Tag: Moong Dal Soup

  • ಇಮ್ಯೂನಿಟಿ ಬೂಸ್ಟಿಂಗ್ ಹೆಸರು ಬೇಳೆಯ ಸೂಪ್ ಮಾಡಿ ಸವಿಯಿರಿ

    ಇಮ್ಯೂನಿಟಿ ಬೂಸ್ಟಿಂಗ್ ಹೆಸರು ಬೇಳೆಯ ಸೂಪ್ ಮಾಡಿ ಸವಿಯಿರಿ

    ಸೀಸನ್‌ನಲ್ಲಿ ಅನಾರೋಗ್ಯಕ್ಕೊಳಗಾಗೋದು ಸರ್ವೇ ಸಾಮಾನ್ಯ. ಈ ಸಮಯ ನೀವು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದು ಕೂಡಾ ಅಷ್ಟೇ ಮುಖ್ಯ. ನಾವಿಂದು ಹೇಳಿಕೊಡುತ್ತಿರುವ ಹೆಸರು ಬೇಳೆಯ ಸೂಪ್ ರೆಸಿಪಿ ಹಲವು ವಿಧಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಪ್ರೋಟೀನ್, ಬಿ-ಕಾಂಪ್ಲೆಕ್ಸ್, ವಿಟಮಿನ್ ಸಿ ಸೇರಿದಂತೆ ಹೆಚ್ಚಿನ ಆರೋಗ್ಯಕರ ಗುಣಗಳನ್ನು ಒಳಗೊಂಡಿದೆ. ಇಮ್ಯೂನಿಟಿ ಬೂಸ್ಟಿಂಗ್‌ಗಾಗಿ ನೀವೂ ಹೆಸರು ಬೇಳೆ ಸೂಪ್ ಮಾಡಿ ಸವಿಯಿರಿ.

    ಬೇಕಾಗುವ ಪದಾರ್ಥಗಳು:
    ಹೆಸರು ಬೇಳೆ – 1 ಕಪ್
    ನೀರು – 4 ಕಪ್
    ಎಣ್ಣೆ ಅಥವಾ ತುಪ್ಪ – 1 ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಈರುಳ್ಳಿ – 1
    ತುರಿದ ಬೆಳ್ಳುಳ್ಳಿ – 3-4
    ತುರಿದ ಶುಂಠಿ – 1 ಇಂಚು
    ಹೆಚ್ಚಿದ ಟೊಮೆಟೋ – 1
    ಅರಿಶಿನ ಪುಡಿ – ಅರ್ಧ ಟೀಸ್ಪೂನ್
    ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    ಕೊತ್ತಂಬರಿ ಪುಡಿ – ಅರ್ಧ ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ತರಕಾರಿ/ಚಿಕನ್ ಸ್ಟಾಕ್ – 4-5 ಕಪ್
    ನಿಂಬೆ – 1
    ಹೆಚ್ಚಿದ ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ ಇದನ್ನೂ ಓದಿ: ಚಳಿಗೆ ಬಿಸಿಬಿಸಿಯಾಗಿ ತಿನ್ನಿ ಮೂಂಗ್‌ದಾಲ್ ನಗ್ಗೆಟ್ಸ್

    ಮಾಡುವ ವಿಧಾನ:
    * ಮೊದಲಿಗೆ ಹೆಸರು ಬೇಳೆಯನ್ನು ಚೆನ್ನಾಗಿ ತಣ್ಣೀರಿನಲ್ಲಿ ತೊಳೆದು, ಒಂದು ಪಾತ್ರೆಗೆ ಹಾಕಿ 4 ಕಪ್ ನೀರು ಸೇರಿಸಿ ಕುದಿಸಿಕೊಳ್ಳಿ. ಮಧ್ಯಮ ಉರಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ.
    * ಒಂದು ಕಡಾಯಿಗೆ ಎಣ್ಣೆ ಅಥವಾ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಜೀರಿಗೆ ಬೆರೆಸಿ ಸಿಡಿಸಿ.
    * ಬಳಿಕ ಈರುಳ್ಳಿ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ.
    * ತುರಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ, ಸುಮಾರು ಒಂದು ನಿಮಿಷ ಪರಿಮಳ ಬರುವವರೆಗೆ ಹುರಿಯಿರಿ.
    * ಕೆಂಪು ಮೆಣಸಿನ ಪುಡಿ, ಜೀರಿಗೆ, ಕೊತ್ತಂಬರಿ, ಮತ್ತು ಅರಿಶಿನ ಪುಡಿಯನ್ನು ಸೇರಿಸಿ, ಮಸಾಲೆಗಳನ್ನು 1 ನಿಮಿಷ ಟೋಸ್ಟ್ ಮಾಡಿ.
    * ನಂತರ ಟೊಮೆಟೋ ಸೇರಿಸಿ, ಬೇಯಿಸಿಕೊಳ್ಳಿ.
    * ಈಗ ಹುರಿದ ಮಸಾಲೆಗೆ ಬೇಯಿಸಿದ ಹೆಸರು ಬೇಳೆಯನ್ನು ಸೇರಿಸಿ, ಮಿಶ್ರಣ ಮಾಡಿ.
    * ಸ್ಥಿರತೆಯನ್ನು ನೋಡಿಕೊಂಡು ತರಕಾರಿ ಇಲ್ಲವೇ ಚಿಕನ್ ಸ್ಟಾಕ್ ಸೇರಿಸಿ.
    * ಬಳಿಕ ಉಪ್ಪು ಸೇರಿಸಿ 10-15 ನಿಮಿಷಗಳ ಕಾಲ ಕುದಿಸಿ.
    * ಬೇಳೆ ಇನ್ನಷ್ಟು ಮೃದುವಾಗಲು ಮ್ಯಾಶ್ ಮಾಡಿಕೊಳ್ಳಬಹುದು.
    * ಈಗ ಅದಕ್ಕೆ ನಿಂಬೆ ರಸವನ್ನು ಸೇರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಬಿಸಿಯಾಗಿ ಹೆಸರು ಬೇಳೆ ಸೂಪ್ ಅನ್ನು ಸವಿಯಿರಿ. ಇದನ್ನೂ ಓದಿ: ಗಂಟಲು ಕೆರೆತಕ್ಕೆ ಸವಿಯಿರಿ ಬೆಚ್ಚಗಿನ ಪುದೀನಾ ಟೀ