Tag: Moon Jae-in

  • ಮೋದಿ ಗಿಫ್ಟ್ ಕೊಟ್ಟಿದ್ದ ಜಾಕೆಟ್ ಧರಿಸಿ, ಸಂಭ್ರಮಿಸಿದ ದ.ಕೊರಿಯಾ ಅಧ್ಯಕ್ಷ

    ಮೋದಿ ಗಿಫ್ಟ್ ಕೊಟ್ಟಿದ್ದ ಜಾಕೆಟ್ ಧರಿಸಿ, ಸಂಭ್ರಮಿಸಿದ ದ.ಕೊರಿಯಾ ಅಧ್ಯಕ್ಷ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉಡುಗೊರೆ ನೀಡಿದ್ದ ಜಾಕೆಟ್ ಅನ್ನು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೆ ಇನ್ ಧರಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

    ಕೊರಿಯಾದ ಅಧ್ಯಕ್ಷರಾದ ಮೂನ್ ಜೆ-ಇನ್ ಟ್ವೀಟ್ ಮೂಲಕ ,”ಭಾರತಕ್ಕೆ ಬಂದಿದ್ದಾಗ ಮೋದಿ ಜಾಕೆಟ್ ನೋಡಿ ನಾನು ಇಷ್ಟಪಟ್ಟಿದ್ದೆ. ಮೋದಿಯವರು ಧರಿಸುತ್ತಿದ್ದ ಪೂರ್ಣ ತೋಳಿನ ಕುರ್ತಾ ಮತ್ತು ಜಾಕೆಟ್ ನೊಂದಿಗೆ ಧರಿಸುತ್ತಿದ್ದ ಅರ್ಧ ತೋಳಿನ ಕುರ್ತಾವನ್ನ ನಾನು ಬಹಳ ಮೆಚ್ಚಿದ್ದೆ. ಇದನ್ನು ನೆನೆಪಿನಲ್ಲಿಟ್ಟುಕೊಂಡಿದ್ದ ಮೋದಿ ನನಗಾಗಿ ಜಾಕೆಟ್ ಸಿದ್ಧಪಡಿಸಿ ಕಳುಹಿಸಿದ್ದು, ಎಲ್ಲವೂ ಬಹಳ ಅಚ್ಚುಕಟ್ಟಾಗಿದೆ” ಎಂದು ಶ್ಲಾಘಿಸಿದ್ದಾರೆ.

    ಇದೇ ವೇಳೆ ಸಿಯೋಲ್ ಶಾಂತಿ ಪ್ರಶಸ್ತಿಯ ಬಗ್ಗೆಯೂ ಮಾತನಾಡಿರುವ ಮೂನ್ ಜೆ-ಇನ್, ಸಿಯೋಲ್ ಶಾಂತಿ ಪ್ರಶಸ್ತಿ ಪಡೆದಿರುವ ಬಗ್ಗೆ ಪ್ರಧಾನಿ ಮೋದಿ ಮಾಡಿರುವ ಟ್ವೀಟ್ ಗಳನ್ನು ನಾನು ಓದಿದ್ದೇನೆ. ಪ್ರಶಸ್ತಿಗೆ ಭಾಜನರಾದ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

    ಈ ಹಿಂದೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬಂದಿದ್ದಾಗ ಮೋದಿ ಕುರ್ತಾಕ್ಕೆ ಮನಸೋತಿದ್ದರು. ನಾನು ಮೋದಿ ಕುರ್ತಾವನ್ನು ಧರಿಸಲು ಇಷ್ಟ ಪಡುತ್ತೇನೆ ಎಂದು ಒಬಾಮಾ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv