Tag: monsoon

  • ರಾಜ್ಯದ 28 ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೊರತೆ – ಈವರೆಗೆ 26% ಮಾತ್ರ ಬಿತ್ತನೆ

    ರಾಜ್ಯದ 28 ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೊರತೆ – ಈವರೆಗೆ 26% ಮಾತ್ರ ಬಿತ್ತನೆ

    ಬೆಂಗಳೂರು: ರಾಜ್ಯಕ್ಕೆ ಮಳೆ (Rain) ಕೊರತೆಯುಂಟಾಗಿದ್ದು, ಬರಗಾಲದ ಮುನ್ಸೂಚನೆ ಸಿಕ್ತಿದೆ. 28 ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ರೈತರು (Farmers) ಕಂಗಾಲಾಗಿದ್ದಾರೆ.

    ಕಳೆದ ಜೂನ್ ತಿಂಗಳಲ್ಲಿ ಬರೋಬ್ಬರಿ 56% ಮಳೆ ಕೊರತೆಯಾಗಿತ್ತು. ಜುಲೈ ತಿಂಗಳ ಮೊದಲ 11 ದಿನಗಳವರೆಗೆ 34% ಮಳೆ ಕೊರತೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 18%, ಉತ್ತರ ಒಳನಾಡಿನಲ್ಲಿ 55% ಮಳೆ ಕಡಿಮೆಯಾಗಿದೆ. ಉತ್ತರ ಒಳನಾಡಿನ 13 ಜಿಲ್ಲೆಗಳಲ್ಲಿ ಮಳೆಗೆ ಬರ ಬಂದಿದೆ. ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದ್ರೆ 77% ಮಳೆ ಕೊರತೆಯಾಗಿದೆ. ಮಲೆನಾಡಿನಲ್ಲಿ ವಾಡಿಕೆಗಿಂತ 74% ಮಳೆ ಕಡಿಮೆ ಬಿದ್ದಿದೆ. ಇದರಲ್ಲಿ ಮೂರು ಜಿಲ್ಲೆಯಲ್ಲಿ ಮಳೆ ಕೊರತೆ ಕಾಡಿದೆ.

    ಇನ್ನೂ ಕೊಡಗು (Kodagu) ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದ್ರೆ 80% ಮಳೆ ಕೊರತೆಯಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ವಾಡಿಕೆಯ ಅರ್ಧದಷ್ಟೂ ಬಿತ್ತನೆ ಮಾಡಿಲ್ಲ. ಈವರೆಗೆ ರಾಜ್ಯದಲ್ಲಿ ಬಿತ್ತನೆ ಆಗಿರೋದು 26% ಮಾತ್ರ. ಇದನ್ನೂ ಓದಿ: ಅಭಿವೃದ್ಧಿ ಕೆಲಸಕ್ಕಿಂತ ಗ್ಯಾರಂಟಿ ಈಡೇರಿಕೆಯೇ ನಮ್ಮ ಮೊದಲ ಆದ್ಯತೆಯಾಗಿತ್ತು: ಪರಮೇಶ್ವರ್

    ಈ ನಡುವೆ ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ ತೆಗೆದಿದೆ. ಹವಾಮಾನ ಇಲಾಖೆ ರಾಜ್ಯದ ಬಹುತೇಕ ಕಡೆ ಮುಂದಿನ 4 ದಿನ ಮಳೆ ಮುನ್ಸೂಚನೆ ನೀಡಿದೆ. ಅದ್ರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಅಧಿವೇಶನದಲ್ಲಿ ಕೆಲಸಕ್ಕೆ ಬಾರದ ವಿಷಯಗಳೇ ಚರ್ಚೆಯಾಗ್ತಿದೆ – ಬಿಎಸ್‌ವೈ ಪುತ್ರ ಅಸಮಾಧಾನ

    ಕಡಿಮೆ ಬಿತ್ತನೆ ಮಾಡಿರುವ ರಾಜ್ಯದ ಟಾಪ್ 5 ಜಿಲ್ಲೆಗಳು
    ಬೆಂಗಳೂರು ಗ್ರಾಮಾಂತರ- 2%
    ರಾಮನಗರ – 2%
    ಕೋಲಾರ – 4%
    ಬಳ್ಳಾರಿ – 5%
    ಕೊಡಗು – 7%
    ತುಮಕೂರು – 9%

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಶವ್ಯಾಪಿ ಮುಂಗಾರು ಕುಂಠಿತ – ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆ

    ದೇಶವ್ಯಾಪಿ ಮುಂಗಾರು ಕುಂಠಿತ – ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಕೊರತೆ

    ಬೆಂಗಳೂರು: ದೇಶವ್ಯಾಪಿ ಮುಂಗಾರು (Monsoon) ಕುಂಠಿತವಾಗಿದ್ದು, ಕರ್ನಾಟಕ (Karnataka) ಸೇರಿದಂತೆ 17 ರಾಜ್ಯಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಜ್ಯದಲ್ಲಿ ಜೂನ್ ತಿಂಗಳಲ್ಲಿ 25 ಜಿಲ್ಲೆಗಳ 87 ತಾಲೂಕುಗಳಲ್ಲಿ ಮಳೆ (Rain) ಕೊರತೆ ಉಂಟಾಗಿದೆ.

    ಈ ಬಾರಿ ದಕ್ಷಿಣ ಭಾರತದ ರಾಜ್ಯಗಳೇ ಅತಿ ಹೆಚ್ಚು ಮಳೆ ಕೊರತೆ ಎದುರಿಸುತ್ತಿದೆ. ದಕ್ಷಿಣ ಭಾರತದಲ್ಲಿ 45% ರಷ್ಟು ಮುಂಗಾರಿನ ಕೊರತೆಯಾಗಿದೆ. ವಾಯುವ್ಯ ಭಾರತದ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕಡೆ ಮುಂಗಾರು ಕೈಕೊಟ್ಟಿದೆ. ಆದರೆ ವಾಯುವ್ಯದಲ್ಲಿ ವಾಡಿಕೆಗಿಂತ 42% ರಷ್ಟು ಅಧಿಕ ಮಳೆಯಾಗಿದೆ.

    ಮಧ್ಯ ಭಾರತದಲ್ಲಿ 6%, ದಕ್ಷಿಣ ಭಾರತದಲ್ಲಿ 45%, ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ 18% ರಷ್ಟು ಕಡಿಮೆ ಮಳೆಯಾಗಿದೆ. ದಕ್ಷಿಣ ರಾಜ್ಯಗಳಲ್ಲಿ ವಾಡಿಕೆಯಂತೆ 161 ಮಿ.ಮಿ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಕೇವಲ 88 ಮಿ.ಮಿ ಮಳೆಯಷ್ಟೇ ದಾಖಲಾಗಿದೆ. ದಕ್ಷಿಣ ರಾಜ್ಯಗಳ ಪೈಕಿ ಕೇರಳದಲ್ಲಿ ಈ ಬಾರಿ 70% ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಯಮುನಾ ನದಿ ಮಟ್ಟ ಮತ್ತಷ್ಟು ಏರಿಕೆ – ಕೇಜ್ರಿವಾಲ್ ನಿವಾಸದ ಬಳಿಯೂ ಪ್ರವಾಹ ಸ್ಥಿತಿ

    ರಾಜ್ಯದ 25 ಜಿಲ್ಲೆಗಳಲ್ಲಿ ಮಳೆ ಅಭಾವ:
    ಜೂನ್ 1 ರಿಂದ 29 ರವರೆಗೆ ವಾಡಿಕೆಗಿಂತ 57% ರಷ್ಟು ಕಡಿಮೆ ಮಳೆಯಾಗಿದೆ. ಜೂನ್ ತಿಂಗಳಲ್ಲಿ 25 ಜಿಲ್ಲೆಗಳ 87 ತಾಲೂಕುಗಳಲ್ಲಿ ಮಳೆ ಕೊರತೆಯುಂಟಾಗಿದೆ. ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಕೊಪ್ಪಳ, ಧಾರವಾಡ, ಶಿವಮೊಗ್ಗ, ಹಾಸನ, ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಬೆಂಗಳೂರು ನಗರ, ಗ್ರಾಮಾಂತರದಲ್ಲಿ 20% ರಷ್ಟು ಕಡಿಮೆ ಮಳೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ 22%, ಉತ್ತರ ಕರ್ನಾಟಕದಲ್ಲಿ 21%, ಮಲೆನಾಡಲ್ಲಿ 64%, ಕರಾವಳಿಯಲ್ಲಿ 19% ರಷ್ಟು ಕಡಿಮೆ ಮಳೆಯಾಗಿದೆ. ಇದನ್ನೂ ಓದಿ: ಜೆಜೆಎಂ ಪೈಪ್‌ಗೆ ಚರಂಡಿ ನೀರು ಸೇರ್ಪಡೆ; ನೀರು ಸೇವಿಸಿದ 30ಕ್ಕೂ ಹೆಚ್ಚು ಜನರು ಅಸ್ವಸ್ಥ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೆಹಲಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ

    ದೆಹಲಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ

    ನವದೆಹಲಿ: ದೆಹಲಿ (Delhi Rain) ಮತ್ತು ಎನ್‌ಸಿಆರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಸಾಧಾರಣದಿಂದ ಭಾರೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ದೆಹಲಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಹಗಲಿನಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ.

    ದೆಹಲಿಯಲ್ಲಿ ಕಳೆದ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ಈ ಪ್ರದೇಶದಲ್ಲಿ ನೈಋತ್ಯ ಮಾನ್ಸೂನ್ ಸಕ್ರಿಯವಾಗಿರುವುದನ್ನು ಸೂಚಿಸುತ್ತದೆ. ಮುಂದಿನ ಏಳು ದಿನಗಳ ಕಾಲ ದೆಹಲಿ ಮತ್ತು ಎನ್‌ಸಿಆರ್‌ನ ಹಲವು ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ತೀವ್ರತೆಯ ಮಳೆ ಮುಂದುವರಿಯುತ್ತದೆ ಎಂದು ಐಎಂಡಿ ತಿಳಿಸಿದೆ. ಇದನ್ನೂ ಓದಿ: ರಾಜ್ಯದ ಕರಾವಳಿಯಲ್ಲಿ ಮಳೆಯಬ್ಬರ- ಮೈದುಂಬಿದ ನದಿಗಳು, ಜಮೀನು ಜಲಾವೃತ

    ದೆಹಲಿ ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ, ಸಾಧಾರಣ ಮಳೆ/ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆಯಿದೆ. ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 25 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಳಿದಾಡುವ ಸಾಧ್ಯತೆಯಿದೆ.

    ಇನ್ನು ದೆಹಲಿಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ದಾಖಲಾಗಿದೆ. ಮಾರ್ಚ್‌ನಲ್ಲಿ ಸಾಮಾನ್ಯ ಮಳೆಯ ಪ್ರಮಾಣ 17.4 ಮಿಮೀ ಇದ್ದು, ಈ ಬಾರಿ 53.2 ಮಿಮೀ ಮಳೆಯಾಗಿದೆ. ಏಪ್ರಿಲ್‌ನಲ್ಲಿ ಸರಾಸರಿ 16.3 ಮಿಮೀ ಇದ್ದು 20.1 ಮಿಮೀ, ಮೇನಲ್ಲಿ ಸಾಮಾನ್ಯ 30.7 ಮಿಮೀ ಇದ್ದು 111 ಮಿಮೀ ಮಳೆಯಾಗಿದೆ. ಜೂನ್‌ನಲ್ಲಿ 74.1 ಮಿಮೀ ಬದಲಿಗೆ 101.7 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದನ್ನೂ ಓದಿ: ಕೆಜಿ ಟೊಮೆಟೊಗೆ 200 ರೂ., ಮೆಣಸಿನಕಾಯಿಗೆ 170 ರೂ. – ತರಕಾರಿಗಳ ಬೆಲೆ ಭಾರೀ ದುಬಾರಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ

    ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ

    ನವದೆಹಲಿ: ಮುಂದಿನ 4-5 ದಿನಗಳ ವರೆಗೆ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ (Rain) ಸಾಧ್ಯತೆಯಿದ್ದು, ಕೆಲ ಭಾಗಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

    ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗೋವಾ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯುಂಟಾಗುವ ಸಾಧ್ಯತೆ ಇದೆ. ಮುಂದಿನ 5 ದಿನಗಳಲ್ಲಿ ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡದಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.

    ದೇಶಾದ್ಯಂತ ಮುಂಗಾರು ಪ್ರಭಾವ ಹೆಚ್ಚಿರಲಿದ್ದು, ಮಹಾರಾಷ್ಟ್ರದ ಹಲವು ನಗರಗಳಲ್ಲಿ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಥಾಣೆ, ರಾಯಗಢ, ರತ್ನಗಿರಿ, ನಾಸಿಕ್, ಪುಣೆ, ಸತಾರಾ ಸೇರಿದಂತೆ ಹಲವೆಡೆ ಭಾರೀ ಮಳೆ ಇರಲಿದ್ದು, ಆರೆಂಟ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಯಾರಿ – ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡ

    ಈಗಾಗಲೇ ವಾಯುವ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ ಮಾನ್ಸೂನ್ ಬಹುತೇಕ ಇಡೀ ದೇಶದ ಮೇಲೆ ಪರಿಣಾಮ ಬೀರಿದೆ. ಇಡೀ ಗುಜರಾತ್ ಹಾಗೂ ಆಗ್ನೇಯ ರಾಜಸ್ಥಾನವನ್ನು ಮಾನ್ಸೂನ್ ಆವರಿಸಿದೆ. ಮುಂದಿನ 2 ದಿನಗಳಲ್ಲಿ ದಕ್ಷಿಣ ಪಂಜಾಬ್ ಹರಿಯಾಣ ಹಾಗೂ ರಾಜಸ್ಥಾನದ ಉಳಿದ ಭಾಗಗಳಲ್ಲಿ ಆವರಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ಇಲಾಖೆ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಕೊಡ್ತೀವಿ: ರಾಮಲಿಂಗಾರೆಡ್ಡಿ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • KRS ಡ್ಯಾಂ ನೀರಿನ ಮಟ್ಟ 5 ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ

    KRS ಡ್ಯಾಂ ನೀರಿನ ಮಟ್ಟ 5 ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ ಡ್ಯಾಂ (KRS Dam) ಕಳೆದ ಐದು ವರ್ಷದ ಅವಧಿಯಲ್ಲಿ ನೀರಿನ ಪ್ರಮಾಣ ಅತ್ಯಂತ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಾವೇರಿ (Cauvery) ಜಲಾನಯನ ಪ್ರದೇಶದಲ್ಲಿ ಈ ಬಾರಿ ಹಿಂಗಾರು ಮಳೆಯೂ ಬಿದ್ದಿಲ್ಲ. ಈಗಾಗಲೇ ಆರಂಭವಾಗಬೇಕಿದ್ದ ಮುಂಗಾರು ಮಳೆಯೂ ಸಹ ಬಿದ್ದಿಲ್ಲ.

    124.80 ಅಡಿಗಳ ಗರಿಷ್ಠ ಮಟ್ಟವಿರುವ ಕೆಆರ್‌ಎಸ್ ಡ್ಯಾಂ‌ನಲ್ಲಿ 82.32 ಅಡಿಗಳು ಅಷ್ಟೇ ನೀರು ಇದೆ. ಟಿಎಂಸಿ ಲೆಕ್ಕಾಚಾರದಲ್ಲಿ ನೋಡುವುದಾದರೇ ಕೆಆರ್‌ಎಸ್ ಡ್ಯಾಂನ ಗರಿಷ್ಠ ಸಾಂದ್ರತೆ 49.452 ಟಿಎಂಸಿ ಇದ್ದು, ಸದ್ಯ 11.847 ಟಿಎಂಸಿ ನೀರು ಇದೆ. 11.847 ಟಿಎಂಸಿ ಪೈಕಿ ಬಳಕೆಗೆ ಇರುವ ನೀರು 4.847 ಟಿಎಂಸಿ ಅಷ್ಟೇ. ಉಳಿದ 7 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಈ ನೀರನ್ನು ಉಪಯೋಗಿಸಲು ಸಾಧ್ಯವಿಲ್ಲ. ಇದನ್ನೂ ಓದಿ: ಮಂಡ್ಯದ ರೈತರ ಒತ್ತಡಕ್ಕೆ ಮಣಿದ ಸರ್ಕಾರ – KRSನಿಂದ ನಾಲೆ ನೀರು

    ಒಂದು ವೇಳೆ ಈ ತಿಂಗಳು ಮಳೆ ಬೀಳದೆ ಇದ್ದರೆ, ಜುಲೈ ಎರಡನೇ ವಾರದಿಂದ ಮೈಸೂರು, ಬೆಂಗಳೂರು, ಮಂಡ್ಯ, ರಾಮನಗರ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

    ಕೆಆರ್‌ಎಸ್ ಇಂದಿನ ನೀರಿನ ಮಟ್ಟ
    ಗರಿಷ್ಠ ಮಟ್ಟ – 124.80 ಅಡಿಗಳು
    ಇಂದಿನ ಮಟ್ಟ – 82.32 ಅಡಿಗಳು
    ಗರಿಷ್ಠ ಸಾಂದ್ರತೆ – 49.452 ಟಿಎಂಸಿ
    ಇಂದಿನ ಸಾಂದ್ರತೆ -11.847 ಟಿಎಂಸಿ
    ಒಳ ಹರಿವು – 570 ಕ್ಯೂಸೆಕ್
    ಹೊರ ಹರಿವು – 3,233 ಕ್ಯೂಸೆಕ್ ಇದನ್ನೂ ಓದಿ: ಕೈಕೊಟ್ಟ ವರುಣ – ಮಳೆಗಾಗಿ ನಾಳೆ KRSನಲ್ಲಿ ವಿಶೇಷ ಹೋಮ

    ಕೆಆರ್‌ಎಸ್ ಕಳೆದ ವರ್ಷ ಈ ದಿನದ ನೀರಿನ ಮಟ್ಟ
    ಗರಿಷ್ಠ ಮಟ್ಟ – 124.80 ಅಡಿಗಳು
    ಇಂದಿನ ಮಟ್ಟ – 105.55 ಅಡಿಗಳು
    ಗರಿಷ್ಠ ಸಾಂದ್ರತೆ – 49.452 ಟಿಎಂಸಿ
    ಇಂದಿನ ಸಾಂದ್ರತೆ – 27.482 ಟಿಎಂಸಿ
    ಒಳ ಹರಿವು – 1,425 ಕ್ಯೂಸೆಕ್
    ಹೊರ ಹರಿವು – 1,143 ಕ್ಯೂಸೆಕ್

  • ಸಿಹಿ ಸುದ್ದಿ – ಕೇರಳಕ್ಕೆ ಮುಂಗಾರು ಪ್ರವೇಶ

    ಸಿಹಿ ಸುದ್ದಿ – ಕೇರಳಕ್ಕೆ ಮುಂಗಾರು ಪ್ರವೇಶ

    ನವದೆಹಲಿ: ನೈಋತ್ಯ ಮುಂಗಾರು ಮಾರುತಗಳು (Southwest Monsoon) ಕಡೆಗೂ ದೇಶವನ್ನು ಪ್ರವೇಶಿಸಿವೆ. ಇಂದು ಮುಂಗಾರು ಮಾರುತಗಳು ಕೇರಳ (Kerala) ತೀರಕ್ಕೆ ಅಪ್ಪಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಪ್ರಕಟಿಸಿದೆ.

    ಹವಾಮಾನ ಇಲಾಖೆ ಅಂದಾಜಿಗಿಂತ ಮೂರು ದಿನ ತಡವಾಗಿ ಮುಂಗಾರು ದೇಶವನ್ನು ಪ್ರವೇಶಿಸಿದೆ. ಪ್ರಸ್ತುತ ಲಕ್ಷದ್ವೀಪ, ಕೇರಳ ಪ್ರಾಂತ್ಯದಲ್ಲಿ ಮುಂಗಾರು ಮಾರುತಗಳು ವಿಸ್ತರಿಸಿವೆ.

    ಮುಂಗಾರು ಪ್ರವೇಶದ ಬೆನ್ನಲ್ಲೇ ಬುಧವಾರದಿಂದ ಕೇರಳದಲ್ಲಿ ವಿಸ್ತಾರವಾಗಿ ಮಳೆ ಆಗುತ್ತಿದೆ. ಮುಂದಿನ 48 ಗಂಟೆಯಲ್ಲಿ ಕೇರಳದ ಇತರೇ ಪ್ರಾಂತ್ಯಗಳು ಸೇರಿ, ಕರ್ನಾಟಕ, ತಮಿಳುನಾಡಿಗೂ ಮುಂಗಾರು ಮಾರುತಗಳು ಹಬ್ಬಲಿವೆ. ಇದನ್ನೂ ಓದಿ: ಹೊಸ ಷರತ್ತು – ಮಗ ತೆರಿಗೆದಾರನಾಗಿದ್ದರೆ ತಾಯಿಗೆ 2 ಸಾವಿರ ಸಿಗಲ್ಲ

    ಸಾಧಾರಣವಾಗಿ ಪ್ರತಿ ವರ್ಷ ಮೇ ಕೊನೆಯ ವಾರ ಅಥವಾ ಜೂನ್‌ ಮೊದಲ ವಾರದಲ್ಲಿ ನೈಋತ್ಯ ಮಾನ್ಸೂನ್‌ ಮಾರುತಗಳು ಕೇರಳವನ್ನು ಪ್ರವೇಶಿಸುತ್ತವೆ. ಕಳೆದ ವರ್ಷ ಮೇ 29, 2021ರಲ್ಲಿ ಜೂನ್‌ 3, 2020ರಲ್ಲಿ ಜೂನ್‌ 1, 2019ರಲ್ಲಿ ಜೂನ್‌8, 2018ರಲ್ಲಿ ಮೇ 29ಕ್ಕೆ ನೈರುತ್ಯ ಮಾರುತ ದೇಶವನ್ನು ಪ್ರವೇಶಿಸಿದ್ದವು.

  • ಮಳೆಗಾಲದಲ್ಲಿ ಧರಿಸಬಹುದಾದ ಆರಾಮದಾಯಕ ರೈನ್‍ಕೋಟ್‍ಗಳು

    ಮಳೆಗಾಲದಲ್ಲಿ ಧರಿಸಬಹುದಾದ ಆರಾಮದಾಯಕ ರೈನ್‍ಕೋಟ್‍ಗಳು

    ಳೆಗಾಲದಲ್ಲಿ ಜೋರಾಗಿ ಗಾಳಿ ಬೀಸುವುದು, ಭಾರೀ ಮಳೆಯಾಗಿ ಹಲವೆಡೆ ಪ್ರವಾಹ ಉಂಟಾಗುವುದನ್ನು ನಾವು ನೋಡಿರುತ್ತೇವೆ. ಅದರಲ್ಲಿಯೂ ವಿಶೇಷವಾಗಿ ಭಾರತದಲ್ಲಿ ಮಳೆಯನ್ನು ಪ್ರೀತಿಸುವುದರ ಜೊತೆಗೆ ದ್ವೇಷಿಸುವವರ ಸಂಖ್ಯೆ ಕೂಡ ಸಮವಾಗಿದೆ. ಅದರಲ್ಲಿಯೂ ಪ್ರಣಯ ಪಕ್ಷಿಗಳಿಗೆ ಮಳೆಗಾಲ ಬಹಳ ಅಚ್ಚುಮೆಚ್ಚು. ಆದರೆ ಎಲ್ಲಾದರೂ ಹೊರಡುವಾಗ ಮಳೆಯಲ್ಲಿ ಸಿಕ್ಕಿಹಾಕಿಕೊಂಡರೇ ಅಷ್ಟೇ ಕಿರಿಕಿರಿ ಕೂಡ ಉಂಟಾಗುತ್ತದೆ. ಎಷ್ಟೋ ಜನ ಮಳೆಗಾಲದಲ್ಲಿ ಛತ್ರಿಯನ್ನು ಉಪಯೋಗಿಸುತ್ತಾರೆ. ಛತ್ರಿ ನಿಮ್ಮ ಮೇಲ್ಭಾಗ ಮಾತ್ರ ತೇವವಾಗುವುದರಿಂದ ರಕ್ಷಿಸಿದರೆ, ನಿಮ್ಮ ಮೊಣಕಾಲಿನಿಂದ ಒದ್ದೆಯಾಗಿಸುತ್ತದೆ. ಇದರಿಂದ ನಿಮಗೆ ನಡೆದಾಡಲೂ ಸಹ ಕಷ್ಟವಾಗುತ್ತದೆ. ಅಲ್ಲದೇ ಮಳೆ ಬರುವ ಸಂದರ್ಭದಲ್ಲಿ ಬ್ಯಾಗ್‍ಗಳು, ವ್ಯಾಲೆಟ್‍ಗಳು ಅಥವಾ ಸ್ಮಾರ್ಟ್‍ಫೋನ್‍ಗಳ ಜೊತೆಗೆ ಛತ್ರಿಯನ್ನು ಹಿಡಿದಿಟ್ಟುಕೊಳ್ಳಲು ಮತ್ತಷ್ಟು ಕಿರಿಕಿರಿಯಾಗುತ್ತದೆ. ಈ ಎಲ್ಲದಕ್ಕೂ ಪರಿಹಾರ ಅಂದರೆ ರೈನ್ ಕೋಟ್. ಮಳೆಗಾಲದಲ್ಲಿ ರೈನ್ ಕೋಟ್ ಧರಿಸುವುದು ಬಹಳ ಉತ್ತಮವಾಗಿದೆ.

    ಮಳೆಗಾಲಗಳು ಛತ್ರಿಗಳಿಗಿಂತಲೂ ಹೆಚ್ಚಾಗಿ ರೈನ್‍ಕೋಟ್‍ಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಇದು ನಿಮ್ಮ ಬ್ಯಾಗ್ ಅಲ್ಲದೇ ತಲೆಯಿಂದ ಪಾದದವರೆಗೂ ನಿಮ್ಮನ್ನು ಮಳೆಯಿಂದ ರಕ್ಷಿಸುತ್ತದೆ. ಅಲ್ಲದೇ ರೈನ್ ಕೋಟ್‍ನಲ್ಲಿ ಹಲವಾರು ವೆರೈಟಿ ಡಿಸೈನ್, ಸೈಜ್, ಅನೇಕ ನ್ಯೂ ಪ್ಯಾಟನ್‍ಗಳು ದೊರೆಯುತ್ತದೆ. ಈ ಕುರಿತಂತೆ ನಿಮಗೆ ತಿಳಿಯದೇ ಇರುವ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ.

    ಪುರುಷರ ರೈನ್ ಕೋಟ್
    ಪುರುಷರ ಈ ರೈನ್ ಕೋಟ್ ನಿಮಗೆ ಕೆಳಗಿನವರೆಗೂ ರಕ್ಷಣೆ ನೀಡುತ್ತದೆ. ಇದರಲ್ಲಿ ಜಾಕೆಟ್ ಜೊತೆಗೆ ಬಾಟಮ್ ಕೂಡ ಬರುತ್ತದೆ. ಈ ರೇನ್‍ಕೋಟ್ ನಿಮಗೆ ಮೇಲಿನ ಮತ್ತು ಕೆಳಗಿನವರೆಗೂ ರಕ್ಷಣೆ ನೀಡುತ್ತದೆ. ಇದು ಜಾಕೆಟ್ ಜೊತೆಗೆ ಬಾಟಮ್‍ನೊಂದಿಗೆ ಬರುತ್ತದೆ. ಈ ಜಾಕೆಟ್ ಇದು ಡ್ರಾಸ್ಟಿಂಗ್ ಮತ್ತು ಎಲಾಸ್ಟಿಕ್ ವೆಸ್ಟ್ ನೊಂದಿಗೆ ಬರುತ್ತದೆ. ಇದನ್ನು ನೀವು ನಿಮಗೆ ಹೇಗೆ ಬೇಕೋ ಹಾಗೇ ಅಡ್ಜೆಸ್ಟ್ ಮಾಡಿಕೊಳ್ಳಬಹುದು. ಇದು 100% ನಿಮ್ಮನ್ನು ಮಳೆ ಹಾಗೂ ಗಾಳಿಯಿಂದ ರಕ್ಷಣೆ ನೀಡುತ್ತದೆ.

    ಮಹಿಳೆಯರ ವಾಟರ್‌ಪ್ರೂಫ್ ಜಾಕೆಟ್
    ಮಹಿಳೆಯರು ಯಾವಾಗಲೂ ಒಂದೇ ರೀತಿಯ ರೈನ್ ಕೋಟ್ ಮೇಲೆ ಅವಲಂಬಿತರಾಗಿರುವುದಿಲ್ಲ. ಹಲವಾರು ವೇಳೆ ರೈನ್ ಕೋಟ್ ಬದಲಾಯಿಸುತ್ತಿರಬೇಕಾಗುತ್ತದೆ. ಸದ್ಯ ಈ ನೀಡಲಾಗಿರುವ ರೈನ್ ಕೋಟ್ ಅನ್ನು ಸೈಕ್ಲಿಂಗ್ ಹಾಗೂ ಬೈಕ್‍ನಲ್ಲಿ ಸವಾರಿ ಮಾಡುವಾಗ ಧರಿಸಬಹುದಾಗಿದೆ. ಮಳೆ ಬರುವ ವೇಳೆ ರಸ್ತೆಯಲ್ಲಿ ಹೋಗುವಾಗ ಬಸ್, ಕಾರು ಅಥವಾ ಇತರೆ ವಾಹನಗಳು ಜೋರಾಗಿ ಸಂಚರಿಸು ವೇಲೆ ರಸ್ತೆ ಗುಂಡಿಯಲ್ಲಿರುವ ಕೊಚ್ಚೆ ನೀರು, ಮಳೆ ಹನಿಗಳಿಂದ ನಿಮ್ಮನ್ನು ರಕ್ಷಿಸುವುದರ ಜೊತೆಗೆ ನಿಮ್ಮ ಪ್ರಯಾಣವನ್ನು ಸರಾಗಗೊಳಿಸುತ್ತದೆ. ಇದನ್ನೂ ಓದಿ: ಮುರುಘಾ ಶ್ರೀ ವಿರುದ್ಧ ಕಿಡ್ನಾಪ್ ಕೇಸ್ ಕೂಡಾ ದಾಖಲಾಗಿದ್ದು, ತನಿಖೆ ನಡೀತಿದೆ: ಬೊಮ್ಮಾಯಿ

    ವಾಟರ್‌ಪ್ರೂಫ್ ಪಾಲಿಯೆಸ್ಟರ್ ರೈನ್ ಪೊಂಚೊ ವಿತ್ ಹುಡ್
    ವಾಟರ್‌ಪ್ರೂಫ್ ಪಾಲಿಯೆಸ್ಟರ್ ರೈನ್ ಪೊಂಚೊ ವಿತ್ ಹುಡ್ ಯುನಿಸೆಕ್ಸ್ ರೈನ್‍ಕೋಟ್ ಆಗಿದ್ದು, ಇದು ನಿಮ್ಮ ಜೊತೆಗೆ ನಿಮ್ಮ ಬ್ಯಾಗ್ ಅನ್ನು ಸಹ ತೇವದಿಂದ ರಕ್ಷಿಸುತ್ತದೆ. ಇದು ಪ್ಯಾಕಿಂಗ್ ಪೌಚ್‍ನೊಂದಿಗೆ ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದೆ. ಈ ರೈನ್ ಕೋಟ್ ಅನ್ನು ಸುಲಭವಾಗಿ ಧರಿಸಬಹುದಾಗಿದೆ.

    ಮೆನ್ ವಾಟರ್‌ಪ್ರೂಫ್ ಡಬಲ್ ಲೇಯರ್ ರಿವರ್ಸಿಬಲ್ ರೈನ್‍ಕೋಟ್
    ಈ ರಿವರ್ಸಿಬಲ್ ರೇನ್‍ಕೋಟ್ ಪುರುಷರಿಗೆಂದೇ ಮೀಸಲಾಗಿದೆ. ಇದು ಜಾಕೆಟ್ ಜೊತೆಗೆ ಬರುತ್ತದೆ ಮತ್ತು ಭಾರೀ ಮಳೆಯಾಗುತ್ತಿರುವ ವೇಳೆ ಕೂಡ ನಡೆಯಲು ಸಾಕಷ್ಟು ಆರಾಮದಾಯಕವಾಗಿರುತ್ತದೆ. ಈ ರೈನ್‍ಕೋಟ್ ಅನ್ನು ಭಾರತದಲ್ಲಿಯೇ ತಯಾರಿಸಲಾಗುತ್ತದೆ ಮತ್ತು ಇದು ಬೇಗನೆ ಒದ್ದೆಯಿಂದ ಒಣಗುತ್ತದೆ. ಇದನ್ನೂ ಓದಿ: ಸಾನ್ಯ ಒಳ ಉಡುಪಿನ ಬಗ್ಗೆ ಮಾತನಾಡಿದ್ದ ಉದಯ್- ಚಳಿ ಬಿಡಿಸಿದ ಕಿಚ್ಚ

    Live Tv
    [brid partner=56869869 player=32851 video=960834 autoplay=true]

  • ನಾಲ್ಕು ರಾಜ್ಯಗಳಲ್ಲಿ ರಣ ಮಳೆ – 31 ಮಂದಿ ದಾರುಣ ಸಾವು

    ನಾಲ್ಕು ರಾಜ್ಯಗಳಲ್ಲಿ ರಣ ಮಳೆ – 31 ಮಂದಿ ದಾರುಣ ಸಾವು

    ಶಿಮ್ಲಾ: ಹಿಮಾಚಲ ಪ್ರದೇಶ, ಉತ್ತರಾಖಂಡ, ಓಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ರಣ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಭೂಕುಸಿತದಿಂದ 31 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

    ಹಿಮಾಚಲ ಪ್ರದೇಶ ಒಂದರಲ್ಲೇ 22 ಮಂದಿ ಮೃತಪಟ್ಟಿದ್ದು, ಉತ್ತರಾಖಂಡ, ಒಡಿಶಾ ಜಿಲ್ಲೆಗಳಲ್ಲಿ ತಲಾ 4 ಹಾಗೂ ಜಾರ್ಖಂಡ್‌ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ವಾಹನದಟ್ಟಣೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: 100 ಲೋನ್ ಆ್ಯಪ್‍ಗಳಿಂದ 500 ಕೋಟಿ ರೂ. ವ್ಯವಹಾರ – ಗ್ರಾಹಕರ ಮಾಹಿತಿ ಚೀನಾಗೆ ರವಾನಿಸಿದ ಗ್ಯಾಂಗ್ ಅರೆಸ್ಟ್

    ಸದ್ಯ ಮಳೆಯ ಆರ್ಭಟ ಮುಂದುವರಿದಿದ್ದು, ನಾಲ್ಕು ರಾಜ್ಯಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಮೃತದೇಹಗಳನ್ನು ಈವರೆಗೂ ಹೊರಗೆ ತೆಗೆಯಲು ಆಗಿಲ್ಲ. ಪ್ರವಾಹ ಮತ್ತು ಭೂಕುಸಿತದ ನಂತರ ಮಂಡಿ ಜಿಲ್ಲೆಯ ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಅನೇಕ ವಾಹನಗಳು ಹಾನಿಯಾಗಿವೆ ಎಂದು ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಕೊಡಗಿನ ಮಿನಿ ನಯಾಗರ ಫಾಲ್ಸ್

    ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಕೊಡಗಿನ ಮಿನಿ ನಯಾಗರ ಫಾಲ್ಸ್

    ಮಡಿಕೇರಿ: ಕೊಡಗಿನ ಪ್ರಕೃತಿಯ ಮಡಿಲಲ್ಲಿರುವ ಪ್ರತಿಯೊಂದು ಸ್ಥಳಗಳು ಮನಮೋಹಕ. ಅದ್ರಲ್ಲೂ ಮಳೆಗಾಲ ಬಂದ್ರೆ ಮತ್ತಷ್ಟು ಸೌಂದರ್ಯದಿಂದ ಕಂಗೊಳಿಸೋ ಕರ್ನಾಟಕದ ಕಾಶ್ಮೀರದಲ್ಲಿ ನಿಸರ್ಗದ ಸಿರಿ ನೋಡುಗರಿಗೆ ಮುದನೀಡುತ್ತೆ. ಇಂತಹ ಸುಂದರ ತಾಣಗಳ ಸಾಲಿಗೆ ಸೇರೋದೆ ಚಿಕ್ಲಿಹೊಳೆ ಜಲಾಶಯ. ಇದನ್ನು ನೋಡಲು ಪುಟ್ಟದಾಗಿದ್ದರೂ ತನ್ನ ಸೌಂದರ್ಯದಿಂದ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.

    ಸುತ್ತಲೂ ನಿಸರ್ಗದ ಮಡಿಲು. ಕಣ್ಣು ಹಾಯಿಸಿದಲ್ಲೆಲ್ಲಾ ಕಂಗೊಳಿಸೋ ಹಸಿರ ಸಿರಿ. ಇದರ ನಡುವೆ ಹಾಲ್ನೊರೆಯಂತೆ ದುಮ್ಮಿಕ್ಕೋ ನೀರು, ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಜಲಾಶಯ ನೋಡುತ್ತಿರೋ ಜನ. ಹೌದು, ಇದು ಕೊಡಗಿನ ಪುಟ್ಟ ಜಲಾಶಯ ಚಿಕ್ಲಿಹೊಳೆಯ ಮನಮೋಹಕ ದೃಶ್ಯ ವೈಭವ. ಇದನ್ನೂ ಓದಿ: ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿದ್ದ ಪೋಲೆಂಡ್ ಪ್ರಜೆ ಅರೆಸ್ಟ್ 

    ಮಳೆಗಾಲದ ವಿಶೇಷ ಅತಿಥಿಯಾದ ಈ ಚಿಕ್ಲಿಹೊಳೆ ಜಲಾಶಯವನ್ನು ‘ಮಿನಿ ನಯಾಗರ ಫಾಲ್ಸ್’ ಅಂತಲೂ ಕರೀತ್ತಾರೆ. ಅರ್ಧ ವೃತ್ತಾಕಾರದಲ್ಲಿ ಐದಾರು ಅಡಿಗಳ ಎತ್ತರದಿಂದ ಹಾಲ್ನೊರೆಯಂತೆ ದುಮ್ಮಿಕ್ಕುವ ಈ ಸುಂದರ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲದು. ಬೇಸಿಗೆಯಲ್ಲಿ ಬರಡಾಗಿ ಕಾಣೋ ಈ ಜಲಾಶಯದಲ್ಲಿ ಕಳೆದ ಕೆಲವು ದಿನಗಳಿಂದ ಆರಂಭವಾಗಿರುವ ಮಳೆಯಿಂದ ಜಲಪಾತವೊಂದು ಸೃಷ್ಟಿಯಾಗಿದೆ.

    ಹಸಿರ ಸಿರಿಯ ನಡುವೆ ದುಮ್ಮಿಕ್ಕೋ ಈ ಜಲಾಶಯವನ್ನು ನೋಡಲು ಜನರ ದಂಡೇ ಹರಿದುಬರುತ್ತಿದ್ದು, ಮಳೆಗಾಲದ ಮಜಾವನ್ನು ಜನ ಎಂಜಾಯ್ ಮಾಡ್ತಿದ್ದಾರೆ. ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಸಮೀಪವಿರೋ ಜಲಾಶಯಕ್ಕೆ ಮಳೆಗಾಲದಲ್ಲಿ ಜೀವಕಳೆ ಬರುತ್ತೆ. ಮಳೆಗಾಲದ ಐದಾರು ತಿಂಗಳು ನವವಧುವಿನಂತೆ ಕಂಗೊಳಿಸೋ ಜಲಾಶಯ ಚಿಕ್ಕದಾದರೂ ತನ್ನ ಸೌಂದರ್ಯದಿಂದಲೇ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಪಕ್ಕಾ ನಿಸರ್ಗದ ಮಡಿಲಿನಲ್ಲಿರೋ ಈ ಜಲಾಶಯ ಪ್ರಕೃತಿಮಾತೆಯ ತಿಲಕದಂತೆ ನಯನಮನೋಹರವಾಗಿ ಕಂಗೊಳಿಸುತ್ತಿದೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಸಿಎಂ ಜೊತೆ ಚರ್ಚಿಸುವೆ ಎಂದ ಸುಧಾಕರ್ 

    ಸುತ್ತಲೂ ಹಸಿರಕಾನನ ಬೆಟ್ಟಗುಡ್ಡಗಳಿಂದಾವೃತವಾಗಿರೋ ಜಲಾಶಯ ಕಂಡು ಮೈಮರೆಯೋ ಜನರು ವೀಕೆಂಡ್‍ಗಳಲ್ಲಿ ಬಂದು ತಮ್ಮೆಲ್ಲ ನೋವನ್ನು ಮರೆತು ಖುಷಿಪಡ್ತಾರೆ. ಹೀಗೆ ಮಳೆಗಾಲದಲ್ಲಿ ಬಂದು ಸಾವಿರರು ಜನರ ಮನತಣಿಸೋ ಈ ಪುಟ್ಟ ಜಲರಾಶಿಯಲ್ಲಿ ಮೂಲಸೌಲಭ್ಯಗಳ ಕೊರತೆ ಕಾಡುತ್ತಿದೆ ಎನ್ನೊಂದು ಪ್ರವಾಸಿಗರ ಅಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಂಸತ್‌ ಅಧಿವೇಶನದಲ್ಲಿ ಧರಣಿ ನಡೆಸುವಂತಿಲ್ಲ: ಆದೇಶ ಪ್ರಕಟ

    ಸಂಸತ್‌ ಅಧಿವೇಶನದಲ್ಲಿ ಧರಣಿ ನಡೆಸುವಂತಿಲ್ಲ: ಆದೇಶ ಪ್ರಕಟ

    ನವದೆಹಲಿ: ಅಸಂಸದೀಯ ಪದ ಬಳಕೆಯನ್ನು ನಿರ್ಬಂಧಿಸಿದ ಬೆನ್ನಲ್ಲೇ ಸೋಮವಾರದಿಂದ ಆರಂಭವಾಗಲಿರುವ ಸಂಸತ್‌ ಅಧಿವೇಶನದಲ್ಲಿ ಧರಣಿ ನಡೆಸುವುದನ್ನು ನಿಷೇಧಿಸಲಾಗಿದೆ. ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ, ಸಂಸತ್ತಿನಲ್ಲಿ ಯಾವುದೇ ಧರಣಿಗೆ ಅವಕಾಶ ನೀಡುವುದಿಲ್ಲ ಹೊಸ ಆದೇಶದಲ್ಲಿ ತಿಳಿಸಲಾಗಿದೆ.

    ಸಂಸತ್ತಿನ ಸದಸ್ಯರು ಯಾವುದೇ ಧರಣಿ ಅಥವಾ ಮುಷ್ಕರಕ್ಕೆ ಅದರ ಆವರಣವನ್ನು ಬಳಸುವಂತಿಲ್ಲ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

    “ಸದಸ್ಯರು ಯಾವುದೇ ಪ್ರತಿಭಟನೆ, ಧರಣಿ, ಮುಷ್ಕರ, ಉಪವಾಸ ಅಥವಾ ಯಾವುದೇ ಧಾರ್ಮಿಕ ಸಮಾರಂಭಗಳನ್ನು ನಡೆಸುವ ಉದ್ದೇಶಕ್ಕಾಗಿ ಸಂಸತ್ ಭವನದ ಆವರಣವನ್ನು ಬಳಸುವಂತಿಲ್ಲ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
    ಇದನ್ನೂ ಓದಿ: I2U2 ಶೃಂಗಸಭೆ – 6 ಕ್ಷೇತ್ರಗಳಲ್ಲಿ 4 ದೇಶಗಳು ಜಂಟಿಯಾಗಿ ಹೂಡಿಕೆ

    ಗುರುವಾರ ಲೋಕಸಭೆ ಕಾರ್ಯದರ್ಶಿಗಳು, ಅಸಂಸದೀಯ ಪದ ಬಳಕೆಗೆ ಸಂಬಂಧಿಸಿ ಹೊಸ ಬುಕ್‍ಲೆಟ್ ಬಿಡುಗಡೆ ಮಾಡಿದ್ದರು. ಅಸಂಸದೀಯ ಪದಗಳ ಪಟ್ಟಿಗೆ ಹೊಸದಾಗಿ ಹಲವು ಪದಗಳನ್ನು ಸೇರಿಸಲಾಗಿದೆ. ಅದರ ಪ್ರಕಾರ ಇನ್ನು ಮುಂದೆ ಜುಮ್ಲಾ ಜೀವಿ, ಕೋವಿಡ್ ಸ್ಪ್ರೆಡರ್, ಸ್ನೂಪ್‍ಗೇಟ್ ಪದಗಳನ್ನು ಸಂಸದರು ಸಂಸತ್ ಕಲಾಪದಲ್ಲಿ ಬಳಸುವಂತೆ ಇಲ್ಲ.

    ಅಷ್ಟೇ ಅಲ್ಲದೇ ನಾಚಿಕೆಗೇಡು, ಕಿರುಕುಳ, ಮೋಸ, ಭ್ರಷ್ಟ, ಡ್ರಾಮಾ, ಹಿಪೋಕ್ರಸಿ, ಸರ್ವಾಧಿಕಾರಿ ಎಂಬ ಪದಗಳನ್ನೂ ಬಳಸುವಂತೆ ಇಲ್ಲ. ಶಕುನಿ, ತಾನ್ ಶಾ, ವಿನಾಶ ಪುರುಷ್, ಖಲಿಸ್ತಾನಿ, ದ್ರೋಹಿ, ದ್ರೋಹ ಚರಿತ್ರೆ, ಚಮ್ಚಾ, ಚಮಚಾಗಿರಿ, ಹೇಡಿ, ಕ್ರಿಮಿನಲ್, ಮೊಸಳೆ ಕಣ್ಣೀರು, ಕತ್ತೆ, ಅಸಮರ್ಥ, ಗೂಂಡಾ, ಅಹಂಕಾರಿ, ಕತ್ತಲ ದಿನಗಳು, ದಾದಾಗಿರಿ, ಲೈಂಗಿಕ ಕಿರುಕುಳ, ನಂಬಿಕೆ ದ್ರೋಹಿ ಎಂಬ ಪದಗಳನ್ನು ಕೂಡ ಸಂಸತ್ ಭಾಷಣದ ವೇಳೆ ಸಂಸದರು ಬಳಕೆ ಮಾಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]