Tag: monsoon

  • ಬೆಂಗಳೂರಿನಲ್ಲಿ ಭಾರೀ ಗಾಳಿ, ಮಳೆ: ಧರೆಗೆ ಉರುಳಿತು ಮರಗಳು, ಬಸ್ ನಿಲ್ದಾಣಕ್ಕೆ ನುಗ್ಗಿತು ನೀರು

    ಬೆಂಗಳೂರಿನಲ್ಲಿ ಭಾರೀ ಗಾಳಿ, ಮಳೆ: ಧರೆಗೆ ಉರುಳಿತು ಮರಗಳು, ಬಸ್ ನಿಲ್ದಾಣಕ್ಕೆ ನುಗ್ಗಿತು ನೀರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶನಿವಾರ ರಾತ್ರಿ ಭಾರೀ ಮಳೆಯಾಗಿದೆ. ಗುಡುಗು, ಸಿಡಿಲಿನ ಜೊತೆ ಗಾಳಿಯೂ ಬೀಸಿದ್ದರಿಂದ ಸಂಚಾರ ಬಹುತೇಕ ಅಸ್ತವ್ಯಸ್ತಗೊಂಡಿದೆ.

    ರಾತ್ರಿ 8.30 ರಿಂದ ಒಂದು ಗಂಟೆಗಳ ಕಾಲ ಜೋರಾಗಿ ಮಳೆಯಾಗಿದೆ. ನ್ಯೂ ಬಿಇಎಲ್ ರೋಡ್‍ನಲ್ಲಿ ಭಾರೀ ಮಳೆಯಿಂದ ಎದೆ ಎತ್ತರಕ್ಕೆ ನೀರು ಬಂದಿದ್ದು, ರಸ್ತೆಯಲ್ಲಿ ಕಾರು ಮುಳುಗಿತ್ತು. ಯಶವಂತಪುರ ಬಸ್ ಸ್ಟ್ಯಾಂಡಿನ ಒಳಗಡೆ ನೀರು ನುಗ್ಗಿದೆ.

    ಹೆಬ್ಬಾಳ ರಿಂಗ್ ರೋಡ್‍ನಲ್ಲಿ ನಾಲ್ಕು ಮರಗಳು ಧರೆಗೆ ಬಿದ್ದಿದ್ದು, ಟ್ರಾಫಿಕ್ ಪೊಲೀಸರು ಮರಗಳನ್ನು ತೆರವುಗೊಳಿಸಿದ್ದಾರೆ.

    ಗಾಳಿಯಿಂದ ಹಲವೆಡೆ ಬೃಹತ್ ಮರಗಳು ಧರೆಗೆ ಬಿದ್ದಿದ್ದು, ಕೆಲವೆಡೆ ಟ್ರಾಫಿಕ್ ಜಾಮ್ ಆಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

  • ಮೇ 30ರ ಒಳಗಡೆ ರಾಜ್ಯಕ್ಕೆ ಮುಂಗಾರು ಪ್ರವೇಶ

    ಮೇ 30ರ ಒಳಗಡೆ ರಾಜ್ಯಕ್ಕೆ ಮುಂಗಾರು ಪ್ರವೇಶ

    ಬೆಂಗಳೂರು: ಮೇ ಅಂತ್ಯಕ್ಕೆ ದೇಶಕ್ಕೆ ಮುಂಗಾರು ಮಳೆ ಪ್ರವೇಶವಾಗಲಿದ್ದು, ರಾಜ್ಯಕ್ಕೆ ಮೇ 30ರೊಳಗೆ ಮುಂಗಾರು ಪ್ರವೇಶ ಮಾಡಲಿದೆ.

    ಮೇ 28 ರಿಂದ 30 ರೊಳಗೆ ಕೇರಳ ಮೂಲಕ ದೇಶಕ್ಕೆ ಮುಂಗಾರು ಪ್ರವೇಶ ಮಾಡಲಿದೆ. ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡುತ್ತಿದ್ದ ಹಾಗೇ ರಾಜ್ಯಕ್ಕೂ ಮುಂಗಾರು ಪ್ರವೇಶ ಆಗಲಿದೆ ಎಂದು ಪಬ್ಲಿಕ್ ಟಿವಿಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಯೋಜನಾ ವಿಜ್ಞಾನಿ ಗವಾಸ್ಕರ್ ಮಾಹಿತಿ ನೀಡಿದ್ದಾರೆ.

    ಕಳೆದ ವರ್ಷ ರಾಜ್ಯಕ್ಕೆ ಮುಂಗಾರು ಜೂನ್ 9 ರಂದು ರಾಜ್ಯಕ್ಕೆ ಪ್ರವೇಶ ಮಾಡಿತ್ತು.ಭಾರತೀಯ ಹವಾಮಾನ ಇಲಾಖೆಯ ಪ್ರಕಾರ 30 ಕ್ಕೆ ಮುಂಗಾರು ಪ್ರವೇಶ ಮಾಡಲಿದೆ ಅಂತ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಅವರು ತಿಳಿಸಿದರು.

    ಕರ್ನಾಟಕಕ್ಕ ಈ ಹಿಂದಿನ ವರ್ಷದಲ್ಲಿ ಯಾವಾಗ ಮುಗಾರು ಪ್ರವೇಶಿಸಿತ್ತು?
    2012 – 5 ಜೂನ್
    2013 – 1 ಜೂನ್
    2014 – 6 ಜೂನ್
    2015 – 5 ಜೂನ್
    2016 – 8 ಜೂನ್