Tag: monsoon

  • ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಪ್ರವಾಹ – 12 ಮಂದಿ ಸಾವು, ಪ್ರಯಾಗ್‌ರಾಜ್‌ ಬಹುತೇಕ ಮುಳುಗಡೆ

    ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಪ್ರವಾಹ – 12 ಮಂದಿ ಸಾವು, ಪ್ರಯಾಗ್‌ರಾಜ್‌ ಬಹುತೇಕ ಮುಳುಗಡೆ

    ಲಕ್ನೋ: ಮುಂಗಾರು (Monsoon) ಚುರುಕುಗೊಂಡಿದ್ದು, ಹವಾಮಾನ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಉತ್ತರ ಪ್ರದೇಶದ (Uttar Pradesh) ಸೇರಿದಂತೆ ದೇಶದ ವಿವಿಧೆಡೆ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಯುಪಿಯ 17 ಜಿಲ್ಲೆಗಳಲ್ಲಿ ಪ್ರವಾಹ (Flood) ಪರಿಸ್ಥಿತಿ ಉಂಟಾಗಿದ್ದು, ಈವರೆಗೆ 12 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

    ಮುಖ್ಯವಾಗಿ ಸಂಗಮ್‌ನಗರ ಎಂದೇ ಕರೆಯಲ್ಪಡುವ ಹಾಗೂ ಮಹಾ ಕುಂಭಮೇಳ ನಡೆದ ಪ್ರಯಾಗ್‌ರಾಜ್‌ನ (Prayagraj) ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ. ಅಲ್ಲದೇ ವಾರಣಾಸಿ ಸೇರಿದಂತೆ ಅನೇಕ ನಗರಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಇದನ್ನೂ ಓದಿ: ಕೆಲವರು ಅಧಿಕಾರ ಹಂಚಿಕೊಳ್ಳಲು ಒಪ್ಪಲ್ಲ – ಸಿದ್ದರಾಮಯ್ಯಗೆ ಟಾಂಗ್‌ ಕೊಟ್ರಾ ಡಿಕೆಶಿ?

    17 ಜಿಲ್ಲೆಗಳಲ್ಲಿ ಪ್ರವಾಹ
    ಭಾರೀ ಮಳೆಯಿಂದಾಗಿ ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಗಂಗಾ ನದಿ ತಟದಲ್ಲಿರುವ ಪ್ರದೇಶಗಳು ಮುಳುಗಡೆಯಾಗುತ್ತಿವೆ. ಪ್ರಯಾಗ್‌ರಾಜ್ ನಗರದ ಸಲೋರಿ, ರಾಜಪುರ, ದಾರಗಂಜ್, ಬಘಾಡಾ ಮುಂತಾದ ಪ್ರದೇಶಗಳು ಮುಳುಗಿಹೋಗಿವೆ. ಅದೇ ಸಮಯದಲ್ಲಿ, ಮಿರ್ಜಾಪುರ, ವಾರಣಾಸಿ, ಅಯೋಧ್ಯೆ, ಚಂದೌಲಿ, ಬಲ್ಲಿಯಾದ ಪರಿಸ್ಥಿತಿಯೂ ತೀರಾ ಹದಗೆಟ್ಟಿದೆ. ಅಲ್ಲದೇ ಲಕ್ನೋ, ರಾಯ್ ಬರೇಲಿ, ಅಮೇಥಿ, ಸುಲ್ತಾನ್ಪುರ್, ಬಹ್ರೈಚ್ ಮತ್ತು ಅಂಬೇಡ್ಕರ್ ನಗರದಲ್ಲೂ ಭಾರೀ ಮಳೆ ಮುಂದುವರಿದಿದ್ದು, ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಗ್ರೌಂಡ್‌ ಪೆನೆಟ್ರೇಟಿಂಗ್ ರೇಡಾರ್‌ನಿಂದ ಅಸ್ಥಿಪಂಜರ ಪತ್ತೆ ಕಾರ್ಯ ನಡೆಸಿ – ಎಸ್‌ಐಟಿಗೆ ದೂರುದಾರ ಹೊಸ ರಿಕ್ವೆಸ್ಟ್‌

    ಪ್ರಯಾಗ್‌ರಾಜ್‌ನಲ್ಲಿ ಹದಗೆಟ್ಟ ಪರಿಸ್ಥಿತಿ
    ಪ್ರಯಾಗ್‌ರಾಜ್‌ನಲ್ಲಿ ಗಂಗಾ-ಯಮುನಾ ಸಂಗಮದ ನಂತರ ಬರುವ ಪ್ರದೇಶಗಳು ಕೆಟ್ಟ ಸ್ಥಿತಿಯಲ್ಲಿವೆ. ಉಕ್ಕಿದ ಗಂಗೆ, ಯಮುನೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ NDRF, SDRF ತಂಡಗಳು ಈಗಾಗಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಉಳಿದಂತೆ ಜನರು ಸುರಕ್ಷಿತ ಸ್ಥಳಗಳಲ್ಲಿರುವಂತೆ ಸರ್ಕಾರ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೈದಿ ನಂ. 15528 – ಪ್ರಜ್ವಲ್‍ಗೆ 524 ರೂ. ದಿನಗೂಲಿ, ಕೆಲಸವೇನು ಗೊತ್ತಾ?

  • ನೀ ʻಅಮೃತʼಧಾರೆ – ಬಾಡಿದ ಹೃದಯಕುಂಡದಲ್ಲಿ ಒಲವರಳಿಸಿದ ಮಳೆ!

    ನೀ ʻಅಮೃತʼಧಾರೆ – ಬಾಡಿದ ಹೃದಯಕುಂಡದಲ್ಲಿ ಒಲವರಳಿಸಿದ ಮಳೆ!

    ಳೆ (Rain), ಮಣ್ಣು ಹಾಗೂ ಮನಸ್ಸು ಎರಡಕ್ಕೂ ಜೀವ ಕೊಡುವ ಶಕ್ತಿ! ಒಂದು ವರ್ಷ ಮಳೆಯೇ ಇಲ್ಲದಿದ್ದರೆ, ಆ ವರ್ಷ ಭೂಮಿ ಅದೆಷ್ಟು ಬರಡಾಗುತ್ತದೆ. ಅದೆಷ್ಟು ಜೀವಗಳು ನರಳಾಡುತ್ತವೆ ಅಲ್ವಾ? ಭೂಮಿಗೆ ಜೀವ ಬರಬೇಕಾದರೆ ಹೇಗೆ ಮಳೆ ಬೇಕೋ, ಹಾಗೇ ಮನಸ್ಸು ಸದಾ ಹಸಿರಾಗಿರಬೇಕಾದರೆ ಅಲ್ಲೊಂದು ಮಳೆಯಾಗಬೇಕು! ಮನಸ್ಸಿಗೆ ಮಳೆ ಬರದಿದ್ದರೆ ಅದು ಬಹಳಷ್ಟು ನರಳಾಡುತ್ತದೆ.. ಬರಡಾಗಿ, ಕಲ್ಲಾಗಿ, ಸತ್ತೇ ಹೋಗುತ್ತದೆ!

    ಅದಕ್ಕೆ ಭೂಮಿ (Earth) ಬರಡಾಗಬಾರದು ಎಂದೇ ನಮ್ಮ ಪೂರ್ವಜರು ಮಳೆ ಬರದಿದ್ದರೆ, ಅದೆಷ್ಟೋ ಪೂಜೆ ಪುನಸ್ಕಾರಗಳನ್ನು ಮಾಡಿ ಮಳೆಗಾಗಿ ಹಂಬಲಿಸುತ್ತಿದ್ದರು. ಇನ್ನೂ ಕೆಲವೆಡೆ ಅಂತ್ರೂ ಮಳೆಗಾಗಿ ಕಪ್ಪೆಗಳ ಮದುವೆ, ನಾಯಿಗಳಿಗೆ ಮದುವೆ ಅಂತ ಮಾಡ್ತಿರ‍್ತಾರೆ. ಇದೆಲ್ಲ ಆಗಾಗ ಸುದ್ದಿ ಆಗ್ತಾನೆ ಇರುತ್ತೆ.. ನೋಡಿ ನಂಬಿಕೆ ಹೇಗೆಲ್ಲ ಇದೆ..! ಏನಾದ್ರೂ ಮಾಡಿ ಮಳೆ ಬರೋ ಹಾಗೆ ಮಾಡ್ಬೇಕು ಅಷ್ಟೇ..! ಮಳೆ ಅಷ್ಟೊಂದು ಮುಖ್ಯ.. ಹೊಸ ಚಿಗುರಿಗೆ, ಹೊಸ ಜೀವಕ್ಕೆ.. ಹೊಸ ಜೀವನಕ್ಕೆ..! 

    ಹೌದು ಹೊಸ ಜೀವಕ್ಕೂ ಬೇಕು, ಹಾಗೂ ಹೊಸ ಜೀವನಕ್ಕೂ ಮಳೆ ಬೇಕು! ಮಳೆ ಹಳೆಯ ಗಾಯಗಳ ಮೇಲೆ ತಂಪು ಸುರಿದು, ಕೊಳೆಯ ಕಿತ್ತು ಕೊಚ್ಚಿಕೊಂಡೊಯ್ಯುವಷ್ಟು ಬರಬೇಕು. ನೋಡಿ ಯಾವ ಪೂಜೆ ಮಾಡ್ಬೇಕು.. ಯಾವ ಮೇಘ ರಾಗ ಹಾಡ್ಬೇಕು ಅಂತ..! ಎಷ್ಟು ದಿನ ಅಂತ `ತುಂಬಾ ನಂಬಿದ್ದೆ, ಸಾಕಷ್ಟು ನೋವಿನ ನೆನಪುಗಳನ್ನ ಕೊಟ್ಟು ಹೋಗ್ಬಿಟ್ಲು/ ಹೋಗ್ಬಿಟ್ಟ’ ಅಂತ ಹೇಳಿಕೊಳ್ತಾ ಇರ್ತೀರಿ? ಅದೇ ನೆನಪಲ್ಲಿ ಬರಡಾಗಿ ಹೋಗ್ತೀರಿ? ಮಳೆಯ ಮೋಡಗಳ ಕಡೆ ಮುಖ ಮಾಡಿ ಬದುಕಿನ ಕಡೆ ಕರೆಯಿರಿ…! 

    ಹೀಗೆ ಕರೆದ ತಕ್ಷಣ ಮಳೆ ಬಂದು ಎಲ್ಲಾ ಕೊಚ್ಚಿಕೊಂಡು ಹೋಗ್ಬಿಡುತ್ತಾ..? ಅಂತ ನೀವು ಪ್ರಶ್ನೆ ಮಾಡ್ಬಹುದು.. ಹಾಗಾದ್ರೆ ಈಗ ನೀವು ಆ ಹಳೆಯ ನೆನಪುಗಳನ್ನ ಕರೆದು ಕರೆದು ತಂದು ಕೂರಿಸಿಕೊಂಡಿಲ್ವಾ? ಹಾಗಿದ್ದಾಗ ಹೊಸ ಹುಟ್ಟು ಕೊಡುವ ಮಳೆ ಯಾಕೆ ಬರಬಾರದು? ಯಾಕೆ ನಾವು ಕರೆಯೋ ಪ್ರಯತ್ನ ಮಾಡ್ಬಾರದು? ಅದು ಯಾವ ಮಾರ್ಗದ್ದೋ ನನಗೆ ಗೊತ್ತಿಲ್ಲ. ಆದರೆ ಮಳೆಯಂತೂ ಬದುಕಿಗೆ ಬೇಕು, ಅದು ಸಾಧನೆಯದ್ದೋ? ಬಹುತೇಕ ಸೆಟ್ಲ್ ಆಗಿ ಹೊಸ ಪ್ರೇಮದ್ದೋ.. ಇನ್ಯಾವುದೋ.. ನಮ್ಮದೇ ಆಯ್ಕೆ.

    ಅಂತಹ ಮಳೆಯ ಕರೆಗೆ ನನಗೆ ಸಿಕ್ಕಿದ್ದು.. ಮರುಜೀವ ಕೊಟ್ಟ ಒಲವಿನ ಮಳೆ..! ನಾನಗೇ ಹುಡುಕಿಕೊಂಡು ಹೋದ್ನಾ?.. ಅದಾಗಿಯೇ ಹೃದಯದ ಮೇಲೆ ಸುರಿದಿದ್ದಾ? ಎಲ್ಲಾ ಅಸ್ಪಷ್ಟ.. ಮಳೆ ಮಾತ್ರ (Love) ಪ್ರೇಮದ್ದೇ.. ಹೊಸ ಹುಟ್ಟಿಗೆ ಇಷ್ಟು ಸಾಕಾಯ್ತು! ಈ ಸಾಲುಗಳನ್ನು ಬರೆಯೋದಕ್ಕೆ ಅದೇ ಮಳೆ ಕಾರಣ ನೋಡಿ. ಪ್ರೇಮವೆಂದರೆ ಹಾಗೆ ಒಮ್ಮೆ ಮಳೆ, ಬಿಸಿಲು, ಮತ್ತೊಮ್ಮೆ ಹೂದೋಟ! ಒಟ್ಟಾರೆ ಸಂಭ್ರಮ! ಅದಕ್ಕೆ ತೆರೆದುಕೊಳ್ಳುವ ಪುಟ್ಟ ಅಂಗಳ ನಿರ್ಮಿಸಿಕೊಳ್ಳುವುದಷ್ಟೇ ನಮ್ಮ ಕೆಲಸ.. 

    ಅಂತಹ ಸ್ವಚ್ಛ ಪುಟ್ಟ ಅಂಗಳ ತೆರೆದಿಟ್ಟು ಮಳೆಗಾಗಿ ಹಂಬಲಿಸಿದರೆ ಸಾಕು… ಅದು ನಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತದೆ. ಆ ಮಳೆಯ ಒಲವಿಗೆ ಅಂಗಳದ ತುಂಬೆಲ್ಲ ಹೂ ಅರಳಿ ಸಂಭ್ರಮಿಸಿ, ನಮ್ಮನ್ನು ಘಮದ ಹಾದಿಗೆ ಕೊಂಡೊಯ್ಯುವ ಶಕ್ತಿ ಖಂಡಿತಾ ಇದೆ. ಅಂತಹ ಒಲವಿನ ಮಳೆಗೆ ನನ್ನ ಹೃದಯ ಸಾಕ್ಷಿಯಾಗಿದೆ! ಹಾಗೇ ಬಂದ ಮಳೆಗೆ ಪ್ರೇಮ ನಕ್ಷತ್ರ..! ಮರುಜೀವ ಕೊಟ್ಟ ಮಳೆಯ ಹೆಸರು ʻಅಮೃತʼ..! ರಾಕ್ಷಸ ನೆನಪುಗಳ ಅಲೆಯಲ್ಲಿ ಅದ್ದಿ ಹೋಗಿ ಇನ್ನೇನೂ ಬದುಕಿಲ್ಲ, ಎಂದಾಗ ಬದುಕು ಕೊಟ್ಟ ಒಲವಿಗೆ ಇದೇ ಸರಿಯಾದ ಹೆಸರು..! 

    ಈ ಮಳೆ ನಿರಂತರವಾಗಿ ಬಾಳಿನ ತುಂಬಾ ಸುರಿಯಲಿ.. ಹೊಸ ನೀರಿನ ಅಬ್ಬರಕ್ಕೆ ಹಳೆಯ ನೋವುಗಳು ಕೆರೆಕಟ್ಟೆಯಂತೆ ಒಡೆದು ಕೊಚ್ಚಿಹೋಗಲಿ.. ಇಂತಹ ಒಲವು ಎದುರಾಗುವ ಮಳೆಯ ದಾರಿಗಾಗಿ ನಾನು ಕಾಯುತ್ತ ಅದೆಷ್ಟು ಸಮಯ ಎದೆಯಂಗಳದ ಮೂಲೆಯಲ್ಲಿ ಕುಳಿತು ಒಬ್ಬೊಂಟಿ ಆಗ್ಬಿಟ್ಟೆ ಅಂದ್ಕೊಂಡಿದ್ದೆ. ಆದರೆ ಅದೆಲ್ಲದ್ದನ್ನು ಮೀರಿದ ಬಂಧವೊಂದನ್ನು ಹುಟ್ಟಿಸಿದ್ದು ʻಈ ವರ್ಷದ ಕಪ್ಪು ಮೋಡಗಳುʼ  ಈ ಮಳೆಗಾಲಕ್ಕೆ.. ಮನಕ್ಕಿಳಿದ ಒಲವ ಹನಿಗಳಿಗೆ ನನ್ನ ಥ್ಯಾಂಕ್ಸ್‌..! 

    ಯಾರೆಲ್ಲ ಒಲವಿನ ಮಳೆಗಾಗಿ ಕಾದು ಕುಳಿತಿದ್ದೀರೋ ಅವರಿಗೆಲ್ಲ ಈ ಮಳೆಯ ಕೃಪೆ ಇರಲಿ..! ಉಳಿದ ನೋವಿನ ಬಿಸಿಲ ಝಳದ ಮೇಲೆ ಸುರಿದು.. ಒಂದು ಸುಂದರವಾದ ಕಾಮನಬಿಲ್ಲು ಕಟ್ಟಲಿ… ಕನಸು ಬಣ್ಣವಾಗಲಿ!!

    – ಗೋಪಾಲಕೃಷ್ಣ

  • Rain Alert | ಕರ್ನಾಟಕದ ಕರಾವಳಿಯಲ್ಲಿ ಜೂನ್‌ 26ರ ವರೆಗೂ ಭಾರೀ ಮಳೆ

    Rain Alert | ಕರ್ನಾಟಕದ ಕರಾವಳಿಯಲ್ಲಿ ಜೂನ್‌ 26ರ ವರೆಗೂ ಭಾರೀ ಮಳೆ

    ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಮಳೆಯ (Monsoon Rain) ಆರ್ಭಟ ಮುಂದುವರಿಯಲಿದೆ. ಜೂನ್‌ 26ರ ವರೆಗೆ ಕರಾವಳಿ (Karavali) ಭಾಗದಲ್ಲಿ ಭಾರೀ ಮಳೆ ಆಗಲಿದ್ದು, ಉಳಿದೆಲ್ಲಾ ಕಡೆ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ (Dakshina Kannada), ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದ್ದು, ಜೂನ್ 26ರ ವರೆಗೂ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಇದನ್ನೂ ಓದಿ: ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಪೊಲೀಸರ ದಿಢೀರ್‌ ದಾಳಿ

    ಇನ್ನುಳಿದಂತೆ ವಿಜಯನಗರ, ತುಮಕೂರು, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಳ್ಳಾರಿಯಲ್ಲಿ ಒಣಹವೆ ಇರಲಿದೆ. ಉಪ್ಪಿನಂಗಡಿ, ಗೇರುಸೊಪ್ಪ, ಮಂಕಿ, ಯಲ್ಲಾಪುರ, ಆಗುಂಬೆ, ಕೊಟ್ಟಿಗೆಹಾರ, ಕಮ್ಮರಡಿ, ಭಾಗಮಂಡಲ, ಹುಂಚದಕಟ್ಟೆ, ಶಿರಾಲಿ, ಕದ್ರಾ, ಸುಳ್ಯ, ಕುಮಟಾ, ಧರ್ಮಸ್ಥಳ, ಬನವಾಸಿ, ಜೋಯ್ಡಾ, ಬೆಳ್ತಂಗಡಿ, ಹೊನ್ನಾವರ, ತ್ಯಾಗರ್ತಿ, ಖಾನಾಪುರ್, ಗುತ್ತಲ್, ಆನವಟ್ಟಿ, ಕಳಸ, ವಿರಾಜಪೇಟೆ, ಹೊಸಕೋಟೆ, ಅಂಕೋಲಾ, ಪುತ್ತೂರ್, ಮೂಡುಬಿದಿರೆ, ಬಂಟವಾಳ, ಸಿದ್ದಾಪುರ, ಮಾಣಿ, ಕಾರವಾರ, ಮುಂಡಗೋಡಿನಲ್ಲಿ ಸಾಧಾರಣ ಮಲೆಯಾಗಲಿದ್ದು, ಉಳಿದೆಡೆ ಒಣಹವೆ ಮುಂದುವರಿಯಲಿದೆ. ಇದನ್ನೂ ಓದಿ: ಹುಲಿ ದಾಳಿಗೆ ಕುರಿಗಾಹಿ ಮಹಿಳೆ ಬಲಿ- 9 ದಿನಕ್ಕೆ ಜಿಲ್ಲೆಯಲ್ಲಿ 2ನೇ ಸಾವು

    3

  • ಮುಂಬೈನಲ್ಲಿ 107 ವರ್ಷದ ದಾಖಲೆ ಮುರಿದ ಮಳೆ – 75 ವರ್ಷದಲ್ಲಿ ಮೊದಲ ಬಾರಿಗೆ ಅವಧಿ ಪೂರ್ವ ಮುಂಗಾರು

    ಮುಂಬೈನಲ್ಲಿ 107 ವರ್ಷದ ದಾಖಲೆ ಮುರಿದ ಮಳೆ – 75 ವರ್ಷದಲ್ಲಿ ಮೊದಲ ಬಾರಿಗೆ ಅವಧಿ ಪೂರ್ವ ಮುಂಗಾರು

    – ಮುಂಗಾರು ಪ್ರವೇಶದ ಮೊದಲ ದಿನವೇ ಹಲವೆಡೆ ಮಳೆಯ ಆರ್ಭಟ

    ಮುಂಬೈ: ಮುಂಗಾರು (Monsoon) ಅಬ್ಬರ ತೀವ್ರಗೊಂಡಿದ್ದು ಆರ್ಥಿಕ ರಾಜಧಾನಿ ಮುಂಬೈನಲ್ಲಿ ಭಾರೀ ಮಳೆಯಾಗಿದೆ (Mumbai Rains). ಅವಧಿಗೆ ಮುಂಚಿತವಾಗಿಯೇ ಮುಂಗಾರು ಪ್ರವೇಶಿಸಿದ್ದು, ಮೊದಲ ದಿನವೇ 107 ವರ್ಷಗಳಲ್ಲಿಯೇ ದಾಖಲೆಯೇ ದಾಖಲೆಯ ಪ್ರಮಾಣದ ಮಳೆಯಾಗಿದೆ.

    ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ಪ್ರಕಾರ, ಸಾಮಾನ್ಯ ಅವಧಿಗಿಂತ 16 ದಿನ ಮುಂಚಿತವಾಗಿಯೇ ನಗರಕ್ಕೆ ಮುಂಗಾರು ಎಂಟ್ರಿ ಕೊಟ್ಟಿದೆ. ಇದು ಕಳೆದ 75 ವರ್ಷಗಳಲ್ಲಿ ಅತ್ಯಂತ ವೇಗವಾಗಿ ನಗರಕ್ಕೆ ಎಂಟ್ರಿಕೊಟ್ಟ ಮುಂಗಾರು ಆಗಿದೆ. ಭಾರೀ ಮಳೆಯಾದ ಹಿನ್ನೆಲೆ ಅವಾಂತರಗಳು ಸೃಷ್ಟಿಯಾಗಿದೆ. ಮುಂಬೈನ ಕೆಇಎಂ ಆಸ್ಪತ್ರೆಗೆ ನೀರು ನುಗ್ಗಿ, ರಸ್ತೆಗಳೆಲ್ಲಾ ಜಲಾವೃತಗೊಂಡು ಜನರು ಸಂಕಷ್ಟಕ್ಕೀಡಾಗಿದ್ದಾರೆ.

    107 ವರ್ಷಗಳಲ್ಲೇ ದಾಖಲೆಯ ಮಳೆ
    ಮುಂಗಾರು ಪ್ರವೇಶದ ಮೊದಲ ದಿನವೇ ಮುಂಬೈ ನಗರಕ್ಕೆ 107 ವರ್ಷಗಳಲ್ಲೇ ದಾಖಲೆಯ ಮಳೆಯಾಗಿದೆ. ಇದಕ್ಕೂ ಮುನ್ನ 1918ರಲ್ಲಿ ಅತಿದೊಡ್ಡ ಮಳೆಯಾಗಿತ್ತು ಎಂದು ವರದಿಗಳಿಂದ ತಿಳಿದುಬಂದಿದೆ.

    ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ದಾಖಲೆಗಳ ಪ್ರಕಾರ, ದಕ್ಷಿಣ ಮುಂಬೈನ ಹಲವಾರು ಭಾಗಗಳಲ್ಲಿ ಭಾನುವಾರ ತಡರಾತ್ರಿಯಿಂದಲೇ ಮಳೆ ಶುರುವಾಗಿದೆ. ಸೋಮವಾರ ಬೆಳಗ್ಗೆ 11 ಗಂಟೆಯವರೆಗೆ 200 ಮಿಮೀ ಮಳೆಯಾಗಿದೆ. ಕೊಲಾಬಾ ವೀಕ್ಷಣಾಲಯದಲ್ಲಿ, ಮುಂಬೈ ತನ್ನ ಅತಿ ಹೆಚ್ಚು 295 ಮಿಮೀ ಮಳೆ ದಾಖಲಿಸಿದೆ. 1918ರಲ್ಲಿ 279.4 ಮಿಮೀ ಮಳೆಯಾಗಿದ್ದು, ಈವರೆಗಿನ ದಾಖಲೆಯಾಗಿತ್ತು. ಆದರಿಂದು 107 ವರ್ಷಗಳ ದಾಖಲೆಯನ್ನ ಮುರಿದಿದೆ.

    ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ?
    ಸೋಮವಾರ ಬೆಳಗ್ಗೆ 8:30 ರಿಂದ 11 ಗಂಟೆ ವರೆಗೆ ಕೊಲಾಬಾದಲ್ಲಿ 105.2 ಮಿಲಿಮೀಟರ್ ಮಳೆ, ಸಾಂತಾಕ್ರೂಜ್‌ನಲ್ಲಿ 55 ಮಿಮೀ, ಬಾಂದ್ರಾದಲ್ಲಿ 68.5 ಮಿಮೀ, ಜುಹು ವಿಮಾನ ನಿಲ್ದಾಣದಲ್ಲಿ 63.5 ಮಿಮೀ, ಚೆಂಬೂರ್‌ನಲ್ಲಿ 38.5 ಮಿಮೀ, ವಿಖ್ರೋಲಿನಲ್ಲಿ 37.5 ಮಿಮೀ, ಮಹಾಲಕ್ಷ್ಮಿಯಲ್ಲಿ 33.5 ಮಿಮೀ ಮತ್ತು ಸಿಯಾನ್‌ನಲ್ಲಿ 53.5 ಮಿಮೀ ಮಳೆಯಾಗಿದೆ.

    ಇನ್ನೂ ಮುಂಬೈನಲ್ಲಿ ಮುಂಜಾನೆಯಿಂದ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದೆ. ಮಳೆಯಿಂದಾಗಿ ಸಬ್ಅರ್ಬನ್ ರೈಲು ಸೇವೆಯಲ್ಲೂ ಕೂಡ ವ್ಯತ್ಯಯವಾಗಿದೆ. ಮುಂದಿನ ಮೂರು ದಿನಗಳಲ್ಲಿ ನೈಋತ್ಯ ಮಾನ್ಸೂನ್ ಮುಂಬೈ ಹಾಗೂ ಇತರ ಕೆಲವು ಭಾಗಗಳಿಗೆ ತಲುಪುವ ನಿರೀಕ್ಷೆಯಿದೆ. ಮುಂದಿನ ಮೂರರಿಂದ ನಾಲ್ಕು ಗಂಟೆಗಳಲ್ಲಿ ಮುಂಬೈ ಸೇರಿದಂತೆ ಕೆಲವು ಸ್ಥಳಗಳಲ್ಲಿ ಗಾಳಿಯು ಗಂಟೆಗೆ 50 – 60 ಕಿ.ಮೀ ವೇಗದಲ್ಲಿ ಬೀಸಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ಹೀಗಾಗಿ ಮುಂಬೈ, ಥಾಣೆ, ರಾಯಗಡ್ ಮತ್ತು ರತ್ನಗಿರಿ ಜಿಲ್ಲೆಗಳಿಗೆ ʻರೆಡ್‌ʼ ಅಲರ್ಟ್‌ ಘೋಷಿಸಿದೆ.

    75 ವರ್ಷಗಳಲ್ಲೇ ಮೊದಲ ಅವಧಿಪೂರ್ವ ಮುಂಗಾರು
    ಈ ಬಾರಿ ಮುಂಬೈ ನಗರಕ್ಕೆ ಅವಧಿಗೆ ಮುಂಚಿತವಾಗಿಯೇ ಮುಂಗಾರು ಪ್ರವೇಶಿಸಿದೆ. ಭಾರತೀಯ ಹವಾಮಾನ ಇಲಾಖೆ ಸೂಚಿಸಿದಂತೆ ಜೂನ್‌ 11ರಂದು ಮುಂಗಾರು ಅಪ್ಪಳಿಸಬೇಕಿತ್ತು. ಆದ್ರೆ 16 ದಿನ ಮುಂಚಿತವಾಗಿಯೇ ಮಳೆ ಆರ್ಭಟಿಸಿದೆ. ಇದು ಕಳೆದ 75 ವರ್ಷಗಳಲ್ಲೇ ಮೊದಲ ಅವಧಿಪೂರ್ವ ಮುಂಗಾರು ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ವಿಜ್ಞಾನಿ ಸುಷ್ಮಾ ನಾಯರ್ ತಿಳಿಸಿದ್ದಾರೆ.

  • ಮುಂಗಾರು ವಿಳಂಬವಾದರೆ 6,319 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು: ಸಿಎಂ

    ಮುಂಗಾರು ವಿಳಂಬವಾದರೆ 6,319 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು: ಸಿಎಂ

    – ಪ್ರಸ್ತುತ 551 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
    – 123 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ; ಸಿಎಂ ಮಾಹಿತಿ

    ಬೆಂಗಳೂರು: ಈ ವರ್ಷ ವಾಡಿಕೆಗಿಂತ ಹೆಚ್ಚು ಮುಂಗಾರು (Monsoon) ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ರೆ ಮಾನ್ಸೂನ್ ವಿಳಂಬವಾದರೆ 6,319 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು ಎಂದು ಗುರುತಿಸಿರುವುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ವಿಧಾನಸೌಧದಲ್ಲಿಂದು ನಗರ ಮತ್ತು ಗ್ರಾಮೀಣ ಭಾಗದ ಕುಡಿಯುವ ನೀರಿನ (Drinking Water) ಸಮಸ್ಯೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಬಗ್ಗೆ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ ಹಾಗೂ ಸಿಇಓಗಳು ಪಾಲ್ಗೊಂಡಿದ್ದರು. ಇದನ್ನೂ ಓದಿ: ಅಯ್ಯೋ ನನಗೆ ಹೊಟ್ಟೆ ಬಂದಿದೆ ಎಂದಿದ್ದ ನಟಿ ರಿತಿಕಾ ಸಿಂಗ್ ಸೊಂಟ ಬಳ್ಳಿಯಂತಾಗಿದ್ದು ಹೇಗೆ ಗೊತ್ತಾ?

    ಸಭೆಯಲ್ಲಿ ಮಾತನಾಡಿದ ಸಿಎಂ, ಶುದ್ಧ ಕುಡಿಯುವ ನೀರಿಗೆ ರಾಜ್ಯದ ಒಂದೇ ಒಂದು ಗ್ರಾಮದಲ್ಲೂ ಸಮಸ್ಯೆ ಆಗಬಾರದು ಜಿಲ್ಲಾಧಿಕಾರಿಗಳಿಗೆ-ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸಿಎಂ ಸ್ಪಷ್ಟ ಸೂಚನೆ ನೀಡಿದರು. ಇದನ್ನೂ ಓದಿ: Sonu Nigam | ಕನ್ನಡಿಗರ ಆಕ್ರೋಶಕ್ಕೆ ಮಣಿದ ಗಾಯಕ – ಕ್ಷಮೆಯಾಚಿಸಿದ ಸೋನು ನಿಗಮ್

    ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದ್ರೆ ವಾಡಿಕೆಗಿಂತ ಶೇ.55ರಷ್ಟು ಮಾನ್ಸೂನ್ ಪೂರ್ವ ಹೆಚ್ಚು ಮಳೆಯಾಗಿದೆ. 27 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ, ಎಲ್ಲಾ ಜಲಾಶಯಗಳಲ್ಲಿ ಶೇ.50ರಿಂದ ಶೇ.60 ರಷ್ಟು ಹೆಚ್ಚಿನ ನೀರಿನ ಸಂಗ್ರಹವಿದೆ. ಈ ವರ್ಷವೂ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಮಾನ್ಸೂನ್ ವಿಳಂಬವಾದರೆ 6,319 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು ಎಂದು ಗುರುತಿಸಲಾಗಿದೆ. ಪ್ರಸ್ತುತ 551 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 123 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅಗತ್ಯ ಸಂದರ್ಭದಲ್ಲಿ ನೀರು ಪಡೆಯಲು ಈಗಾಗಲೇ 3 ಸಾವಿರ ಖಾಸಗಿ ಬೋರ್‌ವೆಲ್‌ ಗುರುತಿಸಲಾಗಿದ್ದು, 480 ಬೋರ್‌ವೆಲ್‌ಗಳನ್ನ ಖಾಸಗಿಯವರಿಂದ ಬಾಡಿಗೆ ಪಡೆದು ನೀರು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.

    ಹಣ ಕಾಸಿನ ಕೊರತೆ ಇಲ್ಲ. ಎಷ್ಟು ಬೇಕಾದರೂ ಹಣ ಕೊಡುತ್ತೇವೆ. ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ಕುಡಿಯುವ ನೀರಿನ ನಿರ್ವಹಣೆಗೆ ಯಾವುದೇ ಹಣಕಾಸಿನ ಕೊರತೆ ಇರುವುದಿಲ್ಲ. ಪಂಚಾಯತ್ ರಾಜ್ ಇಲಾಖೆಗೆ 60 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ. ಜಿಲ್ಲೆಗಳಲ್ಲಿ ತುರ್ತು ಕುಡಿಯುವ ನೀರಿನ ಪೂರೈಕೆಗೆ ಜಿಲ್ಲಾಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಿ, ಟಾಸ್ಕ್ ಫೋರ್ಸ್‌ನಿಂದ ಅನುಮೋದನೆ ಪಡೆದುಕೊಂಡು ಅನುಷ್ಠಾನಗೊಳಿಸಬೇಕು ಎಂದು ತಾಕೀತು ಮಾಡಿದರು.

    ಪ್ರತಿ ವರ್ಷ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಲು ಯೋಜನೆ ರೂಪಿಸಬೇಕು. ಅಗತ್ಯಬಿದ್ದರೆ ಮಾತ್ರ ಬೋರ್‌ವೆಲ್‌ಗಳನ್ನ ಕೊರೆಯಬೇಕು. ಯಾವುದೇ ಕಾರಣಕ್ಕೂ ಅನಗತ್ಯವಾಗಿ ಬೋರ್‌ವೆಲ್‌ ಕೊರೆದು ವೆಚ್ಚ ದುರುಪಯೋಗ ಮಾಡಬಾರದು ಅಂತ ಡಿಸಿಗಳಿಗೆ ನಿರ್ದೇಶನ ನೀಡಿದರು. ಇದನ್ನೂ ಓದಿ: ಮಹದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜ್​ ಸ್ಟೈಫಂಡ್ ಹಗರಣ – 81.21 ಕೋಟಿ ದುರುಪಯೋಗ ಸಾಬೀತು

  • ಮುಂಗಾರು ಚುರುಕು; ಕೆಆರ್‌ಎಸ್‌ ಡ್ಯಾಂ ಒಳಹರಿವಿನಲ್ಲಿ ಹೆಚ್ಚಳ

    ಮುಂಗಾರು ಚುರುಕು; ಕೆಆರ್‌ಎಸ್‌ ಡ್ಯಾಂ ಒಳಹರಿವಿನಲ್ಲಿ ಹೆಚ್ಚಳ

    ಕೊಡಗು: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು (Monsoon) ಚುರುಕು ಪಡೆದುಕೊಂಡಿದ್ದು, ಕೆಆರ್‌ಎಸ್ ಡ್ಯಾಂ (KRS Dam) ಒಳಹರಿವಿನಲ್ಲಿ‌ ಹೆಚ್ಚಳವಾಗಿದೆ.

    ಎರಡು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆಯಾಗುತ್ತಿದೆ. ಸ್ವಲ್ಪ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ. ಹೀಗಾಗಿ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಇದನ್ನೂ ಓದಿ: KRS ಅಣೆಕಟ್ಟು ಜಾಗದ ಮೇಲೆ ಭೂಗಳ್ಳರ ಕಣ್ಣು- ಒತ್ತುವರಿ ಮಾಡ್ತಿದ್ರೂ ಅಧಿಕಾರಿಗಳು ಸೈಲೆಂಟ್!

    ಕೆಆರ್‌ಎಸ್ ಡ್ಯಾಂ ಒಳಹರಿವಿನ ಪ್ರಮಾಣ 2,241 ಕ್ಯೂಸೆಕ್ ಇದೆ. ನಿನ್ನೆಗಿಂತ ಇಂದು ಒಳಹರಿವಿನಲ್ಲಿ 1,000 ಕ್ಯೂಸೆಕ್ ಹೆಚ್ಚಳವಾಗಿದೆ. ಇದನ್ನೂ ಓದಿ: ಲಾಸ್ ವೇಗಾಸ್‌ನಲ್ಲಿ ಗುಂಡಿನ ದಾಳಿ- ಐವರ ದುರ್ಮರಣ

    124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 87.90 ಅಡಿ ನೀರಿದೆ. 49.452 ಟಿಎಂಸಿ ಗರಿಷ್ಠ ಸಾಮಾರ್ಥ್ಯದ ಕೆಆರ್‌ಎಸ್‌ನಲ್ಲಿ 14.724 ಟಿಎಂಸಿ ನೀರು ಸಂಗ್ರಹವಾಗಿದೆ. ಕೆಆರ್‌ಎಸ್ ಡ್ಯಾಂನ ಒಳಹರಿವು 2,241 ಕ್ಯೂಸೆಕ್ ಹಾಗೂ ಡ್ಯಾಂನ ಹೊರ ಹರಿವು 986 ಕ್ಯೂಸೆಕ್‌ ಇದೆ.

  • ಮನೆಯಲ್ಲಿ ನೀರಿಲ್ಲ: ಬೆಂಗಳೂರಲ್ಲಿ ಕಚೇರಿಗೆ ಬಂದು ಬ್ರಷ್‌ ಮಾಡಿದ ಉದ್ಯೋಗಿ

    ಮನೆಯಲ್ಲಿ ನೀರಿಲ್ಲ: ಬೆಂಗಳೂರಲ್ಲಿ ಕಚೇರಿಗೆ ಬಂದು ಬ್ರಷ್‌ ಮಾಡಿದ ಉದ್ಯೋಗಿ

    – ಇಷ್ಟೆಲ್ಲಾ ಮಳೆಯಾದ್ರೂ ನೀರಿಲ್ಲ ಎಂಬ ದೂರು

    ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ಮುಂಗಾರಿನ ಅಬ್ಬರ ಜೋರಾಗಿದೆ. ಹೀಗಿದ್ದರೂ ಸಿಲಿಕಾನ್‌ ಸಿಟಿಯಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿ ನೀರಿಲ್ಲ ಎಂದು ದೂರಿದ್ದಾರೆ.

    ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನ (Bengaluru Water Crisis) ಬಗ್ಗೆ ರಿಷಬ್‌ ಶ್ರೀವಾಸ್ತವ ಎಂಬ ವ್ಯಕ್ತಿಯೊಬ್ಬ ಎಕ್ಸ್‌ನಲ್ಲಿ ಹಾಕಿರುವ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವ್ಯಕ್ತಿ ತಾನು ಕೆಲಸ ಮಾಡುವ ಕಚೇರಿ ಸ್ನಾನಗೃಹದಲ್ಲಿ ಬ್ರಷ್‌ ಮಾಡುತ್ತಿರುವ ಫೋಟೊ ಹಂಚಿಕೊಂಡಿದ್ದಾರೆ. ‘ಪೀಕ್‌ ಬೆಂಗಳೂರು ಮೂಮೆಂಟ್‌! ಮನೆಯಲ್ಲಿ ನೀರಿಲ್ಲದ ಕಾರಣ ಬೆಳಗ್ಗೆ 10 ಗಂಟೆಗೆ ಕಚೇರಿಗೆ ಬಂದೆ’ ಎಂದು ಅಡಿಬರಹ ನೀಡಿದ್ದಾನೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ – ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ

    ಕಳೆದ ವರ್ಷ ಮುಂಗಾರಿನ ಕೊರತೆಯಿಂದಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿತ್ತು. ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಎದುರಾಗಿತ್ತು. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿತ್ತು. ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಆದರೂ ನಗರದಲ್ಲಿ ನೀರಿನ ಬಿಕ್ಕಟ್ಟು ಎಂಬಂತೆ ಈ ವ್ಯಕ್ತಿ ಪೋಸ್ಟ್‌ ಹಾಕಿದ್ದಾನೆ.

    ನೀರನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ. ‘ನಗರದ ಆಗ್ನೇಯ ಭಾಗದಿಂದ ಹೆಚ್ಚಿನ ದೂರುಗಳು ದಾಖಲಾಗುತ್ತಿದ್ದು, ನೀರು ಮಿತವಾಗಿ ಬಳಕೆ ಮಾಡುವಂತೆ ಜನರಲ್ಲಿ ಮನವಿ ಮಾಡಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಸಂಸದ ವಿಶಾಲ್‌ ಕಾಂಗ್ರೆಸ್‌ಗೆ ಬೆಂಬಲ – ‘ಕೈ’ ಸ್ಥಾನಗಳ ಸಂಖ್ಯೆ 100 ಕ್ಕೆ ಏರಿಕೆ

    ಬೆಂಗಳೂರಿನಲ್ಲಿ ನೀರಿನ ಅಭಾವ ಇನ್ನೂ ಇದೆ ಎಂದು ಈ ವ್ಯಕ್ತಿ ನಿಜಕ್ಕೂ ಹೇಳಿದ್ದಾನೆಯೇ? ಅಥವಾ ತಮಾಷೆಗೆ ಈ ರೀತಿ ಪೋಸ್ಟ್‌ ಹಾಕಿದ್ದಾನೆಯೇ ಎಂಬುದು ಪ್ರಶ್ನೆಯಾಗಿದೆ.

  • ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ – ಮುಂಗಾರು ಆರಂಭದಲ್ಲೇ ಹಲವೆಡೆ ಅಬ್ಬರಿಸಿದ ವರುಣ

    ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ – ಮುಂಗಾರು ಆರಂಭದಲ್ಲೇ ಹಲವೆಡೆ ಅಬ್ಬರಿಸಿದ ವರುಣ

    ಬೆಂಗಳೂರು: ರಾಜಧಾನಿಯಲ್ಲಿ ಶನಿವಾರ ರಾತ್ರಿಯಿಡೀ ಭಾರೀ (Bengaluru Rains) ಮಳೆಯಾಗಿದೆ. ಮುಂಗಾರು ಆರಂಭದಲ್ಲೇ ರಾಜ್ಯದ ಹಲವೆಡೆ ಪ್ರವಾಹದ ಸ್ಥಿತಿ ಕಂಡುಬಂದಿದೆ.

    ನಗರದ ಹಲವೆಡೆ ಗಾಳಿ ಮಳೆಗೆ ಮರಗಳು ಧರೆಗುರುಳಿವೆ. ಅಲ್ಲಲ್ಲಿ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮುಂಗಾರು ಅಬ್ಬರ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಇದನ್ನೂ ಓದಿ: ಭವ್ಯ ನರಸಿಂಹಮೂರ್ತಿ ಈಗ ಭಾರತೀಯ ಸೇನೆಯ ಆಫೀಸರ್

    ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

    ನಗರದಲ್ಲಿ ಕಳೆದ 24 ಗಂಟೆಯಲ್ಲಿ ಯಾವ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಇದನ್ನೂ ಓದಿ: Exit Poll | ಎಕ್ಸಿಟ್‌ ಪೋಲ್‌ ಮೇಲೆ ನಂಬಿಕೆಯಿಲ್ಲ, ಬಿಜೆಪಿ 275 ಸ್ಥಾನಗಳನ್ನೂ ದಾಟಲ್ಲ: ಎಂ.ಬಿ ಪಾಟೀಲ್‌

    ಪೀಣ್ಯ ಇಂಡಸ್ಟ್ರಿಯಲ್ ಏರಿಯಾ – 7.8 ಸೆಂ.ಮೀ
    ಹೊರಮಾವು – 7 ಸೆಂ.ಮೀ
    ವಿದ್ಯಾಪೀಠ – 6.3 ಸೆಂ.ಮೀ
    ಹಂಪಿನಗರ – 6.2 ಸೆಂ.ಮೀ
    ಕೊಡಿಗೆಹಳ್ಳಿ – 6 ಸೆಂ.ಮೀ
    ಹೇರೋಹಳ್ಳಿ – 5.9 ಸೆಂಮೀ
    ದೊಡ್ಡನೆಕುಂದಿ – 5.8 ಸೆಂಮೀ
    ಜಕ್ಕೂರು – 5.6 ಸೆಂ.ಮೀ
    ನಾಗೇನಹಳ್ಳಿ – 5.3 ಸೆಂ.ಮೀ
    ಯಲಹಂಕಾ – 5.3 ಸೆಂ.ಮೀ
    RR ನಗರ – 5.2 ಸೆಂ.ಮೀ ಮಳೆಯಾಗಿದೆ.

  • ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ – ಡಿಸಿ, ಸಿಇಒಗಳಿಗೆ ಹೈ ಅಲರ್ಟ್ ಎಂದ ಸಿಎಂ ಸಿದ್ದರಾಮಯ್ಯ

    ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ – ಡಿಸಿ, ಸಿಇಒಗಳಿಗೆ ಹೈ ಅಲರ್ಟ್ ಎಂದ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಹವಮಾನ ಮುನ್ಸೂಚನೆ ಪ್ರಕಾರ ಈ ವರ್ಷ ವಾಡಿಕೆಗಿಂತ ಜಾಸ್ತಿ ಮಳೆ ಆಗಲಿದ್ದು, ಕೆಲವು ಕಡೆ ಜಾಸ್ತಿ ಮಳೆ ಸಾಧ್ಯತೆ ಇದೆ. ಅದಕ್ಕಾಗಿ ಪ್ರವಾಹ ಬಂದರೆ ಎದುರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಸಚಿವರು, ಜಿಲ್ಲಾಧಿಕಾರಿಗಳು, ಸಿಇಒಗಳ ಜೊತೆಗೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಪೂರ್ವ ಮುಂಗಾರು ಮಳೆ ಮೇ ತಿಂಗಳಲ್ಲಿ ವಾಡಿಕೆಗಿಂತ ಜಾಸ್ತಿ ಆಗಿದೆ. ಕೆಲವು ಜಿಲ್ಲೆಗಳಲ್ಲಿ ಬಿತ್ತನೆ ಚಟುವಟಿಕೆ ಪ್ರಾರಂಭವಾಗಿದೆ. ಕೃಷಿ ಸಾಮಗ್ರಿಗಳ ಬಗ್ಗೆ ಯಾವ ಕಾರಣಕ್ಕೂ ತೊಂದರೆ ಆಗಬಾರದು. ನಾನು ಕೂಡ ಡಿಸಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಎಲ್ಲೇ ಇದ್ದರೂ ಕೂಡಲೇ ಸ್ವದೇಶಕ್ಕೆ ಬಾ, ನನ್ನ ತಾಳ್ಮೆ ಪರೀಕ್ಷಿಸಬೇಡ – ಪ್ರಜ್ವಲ್‌ಗೆ ಹೆಚ್‌ಡಿಡಿ ಸೂಚನೆ

    ಬೀಜ, ಗೊಬ್ಬರದ ಬಗ್ಗೆ ರೈತರಿಗೆ ಆತಂಕ ಬರಬಾರದು. ದಾಸ್ತಾನಿನ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ಬೇಡಿಕೆಗಿಂತ ದಾಸ್ತಾನು ಜಾಸ್ತಿ ಇದ್ದರೂ, ಹಾವೇರಿಯಲ್ಲಿ ನೂಕು-ನುಗ್ಗಲು ಆಗೋಗಿತ್ತು. ಅದಕ್ಕಾಗಿ ಆ ರೀತಿಯ ಆಗದಂತೆ ಡಿಸಿಗಳಿಗೆ ಎಚ್ಚರಿಕೆ ನೀಡಿದ್ದೇನೆ. 84 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಚಟುವಟಿಕೆ ಆಗಬೇಕು. ಜೂನ್‌ನಲ್ಲಿ ಎಲ್ಲ ಕಡೆ ಬಿತ್ತನೆ ಶುರು ಆಗುತ್ತದೆ. ಅದನ್ನು ಎದುರಿಸಲು ಡಿಸಿಗಳು ಸಜ್ಜಾಗಬೇಕು ಎಂದು ತಿಳಿಸಿದರು.

    ಹಿಂದೆ ಪ್ರವಾಹ ಬಂದಾಗ ಯಾವ ಊರು, ಪ್ರದೇಶಗಳಲ್ಲಿ ತೊಂದರೆ ಆಗಿತ್ತು, ಅಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ಕೊಟ್ಟಿದ್ದೇವೆ. ಬರ ಪರಿಹಾರ ಹಣವನ್ನ ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ. ತೊಂದರೆ ಇದ್ದರೆ ಬಗೆಹರಿಸಲು ಡಿಸಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಂಕಷ್ಟ ನಿವಾರಣೆಗಾಗಿ ಗಾಣಗಾಪುರದ ದತ್ತನ ಮೊರೆ ಹೋದ ರೇವಣ್ಣ

    ಇದೇ ವೇಳೆ ಕಲುಷಿತ ನೀರು ಪೂರೈಕೆ ಆಗದಂತೆ ಎಚ್ಚರ ವಹಿಸಬೇಕು. ಈಗಾಗಲೇ ಕಾಲರಾ ಬಂದಿದೆ. ನನ್ನ ಕ್ಷೇತ್ರ ತಗಡೂರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೆ.ಸಾಲುಂಡಿ ಗ್ರಾಮದಲ್ಲಿ ಒಬ್ಬರು ಸತ್ತಿದ್ದಾರೆ. ಸುಮಾರು 40 ಜನ ಅಸ್ವಸ್ಥತರಾಗಿದ್ರು. ವೈದ್ಯೋಪಚಾರ ಆಗಿದೆ. ಹಾಗಾಗಿ ರಾಜ್ಯದ ಎಲ್ಲ ಕುಡಿಯುವ ನೀರನ್ನ ಪರೀಕ್ಷೆ ಮಾಡಬೇಕು ಎಂದು ಡಿಸಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಸಿಎಂ ತಿಳಿಸಿದರು.

    ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಖಾತೆಗಳಲ್ಲಿ 826 ಕೋಟಿ ರೂಪಾಯಿ ಹಣ ಇದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಇಲ್ಲ. ಅಗತ್ಯವಿದ್ದರೆ ಬೋರ್‌ವೆಲ್ ಕೊರೆಸಲು ಅನುಮತಿ ಕೊಡುತ್ತೇವೆ ಎಂದರು.

  • ಬೆಂಗಳೂರಿನಲ್ಲಿ ಧಾರಾಕಾರ ಮಳೆ; ರಸ್ತೆಗಳಲ್ಲಿ ಹರಿದ ನೀರು

    ಬೆಂಗಳೂರಿನಲ್ಲಿ ಧಾರಾಕಾರ ಮಳೆ; ರಸ್ತೆಗಳಲ್ಲಿ ಹರಿದ ನೀರು

    ಬೆಂಗಳೂರು: ರಾಜಧಾನಿಯಲ್ಲಿ (Bengaluru Rains) ಇಂದು ಧಾರಾಕಾರ ಮಳೆ ಸುರಿಯುತ್ತಿದೆ. ಬೆಳಗ್ಗೆಯಿಂದಲೂ ಬಿಟ್ಟು ಬಿಡದೇ ಮಳೆಯಾಗುತ್ತಿದೆ.

    ವಿಧಾನಸೌಧ, ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ಮಲ್ಲೇಶ್ವರ, ಯಶವಂತಪುರ, ಮತ್ತಿಕೆರೆ, ಗೊರುಗುಂಟೆಪಾಳ್ಯ ಸುತ್ತಮುತ್ತ ಮಳೆಯಾಗುತ್ತಿದೆ. ಇದನ್ನೂ ಓದಿ: ಪೆನ್‍ಡ್ರೈವ್ ಕೇಸ್‍ನಲ್ಲಿ ಹೊಸ ಆಡಿಯೋ ಔಟ್- ಕೇಸ್‍ಗೆ ಸಿಗುತ್ತಾ ಟ್ವಿಸ್ಟ್?

    ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಗಾಂಧಿನಗರ, ಟೌನ್‌ಹಾಲ್, ಕೆ.ಜಿ. ರೋಡ್ ಸೇರಿದಂತೆ ಹಲವೆಡೆ ಮಳೆಯ ಅಬ್ಬರ ಜೋರಾಗಿದೆ. ಮುಂಗಾರು ಪೂರ್ವ ಮಳೆಯಿಂದಾಗಿ ಬೆಂಗಳೂರು ಕೂಲ್ ಕೂಲ್ ಎನಿಸಿದೆ.

    ನಗರದ ಹಲವು ಭಾಗಗಳಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಕೆಲವು ಕಡೆ ಹನಿ ಮಳೆಯಾಗುತ್ತಿತ್ತು. ಆದರೆ ಸಾಯಂಕಾಲ ಆಗುತ್ತಿದ್ದಂತೆ ಮಳೆ ಅಬ್ಬರ ಜೋರಾಯಿತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಇದನ್ನೂ ಓದಿ: ಗ್ರೌಂಡ್‌ ಹೊರಗೂ ದಾಖಲೆ ಬರೆದ ನಾಕೌಟ್‌ ಕದನ – ಆರ್‌ಸಿಬಿಗೆ ಮುಂದಿರುವ ಕಠಿಣ ಸವಾಲುಗಳೇನು?

    ಕಸ್ತೂರಿ ನಗರ ಕಡೆಯಿಂದ ಎಂಎಂಟಿ ಜಂಕ್ಷನ್ (ಕೆ.ಆರ್.ಪುರ) ಕಡೆಗೆ ಹೋಗುವ ಮಾರ್ಗದಲ್ಲಿ ಎಂಎಂಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿರುವುದರಿಂದ ವೈಟ್‌ಫೀಲ್ಡ್, ಮಹದೇವಪುರ ಮತ್ತು ಕೆ.ಆರ್. ಪುರ ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿರುತ್ತದೆ. ಇದನ್ನು ಶೀಘ್ರವೇ ತೆರವುಗೊಳಿಸಲಾಗುತ್ತಿದ್ದು, ಸಹಕರಿಸಲು ಜನರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

    ನೆಲಮಂಗಲ ಸುತ್ತಮುತ್ತ ಜೋರು ಮಳೆಯಾಗಿದೆ. ಗುಡುಗು-ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡಿದ್ದಾರೆ. ನೆಲಮಂಗಲ ತಾಲೂಕಿನ ಮೆಳೇಕತ್ತಿಗನೂರು ಗ್ರಾಮದಲ್ಲಿ ಸಿಡಿಲಿಗೆ ರೈತ ಬಲಿಯಾಗಿದ್ದಾನೆ. ಇದನ್ನೂ ಓದಿ: ಆರ್‌ಸಿಬಿ ಪ್ಲೇ-ಆಫ್‌ ಎಂಟ್ರಿ ಕ್ಷಣದಲ್ಲಿ ಭಾವುಕರಾದ ವಿರಾಟ್‌, ಅನುಷ್ಕಾ

    ಯಲಹಂಕ, ನ್ಯೂ ಟೌನ್, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಪುಟ್ಟೇನಹಳ್ಳಿ, ಏರ್ಪೋಟ್ ರೋಡ್, ಅನಂತಪುರ ಭಾಗದಲ್ಲಿ ಜೋರು ಮಳೆಯಾಗಿದೆ. ಸದ್ಯ ನಗರದಲ್ಲಿ ಮುಂದಿನ ನಾಲ್ಕು ದಿನ ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿದೆ.