Tag: Moped

  • ಒಂಟಿಸಲಗ ಕಂಡು ಮೊಪೆಡ್ ನಿಲ್ಲಿಸಿ ಓಡಿದ ಸವಾರ – ಕಾಲಿನಿಂದ ಒದ್ದು ಮುನ್ನಡೆದ ಗಜರಾಜ

    ಒಂಟಿಸಲಗ ಕಂಡು ಮೊಪೆಡ್ ನಿಲ್ಲಿಸಿ ಓಡಿದ ಸವಾರ – ಕಾಲಿನಿಂದ ಒದ್ದು ಮುನ್ನಡೆದ ಗಜರಾಜ

    ಹಾಸನ: ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ನಿಂತ ಒಂಟಿಸಲಗವನ್ನು ಕಂಡು ಟಿವಿಎಸ್ ಮೊಪೆಡ್ (Moped) ನಿಲ್ಲಿಸಿ ಸವಾರೊಬ್ಬರು ಓಡಿ ಹೋಗಿದ್ದಾರೆ. ನಂತರ ಕಾಡಾನೆ (Elephant) ನಿಲ್ಲಿಸಿದ್ದ ಟಿವಿಎಸ್ ಮೊಪೈಡ್‍ಗೆ ಕಾಲಿನಿಂದ ಒದ್ದು ಬೀಳಿಸಿ ಕಾಫಿ ತೋಟದೊಳಗೆ ಓಡಿ ಹೋಗಿರುವ ಘಟನೆ ಹಾಸನ (Hassana) ಜಿಲ್ಲೆ, ಸಕಲೇಶಪುರ ತಾಲೂಕಿನ ಜನ್ನಾಪುರ ಗ್ರಾಮದಲ್ಲಿ ನಡೆದಿದೆ.

    ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಒಂಟಿಸಲಗವೊಂದು ಮೊಪೆಡ್ ಸವಾರೊಬ್ಬರಿಗೆ ಕಾಣಿಸಿಕೊಂಡಿದೆ. ಕಾಡಾನೆ ಬರುವುದನ್ನು ಕಂಡು ಮೊಪೆಡ್ ನಿಲ್ಲಿಸಿ ಅಲ್ಲಿಂದ ಓಡಿದ್ದಾರೆ. ಇತ್ತ ಜನರನ್ನು ಕಂಡ ಕಾಡಾನೆ ಸಿಟ್ಟಿಗೆದ್ದು ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಲು ಪ್ರಾರಂಭಿಸಿದೆ. ಈ ವೇಳೆ ರಸ್ತೆಯ ಬದಿಯಲ್ಲಿ ನಿಂತಿದ್ದ ಟಿವಿಎಸ್ ಮೊಪೆಡ್‍ನ್ನು ಹಿಂದಿನ ಕಾಲಿನಿಂದ ಒದ್ದು ಬೀಳಿಸಿ ಕಾಫಿ ತೋಟದೊಳಗೆ ಹೋಗಿದೆ. ಇದನ್ನೂ ಓದಿ: ಸಂಕ್ರಾಂತಿಗೂ ಇರಲಿದೆ ಮೈ ಕೊರೆವ ಚಳಿ- ಆರೋಗ್ಯದ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ!

    ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ತೀರ ಮಿತಿಮೀರಿದ್ದು, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಿಲ್ಲರ್ ದುರಂತ ಬಳಿಕ ಮತ್ತೊಂದು ಎಡವಟ್ಟು – ಬ್ರಿಗೇಡ್ ರಸ್ತೆಯಲ್ಲಿ 30 ಅಡಿ ಆಳಕ್ಕೆ ಕುಸಿದ ರಸ್ತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪತ್ನಿಗೆ 90,000 ಮೌಲ್ಯದ ಉಡುಗೊರೆ ನೀಡಿದ ಭಿಕ್ಷುಕ

    ಪತ್ನಿಗೆ 90,000 ಮೌಲ್ಯದ ಉಡುಗೊರೆ ನೀಡಿದ ಭಿಕ್ಷುಕ

    ಭೋಪಾಲ್: ಬಿಕ್ಷುಕನೊಬ್ಬ ತನ್ನ ಪತ್ನಿಗೆ ಉಡುಗೊರೆ ನೀಡಲು 90,000 ರೂ. ಮೌಲ್ಯದ ಮೊಪೆಡ್‍ನ್ನು ಖರಿದಿಸಿದ ಘಟನೆ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ನಡೆದಿದೆ.

    ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಅಮರವಾರ ಗ್ರಾಮದ ಸಂತೋಷ್ ಸಾಹು ಎಂಬ ಭಿಕ್ಷುಕ ಅಂಗವಿಕಲನಾಗಿದ್ದಾನೆ. ಈತನಿಗೆ ಕಾಲುಗಳಿಲ್ಲದಿದ್ದರಿಂದ ತ್ರಿಚಕ್ರ ವಾಹನದಲ್ಲಿ ಕುಳಿತು ಸಂಚರಿಸಬೇಕಿತ್ತು. ತನ್ನ ತ್ರಿಚಕ್ರ ವಾಹನವನ್ನು ಮುಂದಕ್ಕೆ ತಳ್ಳಲು ಪತ್ನಿ ಮುನ್ನಿ ಸಾಹು ಅವಳ ಸಹಾಯ ಪಡೆದುಕೊಳ್ಳುತ್ತಿದ್ದ. ಈ ರೀತಿಯಾಗಿಯೇ ಇಬ್ಬರು ಜೊತೆಗೆ ಭಿಕ್ಷೆ ಬೇಡುತ್ತಿದ್ದರು.

    ಹದಗೆಟ್ಟ ರಸ್ತೆಗಳು ಮತ್ತು ಹವಾಮಾನ ವೈಪ್ಯರೀತ್ಯದಿಂದಾಗಿ ಭಿಕ್ಷೆ ಕೇಳಲು ಇಬ್ಬರು ಆಗಾಗ ತೊಂದರೆ ಆಗುತ್ತಿತ್ತು. ಅಷ್ಟೇ ಅಲ್ಲದೇ ದಿನವಿಡೀ ತ್ರಿಚಕ್ರವಾಹನವನ್ನು ತಳ್ಳಬೇಕಾಗಿರುವುದರಿಂದ ಆತನ ಪತ್ನಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಳು. ಈ ಹಿನ್ನೆಲೆಯಲ್ಲಿ ಸಂತೋಷ್ ಮೊಪೆಡ್ ಖರೀದಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಬಣ ಇಲ್ಲ, ಹೈಕಮಾಂಡ್‌ ಹೇಳಿದ್ದೇ ಅಂತಿಮ: ಪರಿಷತ್‌ ಟಿಕೆಟ್‌ ಬಗ್ಗೆ ಡಿಕೆಶಿ ಮಾತು

    ಪ್ರತಿನಿತ್ಯ ವಾಹನಕ್ಕಾಗಿ ಹಣ ಉಳಿಸಲು ಪ್ರಾರಂಭಿಸಿದರು. ದಂಪತಿ ಬಸ್ ನಿಲ್ದಾಣಗಳು, ದೇವಸ್ಥಾನಗಳು ಮತ್ತು ಮಸೀದಿಗಳಲ್ಲಿ ಭಿಕ್ಷೆ ಬೇಡುವ ಮೂಲಕ ಪ್ರತಿದಿನ ಸುಮಾರು 300 ರಿಂದ 400 ರೂ.ಗಳನ್ನು ಸಂಪಾದಿಸುತ್ತಿದ್ದರು. ಅಷ್ಟೇ ಅಲ್ಲದೇ ಊಟವನ್ನು ಅಲ್ಲೇ ಮಾಡುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಉಳಿತಾಯ ಮಾಡಿ 90 ಸಾವಿರ ನಗದು ಸಂಗ್ರಹಿಸಿ ಮೊಪೆಡ್ ಖರೀದಿಸಿದ್ದಾರೆ. ಈಗ, ದಂಪತಿ ಭಿಕ್ಷೆ ಕೇಳುತ್ತಾ ಮೊಪೆಡ್‍ನಲ್ಲಿ ಚಲಿಸುತ್ತಾರೆ. ಇದನ್ನೂ ಓದಿ: KPCC ಸಭೆಗೆ ಶಾಸಕಿ ಹೆಬ್ಬಾಳ್ಕರ್, ನಿಂಬಾಳ್ಕರ್ ಗೈರು

  • ಮೊಪೆಡ್‍ಗೆ ಲಾರಿ ಡಿಕ್ಕಿ – ಗರ್ಭಿಣಿ ಸೇರಿ ಮೂವರು ಸಾವು

    ಮೊಪೆಡ್‍ಗೆ ಲಾರಿ ಡಿಕ್ಕಿ – ಗರ್ಭಿಣಿ ಸೇರಿ ಮೂವರು ಸಾವು

    ರಾಯಚೂರು: ಜಿಲ್ಲೆಯ ಸಿಂಧನೂರಿನ ಉಮಲೂಟಿ ಬಳಿ ಲಾರಿ ಗಾಲಿಗೆ ಸಿಲುಕಿ ಚಿಕ್ಕ ಮಗು ಮತ್ತು ಗರ್ಭಿಣಿ ಸೇರಿ ಮೂವರು ಸಾವನ್ನಪ್ಪಿದ್ದಾರೆ.

    ಮೃತರನ್ನು ಚಿಕ್ಕಬೇರ್ಗಿಯ ಪರಸಣ್ಣ, ಕನಕಮ್ಮ ದಂಪತಿ ಹಾಗೂ ಅವರ ಮಗಳು ನಾಗಮ್ಮ ಎಂದು ಗುರುತಿಸಲಾಗಿದೆ. ಗರ್ಭಿಣಿಯ ಚೆಕಪ್‍ಗಾಗಿ ಚಿಕ್ಕಬೇರ್ಗಿ ಗ್ರಾಮದಿಂದ ಮೊಪೆಡ್‍ನಲ್ಲಿ ಬಾಗಲಕೋಟೆಯ ಇಳಕಲ್ ಗೆ ಹೊರಟಿದ್ದವರಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದೂವರೆ ವರ್ಷದ ಮಗು ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗರ್ಭಿಣಿ ಆಸ್ಪತ್ರೆ ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

    ಪರಸಣ್ಣ ಹಾಗೂ ನಾಗಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಗರ್ಭಿಣಿ ಕನಕಮ್ಮ ಸಿಂಧನೂರು ತಾಲೂಕು ಆಸ್ಪತ್ರೆ ರವಾನಿಸುವಾಗ ಸಾವನ್ನಪ್ಪಿದ್ದಾರೆ. ಇಳಕಲ್ ಹತ್ತಿರವಾಗುತ್ತೆ ಎಂದು ಮೊಪೆಡ್ ನಲ್ಲೇ ಪತ್ನಿಯನ್ನು ಆಸ್ಪತ್ರೆಗೆ ಪರಸಣ್ಣ ಕರೆದೊಯ್ಯುತ್ತಿದ್ದ ವೇಳೆ ಅಪಘಾತವಾಗಿದೆ. ಘಟನೆ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ಗೆ ಮೊಪೆಡ್ ಡಿಕ್ಕಿ- ಯುವಕ ಸಾವು, ಓರ್ವನ ಸ್ಥಿತಿ ಗಂಭೀರ

    ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ಗೆ ಮೊಪೆಡ್ ಡಿಕ್ಕಿ- ಯುವಕ ಸಾವು, ಓರ್ವನ ಸ್ಥಿತಿ ಗಂಭೀರ

    ರಾಮನಗರ: ಟ್ರ್ಯಾಕ್ಟರ್ ಹಾಗೂ ಮೊಪೆಡ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಗಡಿ ತಾಲೂಕಿನ ಮಾಗಡಿ-ಕುಣಿಗಲ್ ಮುಖ್ಯರಸ್ತೆಯ ಹುಚ್ಚ ಹನುಮೇಗೌಡ ಪಾಳ್ಯದ ಬಳಿ ನಡೆದಿದೆ.

    ಮಾಗಡಿ ತಾಲೂಕಿನ ಅಮೃತೂರಿನ ನಿವಾಸಿ ಗೋವಿಂದ (28) ಮೃತ ಯುವಕ. ಅಪಘಾತದಲ್ಲಿ ಮೊಪೆಡ್‍ನ ಹಿಂಬದಿ ಸವಾರ ಕೆಂಚನಹಳ್ಳಿಯ ರವಿಕುಮಾರ್(33) ಗಾಯಗೊಂಡಿದ್ದು, ಅವರನ್ನು ಸಮೀದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಅಜ್ಜಿ ಮನೆಗೆ ಹೋಗಿದ್ದ ಗೋವಿಂದ ಮಾಗಡಿಯಿಂದ ವಾಪಸ್ ಕೆಂಚನಹಳ್ಳಿ ಹೋಗುತ್ತಿದ್ದರು. ಈ ವೇಳೆ ಗೋವಿಂದ ಅವರ ನಿಯಂತ್ರಣ ತಪ್ಪಿದ ಮೊಪೆಡ್ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ಗೋವಿಂದ ಅವರ ಮೇಲೆ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

    ಮಾಗಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ನಂತರ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು, ಪೊಲೀಸರು ಬಂಧನಕ್ಕಾಗಿ ಹುಡುಕಾಟ ನಡೆಸಿದ್ದಾರೆ.

  • ‘ನಾನ್ ಸೈಡ್ ಬಿಡಲ್ಲ’- ರಸ್ತೆಯ ಮಧ್ಯೆ ಸ್ಕೂಟಿ ನಿಲ್ಲಿಸಿ ಬಸ್ ಚಾಲಕನಿಗೆ ಪಾಠ ಕಲಿಸಿದ ಮಹಿಳೆ

    ‘ನಾನ್ ಸೈಡ್ ಬಿಡಲ್ಲ’- ರಸ್ತೆಯ ಮಧ್ಯೆ ಸ್ಕೂಟಿ ನಿಲ್ಲಿಸಿ ಬಸ್ ಚಾಲಕನಿಗೆ ಪಾಠ ಕಲಿಸಿದ ಮಹಿಳೆ

    ತಿರುವನಂತಪುರಂ: ಕೇರಳದಲ್ಲಿ ಮಹಿಳೆಯೊಬ್ಬರು ಬಸ್‍ಗೆ ಸ್ಕೂಟಿಯನ್ನು ಅಡ್ಡಲಾಗಿ ನಿಲ್ಲಿಸುವ ಮೂಲಕ ಚಾಲಕನಿಗೆ ಬುದ್ಧಿ ಕಲಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿದ್ದು,

    ವೈರಲ್ ಆದ ವಿಡಿಯೋದಲ್ಲಿ ಬಸ್ ಚಾಲಕ ಬಲ ಭಾಗದಲ್ಲಿ ಸಂಚರಿಸಿದ್ದು, ಇದನ್ನು ಕಂಡ ಮಹಿಳೆ ಕೆಂಡಾಮಂಡಲವಾಗಿ ತಾನೂ ಸಹ ತನ್ನ ಸ್ಕೂಟಿಯನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿಕೊಂಡು ನಿಂತಿದ್ದಾರೆ. ಬಸ್ ಸಣ್ಣ ಜಾಗದಲ್ಲೇ ನುಗ್ಗಲು ಯತ್ನಿಸಿದ್ದು, ಆಗ ಮಹಿಳಾ ರೈಡರ್ ತನ್ನ ಸ್ಕೂಟಿಯನ್ನು ರಸ್ತೆಯ ಬಲಭಾಗದಲ್ಲಿ ನಿಲ್ಲಿಸುತ್ತಾರೆ.

    ಬಸ್ ಮುಂದೆ ಸ್ಕೂಟಿ ಸಿಕ್ಕದಾಗಿ ಕಾಣುತ್ತದೆ, ಇನ್ನೊಂದೆಡೆ ಬಸ್ ಡ್ರೈವರ್ ಮಹಿಳೆಯನ್ನು ಹೆದರಿಸಲು ನೋಡುತ್ತಾನೆ. ಆದರೆ ಮಹಿಳೆ ಮಾತ್ರ ಅವರ ಸ್ಥಾನ ಬಿಟ್ಟು ಕದಲುವುದಿಲ್ಲ. ನಂತರ ಚಾಲಕನೇ ಬಸ್ಸನ್ನು ಮಹಿಳೆಯ ಬಲಕ್ಕೆ ಅಂದರೆ, ರಸ್ತೆಯ ಎಡಕ್ಕೆ ಸಂಚಾರಿ ನಿಯಮದಂತೆ ಚಲಿಸುತ್ತಾನೆ.

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆಚ್ಚು ಜನ ಶೇರ್ ಮಾಡಿ ಮಹಿಳೆಯ ಧೈರ್ಯವನ್ನು ಮೆಚ್ಚಿದ್ದಾರೆ. ಕಮೆಂಟ್ ಮಾಡುತ್ತಿದ್ದಾರೆ.

    ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ನಂತರ ನೆಟ್ಟಿಗರು ಮಹಿಳೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಸ್ ರಾಂಗ್ ರೂಟ್‍ನಲ್ಲಿ ಕಿರಿದಾದ ರಸ್ತೆಯಲ್ಲಿ ಚಲಿಸಲು ಯತ್ನಿಸಿದರೂ ಮಹಿಳೆ ಕದಲದೆ ನಿಂತಿರುವುದಕ್ಕೆ ಶಹಬ್ಬಾಶ್ ಎಂದಿದ್ದಾರೆ.

    ಕೆಲವು ಉತ್ತರ ಭಾರತೀಯರು ಇದಕ್ಕೆ ಪ್ರತಿಕ್ರಿಯಿಸಿ, ಇದೇ ಘಟನೆ ಉತ್ತರ ಭಾರತದಲ್ಲಿ ನಡೆದಿದ್ದರೆ ಡ್ರೈವರ್ ಬಸ್ಸನ್ನು ನಿಲ್ಲಿಸುತ್ತಿರಲಿಲ್ಲ. ಇದೊಂದು ಅವಿವೇಕಿಗಳ ತಾಣವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

  • ರಸ್ತೆ ದಾಟುವಾಗ ಬೈಕ್‍ಗೆ ಕ್ರೂಸರ್ ಡಿಕ್ಕಿ, ಇಬ್ಬರ ಸಾವು- ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ರಸ್ತೆ ದಾಟುವಾಗ ಬೈಕ್‍ಗೆ ಕ್ರೂಸರ್ ಡಿಕ್ಕಿ, ಇಬ್ಬರ ಸಾವು- ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಚಿಕ್ಕಮಗಳೂರು: ರೋಡ್ ಕ್ರಾಸ್ ಮಾಡುವಾಗ ಕ್ರೂಸರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್‍ನಲ್ಲಿದ್ದವರು ಸಿನಿಮೀಯ ರೀತಿಯಲ್ಲಿ ಹಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

    ಸೋಮವಾರ ಬೆಳಗ್ಗೆ ಕೊಪ್ಪದ ಪಟ್ಟಣ ಪಂಚಾಯ್ತಿ ಮುಂಭಾಗ ಬೈಕ್‍ನಲ್ಲಿ ಬರ್ತಿದ್ದ ಬಾವ-ಮೈದುನ ವೆಂಕಟೇಶ್ ಹಾಗೂ ರಾಮಪ್ಪ ರೋಡ್ ಕ್ರಾಸ್ ಮಾಡಲು ಮುಂದಾದ್ರು. ಈ ವೇಳೆ ಎದುರುಗಡೆಯಿಂದ ಬಂದ ಕ್ರೂಸರ್ ನೇರವಾಗಿ ಬೈಕಿಗೆ ಡಿಕ್ಕಿ ಹೊಡಿದಿತ್ತು. ಡಿಕ್ಕಿಯ ರಭಸಕ್ಕೆ ಸಿನಿಮೀಯ ರೀತಿಯಲ್ಲಿ ಇಬ್ಬರು ಬೈಕ್‍ನಿಂದ ಹಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರ ಮೈ ಜುಮ್ಮೆನಿಸುವಂತಿದೆ.

    ಒಟ್ಟಿನಲ್ಲಿ ಬೈಕ್ ಓಡಿಸೋರು ಒಂದು ಕ್ಷಣ ಮೈಮರೆತ್ರೂ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಕೊಪ್ಪಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    https://youtu.be/Gwl_eFkFYzQ