ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್‍ಗಿರಿ ಮುಂದುವರಿದಿದೆ. ಪುತ್ತೂರಿನ ಬಿರುಮಲೆಗುಡ್ಡದಲ್ಲಿ ವಿಹರಿಸುತ್ತಿದ್ದ ಜೋಡಿಗೆ ಪಾನಮತ್ತನಾಗಿ ಬಂದ ಯುವಕರ ಗುಂಪು ಕಿರುಕುಳ ನೀಡಿದೆ.
ಮಂಗಳೂರು: ಕೊಡಗಿನಲ್ಲಿ (Kodagu) ಇತ್ತೀಚೆಗೆ ಒಬ್ಬ ಹಿಂದೂ ಚುಚ್ಚಿದ ಕಾರಣ ಒಬ್ಬ ಮುಸ್ಲಿಂ ತೀರಿ ಹೋದ, ಅದು ದೊಡ್ಡ ಗಲಾಟೆ ಆಗಿಲ್ಲ. ಅದು ವೈಯಕ್ತಿಕ ಕಾರಣದಿಂದ ಆಗಿದ್ದು. ಯಾವುದೋ ಸಂದರ್ಭದಲ್ಲಿ ಕೊಲೆ ಆಯ್ತು. ನಮ್ಮ ಅದೃಷ್ಟ ಏನಂದ್ರೆ ಹಿಂದೂ ತೀರಿ ಹೋಗಿದ್ರೆ ಇಡೀ ಊರಿಗೆ ಬೆಂಕಿ ಹಚ್ಚಿರೋರು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ, ನೈತಿಕ ಪೊಲೀಸ್‍ಗಿರಿ (Moral Policing) ವಿಚಾರವಾಗಿ ಮಾತನಾಡಿದ್ದಾರೆ. ಈ ವೇಳೆ ಯಾವುದೇ ಕಾರಣ ಇರಲಿ, ಹಿಂದೂ ಮುಸ್ಲಿಂ ಇದ್ರೆ ಇವರಿಗೆ ಅರ್ಥ ಬೇರೆಯೇ ಆಗಿರುತ್ತದೆ. ಯಾರೇ ಕಾನೂನನ್ನು ಕೈಗೆತ್ತಿಕೊಂಡರೂ ಕ್ರಮ ಆಗುತ್ತದೆ. ಇತ್ತೀಚೆಗೆ ಮೂರು ಜನರ ಬಂಧನ ಆಗಿದೆ. ಇದು ಜಿಲ್ಲೆಗೆ ಕೆಟ್ಟ ಹೆಸರು, ಇಡೀ ದಕ್ಷಿಣ ಕನ್ನಡಕ್ಕೆ ಇದು ಕಳಂಕ. ಇದೇ ಕಾರಣಕ್ಕೆ ಇವತ್ತು ಬೇರೆ ಜನರು ಇಲ್ಲಿಗೆ ಬರುತ್ತಿಲ್ಲ. ಈ ಕಳಂಕದಿಂದ ಜಿಲ್ಲೆ ಹೊರ ಬರಬೇಕು. ಸುರಕ್ಷಿತ ವಾತಾವರಣ ಸೃಷ್ಟಿಯಾಗಬೇಕು ಎಂದಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಅನ್ಯಾಯವಾಗಿರೋದು ಸತ್ಯ, ಸತ್ಯ – ನಾನು ಹೇಳಿದ್ದು ಸುಳ್ಳಾದ್ರೆ ರಾಜಕೀಯ ಬಿಡ್ತಿನಿ: ಸಿಎಂ
ಜಿಲ್ಲೆಯಲ್ಲಿ ಆರ್‍ಎಸ್‍ಎಸ್, ಭಜರಂಗದಳ ಪ್ರಚೋದನೆ ಮಾಡುತ್ತಿದೆ. ಇವರ ಪ್ರಚೋದನೆಯಲ್ಲಿ ಇವರು ಹೇಳಿದ್ದೇ ನಡೀಬೇಕು ಎಂದುಕೊಂಡಿದ್ದಾರೆ. ಇದು ಹಿಂದೂ ದೇಶ, ಹಿಂದುತ್ವ ಎನ್ನುತ್ತಿದ್ದಾರೆ. ಆಂಟಿ ಕಮ್ಯನಲ್ ವಿಂಗ್ ಫೆಲ್ಯೂರ್ ಅಲ್ಲ, ಅವರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಸಹೋದರತ್ವ ಮತ್ತು ಕೋಮು ಸೌಹಾರ್ದ ನಮಗೆ ಮುಖ್ಯ ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ಅನಂತ್ ಕುಮಾರ್, ನಳಿನ್‍ಕುಮಾರ್ ಕಟೀಲ್, ಸುನೀಲ್ ಕುಮಾರ್‍ಗೆ ದ್ವೇಷವೇ ಬಂಡವಾಳವಾಗಿದೆ. ಬಿಜೆಪಿಯವರದ್ದು ಹೆದರಿಸೋದು ಮತ್ತು ಸರ್ವಾಧಿಕಾರ. ವಿರೋಧ ಪಕ್ಷ ರಹಿತ ದೇಶ ಮಾಡಲು ಬಿಜೆಪಿ (BJP) ಹೊರಟಿದೆ. ಏಕಪಕ್ಷೀಯ ದೇಶ ಮತ್ತು ಒಬ್ಬನೇ ನಾಯಕ ಇರಬೇಕು ಎಂದುಕೊಂಡಿದ್ದಾರೆ. ಈ ತರಹದ ಪ್ರಜಾಪ್ರಭುತ್ವ ಈ ದೇಶಕ್ಕೆ ಒಳ್ಳೆಯದಲ್ಲ. ಬಹಳ ಬುದ್ದಿವಂತಿಕೆಯಿಂದ ಧರ್ಮದ ಹೆಸರಲ್ಲಿ ತಂದಿಡುತ್ತಿದ್ದಾರೆ. ಈ ದೇಶದ ಸಮಸ್ಯೆ ಬಗ್ಗೆ ನರೇಂದ್ರ ಮೋದಿ ಮಾತನಾಡಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ತಿರುಪತಿ ಯಾತ್ರೆ ಭಾಗ್ಯ
– ಹಿಂದೂ ವ್ಯಕ್ತಿಯೊಂದಿಗೆ ಬೈಕ್‌ನಲ್ಲಿ ಬಂದಿದ್ದಕ್ಕೆ ಮುಸ್ಲಿಂ ಯುವತಿ ಮೇಲೆ ಹಲ್ಲೆ
ಹಾವೇರಿ: ಹಾನಗಲ್ ನೈತಿಕ ಪೊಲೀಸ್ ಗಿರಿ (Moral Policing) ಹಾಗೂ ಗ್ಯಾಂಗ್ ರೇಪ್ ಪ್ರಕರಣ ಮುನ್ನೆಲೆಯಲ್ಲಿರುವಾಗಲೇ ಬ್ಯಾಡಗಿ ಪಟ್ಟಣದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ನಡೆದಿದೆ.
ಹಿಂದೂ ವ್ಯಕ್ತಿಯೊಬ್ಬನ ಜೊತೆ ಕಾಣಿಸಿಕೊಂಡಿದ್ದರು ಎಂಬ ಕಾರಣಕ್ಕೆ ಮುಸ್ಲಿಂ ಯುವತಿಯ (Muslim Women) ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದೆ. ಹಲ್ಲೆಗೊಳಗಾದ ಮುಸ್ಲಿಂ ಯುವತಿ ಬ್ಯಾಡಗಿ ತಾಲೂಕು ಅಗಸನಹಳ್ಳಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಹೊರಟಿದ್ದರು. ತಮ್ಮ ಜೊತೆ ಕೆಲಸ ಮಾಡ್ತಿದ್ದ ಜಗದೀಶ್ ಎಂಬ ವ್ಯಕ್ತಿ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ರಾಮಮಂದಿರದ ಮಂಡಲೋತ್ಸವ ಪೂಜೆಗೆ ರಾಯಚೂರಿನ ವೈದಿಕರಿಬ್ಬರು ಆಯ್ಕೆ
ಬ್ಯಾಡಗಿ ಪಟ್ಟಣದ ಪುರಸಭೆಯ ಬಳಿಯ ಶಿವನ ದೇವಸ್ಥಾನದ ಬಳಿ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿದೆ. ನೀನು ಯಾಕೆ ಇವನ ಜೊತೆ ಬೈಕ್ ನಲ್ಲಿ ಬಂದೆ? ಎಂದು ಪ್ರಶ್ನಿಸಿ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಯುವತಿಯನ್ನ ಎಳೆದಾಡಿ ಕಪಾಳಕ್ಕೆ ಹೊಡೆದು ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿದ್ದಾರೆ. ಜೀವ ಬೆದರಿಕೆಯನ್ನೂ ಹಾಕಿದ್ದಾರೆಂದು ಆಕೆ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿಗಳೇ ಹೀಗೆಲ್ಲ ಆಗ್ತಿರುತ್ತೆ- ಸಿಎಂಗೆ ಟಾಂಗ್ ಕೊಟ್ಟ ಮೋದಿ ವೀಡಿಯೋ ವೈರಲ್
ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ 9 ಮಂದಿ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ, 7 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನ ಅಬ್ದುಲ್ ಖಾದರ್ ಮುದಗಲ್, ಮನ್ಸೂರ್ ತಾಂಡೂರು, ಮೆಹಬೂಬಖಾನ್ ಬಡಿಗೇರ, ರೀಯಾಜ್,ಅಲ್ಪಾಜ್ ಬಳಿಗಾರ, ಅಬ್ದುಲ್ ದೇಸೂರ, ಖಾದರ್ ಕಣಕೆ, ಸಲೀಂ ಸಾಬ್ ಖಾಜಿ, ಮಹಬೂಬ್ ಅಲಿ ಹಲಗೇರಿ ಆರೋಪಿಗಳು ಎಂದು ಗುರುತಿಸಲಾಗಿದೆ. ಡಿವೈಎಸ್ಪಿ ಪಾಟೀಲ ನೇತೃತ್ವದಲ್ಲಿ ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ ಕ್ರಿಕೆಟಿಗ ಆರ್.ಅಶ್ವಿನ್‍ಗೆ ಆಹ್ವಾನ
ಬೆಂಗಳೂರು: ಹಾವೇರಿಯಲ್ಲಿ (Haveri) ನಡೆದ ನೈತಿಕ ಪೊಲೀಸ್ಗಿರಿ (Moral Policing) ಪ್ರಕರಣದಲ್ಲಿ ಕೆಲವರ ಬಂಧನವಾಗಿದೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G.Parameshwar) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ನೈತಿಕ ಪೊಲೀಸ್‍ಗಿರಿ ವಿಚಾರವಾಗಿ ಸಂತ್ರಸ್ತೆಯಿಂದ ಗ್ಯಾಂಗ್ ರೇಪ್ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಅವರು ಹಾವೇರಿ ಕೇಸ್ ತನಿಖೆ ನಡೆಯುತ್ತಿದೆ. ಮೊದಲು ಆಕೆ ಗ್ಯಾಂಗ್ ರೇಪ್ ಎಂದು ದೂರು ಕೊಟ್ಟಿರಲಿಲ್ಲ. ನಂತರ ಆಕೆ ರೇಪ್ ಎಂದು ದೂರು ಕೊಟ್ಟಿದ್ದಾರೆ. ಈಗಾಗಲೇ ಪ್ರಕರಣದಲ್ಲಿ ಹಲವರ ಬಂಧನ ಅಗಿದೆ. ಈ ಬಗ್ಗೆ ತನಿಖೆ ನಡೆಯಲಿದೆ. ತನಿಖೆ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ನಾಸಿಕ್‌ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್‌ಗೂ ಏನು ಸಂಬಂಧ?
ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡೋ ಕೆಲಸ ಮಾಡುವುದಿಲ್ಲ. ಈ ಪ್ರಕರಣವನ್ನು ಲೈಟ್ ಆಗಿ ತೆಗೆದುಕೊಂಡು ಬಿ ರಿಪೋರ್ಟ್ ಹಾಕೋಕು ಬಿಡುವುದಿಲ್ಲ. ರೇಪ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯಲಿದೆ. ಅಲ್ಲದೇ ಟೆಸ್ಟ್ ಮಾಡುವುದು ಸೇರಿದಂತೆ ಹಲವು ಪ್ರಕ್ರಿಯೆ ಇದೆ. ತನಿಖೆ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ರಾಮಲಲ್ಲಾ ಪ್ರತಿಷ್ಠಾಪನೆ, ಇತರೆ ಪೂಜೆಗಳ ಬಗ್ಗೆ ಪ್ರಧಾನ ಅರ್ಚಕರು ವಿವರಿಸಿದ್ದು ಹೀಗೆ
ಹಾವೇರಿ: ರಾಜ್ಯದಲ್ಲಿ ಇತ್ತೀಚಿಗೆ ನೈತಿಕ ಪೊಲೀಸ್‌ಗಿರಿ (Moral Policing) ಹೆಚ್ಚಾಗುತ್ತಿದ್ದು, ಅನ್ಯಕೋಮಿನ ವಿವಾಹಿತ ಮಹಿಳೆಯೊಂದಿಗೆ ಪುರುಷ ಸಿಕ್ಕಿ ಬಿದ್ದು ಇಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಾನಗಲ್ (Hanagal) ತಾಲೂಕಿನ ನಾಲ್ಕರ ಕ್ರಾಸ್ ಬಳಿ ಇರುವ ಹೋಟೆಲಿನಲ್ಲಿ ಈ ಘಟನೆ ನಡೆದಿದೆ. ಅನ್ಯಕೋಮಿನ ವಿವಾಹಿತ ಮಹಿಳೆ ಮತ್ತು ಪುರುಷನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಟೋ ಚಾಲಕನೊಬ್ಬನ ಮಾಹಿತಿ ಮೇರೆಗೆ, 5 ಜನರ ಯುವಕರ ಗುಂಪು ಏಕಾಏಕಿ ಲಾಡ್ಜ್‌ಗೆ ನುಗ್ಗಿದ್ದಾರೆ. ರೂಮಿನಲ್ಲಿ ನೀರು ಬರುತ್ತಾ ಇಲ್ವೋ ಎಂಬುದರ ಬಗ್ಗೆ ಪರೀಕ್ಷೆ ಮಾಡಬೇಕು ಎಂದು ಹೇಳಿ ಯುವಕರು ಬಾಗಿಲು ತೆಗೆಸಿದ್ದಾರೆ. ಇದನ್ನೂ ಓದಿ: ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಗಾಢ ನಿದ್ದೆಗೆ ಜಾರಿದ!
ಈ ವೇಳೆ ಬುರ್ಖಾ ಹಾಕಿಕೊಂಡು ಬಂದು ಮಲಗಿದ್ಯಾ ಎಂದು ಪ್ರಶ್ನಿಸಿ ಮಹಿಳೆಯನ್ನು ಮತ್ತು ಪುರುಷ ಸೋಮಶೇಖರ್ ಚೆನ್ನಾಗಿ ಥಳಿಸಿದ್ದಾರೆ. ನಿನಗೆ ನಮ್ಮ ಹುಡುಗಿಯೇ ಬೇಕಾ ಎಂದು ಹೇಳಿ ಸೋಮಶೇಖರ್ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ.
ಪ್ರಕರಣ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಲಾಡ್ಜ್ ರೂಂ ಬಾಯ್ ವಿನಯ್ ಕ್ಯಾಸನೂರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಾಹಿತ ಮಹಿಳೆಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.
ಹಲ್ಲೆ ನಡೆಸಿದ ಅಕ್ಕಿಆಲೂರು ಗ್ರಾಮದ ಅಲ್ತಾಫ್ ಮತ್ತು ಮರ್ದಾನ್ ಸಾಬ್ ಎಂಬುವರನ್ನ ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಮೂವರು ಆರೋಪಿಗಳ ಪತ್ತೆಗೆ ಹಾನಗಲ್ ಪೊಲೀಸರು ಬಲೆ ಬೀಸಿದ್ದಾರೆ.
ಮಹಿಳೆ ಮೇಲೆ ಹಲ್ಲೆ ಮಾಡಿದ ಬಳಿಕ ಮತ್ತೆ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಜೊತೆಗೆ ಆ ವಿವಾಹಿತ ಮಹಿಳೆಗೆ ಹಲ್ಲೆ ಮಾಡಿ 500 ಕೊಟ್ಟು ರೂಪಾಯಿ ಕೊಟ್ಟು ಕಳಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಬೆಳಗಾವಿ: ಬೆಳಗಾವಿಯಲ್ಲಿ (Belagavi) ಯುವಕ ಮತ್ತು ಯುವತಿ ಮೇಲೆ ನೈತಿಕ ಪೊಲೀಸ್‌ಗಿರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಕೋಟೆ ಕೆರೆಯಲ್ಲಿ ಸಚಿನ್ ಲಮಾಣ್ ಮತ್ತು ಮುಸ್ಕಾನ್ ಎಂಬವರು ಕುಳಿತಿದ್ದರು. ಈ ವೇಳೆ ಯುವಕರ ಗುಂಪು ಯುವಕ-ಯುವತಿ ಮೇಲೆ ಹಲ್ಲೆ ಮಾಡಿದೆ. ಘಟನೆ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರೇಮಿಗಳೆಂದು ಅಕ್ಕ-ತಮ್ಮನನ್ನು ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು
ಪ್ರಕರಣ ಸಂಬಂಧ 9 ಆರೋಪಿತರನ್ನು ಬಂಧಿಸಲಾಗಿದ್ದು, ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರಿದ್ದಾರೆ. ಮೊಮ್ಮಹದ್ ಇನಾಮದಾರ್ (22), ಆತೀಫ್ ಅಹಮ್ಮದ್ ಶೇಖ್ (22), ಮೊಹಮ್ಮದ್ ಅಮನ್(27), ಸೈಫಲಿ ಮಗ್ದುಮ್ (27), ಉಮರ ಬಡೇಗರ್ (19), ಅಜಾನ್ ಕಾಲಕುಂದ್ರಿ (19), ರಿಯಾನ್ ರೋಟವಾಲೆ (19) ಬಂಧಿತ ಆರೋಪಿಗಳು.
ಕೋಟೆ ಕೆರೆ ಆವರಣದಲ್ಲಿ ಚಿಕ್ಕದಾದ ಶೆಡ್‌ನಲ್ಲಿ ಯುವಕರ ಮೇಲೆ ಹಲ್ಲೆ ಮಾಡಲಾಗಿದೆ. ಕೋಟೆ ಕೆರೆ ಆವರಣ ಕಾಂಪೌಂಡ್ ನಿರ್ಮಾಣ ಪೂರ್ಣವಾಗಿಲ್ಲ. ಈ ಕಾರಣಕ್ಕೆ ಕೆಲ ಯುವಕರು ಚಿಕ್ಕಾದಾದ ದಾರಿ ಮಾಡಿಕೊಂಡು ಶೆಡ್ ನಿರ್ಮಿಸಿಕೊಂಡಿದ್ದಾರೆ. ಕಾಂಪೌಂಡ್ ನಿರ್ಮಿಸುವಂತೆ ಮಹಾನಗರ ಪಾಲಿಕೆಗೂ ಪತ್ರ ಬರೆಯುತ್ತೇವೆ. ಶೆಡ್‌ಗೆ ಹೊಂದಿಕೊಂಡು ಮನೆಯೊಂದು ಇದೆ. ಮಾಲೀಕರ ವಿಚಾರಣೆ ನಡೆಸುತ್ತೇವೆ. ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ ಯಾರಾದರೂ ಇದ್ರೆ ಬಂಧಿಸಲಾಗುವುದು ಎಂದು ಡಿಸಿಪಿ ರೋಹನ್ ಜಗದೀಶ್ ತಿಳಿಸಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್‌ನಿಂದ ಹೊಡೆದು 3 ತಿಂಗಳ ಗರ್ಭಿಣಿಯನ್ನು ಕೊಂದು ಅಪಘಾತವೆಂದ ಪತಿ!
ಮಂಗಳೂರು: ಒಟ್ಟಿಗೆ ಸುತ್ತಾಡುತ್ತಿದ್ದ ಅನ್ಯಕೋಮಿನ ಯುವಕ ಹಾಗೂ ಯುವತಿಯನ್ನು ಬೆನ್ನಟ್ಟಿ ಬಜರಂಗದಳ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿಗೆ ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಮೊರ್ಗನ್ಸ್ ಗೇಟ್ ಬಳಿ ಈ ಘಟನೆ ನಡೆದಿದೆ. ಮಂಗಳೂರಿನ ಮಂಕಿಸ್ಟ್ಯಾಂಡ್ ನಿವಾಸಿ ಅನ್ಯಕೋಮಿನ ಯುವಕನೊಂದಿಗೆ ಚಿಕ್ಕಮಗಳೂರಿನ ಯುವತಿ ಸುತ್ತಾಡುತ್ತಿದ್ದಳು. ಮಂಕಿಸ್ಟೆಂಡ್‌ನ ಮಳಿಗೆಯೊಂದರಲ್ಲಿ ಈ ಜೋಡಿ ಉದ್ಯೋಗದಲ್ಲಿದ್ದಾರೆ.
ಸ್ಕೂಟರ್‌ನಲ್ಲಿ ಜೋಡಿ ಸುತ್ತಾಟ ಗಮನಿಸಿ ಬಜರಂಗದಳ ಕಾರ್ಯಕರ್ತರು ಬೈಕ್‌ನಲ್ಲಿ ಬೆನ್ನಟ್ಟಿದ್ದಾರೆ. ಮಂಕಿಸ್ಟ್ಯಾಂಡ್ ಬಳಿ ಸ್ಕೂಟರ್ ಅಡ್ಡ ಹಾಕಿ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಎರಡೂ ಕೋಮಿನ ಯುವಕರ ತಂಡ ಸ್ಥಳದಲ್ಲಿ ಜಮಾಯಿಸಿದ್ದು, ಮಾತಿನ ಚಕಮಕಿ ನಡೆದಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುವಷ್ಟರಲ್ಲಿ ಪಾಂಡೇಶ್ವರ ಠಾಣೆಯ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಗುಂಪು ಚದುರಿಸಿ ಅನ್ಯಕೋಮಿನ ಜೋಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ನೈತಿಕ ಪೊಲೀಸ್ಗಿರಿ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಷಯ್ ರಾವ್ ಹಾಗೂ ಶಿಬಿನ್ ಪಡಿಕಲ್ ಎಂಬಿಬ್ಬರನ್ನು ಪಾಂಡೇಶ್ವರ ಪೊಲೀಸರಿಂದ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi) ನೈತಿಕ ಪೊಲೀಸ್ ಗಿರಿ (Moral Policing) ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮುಸ್ಲಿಂ (Muslim) ಯುವತಿಯೊಂದಿಗೆ ಆಟೋದಲ್ಲಿ (Auto) ಹೊರಟಿದ್ದ ಯುವಕನ ಮೇಲೆ ಅನ್ಯಕೋಮಿನ ಗುಂಪೊಂದು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದ ಖಂಜರ್ ಗಲ್ಲಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ (Gokak) ತಾಲೂಕಿನ ಮಲ್ಲಾಪುರ ಪಿ.ಜಿ ಗ್ರಾಮದ ಜ್ಞಾನೇಶ್ವರ ಎಂಬ ಯುವಕನ ಮೇಲೆ ಅನ್ಯಕೋಮಿನ ಕೆಲ ಯುವಕರು ಹಲ್ಲೆ ನಡೆಸಿದ್ದಾರೆ. ಪೊಲೀಸರ ಎದುರೇ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಬೆಳಗಾವಿಯ ಖಡೇಬಜಾರ್‌ನಲ್ಲಿ ಘಟನೆ ನಡೆದಿದ್ದು, ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕುಕ್ಕರ್‌ನಿಂದ ಹೊಡೆದು ಪ್ರಿಯತಮೆಯ ಕೊಲೆಗೈದ ಪ್ರಿಯಕರ
ಹಲ್ಲೆಗೊಳಗಾದ ಜ್ಞಾನೇಶ್ವರ ಚಪ್ಪಲಿ ವ್ಯಾಪಾರಿ ಆಗಿದ್ದು, ತನ್ನೂರಿನ ಪರಿಚಯಸ್ಥ ಅನ್ಯಕೋಮಿನ ಯುವತಿಯ ಜೊತೆಗೆ ಬೆಳಗಾವಿ ಬಸ್ ನಿಲ್ದಾಣದಿಂದ ಖಡೇಬಜಾರ್ ಕಡೆಗೆ ಆಟೋದಲ್ಲಿ ತೆರಳುತ್ತಿದ್ದ. ಇದನ್ನು ಗಮನಿಸಿ ಆಟೋ ಹಿಂಬಾಲಿಸಿದ 10ಕ್ಕೂ ಅಧಿಕ ಯುವಕರು, ಅವರಿಬ್ಬರು ಖಡೇಬಜಾರ್‌ಗೆ ಬರುತ್ತಿದ್ದಂತೆ ರಿಕ್ಷಾವನ್ನು ತಡೆದು ನಿಲ್ಲಿಸಿ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇದನ್ನೂ ಓದಿ: ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಸರ ಕಳ್ಳತನ
ಬಳಿಕ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಯುವಕರಿಂದ ಗೂಂಡಾಗಿರಿ ಪ್ರದರ್ಶನ ಮಾಡಲಾಗಿದೆ. ಹಿಂದೂ ಯುವಕನ ಮೇಲೆ ಹಲ್ಲೆಗೈಯುತ್ತಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರಿಂದ ಕೆಲವು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ವಿಮಾನದಲ್ಲಿ ಬಂದು ದುಬಾರಿ ಸೀರೆ ಕದ್ದು ಪರಾರಿಯಾಗ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್ ಅರೆಸ್ಟ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ (Moodabidire) ಮತ್ತೆ ನೈತಿಕ ಪೊಲೀಸ್ ಗಿರಿ (Moral Policing) ನಡೆದಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅನ್ಯಕೋಮಿನ ವಿದ್ಯಾರ್ಥಿಯೋರ್ವ ಹಿಂದೂ ವಿದ್ಯಾರ್ಥಿನಿ ಜೊತೆ ಮಾತನಾಡಿದ್ದನ್ನು ಪ್ರಶ್ನಿಸಿ ಮೂವರು ಹಿಂದೂ ಯುವಕರು ಹಲ್ಲೆ ನಡೆಸಿದ್ದಾರೆ. ಕಳೆದ ಆಗಸ್ಟ್ 22 ರಂದು ಮೂಡಬಿದ್ರೆಯ ರಾಜೀವ ಗಾಂಧಿ ಸಂಕೀರ್ಣದ ಎದುರು ಈ ಘಟನೆ ನಡೆದಿದೆ. ಅಂದು ರಾತ್ರಿ ಬೆಂಗಳೂರಿಗೆ ತೆರಳಲು ಹಿಂದೂ ವಿದ್ಯಾರ್ಥಿನಿಯೋರ್ವಳು ಮೂಡಬಿದ್ರೆಯ ಕೋಟೆಬಾಗಿಲು ಸಮೀಪ ಇದ್ದು ಆ ವೇಳೆ ಮುಸ್ಲಿಂ ವಿದ್ಯಾರ್ಥಿಯೋರ್ವ ಆಕೆಯೊಂದಿಗೆ ಮಾತನಾಡಿದ್ದ. ಬಳಿಕ ಯುವತಿ ಬಸ್ ಹತ್ತಿ ಬೆಂಗಳೂರಿಗೆ ತೆರಳಿದ್ದಾಳೆ. ಇದನ್ನೂ ಓದಿ: ಮುಂದಿನ ಪ್ರಾಜೆಕ್ಟ್ ಗಗನಯಾನಕ್ಕೂ ನಮ್ಮ ಕಂಪನಿಯಲ್ಲಿ ಬಿಡಿಭಾಗ ತಯಾರಿ: ಚಂದ್ರಯಾನ-3 ರಾಕೆಟ್‌ಗೆ ಬಿಡಿಭಾಗ ಪೂರೈಸಿದ್ದ ಬೆಳಗಾವಿ ದೀಪಕ್ ಮಾತು
ಈ ವೇಳೆ ಮುಸ್ಲಿಂ ವಿದ್ಯಾರ್ಥಿಯನ್ನು ಹಿಂಬಾಲಿಸಿಕೊಂಡು ಬಂದ ಮೂವರು ಯುವಕರು ಮೂಡಬಿದ್ರೆಯ ರಾಜೀವ್ ಗಾಂಧಿ ಸಂಕೀರ್ಣದ ಬಳಿ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾರೆ. ಇದೀಗ ಮೂವರು ಆರೋಪಿಗಳಾದ ಅಭಿಲಾಷ್, ಪ್ರೇಮ್ ಭಂಡಾರಿ ಹಾಗೂ ಸಂಜಯ್ ನನ್ನು ಪ್ರಕರಣ ದಾಖಲಿಸಿಕೊಂಡ ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ.