Tag: moon

  • 2027ಕ್ಕೆ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ

    2027ಕ್ಕೆ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ

    ನವದೆಹಲಿ: ಚಂದ್ರಯಾನ-3 ಮೂಲಕ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ಇಸ್ರೋ (ISRO) ಈಗ ಮತ್ತೊಂದು ಇತಿಹಾಸ ಬರೆಯಲು ಸಿದ್ಧವಾಗಿದೆ. 2027ಕ್ಕೆ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ವಿ.ನಾರಾಯಣ್ (V Narayan) ಅವರು ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2027ಕ್ಕೆ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ ನಡೆಸಿದೆ. ಗಗನಯಾನಿಗಳ ಸುರಕ್ಷತಾ ದೃಷ್ಟಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ತುರ್ತು ಸಂದರ್ಭಗಳಿಂದ ಬಾಹ್ಯಾಕಾಶಯಾನವು ವಿಫಲಗೊಂಡರೆ, ಆಂತರಿಕ್ಷ ನೌಕೆಯಲ್ಲಿನ ಕ್ರೂ ಮಾಡ್ಯೂಲ್‌ನಿಂದ ಗಗನಯಾನಿಗಳನ್ನು ಕಾಪಾಡಬಹುದು. ಸುರಕ್ಷಿತವಾಗಿ ಪಾರುಮಾಡುವ ಕ್ರೂ ಎಸ್ಕೇಪ್ ಸಿಸ್ಟಮ್ ಸೇರಿ ಎಲ್ಲವನ್ನೂ ಅತ್ಯಂತ ಎಚ್ಚರಿಕೆಯಿಂದ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಟ್ರಂಪ್‌ ಆಸೆಗೆ ತಣ್ಣೀರು – ಮಲೇಷ್ಯಾಗೆ ಬರಲ್ಲ ಎಂದ ಮೋದಿ

    ಭಾರತವು 2035ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲಿದೆ. ವಿಕಸಿತ ಭಾರತ್ 2047 ಅಡಿಯಲ್ಲಿ ಇಸ್ರೋದಿಂದ ಇಎಸ್‌ಟಿಐಸಿ 2025 ಕಾನ್ ಕ್ಲೇವ್‌ಗೆ ತಯಾರಿ ನಡೆದಿದೆ. ನವೆಂಬರ್ 3 ರಿಂದ 5 ರವರೆಗೆ ದೆಹಲಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದಿದ್ದಾರೆ.

    ಈಗಾಗಲೇ ಶೇ.90ರಷ್ಟು ಎಲ್ಲವೂ ಪೂರ್ಣಗೊಂಡಿದ್ದು, ಇನ್ನೂ ಕೊನೆಯ ಹಂತದ ಸಿದ್ಧತೆ ಬಾಕಿಯಿದೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಶಾಸ್ತ್ರೋಕ್ತವಾಗಿ ಮುಚ್ಚಿದ ಕೇದಾರನಾಥ ಧಾಮದ ಬಾಗಿಲು

  • Lunar Eclipse: ಚಂದ್ರನೇಕೆ ಕೆಂಪು ಕೆಂಪಾಗಲಿದ್ದಾನೆ?; ಗ್ರಹಣ ವೀಕ್ಷಣೆಗೆ ಎಲ್ಲೆಲ್ಲಿ ವ್ಯವಸ್ಥೆ?

    Lunar Eclipse: ಚಂದ್ರನೇಕೆ ಕೆಂಪು ಕೆಂಪಾಗಲಿದ್ದಾನೆ?; ಗ್ರಹಣ ವೀಕ್ಷಣೆಗೆ ಎಲ್ಲೆಲ್ಲಿ ವ್ಯವಸ್ಥೆ?

    – ರಕ್ತಚಂದ್ರ ಗ್ರಹಣ ವೀಕ್ಷಣೆ ಹೇಗೆ?

    ಬೆಂಗಳೂರು: ಇಂದು ಸಂಪೂರ್ಣ ರಕ್ತಚಂದ್ರಗ್ರಹಣ (Chandra Grahan) ಸಂಭವಿಸಲಿದೆ. ನಭೋಮಂಡಲದ ಈ ವಿಸ್ಮಯದ ಅದ್ಭುತ ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ. ಬೆಳದಿಂಗಳ ಚಂದಿರ ಅದ್ಯಾಕೆ ಇಂದು ಗ್ರಹಣದ ದಿನ ರಕ್ತ ವರ್ಣದಲ್ಲಿ ಕಾಣಿಸಲಿದ್ದಾನೆ? ಇದರ ವೈಜ್ಞಾನಿಕ ಕಾರಣಗಳೇನು?

    ಚಂದಿರನೇಕೆ ರಕ್ತವರ್ಣದಲ್ಲಿ ಕಂಗೊಳಿಸಲಿದ್ದಾನೆ?
    ಚಂದ್ರಗ್ರಹಣ ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ನಿಖರವಾಗಿ ಬಂದಾಗ ಸಂಭವಿಸುತ್ತದೆ. ಭೂಮಿಯ ನೆರಳು ಕೆಲ ಕಾಲ ಚಂದಿರನ ಮೇಲೆ ಬೀಳುವುದರಿಂದ ಅದು ಮರೆಯಾಗುತ್ತದೆ. ಭೂಮಿಯ ನೆರಳಿನಲ್ಲಿ ಎರಡು ಭಾಗ ಇದೆ. ಒಂದು ಗಾಢ ಕತ್ತಲೆಯ ಭಾಗ, ಇದನ್ನು ಅಂಬ್ರಾ ಎನ್ನಲಾಗುತ್ತದೆ. ಹೊರಗಿನ ಮಬ್ಬಾದ ಭಾಗವನ್ನು ಪೆನಾಂಬ್ರಾ ಎನ್ನಲಾಗುತ್ತದೆ. ಚಂದ್ರನು ಸಂಪೂರ್ಣವಾಗಿ ಅಂಬ್ರಾ ನೆರಳಿನೊಳಗೆ ಪ್ರವೇಶಿಸುವಾಗ ಸಂಪೂರ್ಣವಾಗಿ ಚಂದ್ರ ತಾಮ್ರವರ್ಣದ ಅಥವಾ ಗಾಢ ಕೆಂಪುಬಣ್ಣದಲ್ಲಿ ಕಾಣಿಸುತ್ತಾನೆ. ಇದನ್ನೂ ಓದಿ: ಚಂದ್ರಗ್ರಹಣ ಕಣ್ತುಂಬ ನೋಡಿ ಸಂಭ್ರಮಿಸಿ: ಭೌತವಿಜ್ಞಾನಿ ಎ.ಪಿ.ಭಟ್‌

    ಬಣ್ಣ ಬದಲಾವಣೆ ಪ್ರಕ್ರಿಯೆ ಯಾವಾಗ ಆರಂಭ?
    ಸೆಪ್ಟೆಂಬರ್ 7 ರಂದು ರಾತ್ರಿ 9:57ಕ್ಕೆ ಚಂದ್ರ ಭೂಮಿಯ ಗಾಢ ನೆರಳಾದ ಅಂಬ್ರಾ ಒಳಗೆ ಪ್ರವೇಶಿಸಲು ಆರಂಭಿಸುತ್ತಾನೆ. ನಂತರ ಚಂದ್ರ ಹೆಚ್ಚಿನ ಭಾಗ ಭೂಮಿಯ ನೆರಳಿನಿಂದ ಅವರಿಸಲ್ಪಡಿಸುತ್ತ 11:01ಕ್ಕೆ ಸಂಪೂರ್ಣವಾಗಿ ಅಂಬ್ರಾದೊಳಗೆ ಸೇರುತ್ತದೆ.

    ರಕ್ತಚಂದ್ರ ಗ್ರಹಣ ವೀಕ್ಷಣೆ ಹೇಗೆ?
    ಚಂದ್ರಗ್ರಹಣ ವೀಕ್ಷಣೆಗೆ ಯಾವ ಸಾಧನ ಬೇಕಾಗಿಲ್ಲ. ಬರಿಗಣ್ಣಿನಲ್ಲಿ ನೋಡಬಹುದು. ಆದರೆ, ದೂರದರ್ಶಕ, ದುರ್ಬಿನು ಬಳಸಿದರೆ ವೀಕ್ಷಣೆಯ ಅನುಭವ ಇನ್ನಷ್ಟು ಸುಂದರವಾಗುತ್ತದೆ. ಇದನ್ನೂ ಓದಿ: ರಕ್ತಚಂದ್ರಗ್ರಹಣ – ಬೀದರ್‌ನ ಐತಿಹಾಸಿಕ 9 ದೇವಸ್ಥಾನಗಳ ಬಾಗಿಲು ಬಂದ್

    ವೀಕ್ಷಣೆಗೆ ಸ್ಥಳದ ಆಯ್ಕೆ ಹೇಗಿರಬೇಕು?
    ಗ್ರಹಣದ ಸಮಯ ತಡರಾತ್ರಿಯಾಗಿರುವುದರಿಂದ ತಮ್ಮ ಮನೆಗಳ ಹೊರಾಂಗಣ ಅಥವಾ ತಾರಸಿಗಳಲ್ಲಿ ವೀಕ್ಷಣೆ ಮಾಡಬಹುದು. ಮೋಡವಿದ್ದರೂ ಕೆಲಕಾಲ ಸ್ಪಷ್ಟವಾಗಿ ಕಾಣಿಸುವ ಸಾಧ್ಯತೆ ಇದೆ.

    ಎಲ್ಲಿಲ್ಲಿ ವ್ಯವಸ್ಥೆ?
    ಬೆಂಗಳೂರಿನ ನೆಹರೂ ತಾರಾಲಾಯ, ಲಾಲ್‌ಬಾಗ್ ಸೇರಿದಂತೆ ರಾಜ್ಯದ ಹಲವೆಡೆ ಅನೇಕ ಸಂಸ್ಥೆಗಳಿಂದ ಗ್ರಹಣ ವೀಕ್ಷಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

  • ಗಣೇಶ ಹಬ್ಬದಂದು ಚಂದ್ರನನ್ನು ನೋಡಬಾರದು ಯಾಕೆ?

    ಗಣೇಶ ಹಬ್ಬದಂದು ಚಂದ್ರನನ್ನು ನೋಡಬಾರದು ಯಾಕೆ?

    ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಒಂದೊಂದು ಹಬ್ಬಗಳ ಹಿಂದೆಯೂ ಅದರದ್ದೇ ಆದ ಕಥೆಗಳಿದ್ದು ಗಣೇಶ ಹಬ್ಬಕ್ಕೂ (Ganesh Chaturthi) ಕಥೆಯಿದೆ. ಈ ದಿನದಂದು ಚಂದ್ರನನ್ನು (Moon) ನೋಡಬಾರದೆಂಬ ನಂಬಿಕೆ ಇದೆ.

    ಸಾಮಾನ್ಯವಾಗಿ ಚಂದ್ರನನ್ನು ಪ್ರತಿ ದಿನ ನಾವು ಗಮನಿಸುವುದಿಲ್ಲ. ಆದ್ರೆ ಭಾದ್ರಪದ ಶುಕ್ಲದ ಚೌತಿಯ ದಿನದಂದು ಮಾತ್ರ ನೋಡಬಾರದೆನಿಸಿದರೂ, ಆಕಸ್ಮಿಕವಾಗಿ ಚಂದ್ರನನ್ನು ನೋಡಿಯೇ ಬಿಡುತ್ತೇವೆ. ಅಂದು ಚಂದ್ರನನ್ನು ನೋಡಿದವರಿಗೆ ಅಪವಾದ ಬರುತ್ತದೆ. ಆದ್ರೆ ಕೃಷ್ಣ ಪಕ್ಷದ ಚೌತಿಯ ಚಂದ್ರನನ್ನು ನೋಡಿದರೆ ಆ ಅಪವಾದ ದೂರವಾಗುತ್ತದೆ ಎಂಬ ನಂಬಿಕೆ ಇಂದಿಗೂ ಕೆಲವೆಡೆ ಚಾಲ್ತಿಯಲ್ಲಿದೆ.

    ಚಂದ್ರನನ್ನು ಯಾಕೆ ನೋಡಬಾರದು?
    ಮೊದಲ ದಿನ ತಾಯಿ ಸ್ವರ್ಣಗೌರಿಯ ಹಬ್ಬ. ಮಾರನೆ ದಿನವೇ ಗಣೇಶನ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂದಿರುಗುತ್ತಿರುತ್ತಾನೆ. ಗಣಪತಿ ತನ್ನ ವಾಹನವಾದ ಇಲಿಯ ಮೇಲೆ ಕುಳಿತುಕೊಂಡು ಚಂದ್ರಲೋಕಕ್ಕೆ ಬರುತ್ತಾನೆ. ಇದನ್ನೂ ಓದಿ: ಗಣೇಶನಿಗೆ ಮೊದಲ ಪೂಜೆ ಯಾಕೆ?

    ಈ ವೇಳೆ ಚಂದ್ರನು ಗಣೇಶನನ್ನು ನೋಡುತ್ತಾನೆ. ಸರ್ವಾಂಗ ಸುಂದರನಾಗಿರುವ ಚಂದ್ರ, ಗಣಪತಿಯ ಆನೆ ಮುಖ, ಡೊಳ್ಳುಹೊಟ್ಟೆ ಮತ್ತು ವಾಹನ ಇಲಿಯನ್ನು ನೋಡಿ ಹಾಸ್ಯ ಮಾಡಿ ನಕ್ಕು ಬಿಡುತ್ತಾನೆ. ಇದನ್ನು ಕಂಡ ಗಣಪತಿಗೆ ಸಿಟ್ಟು ಬರುತ್ತದೆ.

    ಸಿಟ್ಟಾದ ಗಣಪತಿ `ಎಲೈ ಚಂದ್ರನೇ ನಿನಗೆ ನಿನ್ನ ಸೌಂದರ್ಯದ ಮದ ಹೆಚ್ಚಾಗಿದೆ. ಎಲ್ಲ ಲೋಕಗಳಲ್ಲೂ ಪೂಜಿಸುತ್ತಿರುವ ನನ್ನನ್ನು ನೀನು ಮಾತ್ರ ಹಾಸ್ಯ ಮಾಡಿ ನಗುತ್ತಿರುವೆಯಾ? ಮೂರ್ಖ. ಇದೋ.. ನಿನ್ನ ಅಹಂಕಾರಕ್ಕೆ ತಕ್ಕ ಪ್ರತಿಫಲ ಅನುಭವಿಸು. ನಿನ್ನ ಅಹಂಕಾರಕ್ಕೂ ಅಜ್ಞಾನಕ್ಕೂ ಕಾರಣವಾಗಿರುವ ನಿನ್ನ ಸೌಂದರ್ಯ ಕುಗ್ಗಿ ಹೋಗಲಿ. ಇನ್ನು ಮುಂದೆ ನನ್ನ ಹುಟ್ಟಿದ ದಿನವಾದ ಭಾದ್ರಪದ ಚೌತಿಯಂದು ನಿನ್ನನ್ನು ನೋಡುವವರು ಸುಳ್ಳು ಅಪವಾದಾಕ್ಕೆ ಗುರಿಯಾಗಲಿ’ ಎಂದು ಚಂದ್ರನಿಗೆ ಶಾಪ ಹಾಕುತ್ತಾನೆ. ಇದನ್ನೂ ಓದಿ: ಗಣೇಶ ಮೋದಕ ಪ್ರಿಯ ಯಾಕೆ?

    ಗಣಪತಿಯ ಶಾಪದಿಂದ ಚಂದ್ರನ ಅಹಂಕಾರವೆಲ್ಲ ಕೆಲವೇ ಕ್ಷಣಗಳಲ್ಲಿ ಇಳಿದು ಹೋಯಿತು. ತನ್ನ ತಪ್ಪಿನ ಅರಿವಾಗಿ ಪಶ್ಚತ್ತಾಪ ಪಡುತ್ತಾ ಗಣಪತಿ ಮುಂದೆ ಕೈ ಮುಗಿದು ಕ್ಷಮೆ ಕೇಳುತ್ತಾನೆ. `ಸ್ವಾಮಿ ನನ್ನ ಅಜ್ಞಾನವನ್ನು ಮನ್ನಿಸು. ನನಗೆ ಕೊಟ್ಟ ಶಾಪವನನ್ನು ವಾಪಸ್ ತೆಗೆದುಕೊ’ ಅಂತ ಗಣಪತಿ ಮುಂದೆ ಚಂದ್ರ ಅಂಗಲಾಚಿಕೊಳ್ಳುತ್ತಾನೆ.

     

    ಚಂದ್ರನ ಮೊರೆಗೆ ಗಣಪತಿ ಮನಸ್ಸು ಕರಗಿ ಶಾಂತನಾಗುತ್ತಾನೆ. ಹೀಗಾಗಿ ಚಂದ್ರನನ್ನು ಸಂತೈಸಿ `ನಿನಗೆ ನಿನ್ನ ತಪ್ಪಿನ ಅರಿವಾಗಿದೆ. ನಿನ್ನ ಅಹಂಕಾರ ಇಳಿಸುವುದೇ ನನಗೆ ಮುಖ್ಯವಾಗಿತ್ತು. ಆದ್ರೆ ಈವಾಗ ಏನ್ ಮಾಡಿದರೂ ನನ್ನ ಶಾಪ ಯಾವತ್ತಿಗೂ ಸುಳ್ಳಾಗದು. ಆದ್ರೆ ಚೌತಿಯಂದು ನಿನ್ನನ್ನು ನೋಡಿ ಅಪವಾದಕ್ಕೆ ಗುರಿಯಾದವರು ಇತರ ತಿಂಗಳುಗಳ ಕೃಷ್ಣಪಕ್ಷದ ಚತುರ್ಥಿಯಂದು ನಿನ್ನನ್ನು ನೋಡಿದ ನಂತರವೇ ಎಲ್ಲರೂ ಊಟಮಾಡಲಿ. ಸಂಕಷ್ಟ ಚತುರ್ಥಿಯಂದು ನಿನ್ನ ದರ್ಶನವಾಗದೆ ಯಾರೂ ಭೋಜನವನ್ನು ಸ್ವೀಕರಿಸುವುದಿಲ್ಲ’ ಅಂತ ಗಣಪತಿ ಹೇಳುತ್ತಾನೆ. ಗಣಪತಿಯ ಮಾತು ಕೇಳಿ ಚಂದ್ರ ಸಂತಸ ವ್ಯಕ್ತಪಡುತ್ತಾನೆ.

    ಈ ಕಾರಣದಿಂದ ಚೌತಿಯಂದು ಚಂದ್ರನನ್ನು ನೋಡಬಾರದು ಅಂತ ಹಿರಿಯರು ಹೇಳುತ್ತಾರೆ. ಈ ನಂಬಿಕೆ ಇಂದಿಗೂ ಕೆಲವು ಕಡೆಗಳಲ್ಲಿ ಇದ್ದು, ರಾತ್ರಿಯಾಗುತ್ತಿದ್ದಂತೆಯೇ ಹೊರಗಡೆ ತೆರಳುವ ತಮ್ಮ ಮಕ್ಕಳಿಗೆ ಹಿರಿಯರು ತಪ್ಪಿಯೂ ಇಂದು ಆಕಾಶ ನೋಡಬೇಡ ಅಂತ ಹೇಳುತ್ತಾರೆ. ಒಟ್ಟಿನಲ್ಲಿ ದೇಶದಾದ್ಯಂತ ಗಣೇಶ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಬೆಳ್ಳಿ ಅಥವಾ ಮ‌ಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವೃತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಮೊದಲಾದ ಸಿಹಿತಿಂಡಿ ಮಾಡಿ ಗಣಪತಿಗೆ ನೈವೇದ್ಯ ಮಾಡಲಾಗುತ್ತದೆ. ಅಲ್ಲದೇ ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.

  • ಭೂಮಿಯನ್ನು 2 ತಿಂಗಳ ಕಾಲ ಸುತ್ತಲಿರುವ ಮಿನಿ ಮೂನ್‌! – ಏನಿದರ ವಿಶೇಷ? 

    ಭೂಮಿಯನ್ನು 2 ತಿಂಗಳ ಕಾಲ ಸುತ್ತಲಿರುವ ಮಿನಿ ಮೂನ್‌! – ಏನಿದರ ವಿಶೇಷ? 

    ಭೂಮಿಗೆ (Earth) ಏಕೈಕ ನೈಸರ್ಗಿಕ ಉಪಗ್ರಹ ಚಂದ್ರ (Moon) ಎಂದು ನಾವೆಲ್ಲ ಓದಿದ್ದೇವೆ. ಆದರೆ, ಇನ್ನೇನು ಕೆಲವೇ ದಿನಗಳಲ್ಲಿ ಭೂಮಿ ಮತ್ತೊಂದು ಚಂದ್ರನನ್ನು ಪಡೆಯಲಿದೆ!

    ಭೂಮಿ ಮಿನಿ-ಮೂನ್’ನ್ನು (2024 PT5) ಪಡೆಯಲಿದ್ದು, ಇದು ಈ ತಿಂಗಳ ಅಂತ್ಯದಿಂದ ಸುಮಾರು ಎರಡು ತಿಂಗಳ ಕಾಲ ಚಂದ್ರನಂತೆಯೇ ಭೂಮಿಯ ಸುತ್ತ ಸುತ್ತಲಿದೆ. ಅಮೆರಿಕನ್ ಆಸ್ಟ್ರೋನಾಮಿಕಲ್ ಸೊಸೈಟಿ ಪ್ರಕಟಿಸಿದ ವರದಿ ಪ್ರಕಾರ, ಈ ಕ್ಷುದ್ರಗ್ರಹವನ್ನು ನವೆಂಬರ್‌ವರೆಗೆ ಭೂಮಿಯ ಗುರುತ್ವಾಕರ್ಷಣೆ ತಾತ್ಕಾಲಿಕವಾಗಿ ಹಿಡಿದಿಡಲಿದೆ ಎಂದು ಉಲ್ಲೇಖಿಸಲಾಗಿದೆ.

    ಆಗಸ್ಟ್ 7 ರಂದು ಈ ಕ್ಷುದ್ರಗ್ರಹವನ್ನು ನಾಸಾದ ಟೆರೆಸ್ಟ್ರಿಯಲ್-ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ (ATLAS) ನಿಂದ ಇದನ್ನು ಪತ್ತೆ ಮಾಡಲಾಗಿತ್ತು. ಇದು ಭೂಮಿಯ ಗುರುತ್ವಾಕರ್ಷಣೆಯಿಂದ ಮುಕ್ತವಾಗುವ ಮೊದಲು ಸೆಪ್ಟೆಂಬರ್ 29 ರಿಂದ ನವೆಂಬರ್ 25 ರವರೆಗೆ ಭೂಮಿಯನ್ನು ಸುತ್ತುತ್ತದೆ ಎಂದು ಹೇಳಲಾಗಿದೆ.

    ನಾಸಾದ ಟೆರೆಸ್ಟ್ರಿಯಲ್-ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್ ಭೂಮಿಯ ಸಮೀಪದ ಆಕಾಶ ಕಾಯಗಳ ಬಗ್ಗೆ ಪ್ರತಿ 24 ಗಂಟೆಗಳಿಗೊಮ್ಮೆ ವರದಿ ಮಾಡುತ್ತದೆ. 

     ಅರ್ಜುನ ಕ್ಷುದ್ರಗ್ರಹ ಪಟ್ಟಿ ಎಂದರೇನು? 

    ‘ಅರ್ಜುನ’ ಎನ್ನುವುದು ಸೌರವ್ಯೂಹದಲ್ಲಿನ ಕ್ಷುದ್ರಗ್ರಹಗಳ ಗುಂಪಾಗಿದೆ.  ಇದು ಸೂರ್ಯನನ್ನು ಸುತ್ತುವ ಬಾಹ್ಯಾಕಾಶ ಶಿಲೆಗಳನ್ನು ಒಳಗೊಂಡಿದೆ. 2024 PT5 ಬಹುಶಃ ಅರ್ಜುನ ಕ್ಷುದ್ರಗ್ರಹ ಪಟ್ಟಿಯಿಂದ ಹುಟ್ಟಿಕೊಂಡಿದೆ.

    ಖಗೋಳಶಾಸ್ತ್ರಜ್ಞ ರಾಬರ್ಟ್ ಹೆಚ್.ಮೆಕ್‌ನಾಟ್ 1991ರ ನವೆಂಬರ್ 1 ರಂದು ಆಸ್ಟ್ರೇಲಿಯಾದ ಸೈಡಿಂಗ್ ಸ್ಪ್ರಿಂಗ್ ವೀಕ್ಷಣಾಲಯದಲ್ಲಿ ‘1991 VG’ ಎಂಬ ಕ್ಷುದ್ರಗ್ರಹ ಕಂಡುಹಿಡಿದಾಗ ಈ ‘ಅರ್ಜುನʼ ಗುಂಪನ್ನು ಕೂಡ ಕಂಡುಹಿಡಿದರು. ಆ ಸಮಯದಲ್ಲಿ ಮಹಾಭಾರತದಲ್ಲಿನ ಅರ್ಜುನನ ಪಾತ್ರದಿಂದ ಸ್ಫೂರ್ತಿ ಪಡೆದು ‘ಅರ್ಜುನ’ ಎಂಬ ಹೆಸರನ್ನು ಇಡಲಾಯಿತು. ಅರ್ಜುನನ ಭಾಣದ ವೇಗದಂತೆ ಸೌರವ್ಯೂಹದಲ್ಲಿನ ಈ ಕ್ಷುದ್ರಗ್ರಹಗಳು ಚಲಿಸುವುದರಿಂದ ಈ ಗುಂಪಿಗೆ ಅರ್ಜುನ ಎಂಬ ಹೆಸರನ್ನು ಇಡಲಾಗಿದೆ. 

    ಮಿನಿ -ಮೂನ್‌ನಲ್ಲಿ ಎಷ್ಟು ವಿಧಗಳಿವೆ? 

    ಮಿನಿ-ಮೂನ್‌ (Mini-Moon) ಪ್ರಕ್ರಿಯೆಯನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಮೊದಲನೆಯದಾಗಿ ದೀರ್ಘ ಅವಧಿಯದ್ದು, ಇದು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಭೂಮಿಯನ್ನು ಸುತ್ತಲಿದೆ. ಎರಡನೇಯದು ಅಲ್ಪ ಅವಧಿಯದ್ದು, ಕೆಲವೇ ದಿನಗಳು, ವಾರಗಳು ಅಥವಾ ತಿಂಗಳುಗಳು ಕಾಣಿಸಿಕೊಳ್ಳುಂತಹದ್ದು. ದೀರ್ಘ ಅವಧಿಯ ಮಿನಿ ಮೂನ್ ಅಪರೂಪವಾಗಿದ್ದರೂ, ಪ್ರತಿ 10-20 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಈಗ ಕಾಣಿಸಿಕೊಳ್ಳುವ 2024 PT5 ಅಲ್ಪ ಅವಧಿಯ ಮಿನಿಮೂನ್‌ ಆಗಿದೆ.

    ದುರದೃಷ್ಟವಶಾತ್, 2024 PT5 ಹವ್ಯಾಸಿ ದೂರದರ್ಶಕಗಳು ಅಥವಾ ದುರ್ಬೀನುಗಳಿಂದ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ವೃತ್ತಿಪರ ಖಗೋಳಶಾಸ್ತ್ರಜ್ಞರು ಬಳಸುವ ದೊಡ್ಡ ದೂರದರ್ಶಕಗಳು ಮತ್ತು ವಿಶೇಷ ಸಾಧನಗಳನ್ನು ಬಳಸಿಕೊಂಡು ಮಿನಿ-ಮೂನ್‌ನ್ನು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ವೀಕ್ಷಿಸಲು ಕನಿಷ್ಠ 30 ಇಂಚುಗಳಷ್ಟು ವ್ಯಾಸವನ್ನು ಹೊಂದಿರುವ ದೂರದರ್ಶಕ ಮತ್ತು CCD ಅಥವಾ CMOS ಡಿಟೆಕ್ಟರ್, 30-ಇಂಚಿನ ದೂರದರ್ಶಕ ಅಗತ್ಯವಿದೆ ಎನ್ನುತ್ತಾರೆ ತಜ್ಞರು. 

    2024 PT5 ಕೇವಲ 10 ಮೀಟರ್ (33 ಅಡಿ) ವ್ಯಾಸ ಹೊಂದಿದ್ದು, ಚಿಕ್ಕದಾಗಿದೆ. ಇದು ಉಳಿದ ಅರ್ಜುನ ಕ್ಷುದ್ರಗ್ರಹ ಪಟ್ಟಿಯ ಕ್ಷುದ್ರಗ್ರಹಗಳಂತೆಯೇ ಕಕ್ಷೆಯ ಗುಣಲಕ್ಷಣಗಳನ್ನು ಹೊಂದಿದೆ. ಇದು ಭೂಮಿಯಂತೆಯೇ ಸೂರ್ಯನ ಸುತ್ತ ಕಕ್ಷೆಯನ್ನು ಸುತ್ತುತ್ತದೆ. 

    ಈ ಹಿಂದೆಯೂ ‘ಮಿನಿ-ಮೂನ್’ನ್ನು ಭೂಮಿ ನೋಡಿದೆಯೇ?

    ಹೌದು, ಈ ಹಿಂದೆ ಭೂಮಿ ಮಿನಿ ಮೂನ್‌ಗಳನ್ನು ನೋಡಿದೆ. 2006 ರ ಜುಲೈನಲ್ಲಿ ಕ್ಷುದ್ರಗ್ರಹವು ಭೂಮಿಯ ಗುರುತ್ವಾಕರ್ಷಣೆಯಿಂದ ಸೆರೆಹಿಡಿಯಲ್ಪಟ್ಟಿತು ಮತ್ತು ಜುಲೈ 2007 ರವರೆಗೆ ಒಂದು ವರ್ಷದವರೆಗೆ ನಮ್ಮ ಗ್ರಹವನ್ನು ಪರಿಭ್ರಮಿಸಿತು.

    ಹೊಸದಾಗಿ ಪತ್ತೆಯಾದ 2024 PT5, ಹಿಂದೆ ಪತ್ತೆಯಾಗಿದ್ದ 2022 NX1ನೊಂದಿಗೆ ಹೋಲಿಕೆ ಹೊಂದಿದೆ. ಇದು 2051 ರ ಸುಮಾರಿಗೆ ಮತ್ತೊಮ್ಮೆ  ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

  • ಚಂದ್ರನ ಮೇಲೆ ನಾಸಾ ರೈಲು – ಏನಿದು ಹೊಸ ಪ್ರಯೋಗ?

    ಚಂದ್ರನ ಮೇಲೆ ನಾಸಾ ರೈಲು – ಏನಿದು ಹೊಸ ಪ್ರಯೋಗ?

    ಭಾರತ (India) ಚಂದ್ರಯಾನ ಯಶಸ್ವಿಯಾದ ಮೇಲೆ ವಿಶ್ವದ ಅನೇಕ ದೇಶಗಳು ಚಂದ್ರನ (Moon) ಬಗ್ಗೆ ಸಂಶೋಧನೆಗೆ ಭಾರೀ ಆಸಕ್ತಿ ತೋರಿಸುತ್ತಿವೆ. ಅದರಂತೆ ಅಮೆರಿಕ (America) ಕೂಡ ಈ ಬಗ್ಗೆ ತೀವ್ರ ಕುತೂಹಲಕಾರಿ ವಿಚಾರ ಬಹಿರಂಗಪಡಿಸಿದ್ದು, ವಿಶ್ವದ ಉಳಿದೆಲ್ಲ ದೇಶಗಳಿಗಿಂತ ವಿಭಿನ್ನವಾದ ಹೆಜ್ಜೆ ಇಡಲು ಮುಂದಾಗಿದೆ. ಭೂಮಿಯ ಮೇಲೆ ನಿರ್ಮಾಣ ಮಾಡುವ ರೈಲ್ವೇ ಹಳಿಗಳ ರೀತಿ ಚಂದ್ರನ ಮೇಲೂ ರೈಲ್ವೇ ಹಳಿ ಮಾದರಿಯ ಹಳಿಗಳನ್ನು ನಿರ್ಮಿಸಿ ನಾಸಾ ಅಧ್ಯಯನ ನಡೆಸುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಚಂದ್ರನ ಮೇಲಿನ ಈ ಅಧ್ಯಯನದ ವಿಚಾರ ವಿಜ್ಞಾನ ಲೋಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಂಶೋಧನೆಯ ಬಗ್ಗೆ ನಾಸಾ  (NASA) ಪ್ರಕಟಿಸಿದೆ ಎನ್ನಲಾದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

    2030ರ ವೇಳೆಗೆ ಚಂದ್ರನ ಮೇಲೆ ಮೊದಲ ರೈಲು ನಿಲ್ದಾಣವನ್ನು ನಿರ್ಮಿಸಲು ನಾಸಾ ಯೋಚಿಸಿದೆ. ಚಂದ್ರನ ಮೇಲ್ಮೈಯ ಸುತ್ತ ಪೆಲೋಡ್ ಸಾರಿಗೆಗಾಗಿ ರೈಲು ಹಳಿಗಳ ನಿಮಾಣಕ್ಕೆ ನಾಸಾ ಮುಂದಾಗಿದೆ. ಈ ರೈಲು ಹಾಗೂ ಹಳಿಗಳು ಭೂಮಿಯ ಮೇಲಿರುವುದಕ್ಕಿಂತ ಸ್ವಲ್ಪ ವಿಶೇಷವಾಗಿ ಹಾಗೂ ವಿಭಿನ್ನವಾಗಿ ಇರಲಿವೆ. ಅಂದರೆ ಈ ಹಳಿಗಳ ಮೇಲೆ ನೇರವಾಗಿ ರೈಲು ಸಂಚರಿಸದೆ ರೈಲ್ವೇ ಹಳಿಗಳ ಮೇಲೆ ತೇಲುವ ತಂತ್ರಜ್ಞಾನವನ್ನು ಇಲ್ಲಿ ಬಳಸಿಕೊಳ್ಳಲು ನಾಸಾ ವಿಜ್ಞಾನಿಗಳು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹಕ್ಕೆ ತನ್ನ ಗಗನಯಾತ್ರಿಗಳನ್ನು ನಾಸಾ ಕಳುಹಿಸಲಿದೆ.

    ಇದು ನೇರವಾಗಿ ರೈಲ್ವೇ ಹಳಿಗಳ ರೀತಿ ಇದ್ದರೂ, ಇದು ಕಾರ್ಯನಿರ್ವಹಿಸುವುದು ಮ್ಯಾಗ್ನೆಟಿಕ್ ಶಕ್ತಿಯಿಂದ. ಇದರಿಂದ ನಾಸಾ ರೈಲು ನೇರವಾಗಿ ಹಳಿಗಳ ಮೇಲೆ ಸಂಚರಿಸದೆ, ಹಳಿಗಳ ಮೇಲೆ ತೇಲಲಿದೆ! ಗ್ರ್ಯಾಫೈಟ್, ಫಿಲ್ಮ್ ಟ್ರ್ಯಾಕ್ ಹಾಗೂ ಮ್ಯಾಗ್ನೆಟಿಕ್ ಲೆವಿಟೇಶನ್‌ (Flexible Levitation on a Track) ಎಂದು ಕರೆಯಲ್ಪಡುವ 3 ಪದರಗಳ ತಂತ್ರಜ್ಞಾನದ ಆಧಾರದ ಮೇಲೆ ಈ ರೈಲು ಸಂಚರಿಸಲಿದೆ. ಈ ಹಳಿಯನ್ನು ‘ಫ್ಲೆಕ್ಸಿಬಲ್ ಲೆವಿಟೇಶನ್ ಆನ್ ಎ ಟ್ರ್ಯಾಕ್’ (FLOAT) ಎಂದು ಕರೆಯಲಾಗಿದೆ. 

    FLOATನ ಪ್ರಮುಖ ಲಕ್ಷಣಗಳು

    ಮ್ಯಾಗ್ನೆಟಿಕ್ ಲೆವಿಟೇಶನ್ ಟೆಕ್ನಾಲಜಿ : FLOAT ವಿಶೇಷವಾಗಿ ವಿನ್ಯಾಸಗೊಳಿಸಿದ ಮೂರು-ಪದರದ ಟ್ರ್ಯಾಕ್ ಆಗಿದೆ. ಈ ಟ್ರ್ಯಾಕ್ ಮೇಲೆ ಮ್ಯಾಗ್ನೆಟಿಕ್ ರೋಬೋಟ್‌ಗಳು ಸಂಚರಿಸಲಿದೆ. ಈ ಟ್ರ್ಯಾಕ್‌ನಿಂದ ಚಂದ್ರನ ಮೇಲೆ ಧೂಳಿನ ಸಮಸ್ಯೆಯನ್ನು ರೋಬೋಟ್ ರೈಲು ಎದುರಿಸಿವುದಿಲ್ಲ. ರೋಬೋಟ್‌ಗಳನ್ನು ಟ್ರ್ಯಾಕ್‌ಗಳ ಉದ್ದಕ್ಕೂ ನಿಯಂತ್ರಿಸಲು ಈ ಟ್ರ್ಯಾಕ್‌ನಲ್ಲಿರುವ ಸೌರಫಲಕಗಳು ವಿದ್ಯುತ್ಕಾಂತೀಯ ಶಕ್ತಿಯನ್ನು ಉತ್ಪಾದಿಸುತ್ತದೆ. 

    ಪೇಲೋಡ್ ಸಾಮರ್ಥ್ಯ: ರೋಬೋಟ್ ರೈಲು ಚಂದ್ರನ ಮೇಲೆ ಪ್ರತಿ ಗಂಟೆಗೆ ಸರಿಸುಮಾರು 1.61 ಕಿಲೋಮೀಟರ್‌ಗಳಷ್ಟು ಸಂಚರಿಸಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿದಿನ 100 ಟನ್‌ಗಳಷ್ಟು ವಸ್ತುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. 

    ಉದ್ದೇಶಿತ ಕಾರ್ಯಗಳು: FLOAT ಚಂದ್ರನ ಮಣ್ಣು ಮತ್ತು ಇತರ ವಸ್ತುಗಳನ್ನು ಚಂದ್ರನ ಮೇಲ್ಮೈಯಲ್ಲಿ ಸಂಗ್ರಹಿಸುತ್ತದೆ. ಇಷ್ಟೇ ಅಲ್ಲದೇ ಭವಿಷ್ಯದ ಉಪಗ್ರಹಗಳ ಲ್ಯಾಂಡಿಂಗ್ ಸೈಟ್‌ಗಳು ಮತ್ತು ಬೇಸ್ ಸ್ಥಳಗಳ ನಡುವೆ ದೊಡ್ಡ ಪ್ರಮಾಣದ ವಸ್ತುಗಳು ಮತ್ತು ಉಪಕರಣಗಳ ಸಾಗಣೆಯನ್ನು ಇದು ಸುಗಮಗೊಳಿಸುತ್ತದೆ.

    ಈ ಸಂಶೋಧನೆಗಾಗಿ ಕ್ಯಾಲಿಫೋರ್ನಿಯಾದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (JPL) ನ ಇಂಜಿನಿಯರ್‌ಗಳು FLOAT ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಮತ್ತು ನಂತರ ಅದರ ವಿವಿಧ ಭಾಗಗಳನ್ನು ಪರೀಕ್ಷಿಸಲಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರೋಬೋಟಿಕ್ ತಜ್ಞರಾದ ಎಥಾನ್ ಸ್ಕೇಲರ್ ಅವರು ಚಂದ್ರನ ಮೇಲೆ ದೀರ್ಘಾವಧಿಯ ರೋಬೋಟಿಕ್ ಸಾರಿಗೆ ವ್ಯವಸ್ಥೆ ಮಾಡುವುದು ನಿರ್ಣಾಯಕವಾಗಿರುತ್ತದೆ. ಇದು ಕಾರ್ಯರೂಪಕ್ಕೆ ಬರುವುದಕ್ಕೆ ಹಲವು ಸವಾಲುಗಳಿವೆ. 2030ರ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ. 

    ಚಂದ್ರನ ಮೇಲೆ ಅಮೆರಿಕಕ್ಕೆ ಯಾಕಿಷ್ಟು ಆಸಕ್ತಿ?

    ಬಾಹ್ಯಾಕಾಶ ಸಂಶೋಧನೆಯಲ್ಲಿ ಯಾವಾಗಲೂ ಮುಂದಿರುವ ಅಮೆರಿಕ, ಈ ಹಿಂದೆ ಚಂದ್ರನಲ್ಲಿಗೆ ಮನುಷ್ಯನನ್ನು ಕಳುಹಿಸಿ ಸೈ ಎನಿಸಿಕೊಂಡಿತ್ತು. ಇತ್ತೀಚೆಗೆ ಚೀನಾ ಚಂದ್ರನ ಮೇಲೆ ಚಾಂಗ್’ಇ 6 (Chang’e 6) ಎಂಬ ಉಪಗ್ರಹವನ್ನು ಕಳಿಸಿ ಚಂದ್ರನ ಭಾಗಗಳಿಂದ ಮಣ್ಣು ಮತ್ತು ಕಲ್ಲಿನ ಮಾದರಿಯನ್ನು ಪಡೆಯಲು ಪ್ರಯತ್ನಿಸುತ್ತಿದೆ. ಈ ಬಾಹ್ಯಾಕಾಶ ನೌಕೆಯು ಚಂದ್ರನನಿಂದ ಎರಡು ಕಿಲೋಗ್ರಾಂಗಳಷ್ಟು ಮಣ್ಣು, ಕಲ್ಲಿನ ಮಾದರಿಗಳನ್ನು ಮರಳಿ ತರುವ ನಿರೀಕ್ಷೆಯಿದೆ. ಇದು ಮನುಷ್ಯನ ಇತಿಹಾಸದಲ್ಲಿ ಈ ರೀತಿಯ ಮೊದಲ ಪ್ರಯತ್ನವಾಗಿದೆ. 2020 ರಲ್ಲಿ, ಚೀನಾ ತನ್ನ ಚಾಂಗ್’ಇ -5 ಮಿಷನ್ ಸಮಯದಲ್ಲಿ ಚಂದ್ರನ ಭಾಗದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತಂದಿತ್ತು. ಚಾಂಗ್’ಇ 6 ಬಗ್ಗೆ ಯಾವುದೇ ಮಾಹಿತಿಯನ್ನು ಚೀನಾ ಬಿಡುಗಡೆ ಮಾಡಿಲ್ಲ. ಆದರೆ ಚೀನಾ ಬಗ್ಗೆ ಅಮೆರಿಕ, ಚಂದ್ರನ ಮೇಲೆ ಸೇನಾ ನೆಲೆ ಸ್ಥಾಪಿಸಲು ಮುಂದಾಗಿದೆ ಎಂದು ಹೇಳಿದೆ. ಅಲ್ಲದೇ ಇದೊಂದು ಬೇಹುಗಾರಿಕೆ ಉಪಗ್ರಹ ಎಂಬ ಆರೋಪಗಳು ಸಹ ಕೇಳಿ ಬಂದಿವೆ. ಇದೇ ಕಾರಣಕ್ಕೆ ಅಮೆರಿಕ ಸಹ ತನ್ನ ಸಂಶೋಧನೆಯನ್ನು ಮುಂದುವರಿಸಿ ಚೀನಾದ ಮುಂದೆ ತನ್ನ ಸಾಮರ್ಥ್ಯ ಏನು ಕಮ್ಮಿ ಇಲ್ಲ ಎಂದು ತೋರಿಸಲು ಮಂದಾಗಿದೆ. 

    ಚಂದ್ರನ ಮೇಲಿನ ಅಧ್ಯನದಲ್ಲಿ ಚೀನಾ ಈಗ ಮೊದಲನೇ ಸ್ಥಾನದಲ್ಲಿದ್ದರೆ, ಅಮೆರಿಕ 2 ನೇ ಸ್ಥಾನದಲ್ಲಿದೆ. ನಂತರದ ಸ್ಥಾನವನ್ನು ಭಾರತ ಹೊಂದಿದೆ. ಈ ಮೂಲಕ ಚೀನಾ, ಅಮೆರಿಕ ಸೇರಿದಂತೆ ಬಹುತೇಕ ದೇಶಗಳು ಚಂದ್ರನಲ್ಲಿ ಸಿಗಬಹುದಾದ ಖನಿಜಗಳ ಮೇಲೆ ಕಣ್ಣಿಟ್ಟಿವೆ. ಇದೇ ಕಾರಣಕ್ಕೆ ಚಂದ್ರನ ಮೇಲಿನ ಅಧ್ಯಯನ ಮಹತ್ವ ಪಡೆದುಕೊಂಡಿದೆ. 

    ಭಾರತ ಸಹ ಚಂದ್ರನ ಅಧ್ಯಯನದಲ್ಲಿ ಮಹತ್ವದ ಹೆಜ್ಜೆ: ಕಳೆದ ವರ್ಷ ಭಾರತ ಚಂದ್ರನಲ್ಲಿಗೆ ಚಂದ್ರಯಾನ -3 ಉಪಗ್ರಹವನ್ನು ಯಶಸ್ವಿಯಾಗಿ ಕಳಿಸಿ ವಿಶ್ವವೇ ತಿರುಗಿ ನೋಡುವಂತೆ ಮಾಡಿತ್ತು. ಈ ಉಪಗ್ರಹ ಚಂದ್ರನಲ್ಲಿ ಇರುವ ಕಲ್ಲು ಮತ್ತು ಮಣ್ಣಿನಲ್ಲಿ ಇರುವ ಮೆಗ್ನೀಶಿಯಂ, ಅಲ್ಯುಮಿನಿಯಂ, ಸಿಲಿಕಾನ್, ಕಬ್ಭಿಣ ಸೇರಿದಂತೆ ಹಲವು ಖನಿಜಗಳ ಕುರಿತಾಗಿ, ಲೋಹಗಳ ಕುರಿತಾಗಿ ಮಾಹಿತಿ ಸಂಗ್ರಹ ಮಾಡಿತ್ತು. ಇದಕ್ಕೂ ಮುನ್ನ ಮಾಡಿದ್ದ ಚಂದ್ರಯಾನ -2 ಕೊನೆಯ ಘಳಿಗೆಯಲ್ಲಿ ವಿಫಲವಾಗಿತ್ತು. 

  • ಶತಮಾನಗಳಲ್ಲೇ ಮೊದಲಬಾರಿಗೆ ಸಂಪೂರ್ಣ ಸೂರ್ಯಗ್ರಹಣ ಗೋಚರ – ವಿಶೇಷ ವೀಡಿಯೋ ಹಂಚಿಕೊಂಡ ನಾಸಾ

    ಶತಮಾನಗಳಲ್ಲೇ ಮೊದಲಬಾರಿಗೆ ಸಂಪೂರ್ಣ ಸೂರ್ಯಗ್ರಹಣ ಗೋಚರ – ವಿಶೇಷ ವೀಡಿಯೋ ಹಂಚಿಕೊಂಡ ನಾಸಾ

    ನವದೆಹಲಿ: ವರ್ಷದ ಮೊದಲ ಸೂರ್ಯಗ್ರಹಣವು ಸೋಮವಾರ (ಏ.8) ಗೋಚರವಾಗಿದೆ. ಮೆಕ್ಸಿಕೊ, ಕೆನಡಾ ಹಾಗೂ ಅಮೆರಿಕದಂತಹ ದೇಶಗಳಲ್ಲಿ ಸೂರ್ಯಗ್ರಹಣ (Solar Eclipse) ಗೋಚರವಾಗಿದೆ. ಅಲ್ಲದೇ ನ್ಯೂಯಾರ್ಕ್‌ನಲ್ಲಿ (New York) ಶತಮಾನಗಳ ಬಳಿಕ ಮೊದಲಬಾರಿಗೆ ಸಂಪೂರ್ಣವಾಗಿ ಗೋಚರವಾಗಿರುವ ಸೂರ್ಯಗ್ರಹಣವಿದು ಎಂದು ಹೇಳಲಾಗಿದೆ.

    ಈ ಕುರಿತ ವಿಶೇಷ ವೀಡಿಯೋಗಳನ್ನು ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಸಂಪೂರ್ಣತೆಯ ಹಾದಿಯಾಗಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಚುವ ದೃಶ್ಯಗಳು ಈ ಚಿತ್ರಪಟ ಹಾಗೂ ವೀಡಿಯೋದಲ್ಲಿ ಕಂಡುಬಂದಿದೆ. ಆದ್ರೆ ಇದು ಭಾರತದಲ್ಲಿ ಗೋಚರವಾಗಿಲ್ಲ. ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು – ಈ ವರ್ಷದಲ್ಲಿ 10ನೇ ಪ್ರಕರಣ

    ನಾಸಾ ವೀಕ್ಷಕರಿಗಾಗಿ ತನ್ನ ಸೋಶಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಅಧಿಕೃತ ನೇರ ಪ್ರಸಾರ ಸಹ ಹಮ್ಮಿಕೊಂಡಿತ್ತು. ಈ ಕುರಿತ ವೀಡಿಯೋಗಳನ್ನು ಈಗ ಹಂಚಿಕೊಂಡಿದೆ. ಕಳೆದ ಒಂದು ಶತಮಾನದಲ್ಲಿ ಇದೇ ಮೊದಲಬಾರಿಗೆ ನ್ಯೂಯಾರ್ಕ್ ರಾಜ್ಯದ ಪಶ್ಚಿಮ ಮತ್ತು ಉತ್ತರ ದೇಶದ ಜನರು ಸಂಪೂರ್ಣ ಗ್ರಹಣ ಕಣ್ತುಂಬಿಕೊಂಡಿದ್ದಾರೆ ಎಂದು ನಾಸಾ ಮೂಲಗಳು ತಿಳಿಸಿವೆ.

    ಅಲ್ಲದೇ ಮೆಕ್ಸಿಕನ್ ಬೀಚ್‌ಸೈಡ್ ರೆಸಾರ್ಟ್ ಪಟ್ಟಣವಾದ ಮಜಟ್ಲಾನ್ ಉತ್ತರ ಅಮೆರಿಕಾದಲ್ಲಿಯೂ ಜನ ಗ್ರಹಣ ಕೌತುಕವನ್ನ ವೀಕ್ಷಿಸಿದ್ದಾರೆ. ದಕ್ಷಿಣ ಟೆಕ್ಸಾಸ್‌, ಮೆಕ್ಸಿಕೊದ ದಕ್ಷಿಣ ಗಡಿಯಲ್ಲಿರುವ ಈಗಲ್ ಪಾಸ್ ಭಾಗಶಃ ಗ್ರಹಣವು ಗೋಚರವಾಗಿದೆ. 2024ರ ಸಂಪೂರ್ಣ ಗ್ರಹಣವು ಐತಿಹಾಸಿಕ ಮಹತ್ವವನ್ನು ಗಳಿಸಿಕೊಂಡಿದೆ. ಏಕೆಂದರೆ ಮುಂದೆ 2044ರ ವರೆಗೆ ಮತ್ತೆ ಯುಎಸ್‌ ದೇಶಾದ್ಯಂತ ಗ್ರಹಣ ಗೋಚರವಾಗುವುದಿಲ್ಲ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Taiwan Earthquake – 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

    ಅಲ್ಲದೆ ಒಕ್ಲಹೋಮ, ಅರ್ಕಾನ್ಸಾಸ್, ಮಿಸೌರಿ, ಇಲಿನಾಯ್ಸ್, ಕೆಂಟುಕಿ, ಇಂಡಿಯಾನಾ, ಓಹಿಯೋ, ಪೆನ್ಸಿಲ್ವೇನಿಯಾ, ನ್ಯೂಯಾರ್ಕ್, ವಮೊರ್ಂಟ್, ನ್ಯೂ ಹ್ಯಾಂಪ್‍ಶೈರ್ ಮತ್ತು ಮೈನೆ ಮೊದಲಾದ ರಾಜ್ಯಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗಿದೆ.

  • ಯುಗಾದಿ ಚಂದ್ರನ ದರ್ಶನ – ಏನಿದರ ಮಹತ್ವ?

    ಯುಗಾದಿ ಚಂದ್ರನ ದರ್ಶನ – ಏನಿದರ ಮಹತ್ವ?

    ಹಿಂದೂ ಧರ್ಮದ (Hindu Religion) ಬಹುತೇಕ ಆಚರಣೆಗಳು ಪ್ರಕೃತಿಯೊಂದಿಗೆ ಸಂಬಂಧ ಹೊಂದಿವೆ. ಅದೇ ರೀತಿ ಯುಗಾದಿ ಹಬ್ಬ (Ugadi Festival) ಸಹ ಪ್ರಕೃತಿ ವಸಂತ ಕಾಲದ ಉತ್ತುಂಗದಲ್ಲಿದ್ದಾಗ ಆಚರಿಸುವ ವಿಶೇಷ ಹಬ್ಬವಾಗಿದೆ. ಈ ಸಮಯದಲ್ಲಿ ಪ್ರಕೃತಿಯೇ ಹಸಿರು, ಹೂವಿನ ತಳಿರು ತೋರಣ ಕಟ್ಟಿ ಸಂಭ್ರಮಿಸುತ್ತಿರುತ್ತದೆ. ಈ ಹಬ್ಬದಂದು ಸಂಜೆ ಚಂದ್ರನ (Moon) ದರ್ಶನಕ್ಕೆ ಸಹ ವಿಶೇಷ ಮಹತ್ವವಿದೆ.

    ಗಣಪತಿ ತನ್ನ ವಾಹನ ಇಲಿಯನ್ನೇರಿ ಹೋಗುತ್ತಿದ್ದಾಗ ಆಯತಪ್ಪಿ ಬೀಳುತ್ತಾನೆ. ಇದನ್ನು ಕಂಡು ಆಕಾಶದಲ್ಲಿದ್ದ ಚಂದ್ರ ನಗುತ್ತಾನೆ. ಇದನ್ನು ನೋಡಿದ ಗಣೇಶ, ಚೌತಿಯ ದಿನ ಚಂದ್ರನನ್ನು ನೋಡಿದರೆ ಅಪವಾದ ಬರಲಿ ಎಂದು ಶಾಪ ನೀಡುತ್ತಾನೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಶಾಪ ವಿಮೋಚನೆಗೆ ಯುಗಾದಿ ಚಂದ್ರನ ದರ್ಶನ ಮಾಡಬೇಕು ಎಂಬ ನಂಬಿಕೆ ಇದೆ.

    ಚಂದ್ರ ಶುದ್ಧತೆ, ಬುದ್ಧಿವಂತಿಕೆಯ ಸಂಕೇತ

    ಹಿಂದೂ ಧರ್ಮದ ಪ್ರಕಾರ, ಚಂದ್ರ ನವಗ್ರಹಗಳಲ್ಲಿ ಒಬ್ಬ, ಶುದ್ಧತೆ, ಬುದ್ಧಿವಂತಿಕೆ ಹಾಗೂ ಉತ್ತಮ ನಡವಳಿಕೆಯ ಸಂಕೇತವಾಗಿ ಆತನನ್ನು ಬಿಂಬಿಸಲಾಗುತ್ತದೆ. ಅಂತಹ ಚಂದ್ರನನ್ನು ವರ್ಷದ ಆದಿ ಪರ್ವವಾದ ಯುಗಾದಿಯಂದು ದರ್ಶನ ಪಡೆದರೆ, ಇಡೀ ವರ್ಷವೆಲ್ಲಾ ಸುಖ-ಸಂತೋಷದಿಂದ ಇರುತ್ತಾರೆ ಎಂಬ ನಂಬಿಕೆ ಇದೆ. ಇದೇ ನಂಬಿಕೆಯಿಂದ ಹಿಂದಿನಿಂದಲೂ ಯುಗಾದಿ ಚಂದ್ರನನ್ನು ನೋಡುವುದು ವಾಡಿಕೆಯಾಗಿದೆ. ಯುಗಾದಿಯ ಹಿಂದಿನ ದಿನ ಅಮಾವಾಸ್ಯೆಯಲ್ಲಿ ಬರುವುದರಿಂದ ಮರು ದಿನ ಚಂದ್ರನ ದರ್ಶನಕ್ಕೆ ಪುಣ್ಯ ಮಾಡಿರಬೇಕು!

    ಚಂದ್ರ ದರ್ಶನದಿಂದ ಮಳೆ-ಬೆಳೆ ಲೆಕ್ಕಾಚಾರ

    ಯುಗಾದಿ ದಿನದಂದು ಕಾಣಿಸುವ ಚಂದ್ರನನ್ನು ಆಧರಿಸಿ ಹಿಂದೆ ಆ ವರ್ಷದ ಮಳೆ-ಬೆಳೆ, ರೋಗ-ರುಜಿನಗಳು, ಏಳು-ಬೀಳುಗಳ ಬಗ್ಗೆ ಚಿಂತನೆ ಮಾಡುತ್ತಿದ್ದರು. ಯುಗಾದಿಯಂದು ಚಂದ್ರನು ಅತ್ಯಂತ ಚಿಕ್ಕದಾಗಿ ಸಣ್ಣ ಗೆರೆಯ ರೀತಿಯಲ್ಲಿ ಕಾಣ ಸಿಗುತ್ತಾನೆ. ಇದನ್ನು ಆಧರಿಸಿ ವರ್ಷದ ಭವಿಷ್ಯವನ್ನು ನಿರ್ಧರಿಸುತ್ತಿದ್ದರು. ಅದಕ್ಕೆಂದೇ ಹೊಸ ವರ್ಷದ ಪಂಚಾಂಗವನ್ನು ಪಠಿಸಿ, ಅನಂತರ ಚಂದ್ರ ದರ್ಶನವನ್ನು ಮಾಡಲಾಗುತ್ತದೆ.

  • ಸಮೋಸ, ಬಾಳೆಹಣ್ಣು ತಿಂದು 2023ರ ಚಂದ್ರಗ್ರಹಣಕ್ಕೆ ಸ್ವಾಗತ – ಪ್ರಗತಿಪರರಿಂದ ವಿನೂತನ ಜಾಗೃತಿ

    ಸಮೋಸ, ಬಾಳೆಹಣ್ಣು ತಿಂದು 2023ರ ಚಂದ್ರಗ್ರಹಣಕ್ಕೆ ಸ್ವಾಗತ – ಪ್ರಗತಿಪರರಿಂದ ವಿನೂತನ ಜಾಗೃತಿ

    ಬೆಂಗಳೂರು: ರಾತ್ರಿ ನಭೋಮಂಡಲದಲ್ಲಿ ಸಂಭವಿಸಿದ ಚಂದ್ರಗ್ರಹಣದ (Lunar Eclipse) ವಿಸ್ಮಯವನ್ನು ಹಲವು ಪ್ರಗತಿಪರರು ಆಹಾರ ಸೇವನೆ ಮಾಡುತ್ತಾ ಚಂದ್ರಗ್ರಹಣ ವೀಕ್ಷಣೆ ಮಾಡಿದ್ದಾರೆ. ʻಖಗೋಳ ವಿಸ್ಮಯ ಚಂದ್ರಗ್ರಹಣ ಸಂಭ್ರಮಿಸೋಣ, ಮೂಡನಂಭಿಕೆ ಅಳಿಸೋಣ, ಮಾನವೀಯತೆ ಉಳಿಸೋಣ, ವಿಜ್ಞಾನದೆಡೆಗೆ ನಮ್ಮ ನಡಿಗೆʼ ಎಂಬ ಘೋಷವಾಕ್ಯದೊಂದಿಗೆ ಸಮೋಸ (Samosa), ಬಾಳೆಹಣ್ಣು ತಿನ್ನುತ್ತಾ 2023ರ ಚಂದ್ರಗ್ರಹಣಕ್ಕೆ ಸ್ವಾಗತ ಕೋರಿದರು.

    ಇಲ್ಲಿನ ಚಾಲುಕ್ಯ ವೃತ್ತದ ಬಳಿಯಿರುವ ಬಸವಣ್ಣ ಪ್ರತಿಮೆ (Basavanna Statue) ಮುಂದೆ ಜಮಾಯಿಸಿದ್ದ ಹಲವು ಪ್ರಗತಿಪರರು ʻಗ್ರಹಣದ ಸಮಯದಲ್ಲಿ ಊಟ ಮಾಡಬಾರದುʼ ಅನ್ನೋ ಜೋತಿಷಿಗಳ ನಂಬಿಕೆಗೆ ಸೆಡ್ಡು ಹೊಡೆದು ಆಹಾರ ಸೇವನೆ ಮಾಡಿದರು. ಗ್ರಹಣದ ಸಮಯದಲ್ಲಿ ಊಟ ಮಾಡಬಾರದು ಅನ್ನೋದು ಮೌಢ್ಯ, ಅದನ್ನ ವಿರೋಧಿಸಿ ಚಂದ್ರಗ್ರಹಣ ಸಂಭ್ರಮಿಸೋಣ ಎಂದು ಪ್ರಗತಿಪರರು ಕರೆ ನೀಡಿದ್ದಾರೆ. ನಟ ಚೇತನ್‌ ದಂಪತಿ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಮೂಢನಂಬಿಕೆ ವಿರೋಧಿ ಒಕ್ಕೂಟದಿಂದ ವಿಜ್ಞಾನದೆಡಗೆ ನಮ್ಮ ನಡಿಗೆ ಘೋಷವಾಕ್ಯದೊಂದಿಗೆ ಗ್ರಹಣದ ಬಗ್ಗೆ ಮೌಢ್ಯ ಬೇಡವೆಂದು ನೆಹರೂ ತಾರಾಲಯದಲ್ಲಿ (Nehru Planetarium) ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿತು. ಇದನ್ನೂ ಓದಿ: ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಗ್ರಹಣ ವೀಕ್ಷಣೆಗೆ ಅಡ್ಡಿಯಾದ‌ ಮೋಡ: ಇನ್ನೂ ಚಂದ್ರಗ್ರಹಣ ವೀಕ್ಷಣೆಗೆ ಮೋಡ ಅಡ್ಡಿಯುಂಟು ಮಾಡಿದೆ. ನಸುಕಿನ 1:04 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಿತ್ತು. 1 ಗಂಟೆ 30 ನಿಮಿಷಗಳ ವರೆಗೂ ಗ್ರಹಣ ಗೋಚರವಾಗುತ್ತಿತ್ತು. ಆ ನಂತರ ಸ್ಬಲ್ಪ ಸಮಯ ಮೋಡ ಅಡ್ಡಿಯಾಗಿದ್ದರಿಂದ ಗ್ರಹಣ ವೀಕ್ಷಣೆಗೂ ಅಡಚಣೆಯುಂಟಾಗಿತ್ತು. ಇದನ್ನೂ ಓದಿ: ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    Web Stories 
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಬೆಂಗಳೂರು: ಇಂದು (ಭಾನುವಾರ) ರಾತ್ರಿ ನಭೋಮಂಡಲದಲ್ಲಿ ಸಂಭವಿಸಿದ ರಾಹುಗ್ರಸ್ಥ, ಖಂಡಗ್ರಾಸ ಚಂದ್ರಗ್ರಹಣದ (Lunar Eclipse) ವಿಸ್ಮಯವನ್ನು ನೆಹರೂ ತಾರಾಲಯದಲ್ಲಿ (Nehru Planetarium) ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇಸ್ರೋ (ISRO) ಸಿಬ್ಬಂದಿ ಸೇರಿದಂತೆ ಅನೇಕರು ಕಣ್ತುಂಬಿಕೊಂಡರು.

    ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೂ ವೀಕ್ಷಣೆ ಮಾಡಬಹುದೆಂದು ವಿಜ್ಞಾನಿಗಳು ಹೇಳಿದ್ದಾರೆ. ಇದರ ಹೊರತಾಗಿಯೂ ನೆಹರೂ ತಾರಾಲಯದಲ್ಲಿ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿದೆ. ಚಂದ್ರನ ಕೌತುಕ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದಲೂ ಶಿಕ್ಷಕರು, ವಿದ್ಯಾರ್ಥಿಲೂ (Students) ನೆಹರೂ ತಾರಾಲಯಕ್ಕೆ ಆಗಮಿಸಿದ್ದರು. ಇದನ್ನೂ ಓದಿ: ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    ಈ ಸಂತದವನ್ನು `ಪಬ್ಲಿಕ್ ಟಿವಿ’  (Public TV) ಜೊತೆಗೆ ಹಂಚಿಕೊಂಡರು. ಚಂದ್ರಗ್ರಹಣ ವೀಕ್ಷಣೆಯಿಂದ ಸಾಕಷ್ಟು ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡೆವು. ಶಾಲೆಗಳಲ್ಲಿ ಈ ಬಗ್ಗೆ ಮಕ್ಕಳಿಗೆ ಹೆಚ್ಚಿನ ತಿಳಿವಳಿಕೆ ನೀಡಬಹುದು. ಇಷ್ಟು ಹತ್ತಿರದಿಂದ ಚಂದ್ರನನ್ನು ನೋಡುತ್ತಿದ್ದೇವೆ. ಜೊತೆಗೆ ಗುರುಗ್ರಹವನ್ನೂ (Jupiter) ನೋಡುತ್ತಿರುವುದು ಖುಷಿ ಸಿಕ್ಕಿದೆ ಎಂದು ಹಾವೇರಿಯಿಂದ ಬಂದ ಶಿಕ್ಷಕರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ ಹಿನ್ನೆಲೆ – ರಾಯರ ವೃಂದಾವನಕ್ಕೆ ನಿರಂತರ ಜಲಾಭಿಷೇಕ

    ಇನ್ನೂ ಕೆಲ ಮಕ್ಕಳು, ನಾವು ಪುಸ್ತಕಗಳಲ್ಲಿ ಮಾತ್ರವೇ ಗ್ರಹಣದ ಬಗ್ಗೆ ಓದಿದ್ದೆವು, ಕೇಳಿದ್ದೆವು. ಆದ್ರೆ ಈಗ ಕಣ್ಣಾರೆ ವೀಕ್ಷಿಸುತ್ತಿರುವುದು ವಿಸ್ಮಯವೇ ಅನ್ನಿಸಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿಯಂತಹ ನಾಯಕ ದೇಶಕ್ಕೆ ಅನಿವಾರ್ಯ.. ಮತ್ತೊಮ್ಮೆ ಮೋದಿ ನಾಯಕತ್ವ ಬೇಕು ಅನ್ನೋದು ತಪ್ಪಲ್ಲ: ಮಂತ್ರಾಲಯ ಶ್ರೀ

    ಚಂದ್ರಗ್ರಹಣ ಕುರಿತು ಮಾಹಿತಿ ನೀಡಿದ್ದ ನೆಹರೂ ತಾರಾಲಯದ ವಿಜ್ಞಾನಿ ಆನಂದ್, ಮಧ್ಯರಾತ್ರಿ ಜಾವ 1:05 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಲಿದೆ. 3:05 ಕ್ಕೆ ಮೋಕ್ಷ ಆಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಭೂಮಿಯ ನೆರಳಿನ ಶಂಕು ದೊಡ್ಡದು. ಚಂದ್ರನನ್ನ ಇದು ಆವರಿಸಿಕೊಳ್ಳುತ್ತದೆ. ಚಂದ್ರಗ್ರಹಣ ಎಲ್ಲಾ ದೇಶಗಳಲ್ಲೂ ವೀಕ್ಷಣೆ ಮಾಡಬಹುದು. ಆದರೆ ಪ್ರಮಾಣ ಹೆಚ್ಚುಕಮ್ಮಿ ಇರುತ್ತದೆ. ಚಂದ್ರನ ಒಂದು ಭಾಗ ಮಾತ್ರ ನೆರಳಿನಿಂದ ಆವೃತವಾಗುತ್ತದೆ. 1:05ಕ್ಕೆ ಆರಂಭವಾಗಿ 1:45 ಗಂಟೆಗೆ ದಟ್ಟವಾಗುತ್ತದೆ. ಬೆಂಗಳೂರಿನಲ್ಲಿ 6% ಮಾತ್ರ ಛಾಯೆ ಸುತ್ತುವರಿಯುತ್ತದೆ. ಗರಿಷ್ಟ ಮಟ್ಟದ ಪ್ರಮಾಣ 1:45 ಗಂಟೆಗೆ ತಲುಪುತ್ತದೆ ಎಂದು ವಿವರಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    ಬೆಂಗಳೂರು: ಇದು ಪಾರ್ಶ್ವ ಚಂದ್ರಗ್ರಹಣ. ಇದನ್ನು ಎಲ್ಲಾ ದೇಶಗಳಲ್ಲೂ ವೀಕ್ಷಿಸಬಹುದು. ಆದರೆ ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ ಎಂದು ನೆಹರು ತಾರಾಲಯದ ವಿಜ್ಞಾನಿ ಆನಂದ್ ತಿಳಿಸಿದ್ದಾರೆ.

    ಚಂದ್ರಗ್ರಹಣ ಕುರಿತು ಮಾತನಾಡಿದ ಅವರು, ಬೆಳಗಿನ ಜಾವ 1:05 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಲಿದೆ. 3:05 ಕ್ಕೆ ಮೋಕ್ಷ ಆಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೆಹರು ತಾರಾಲಯದಲ್ಲಿ ಬ್ಲಡ್ ಮೂನ್ ಗ್ರಹಣ ವೀಕ್ಷಣೆಗೆ ಅವಕಾಶ

    ಭೂಮಿಯ ನೆರಳಿನ‌ ಶಂಕು ದೊಡ್ಡದು. ಚಂದ್ರನನ್ನ ಇದು ಆವರಿಸಿಕೊಳ್ಳುತ್ತದೆ. ಚಂದ್ರಗ್ರಹಣ ಎಲ್ಲಾ ದೇಶಗಳಲ್ಲೂ ವೀಕ್ಷಣೆ ಮಾಡಬಹುದು. ಆದರೆ ಪ್ರಮಾಣ ಹೆಚ್ಚುಕಮ್ಮಿ ಇರುತ್ತದೆ. ಚಂದ್ರನ ಒಂದು ಭಾಗ ಮಾತ್ರ ನೆರಳಿನಿಂದ ಆವೃತವಾಗುತ್ತದೆ ಎಂದು ವಿವರಿಸಿದ್ದಾರೆ.

    1:05ಕ್ಕೆ ಆರಂಭವಾಗಿ 1:45 ಗಂಟೆಗೆ ದಟ್ಟವಾಗುತ್ತದೆ. ಬೆಂಗಳೂರಿನಲ್ಲಿ 6% ಮಾತ್ರ ಛಾಯೆ ಸುತ್ತುವರಿಯುತ್ತದೆ. ಗರಿಷ್ಟ ಮಟ್ಟದ ಪ್ರಮಾಣ 1:45 ಗಂಟೆಗೆ ತಲುಪುತ್ತದೆ. ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ ಎಂದು ಹೇಳಿದ್ದಾರೆ.

    ಗ್ರಹಣ ವೀಕ್ಷಣೆಗೆ ಬೇರೆ ಸಲಕರಣೆಗಳ ಅಗತ್ಯವಿಲ್ಲ. ಚಂದ್ರಗ್ರಹಣ ಬರಿಗಣ್ಣಿನಿಂದ ನೋಡಬಹುದು. ಟೆಲಿಸ್ಕೋಪ್‌ಗಳ ಅಗತ್ಯ ಇರಲ್ಲ. ಕುತೂಹಲಕ್ಕಾಗಿ ಟೆಲಿಸ್ಕೋಪ್‌ಗಳ ಮೂಲಕ ವೀಕ್ಷಣೆಗೆ ಅವಕಾಶವಿದೆ. ಬೆಳಕಿನ ಮೂಲಕ್ಕೆ ಅಡ್ಡ ಬರುವ ಕಾಯವೇ ಗ್ರಹಣ. ಬೆಳಕು ವ್ಯತ್ಯಾಸಗಳಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಇಂದು ವರ್ಷದ ಕೊನೆಯ ಚಂದ್ರಗ್ರಹಣ- ಮಧ್ಯರಾತ್ರಿ 1 ಗಂಟೆಗೆ ಗ್ರಹಣ ಸ್ಪರ್ಶ

    ಚಂದ್ರನ ಮೇಲೆ ಭೂಮಿ ಹಾದು ಹೋಗುತ್ತದೆ. ಚಂದ್ರನ ದೂರ, ಭೂಮಿ, ಚಂದಿರನ ಅಂತರ ಅಳೆಯಲು ನೆರವಾಗಿದೆ ಈ ಗ್ರಹಣ. ಗ್ರಹಣದ ವೇಳೆ ಪ್ರಾಕೃತಿಕ ವಿಕೋಪಗಳು ಆಗೋದು ಕಾಕತಾಳೀಯ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]