Tag: moong dal

  • ಫಟಾಫಟ್‌ ಅಂತ ಮಾಡಿ ಹೆಸರುಬೇಳೆ ಹಲ್ವಾ

    ಫಟಾಫಟ್‌ ಅಂತ ಮಾಡಿ ಹೆಸರುಬೇಳೆ ಹಲ್ವಾ

    ಲ್ವಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಂತೂ ಸಿಹಿಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ದಿನಾ ಬಾಳೆಹಣ್ಣು, ಕ್ಯಾರೆಟ್, ಗೋಧಿ ಹಿಟ್ಟಿನ ಹಲ್ವಾ ಮಾಡಿ ಬೇಜಾರಾಗಿರುತ್ತೆ. ಅದಕ್ಕೆ ಈ ಬಾರಿ ಅತ್ಯಂತ ಸುಲಭ ಹಾಗೂ ರುಚಿ ರುಚಿಯಾದ ಹೆಸರುಬೇಳೆ ಹಲ್ವಾ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಹೆಸರು ಬೇಳೆ- 1 ಕಪ್
    * ತುಪ್ಪ- ಅರ್ಧ ಕಪ್
    * ಹಾಲು- 1 ಕಪ್
    * ಸಕ್ಕರೆ- 1 ಕಪ್
    * ಏಲಕ್ಕಿ ಪುಡಿ- 1 ಟೀ ಸ್ಪೂನ್
    * ಡ್ರೈಫ್ರೂಟ್ಸ್

    ಮಾಡುವ ವಿಧಾನ:
    * ಮೊದಲು ಹೆಸರು ಬೇಳೆಯನ್ನು ತೊಳೆದುಕೊಂಡು ನೀರನ್ನು ಬಸಿದಿಟ್ಟುಕೊಳ್ಳಿ. ಇತ್ತ ಸ್ಟೌವ್‍ನಲ್ಲಿ ಪ್ಯಾನ್ ಇಟ್ಟು ಅದಕ್ಕೆ 1 ಚಮಚ ತುಪ್ಪ ಹಾಕಿ. ಈ ತುಪ್ಪ ಸ್ವಲ್ಪ ಬಿಸಿಯಾಗ್ತಿದ್ದಂತೆ ಅದಕ್ಕೆ ಹೆಸರುಬೇಳೆ ಹಾಕಿ. ನಂತರ ಇದನ್ನು 5-6 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಇದು ಗರಿಗರಿಯಾದ ಬಳಿಕ ತಣಿಯಲು ಬಿಡಿ.

    * ಪೂರ್ತಿ ತಣಿದ ಬಳಿಕ ಮಿಕ್ಸಿ ಜಾರಿಗೆ ಹುರಿದಿಟ್ಟ ಹೆಸರುಬೇಳೆಯನ್ನು ಹಾಕಿ ಸ್ವಲ್ಪ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ಮತ್ತೆ ಅದೇ ಪ್ಯಾನಿಗೆ 2 ಚಮಚ ತುಪ್ಪ ಹಾಕಿ ಅದಕ್ಕೆ ಪುಡಿ ಮಾಡಿಟ್ಟ ಹೆಸರು ಬೇಳೆ ಸೇರಿಸಿ ಮತ್ತೆ 2 ರಿಂದ 3 ನಿಮಿಷ ಸಣ್ಣ ಉರಿಯಲ್ಲಿ ಉರಿದುಕೊಳ್ಳಿ. ಇದನ್ನೂ ಓದಿ: ಶಿವನ ನೈವೇದ್ಯಕ್ಕೆ ಮಾಡಿ ‘ಪಾಲ್ ಪಾಯಸ’

    * ಅದಕ್ಕೆ 1 ಕಪ್ ಹಾಲು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಗಂಟಾಗಲು ಬಿಡಬೇಡಿ. ಹೆಸರು ಬೇಳೆ ಪುಡಿ ಹಾಲನ್ನು ಪೂರ್ತಿಯಾಗಿ ಹೀರಿಕೊಂಡ ಬಳಿಕ ಅದಕ್ಕೆ ಉಳಿದ ತುಪ್ಪವನ್ನು ಬೆರೆಸಿ ಮತ್ತೆ ಪುನಃ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ 1 ಕಪ್ ಸಕ್ಕರೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಪ್ಯಾನ್ ಬದಿಯಲ್ಲಿ ತುಪ್ಪ ಬಿಡಲು ಶುರುವಾದಾಗ ಕಾಲು ಚಮಚ ಏಲಕ್ಕಿ ಪುಡಿ ಮಿಕ್ಸ್ ಮಾಡಿಕೊಳ್ಳಿ. ಕೊನೆಗೆ ಡ್ರೈಫ್ರೂಟ್ಸ್ ಹಾಕಿ ಚೆನ್ನಾಗಿ ಕಲಸಿ. ಈಗ ಮೂಂಗು ದಾಲ್ ಹಲ್ವಾ ಅಥವಾ ಹೆಸೆರುಬೇಳೆ ಹಲ್ವಾ ಸವಿಯಲು ಸಿದ್ಧ.

  • ಸಂಜೆ ತಿಂಡಿಗೆ  ಹೆಸರುಬೇಳೆ ಪಕೋಡ ಮಾಡಿ

    ಸಂಜೆ ತಿಂಡಿಗೆ ಹೆಸರುಬೇಳೆ ಪಕೋಡ ಮಾಡಿ

    ಳೆಗಾಲ ಶುರುವಾಗಿದೆ. ಚಳಿ ಇರುವುದರಿಂದ ನಾಲಿಗೆ ಕೊಂಚ ಬಿಸಿ ಬಸಿಯಾಗಿ ಏನನ್ನಾದರು ತಿನ್ನಲು ಬಯಸುತ್ತದೆ. ಪ್ರತಿನಿತ್ಯ ಒಂದಲ್ಲಾ ಒಂದು ರುಚಿಕರವಾದ ಅಡುಗೆಯನ್ನು ಮಾಡಿ ಸವಿಯುವ ನೀವು ಇಂದು ಮನೆಯಲ್ಲಿ ಬಿಸಿ ಬಿಸಿಯಾದ ಹೆಸರು ಬೇಳೆ ಪಕೋಡವನ್ನು ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಹೆಸರುಬೇಳೆ- 1ಕಪ್
    * ಹಸಿಮೆಣಸಿನಕಾಯಿ-3
    * ಬೆಳ್ಳುಳ್ಳಿ ಪೇಸ್ಟ್- ಅರ್ಧ ಟೀ ಸ್ಪೂನ್
    * ಶುಂಠಿ- ಅರ್ಧ ಟೀ ಸ್ಪೂನ್
    * ಅಡುಗೆ ಎಣ್ಣುಗೆ
    * ಕೊತ್ತಂಬರಿ
    * ರುಚಿಗೆ ತಕ್ಕಷ್ಟು ಉಪ್ಪು
    * ಕೋತ್ತಂಬರಿ ಬೀಜ- 1 ಟೀ ಸ್ಪೂನ್
    * ಮೆಣಸಿನ ಪುಡಿ – ಅರ್ಧ ಟೀ ಸ್ಪೂನ್

    ಮಾಡುವ ವಿಧಾನ:
    * ಪಾತ್ರೆಯಲ್ಲಿ ಹೆಸರುಬೇಳೆಯನ್ನು ಹಾಕಿ, 3-4 ಗಂಟೆಗಳ ಕಾಲ ನೆನೆಯಿಟ್ಟಿರಬೇಕು. ಇದನ್ನೂ ಓದಿ: ನೀವು ಮಾಡಿ ಸಿಹಿ ದೋಸೆ

    * ನಂತರ ಮಿಕ್ಸರ್ ಪಾತ್ರೆಗೆ ನೆನೆಸಿಕೊಂಡ ಹೆಸರುಬೇಳೆ, ಹಸಿಮೆಣಸಿನ ಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವು ದಪ್ಪ ಸ್ಥಿರತೆಯಿಂದ ಕೂಡಿರಬೇಕು.ಹೆಚ್ಚಾಗಿ ನೀರನ್ನು ಸೇರಿಸಬಾರದು

    * ರುಬ್ಬಿಕೊಂಡ ಮಿಶ್ರಣಕ್ಕೆ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು, ಮೆಣಸಿನ ಪುಡಿ ಸ್ವಲ್ಪ ಅಡುಗೆ ಎಣ್ಣೆ ಸೇರಿಸಿ ಮಿಶ್ರಗೊಳಿಸಬೇಕು.

    * ಬಾಣಲೆಯಲ್ಲಿ ಎಣ್ಣೆ ಎಣ್ಣೆ ಬಿಸಿಯಾದ ಬಳಿಕ ಪಕೋಡವನ್ನು ಬಿಡಿ. ಪಕೋಡವು ಎರಡು ಬದಿಯಲ್ಲೂ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ಬರುವ ತನಕ ಫ್ರೈ ಮಾಡಿದರೆ ರುಚಿಯಾ ಬಿಸಿ ಬಿಸಿಯಾದ ಹೆಸರುಬೇಳೆ ಪಕೋಡ ಸವಿಯಲು ಸಿದ್ಧವಾಗುತ್ತದೆ.