Tag: morarji school

  • ಮೊರಾರ್ಜಿ ಶಾಲೆಗಳಲ್ಲಿ ನಡೆದಿದ್ಯಾ ಆರ್‌ಎಸ್‍ಎಸ್ ಶಿಬಿರ..?

    ಮೊರಾರ್ಜಿ ಶಾಲೆಗಳಲ್ಲಿ ನಡೆದಿದ್ಯಾ ಆರ್‌ಎಸ್‍ಎಸ್ ಶಿಬಿರ..?

    ಬೆಂಗಳೂರು: ರಾಜ್ಯ ಸರ್ಕಾರ ಶಿಕ್ಷಣ ಕೇಸರೀಕರಣಕ್ಕೆ ದೊಡ್ಡಮಟ್ಟದಲ್ಲಿ ಪ್ರಯತ್ನ ನಡೆಸ್ತಿದೆ ಎಂಬ ಆರೋಪ ಆಗಾಗ ಕೇಳಿಬರುತ್ತಲೇ ಇರುತ್ತೆ. ಇದಕ್ಕೆ ಪೂರಕ ಎಂಬಂತೆ ಕೋಲಾರ ಮತ್ತು ಉತ್ತರ ಕನ್ನಡ ಜಿಲ್ಲೆಯ ಮೋರಾರ್ಜಿ (Morarji Desai) ಶಾಲೆಗಳಲ್ಲಿ ಪ್ರಶಿಕ್ಷಾ ವರ್ಗ ನಡೆಸಲು ಸಮಾಜಕಲ್ಯಾಣ ಸಚಿವರು ಅನುಮತಿ ನೀಡಿದ್ದಾರೆ. ಆದರೆ ನೇರವಾಗಿ ಎಲ್ಲಿಯೂ ಆರ್‌ಎಸ್‍ಎಸ್ (RSS) ಹೆಸರು ಉಲ್ಲೇಖವಾಗಿಲ್ಲ.

    ಕೋಲಾರದಲ್ಲಿ (Kolar) ಪ್ರೇರಣಾ ಪ್ರತಿಷ್ಠಾನದ ಹೆಸರಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ಷಯ ಸೇವಾ ಪ್ರತಿಷ್ಠಾನದ ಹೆಸರಲ್ಲಿ ಪ್ರಶಿಕ್ಷಾ ವರ್ಗ ನಡೆಸಲು ಕೋಟಾ ಶ್ರೀನಿವಾಸ್ ಪೂಜಾರಿ ಪರ್ಮೀಷನ್ ಕೊಟ್ಟಿದ್ದಾರೆ. ಅಕ್ಟೋಬರ್ 7ರಿಂದ ಮುಳಬಾಗಲಿನ ಕೂತಾಂಡ್ಲಹಳ್ಳಿಯ ಮೋರಾರ್ಜಿ ಶಾಲೆಯಲ್ಲಿ ಈ ಶಿಬಿರ ನಡೀತಿದೆ. ಇದ್ರಲ್ಲಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ. ಹೊರಗಿನವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಇದೇ 16ಕ್ಕೆ ಮುಳಬಾಗಲಿನಲ್ಲಿ ಆರ್‌ಎಸ್‍ಎಸ್ ಪಥಸಂಚಲನ ಕೂಡ ಆಯೋಜಿಸಿದೆ. ಇದಕ್ಕೆ ಎಸ್‍ಎಫ್‍ಐ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

    ಈ ಶಿಬಿರದಲ್ಲಿ ಶಸ್ತ್ರಾಸ್ತ್ರ ಬಳಕೆ ಆಗ್ತಿದೆ. ಸಮಾಜಘಾತುಕ ಕೃತ್ಯಗಳಿಗೆ ಪ್ರಚೋದನೆ ನೀಡಲಾಗ್ತಿದೆ ಎಂದು ಎಸ್‍ಎಫ್‍ಐ ಆಪಾದಿಸಿದೆ. ಆದರೆ ಕೋಟಾ ಶ್ರೀನಿವಾಸಪೂಜಾರಿ ಮಾತ್ರ, ಆರ್‌ಎಸ್‍ಎಸ್‍ಗೆ ಅನುಮತಿ ನೀಡಿಲ್ಲ. ದೇಶ ಮೊದಲು ಎನ್ನುವ ಸಂಸ್ಥೆಗಳ ಶಿಬಿರಕ್ಕೆ ಅನುಮತಿ ಕೊಟ್ಟಿದ್ದೇವೆ. ಇದೇನು ಹೊಸದಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಯಚೂರಿಗೆ ಬರಲಿದೆ ಏಮ್ಸ್, ಮಂತ್ರಾಲಯ ಸೇತುವೆಗೆ ಬಿಎಸ್‌ವೈ ಹೆಸರು: ಸಿಎಂ ಬೊಮ್ಮಾಯಿ

    ಸಚಿವ ಸುನೀಲ್ ಕುಮಾರ್ ಕೂಡ ಈ ಶಿಬಿರದ ಪರ ಬ್ಯಾಟ್ ಮಾಡಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ, ಕೋಲಾರದ ಆರ್‌ಎಸ್‍ಎಸ್ ಘಟಕ ಹಂಚಿಕೆ ಮಾಡಿದ ಪಾಂಪ್ಲೆಟ್‍ನಲ್ಲಿ ಪ್ರಾಶಿಕ್ಷಾ ವರ್ಗಾ ಆಯೋಜಿಸುತ್ತಿರುವ ಬಗ್ಗೆ ಹೇಳಿಕೊಂಡಿದೆ. ಇದನ್ನೂ ಓದಿ: 2005ರಲ್ಲೇ ನಾನು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷನಾಗಬೇಕೆಂದು ಸೋನಿಯಾ ಬಯಸಿದ್ದರು: ಮಲ್ಲಿಕಾರ್ಜುನ ಖರ್ಗೆ

    Live Tv
    [brid partner=56869869 player=32851 video=960834 autoplay=true]

  • ಯಾವುದೇ ಕಾರಣಕ್ಕೂ ಮೊರಾರ್ಜಿ ದೇಸಾಯಿ ಹೆಸರು ಬದಲಾಯಿಸ್ಬಾರ್ದು: ಬಿಎಸ್‍ವೈ ಎಚ್ಚರಿಕೆ

    ಯಾವುದೇ ಕಾರಣಕ್ಕೂ ಮೊರಾರ್ಜಿ ದೇಸಾಯಿ ಹೆಸರು ಬದಲಾಯಿಸ್ಬಾರ್ದು: ಬಿಎಸ್‍ವೈ ಎಚ್ಚರಿಕೆ

    ಬೆಂಗಳೂರು: ಮೊರಾರ್ಜಿ ದೇಸಾಯಿ ಹೆಸರು ಬದಲಿಗೆ ಇಂದಿರಾಗಾಂಧಿ ಹೆಸರು ಇಡುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವ್ರು ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ಅವ್ರ ಹೆಸರು ಬದಲಾವಣೆ ಮಾಡಿದ್ರೆ ಇದು ಅವರಿಗೆ ಮಾಡಿದ ಅಪಮಾನ ಅಂತ ಕಿಡಿಕಾರಿದ್ರು.

    ಬೇರೆ ಕಾರ್ಯಕ್ರಮಕ್ಕೆ ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಯಾವ ಹೆಸರಾದ್ರು ಇಟ್ಟುಕೊಳ್ಳಿ. ಆದ್ರೆ ಯಾವುದೇ ಕಾರಣಕ್ಕೂ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮೊರಾರ್ಜಿ ದೇಸಾಯಿ ಹೆಸ್ರು ಬದಲಾಯಿಸಬಾರದು ಅಂತ ಆಗ್ರಹಿಸಿದ್ರು.

    ಒಂದು ವೇಳೆ ಇಂದಿರಾಗಾಂಧಿ ಹೆಸರು ಇಟ್ರೆ ಸರ್ಕಾರದ ವಿರುದ್ದ ಉಗ್ರ ಹೋರಾಟ ಮಾಡ್ತೀವಿ ಬಿಎಸ್‍ವೈ ಎಚ್ಚರಿಕೆ ನೀಡಿದ್ರು.

    ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಡಿಸಿಎಂ ಆರ್ ಅಶೋಕ್, ಕಿತ್ತೂರು ಚೆನ್ನಮ್ಮ ದೇಶಕ್ಕೆ ಪ್ರೇರಣೆ, ಸ್ವಾತಂತ್ರ ಹೋರಾಟಗಾರ್ತಿ. ಅಂತಹವರ ಹೆಸರು ತೆಗೆದು ನಿಮ್ಮ ಪಾರ್ಟಿ ಅಧ್ಯಕ್ಷರ ಹೆಸರು ಇಡೋದು ನಾಚಿಕೆ ಗೇಡಿನ ಕ್ರಮ. ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವ್ರು ರಾಷ್ಟ್ರೀಯ ಹೆದ್ದಾರಿಗಳ ಮಾಡಿದ್ರು. 140 ಕೋಟಿ ವೆಚ್ಚ ಮಾಡಿ ನೀವು ಅವ್ರ ಬೋರ್ಡ್ ತೆಗೆದ್ರಿ, ಜನ ನಿಮ್ಮನ್ನೆ ತೆಗೆದ್ರು. ಈಗ ಚೆನ್ನಮ್ಮ, ಮೋರಾರ್ಜಿ ದೇಸಾಯಿ ಹೆಸ್ರು ತೆಗೆದ್ರೆ ಜನ ಇಲ್ಲಿಂದ ನಿಮ್ಮನ್ನ ತೆಗೆಯುತ್ತಾರೆ ಅಂತ ವಾಗ್ದಾಳಿ ನಡೆಸಿದ್ರು.