Tag: Morena

  • ಹಾವಿನ ದ್ವೇಷ 12 ವರುಷ – ಹಾಗೇ ಪ್ರೀತಿಯೂ ಪುರಾಣದಿಂದಲೇ ಹುಟ್ಟಿದ್ದಾ?

    ಹಾವಿನ ದ್ವೇಷ 12 ವರುಷ – ಹಾಗೇ ಪ್ರೀತಿಯೂ ಪುರಾಣದಿಂದಲೇ ಹುಟ್ಟಿದ್ದಾ?

    ಪ್ರೀತಿ… ಇದು ಜಗತ್ತಿನ ಮೂಲೆ ಮೂಲೆಗಳಲ್ಲೂ ಹಬ್ಬಿರುವ ಒಂದು ಸಂಬಂಧ. ಸಾಮಾನ್ಯವಾಗಿ ವ್ಯಕ್ತಿಗಳ ನಡುವೆ ಪ್ರೇಮ ಕಾವ್ಯ, ವಸ್ತು ಹಾಗೂ ವ್ಯಕ್ತಿಗಳ ನಡುವಿನ ಸಂಬಂಧ, ಪ್ರಾಣಿ ಹಾಗೂ ವ್ಯಕ್ತಿಗಳ ನಡುವೆ ಸಂಬಂಧ ಇವೆಲ್ಲವುಗಳನ್ನು ದಿನನಿತ್ಯ ನಾವು ಕಣ್ತುಂಬಿ ಕೊಳ್ಳುತ್ತೇವೆ. ಹೀಗಿರುವಾಗ ಕೆಲವು ವಿಭಿನ್ನ, ಆಶ್ಚರ್ಯಕರ ಘಟನೆಗಳು ನಮ್ಮ ಜೀವನದಲ್ಲಿ ನಡೆಯುತ್ತದೆ.

    ಅಂತಹದ್ದೇ ಆದ ಒಂದು ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿತ್ತು. ಹೌದು, ಮಧ್ಯ ಪ್ರದೇಶದ ಮೊರೆನಾ ಎಂಬಲ್ಲಿ ವಿಚಿತ್ರ ಘಟನೆ ಎಂದು ಸಂಭವಿಸಿತ್ತು. ಇದನ್ನು ನೋಡಿದ ಹಲವರು ನಿಜಕ್ಕೂ ಇದು ವಿಚಿತ್ರವೇ ಹೌದು ಎಂದಿದ್ದಾರೆ. ಅದೊಂದು ದಿನ ರಸ್ತೆಯ ಮೇಲೆ ನಾಗರಹಾವು ಹಾದು ಹೋಗಬೇಕಾದರೆ ವಾಹನವೊಂದು ಅದರ ಮೇಲೆ ಹರಿದುಹೋದ ಪರಿಣಾಮ ಹಾವು ರಸ್ತೆಯಲ್ಲಿ ಸಾವನ್ನಪ್ಪಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲಿ ರಸ್ತೆ ಬದಿಯ ಪೊದೆಯಿಂದ ಹೊರಬಂದ ಹಾವು ಒಂದು ಸತ್ತು ಬಿದ್ದ ಹಾವಿನ ಬಳಿಗೆ ಬಂತು. ಆ ಹಾವು ಸತ್ತ ಬಿದ್ದ ಹಾವಿನ ಪಕ್ಕದಲ್ಲಿಯೇ 24 ಗಂಟೆ ಇದ್ದು ಬಳಿಕ ಸಾವನ್ನಪ್ಪಿರುವುದು ಗೊತ್ತಾಗಿದೆ. ಈ ದೃಶ್ಯ ನಿಜಕ್ಕೂ ವಿಚಿತ್ರವೇನಿಸುತ್ತದೆ.

    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡಿದ ನಂತರ ಹಲವು ರೀತಿಯ ಕಾಮೆಂಟ್ಗಳು ಉದ್ಭವವಾಗಿದ್ದವು. ಹೆಣ್ಣು ಹಾವು ಸತ್ತಿರುವ ಗಂಡು ಹಾವಿಗಾಗಿ ಶೋಕ ವ್ಯಕ್ತಪಡಿಸಿ ಬಳಿಕ ತಾನು ಸಾವನ್ನಪ್ಪಿದೆ. ಇನ್ನು ಕೆಲವರು ಇದೊಂದು ದುರಂತ ಪ್ರೇಮಕಥೆ ಎಂದಿದ್ದಾರೆ. ತನ್ನ ಪ್ರೀತಿಯನ್ನು ಕಳೆದುಕೊಂಡು ಸಹಿಸಲಾಗದೆ ಸ್ವಇಚ್ಛೆಯಿಂದ ತಾನು ಪ್ರಾಣ ಬಿಟ್ಟಿದೆ ಎಂದಿದ್ದಾರೆ. ಜೊತೆಗೆ ಈ ಎರಡು ಹಾವುಗಳಿಗೂ ಪುರಾಣದಲ್ಲಿ ಪ್ರೀತಿ ಇತ್ತು ಎಂತಲೂ ಹೇಳಿದ್ದಾರೆ. ನಿಜಕ್ಕೂ ಪುರಾಣದಲ್ಲಿ ನಾಗಲೋಕದಲ್ಲಿ ಹಾವಿಗೆ ಪ್ರೀತಿಯಿತ್ತಾ? ಪುರಾಣಗಳ ಪ್ರೀತಿ ಇಂದಿಗೂ ಶಾಶ್ವತವಾಗಿದೆಯಾ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ.

    ಭಾರತೀಯ ಪರಂಪರೆ ಅಥವಾ ಸಂಪ್ರದಾಯದಲ್ಲಿ ಹಾವುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಇದನ್ನು ಪೂಜಿಸುವುದು ಹೌದು. ಇನ್ನು ನಾಗರಹಾವು ಹಾಗೂ ಶಿವನಿಗೆ ನಿಕಟವಾದ ಸಂಬಂಧವಿದ್ದು, ಸದಾ ಶಿವನ ಕೊರಳಲ್ಲಿ ಇರುವ ನಾಗನಿಗೂ ವಿಭಿನ್ನ ಕಥೆಗಳು ಹಾಗೂ ಜಾನಪದ ನಂಬಿಕೆಯೂ ಇದೆ. ಕಥೆಗಳ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಹಾವುಗಳು ಸೇಡು ತೀರಿಸಿಕೊಳ್ಳುವುದು ಕಂಡುಬಂದಿದೆ. ಇಷ್ಟೇ ಅಲ್ಲದೆ ಹಲವು ಸಿನಿಮಾ ಹಾಗೂ ಧಾರವಾಹಿಗಳ ಮೂಲಕ ನಾಗಲೋಕದ ಪ್ರೀತಿಯನ್ನು ತೋರಿಸಿಕೊಟ್ಟಿದ್ದಾರೆ. ಪುರಾಣ ಒಂದು ಕಡೆಯಾದರೆ ವಿಜ್ಞಾನವು ಇನ್ನೊಂದು ರೀತಿಯಲ್ಲಿ ಹೇಳುತ್ತದೆ.

    ಸಾಮಾನ್ಯವಾಗಿ ಹಾವುಗಳಿಗೆ ಭಾವನೆಗಳು ಇರುತ್ತವೆ. ಆದರೆ ಮನುಷ್ಯರಂತೆ ಪ್ರೀತಿ ಹಾಗೂ ಸಂತೋಷದ ಭಾವನೆಯನ್ನು ವ್ಯಕ್ತಪಡಿಸುವುದಿಲ್ಲ. ಆದರೆ ಭಯ, ಒತ್ತಡ ಇಂತವುಗಳನ್ನು ಮಾತ್ರ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿರುತ್ತದೆ. ಹಾವುಗಳು ಯಾವುದೇ ರೀತಿಯ ಭಾವನಾತ್ಮಕ ಸಂಬಂಧ ಬೆಸೆಯುವುದಿಲ್ಲ. ಹಾವು ಹಾಗೂ ಇನ್ನಿತರೆ ಸಸ್ತನಿಗಳಿಗೆ ಭಾವನಾತ್ಮಕ ಸಂಬಂಧ ಇರುವುದಿಲ್ಲ. ಆದರೆ ಪ್ರಸ್ತುತ ಈ ಘಟನೆಯಲ್ಲಿ ಹಾವಿನ ಪಕ್ಕದಲ್ಲಿ ಇನ್ನೊಂದು ಹಾವು ಇರುವುದು ಭಾವನೆಯನ್ನು ಉಂಟುಮಾಡುತ್ತದೆ.

    ಈ ಕುರಿತು ಸಂಶೋಧಕರು ಹೇಳಿದ್ದೇನು?
    – ಸಾಮಾನ್ಯವಾಗಿ ಹಾವುಗಳು ಒಂಟಿಯಾಗಿರುತ್ತವೆ. ಆದರೆ ತಮ್ಮ ಪ್ರಾಥಮಿಕ ಸಮ್ಮಿಲನಕ್ಕಾಗಿ ಒಟ್ಟಿಗೆ ಸೇರುತ್ತವೆ. ಜೊತೆಗೆ ತಕ್ಷಣವೇ ಬೇರ್ಪಡುತ್ತವೆ.
    – ಹಾವುಗಳು ತಮ್ಮ ಸಂಗಾತಿಯನ್ನು ಗುರುತಿಸುತ್ತವೆ. ಅಥವಾ ನೆನಪಿಸಿಕೊಳ್ಳುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ.
    – ಅನ್ನು ಹೊರತುಪಡಿಸಿ ಯಾವುದೇ ರೀತಿಯ ಭಾವನಾತ್ಮಕ ಸಂಬಂಧಗಳಿರುವುದಿಲ್ಲ
    – ಪ್ರಾಣಿ ಜಗತ್ತಿನಲ್ಲಿ ಕೆಲವೇ ಕೆಲವು ಬೆರಳೆಣಿಕೆ ಎಷ್ಟು ಜಾತಿಗಳು ಮಾತ್ರ ತಮ್ಮ ಸಂಗಾತಿಯನ್ನು ಬಿಟ್ಟು ಕೊಡದೆ ಇರುವುದು, ತಮ್ಮ ಸಂಗಾತಿಗಾಗಿ ಭಾವನೆಯನ್ನು ವ್ಯಕ್ತಪಡಿಸುವುದನ್ನು ಮಾಡುತ್ತವೆ. ಆದರೆ ಹಾವುಗಳು ಈ ವರ್ಗಕ್ಕೆ ಸೇರುವುದಿಲ್ಲ

    SNAKE
    ಹಾಗಾದರೆ ಹಾವಿನ ಪಕ್ಕದಲ್ಲಿ ಹಾವು ಸತ್ತಿದ್ದು ಹೇಗೆ?

    – ತಜ್ಞರ ಪ್ರಕಾರ, ಗಂಡು ಹಾವಿನ ವಾಸನೆಗೆ ಆಕರ್ಷಿತವಾಗಿ ಅದು ಅಲ್ಲಿಗೆ ಹೋಗಿರಬಹುದು.
    – ವಾತಾವರಣದಲ್ಲಿನ ತಾಪಮಾನದಿಂದಾಗಿ ಅದರ ಚಲನಾ ಶಕ್ತಿ ಕಡಿಮೆಯಾಗಿ ಅದು ಒತ್ತಡಕ್ಕೆ ಒಳಗಾಗಿ ಅಲ್ಲಿಯೇ ಉಳಿದಿರಬಹುದು. ಅಥವಾ ಉದ್ದೇಶಪೂರ್ವಕವಾಗಿ ಹಾವಿನ ಪಕ್ಕದಲ್ಲಿ ಉಳಿದಿರಬಹುದು ಎನ್ನಲಾಗಿದೆ.
    – ಇನ್ನು ಹಾವು ಸತ್ತ 24 ಗಂಟೆಗಳ ಬಳಿಕ ಇನ್ನೊಂದು ಹಾವು ಸತ್ತಿರುವುದು ಕಾಕತಾಳೀಯ. ಆದರೆ ಸತ್ತ ಹಾವಿನ ಗಾಯದಿಂದಾಗಿ ಅಥವಾ ಯಾವುದಾದರೂ ವಿಷಕಾರಿ ಪ್ರಾಣಿಯನ್ನು ಅಥವಾ ಕೀಟವನ್ನು ಸೇವಿಸಿ, ಬಳಿಕ ಅದೇ ವಿಷಯವನ್ನು ಈ ಹಾವು ಸೇವಿಸಿ ಸಾವನ್ನಪ್ಪಿರಬಹುದು ಎನ್ನಲಾಗಿದೆ.

    ಹಾವಿನ ಜಾತಿಯಾದ ಕಿಂಗ್ ಕೋಬ್ರಾ ಹಾವುಗಳು ಮಿಲನದ ನಂತರ ಜೊತೆಯಾಗಿರುವುದಿಲ್ಲ. ಆದರೆ ತನ್ನ ಮೊಟ್ಟೆಯ ರಕ್ಷಣೆಗಾಗಿ ಹಾವುಗಳು ಅದರ ಜೊತೆಗೆ ಇರುತ್ತವೆ. ಇದು ಗಂಡು ಹಾಗೂ ಹೆಣ್ಣು ಹಾವುಗಳು ಜೊತೆಗೆ ಇರುವ ಉದ್ದೇಶದಿಂದಲ್ಲ. ಇದು ತಮ್ಮ ಸಂತತಿಯ ರಕ್ಷಣೆಗಾಗಿ ಎರಡು ಹಾವುಗಳು ಜೊತೆಗಿರುತ್ತವೆ. ಆದರೆ ಅದಾದ ನಂತರ ಹಾವುಗಳು ಜೀವನ ಪರ್ಯಂತ ಸಂಗಾತಿಯಾಗಿರುವುದಿಲ್ಲ ಹಾಗೂ ನೋವನ್ನು ಅನುಭವಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಇನ್ನೂ ಕೆಲವು ಮಾಹಿತಿಗಳ ಪ್ರಕಾರ, ಗಂಡು ಹಾವು ಹೆಣ್ಣು ಹಾವಿನೊಂದಿಗೆ ಮಿಲನದ ಸಲುವಾಗಿ ಕಾಯುತ್ತಿರುತ್ತವೆ. ಇನ್ನು ಹೆಣ್ಣು ಹಾವುಗಳು ಕೂಡ ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಹಲವು ಗಂಡು ಹಾವಿನೊಂದಿಗೆ ಸಂಗಾತಿಯಾಗಿರುತ್ತವೆ.

    ಪುರಾಣ ಹೇಳುವುದೇನು?
    ಪುರಾಣಗಳ ಪ್ರಕಾರ ಹಾವುಗಳು ತಮ್ಮ ಸಂಗಾತಿ ಜೊತೆಗಿರುತ್ತವೆ. ಜೊತೆಗಿಲ್ಲದೆ ಇರುವಾಗ ಅವುಗಳಿಗಾಗಿ ದುಃಖಿಸುತ್ತದೆ ಎಂದು ತೋರಿಸಿಕೊಂಡು ಬಂದಿದೆ. ಬಹಳ ಹಿಂದಿನಿಂದಲೂ ನಾಗರಿಕತೆಗಳಲ್ಲಿ ಹಾವಿನ ಬಗ್ಗೆ ಭಯ, ಪೂಜೆ ಹಾಗೂ ಪ್ರೀತಿ ಇವೆಲ್ಲವು ಜನರನ್ನು ಆಕರ್ಷಿಸಿದೆ. ಇನ್ನು ಹಾವಿನ ಕಲ್ಪನೆಯ ಜೀವನವನ್ನು ಧರ್ಮ, ಜಾನಪದ ಹಾಗೂ ಸಿನಿಮಾದಲ್ಲಿ ವಿಭಿನ್ನ ರೀತಿಯಾಗಿ ಕಥೆ ಕಟ್ಟಲಾಗಿದೆ.

    ಪ್ರತಿಯೊಂದು ಕಥೆಯಲ್ಲಿಯೂ ನಾಗ ನಾಗಿಣಿಯ ಹುಡುಕಾಟದಲ್ಲಿ ಪ್ರೀತಿ ಹುಟ್ಟಿಕೊಳ್ಳುತ್ತದೆ. ಹಾಗೆಯೇ ಶಿವಪುರಾಣ, ಮಹಾಭಾರತ ಹಾಗೂ ಭಗವತ ಪುರಾಣಗಳಲ್ಲಿ ಹಾವಿನ ಪ್ರೀತಿ ಕಂಡು ಬರುತ್ತದೆ.

    ಅದೇ ರೀತಿ ಈ ಮೊರೆನಾದ ನಾಗರಹಾವುಗಳ ಕಥೆಯು ಪ್ರೀತಿ ಅಥವಾ ತ್ಯಾಗದ ಭಾವನೆ ಇರಬಹುದು ಎಂದು ಕಲ್ಪನೆ ಮಾಡಿಕೊಳ್ಳಬಹುದು ವಿನಃ ಇನ್ಯಾವುದೇ ಸಂಬಂಧವಿಲ್ಲ. ಈ ರೀತಿಯ ಘಟನೆಗಳು ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಅಪರೂಪವಾಗಿ ಸಂಭವಿಸುವ ಒಂದು ಸಂಗತಿ. ಇನ್ನು ಇವುಗಳ ಪ್ರೀತಿ ಪ್ರೇಮ ಎಂದು ಹೇಳುವುದು ಕಾಕತಾಳೀಯವಷ್ಟೇ. ಆದರೆ ಇದಕ್ಕೂ ವಿಜ್ಞಾನಕ್ಕೂ ಪುರಾಣಕ್ಕೂ ಯಾವುದೇ ಸಂಬಂಧವಿಲ್ಲ.

  • ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ 6 ಮಂದಿಯನ್ನು ಗುಂಡಿಕ್ಕಿ ಹತ್ಯೆ!

    ಭೋಪಾಲ್: ಜಮೀನು ವಿವಾದದ ಗಲಾಟೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರನ್ನು ಗುಂಡಿಕ್ಕಿ (shoot) ಹತ್ಯೆ ಮಾಡಿದ ಘಟನೆ ಶುಕ್ರವಾರ ಮಧ್ಯಪ್ರದೇಶದ (Madhya Pradesh) ಮೊರೆನಾದಲ್ಲಿ (Morena) ನಡೆದಿದೆ.

    ಘಟನೆಯ ಆಘಾತಕಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ವೀಡಿಯೋದಲ್ಲಿ ಇಬ್ಬರು ರೈಫಲ್‍ಗಳನ್ನು (Rifles) ಹಿಡಿದು ಇನ್ನೊಂದು ಗುಂಪಿನ ಕಡೆ ಗುಂಡು ಹಾರಿಸುವುದು ದಾಖಲಾಗಿದೆ. ನಂತರ ಕೆಲವರು ಅವರನ್ನು ಕೋಲುಗಳಿಂದ ಥಳಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ತಂದೆಗೆ ಬಿಜೆಪಿ ಟಿಕೆಟ್ ಸಿಕ್ಕ ಖುಷಿಗೆ ಗಾಳಿಯಲ್ಲಿ ಗುಂಡು ಪ್ರಕರಣ – ಅಭ್ಯರ್ಥಿ ಪುತ್ರನ ವಿರುದ್ಧ ಎಫ್‍ಐಆರ್

    ಘಟನೆಯ ಹಿನ್ನೆಲೆ:
    ಧೀರ್ ಸಿಂಗ್ ತೋಮರ್ ಮತ್ತು ಗಜೇಂದ್ರ ಸಿಂಗ್ ತೋಮರ್ ಕುಟುಂಬಗಳ ನಡುವೆ 2013ರಲ್ಲಿ ತ್ಯಾಜ್ಯ ಸುರಿಯುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳವಾಗಿತ್ತು. ಆಗ ಧೀರ್ ಸಿಂಗ್ ತೋಮರ್ ಕುಟುಂಬದ ಇಬ್ಬರು ಸಾವನ್ನಪ್ಪಿದ್ದರು. ಈ ವೇಳೆ ಗಜೇಂದ್ರ ಸಿಂಗ್ ತೋಮರ್ ಕುಟುಂಬವು ಗ್ರಾಮದಿಂದ ಪಲಾಯನ ಮಾಡಿತ್ತು.

    ನಂತರ ಎರಡು ಕುಟುಂಬಗಳು ನ್ಯಾಯಾಲಯದ (Court) ಹೊರಗೆ ರಾಜಿ ಮಾಡಿಕೊಂಡಿದ್ದವು. ಶುಕ್ರವಾರ ಗಜೇಂದ್ರ ಸಿಂಗ್ ತೋಮರ್ ಕುಟುಂಬ ಗ್ರಾಮಕ್ಕೆ ಮರಳಿದೆ. ಈ ವೇಳೆ ಧೀರ್ ಸಿಂಗ್ ತೋಮರ್ ಕುಟುಂಬ ಅವರ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.

    ಹತ್ಯೆಯಲ್ಲಿ ಭಾಗಿಯಾಗಿರುವ ಎಂಟು ಮಂದಿಯನ್ನು ಗುರುತಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ ಪ್ರಕರಣ – ಉಗ್ರರನ್ನು ಸುತ್ತುವರಿದ ಸೇನೆ, ಇಬ್ಬರು ಯೋಧರು ಸಾವು

  • Madhya Pradesh Plane Crash: ಮಿರಾಜ್ 2000 ಯುದ್ಧ ವಿಮಾನದ ಪೈಲಟ್ ದುರ್ಮರಣ

    Madhya Pradesh Plane Crash: ಮಿರಾಜ್ 2000 ಯುದ್ಧ ವಿಮಾನದ ಪೈಲಟ್ ದುರ್ಮರಣ

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ (Gwalior) ತಾಲೀಮು ನಡೆಸುತ್ತಿದ್ದ ಭಾರತದ ವಾಯುಸೇನೆಯ ವಿಮಾನಗಳಾದ ಸುಖೋಯ್-30 (Sukhoi-30) ಮತ್ತು ಮಿರಾಜ್ 2000 (Mirage 2000) ವಿಮಾನಗಳು ಡಿಕ್ಕಿ ಹೊಡೆದುಕೊಂಡು ಪತನಗೊಂಡ ಪರಿಣಾಮ, ಮಿರಾಜ್ 2000 ಯುದ್ಧ ವಿಮಾನದಲ್ಲಿದ್ದ ಪೈಲಟ್ (Pilot) ಮೃತಪಟ್ಟಿರುವುದಾಗಿ ವಾಯುಸೇನೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಎರಡು ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯಿಂದ ತಾಲೀಮು ನಡೆಸುತ್ತಿದ್ದವು. ಬೆಳಗ್ಗೆ 5:30ರ ಸುಮಾರಿಗೆ ಆಗಸದಲ್ಲಿ ಹಾರಾಟ ನಡೆಸುತ್ತಿದ್ದಂತೆ ಮಧ್ಯಪ್ರದೇಶದ ಮೊರೆನಾ ಬಳಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಪತನಗೊಂಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ವರದಿಯಾಗಿದೆ. ಇದನ್ನೂ ಓದಿ: Plane Crash: ಬೆಂಕಿ ಕಾಣಿಸಿಕೊಂಡು ಪತನಗೊಂಡ ಚಾರ್ಟರ್ಡ್ ವಿಮಾನ – ಪೈಲಟ್‍ಗಾಗಿ ಹುಡುಕಾಟ

    ಸುಖೋಯ್-30 ವಿಮಾನದಲ್ಲಿ ಇಬ್ಬರು ಪೈಲಟ್ ಮತ್ತು ಮಿರಾಜ್‍ನಲ್ಲಿ ಓರ್ವ ಪೈಲಟ್ ಇದ್ದರು. ಈ ಪೈಕಿ ಸುಖೋಯ್-30 ವಿಮಾನದಲ್ಲಿದ್ದ ಇಬ್ಬರು ಪೈಲಟ್‍ಗಳು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿರಾಜ್ 2000ನಲ್ಲಿದ್ದ ಓರ್ವ ಪೈಲಟ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವಾಯುಸೇನೆ ಮಾಹಿತಿ ಹಂಚಿಕೊಂಡಿದೆ. ಘಟನೆಯ ತನಿಖೆಗೆ ಐಎಎಫ್ (IAF) ಸೂಚಿಸಿದೆ.

    ಘಟನೆ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರಿಗೆ ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ (V.R Chaudhari) ಮಾಹಿತಿ ನೀಡಿದ್ದು, ರಾಜನಾಥ್ ಸಿಂಗ್ ಅವರು ಪೈಲಟ್‍ಗಳ ಯೋಗಕ್ಷೇಮವನ್ನು ವಿಚಾರಿಸಿದರು. ಬಳಿಕ ಈ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ.

    ಸುಖೋಯ್-30 ಮತ್ತು ಮಿರಾಜ್ 2000 ವಿಮಾನಗಳು ಪತನಗೊಂಡ ಸ್ಥಳದಿಂದ 100 ಕಿ.ಮೀ ದೂರದಲ್ಲಿರುವ ಭರತ್‍ಪುರದಲ್ಲಿ ಮತ್ತೊಂದು ವಿಮಾನ ದುರಂತ ಸಂಭವಿಸಿದೆ. ಈ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: AirCraft Crash: ವಾಯು ಸೇನೆಯ ಸುಖೋಯ್-30, ಮಿರಾಜ್ 2000 ವಿಮಾನ ಪತನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೈಲು ಡಿಕ್ಕಿ ಹೊಡೆದು ಇಬ್ಬರು ಆರ್‌ಪಿಎಫ್ ಪೊಲೀಸರ ದುರ್ಮರಣ

    ರೈಲು ಡಿಕ್ಕಿ ಹೊಡೆದು ಇಬ್ಬರು ಆರ್‌ಪಿಎಫ್ ಪೊಲೀಸರ ದುರ್ಮರಣ

    ಭೋಪಾಲ್: ವೇಗವಾಗಿ ಬಂದ ರೈಲು (Train) ಡಿಕ್ಕಿ ಹೊಡೆದು ರೈಲ್ವೇ ಸಂರಕ್ಷಣಾ ಪಡೆಯ (RPF) ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಮೊರೆನಾ (Morena) ಜಿಲ್ಲೆಯಲ್ಲಿ ನಡೆದಿದೆ.

    ಮೊರೆನಾದಿಂದ 7 ಕಿಮೀ ದೂರದಲ್ಲಿರುವ ಸಾಂಕ್ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಹೆಡ್ ಕಾನ್‌ಸ್ಟೇಬಲ್‌ಗಳಾದ ಅಶೋಕ್ ಕುಮಾರ್ (56) ಮತ್ತು ನವರಾಜ್ ಸಿಂಗ್ (40) ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರಾಮದ ಯುವಕನೊಂದಿಗೆ ಪ್ರೀತಿ – ಮಗಳನ್ನೇ ಕೊಚ್ಚಿ ಕೊಂದ ತಂದೆ

    ಆರ್‌ಪಿಎಫ್ ಪೊಲೀಸರು ಸ್ಥಳದಲ್ಲಿ ನಿಲ್ಲಿಸಿದ್ದ ಗ್ವಾಲಿಯರ್-ಆಗ್ರಾ ಪ್ಯಾಸೆಂಜರ್ ರೈಲನ್ನು ಪರಿಶೀಲಿಸುತ್ತಿದ್ದು, ಅವರಿಬ್ಬರೂ ಮಧ್ಯದ ಹಳಿಯಲ್ಲಿದ್ದರು. ಈ ವೇಳೆ ದೆಹಲಿಯಿಂದ ಬರುತ್ತಿದ್ದ ದುರೊಂತೋ ಎಕ್ಸ್ಪ್ರೆಸ್ ರೈಲು ವೇಗವಾಗಿ ಹಾದು ಹೋಗಿದೆ. ಇದರಿಂದ ರೈಲು ಅಧಿಕಾರಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ಮೊರೆನಾ ಆರ್‌ಪಿಎಫ್ ಪೊಲೀಸ್ ಠಾಣೆಯ ಉಸ್ತುವಾರಿ ಹರಿಕಿಶನ್ ಮೀನಾ ತಿಳಿಸಿದ್ದಾರೆ. ಇದನ್ನೂ ಓದಿ: 2,500 ರೂ. ವಾಪಸ್ ಕೊಡದಿದ್ದಕ್ಕೆ ಯುವಕನ ಕೈಯನ್ನೆ ಕತ್ತರಿಸಿದ್ರು

    ಇನ್ನೊಂದು ಬದಿಯ ಹಳಿಯಲ್ಲಿ ಗೂಡ್ಸ್ ರೈಲು ನಿಂತಿದ್ದರಿಂದ ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ಓಡಲು ಸಾಧ್ಯವಾಗಲಿಲ್ಲ. ಹೀಗಾಗಿ ದುರಂತ ಸಂಭವಿಸಿದೆ. ಇಬ್ಬರು ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

    Live Tv
    [brid partner=56869869 player=32851 video=960834 autoplay=true]