Tag: Monkey Gang

  • ತಂದೆ ಎದುರೇ ಮಗುವನ್ನು ಟೆರೇಸ್ ಮೇಲಿಂದ ಕೆಳಗೆಸೆದ ಕೋತಿ ಗ್ಯಾಂಗ್ – ಹಸುಗೂಸು ಸಾವು

    ತಂದೆ ಎದುರೇ ಮಗುವನ್ನು ಟೆರೇಸ್ ಮೇಲಿಂದ ಕೆಳಗೆಸೆದ ಕೋತಿ ಗ್ಯಾಂಗ್ – ಹಸುಗೂಸು ಸಾವು

    ಲಕ್ನೋ: ತಂದೆಯ ಕೈಯಲ್ಲಿದ್ದ ನಾಲ್ಕು ತಿಂಗಳ ಗಂಡು ಮಗುವನ್ನು ಕಿತ್ತುಕೊಂಡ ಕೋತಿಗಳ ಗ್ಯಾಂಗ್ ಮೂರನೇ ಅಂತಸ್ತಿನ ಮನೆಯ ಛಾವಣಿಯಿಂದ ಎಸೆದ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಶುಕ್ರವಾರ ಸಂಜೆ ಶಾಹಿ ಪೊಲೀಸ್ ಠಾಣೆ ವ್ಯಾಪ್ತಿಯ ಬರೇಲಿ ಡಂಕಾ ಪ್ರದೇಶದಲ್ಲಿ ಈ ಘಟನೆ ನಡೆದಿದು, ಬರೇಲಿಯ ಡುಂಕಾ ಗ್ರಾಮದ ನಿವಾಸಿ 25 ವರ್ಷದ ನಿರ್ದೇಶ್ ಉಪಾಧ್ಯಾಯ ಅವರು ತಮ್ಮ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಪತ್ನಿ ಜೊತೆಗೆ ಸಂಜೆ ಮೂರು ಅಂತಸ್ತಿನ ಮನೆಯ ಟೆರೇಸ್‍ನಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಛಾವಣಿಯ ಮೇಲೆ ಕೋತಿಗಳ ಹಿಂಡು ಬಂದಿದೆ. ಇದರಿಂದ ಗಾಬರಿಗೊಂಡ ದಂಪತಿ ಕೋತಿಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ನಿರ್ದೇಶ್ ಉಪಾಧ್ಯಾಯ ಅವರನ್ನು ಕೋತಿಗಳು ಸುತ್ತುವರಿದವು. ಇದನ್ನೂ ಓದಿ: ಕಸದ ಗಾಡಿಯಲ್ಲಿ ಮೋದಿ, ಯೋಗಿ ಆದಿತ್ಯನಾಥ್ ಫೋಟೋ – ಕೆಲಸದಿಂದ ಪೌರಕಾರ್ಮಿಕ ವಜಾ

    ಕೊನೆಗೆ ಮೆಟ್ಟಿಲಿನಿಂದ ಮನೆಗೆ ಹೋಗುವ ಪ್ರಯತ್ನಿಸುವಾಗ ಕೈ ಜಾರಿ ಮಗು ಕೆಳಗೆ ಬಿದ್ದಿದೆ. ಮಗುವನ್ನು ನಿರ್ದೇಶ್ ಹಿಡಿದುಕೊಳ್ಳುವಷ್ಟೋತ್ತಿಗೆ ಕೋತಿಯೊಂದು ಮಗುವನ್ನು ಎತ್ತಿಕೊಂಡು ಛಾವಣಿ ಮೇಲಿಂದ ಕೆಳಗೆ ಎಸೆದಿದೆ. ಇದರಿಂದಾಗಿ ಮಗು ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಇದನ್ನೂ ಓದಿ: ಬ್ರಿಟನ್‌ ಪಿಎಂ ರೇಸ್‌ – ದಿನ ಕಳೆದಂತೆ ಸುನಾಕ್‌ಗೆ ಹೆಚ್ಚಾಗುತ್ತಿದೆ ಬೆಂಬಲ

    ಮಗುವಿಗೆ 7 ವರ್ಷದ ಸಹೋದರಿ ಇದ್ದು, ಸ್ವಲ್ಪ ದಿನದಲ್ಲಿಯೇ ಮಗುವಿನ ನಾಮಕರಣ ಕಾರ್ಯಕ್ರಮಕ್ಕೆ ಕುಟುಂಬ್ಥರು ಸಿದ್ಧತೆ ನಡೆಸುತ್ತಿದ್ದರು. ಅಷ್ಟರೊಳಗೆ ಈ ಅವಘಡ ಸಂಭವಿಸಿದೆ. ಸದ್ಯ ಘಟನೆ ಸಂಬಂಧ ಬರೇಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್ ವರ್ಮಾ ಅವರುಮಾಹಿತಿ ನೀಡಿದ್ದು, ಈ ಬಗ್ಗೆ ತನಿಖೆ ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]