Tag: moodbidri

  • ಬಿಜೆಪಿಗೆ ಎರಡನೇ ಗೆಲುವಿನ ಕೊಡುಗೆ ನೀಡಲಿದೆಯೇ ಮೂಡುಬಿದಿರೆ ಕ್ಷೇತ್ರ?

    ಬಿಜೆಪಿಗೆ ಎರಡನೇ ಗೆಲುವಿನ ಕೊಡುಗೆ ನೀಡಲಿದೆಯೇ ಮೂಡುಬಿದಿರೆ ಕ್ಷೇತ್ರ?

    ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಬಿಜೆಪಿ (BJP) ಗೆಲ್ಲಲಾಗದ ಕ್ಷೇತ್ರ ಇದ್ದುದ್ದು ಮೂಡುಬಿದಿರೆ (Moodbidri). ಜೈನ ಕಾಶಿ, ಶಿಕ್ಷಣ ಕಾಶಿ ಎಂದೆಲ್ಲ ಖ್ಯಾತಿವೆತ್ತ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ 2018ರಲ್ಲಿ ಖಾತೆ ತೆರೆದ ಬಿಜೆಪಿ ಈ ಬಾರಿ ಅದನ್ನು ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿದೆ.

    ಹಿಂದುತ್ವ, ಮೋದಿ ಅಲೆಯ ನೆರವಿನೊಂದಿಗೆ ಬಿಜೆಪಿಯಿಂದ ಉಮಾನಾಥ ಕೋಟ್ಯಾನ್ 29,799 ಮತಗಳ ಬಾರಿ ಅಂತರದಿಂದ ಕಾಂಗ್ರೆಸ್‌ನ (Congress) ಅಭಯಚಂದ್ರ ಜೈನ್ ಅವರನ್ನು ಸೋಲಿಸಿದ್ದರು. ಸತತ 4 ಬಾರಿ ಗೆದ್ದು ಸಚಿವರೂ ಆಗಿದ್ದ ಅಭಯಚಂದ್ರರಿಗೆ ಈ ಸೋಲಿನೊಂದಿಗೆ ಮರ್ಮಾಘಾತವಾಗಿತ್ತು. ಗೆದ್ದು ಬೀಗಿದ ಉಮಾನಾಥ ಕೋಟ್ಯಾನ್ ತಮ್ಮ ಅಧಿಕಾರಯುತ ಶೈಲಿಯ ಆಡಳಿತದಿಂದ ಜನಮೆಚ್ಚುಗೆ ಗಳಿಸಿದ್ದಾರೆ. ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ. ಇವು ಕೈಹಿಡಿಯಬಹುದು ಎಂಬುದು ಕೋಟ್ಯಾನ್ ನಿರೀಕ್ಷೆ.

    ಈ ನಡುವೆ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿರುವ ಸುದರ್ಶನ ಮೂಡುಬಿದ್ರೆ ಕಳೆದ ಬಾರಿಯಂತೆ ಈ ಸಲವೂ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಅವರ ಓಡಾಟ ಹೆಚ್ಚಾಗಿದ್ದು, ಮೂಲೆ ಮೂಲೆಗಳಿಗೂ ಸುತ್ತಿ ಯುವಕರನ್ನು ಸಂಘಟಿಸುತ್ತಿದ್ದಾರೆ. ಇವರಿಬ್ಬರನ್ನು ಬಿಟ್ಟರೆ ಕ್ಷೇತ್ರದಿಂದ ಸ್ಪರ್ಧೆಗೆ ತೀವ್ರ ಆಸಕ್ತಿ ಹೊಂದಿರುವವರು ಯಾರೂ ಇದ್ದಂತಿಲ್ಲ. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜಗದೀಶ್‌ ಅಧಿಕಾರಿ ವಿವಾದಗಳಿಂದಾಗಿ ಹಿಂದೆ ಬಿದ್ದಿದ್ದಾರೆ.

    ಕಳೆದ ಚುನಾವಣೆಗೂ ಮೊದಲೇ ಅಭಯಚಂದ್ರ ಜೈನ್ (Abhay Chandra Jain) ಕ್ಷೇತ್ರದಲ್ಲಿ ಯುವಕರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದಾಗಿ ಘೋಷಿಸಿದ್ದರು. ಮಿಥುನ್ ರೈ ಉತ್ತರಾಧಿಕಾರಿ ಎಂದೂ ಹೇಳಿದ್ದರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕ್ಷೇತ್ರಕ್ಕೆ ಐವನ್ ಡಿಸೋಜ ಪ್ರವೇಶವಾಗಿ ಗಲಾಟೆ ಗೌಜಿಗಳು ಗೊಂದಲಗಳು ನಡೆದಿದ್ದವು. ರಾಜ್ಯ ನಾಯಕರ 2 ಬಣಗಳ ನಡುವಿನ ಮೇಲಾಟವಾಗಿಯೂ ಚಿತ್ರಣ ಬದಲಾಗಿತ್ತು. ಕೊನೆಗೆ ವರಿಷ್ಠರ ಒತ್ತಡಕ್ಕೆ ಮಣಿದು ಅಭಯಚಂದ್ರ ಜೈನ್ ಸ್ಪರ್ಧಿಸಿದರೂ ಗೆಲುವು ಸಾಧ್ಯವಾಗಲಿಲ್ಲ. ಈ ಬಾರಿಯಂತೂ ಮಿಥುನ್ ರೈಯೇ ಅಭ್ಯರ್ಥಿ ಎಂದು ಜೈನ್ ಪಕ್ಷದ ವೇದಿಕೆಗಳಲ್ಲಿ ಹೇಳುತ್ತಿದ್ದಾರೆ. ಅಂತೆಯೇ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತವಲಯದ ಮಿಥುನ್ ರೈಗೆ ಟಿಕೆಟ್ ನೀಡಿದೆ. ಇದನ್ನೂ ಓದಿ: ಕರ್ಪೂರ ಬೆಳಗಿ, ಈಡುಗಾಯಿ ಹೊಡೆದು ಸರ್ಕಾರಿ ವಾಹನ ಬೀಳ್ಕೊಟ್ಟ ಸಚಿವ ನಾರಾಯಣಗೌಡ

    ಮೂಡುಬಿದಿರೆ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,96,832. ಬಿಲ್ಲವ ಸಮುದಾಯದ ಅತಿ ಹೆಚ್ಚು ಮತದಾರರು ಇರುವ ಕ್ಷೇತ್ರಗಳಲ್ಲಿ ಇದೂ ಒಂದು. ಮುಸ್ಲಿಂ ಮತದಾರರ ಸಂಖ್ಯೆ ಆಸುಪಾಸು 40 ಸಾವಿರ. ಸುಮಾರು 30 ಸಾವಿರ ಕ್ರಿಶ್ಚಿಯನ್ ವೋಟುಗಳಿವೆ. ಜೈನ ಸಮುದಾಯದವರ ಸಂಖ್ಯೆಯೂ ಗಮನಾರ್ಹ. ಹಾಗಾಗಿ ಕಾಂಗ್ರೆಸ್-ಬಿಜೆಪಿಯಿಂದ ಯಾರು ನಿಂತರೂ ಜಾತಿ ವಿಚಾರ ಒಂದಷ್ಟು ಪ್ರಭಾವ ಬಿದ್ದೇ ಬೀರುತ್ತದೆ. ಕಾಂಗ್ರೆಸ್ ಬಂಟ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಜೆಪಿ ಬಿಲ್ಲವ ಸಮುದಾಯದ ಉಮಾನಾಥ್ ಕೋಟ್ಯಾನ್ ಅವರನ್ನೇ ಕಣಕ್ಕಿಳಿಸುತ್ತಾ, ಬೇರೇನಾದರೂ ತಂತ್ರ ಹೆಣೆಯುತ್ತಾ ಎನ್ನುವುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಪೂರ್ಣ ಬಹುಮತ : ಎಬಿಪಿ ಸಿ- ವೋಟರ್ ಸಮೀಕ್ಷೆ

  • ಕ್ಯಾನ್ಸರ್‌ಗೆ ಹೆದರಿ ಗಲ್ಫ್‌ನಿಂದ ಮರಳಿದ ವ್ಯಕ್ತಿಯ ಕೈಹಿಡಿಯಿತು ಕೃಷಿ

    ಕ್ಯಾನ್ಸರ್‌ಗೆ ಹೆದರಿ ಗಲ್ಫ್‌ನಿಂದ ಮರಳಿದ ವ್ಯಕ್ತಿಯ ಕೈಹಿಡಿಯಿತು ಕೃಷಿ

    ಮಂಗಳೂರು: ಕ್ಯಾನ್ಸರ್ ಕಾಯಿಲೆ ಬಂತೆಂದ್ರೆ ಇನ್ನು ಸಾವೇ ಗತಿ ಎನ್ನುವವರೇ ಹೆಚ್ಚು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಮೂಡಬಿದ್ರೆಯ ವ್ಯಕ್ತಿಯೋರ್ವರು ಕ್ಯಾನ್ಸರನ್ನೇ (Cancer) ಗೆದ್ದು ತೋರಿಸಿದ್ದಾರೆ.

    ಹೌದು… ಕ್ಯಾನ್ಸರ್ ಜೊತೆ ಸೆಣಸಾಡುತ್ತಿರುವ ಅದೇಷ್ಟೋ ಸಾವಿರ ಮಂದಿಗೆ ಇವರು ಸ್ಫೂರ್ತಿದಾಯಕವಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ (Moodbidri) ತಾಲೂಕಿನ ಪುಚ್ಚೆಮೊಗರು ಗ್ರಾಮದ ನಿವಾಸಿ ಥಾಮಸ್ ಗ್ರೇಜರಿ ರೆಬೆಲ್ಲೋ ಹುಟ್ಟಿನಿಂದಲೇ ಕೃಷಿಕರಲ್ಲ. ಗಲ್ಫ್‌ ರಾಷ್ಟ್ರದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು ಅಲ್ಲೇ ಸೆಟಲ್ ಆಗುವ ಯೋಚನೆಯಲ್ಲಿದ್ದರು. ಆದರೆ ಗಂಟಲಿನ ಕ್ಯಾನ್ಸರ್ ಇವರ ಯೋಜನೆಯನ್ನೇ ಬದಲಾಯಿಸಿತು. ಕ್ಯಾನ್ಸರ್ ದೇಹದೊಳಗೆ ಆಕ್ರಮಿಸುತ್ತಾ ಹೋಯಿತು.

    ಸತ್ರೆ ಜನ್ಮಭೂಮಿಯಲ್ಲೇ ಸಾಯೋಣ ಅಂತಾ ಹಳ್ಳಿಗೆ ಬಂದ ಥಾಮಸ್ ಗ್ರೇಜರಿ ರೆಬೆಲ್ಲೋ ಅವರಲ್ಲಿ ಊರಿಗೆ ಬಂದ ನಂತರ ಕಂಡಿದ್ದು ಅಚ್ಚರಿಯ ಬದಲಾವಣೆ. ಕತ್ತರಿಸಲ್ಪಟ್ಟ ಗಂಟಲು, ದೇಹದೊಳಗೆ ಕಾಡುತ್ತಿದ್ದ ಆರೋಗ್ಯದ ಸಮಸ್ಯೆಯ ನಡುವೆಯೇ ಕಾಡುತ್ತಿದ್ದ ಒಂಟಿತನವನ್ನು ದೂರಮಾಡಲು ಕೃಷಿ (Agriculture) ಕೆಲಸಕ್ಕೆ ಕೈ ಹಾಕಿದರು.

    ದಿನ ಕಳೆದಂತೆ ಥಾಮಸ್ ಅವರ ಆರೋಗ್ಯದಲ್ಲಿ ಕಂಡಿದ್ದೇ ಅಚ್ಚರಿಯ ಬದಲಾವಣೆಯಾಯಿತು. ಸಾವಿನ ದಿನ ಎಣಿಸುತ್ತಿದ್ದ ಥಾಮಸ್ ತನ್ನ ಒಂದೂವರೆ ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಾ ಮಾಡುತ್ತಾ ಕ್ಯಾನ್ಸರ್ ಜೊತೆ ಹೋರಾಡುತ್ತಾ ಹನ್ನೆರಡು ವರ್ಷಗಳೇ ಕಳೆದುಹೋಗಿದೆ. ಅವರ ಪತ್ನಿ ಮತ್ತು ಮಗ ವಿದೇಶದಲ್ಲಿದ್ದು, ಥಾಮಸ್ ಮಾತ್ರ ಊರಲ್ಲೇ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ತಕ್ಕ ಪ್ರಾಶಸ್ತ್ಯ ಸಿಗುತ್ತಿಲ್ಲ: ಶರದ್ ಪವಾರ್ ಬೇಸರ

    ಅಡಿಕೆ, ತೆಂಗು, ತರಕಾರಿ ಕೃಷಿ ಮಾಡುತ್ತಾ ಮಾಡುತ್ತಾ ತನ್ನೊಳಗಿರುವ ಮಹಾಮಾರಿಯನ್ನೇ ಮರೆತು ಸ್ಫೂರ್ತಿಯಾಗಿದ್ದಾರೆ. ಪ್ರಾರಂಭದಲ್ಲಿ ಕ್ಯಾನ್ಸರ್ ಜೊತೆಗೆ ಸಕ್ಕರೆ ಖಾಯಿಲೆ ಕೂಡಾ ಕಾಡಿದ್ದರೂ ಈಗ ಅದೂ ಸಂಪೂರ್ಣ ಮಾಯವಾಗಿದೆ. ಈ ಬಗ್ಗೆ ಥಾಮಸ್ ಗ್ರೇಜರಿ ರೆಬೆಲ್ಲೊ ಮಾತನಾಡಿ, ಕ್ಯಾನ್ಸರ್‌ ರೋಗಿಗಳು ಧೃತಿಗೆಡದೆ ಕೃಷಿ ಮಾಡಿ. ಕೃಷಿಯಲ್ಲಿ ಖುಷಿ ಪಡಿ ಎನ್ನುವ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಕ್ಯಾನ್ಸರ್ ರೋಗಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ಹೋರಾಡುವವರಿಗಿಂತ ಥಾಮಸ್ ಭಿನ್ನವಾಗಿ ಕಾಣುತ್ತಾರೆ. ಇದನ್ನೂ ಓದಿ: ಕೊಡಗಿನಲ್ಲಿ 3ನೇ ಸಾಕಾನೆ ಶಿಬಿರ ಲೋಕಾರ್ಪಣೆ – ಹಾರಂಗಿ ವಿಶೇಷತೆ ಏನು?

    Live Tv
    [brid partner=56869869 player=32851 video=960834 autoplay=true]

  • ಗೋವು ತಲೆ ರಸ್ತೆ ಬದಿ ಎಸೆದ ಪ್ರಕರಣ: ಆರೋಪಿಗಳ ಬಂಧನಕ್ಕೆ ಕಾಂಗ್ರೆಸ್ ಮನವಿ

    ಗೋವು ತಲೆ ರಸ್ತೆ ಬದಿ ಎಸೆದ ಪ್ರಕರಣ: ಆರೋಪಿಗಳ ಬಂಧನಕ್ಕೆ ಕಾಂಗ್ರೆಸ್ ಮನವಿ

    ಮಂಗಳೂರು: ಗೋವಿನ ತಲೆಯನ್ನು ರಸ್ತೆ ಬದಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದ ಕಾಂಗ್ರೆಸ್ ನಿಯೋಗ ಗುರುವಾರ ಮಂಗಳೂರು ನಗರ ಪೊಲೀಸ್ ಕಮಿಷನರ್ ಭೇಟಿ ಮನವಿ ಸಲ್ಲಿಸಿದೆ.

    ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೀರ್ತಿ ನಗರದಲ್ಲಿ ದುಷ್ಕರ್ಮಿಗಳು ಗೋವಿನ ರುಂಡವನ್ನು ಗೋಣಿ ಚೀಲದಲ್ಲಿ ಕಟ್ಟಿ ರಸ್ತೆ ಬದಿಯಲ್ಲಿ ಬಿಸಾಡಿತ್ತು. ಇದರಿಂದಾಗಿ ಸಮಾಜದಲ್ಲಿ ಶಾಂತಿ ಕೆಡಿಸುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ, ಪರಿಸರದಲ್ಲಿ ನಿರಂತರ ಗೋಕಳ್ಳತನ ನಡೆಯುತ್ತಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಇದನ್ನೂ ಓದಿ: ನಾನು ಮಾಜಿ ಪ್ರಧಾನಿ ಈಗ ಮೇಕೆದಾಟು ಬಗ್ಗೆ ಪ್ರತಿಕ್ರಿಯೆ ನೀಡಲ್ಲ: ಎಚ್‍ಡಿಡಿ

    ಈ ಸಂದರ್ಭದಲ್ಲಿ ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಲೇರಿಯನ್ ಸಿಕ್ವೇರಾ, ರಾಜೇಶ್ ಕಡಲೆಕೆರೆ, ಪುರಂದರ ಮತ್ತಿತರರಿದ್ದರು.

  • ಯಕ್ಷಗಾನ ರಂಗಸ್ಥಳದಲ್ಲೇ ಕುಸಿದು ಬಿದ್ದ ಅಮ್ಮುಂಜೆ ಮೋಹನ್ ಕುಮಾರ್

    ಯಕ್ಷಗಾನ ರಂಗಸ್ಥಳದಲ್ಲೇ ಕುಸಿದು ಬಿದ್ದ ಅಮ್ಮುಂಜೆ ಮೋಹನ್ ಕುಮಾರ್

    ಮಂಗಳೂರು: ಯಕ್ಷಗಾನ ನಡೆಯುತ್ತಿರುವಾಗಲೇ ಪ್ರಖ್ಯಾತ ವೇಷಧಾರಿ ಮೋಹನ ಕುಮಾರ್ ಅಮ್ಮುಂಜೆಯವರು ರಂಗಸ್ಥಳದಲ್ಲಿಯೇ ತಲೆತಿರುಗಿ ಬಿದ್ದಿರುವ ಘಟನೆ ಸೋಮವಾರ ರಾತ್ರಿ ಮೂಡುಬಿದಿರೆ ತಾಲೂಕಿನ ಅಲಂಗಾರು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದಿದೆ.

    ದಕ್ಷಿಣ ಕನ್ನಡದ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ನಿನ್ನೆ ರಾತ್ರಿ ಕರ್ಣಪರ್ವ ಯಕ್ಷಗಾನ ನಡೆಯುತ್ತಿತ್ತು. ಮೋಹನ ಕುಮಾರ್ ಅಮ್ಮುಂಜೆಯವರು ಕರ್ಣಪರ್ವದ ಅರ್ಜುನ ಪಾತ್ರಧಾರಿಯಾಗಿದ್ದರು.

    ಅರ್ಜುನ – ಕರ್ಣ ಪಾತ್ರಗಳ ಮುಖಾಮುಖಿಯಾಗಿ ವಾಕ್ಸಮರ ನಡೆಯುತ್ತಿತ್ತು. ಈ ಸಂದರ್ಭ ನಿಂತಿದ್ದ ಅರ್ಜುನ ಪಾತ್ರಧಾರಿ ಮೋಹನ ಕುಮಾರ್ ಅಮ್ಮುಂಜೆಯವರು ಸ್ವಲ್ಪ ಓಲಾಡುವಂತೆ ಆಗಿ ಏಕಾಏಕಿ ಎರಡು ಹೆಜ್ಜೆ ಮುಂದೆ ಬಂದು ಮುಗ್ಗರಿಸಿ ಬಿದ್ದಿದ್ದಾರೆ. ಇದನ್ನೂ ಓದಿ : ಸಭೆಗಳಲ್ಲಿ ಹೂಗುಚ್ಛ, ಹಾರ, ಶಾಲು ನಿಷೇಧ: ಬೊಮ್ಮಾಯಿ ಆದೇಶ

    ರಂಗಸ್ಥಳದಲ್ಲಿದ್ದ ಹಿಮ್ಮೇಳ-ಮುಮ್ಮೇಳದ ಕಲಾವಿದರು ಒಂದು ಕ್ಷಣಕ್ಕೆ ಏನಾಗುತ್ತಿದೆ ಎಂದು ತಿಳಿಯದೆ ಗಾಬರಿಗೊಂಡಿದ್ದಾರೆ. ಬಳಿಕ ಸ್ವಲ್ಪ ಉಪಚಾರ ಮಾಡಿದ ಕೊಂಚ ಹೊತ್ತಿನಲ್ಲಿಯೇ ಮೋಹನ ಕುಮಾರ್ ಅಮ್ಮುಂಜೆಯವರು ಚೇತರಿಕೆ ಕಂಡಿದ್ದಾರೆ. ಬಳಿಕ ಯಕ್ಷಗಾನ ಸಾಂಗವಾಗಿ ನಡೆದಿದೆ..

  • ಬಾವಿಗೆ ಹಾರಿ ವಿವಾಹಿತ ಮಹಿಳೆ ಆತ್ಮಹತ್ಯೆ

    ಬಾವಿಗೆ ಹಾರಿ ವಿವಾಹಿತ ಮಹಿಳೆ ಆತ್ಮಹತ್ಯೆ

    ಮಂಗಳೂರು: ಮೂಡುಬಿದಿರೆಯ ಅಳಿಯೂರು ಎಂಬಲ್ಲಿ ಬಾವಿಗೆ ಹಾರಿ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸಂಧ್ಯಾ (32) ಆತ್ಮಹತ್ಯೆಗೆ ಶರಣಾದ ಮಹಿಳೆ. ಆರು ತಿಂಗಳ ಹಿಂದೆ ಸಂಧ್ಯಾ ಅವರು ವಕೀಲರೊಬ್ಬರನ್ನು ವಿವಾಹವಾಗಿದ್ದರು.

    ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತೀರ್ಥಹಳ್ಳಿ ಮೂಲದ ಸಂಧ್ಯಾ ಈ ಹಿಂದೆ ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

    ಸದಾ ನಗುಮುಖವನ್ನು ಹೊಂದಿದ್ದ ಸಂಧ್ಯಾ ಅವರು ಕಾಲೇಜಿನಲ್ಲಿ ವಿದ್ಯಾರ್ಥಿಗಳ, ಶಿಕ್ಷಕರ, ಆಡಳಿತ ಮಂಡಳಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು.