ಚಿಕ್ಕೋಡಿ: ಹಿರೆಕೋಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೆಳಗ್ಗೆ ಉಪ್ಪಿಟ್ಟು ತಿಂದು 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೀದರ್: ಜಿಲ್ಲೆಯ ಔರಾದ್ (Aurad) ತಾಲೂಕಿನ ಸಂತಪೂರ್ (Santhapur) ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Morarji Desai Residential School) ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿನ್ಸಿಪಲ್ ಹಾಗೂ ವಾರ್ಡನ್‌ನನ್ನು ಅಮಾನತು ಮಾಡಲಾಗಿದೆ.
ಊಟದಲ್ಲಿ ಹುಳ ಬಿದ್ದಿದ್ದನ್ನು ಹಾಗೂ ಮೆನು ಚಾರ್ಟ್ ಪ್ರಕಾರ ಊಟ ನೀಡದಿದ್ದನ್ನು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಗಳ ಮೇಲೆ ಪ್ರಿನ್ಸಿಪಲ್ ಹಾಗೂ ವಾರ್ಡನ್ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ವಸತಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ಕರ್ತವ್ಯಲೋಪ ಎಸಗಿದ್ದವರ ವಿರುದ್ಧ ವರದಿ ಸಲ್ಲಿಸಲಾಗಿದೆ.
ಕಾರವಾರ: ಮುರುಡೇಶ್ವರದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋಲಾರದಿಂದ (Kolar) ಮುರುಡೇಶ್ವರಕ್ಕೆ ಪ್ರವಾಸ ತೆರಳಿದ್ದವರ ಪೈಕಿ ನಾಲ್ಕು ಜನ ವಿದ್ಯಾರ್ಥಿನಿಯರು ನೀರು ಪಾಲಾದ ಬಳಿಕ ಉತ್ತರ ಕನ್ನಡ (Uttara Kannada) ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಒಂದೆಡೆ ಮುರುಡೇಶ್ವರ ಕಡಲ ತೀರದಲ್ಲಿ ನಿರ್ಬಂಧ ಹೇರಲಾಗಿದ್ದು, ಇನ್ನೊಂದೆಡೆ ಮುಖ್ಯ ಶಿಕ್ಷಕಿ ಸೇರಿ ಒಟ್ಟು 7 ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿಕ್ಷಕರ ವಿರುದ್ದ ಪ್ರಕರಣ ದಾಖಲಿಸಲಾಗಿದ್ದು, ನಾಲ್ಕು ವಿದ್ಯಾರ್ಥಿನಿಯರ ಸಾವಿಗೆ ಕಾರಣ, ನಿರ್ಲಕ್ಷ್ಯ ಕುರಿತು ತನಿಖೆ ಕೈಗೊಂಡಿದ್ದಾರೆ.ಇದನ್ನೂ ಓದಿ: ವೈದ್ಯನ ಕೈಹಿಡಿದ್ರೂ ಸುಖವಿಲ್ಲದ ಬದುಕು, 4 ವರ್ಷದಿಂದ ಗೃಹಬಂಧನದಲ್ಲಿ ಗೃಹಿಣಿ!
ಈ ಮಧ್ಯೆ ಪ್ರವಾಸಿಗರಿಗೆ ಜಿಲ್ಲಾಡಳಿತ ಕಡಲ ತೀರಕ್ಕೆ ನಿರ್ಬಂಧ ಹೇರಿದೆ. ಇದೀಗ ಮುರುಡೇಶ್ವರ ಬಿಟ್ಟಿರುವ ಪಾರ್ಥಿವ ಶರೀರಗಳು ಇಂದು (ಡಿ.12) ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ತಲುಪಲಿದೆ. ಬಳಿಕ ಜಿಲ್ಲಾಡಳಿತದ ವತಿಯಿಂದ ಅಂತಿಮ ನಮನ ಸಲ್ಲಿಸಿ, ನಂತರ ಅವರವರ ಕುಟುಂಬಗಳಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗುತ್ತದೆ.
ಘಟನೆ ಏನು?
ಕೋಲಾರದ ಮುಳಬಾಗಿಲು ತಾಲೂಕಿನ ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Morarji Desai Residential School) ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಮುರುಡೇಶ್ವರ ಕಡಲ ತೀರದಲ್ಲಿ ಆಟ ಆಡುವಾಗ ಶಾಲೆಯ 7 ವಿದ್ಯಾರ್ಥಿನಿಯರು ನೀರು ಪಾಲಾಗಿದ್ದರು. 7 ವಿದ್ಯಾರ್ಥಿನಿಯರ ಪೈಕಿ 4 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದರು.ಇದನ್ನೂ ಓದಿ: ಶೇ.99 ರಷ್ಟು ಪುರುಷರದ್ದೇ ತಪ್ಪಿರುತ್ತದೆ – ಟೆಕ್ಕಿ ಅತುಲ್ ಆತ್ಮಹತ್ಯೆ ಕುರಿತು ಕಂಗನಾ ಪ್ರತಿಕ್ರಿಯೆ
ಕಲಬುರಗಿ: ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರ (Girls Student) ದೂರಿನ ಕುರಿತು ನಿರ್ಲಕ್ಷ್ಯ ವಹಿಸಿದ್ದ ಜೇವರ್ಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Morarji Desai Residential School) ಪ್ರಾಂಶುಪಾಲರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪದ ಮೇಲೆ ಜೇವರ್ಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಕನನ್ನು (PT Teacher) ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿತ್ತು. ಈ ಬೆನ್ನಲ್ಲೇ ವಿದ್ಯಾರ್ಥಿನಿಯರ ದೂರಿನ ಕುರಿತು ನಿರ್ಲಕ್ಷ್ಯ ವಹಿಸಿದ್ದ ಜೇವರ್ಗಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರನ್ನೂ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ: ಪತಂಜಲಿ ಸಸ್ಯಾಹಾರಿ ಹರ್ಬಲ್ ಟೂತ್ ಪೌಡರ್‌ನಲ್ಲಿ ಮಾಂಸಾಹಾರಿ ಅಂಶ – ದೆಹಲಿ ಹೈಕೋರ್ಟ್‌ಗೆ ಅರ್ಜಿ
ಈ ಆರೋಪದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಸೇವೆಯಿಂದ ಅಮಾನತು ಮಾಡಿ ಆದೇಶಿಸಿಲಾಗಿದೆ. ಇವರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 98(A) (D)ರ ಪ್ರಕಾರ ಜೀವನಾಂಶ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಅಮಾನತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಟ್ಟಿ ಹೊರಗೆ ಹೋಗುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ತ್ವರಿತ ತೀರ್ಪಿನ ಅಗತ್ಯವಿದೆ: ಮೋದಿ
ಮಂಡ್ಯ: ತಾಯಿ ಇಲ್ಲದ ತಬ್ಬಲಿ ಮಗು ಎಂದು ಅಜ್ಜಿ ಆ ಹುಡುಗನನ್ನು ಮುದ್ದಾಗಿ ಸಾಕಿದ್ದಳು. ಇದೀಗ ಆ ಹುಡುಗ ವಸತಿ ಶಾಲೆಯಿಂದ (Residential School) ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಇತ್ತ ಮುದ್ದಾಗಿ ಸಾಕಿದ್ದ ಮೊಮ್ಮಗ ಕಾಣುತ್ತಿಲ್ಲ ಎಂದು ಅಜ್ಜಿ ಕಣ್ಣೀರಿಡುತ್ತಿದ್ದಾರೆ.
ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲೂಕಿನ ಹಿರೇಮರಹಳ್ಳಿ ಗ್ರಾಮದ ಈರೇಗೌಡ ಎಂಬುವವರ ಪುತ್ರ ಕಿಶೋರ್ ನಾಪತ್ತೆಯಾಗಿದ್ದಾನೆ. ಚಿಕ್ಕ ವಯಸ್ಸಿನಲ್ಲಿ ತಾಯಿ ಕಳೆದುಕೊಂಡು ತಬ್ಬಲಿಯಾದ ಕಿಶೋರ್‌ನನ್ನು ತಂದೆ ಹಾಗೂ ಅಜ್ಜಿ ಪ್ರೀತಿಯಿಂದ ಸಾಕಿ ಸಲಹಿದ್ದರು. ಕಿಶೋರ್‌ನನ್ನು ವಿದ್ಯಾವಂತನನ್ನಾಗಿ ಮಾಡಬೇಕೆಂಬ ಕನಸನ್ನು ಕಟ್ಟಿಕೊಂಡಿದ್ದರು. ಹೀಗಾಗಿ ಕಿಶೋರ್‌ನನ್ನು ಮಂಡ್ಯದ ತಂಗಳಕೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ (Morarji Desai Residential School) ಸೇರಿಸಿದ್ದರು. ಇದನ್ನೂ ಓದಿ: ಗೇಟ್ ತೆಗೆಯೋದು ತಡವಾಗಿದ್ದಕ್ಕೆ ಸೆಕ್ಯೂರಿಟಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕಿ
ವಸತಿ ಶಾಲೆಯಲ್ಲಿ ಕಿಶೋರ್ 9ನೇ ತರಗತಿ ವಿದ್ಯಾಭ್ಯಾಸ (Education) ಮಾಡುತ್ತಿದ್ದ. ಜು.27ರಂದು ರಜೆ ಇದ್ದ ಕಾರಣ ಕಿಶೋರ್ ವಸತಿ ಶಾಲೆಯಿಂದ ಮನೆಗೆ ಬಂದಿದ್ದ. ನಂತರ ರಜೆ ಮುಗಿದ ಬಳಿಕ ತಂದೆ ಈರೇಗೌಡ ಕಿಶೋರ್‌ನನ್ನು ಆ.8 ರಂದು ಮತ್ತೆ ವಸತಿ ಶಾಲೆಗೆ ಬಿಟ್ಟು ಬಂದಿದ್ದರು. ಇದಾದ ನಂತರ ಮತ್ತೆ ಗೌರಿ-ಗಣೇಶ ಹಬ್ಬಕ್ಕೆ (Ganesha Festoival) ತಾಯಿಗೆ ಎಡೆ ಇಡಲು ಕಿಶೋರ್‌ನನ್ನು ಮನೆಗೆ ಕರೆತರಲು ಹೋದ ವೇಳೆ ಇಲ್ಲಿನ ಶಿಕ್ಷಕರು 20 ದಿನಗಳಿಂದ ನಿಮ್ಮ ಮಗ ಶಾಲೆಗೇ ಬಂದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಕ್ಸ್ ಚಚ್ಚಿ ಅಂಪೈರ್‌ರನ್ನು ಬಡಿದೆಬ್ಬಿಸಿದ ಸ್ಮಿತ್ – ಆಸಿಸ್ ಆಟಗಾರನ ಕ್ರೀಡಾ ಬದ್ಧತೆಗೆ ಮೆಚ್ಚುಗೆ
ಆ.8 ರಂದು ಈರೇಗೌಡ ಕಿಶೋರ್‌ನನ್ನು ಮೊರಾರ್ಜಿ ದೇಸಾಯಿ ಶಾಲೆಗೆ ಬಿಡುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಕಿಶೋರ್ ಮತ್ತೆ ಶಾಲೆಯಿಂದ ಹೊರ ಬರುವ ದೃಶ್ಯ ಮಾತ್ರ ಇಲ್ಲ. ಇದಲ್ಲದೇ ಕಿಶೋರ್ ಟ್ರಂಕ್ ಹಾಗೂ ಬಟ್ಟೆಗಳು ಹಾಸ್ಟೆಲ್‌ನಲ್ಲೇ ಇವೆ. ಟ್ರಂಕ್ ಬಳಿ ಒಂದು ಲೆಟರ್ ಸಿಕ್ಕಿದ್ದು, ಇದ್ರಲ್ಲಿ ನನಗೆ ಈ ಶಾಲೆಯಲ್ಲಿ ಓದಲು ಇಷ್ಟವಿಲ್ಲ. ಈ ಬಗ್ಗೆ ನಿಮಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಅಪ್ಪ-ಚಿಕ್ಕಪ್ಪ ನನ್ನ ಹುಡುಕಬೇಡಿ ಎಂದು ಬರೆದಿದೆ. ಆದ್ರೆ ಕಿಶೋರ್ ಪೋಷಕರು ಇದು ನನ್ನ ಮಗನ ಕೈಬರಹವಲ್ಲ ಎಂದು ಹೇಳುತ್ತಿದ್ದಾರೆ. ಇತ್ತ ಪ್ರೀತಿಯಿಂದ ಸಾಕಿದ ಮೊಮ್ಮಗ ಕಾಣೆಯಾಗಿರುವ ಸುದ್ದಿಯನ್ನು ಕೇಳಿ ಅಜ್ಜಿ ಕಣ್ಣೀರು ಹಾಕುತ್ತಿದ್ದಾಳೆ. ಇದನ್ನೂ ಓದಿ: ಕೆರೆ ಮಧ್ಯ ತೆಪ್ಪದಲ್ಲಿ ತೆರಳಿ ಬೆಸ್ಕಾಂ ಸಿಬ್ಬಂದಿಯಿಂದ ವಿದ್ಯುತ್ ದುರಸ್ತಿ – ಎಲ್ಲೆಡೆ ಮೆಚ್ಚುಗೆ
ವಿದ್ಯಾರ್ಥಿಯೊಬ್ಬ ಮೊರಾರ್ಜಿ ದೇಸಾಯಿ ಶಾಲೆಯಿಂದ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಿಸಿಟಿವಿ ದೃಶ್ಯದಲ್ಲಿ ವಿದ್ಯಾರ್ಥಿ ಶಾಲೆಯಿಂದ ಹೊರಗೆ ಹೋಗುವುದು ಸೆರೆಯಾಗಿಲ್ಲ. ಹೀಗಿರುವಾಗ ವಿದ್ಯಾರ್ಥಿ ಎಲ್ಲಿಗೆ ಹೋದ ಎಂಬ ಪ್ರಶ್ನೆಗಳು ಮೂಡುತ್ತಿದೆ. ಈ ಬಗ್ಗೆ ಕಿಶೋರ್ ಪೋಷಕರು ಕೆರಗೊಡು ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಕೇಳಿದ್ರೆ ಈ ಬಗ್ಗೆ ತನಿಖೆ ನಡೆಯುತ್ತಿದೆ. ವಿದ್ಯಾರ್ಥಿಯನ್ನು ಹುಡುಕುತ್ತೇವೆ, ಅಲ್ಲದೇ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ ಹಾಗೂ ವಾರ್ಡನ್ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯ ಹೂಡಿದ್ದಾರೆ.
ಸರ್ಕಾರಿ ಶಾಲೆ, ಪ್ರೈವೆಟ್ ಶಾಲೆ ಎಂಬ ಮೇಲು ಕೀಳು ಇಲ್ಲ. ಸಾಧನೆ ವಿಷಯ ಬಂದರೆ ಬಡವರ ಮಕ್ಕಳು ಶ್ರೀಮಂತರ ಮಕ್ಕಳೆಂಬುವುದಿಲ್ಲ ಎಂಬುವುದಕ್ಕೆ ತಮ್ಮ ಜೀವನವನ್ನು ಉದಾಹರಣೆ ಕೊಟ್ಟರು. ಸರ್ಕಾರಿ ಶಾಲೆಯಲ್ಲಿ ಕಲಿತ ನಾನು ಸಚಿವನಾದೆ. ಐಎಎಸ್, ಐಪಿಎಸ್‍ಗಳು ನನ್ನ ಮಾತನ್ನು ಕೇಳುತ್ತಿದ್ದಾರೆ ಎಂದು ಹಾಸ್ಟೆಲ್ ಮಕ್ಕಳಿಗೆ ಅಶೋಕ್ ಅವರು ಜೀವನ ಪಾಠ ಮಾಡಿದರು.
ಕಲಾವಿದನ ಕಲಾಕೃತಿ, ಟೀ ಮಾರುತ್ತಿದ್ದ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿದ್ದು, ಬೆಸ್ತರ ಮನೆಯ ಮಗ ಅಬ್ದುಲ್ ಕಲಾಂ ಎಂಬ ರಾಷ್ಟ್ರಪತಿ ಆಗಿದ್ದು, ಪದ್ಮನಾಭ ನಗರದ ಸೊಪ್ಪು ಮಾರುವ ವ್ಯಕ್ತಿಯ ಮಗಳು ರ‍್ಯಾಂಕ್ ಪಡೆದ ಸಾಹಸ ಕಥೆಯನ್ನು ವಸತಿ ಶಾಲೆಯ ಮಕ್ಕಳ ಮುಂದೆ ಹೇಳಿ ಪ್ರೋತ್ಸಾಹ ನೀಡಿದರು.
ಇದೇ ವೇಳೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಕೊರೊನಾ ನಂತರ ಮತ್ತೆ ಗ್ರಾಮ ವಾಸ್ತವ್ಯ ಲಾಂಚ್ ಆಗಿದೆ. ಉಡುಪಿಯಲ್ಲಿ ಸುಮಾರು 13,500 ಕಡತ ವಿಲೇವಾರಿ ಗ್ರಾಮ ವಾಸ್ತವ್ಯ ಸಂದರ್ಭ ಮಾಡಲಾಯಿತು. ಗ್ರಾಮವಾಸ್ತವ್ಯ ಅಂದರೆ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸುವುದು. ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳನ್ನು ಬಗೆಹರಿಸುವುದು. ಇದು ನಾಮ್ ಕೆ ವಾಸ್ತೇ ವಾಸ್ತವ್ಯ ಅಲ್ಲ. ರಾಜಕೀಯ ಜಂಜಾಟಗಳ ನಡುವೆ ಗ್ರಾಮವಾಸ್ತವ್ಯ ಜೀವನ ಪ್ರೀತಿ ಕೊಡುತ್ತದೆ ಎಂದರು
ಚಾಮರಾಜನಗರ: ಜಿಲ್ಲೆಯ ಯಳಂದೂರಿನ ಆದರ್ಶ ಶಾಲೆಯ ಬಳಿಕ ಇದೀಗ ಹನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಜಿಲ್ಲೆಯಲ್ಲಿ ಇದೀಗ ಆತಂಕ ಶುರುವಾಗಿದೆ.
ಹನೂರು ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿ ಹಾಗೂ ಓರ್ವ ವಿದ್ಯಾರ್ಥಿನಿಗೆ ಕೋವಿಡ್ ದೃಢಪಟ್ಟಿದೆ. ಶಾಲೆಗಳು ಪ್ರಾರಂಭವಾಗುವ ಮುನ್ನ ಎಲ್ಲ ವಿದ್ಯಾರ್ಥಿಗಳ ಕೋವಿಡ್ ನೆಗೆಟಿವ್ ರಿಪೋರ್ಟ್ ಪಡೆದೇ ಶಾಲೆಗೆ ದಾಖಲು ಮಾಡಿಕೊಳ್ಳಲಾಗಿತ್ತು. ಆದರೆ ಕಳೆದ ಒಂದು ವಾರದ ಹಿಂದೆ ಕೆಲ ವಿದ್ಯಾರ್ಥಿಗಳಲ್ಲಿ ನೆಗಡಿ, ಕೆಮ್ಮು, ಶೀತ ಜ್ವರ ಕಂಡು ಬಂದ ಹಿನ್ನೆಲೆ ಹನೂರು ಪಟ್ಟಣದ ಕೋವಿಡ್ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದ ಸ್ವ್ಯಾಬ್ ಮಾದರಿಯಲ್ಲಿ 3 ವಿದ್ಯಾರ್ಥಿಗಳಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕಳೆದ ವಾರವಷ್ಟೇ ಯಳಂದೂರಿನ ಆದರ್ಶ ಶಾಲೆಯ ಇಬ್ಬರು ಬಾಲಕರಿಗೆ ಕೊರೊನಾ ಸೋಂಕು ತಗುಲಿತ್ತು. ವಿದ್ಯಾರ್ಥಿಗಳು ಸಂತೇಮರಹಳ್ಳಿ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಮೊರಾರ್ಜಿ ಶಾಲೆ ವಿದ್ಯಾರ್ಥಿಗಳಲ್ಲೂ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.
ಕೋಲಾರ: ತಾತ್ಕಾಲಿಕವಾಗಿ ನಡೆಯುತ್ತಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶೌಚಾಲಯದ ಕಟ್ಟಡ ಕುಸಿದ ಪರಿಣಾಮ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗುಣಗಂಟಿ ಪಾಳ್ಯ ಸರ್ಕಲ್‍ನಲ್ಲಿ ನಡೆದಿದೆ.
ಬಿಸ್ನಹಳ್ಳಿ ಮೂಲದ ವಿದ್ಯಾರ್ಥಿನಿ ಜೋಸ್ನಾ ಮೃತಪಟ್ಟ ದುರ್ದೈವಿ. ಮುಳಬಾಗಿಲು ತಾಲೂಕಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಜೋಸ್ನಾ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ದೇವರಾಯ ಸಮುದ್ರದ ಕೀಳುಹೊಳಲಿಯ 12 ಎಕರೆ ಜಮೀನಿನಲ್ಲಿ 21 ಕೋಟಿ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಆದರಿಂದ ವಸತಿ ಶಾಲೆಯನ್ನು ಇರ್ಷಾದ್ ಎಂಬುವವರಿಗೆ ಸೇರಿದ ಖಾಸಗಿ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋದ ವೇಳೆ ಏಕಾಏಕಿ ಕಟ್ಟಡ ಕುಸಿದ ಪರಿಣಾಮ ಆಕೆ ಅವಶೇಷಗಳ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಮೊರಾರ್ಜಿ ದೇಸಾಯಿ ಶಾಲೆಯು ಹಳೆಯ ಕಟ್ಟಡದಲ್ಲಿ ನಡೆಸುತ್ತಿದ್ದರಿಂದ ಹೇಳುವಷ್ಟು ಗಟ್ಟಿಯಾಗಿರಲಿಲ್ಲ. ಈ ವಿಷಯ ತಿಳಿದಿದ್ದರೂ ವಸತಿ ಶಾಲೆಯನ್ನು ಖಾಸಗಿ ಕಟ್ಟಡದಲ್ಲಿ ಮಾಡಿದ್ದೇ ವಿದ್ಯಾರ್ಥಿನಿ ಸಾವಿಗೆ ಕಾರಣವೆಂದು ಪೋಷಕರು ದೂರಿದ್ದಾರೆ. ಸದ್ಯ ಸ್ಥಳಕ್ಕೆ ಜಿಲ್ಲಾಧಿಕಾರಿ ಜೆ. ಮಂಜುನಾಥ್, ತಹಶೀಲ್ದಾರ್ ಪ್ರವೀಣ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.