ನಟ, ನಿರ್ದೇಶಕನಾಗಿ ಗೆದ್ದಿರುವ ದುನಿಯಾ ವಿಜಯ್ (Duniya Vijay) ನಿರ್ದೇಶನದ ಹೊಸ ಸಿನಿಮಾ ‘ಸಿಟಿ ಲೈಟ್ಸ್’ (City Lights) ಚಿತ್ರದ ಪೋಸ್ಟರ್ ರಿವೀಲ್ ಆಗಿದೆ. ಪುತ್ರಿ ಮೋನಿಷಾ (Monisha) ಹಾಗೂ ವಿನಯ್ ರಾಜ್‌ಕುಮಾರ್ (Vinay Rajkumar) ಲುಕ್ ಅನಾವರಣ ಆಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಮಾಹಿತಿ ಹಂಚಿಕೊಂಡಿದ್ದಾರೆ.
ಚಿತ್ರದ ಅಫಿಷಯಲ್ ಇನ್ಸ್ಟಾಗ್ರಾಂ ಖಾತೆಯಲ್ಲಿ, ‘ಚಡಿ ಏಟಿನಷ್ಟೇ ಚುರುಕಾದ ಸಿಟಿ ಲೈಟ್ಸ್ ಫಸ್ಟ್ ಲುಕ್’ ಎಂದು ಬರೆಯಲಾಗಿದೆ. ಸದ್ಯ ದುನಿಯಾ ವಿಜಯ್ ಅವರು ಮಗಳು ಮೋನಿಷಾ ಮತ್ತು ವಿನಯ್ ಮೂಲಕ ಹೇಳಲು ಹೊರಟಿರುವ ಕಥೆ ವಿಭಿನ್ನವಾಗಿರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಿಗಿದೆ. ಚಿತ್ರದ ಪೋಸ್ಟರ್ ಲುಕ್‌ನಿಂದ ನಿರೀಕ್ಷೆ ದುಪ್ಪಟ್ಟಾಗಿದೆ.
ಅಂದಹಾಗೆ, ‘ಸಿಟಿ ಲೈಟ್ಸ್’ ಸಿನಿಮಾದ ಜೊತೆಗೆ ದೊಡ್ಡ ಮಗಳು ರಿತನ್ಯಾ ಜೊತೆಗೂ ಸಿನಿಮಾ ಮಾಡುತ್ತಿದ್ದಾರೆ. ಅದನ್ನು ಜಡೇಶ್ ಕುಮಾರ್ ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ.
ದುನಿಯಾ ವಿಜಯ್ ಅವರ ಇಬ್ಬರು ಹೆಣ್ಣು ಮಕ್ಕಳು ಸಿನಿಮಾರಂಗ ಪ್ರವೇಶಿಸೋದು ಖಚಿತ. ಇದನ್ನ ಸ್ವತಃ ವಿಜಯ್ ಅನೌನ್ಸ್ ಮಾಡಿದ್ದಾರೆ. ಆದರೆ ನೀವು ಗೆಸ್ ಮಾಡಿದಂತೆ ಕಿರಿ ಮಗಳು ಮೋನಿಷಾ (Monisha) ಅಲ್ಲ. ಬದಲಿಗೆ ಹಿರಿಯ ಮಗಳು ಮೋನಿಕಾ (Monica) ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಮೋನಿಕಾ ವಿಜಯ್ ಅವರ ಎಜುಕೇಷನ್ ಕಂಪ್ಲೀಟ್ ಆಗಿದೆ. ರಿಸೆಂಟ್ ಆಗಿ ಮುಂಬೈನಲ್ಲಿ ಆ್ಯಕ್ಟಿಂಗ್ ಕೋರ್ಸ್ ಸಹ ಮುಗಿಸಿ ಬಂದಿದ್ದಾರೆ. ಮುಂಬೈನ ಅನುಪಮ್ ಖೇರ್ (Anupam Kher) ನಟನಾ ಶಾಲೆಯಲ್ಲಿ ತರಬೇತಿ ಪಡೆದು ಬಂದಿರುವ ಮೋನಿಕಾ, ಸದ್ಯ ಬೆಂಗಳೂರಿನಲ್ಲಿ ಕಲಾತಂಡವೊಂದರ ಜೊತೆ ಕೆಲಸ ಮಾಡ್ತಿದ್ದಾರೆ. ಇದನ್ನೂ ಓದಿ:‘ಜವಾನ್’ ಸಕ್ಸಸ್ ಬಳಿಕ ಪ್ರಭಾಸ್ ಸಿನಿಮಾದಲ್ಲಿ ನಯನತಾರಾ
ಹಾಗಾಗಿ ಹಿರಿ ಮಗಳು ಮೋನಿಕಾ ಸಿನಿಮಾ ಎಂಟ್ರಿಗೆ ತಯಾರಾಗಿದ್ದು, ಶೀಘ್ರದಲ್ಲೇ ಸಿನಿಮಾ ಅನೌನ್ಸ್ ಆಗುವ ನಿರೀಕ್ಷೆಯಿದೆ. ಆದ್ರೆ ಕಿರಿ ಮಗಳು ಮೋನಿಷಾ ಇನ್ನೂ ಎಜುಕೇಷನ್ ಮಾಡ್ತಿದ್ದು, ಈಗ ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗ್ತಿದ್ದಾರಂತೆ. ಜೊತೆಗೆ ಮೋನಿಷಾ ಸಹ ಆ್ಯಕ್ಟಿಂಗ್ ಟ್ರೈನಿಂಗ್ ಪಡೆದುಕೊಳ್ಳಲಿದ್ದು, ಅದು ಮುಗಿದು ವಾಪಸ್ ಆದ ಬಳಿಕವಷ್ಟೇ ಮೋನಿಷಾ ಬಣ್ಣದ ಜಗತ್ತಿಗೆ ಬರಲಿದ್ದಾರೆ.
ವಿಜಯ್ ಅವರ ಇಬ್ಬರು ಮಕ್ಕಳಿಗೂ ಈಗಾಗಲೇ ತುಂಬಾ ಆಫರ್ಸ್ ಬಂದಿದೆ. ಆದರೆ ಶಿಕ್ಷಣಕ್ಕೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಇಷ್ಟು ದಿನ ನಟನೆಗೆ ಬರೋದನ್ನ ಮುಂದೂಡಲಾಗಿತ್ತು. ಆದ್ರೀಗ ಹಿರಿ ಮಗಳು ಸಿನಿಮಾ ಮಾಡೋ ಉದ್ದೇಶದಿಂದಲೇ ಸಕಲ ತಯಾರಿ ಮುಗಿಸಿದ್ದಾಳೆ. ಹೀಗಾಗಿ ಮೋನಿಕಾ ಲಾಂಚ್ ಮಾಡೋಕೆ ಇದು ಸೂಕ್ತ ಸಮಯ ಎಂದು ವಿಜಯ್ ನಿರ್ಧರಿಸಿದ್ದಾರಂತೆ. ಸದ್ಯ ಮೋನಿಕಾ ಚೊಚ್ಚಲ ಸಿನಿಮಾಗೆ ಅದ್ಭುತ ಸ್ಕ್ರಿಪ್ಟ್ ಕೂಡ ರೆಡಿಯಿದ್ದು, ಒಂದೊಳ್ಳೆ ಸಮಯ ನೋಡ್ಕೊಂಡು ಸಿನಿಮಾ ಶುರು ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ. ಇನ್ನು ಹಿರಿಯ ಮಗಳ ಮೊದಲ ಸಿನಿಮಾಗೆ ಸ್ವತಃ ದುನಿಯಾ ವಿಜಯ್ ಅವರೇ ಆ್ಯಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ.
ಸಕಲ ತಯಾರಿ ಮಾಡಿಕೊಂಡೇ ನಟನೆಗಿಳಿಯುತ್ತಿರುವ ಮೋನಿಕಾ ಕೂಡ ತಂದೆ ದುನಿಯಾ ವಿಜಯ್ ಅವರಂತೆಯೇ ಗೆದ್ದು ಬೀಗುತ್ತಾರಾ? ಕಾಯಬೇಕಿದೆ.
ಬೆಂಗಳೂರು: ನಟ ದುನಿಯಾ ವಿಜಯ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಇದೀಗ ವಿಜಿ ಪುತ್ರಿ ಮೋನಿಷಾ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ.
ಅಪ್ಪ-ಅಮ್ಮನ ಗಲಾಟೆಯಲ್ಲಿ ನಮಗೆ ತೊಂದರೆಯಾಗುತ್ತಿದೆ. ಆರ್ಥಿಕವಾಗಿಯೂ ಅಪ್ಪನಿಂದ ಸಹಾಯ ಸಿಗುತ್ತಿಲ್ಲ. ಹೀಗಾಗಿ ಕೂಡಲೇ ಆಯೋಗ ಮಧ್ಯಪ್ರವೇಶ ಮಾಡಿ ಇದನ್ನು ಬಗೆಹರಿಸಬೇಕು ಅಂತಾ ಮನವಿ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಸಮಸ್ಯೆ ಬಗೆಹರಿಸಿ ಕೊಡಿ ಅಂತ ದುನಿಯಾ ವಿಜಿ ಎರಡನೇ ಮಗಳು ಮಕ್ಕಳು ಆಯೋಗಕ್ಕೆ ಮಂಗಳವಾರ ರಾತ್ರಿ ದೂರು ಸಲ್ಲಿಸಿದ್ದಾರೆ.
ಇನ್ನೆರಡು ದಿನದಲ್ಲಿ ವಿಜಿಗೆ ಹಾಗೂ ನಾಗರತ್ನಗೆ ನೋಟಿಸ್ ಆಯೋಗ ನೀಡುವ ಸಾಧ್ಯತೆಯಿದೆ. ವಿಜಿ ಕುಟುಂಬದ ವೈಮನಸ್ಸಿನಿಂದ ಮಕ್ಕಳ ಬದುಕು ಮೂರಾಬಟ್ಟೆಯಾಗಲು ಬಿಡಲ್ಲ ಅಂತ ಆಯೋಗ ಹೇಳಿದೆ. ವಿಜಿ ಮಗಳ ಲಿಖಿತ ದೂರಿನನ್ವಯ ನೋಟಿಸ್ ನೀಡಿ ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚ, ಮಕ್ಕಳಿಗೆ ಆರ್ಥಿಕ ನೆರವಿನ ಬಗ್ಗೆ ಆಯೋಗ ಒಂದಿಷ್ಟು ಷರತ್ತು ವಿಧಿಸುವ ಸಾಧ್ಯತೆಗಳಿವೆ.
ಕೀರ್ತಿ ಗೌಡ ಮೇಲೆ ಹಲ್ಲೆ ನಡೆದಿರುವ ಸಿಸಿಟಿವಿ ದೃಶ್ಯಾವಳಿ ಮಾಧ್ಯಮಗಳಿಗೆ ಸಿಗುತ್ತಿದ್ದಂತೆಯೇ ವಿಜಯ್ ಮೊದಲನೇ ಪತ್ನಿ ನಾಗರತ್ನ ಪರಾರಿಯಾಗಿದ್ದು ಇದೂವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಗಿರಿನಗರ ಪೊಲೀಸರು ನಾಗರತ್ನಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಹೊಸೂರು ಸುತ್ತಮುತ್ತ ಕಳೆದ ರಾತ್ರಿಯೂ ಗಿರಿನಗರ ಪೊಲೀಸರು ಹುಡುಕಾಡಿದ್ದಾರೆ. ಆದ್ರೆ ನಾಗರತ್ನ ಸುಳಿವು ಮಾತ್ರ ಸಿಕ್ಕಿಲ್ಲ.