Tag: monkeys

  • ಚಾ.ನಗರ| 5 ಹುಲಿಗಳ ಸಾವು ಬೆನ್ನಲ್ಲೇ ಮತ್ತೊಂದು ಘಟನೆ; 20 ಕೋತಿಗಳ ಶವ ಪತ್ತೆ

    ಚಾ.ನಗರ| 5 ಹುಲಿಗಳ ಸಾವು ಬೆನ್ನಲ್ಲೇ ಮತ್ತೊಂದು ಘಟನೆ; 20 ಕೋತಿಗಳ ಶವ ಪತ್ತೆ

    ಚಾಮರಾಜನಗರ: ಹುಲಿಗಳ ಸಾವು ಮಾಸುವ ಮುನ್ನವೇ ಗಡಿ ಜಿಲ್ಲೆ ಚಾಮರಾಜನಗರದಲ್ಲಿ (Chamarajanagara) ಮತ್ತೊಂದು ಮನಕಲಕುವ ಘಟನೆ ನಡೆದಿದೆ. 20 ಕ್ಕೂ ಕೋತಿಗಳು ಶವವಾಗಿ ಪತ್ತೆಯಾಗಿವೆ.

    ಕೋತಿಗಳಿಗೆ ವಿಷಪ್ರಾಶನ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲು ಕೋತಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕೊಡೊಯ್ದಿದ್ದಾರೆ. ಘಟನೆ ಎಸಗಿರುವವರ ವಿರುದ್ಧ ಕಂದೇಗಾಲ ಗ್ರಾಮಸ್ಥರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೈ ಕೊಟ್ಟ ಪ್ರೀತಿಸಿದ ಹುಡುಗಿ – ಮನನೊಂದು ಯುವಕ ನೇಣಿಗೆ ಶರಣು

    ಮಲೆ ಮಹದೇಶ್ವರ ಅರಣ್ಯ ಪ್ರದೇಶದ ಹೂಗ್ಯಂನಲ್ಲಿ 5 ಹುಲಿಗಳು ವಿಷಪ್ರಾಶಾನದಿಂದ ಮೃತಪಟ್ಟಿದ್ದವು. ಹುಲಿಗಳ ಸಾವಿಗೆ ಖಂಡನೆ ವ್ಯಕ್ತವಾಗಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿತ್ತು. ಪ್ರಕರಣದ ತನಿಖೆ ನಡೆಯುತ್ತಿದೆ.

  • ಚಿತ್ರದುರ್ಗದಲ್ಲಿ ಬಿಸಿಲಿನ ತಾಪ ಹೆಚ್ಚಳ – ಕೆರೆಯಲ್ಲಿ ಕೋತಿಗಳ ನೀರಾಟ

    ಚಿತ್ರದುರ್ಗದಲ್ಲಿ ಬಿಸಿಲಿನ ತಾಪ ಹೆಚ್ಚಳ – ಕೆರೆಯಲ್ಲಿ ಕೋತಿಗಳ ನೀರಾಟ

    ಚಿತ್ರದುರ್ಗ: ಬಿಸಿಲ ಝಳದಿಂದ (Summer) ಬಸವಳಿದ ಕೋತಿಗಳು (Monkeys) ಕೆರೆಯಲ್ಲಿ ಈಜಾಡುವ ಮೂಲಕ ದಣಿವಾರಿಸಿಕೊಂಡ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.

    ಚಂದ್ರವಳ್ಳಿ ತೋಟ ಎಂದೇ ಹೆಸರಾಗಿರುವ ಈ ರಮಣೀಯ ಪ್ರವಾಸಿ ತಾಣದಲ್ಲೀಗ ಕೋತಿಗಳ ಕಲರವ ಶುರುವಾಗಿದೆ.ಬಿಸಿಲಿನ ಬೇಗೆ ತಾಳಲಾರದೇ ಹಿಂಡು ಹಿಂಡು ಕೋತಿಗಳು ಚಂದ್ರವಳ್ಳಿ ಕೆರೆಗೆ ಲಗ್ಗೆ ಇಟ್ಟಿವೆ. ಕದಂಬರ ಅರಸ ಮಯೂರ ವರ್ಮ ಕಟ್ಟಿಸಿರುವ ಕೆರೆಯಲ್ಲಿ ಈಜುತ್ತಾ, ನೀರಾಟ ಆಡುತ್ತಾ ಬಿಸಿಲಿನ ಧಗೆ ಕಡಿಮೆ ಮಾಡಿಕೊಳ್ಳುತ್ತಿವೆ. ಕೋತಿಗಳ ಈ ನೀರಾಟದ ದೃಶ್ಯ ಪ್ರವಾಸಿಗರಿಗೆ ಹೊಸ ಮನರಂಜನೆಯಾಗಿದೆ. ಥೇಟ್ ಮನುಷ್ಯರಂತೆಯೇ ನೀರಲ್ಲಿ ಈಜಾಡುವ ಕೋತಿಗಳ ಈ ದೃಶ್ಯವನ್ನು ಇಲ್ಲಿಗೆ ಬರುವ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕಾಶ್ಮೀರದ ಬುದ್ಗಾಮ್‌ನಲ್ಲಿ ಕಮರಿಗೆ ಉರುಳಿದ ಸೇನಾ ವಾಹನ – 10 ಮಂದಿಗೆ ಗಾಯ

    ಅದರಲ್ಲೂ ಮನುಷ್ಯರಂತೆ ಕಲ್ಲ ಮೇಲಿಂದ ನೀರಿಗೆ ಡೈವ್ ಹೊಡೆಯುವ ಕೋತಿ ನೀರೊಳಗೆ ಕೀಟಲೆ ಮಾಡುತ್ತಾ ಒಂದು ಕಡೆ ಮುಳುಗಿ, ಮತ್ತೊಂದೆಡೆ ಎದ್ದು ಹೋಗುವ ಮಂಗಣ್ಣಗಳ ಕುಚೇಷ್ಟೆ ಹಾಗೂ ಥೇಟ್ ಮನುಷ್ಯರಂತೆ ನೀರಿಗೆ ಹಾರುವ ಸಾಹಸ ನೋಡಿ ಪುಳಕಿತರಾದರು. ಇದನ್ನೂ ಓದಿ: ಮೋದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ ಮೋಹನ್‌ ಭಾಗವತ್‌

    ಚಿತ್ರದುರ್ಗದಲ್ಲಿ ಪ್ರಸ್ತುತ 40 ಡಿಗ್ರಿಗಿಂತ ಹೆಚ್ಚು ತಾಪಮಾನ ಇದೆ. ಹೀಗಾಗಿ ತಂಪಾದ ವಾತಾವರಣ ಇರುವ ಈ ಚಂದ್ರವಳ್ಳಿಗೆ ನಿತ್ಯವೂ ಬೆಳಗ್ಗೆ ಹಾಗೂ ಸಂಜೆ ನೂರಾರು ಜನ ವಾಕ್ ಬರುತ್ತಾರೆ. ವೀಕೆಂಡ್‌ನಲ್ಲಿ ಸಾವಿರಾರು ಜನ ಪ್ರವಾಸಿಗರು ಕೂಡಬರ್ತಾರೆ.ಆದರೆ ಕಳೆದ ಒಂದು ವಾರದಿಂದ ಬಿಸಿಲ ಝಳ ಹೆಚ್ಚಾಗಿದ್ದೂ,ಪ್ರವಾಸಿಗರ ಸಂಖ್ಯೆ ಸಹ ವಿರಳವಾಗಿದೆ. ಇದನ್ನೂ ಓದಿ: ಎರಡನೇ ವಿಮಾನ ನಿಲ್ದಾಣ – ಶಾಸಕ ಸ್ಥಾನ ಪಣಕ್ಕಿಟ್ಟು ರೈತರ ಪರ ನಿಲ್ತೀನಿ: ಎನ್.ಶ್ರೀನಿವಾಸ್

    ಈ ಮೂಕಜೀವಿಗಳು ಆಹಾರವಿಲ್ಲದೇ ಪರದಾಡುತ್ತಿದ್ದು, ನೀರಾಟದಲ್ಲೇ ಕಾಲ ಕಳೆಯಿತ್ತಿವೆ. ಹೀಗಾಗಿ ಆದಷ್ಟು ನೀರಿನ ಮೂಲಗಳನ್ನು ಸಂರಕ್ಷಿಸುವ ಮೂಲಕ ಇಂತಹ ಮೂಕಜೀವಿಗಳು ಸಹ ಬೇಸಿಗೆ ವೇಳೆ ಬಿಂದಾಸ್ ಆಗಿ ಬದುಕಲು ಎಲ್ಲರು ಸಹಕರಿಸಬೇಕೆಂಬುದು ಪ್ರಾಣಿಪ್ರಿಯರ ಅಭಿಪ್ರಾಯ. ಇದನ್ನೂ ಓದಿ:  52ನೇ ಸಿಜೆಐ ಆಗಿ ನ್ಯಾ.ಬಿಆರ್ ಗವಾಯಿ ನೇಮಕ

  • ಛಾವಣಿಯಿಂದ 10ನೇ ತರಗತಿ ವಿದ್ಯಾರ್ಥಿನಿ ತಳ್ಳಿದ ಕೋತಿಗಳು – ಕೆಳಗೆ ಬಿದ್ದು ಬಾಲಕಿ ಸಾವು

    ಛಾವಣಿಯಿಂದ 10ನೇ ತರಗತಿ ವಿದ್ಯಾರ್ಥಿನಿ ತಳ್ಳಿದ ಕೋತಿಗಳು – ಕೆಳಗೆ ಬಿದ್ದು ಬಾಲಕಿ ಸಾವು

    ಪಾಟ್ನಾ: ಕೋತಿಗಳ ಗುಂಪೊಂದು ಛಾವಣಿಯಿಂದ ತಳ್ಳಿದ ಪರಿಣಾಮ ಬಿಹಾರದ ಸಿವಾನ್‌ನಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ.

    ಪ್ರಿಯಾ ಕುಮಾರಿ ಮೃತಪಟ್ಟ ಬಾಲಕಿ. ಈಕೆ ಛಾವಣಿ ಮೇಲೆ ಕುಳಿತು ಓದುತ್ತಿದ್ದಳು. ಈ ವೇಳೆ ಕೋತಿಗಳು ಆಕೆ ಮೇಲೆ ದಾಳಿ ಮಾಡಿವೆ. ಭಯಭೀತಳಾಗಿ ಕೋತಿಗಳಿಂದ ತಪ್ಪಿಸಿಕೊಳ್ಳಲು ಮುಂದಾದಳು. ಆಗ ಕೋತಿಗಳು ಆಕ್ರಮಣ ಮಾಡಿದವು.

    ಛಾವಣಿಯಿಂದ ಬಿದ್ದ ಬಾಲಕಿ ಗಂಭೀರ ಗಾಯಗೊಂಡಿದ್ದಳು. ಆಕೆಯ ತಲೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರವಾದ ಗಾಯಗಳಾಗಿವೆ.

    ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ಕುಟುಂಬ ಸದಸ್ಯರು ಚಿಕಿತ್ಸೆಗಾಗಿ ಸಿವಾನ್ ಸದರ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ಕಳೆದ ವರ್ಷ ಮುಂಬೈನ ಮಹಾಲಕ್ಷ್ಮಿ ಪ್ರದೇಶದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ಮತ್ತು ವಸತಿ ಸೊಸೈಟಿಯ ಮಗು, ಮಂಗಗಳ ದಾಳಿಯಿಂದ ಗಾಯಗೊಂಡಿದ್ದರು.

  • ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರಸಿ 30 ಮಂಗಗಳನ್ನು ಹತ್ಯೆಗೈದ ದುಷ್ಕರ್ಮಿಗಳು

    ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರಸಿ 30 ಮಂಗಗಳನ್ನು ಹತ್ಯೆಗೈದ ದುಷ್ಕರ್ಮಿಗಳು

    ಚಿಕ್ಕಮಗಳೂರು: ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿ 30 ಮಂಗಗಳನ್ನು (Monkeys) ಹತ್ಯೆಗೈದ ಅಮಾನವೀಯ ಕೃತ್ಯ ಎನ್‌ಆರ್‌ಪುರದ (NRPura) ದ್ಯಾವಣ ಬಳಿ ನಡೆದಿದೆ.

    ದುಷ್ಕರ್ಮಿಗಳು ಬಾಳೆಹಣ್ಣಿನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿ, ಬಳಿಕ ಅದನ್ನು ತಿಂದ ಮಂಗಗಳು ಎಚ್ಚರ ತಪ್ಪಿದಾಗ, ಅವುಗಳ ತಲೆಗೆ ಹೊಡೆದು ಹತ್ಯೆಗೈದಿದ್ದಾರೆ. ಸಾವಿಗೀಡಾದ 30 ಮಂಗಗಳ ತಲೆಯ ಮೇಲೂ ಒಂದೇ ರೀತಿಯ ಗಾಯಗಳಾಗಿವೆ. 16 ಗಂಡು, 14 ಹೆಣ್ಣು ಹಾಗೂ 4 ಮರಿ ಮಂಗಗಳನ್ನು ಹತ್ಯೆ ಮಾಡಿದ್ದಾರೆ. ಬಳಿಕ ದ್ಯಾವಣ ಬಳಿಯ ರಸ್ತೆಯಲ್ಲಿ ಎಸೆದಿದ್ದಾರೆ. ಇದನ್ನೂ ಓದಿ: ನಿದ್ರೆಗೆ ಜಾರಿದ ಚಾಲಕ, ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಕಾರು – ಮೂವರ ದುರ್ಮರಣ!

    ಸ್ಥಳಕ್ಕೆ ಡಿಎಫ್‍ಓ, ಆರ್‍ಎಫ್‍ಓ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ. ಮಂಗಗಳ ಮಾರಣ ಹೋಮಕ್ಕೆ ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಣಿಪುರದ ಹಿಂಸಾಚಾರ ಪರಿಸ್ಥಿತಿ ಬಳಸಿಕೊಂಡು ಭಯೋತ್ಪಾದನೆ ಹರಡಲು ಯತ್ನ – ಆರೋಪಿ ಅರೆಸ್ಟ್

  • ನೀರಿನ ಟ್ಯಾಂಕ್‌ನಲ್ಲಿ ಮುಳುಗಿ ಮಂಗಗಳ ಸಾವು – 3 ದಿನ ನೀರು ಕುಡಿದ ಗ್ರಾಮಸ್ಥರಲ್ಲಿ ಆತಂಕ

    ನೀರಿನ ಟ್ಯಾಂಕ್‌ನಲ್ಲಿ ಮುಳುಗಿ ಮಂಗಗಳ ಸಾವು – 3 ದಿನ ನೀರು ಕುಡಿದ ಗ್ರಾಮಸ್ಥರಲ್ಲಿ ಆತಂಕ

    ರಾಯಚೂರು: ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ (Drinking Water Tank) ಮಂಗಗಳು (Monkeys) ಸತ್ತು ಬಿದ್ದಿದ್ದು 3 ದಿನಗಳ ಕಾಲ ತಿಳಿಯದೇ ಅದೇ ನೀರನ್ನು ಗ್ರಾಮಸ್ಥರು ಕುಡಿದಿರುವ ಘಟನೆ ರಾಯಚೂರಿನ (Raichur) ದೇವದುರ್ಗ ತಾಲೂಕಿನ ಖಾನಾಪುರದಲ್ಲಿ ನಡೆದಿದೆ.

    ತೆರೆದ ವಾಟರ್ ಟ್ಯಾಂಕ್‌ನಲ್ಲಿ ನೀರು ಕುಡಿಯಲು ಹೋಗಿ 2 ಮಂಗಗಳು ಮೃತಪಟ್ಟಿವೆ. ಟ್ಯಾಂಕ್ ಒಳಗೆ ಇಳಿದ ಮಂಗಗಳು ಮೇಲೆ ಬರಲು ದಾರಿ ಕಾಣದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ.

    ಇದೇ ಟ್ಯಾಂಕ್‌ನಿಂದ ಇಡೀ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಮಂಗಳವಾರ ಟ್ಯಾಂಕ್ ಸ್ವಚ್ಛಗೊಳಿಸಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಹಿಂದೆ ಟ್ಯಾಂಕ್ ಸ್ವಚ್ಛಗೊಳಿಸಲು ಹೋದವರು ಮುಚ್ಚಳ ಮುಚ್ಚದೇ ಬಂದಿದ್ದರಿಂದ ಮಂಗಗಳು ಅದರಲ್ಲಿ ಮುಳುಗಿ ಸಾವನ್ನಪ್ಪಿವೆ. ಇದನ್ನೂ ಓದಿ: ಮಡಿಕೇರಿಯಲ್ಲಿ ಇಲಿ ಜ್ವರಕ್ಕೆ ಯುವಕ ಬಲಿ – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

    ಯಮನಾಳ ಗ್ರಾಮ ಪಂಚಾಯಿತಿ ಸಿಬ್ಬಂದಿ ಖಾನಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಬಗ್ಗೆ ಸರಿಯಾದ ಕ್ರಮವಹಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ಯಾಂಕ್‌ನಲ್ಲಿ ಮಂಗಗಳು ಸತ್ತು ಬಿದ್ದಿರುವ ವಿಷಯ ತಿಳಿದು ಕೆಲವರಿಗೆ ಹೊಟ್ಟೆ ತೊಳಸಿದಂತಾಗಿ ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ 17ರ ಹುಡುಗನನ್ನು ಇರಿದು ಕೊಂದ 15ರ ಬಾಲಕ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋತಿಗಳ ಗ್ಯಾಂಗ್‍ನಿಂದ ಅಟ್ಯಾಕ್ – ಬಚಾವ್ ಆಗಲು ಹೋಗಿ ವ್ಯಕ್ತಿ ಸಾವು

    ಕೋತಿಗಳ ಗ್ಯಾಂಗ್‍ನಿಂದ ಅಟ್ಯಾಕ್ – ಬಚಾವ್ ಆಗಲು ಹೋಗಿ ವ್ಯಕ್ತಿ ಸಾವು

    ಲಕ್ನೋ: ಮಂಗಗಳ ದಾಳಿಗೆ ಒಳಗಾಗಿ 40 ವರ್ಷದ ವ್ಯಕ್ತಿಯೋರ್ವ ಮನೆಯ ಮೇಲ್ಛಾವಣಿಯಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಫಿರೋಜಾಬಾದ್‍ನಲ್ಲಿ (Firozabad) ನಡೆದಿದೆ.

    ಮೃತ ದುರ್ದೈವಿಯನ್ನು ನೈಬಸ್ತಿಯ ನಿವಾಸಿ ಆಶಿಶ್ ಜೈನ್ ಎಂದು ಗುರುತಿಸಲಾಗಿದ್ದು, ಮನೆಯ ಎರಡನೇ ಮಹಡಿಯಲ್ಲಿ ಕೆಲವು ಕೆಲಸಗಳಿದ್ದರಿಂದ ಮೇಲಕ್ಕೆ ಹೋಗಿದ್ದರು. ಈ ವೇಳೆ ಅಲ್ಲಿಯೇ ಕುಳಿತಿದ್ದ ಕೋತಿಗಳ ಗ್ಯಾಂಗ್ ಆಶಿಶ್ ಜೈನ್ ದಾಳಿ ನಡೆಸಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಅನ್ಯ ಕೋಮಿನ ಯುವಕನ ಪ್ರೀತಿ ಮಾಡಿದ್ದಕ್ಕೆ ತಂದೆಯಿಂದ್ಲೇ ಮಗಳ ಕೊಲೆ

    ಕೋತಿಗಳ ಹಿಂಡಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಓಡುತ್ತಿದ್ದ ವೇಳೆ, ಎಡವಿ ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಗಂಭಿರವಾಗಿ ತಲೆಗೆ ಗಾಯಗೊಂಡ ಆಶಿಶ್ ಅವರನ್ನು ತಕ್ಷಣ ವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಶಿಶ್ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿದ ಕೂಡಲೇ ಒಕ್ಕಲಿಗರು ಬಿಜೆಪಿ ಹಿಂದೆ ಹೋಗೋದಿಲ್ಲ: ಕುಮಾರಸ್ವಾಮಿ

    ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿರುವ ಮಂಗಗಳನ್ನು ಹಿಡಿಯಲು ಹಲವು ಬಾರಿ ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಆದರ್ಶ್ ನಗರ, ಹನುಮಾನ್ ಗಂಜ್, ನಾಯ್ ಬಸ್ತಿ, ಮಹಾವೀರ್ ನಗರ, ಸುಹಾಗ್ ನಗರ, ಕೋಟ್ಲಾ ಮೊಹಲ್ಲಾ, ಗಾಧಿಯಾ, ಚಂದ್‍ವಾರ್ ಗೇಟ್, ಜಲೇಸರ್ ರಸ್ತೆ, ಕೋಟ್ಲಾ ರಸ್ತೆ, ವಿಭಾವ್ ನಗರ ಸೇರಿದಂತೆ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಂಗಗಳಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಂಗ, ಶ್ವಾನಗಳ ವಾರ್‌ನಲ್ಲಿ ಪ್ರಾಣ ಕಳೆದುಕೊಂಡ 80 ನಾಯಿಮರಿಗಳು

    ಮಂಗ, ಶ್ವಾನಗಳ ವಾರ್‌ನಲ್ಲಿ ಪ್ರಾಣ ಕಳೆದುಕೊಂಡ 80 ನಾಯಿಮರಿಗಳು

    ಮುಂಬೈ: ಮಂಗ, ನಾಯಿ ಗ್ಯಾಂಗ್‍ವಾರ್‍ನಲ್ಲಿ 80 ನಾಯಿಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡದಿದೆ.

    ಬೀದಿ ನಾಯಿಗಳ ಮೇಲಿನ ಪ್ರತೀಕಾರದಿಂದ ಕೋತಿಗಳ ಗುಂಪು ಸಿಕ್ಕ ಸಿಕ್ಕ ನಾಯಿಮರಿಗಳನ್ನೆಲ್ಲಾ ಹೊತ್ತೊಯ್ದು ಎತ್ತರದ ಕಟ್ಟಡ ಅಥವಾ ಮರದಿಂದ ಕೈಬಿಟ್ಟು ಕೊಂದು ಹಾಕಿವೆ.  ಇದನ್ನೂ ಓದಿ:  ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಎಂದಿಗೂ ಸುರಕ್ಷಿತರಾಗಿರುವುದಿಲ್ಲ:  ಓವೈಸಿ

    ಸ್ಥಳೀಯರ ಪ್ರಕಾರ ಇಲ್ಲಿನ ಮಜಲ್‍ಗಾವ್‍ನಲ್ಲಿ ನಾಯಿಗಳು ಕೋತಿಮರಿಯ ಮೇಲೆ ದಾಳಿ ಮಾಡಿ ಕೊಂದಿದ್ದವು. ಆಗಿನಿಂದಲೂ ಕೋತಿಗಳ ಗುಂಪು ಕಂಡ ಕಂಡ ನಾಯಿಮರಿಗಳನ್ನೆಲ್ಲಾ ಹೊತ್ತೊಯ್ದು ಎತ್ತರದ ಮನೆ ಅಥವಾ ಮರದಿಂದ ಕೈ ಬೊಟ್ಟು ಕೊಂದು ಹಾಕಿವೆ. ಕೋತಿಗಳ ಕೃತ್ಯಕ್ಕೆ ಈಗಾಗಲೇ 80 ನಾಯಿಮರಿಗಳು ಬಲಿಯಾಗಿವೆ. ಇದನ್ನೂ ಓದಿ: 18ನೇ ವಯಸ್ಸಿಗೆ ಪ್ರಧಾನಿಯನ್ನೇ ಆಯ್ಕೆ ಮಾಡುವ ಹೆಣ್ಣಿಗೆ ಬಾಳ ಸಂಗಾತಿ ಹೊಂದುವ ಹಕ್ಕು ಯಾಕಿಲ್ಲ: ಓವೈಸಿ ಪ್ರಶ್ನೆ

    ಮುಜಲ್‍ಗಾವ್‍ನಲ್ಲಿ ಅಂದಾಜು 5000 ನಿವಾಸಿಗಳಿದ್ದಾರೆ. ಆದರೆ ಮಂಗಳ ದಾಳಿಯಿಂದಾಗಿ ಒಂದೂ ನಾಯಿಮರಿಗಳು ಇಲ್ಲದಂತಾಗಿದೆ. ಮಂಗಗಳ ಇಂಥ ರಾಕ್ಷಸೀ ಕೃತ್ಯದಿಂದ ಬೇಸತ್ತ ನಿವಾಸಿಗಳು ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ. ಇಲಾಖೆಯವರು ಬಹುತೇಕ ಕೋತಿಗಳನ್ನು ಸೆರೆ ಹಿಡಿದಿದ್ದಾರೆ. ಮಂಗಗಳು ಶಾಲೆಗೆ ಹೋಗುವ ಮಕ್ಕಳ ಮೇಲೂ ದಾಳಿಗೆ ಮೂಂದಾಗುತ್ತಿವೆ ಎಂದು ನಿವಾಸಿಗಳು ಆತಂಕಿತರಾಗಿದ್ದಾರೆ.

  • ಸಾಕು ನಾಯಿ ಬಾಯಿಗೆ ಆಹಾರವಾದ ಮಂಗನಮರಿ- ಕಂದನ ಕಳೆದುಕೊಂಡ ನೋವಿನಲ್ಲಿ ಗ್ರಾಮಸ್ಥರ ಮೇಲೆ ದಾಳಿ

    ಸಾಕು ನಾಯಿ ಬಾಯಿಗೆ ಆಹಾರವಾದ ಮಂಗನಮರಿ- ಕಂದನ ಕಳೆದುಕೊಂಡ ನೋವಿನಲ್ಲಿ ಗ್ರಾಮಸ್ಥರ ಮೇಲೆ ದಾಳಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಮಂಗಗಳು ಊರಿನ ಜನರ ಮೇಲೆ ದಾಳಿ ಇಡುತ್ತಿದ್ದು, ಮಂಗನ ದಾಳಿಯಿಂದಾಗಿ ಗ್ರಾಮದ ಹತ್ತಕ್ಕೂ ಹೆಚ್ಚು ಜನರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಇಡೀ ಕಿನ್ನರ ಗ್ರಾಮದ ರಸ್ತೆಗಳಲ್ಲಿ ಜನರು ಓಡಾಡಿದರೆ ಮಂಗಗಳು ಮರದಿಂದ ಹಾರಿ ಬಂದು ಜನರ ಮೇಲೆ ಎರಗುತಗತ್ತಿವೆ. ಹಲವರಿಗೆ ಕಾಲು, ಕೈಗಳಿಗೆ ಕಚ್ಚಿ ಗಾಸಿ ಮಾಡಿದರೆ, ಇನ್ನೂ ಕೆಲವರಿಗೆ ಗಂಭೀರ ಸ್ವರೂಪದ ಗಾಯ ಮಾಡಿವೆ. ಈ ಮಂಗಗಳ ವಿಚಿತ್ರ ವರ್ತನೆಗೆ ಬೆದರಿದ ಗ್ರಾಮಸ್ಥರು, ಕಾರವಾರದ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಮಂಗಗಳನ್ನು ಹಿಡಿದು ಬೇರೆಡೆ ಬಿಡುವಂತೆ ಒತ್ತಾಯಿಸಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮಂಗನ ಹಿಡಿಯಲು ಬೋನ್ ಇಟ್ಟಿದ್ದು, ಕಾರ್ಯಾಚರಣೆಗೆ ಇಳಿದಿದ್ದಾರೆ.

    ಏಕಾ ಏಕಿ ಮಂಗಗಳ ದಾಳಿಗೆ ಕಾರಣವೇನು?
    ಕಿನ್ನರ ಗ್ರಾಮದ ಭಾಗದಲ್ಲಿ ಒಂದುಕಡೆ ಕಾಳಿ ನದಿ ಹರಿಯುತ್ತದೆ, ಮತ್ತೊಂದು ಕಡೆ ದಟ್ಟ ಅರಣ್ಯವಿದ್ದು, ಕಾಡುಪ್ರಾಣಿಗಳ ವಾಸ ಸ್ಥಳವಾಗಿದೆ. ಇದು ಕಪ್ಪು ಹಾಗೂ ಕೆಂಪು ಮಂಗಗಳ ಆವಾಸ ಸ್ಥಾನ ಕೂಡ. ಹೀಗಾಗಿ ಈ ಭಾಗದ ಅರಣ್ಯ ಭಾಗದಲ್ಲಿ ಮಂಗಗಳು ಸಾಮಾನ್ಯ. ಇನ್ನು ಮಳೆಗಾಲವಾದ್ದರಿಂದ ಕಾಡಿನಿಂದ ಅಲ್ಲಿಯೇ ಇರುವ ಅಕ್ಕ ಪಕ್ಕದ ಗ್ರಾಮಗಳಿಗೆ ಮಂಗಗಳು ಆಹಾರ ಅರಸಿ ಬರುತ್ತವೆ. ಹೀಗಿರುವಾಗ ಮಂಗಗಳ ದಾಳಿ ತಪ್ಪಿಸಲು ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ. ಮಂಗಗಳು ಬಂದಾಗ ನಾಯಿಗಳನ್ನು ಬಿಟ್ಟು ಓಡಿಸುವುದು ಸಾಮಾನ್ಯ.

    ಕಳೆದ ಕೆಲವು ದಿನಗಳ ಹಿಂದೆ ಹೀಗೆ ಆಹಾರ ಅರಸಿ ಗ್ರಾಮದ ಕಡೆ ಬಂದಿದ್ದ ಮಂಗಗಳ ಗುಂಪೊಂದರಲ್ಲಿ ಮಂಗನ ಮರಿಗಳನ್ನು ನಾಯಿಗಳು ಬೇಟೆಯಾಡಿವೆ. ತಮ್ಮ ಕರುಳು ಬಳ್ಳಿಯನ್ನು ಕಣ್ಣೆದುರೇ ಕಳೆದುಕೊಂಡ ಮಂಗಗಳು ಇದೀಗ ಗ್ರಾಮದಲ್ಲಿ ಯಾರೇ ಓಡಾಡಿದರೂ ದಾಳಿ ಇಡುತ್ತಿದ್ದು, ಹಲವರಿಗೆ ಗಾಯ ಮಾಡಿವೆ. ಇದರಿಂದಾಗಿ ಇದೀಗ ಗ್ರಾಮದ ಜನರು ಮಂಗಗಳು ಎಂದರೆ ಭಯ ಪಡುವಂತಾಗಿದೆ. ಸದ್ಯ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳನ್ನು ಹಿಡಿದು ಬೇರೆಡೆ ಬಿಡಲು ಹರಸಾಹಸ ಪಡುತಿದ್ದಾರೆ.

  • ವರದಾ ನದಿ ಪ್ರವಾಹದಲ್ಲಿ ವಾನರಸೇನೆ ಸಿಲುಕಿ ಪರದಾಟ

    ವರದಾ ನದಿ ಪ್ರವಾಹದಲ್ಲಿ ವಾನರಸೇನೆ ಸಿಲುಕಿ ಪರದಾಟ

    – ಮಾವಿನ ಮರವೇರಿ ಕುಳಿತ ಮಂಗಗಳು

    ಹಾವೇರಿ: ಜಿಲ್ಲೆಯಲ್ಲಿ ಮಳೆ ನಿಂತರೂ, ನೀರಿನ ಪ್ರಮಾಣ ಕಡಿಮೆಯಾಗುತ್ತಿಲ್ಲ. ವರದಾ ನದಿಯ ಪ್ರವಾಹದಲ್ಲಿ ವಾನರಸೇನೆ ಸಿಲುಕಿ ಪರದಾಡುತ್ತಿರುವ ಘಟನೆ ಹಾವೇರಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ನಡೆದಿದೆ.

    ಮರದ ಸುತ್ತ ನೀರು ಆವರಿಸಿರುವುದರಿಂದ ಮರದಲ್ಲಿ ಸಿಲುಕಿಕೊಂಡು ಮಂಗಗಳು ಪರದಾಡುತ್ತಿವೆ. ಗ್ರಾಮದ ಬಳಿ ಇರುವ ಮಾವಿನ ಮರದಲ್ಲಿ ವಾನರಸೇನೆ ಬಿಡಾರ ಹೂಡಿದ್ದ ವೇಳೆ ಏಕಾಏಕಿ ವರದಾ ನದಿ ಪ್ರವಾಹ ಉಂಟಾಗಿದೆ.

    ಮರದ ಸುತ್ತ ನೀರು ಆವರಿಸಿದ್ದರಿಂದ ಮರದಲ್ಲಿ ಸಿಲುಕಿ 10ಕ್ಕೂ ಅಧಿಕ ಮಂಗಗಳು ಪರದಾಡುತ್ತಿವೆ. ನೀರಿನ ಹರಿವು ಹೆಚ್ಚಾಗಿದ್ದರಿಂದ ಮರದ ಬಳಿ ತೆರಳಿ ಮಂಗಗಳಿಗೆ ಹಣ್ಣು ಹಂಪಲು ವಿತರಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ದಿಕ್ಕು ತೋಚದೆ ಮರದಲ್ಲಿನ ಮಾವಿನ ಸೊಪ್ಪು ತಿಂದು ಮಂಗಗಳು ಕಾಲ ಕಳೆಯುತ್ತಿವೆ.

  • ಮಂಗನ ಕಾಟಕ್ಕೆ ಬೆಚ್ಚಿಬಿದ್ದ ಮಸ್ಕಿ ಜನ- ಒಂದೇ ದಿನ ನಾಲ್ಕು ಜನರ ಮೇಲೆ ದಾಳಿ

    ಮಂಗನ ಕಾಟಕ್ಕೆ ಬೆಚ್ಚಿಬಿದ್ದ ಮಸ್ಕಿ ಜನ- ಒಂದೇ ದಿನ ನಾಲ್ಕು ಜನರ ಮೇಲೆ ದಾಳಿ

    ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಜನ ಮಂಗಗಳ ಕಾಟಕ್ಕೆ ಬೆಚ್ಚಿಬಿದ್ದಿದ್ದಾರೆ. ಇಂದು ಮಧ್ಯಾಹ್ನದ ವೇಳೆ ಏಕಾಏಕಿ ದಾಳಿ ನಡೆಸಿದ ಮಂಗಗಳು ಸಿಕ್ಕಸಿಕ್ಕವರ ಮೇಲೆರಗಿ ಕಚ್ಚಿ ಗಾಯಗೊಳಿಸಿವೆ.

    ಪಟ್ಟಣದ ರಥ ಬೀದಿಯಲ್ಲಿ ಇಂದು ಒಂದೇ ದಿನ ನಾಲ್ಕು ಜನರ ಮೇಲೆ ದಾಳಿ ಮಾಡಿರುವ ಮಂಗಗಳು, ಮಕ್ಕಳು ಹಾಗೂ ದಾರಿ ಹೋಕರಿಗೆ ಕೈ, ಕಾಲಿಗೆ ಮನಬಂದಂತೆ ಕಚ್ಚಿ ಗಾಯಗೊಳಿಸಿವೆ. ಗಾಯಾಳುಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಸುತ್ತಮುತ್ತ ಓಡಾಡಿಕೊಂಡಿರುವ ಮಂಗಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.