Tag: Monsoon Raga

  • ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಇಂದು 30ನೇ ವರ್ಷದ ಹುಟ್ಟು ಹಬ್ಬವನ್ನು  (Birthday) ಆಚರಿಸಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ರಚ್ಚು ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿದ್ದು, ನೆಚ್ಚಿನ ನಟಿಗೆ ಶುಭ ಹಾರೈಸಿದ್ದಾರೆ. ಅಭಿಮಾನಿಗಳ ಜೊತೆ ರಚಿತಾ ಬೆರೆತು ಅವರೊಂದಿಗೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಕಿರುತೆರೆಯ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು ರಚಿತಾ ರಾಮ್. ಆನಂತರ ಸಿನಿಮಾ ರಂಗಕ್ಕೆ ಬಂದರು. ಅನೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಕೂಡ ಇವರದ್ದು. ಇವರದ್ದೇ ಹೆಸರಿನಲ್ಲಿ ಲವ್ ಯೂ ರಚ್ಚು ಸಿನಿಮಾ ಕೂಡ ಮೂಡಿ ಬಂದಿತ್ತು. ಈ ಸಿನಿಮಾದಲ್ಲಿ ರಚಿತಾ ಅವರೇ ನಾಯಕಿಯಾಗಿ ನಟಿಸಿದ್ದರು. ಸಿನಿಮಾಗೆ ಪ್ರೇಕ್ಷಕರು ಅತ್ಯುತ್ತಮ ಪ್ರತಿಕ್ರಿಯೆ ಕೂಡ ನೀಡಿದ್ದರು. ಇದನ್ನೂ ಓದಿ:ಆರು ವರ್ಷಗಳ ಬಳಿಕ ಜೀ ಪಿಕ್ಚರ್ಸ್ ನಲ್ಲಿ ಸೂಪರ್ ಹಿಟ್ ‘ರಾಮಾ ರಾಮಾ ರೇ’ ಸಿನಿಮಾ

    ಉಪೇಂದ್ರ (Upendra) ನಟನೆಯ ಐ ಲವ್ ಯೂ, ಅಜಯ್ ರಾವ್ (Ajay Rao) ಜೊತೆ ಲವ್ ಯೂ ರಚ್ಚು ಸಿನಿಮಾಗಳಲ್ಲಿ ಸಖತ್ ಗ್ಲಾಮರೆಸ್ ಆಗಿ ಕಾಣಿಸಿಕೊಂಡಿದ್ದ ಅವರು, ಈ ಕಾರಣಕ್ಕಾಗಿ ಸುದ್ದಿ ಕೂಡ ಆಗಿದ್ದರು. ಅದರಲ್ಲೂ ಐ ಲವ್ ಯೂ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಪಾತ್ರ ನಿರ್ವಹಿಸಿ ಕಣ್ಣೀರಿಟ್ಟಿದ್ದರು. ಈ ರೀತಿಯ ಪಾತ್ರಗಳನ್ನು ನಾನು ಮಾಡಲಾರೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

    ಮೊನ್ನೆಯಷ್ಟೇ ಇವರ ನಟನೆಯ ಮಾನ್ಸೂನ್ ರಾಗ (Monsoon Raga) ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಅವರು ವೇಶ್ಯೆಯ ಪಾತ್ರವನ್ನು ಮಾಡಿದ್ದಾರೆ. ಈ ಪಾತ್ರದ ಅಭಿನಯಕ್ಕಾಗಿ ನೋಡುಗರಿಗೆ ಮೆಚ್ಚುಗೆ ಕೂಡ ಆಯಿತು. ಈ ಸಿನಿಮಾ ಮೂಲಕ ಎಂತಹ ಸವಾಲಿನ ಪಾತ್ರವಿದ್ದರೂ ನಾನು ಮಾಡಲು ಸಿದ್ಧ ಎನ್ನುವುದನ್ನು ಅವರು ನಿರೂಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ರಚಿತಾ ರಾಮ್: ಸವಾಲಿನ ಪಾತ್ರವಾಗಿತ್ತು ಎಂದ ನಟಿ

    ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ರಚಿತಾ ರಾಮ್: ಸವಾಲಿನ ಪಾತ್ರವಾಗಿತ್ತು ಎಂದ ನಟಿ

    ಡಾಲಿ ಧನಂಜಯ, ರಚಿತಾ ರಾಮ್ ನಟನೆಯ ‘ಮಾನ್ಸೂನ್ ರಾಗ’ ಸಿನಿಮಾ ಟ್ರೈಲರ್‌ ರಿಲೀಸ್ ಆಗುತ್ತಿದೆ ಎಂದು ಹೇಳಲು ಈ ಚಿತ್ರತಂಡ ಸಣ್ಣ ಟೀಸರ್ ರಿಲೀಸ್ ಮಾಡಿತ್ತು, ಆ ಟೀಸರ್‌ಗೆ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿದ್ದು, ಈಗ ಸಿನಿಮಾ ನೋಡಲು ಪ್ರೇರೇಪಿಸಿದೆ. ಬಹುನಿರೀಕ್ಷಿತ ‘ಮಾನ್ಸೂನ್ ರಾಗ’ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ರಾಜ್ಯಾದ್ಯಂತ ಆಗಸ್ಟ್ 19ಕ್ಕೆ ಸಂಪೂರ್ಣ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗ್ತಿದೆ. ಅಂದಹಾಗೆ ಇದು ಭಾವನಾತ್ಮಕವಾಗಿರುವ ಮ್ಯೂಸಿಕಲ್ ಸಿನಿಮಾವಂತೆ. ‘ನಟ ರಾಕ್ಷಸ’ ಎಂದೇ ಖ್ಯಾತಿ ಪಡೆದಿರುವ ನಟ ಡಾಲಿ ಧನಂಜಯ, ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಅವರು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿರುವುದು ವಿಶೇಷ.

    ಟ್ರೈಲರ್ ರಿಲೀಸ್ ನಂತರ ಈ ಚಿತ್ರದ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ರಚಿತಾ ರಾಮ್ “ಡಾಲಿ ಧನಂಜಯ ಅವರು ನಿಜಕ್ಕೂ ನಟ ರಾಕ್ಷಸ. ಅವರ ಜೊತೆ ನಟಿಸೋದು ನನಗೂ ಚಾಲೆಂಜಿಂಗ್ ಆಗಿತ್ತು, ಈ ಚಿತ್ರದ ಸಂಭಾಷಣೆ ತುಂಬ ಚೆನ್ನಾಗಿದೆ. ಇಡೀ ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ನಾನು ಈ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಲೈಂಗಿಕ ಕಾರ್ಯಕರ್ತೆ ಪಾತ್ರವನ್ನು ತುಂಬ ನೀಟ್ ಆಗಿ ಚೆನ್ನಾಗಿ ತೋರಿಸಿದ್ದಾರೆ. ಪುಷ್ಪಕ ವಿಮಾನ ಸಿನಿಮಾದಲ್ಲಿ ನಾನು ನಟಿಸಿದ್ದೆ, ಆ ಚಿತ್ರದ ಕೆಲಸ ಹೇಗೆ ಅಂತ ಗೊತ್ತಿದೆ. ಅದೇ ತಂಡ ಈ ಸಿನಿಮಾ ಮಾಡಿದೆ, ಮತ್ತೆ ಅವರ ಜೊತೆ ಕೆಲಸ ಮಾಡಿದ್ದು ತುಂಬ ಖುಷಿ ಕೊಟ್ಟಿದೆ. ಮಾನ್ಸೂನ್ ಸಮಯದಲ್ಲಿ ನಮ್ಮ ಈ ಸಿನಿಮಾ ಶೂಟಿಂಗ್ ಮಾಡಿದ್ದೆವು, ಆದರೆ ಮಾನ್ಸೂನ್ ಸಮಯದಲ್ಲಿ ರಿಲೀಸ್ ಆಗತ್ತೆ ಅಂತ ಗೊತ್ತಿರಲಿಲ್ಲ. ಈ ಸಿನಿಮಾ ಹಾಡುಗಳನ್ನು ಕೇಳಿದರೆ ಮೈ ರೋಮಾಂಚನವಾಗುವುದು. ಇದರಲ್ಲಿ ಪ್ರತಿ ಪಾತ್ರವನ್ನು ಕೂಡ ತುಂಬ ಅದ್ಭುತವಾಗಿ ತೋರಿಸಿದ್ದಾರೆ” ಎಂದಿದ್ದಾರೆ.  ಇದನ್ನೂ ಓದಿ: ನವೆಂಬರ್ 1ಕ್ಕೆ ಪುನೀತ್ ರಾಜ್ ಕುಮಾರ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ

    ಡಾಲಿ ಧನಂಜಯ ಅವರು, “ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ರಚಿತಾ ರಾಮ್ ಜೊತೆ ಮೊದಲ ಬಾರಿಗೆ ನಟಿಸಿದ್ದೇನೆ. ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ಇರುವ ನಟಿ ರಚಿತಾ ಅವರು ನನ್ನ ಜೊತೆ ಅದ್ಭುತವಾಗಿ ಆರಾಮಾಗಿ ನಟಿಸಿದ್ದಾರೆ. ಸುಹಾಸಿನಿ, ಯಶಾ ಶಿವಕುಮಾರ್ ಅವರು ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ದಯವಿಟ್ಟು ನೋಡಿ. ಇಲ್ಲಿ ಮುಜುಗರ ಆಗುವಂತಹ ದೃಶ್ಯ ಇಲ್ಲ, ಇಡೀ ಕುಟುಂಬ ಕೂತು ಈ ಸಿನಿಮಾ ನೋಡಬಹುದು, ಇಡೀ ರಾತ್ರಿಯೆಲ್ಲ ಮಳೆಯಲ್ಲಿ ಸಿನಿಮಾ ಶೂಟಿಂಗ್ ಮಾಡಿದ್ದೇವೆ. ರಚಿತಾ ರಾಮ್ ಕಣ್ಣುಗಳಲ್ಲಿ ವಿಷಯ ಇದೆ ಅಂತ ನಾವು ಮಾತನಾಡಿಕೊಳ್ಳುತ್ತಿರುತ್ತೇವೆ. ಆ ಬಗ್ಗೆಯೂ ಸಿನಿಮಾದಲ್ಲಿದೆ” ಎಂದಿದ್ದಾರೆ.

    “ಇದುವರೆಗೂ ನೋಡಿರದ ಪಾತ್ರದಲ್ಲಿ ರಚಿತಾ ರಾಮ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೊಂದು ದೃಶ್ಯದಲ್ಲಿ ಧನಂಜಯ, ರಚಿತಾ ರಾಮ್ ಅವರು ಚಾಲೆಂಜಿಂಗ್ ಆಗಿ ನಟಿಸಿದ್ದಾರೆ.ಅಚ್ಯುತ್ ಕುಮಾರ್ ಅವರು ಸೀರಿಯಸ್ ಆಗಿದ್ದೂ ನಗಿಸುತ್ತಾರೆ. ಸುಹಾಸಿನಿ, ಅಚ್ಯುತ್ ಕುಮಾರ್ ಅವರ ಕಾಂಬಿನೇಶನ್ ಅದ್ಭುತವಾಗಿ ಬಂದಿದೆ. ಯಶಾ ಶಿವಕುಮಾರ್ ಅವರ ಡ್ಯಾನ್ಸ್ ಹೇಗಿದೆ ಎಂದು ‘ರಾಗ ಸುಧಾ’ ಎಂಬ ಹಾಡಲ್ಲಿ ನೋಡಿದ್ದೀರಿ, ಅಭಿನಯವನ್ನು ನೀವು ಸಿನಿಮಾದಲ್ಲಿ ನೋಡಬೇಕು” ಎಂದಿದ್ದಾರೆ ನಿರ್ದೇಶಕ ಎಸ್ ರವೀಂದ್ರನಾಥ್

    “80% ಸಿನಿಮಾ ಮಳೆಯಲ್ಲಿ ಶೂಟಿಂಗ್ ಮಾಡಲಾಗಿದೆ. ನಾವು ಸುಮ್ಮನೆ ಕಲಾವಿದರನ್ನು ಕರೆದುಕೊಂಡು ಸಿನಿಮಾ ಮಾಡೋದಿಲ್ಲ, ಸಿನಿಮಾ ಕಂಟೆಂಟ್‌ ಜನರಿಗೆ ರೀಚ್ ಆಗಬೇಕು, ಪಾತ್ರಕ್ಕೆ ಹೊಂದಿಕೆಯಾಗಬೇಕು ಎಂದು ಯಾರನ್ನು ಬೇಕಾದರೂ ಕಾಂಟ್ಯಾಕ್ಟ್ ಮಾಡಿ ಪಾತ್ರ ಮಾಡಿಸಲು ಒಪ್ಪಿಸುತ್ತೇವೆ. ಕೊರೊನಾ ಸಮಯದಲ್ಲಿ ಕಾಳಜಿಯಿಂದ ಈ ಚಿತ್ರ ಶೂಟಿಂಗ್ ಮಾಡಿದ್ದೇವೆ. ಇಡೀ ಸಿನಿಮಾ ತುಂಬ ಚೆನ್ನಾಗಿ ಬಂದಿದೆ” ಎಂದಿದ್ದಾರೆ ನಿರ್ಮಾಪಕ ವಿಖ್ಯಾತ್

    Live Tv
    [brid partner=56869869 player=32851 video=960834 autoplay=true]

  • ಡಾಲಿ ಧನಂಜಯ್ ವರ್ಸಸ್ ಗೋಲ್ಡನ್ ಸ್ಟಾರ್ ಗಣೇಶ್

    ಡಾಲಿ ಧನಂಜಯ್ ವರ್ಸಸ್ ಗೋಲ್ಡನ್ ಸ್ಟಾರ್ ಗಣೇಶ್

    ಭಾರೀ ಬಜೆಟ್ ಮತ್ತು ಸ್ಟಾರ್ ನಟರ ಚಿತ್ರಗಳು ಒಂದೇ ದಿನಕ್ಕೆ ತೆರೆಗೆ ಬಂದಾಗ, ಅಲ್ಲೊಂದು ಗೊಂದಲ ಶುರುವಾಗುತ್ತದೆ. ಅದರಲ್ಲೂ ಎರಡೂ ಚಿತ್ರಗಳು ನಿರೀಕ್ಷೆ ಮೂಡಿಸಿದಾಗ ನೋಡುಗರಿಗೆ ಇನ್ನೂ ತಿಕ್ಕಾಟವಾಗುತ್ತದೆ. ಇಂಥದ್ದೊಂದು ಗೊಂದಲಕ್ಕೆ ಕಾರಣರಾಗಿದ್ದಾರೆ ಡಾಲಿ ಧನಂಜಯ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

    ನಿನ್ನೆಯಷ್ಟೇ ಡಾಲಿ ಧನಂಜಯ್ ನಟನೆಯ ‘ಮನ್ಸೂನ್ ರಾಗ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿತ್ತು. ಆಗಸ್ಟ್ 12 ರಂದು ಥಿಯೇಟರ್ ಗೆ ಬರುವುದಾಗಿ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿತ್ತು. ಇದೀಗ ಗಣೇಶ್ ನಟನೆಯ ‘ಗಾಳಿಪಟ 2’ ಸಿನಿಮಾ ಟೀಮ್ ಕೂಡ ಅದೇ ದಿನದಂದು  ತಮ್ಮ ಚಿತ್ರವನ್ನು ರಿಲೀಸ್ ಮಾಡುವುದಾಗಿ ಘೋಷಿಸಿದೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ಗಾಳಿಪಟ 2 ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದು, ಗಣೇಶ್, ದಿಗಂತ್ ಮತ್ತು ಲೂಸಿಯಾ ಪವನ್ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಿರಿಯ ನಟ ಅನಂತ್ ನಾಗ್ ಕೂಡ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ರಮೇಶ್ ರೆಡ್ಡಿ ಅವರ ಅದ್ದೂರಿ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದೆ. ಹೀಗಾಗಿ ಈ ಚಿತ್ರದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದನ್ನೂ ಓದಿ : ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ ಇನ್ನಿಲ್ಲ

    ಡಾಲಿ ಧನಂಜಯ್ ಈಗಾಗಲೇ ಗೆಲುವಿನ ಕುದುರೆ ಏರಿ ಕೂತಿದ್ದಾರೆ. ಬಡವ ರಾಸ್ಕಲ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಕೂಡ ಮಾಡಿದೆ. ಡಾಲಿ ಮತ್ತು ರಚಿತಾ ರಾಮ್ ಕಾಂಬಿನೇಷನ್ ನ ‘ಮನ್ಸೂನ್ ರಾಗ’ ಚಿತ್ರದ ಟ್ರೇಲರ್ ಕೂಡ ಈಗಾಗಲೇ ಸದ್ದು ಮಾಡಿದೆ. ಒಳ್ಳೆಯ ಮೇಕಿಂಗ್ ಇರುವಂತಹ ಸಿನಿಮಾ ಎಂದು ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಈ ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದೆ.

    ಎರಡು ಚಿತ್ರಗಳು ಹೀಗೆ ಒಟ್ಟೊಟ್ಟಿಗೆ ಬಂದಾಗ, ಯಾವ ಸಿನಿಮಾ ನೋಡಬೇಕು, ಯಾವುದನ್ನು ಬಿಡಬೇಕು ಎನ್ನುವ ಪ್ರಶ್ನೆ ಮೂಡುವುದು ಸಹಜ. ಅಲ್ಲದೇ, ಈ ಸಂದರ್ಭದಲ್ಲಿ ಬೇರೆ ನಟರ ಅಥವಾ ಭಾಷೆಯ ಸಿನಿಮಾಗಳು ಬಂದಾಗ ಥಿಯೇಟರ್ ಕೊರತೆಯೂ ಎದುರಾಗಬಹುದು. ಇಂತಹ ಸಮಸ್ಯೆಗಳಿಂದ ದಾಟಿಕೊಳ್ಳುವಂತಹ ವ್ಯವಸ್ಥೆಯು ತುರ್ತಾಗಿ ಸಿನಿಮಾ ರಂಗದಲ್ಲಿ ಆಗಬೇಕಿದೆ. ಎರಡೂ ಚಿತ್ರಗಳಿಗೂ ನಿರೀಕ್ಷೆ ಇರುವುದರಿಂದ ಪ್ರೇಕ್ಷಕ ಯಾರ ಕೈ ಹಿಡಿಯುತ್ತಾನೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.