 ಟಿ20 ಪಂದ್ಯಗಳನ್ನಾಡಿ ಒಟ್ಟು 544 ವಿಕೆಟ್‌ಗಳು ಪಡೆದಿದ್ದಾರೆ.

     

  • ಹೀನಾಯ ಸೋಲಿನ ಬೆನ್ನಲ್ಲೇ ಪಾಕ್‌ಗೆ ಮತ್ತೆ ಶಾಕ್‌ – ಗುಡ್‌ಬೈ ಹೇಳಿದ ಬೌಲಿಂಗ್‌ ಕೋಚ್‌

    ಹೀನಾಯ ಸೋಲಿನ ಬೆನ್ನಲ್ಲೇ ಪಾಕ್‌ಗೆ ಮತ್ತೆ ಶಾಕ್‌ – ಗುಡ್‌ಬೈ ಹೇಳಿದ ಬೌಲಿಂಗ್‌ ಕೋಚ್‌

    ಇಸ್ಲಾಮಾಬಾದ್‌: 2023ರ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ಹೀನಾಯ ಸೋಲಿನೊಂದಿಗೆ ತವರಿಗೆ ಮರಳಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ತಂಡದ ಮಾಜಿ ವೇಗಿ ಹಾಗೂ ಪಾಕ್‌ ತಂಡಕ್ಕೆ ಬೌಲಿಂಗ್‌ ಕೋಚ್‌ ಆಗಿದ್ದ ಮೊರ್ನೆ ಮೊರ್ಕೆಲ್ (Morne Morkel) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಪ್ರಕಟಿಸಿದೆ.

    ದಕ್ಷಿಣ ಆಫ್ರಿಕಾ ತಂಡದ ಮಾಜಿ ವೇಗಿಯೂ ಆಗಿದ್ದ ಮೊರ್ಕೆಲ್‌ ಪ್ರಸಕ್ತ ವರ್ಷದ ಜೂನ್‌ ತಿಂಗಳಲ್ಲಿ 6 ತಿಂಗಳ ಒಪ್ಪಂದದ ಮೇರೆಗೆ ಪಾಕಿಸ್ತಾನ ತಂಡಕ್ಕೆ ಬೌಲಿಂಗ್‌ ಕೋಚ್‌ (Pakistans Bowling Coach) ಆಗಿ ನೇಮಕಗೊಂಡಿದ್ದರು. ಶೀಘ್ರದಲ್ಲೇ ಮೊರ್ಕೆಲ್‌ ಸ್ಥಾನಕ್ಕೆ ಬದಲಿ ಕೋಚ್‌ ನೇಮಿಸುವುದಾಗಿ ಮಂಡಳಿ ತಿಳಿಸಿದೆ. ಇದನ್ನೂ ಓದಿ: Six In Six – ಒಂದೇ ಓವರ್‌ನಲ್ಲಿ 6 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಆಸೀಸ್‌ ಕ್ರಿಕೆಟಿಗ

    ಪಾಕಿಸ್ತಾನ ತಂಡವು ಇದೇ ವರ್ಷದ ಡಿಸೆಂಬರ್‌ 14 ರಿಂದ 2024ರ ಜನವರಿ 7ರ ವರೆಗೆ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಅಷ್ಟರಲ್ಲಿ ಬದಲಿ ಕೋಚ್‌ ನೇಮಕ ಮಾಡುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: World Cup: ಈ ದಾಖಲೆ ಬರೆದ ಭಾರತದ ಮೊದಲ ಕ್ಯಾಪ್ಟನ್‌ ರೋಹಿತ್‌ ಶರ್ಮಾ

    ಮೊರ್ಕೆಲ್‌ ಬೌಲಿಂಗ್‌ ಕೋಚ್‌ ಆಗಿ ನಿಯೋಜನೆಗೊಂಡ ಬಳಿಕ ಶ್ರೀಲಂಕಾ ವಿರುದ್ಧ ನಡೆದ 2 ಟೆಸ್ಟ್‌ ಸರಣಿಗೆ ಕೋಚ್‌ ಆಗಿದ್ದರು. ಆಗ ಪಾಕಿಸ್ತಾನ 2-0 ಅಂತರದಲ್ಲಿ ಲಂಕಾ ವಿರುದ್ಧ ಸರಣಿ ಗೆದ್ದುಕೊಂಡಿತ್ತು. ಆ ನಂತರ ಅಫ್ಘಾನಿಸ್ತಾನ ವಿರುದ್ಧ ನಡೆದ ಏಕದಿನ ಸರಣಿಯಲ್ಲೂ ತವರಿನಲ್ಲೇ ವೈಟ್‌ವಾಶ್‌ ಮಾಡಿತ್ತು. ಆ ಬಳಿಕ ಮೊರ್ಕೆಲ್‌ ಏಕದಿನ ಏಷ್ಯಾಕಪ್‌ ಸಂದರ್ಭದಲ್ಲೂ ಕೋಚ್‌ ಆಗಿದ್ದರು. ಆದ್ರೆ ಪಾಕ್‌ ಏಷ್ಯಾಕಪ್‌ನಲ್ಲಿ ಸೂಪರ್‌ ಫೋರ್‌ ಹಂತದಲ್ಲಿ ಶ್ರೀಲಂಕಾ ವಿರುದ್ಧ ಸೋತು ಫೈನಲ್‌ ಪ್ರವೇಶಿಸದೇ ಹಿಂದಿರುಗಿತ್ತು. ಇದೀಗ ವಿಶ್ವಕಪ್‌ ಟೂರ್ನಿಯಲ್ಲಿ ಲೀಗ್‌ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದೆ.

    ವಿಶ್ವಕಪ್‌ ಟೂರ್ನಿಯಲ್ಲಿ 9 ಲೀಗ್‌ ಪಂದ್ಯಗಳನ್ನಾಡಿದ ಪಾಕ್‌ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ 5ರಲ್ಲಿ ಸೋಲನುಭವಿಸಿತು. ಕೊನೆಯ ಪಂದ್ಯದಲ್ಲೂ ಗ್ಲೆಂಡ್‌ ವಿರುದ್ಧ ಹೀನಾಯ ಸೋಲಿನೊಂದಿಗೆ ವಿಶ್ವಕಪ್‌ ಟೂರ್ನಿಗೆ ವಿದಾಯ ಹೇಳಿತ್ತು. ಇದನ್ನೂ ಓದಿ: World Cup 2023: ಅರ್ಧಶತಕ ಸಿಡಿಸಿದ್ರೂ ಸಚಿನ್‌ ದಾಖಲೆ ಸರಿಗಟ್ಟಿದ ಚೇಸ್‌ ಮಾಸ್ಟರ್‌