Tag: moodagere

  • ವಿವಾದಿತ ಸಮಾಧಿಯನ್ನ ಶಾಂತಿಯುತವಾಗಿ ಸ್ಥಳಾಂತರಿಸಿದ ಕ್ರೈಸ್ತ ಸಮುದಾಯ

    ವಿವಾದಿತ ಸಮಾಧಿಯನ್ನ ಶಾಂತಿಯುತವಾಗಿ ಸ್ಥಳಾಂತರಿಸಿದ ಕ್ರೈಸ್ತ ಸಮುದಾಯ

    ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ 130 ವರ್ಷಗಳಿಂದ ತೀವ್ರ ವಿವಾದ ಹುಟ್ಟಿಸಿದ್ದ ಮೂಡಿಗೆರೆ ಪಟ್ಟಣದ ಹೃದಯ ಭಾಗದಲ್ಲಿದ್ದ ಕ್ರೈಸ್ತ ಸಮುದಾಯದ ಸಮಾಧಿಯನ್ನ ಕ್ರೈಸ್ತರು ಶಾಂತಿಯುತವಾಗಿ ಬಗೆಹರಿಸಿಕೊಂಡಿದ್ದಾರೆ.

    ಮೂಡಿಗೆರೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗಲ್ಲಿದ್ದ ಕ್ರೈಸ್ತ ಸಮುದಾಯ ಶಿಲುಬೆಯನ್ನ ಸಮುದಾಯದ ಮುಖಂಡರು ಹಾಗೂ ಪಟ್ಟಣ ಪಂಚಾಯ್ತಿ ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಂಡು ಸ್ಥಳಾಂತರಿಸಿದೆ. ಇದನ್ನೂ ಓದಿ: ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್‌

    1884ರಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಸ್ಯಾಮುಯಲ್ ಎಂಬ ವ್ಯಕ್ತಿ ಮೃತಪಟ್ಟಿದ್ದರು. ಸ್ಯಾಮುಯಲ್, ಬಡಜನರ ಕಷ್ಟಕ್ಕೆ ಮರುಗುತ್ತಿದ್ದು, ಸದಾ ಸಮಾಜಮುಖಿ ಕೆಲಸ-ಕಾರ್ಯಗಳಲ್ಲಿ ತೊಡಗಿದ್ದರು ಎಂಬ ಕಾರಣಕ್ಕೆ ಸ್ಥಳಿಯ ಕ್ರೈಸ್ತ ಸಮುದಾಯ ಬಸ್ ನಿಲ್ದಾಣದ ಮುಂಭಾಗದ ಜಾಗದಲ್ಲೇ ಅವರ ಅಂತ್ಯ ಸಂಸ್ಕಾರ ಮಾಡಿತ್ತು. ಅಂದಿನಿಂದಲೂ ಈ ಜಾಗ ವಿವಾದದಿಂದ ಕೂಡಿತ್ತು. ಪಟ್ಟಣ ಪಂಚಾಯ್ತಿ ನಾಲ್ಕೈದು ದಶಕಗಳಿಂದ ಮಳಿಗೆ ನಿರ್ಮಿಸಲು ಈ ವಿವಾದಿತ ಶಿಲುಬೆಯನ್ನ ತೆರವುಗೊಳಿಸಲು ಮುಂದಾದರೂ ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ:  ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್

    ಶಿಲುಬೆ ತೆರವುಗೊಳಿಸಲು ಕ್ರೈಸ್ತ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಇಂದು ಪಟ್ಟಣ ಪಂಚಾಯ್ತಿ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿರುವ ಕ್ರೈಸ್ತ ಸಮುದಾಯ ಶಾಂತಿಯುತವಾಗಿ ಶಿಲುಬೆಯನ್ನ ಸ್ಥಳಾಂತರಿಸಿದೆ. ಪಟ್ಟಣ ಪಂಚಾಯ್ತಿ ನೇತೃತ್ವದಲ್ಲಿ ಪೂಜೆ ಮಾಡಿ ಶಿಲುಬೆಯನ್ನ ಸ್ಥಳಾಂತರಿಸಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿದ್ದ ಶಿಲುಬೆಯನ್ನು ಸ್ಥಳಾಂತರಿಸಿ ಕ್ರೈಸ್ತರ ಸ್ಮಶಾನದಲ್ಲಿ ಪೂಜೆ ಮಾಡಿ ಮತ್ತೊಮ್ಮೆ ಸಮಾಧಿ ಮಾಡಿದ್ದಾರೆ.

    ಸುಮಾರು ಎರಡು ಗಂಟೆ ಕಾರ್ಯಚರಣೆ ನಡೆಸಿದರೂ ಆ ಜಾಗದಲ್ಲಿ ಯಾವುದೇ ಕಳೆಬರಹ ಸಿಗಲಿಲ್ಲ. 130 ವರ್ಷವಾದ ಕಾರಣ ನೆಲದ ಒಳಭಾಗದಲ್ಲಿ ಏನೂ ಇರಲಿಲ್ಲ. ಜೆಸಿಬಿಯಲ್ಲಿ ಗುಂಡಿ ತೆಗೆಸಿ ಹುಡುಕಿದರೂ ಯಾವುದೇ ಕುರುಹು ಸಿಗಲಿಲ್ಲ. ಹಾಗಾಗಿ, ಕ್ರೈಸ್ತರು ಸಮಾಧಿಯ ಮಣ್ಣನ್ನೇ ತೆಗೆದುಕೊಂಡು ಹೋಗಿ, ಮಣ್ಣಿನ ಜೊತೆ ಸಮಾಧಿ ಅಕ್ಕಪಕ್ಕದಲ್ಲಿದ್ದ ಕಲ್ಲು ಹಾಗೂ ಇತರೆ ವಸ್ತುಗಳನ್ನ ಮತ್ತೇ ಸಂಪ್ರದಾಯಬದ್ಧವಾಗಿ ಮಣ್ಣು ಮಾಡಿ ಅದರ ಮೇಲೆ ಶಿಲುಬೆಯನ್ನ ಮತ್ತೆ ಪುನರ್ ಪ್ರತಿಷ್ಠಾಪಿಸಿದ್ದಾರೆ.

    ಈಗ ಆ ಜಾಗದಲ್ಲಿ ಪಟ್ಟಣ ಪಂಚಾಯ್ತಿ ಮಳಿಗೆ ನಿರ್ಮಾಣ ಮಾಡಲು ಮುಂದಾಗಿದೆ. ಹೆಚ್ಚು-ಕಡಿಮೆ ಶತಮಾನಗಳಿಂದ ವಿವಾದದಲ್ಲಿದ್ದ ಸ್ಥಳವನ್ನು ಆರು ತಿಂಗಳ ಹಿಂದೆ ಅಧ್ಯಕ್ಷರಾದ ಧನ್‍ಪಾಲ್, ಪಟ್ಟಣ ಪಂಚಾಯ್ತಿ ನೇತೃತ್ವದಲ್ಲಿ ಕ್ರೈಸ್ತ ಸಮುದಾಯದ ಜೊತೆ ಮಾತುಕತೆ ನಡೆಸಿ ಶತಮಾನದ ಸಮಸ್ಯೆಯನ್ನ ಶಾಂತಿಯುತವಾಗಿ ಬಗೆಹರಿಸಿದ್ದಾರೆ. ಅಧ್ಯಕ್ಷರು ಈ ಕಾರ್ಯಕ್ಕೆ ಮೂಡಿಗೆರೆ ಪಟ್ಟಣದ ಜನ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.