Tag: monster

  • ನಿಖಿಲ್ ಕುಮಾರ್ ಸ್ವಾಮಿ ಹೊಸ ಸಿನಿಮಾಗೆ ‘ಮಾನ್ ಸ್ಟರ್’ ಟೈಟಲ್?

    ನಿಖಿಲ್ ಕುಮಾರ್ ಸ್ವಾಮಿ ಹೊಸ ಸಿನಿಮಾಗೆ ‘ಮಾನ್ ಸ್ಟರ್’ ಟೈಟಲ್?

    ದ್ಯ ರಾಜಕಾರಣದಲ್ಲಿ ಬ್ಯುಸಿಯಾಗಿರುವ ನಟ ನಿಖಿಲ್ ಕುಮಾರಸ್ವಾಮಿ, ವಿಧಾನಸಭಾ ಚುನಾವಣೆ ಮುಗಿಯುವ ತನಕ ಸಿನಿಮಾ ರಂಗದ ಬಗ್ಗೆ ಯೋಚನೆ ಕೂಡ ಮಾಡುವುದಿಲ್ಲ ಎನ್ನಲಾಗಿತ್ತು. ರಾಜ್ಯ ಸುತ್ತಿ ಸಂಘಟನೆ ಮಾಡುವ ಜವಾಬ್ದಾರಿಯನ್ನು ಅವರೂ ಹೊತ್ತುಕೊಂಡಿದ್ದರಿಂದ ಯದುವೀರ ಸಿನಿಮಾದ ಚಿತ್ರೀಕರಣದಲ್ಲಿ ಅವರು ಭಾಗಿ ಆಗುತ್ತಿಲ್ಲ ಎಂದೂ, ಹೀಗಾಗಿಯೇ ಯದುವೀರ ಸಿನಿಮಾ ಶುರುವಾಗಲಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಅವರು ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಯದುವೀರ ಸಿನಿಮಾದ ಶೂಟಿಂಗ್ ಮುಂದೂಡಿದ್ದರಿಂದ, ನಿಖಿಲ್ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಚಿತ್ರಕ್ಕೆ ನಂದಕಿಶೋರ್ ನಿರ್ದೇಶಕರು. ನಂದಕಿಶೋರ್ ಮತ್ತು ನಿಖಿಲ್ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಮೂಡಿ ಬರಲಿದೆ ಎನ್ನುವ ಸುದ್ದಿಯಿತ್ತು. ನಂದಕಿಶೋರ್ ಹೇಳಿದ್ದ ಕಥೆಯನ್ನು ನಿಖಿಲ್ ಒಪ್ಪಿಕೊಂಡಿದ್ದಾರೆ ಎಂದೂ ಹೇಳಲಾಗಿತ್ತು. ಅದೀಗ ನಿಜವಾದಂತೆ ಕಾಣುತ್ತಿದೆ. ಸದ್ಯದಲ್ಲೇ ಈ ಜೋಡಿಯ ಸಿನಿಮಾದ ಕುರಿತು ಹಲವು ಸಂಗತಿಗಳು ಬಹಿರಂಗವಾಗಲಿವೆಯಂತೆ. ಇದನ್ನೂ ಓದಿ:`ವಿಕ್ರಾಂತ್ ರೋಣ’ ಚಿತ್ರದ ನಂತರ ಹೊಸ ಸಿನಿಮಾಗೆ ಕಿಚ್ಚ ಸುದೀಪ್ ಗ್ರೀನ್ ಸಿಗ್ನಲ್

    ನಂದಕಿಶೋರ್ ಮತ್ತು ನಿಖಿಲ್ ಕಾಂಬಿನೇಷನ್ ಚಿತ್ರಕ್ಕೆ ಮಾನ್ ಸ್ಟರ್ ಎಂದು ಹೆಸರಿಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ದಿಲ್ಲದೇ ಪ್ರಿಪ್ರೊಡಕ್ಷನ್ ಕೆಲಸಗಳನ್ನೂ ಮಾಡಿ ಮುಗಿಸಿದ್ದಾರಂತೆ ನಿರ್ದೇಶಕರು. ಈಗಷ್ಟೇ ರಾಣಾ ಸಿನಿಮಾದ ಶೂಟಿಂಗ್ ಮುಗಿಸಿರುವ ನಂದಕಿಶೋರ್, ಇದೀಗ ಮಾನ್ ಸ್ಟರ್ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ರಾಕ್ಷಸರ ಹತ್ತಿರ ಕೊರೊನಾ ಬರೋದಿಲ್ಲ, ನನಗಂತೂ ಬಂದಿಲ್ಲ: ಈಶ್ವರಪ್ಪ

    ರಾಕ್ಷಸರ ಹತ್ತಿರ ಕೊರೊನಾ ಬರೋದಿಲ್ಲ, ನನಗಂತೂ ಬಂದಿಲ್ಲ: ಈಶ್ವರಪ್ಪ

    – ಕೊರೊನಾ ಅಂತ ಹೆಣ ಬಿದ್ದಂತೆ ಮನೆಯಲ್ಲೇ ಬಿದ್ದುಕೊಂಡ್ರೆ ಹೇಗೆ?

    ಶಿವಮೊಗ್ಗ: ಕೊರೊನಾ ಈಗ ಎಲ್ಲೆಡೆ ಹರಡುತ್ತಿದೆ. ಆದರೆ ರಾಕ್ಷಸರ ಹತ್ತಿರ ಅದು ಸುಳಿಯುವುದೇ ಇಲ್ಲ. ನನಗಂತೂ ಕೊರೊನಾ ಬಂದಿಲ್ಲ. ನಿಮಗೆ ಏನಾದರೂ ಕೊರೊನಾ ಬಂದಿದೆಯಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದರು.

    ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೊರೊನಾ ಬರುತ್ತದೆ ಎಂದು ಹೆದರಿ ಹೆಣ ಬಿದ್ದಂತೆ ಮನೆಯಲ್ಲಿಯೇ ಬಿದ್ದುಕೊಂಡರೇ ಹೇಗೆ ಎಂದು ಪ್ರಶ್ನಿಸಿದರು. ಕೊರೊನಾ ಬರುತ್ತದೆ ಎಂಬ ಭಯದಿಂದ ಶಾಸಕರು, ಸಚಿವರು, ಸಂಸದರು ಹಾಗೂ ಅಧಿಕಾರಿಗಳು ಮನೆಯಲ್ಲೇ ಉಳಿದುಕೊಂಡರೇ ಅಭಿವೃದ್ಧಿ ಕಾರ್ಯಗಳ ಗತಿಯೇನು. ತಲೆ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳಲು ಸಾಧ್ಯವೇ ಎಂದರು.

    ಕೊರೊನಾ ಇದೆ ಎಂದು ಭಯ ಪಡುವ ಬದಲು ಕೊರೊನಾ ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಜೊತೆಗೆ ಅದು ಬರದಂತೆ ಜಾಗೃತಿ ವಹಿಸಬೇಕು ಎಂದು ಸಚಿವ ಈಶ್ವರಪ್ಪ ಕಿವಿ ಮಾತು ಹೇಳಿದರು.

  • ಗೋಮಾಂಸ ತಿನ್ನುವವರು ರಾಕ್ಷಸ ಸಮಾನ: ಪೇಜಾವರ ಶ್ರೀ

    ಗೋಮಾಂಸ ತಿನ್ನುವವರು ರಾಕ್ಷಸ ಸಮಾನ: ಪೇಜಾವರ ಶ್ರೀ

    – ಹುಲಿ, ಸಿಂಹದಷ್ಟೇ ಗೋವು ಶ್ರೇಷ್ಠವಲ್ಲವೇ?

    ಉಡುಪಿ: ಗೋಮಾಂಸ ತಿನ್ನುವವ ರಾಕ್ಷಸ ಸಮಾನ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಕೃಷ್ಣಮಠದ ರಥಬೀದಿಯಲ್ಲಿ ನಡೆದ ದೇಸಿ ಗೋವು ಸಮ್ಮೇಳನದಲ್ಲಿ ಮಾತನಾಡಿದ ಅವರು, ಗೋವು ಭಕ್ಷಣೆ ಮಾಡುವವ ಮನುಷ್ಯನೇ ಅಲ್ಲ. ಗೋವು ಹಾಲು ಕೊಡುವ ಎಲ್ಲರ ತಾಯಿ. ಗೋವಿನ ಹಾಲು ಕುಡಿದವನಿಗೆ ಅದನ್ನು ಕೊಲ್ಲುವಾಗ ಏನೂ ಅನ್ನಿಸೋದಿಲ್ಲವೇ? ಗೋವನ್ನು ಕೊಲ್ಲುವವ ಮಾನವನೇ ಅಲ್ಲ. ಅವನು ರಾಕ್ಷಸ ಸಮಾನ. ಗೋಹತ್ಯೆ, ಗೋವು ಮಾಂಸ ಭಕ್ಷಣೆ ಹೇಯವಾದ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಧಾರ್ಮಿಕ ದೃಷ್ಟಿಗಿಂತ ಆಗದಿದ್ದರೆ, ಮಾನವೀಯ ದೃಷ್ಟಿಯಿಂದಾದರೂ ಗೋ ರಕ್ಷಣೆ ಮಾಡಿ. ಗೋ ರಕ್ಷಣೆಗೆ ಸರ್ಕಾರ ವಿಶೇಷ ಗಮನ ಕೊಡಬೇಕು ಎಂದು ಒತ್ತಾಯಿಸಿದರು. ಕೇಂದ್ರದಲ್ಲಿ ಮೋದಿ ಸರಕಾರ ಬಲವಾಗಿ ಬಂದಿದೆ. ಬಿಜೆಪಿಗೆ ಬಹುಮತ ಇದೆ. ಯಾವ ಪಕ್ಷದ ಬೆಂಬಲ ಇಲ್ಲದಿದ್ದರೂ ಮೊದಲ ವರ್ಷದಲ್ಲೇ ಗೋ ರಕ್ಷಣೆಗೆ ದೃಢ ಕಾನೂನು ತರಬೇಕು ಎಂದು ಮನವಿ ಮಾಡಿಕೊಂಡರು.

    ದೇಶದಲ್ಲಿ ಹುಲಿ, ಸಿಂಹ ಸಂತಾನ ಉಳಿಸಲು ಸರ್ಕಾರ ಬಹಳಷ್ಟು ಕ್ರಮ ಕೈಗೊಳ್ಳುತ್ತದೆ. ಆದರೆ ಗೋವಿನ ತಳಿ ಉಳಿಸಲು ಸರ್ಕಾರ ಈವರೆಗೆ ನಿಗದಿತ ಕ್ರಮ ಕೈಗೊಳ್ಳುವುದಿಲ್ಲ. ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಸಿಂಹ- ಹುಲಿಗಿಂತ ಗೋವು ಕೀಳಾಗಿಬಿಟ್ಟಿದೆಯೇ? ಹುಲಿ, ಸಿಂಹದಷ್ಟೇ ಗೋವು ಶ್ರೇಷ್ಠವಲ್ಲವೇ? ಎಂದು ಪ್ರಶ್ನಿಸಿದರು. ಬಳಿಕ ಗೋ ಸಾಗಾಟ, ಗೋವು ಕೊಲ್ಲುವ ವಿಧಾನ ಅತ್ಯಂತ ಭಯಾನಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಗೋವಿನ ಜೊತೆ ಗೂಳಿಯ ರಕ್ಷಣೆಯೂ ಆಗಬೇಕು. ಹಾಲು ಕೊಡುವ ಹಸುವಿರಬೇಕಾದರೆ ಎತ್ತು, ಕೋಣ ಇರಲೇಬೇಕು. ನಮ್ಮ ಭಾರತದ ದೇಸಿ ತಳಿ ಗೋವುಗಳ ರಕ್ಷಣೆ ಆಗಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು. ರಥಬೀದಿಯಲ್ಲಿ ಇಡೀ ದೇಶದ ದೇಸಿ ಹಸುಗಳ ಪ್ರದರ್ಶನ ನಡೆಯುತ್ತಿದ್ದು, ಬರುವ ಜನರಿಗೆ ಗೋವುಗಳ ಬಗ್ಗೆ ಮಾಹಿತಿಯನ್ನು ಕೊಡಲಾಗುತ್ತಿದೆ ಎಂದು ಸ್ವಾಮೀಜಿ ತಿಳಿಸಿದರು.

    https://www.youtube.com/watch?v=-atjvRa7zrk