Tag: Monika

  • ಪೊಲೀಸರ ಮುಂದೆ ಶೃತಿ ಹರಿಹರನ್ ಆಪ್ತ ಸಹಾಯಕ ಕಿರಣ್, ಸಹ ನಿರ್ದೇಶಕಿ ಮೋನಿಕಾ ಸ್ಫೋಟಕ ಹೇಳಿಕೆ

    ಪೊಲೀಸರ ಮುಂದೆ ಶೃತಿ ಹರಿಹರನ್ ಆಪ್ತ ಸಹಾಯಕ ಕಿರಣ್, ಸಹ ನಿರ್ದೇಶಕಿ ಮೋನಿಕಾ ಸ್ಫೋಟಕ ಹೇಳಿಕೆ

    ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮೀಟೂ ಆರೋಪ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಇಬ್ಬರು ಸಾಕ್ಷಿಗಳ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

    ಶೃತಿ ಹರಿಹರನ್ ಆಪ್ತ ಸಹಾಯಕ ಕಿರಣ್ ಮತ್ತು ವಿಸ್ಮಯ ಚಿತ್ರದ ಸಹ ನಿರ್ದೇಶಕಿ ಮೋನಿಕಾ ಹೇಳಿಕೆಯನ್ನು ರಹಸ್ಯ ಸ್ಥಳದಲ್ಲಿ ಪೊಲೀಸರು ವಿಡಿಯೋ ಮಾಡಿಕೊಂಡಿದ್ದಾರೆ. ಇನ್ಸ್ ಪೆಕ್ಟರ್ ಐಯ್ಯಣ್ಣ ರೆಡ್ಡಿ ಹಾಗೂ ಪಿಎಸ್‍ಐ ರೇಣುಕಾ ಸಮ್ಮುಖದಲ್ಲಿ ಸಾಕ್ಷಿಗಳ ಈ ಹೇಳಿಕೆ ದಾಖಲು ಮಾಡಿದ್ದಾರೆ. ಇಬ್ಬರು ಪೊಲೀಸರ ಮುಂದೆ ಹೇಳಿದ್ದು ಏನು ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: 6 ಮಂದಿ ಮೇಲೆ ನಿಂತಿದೆ ನಟ ಅರ್ಜುನ್ ಹಣೆಬರಹ!

    ಕಿರಣ್ ಹೇಳಿದ್ದು ಏನು?
    ಶೃತಿ ಹರಿಹರನ್ ಗೆ ಅರ್ಜುನ್ ಸರ್ಜಾ ಅವರಿಂದ ಕಿರುಕುಳ ಆಗಿದ್ದು ನಿಜ. ರಿಹರ್ಸಲ್ ವೇಳೆಯೂ ಶೃತಿ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದರು. ನಾವು ದೇವನಹಳ್ಳಿಯಿಂದ ಹೊರಟಾಗ ಸಿಗ್ನಲ್ ಬಳಿ ಅರ್ಜುನ್ ಸರ್ಜಾ ಮತ್ತೊಂದು ಕಾರಿನಲ್ಲಿ ಎದುರಾದರು. ಆಗ ನಾನು ಶೃತಿ ಹರಿಹರನ್ ಪಕ್ಕದಲ್ಲಿಯೇ ಕುಳಿತ್ತಿದ್ದೆ. ಶೃತಿ ಹರಿಹರನ್ ಅವರನ್ನು ಅರ್ಜುನ್ ಸರ್ಜಾರ ಊಟಕ್ಕೆ ಕರೆದರು. ಅಷ್ಟೇ ಅಲ್ಲದೇ ರೆಸಾರ್ಟ್ ಗೆ ಹೋಗೋಣ ಬಾ ಎಂದಿದ್ದರು. ಈ ಸಂದರ್ಭದಲ್ಲಿ ಸರ್ಜಾ ಜೊತೆ ಊಟಕ್ಕೆ ಹೋಗಲು ಶೃತಿ ಹರಿಹರನ್ ನಿರಾಕರಿಸಿ ಕಣ್ಣಿರು ಹಾಕಿದರು. ಇದಕ್ಕೆ ನಾನೇ ಸಾಕ್ಷಿ, ನಾನು ಆಗ ಅವರ ಪಕ್ಕದಲ್ಲೇ ಕುಳಿತಿದ್ದೆ. ನಂತರ ಅರ್ಜುನ್ ಸರ್ಜಾ ಹೊರಟರು.

    ಮೋನಿಕಾ ಹೇಳಿದ್ದು ಏನು?
    ನನಗೇನು ಗೊತ್ತಿಲ್ಲ, ನನಗೆ ಏನೂ ನೆನಪಾಗುತ್ತಿಲ್ಲ. ವಿಸ್ಮಯ ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಏನಾಯ್ತು ಅನ್ನೋದು ನನಗೆ ಸರಿಯಾಗಿ ಗೊತ್ತಿಲ್ಲ. ಲೈಂಗಿಕ ಕಿರುಕುಳ ಬಗ್ಗೆ ನನಗೇನೂ ಗೊತ್ತಿಲ್ಲ, ಶೃತಿಯೂ ಈ ಬಗ್ಗೆ ನನ್ನಲ್ಲಿ ಹೇಳಿಕೊಂಡಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವಿಸ್ಮಯ ಚಿತ್ರದ ಸಹ ನಿರ್ದೇಶಕಿ ಮೋನಿಕಾ ಹೇಳಿಕೆ ನೀಡಿದ್ದಾರೆ.

    ಶೃತಿ ಹರಿಹರನ್ ಅವರ ಆಪ್ತ ಸಹಾಯಕ ಬೋರೇಗೌಡ ಮತ್ತು ವಿಸ್ಮಯ ಚಿತ್ರದ ಮತ್ತೊಬ್ಬ ಸಹ ನಿರ್ದೇಶಕ ಭರತ್ ನೀಲಕಂಠ ಅವರು ಬುಧವಾರ ಪೊಲೀಸರ ಮುಂದೆ ಹೇಳಿಕೆ ನೀಡುವ ಸಾಧ್ಯತೆಗಳಿವೆ.

    ಶುಕ್ರವಾರಕ್ಕೆ ಮುಂದೂಡಿಕೆ:
    ಅರ್ಜುನ್ ಸರ್ಜಾ ಹೂಡಿದ್ದ ಮಾನನಷ್ಟ ಕೇಸ್ ವಿಚಾರಣೆಯನ್ನು ನವೆಂಬರ್ 2ಕ್ಕೆ ಮೇಯೋ ಹಾಲ್ ಕೋರ್ಟ್ ಮುಂದೂಡಿದೆ. ನಿನ್ನೆಯಷ್ಟೇ ಶೃತಿಹರನ್ ಆಕ್ಷೇಪಣೆ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಲು ಸಮಯ ಬೇಕು ಎಂದು ಸರ್ಜಾ ಪರ ವಕೀಲರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನ್ಯಾಯಧೀಶರು ವಿಚಾರಣೆಯನ್ನ ಶುಕ್ರವಾರಕ್ಕೆ ಮುಂದೂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಗರತ್ನ ಪ್ರಕರಣದ ಪ್ರತ್ಯಕ್ಷದರ್ಶಿಯಿಂದ ಎಸ್‍ಪಿ ಅಣ್ಣಾಮಲೈಗೆ ಮನವಿ

    ನಾಗರತ್ನ ಪ್ರಕರಣದ ಪ್ರತ್ಯಕ್ಷದರ್ಶಿಯಿಂದ ಎಸ್‍ಪಿ ಅಣ್ಣಾಮಲೈಗೆ ಮನವಿ

    ಬೆಂಗಳೂರು: ದುನಿಯಾ ವಿಜಿ ಜೈಲಿಗೆ ಹೋದ ಸಂದರ್ಭದಲ್ಲಿ ನಾಗರತ್ನ ಅವರು ಕೀರ್ತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದು, ಈ ಘಟನೆಯ ಪ್ರತ್ಯಕ್ಷದರ್ಶಿ ಮಂಜು ಅವರು ಸಂಪೂರ್ಣ ವಿವರವನ್ನು ನೀಡಿದ್ದಾರೆ.

    ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಮಂಜು ಅವರು, ನಾಗರತ್ನ ಹಾಗೂ ಮಕ್ಕಳು ಕಾನೂನಿನ ದಾರಿ ತಪ್ಪಿಸಿ ಅವರಿಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಯಾರೋ ಕಾಣದ ಕೈ ಇಲ್ಲಿ ಆಟ ಆಡುತ್ತಿದೆ. ಈ ಮೂಲಕ ನಾನು ಎಸ್‍ಪಿ ಅಣ್ಣಾಮಲೈ ಅವರಿಗೆ ಕೈ ಮುಗಿದು, ಎಸ್‍ಪಿ ಅಣ್ಣಾಮಲೈ ನಿಮ್ಮ ಬಗ್ಗೆ ನಾನು ತುಂಬಾ ಕೇಳಿದ್ದೇನೆ. ನಾನು ನಿಮ್ಮ ಅಭಿಮಾನಿ ಸರ್, ಚಿಕ್ಕಮಗಳೂರಿನಲ್ಲಿ ಸಿಂಗಂ ಎಂದು ಹೇಳಿದ್ದಾರೆ. ಇಂತಹವರು ನಮ್ಮ ಬೆಂಗಳೂರಿಗೆ ಬಂದಿದ್ದಾರೆ. ನಾಗರತ್ನ ಅವರಿಂದ ನಮಗೆ ನ್ಯಾಯ ಕೊಡಿಸಬೇಕು. ಇಲ್ಲವೆಂದರೆ ನಿಮ್ಮನ್ನು ಫಾಲೋ ಮಾಡುತ್ತಿರುವ ನಮಗೆ ಅನ್ಯಾಯ ಮಾಡಿದ ರೀತಿ ಆಗುತ್ತದೆ. ನಿಮ್ಮಿಂದ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ, ಭರವಸೆ ಇದೆ. ಶೀಘ್ರವೇ ನಾಗರತ್ನ ಅವರನ್ನು ಹಿಡಿಯಿರಿ. ಒಂದು ವೇಳೆ ಅವರನ್ನು ಬಂಧಿಸಿಲ್ಲ ಎಂದರೆ ನಾವು ಧರಣಿ ಮಾಡುತ್ತೇವೆ. ದುನಿಯಾ ವಿಜಯ್ ಬಗ್ಗೆ ಎಲ್ಲರಿಗೂ ಗೊತ್ತು. ನಿಮ್ಮ ಮೇಲೆ ತುಂಬಾ ಗೌರವಿದೆ. ದಯವಿಟ್ಟು ಅವರಿಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

    ನಡೆದ ಘಟನೆಯೇನು?:
    ಮೊದಲೇ ಮಗಳು ಮೊನಿಕಾ ಬಂದು ಅಮ್ಮನಿಗೆ ನೇರವಾಗಿ ಬರುವಂತೆ ದಾರಿ ಕೊಟ್ಟು ಹೋಗಿದ್ದರು. ನಾವು ಊಹಿಸಿರಲಿಲ್ಲ ಏಕಾಏಕಿ ಬಂದು ಹಲ್ಲೆ ಮಾಡಿದ್ದಾರೆ. ಇಷ್ಟು ಸಣ್ಣ ಹುಡುಗಿ ತನ್ನ ತಂದೆಯ ವಿರುದ್ಧ ಮಾಡುತ್ತೀನಿ ಎಂದು ಯೋಚನೆಯನ್ನೂ ಮಾಡದೇ ಕ್ರಿಮಿನಲ್ ಪ್ಲ್ಯಾನ್ ಮಾಡಿದ್ದಾರೆ. ಹಲ್ಲೆ ಮಾಡುವ ಮೊದಲೇ ಅಮ್ಮನ ಜೊತೆ ಮಾತನಾಡಿ ಇಬ್ಬರು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಹಲ್ಲೆ ಮಾಡಿದ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ಇವರು ಈಗ ಮಾತ್ರವಲ್ಲ ನಿರಂತರವಾಗಿ ದುನಿಯಾ ವಿಜಿ ಅವರಿಗೆ ಕಾಟ ಕೊಡುತ್ತಿದ್ದಾರೆ. ಆದರೆ ಎಲ್ಲರ ಮುಂದೇ ಇವರು ನಾನು ಮೊದಲನೇ ಹೆಂಡತಿ ಎಂದು ಸಿಂಪತಿ ಪಡೆಯುತ್ತಿದ್ದಾರೆ. ಮನೆಗೆ ಬಂದಾಕ್ಷಣ ಅವರು ಅವಾಚ್ಯ ಪದಗಳಿಂದ ಬೈದಿದ್ದಾರೆ. ಆಗ ಬೈಗುಳವನ್ನು ನಾವು ಹೇಳಲು ಸಾಧ್ಯವಿಲ್ಲ ಅಷ್ಟು ಅಸಭ್ಯವಾಗಿತ್ತು. ಅವರು ಮಾಡುವ ಸುಳ್ಳುಗಳು. ಈ ಸುಳ್ಳು ಆರೋಪದಿಂದ ನಮಗೆ ತುಂಬಾ ನೋವಾಗಿದೆ. ಅದಕ್ಕೆ ಈಗ ಮಾತನಾಡಲು ಧೈರ್ಯವಾಗಿ ಮಾಧ್ಯಮಗಳ ಮುಂದೇ ಬಂದಿದ್ದೇನೆ ಎಂದ್ರು.

    ದುನಿಯಾ ವಿಜಿ ಅವರು ಮಕ್ಕಳನ್ನು ತುಂಬಾ ಪ್ರೀತಿ ಮಾಡುತ್ತಾರೆ. ಆದರೆ ಮಗಳು ನಮ್ಮ ಮುಂದೇ ಸಿಸಿಟಿವಿಯನ್ನ ತೆಗೆದಿದ್ದಾರೆ. ಆದರೆ ನಾವು ಏನು ಮಾತನಾಡಲು ಆಗಲಿಲ್ಲ. ಪ್ರತಿದಿನ ಮಗಳು ಮೊನಿಕಾಳನ್ನು ನೋಡಿ ಹುಟ್ಟಿದರೆ ಇಂತಹ ಮಕ್ಕಳು ಹುಟ್ಟಬೇಕು ಎಂಬಂತೆ ಇದ್ದರು. ಈಗ ನೇರವಾಗಿ ನೋಡಿದ ಮೇಲೆ ಅವರ ಬಣ್ಣ ಬಯಲಾಗಿದೆ. ಸ್ವಲ್ಪ ಹೊತ್ತು ಹಲ್ಲೆ ಮಾಡಿದ ಬಳಿಕ ಮಗಳು ನೀರು ಕೊಡುತ್ತಾಳೆ. ಬಳಿಕ ಮತ್ತೆ ಅವರ ಮಾವನ ಮೇಲೆ ಹಲ್ಲೆ ಮಾಡಿದ್ದಾರೆ. ಪತಿಯ ಮೇಲೆ ಪ್ರೀತಿ ಇಲ್ಲ. ಅವರಿಗೆ ಶಿಕ್ಷೆ ಕೊಡಬೇಕು ಎಂಬ ಉದ್ದೇಶ ಮಾತ್ರವಿದೆ ಎಂದು ಮಂಜು ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=5y-xIKjMyBI

  • ‘ಬ್ಲಾಕ್ ಕೋಬ್ರಾ’ ಮನೆಯಲ್ಲಿ ಪತ್ನಿ ನಾಗರತ್ನ ದಾದಾಗಿರಿ!

    ‘ಬ್ಲಾಕ್ ಕೋಬ್ರಾ’ ಮನೆಯಲ್ಲಿ ಪತ್ನಿ ನಾಗರತ್ನ ದಾದಾಗಿರಿ!

    ಬೆಂಗಳೂರು: ನಟ ದುನಿಯಾ ವಿಜಿ ಅವರ ಮೊದಲ ಪತ್ನಿ ನಾಗರತ್ನ ಮೇಲಿನ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಈ ಪ್ರಕರಣಕ್ಕೆ ಮಗಳು ಮೋನಿಕಾಳೆ ಮಾಸ್ಟರ್ ಮೈಂಡ್ ಎಂಬುದು ತಿಳಿದುಬಂದಿದೆ.

    ದುನಿಯಾ ವಿಜಿ ಜೈಲಿಗೆ ಹೋದ ಸಂದರ್ಭದಲ್ಲಿ ನಾಗರತ್ನ ಅವರು ಕೀರ್ತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ನನ್ನ ಮಗನನ್ನು ನೋಡಲು ಹೋಗಿದ್ದಾಗ ಹಲ್ಲೆ ಮಾಡಿದ್ದಾರೆ ಎಂದು ಕೀರ್ತಿಗೌಡ ವಿರುದ್ಧವೇ ನಾಗರತ್ನ ದೂರು ನೀಡಿದ್ದರು.

    ದುನಿಯಾ ವಿಜಿ ಜೈಲಿನಲ್ಲಿದ್ದಾಗ ಅವರನ್ನು ಹೇಗೆ ಜೈಲಿನಿಂದ ಬಿಡಿಸಬೇಕೆಂದು ವಿಜಿ ಅವರ ತಂದೆ- ತಾಯಿ ಹಾಗೂ ಕೀರ್ತಿ ಮನೆಯಲ್ಲೇ ಕುಳಿತು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ನಾಗರತ್ನ ಏಕಾಏಕಿ ಮನೆಗೆ ನುಗ್ಗಿ ಸೋಫಾ ಮೇಲೆ ಕುಳಿತಿದ್ದ ಕೀರ್ತಿಗೌಡ ಮೇಲೆ ಹಲ್ಲೆ ಮಾಡಿದ್ದರು.

    ನಾಗರತ್ನ ಅವರು ಕೀರ್ತಿ ಮೇಲೆ ಹಲ್ಲೆ ನಡೆಸಿದ ನಂತರ ಅವರು ಸ್ವತಃ ಗಿರಿನಗರ ಪೊಲೀಸ್ ಠಾಣೆಗೆ ಹೋಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದರು. ಆದರೆ ಈಗ ನಾಗರತ್ನ, ಕೀರ್ತಿ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.

    ನಾಗರತ್ನ ಅವರ ಮಗಳು ಮೋನಿಕಾ, ಕೀರ್ತಿ ಮನೆಯಲ್ಲಿದ್ದಾಗ ತನ್ನ ತಾಯಿಗೆ ಪ್ರತಿಯೊಂದು ವಿಷಯವನ್ನು ಹೇಳುತ್ತಿದ್ದರು. ಇದೊಂದು ಪೂರ್ವಯೋಜನೆ ಕೃತ್ಯವಾಗಿದ್ದು, ಮೋನಿಕಾ ತನ್ನ ತಾಯಿಗೆ ಕರೆ ಮಾಡಿ ಪ್ರತಿಯೊಂದು ವಿಷಯ ತಿಳಿಸಿದ್ದರು. ಹೀಗಾಗಿ ನಾಗರತ್ನ ನೇರವಾಗಿ ಮನಗೆ ನುಗ್ಗಿ ಕೀರ್ತಿಗೌಡ ಮೇಲೆ ಹಲ್ಲೆ ನಡೆಸಿದ್ದರು ಎಂದು ಪ್ರತ್ಯಕ್ಷದರ್ಶಿ ಮಂಜು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

    ಈ ಮೂಲಕ ದುನಿಯಾ ವಿಜಿ ಪ್ರಕರಣಕ್ಕೆ ಮತ್ತೊಂದು ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ನಾಗರತ್ನ ಮನೆಗೆ ಬೆಳ್ಳಂ ಬೆಳ್ಳಗೆ ಪೊಲೀಸರು ದಾಳಿ ನಡೆಸಿದ್ದಾರೆ. ಕೀರ್ತಿಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ವಿಜಿ ಮಗಳು ಮೋನಿಕಾ ಮಾಸ್ಟರ್ ಮೈಂಡ್ ಆಗಿದ್ದರು. ನಾಗರತ್ನ ಮನೆ ಮೇಲೆ ಪೊಲೀಸ್ ದಾಳಿಗೂ ಮೊದಲೇ ನಾಗರತ್ನ ಹಾಗೂ ಮೋನಿಕಾ ಎಸ್ಕೇಪ್ ಆಗಿದ್ದಾರೆ.

    ಸದ್ಯ ಗಿರಿನಗರ ಪೊಲೀಸರು ನಾಗರತ್ನ ಹಾಗೂ ಅವರ ಮಗಳು ಮೋನಿಕಾ ಅವರಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಟ್ಟಿರುವ ದೂರು ಸುಳ್ಳು, ಮೂರು ದಿನದಲ್ಲಿ ಪತ್ನಿ, ಮಗಳ ಡ್ರಾಮಾ ಬಯಲು: ದುನಿಯಾ ವಿಜಿ ಸ್ಪಷ್ಟನೆ

    ಕೊಟ್ಟಿರುವ ದೂರು ಸುಳ್ಳು, ಮೂರು ದಿನದಲ್ಲಿ ಪತ್ನಿ, ಮಗಳ ಡ್ರಾಮಾ ಬಯಲು: ದುನಿಯಾ ವಿಜಿ ಸ್ಪಷ್ಟನೆ

    ಬೆಂಗಳೂರು: ನನ್ನ ವಿರುದ್ಧ ಮಗಳು ಮೋನಿಕಾ ಸುಳ್ಳು ಆರೋಪದ ದೂರನ್ನು ನೀಡಿದ್ದಾಳೆ ಎಂದು ದುನಿಯಾ ವಿಜಿ ಸ್ಪಷ್ಟನೆ ನೀಡಿದ್ದಾರೆ.

    ದೂರು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಿಜಿ, ನನ್ನ ಮನೆಗೆ ಯಾರೂ ಬಂದಿಲ್ಲ. ಮೋನಿಕಾ ಮನೆಗೆ ಬಂದಿರುವುದು ನಾನು ರೆಕಾರ್ಡ್ ಮಾಡಿದ್ದೇನೆ. ನನ್ನ ಮೇಲೆ ಎಫ್‍ಐಆರ್ ದಾಖಲಾಗಬೇಕೆಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಸದ್ಯ ಎಲ್ಲ ಮಾಹಿತಿಯನ್ನು ಗಿರಿನಗರ ಪೊಲೀಸ್ ಠಾಣೆಯಲ್ಲಿ ನೀಡಿದ್ದೇನೆ. ಮೋನಿಕಾ ಗಿರಿನಗರ ಠಾಣೆಗೆ ಬಂದಿದ್ದಾಗ ನಾನು ಆಕೆಗೆ ಕರೆ ಮಾಡಿ ಪೊಲೀಸರು ಬರುತ್ತಿದ್ದಾರೆ ಎಂದು ಹೇಳಿದೆ ಆಗ ಆಕೆ ಅಲ್ಲಿಂದ ಓಡಿ ಹೋಗಿ ಈ ರೀತಿಯ ದೂರು ನೀಡಿದ್ದಾಳೆ ಎಂದು ತಿಳಿಸಿದರು.

    ನಮ್ಮ ಮನೆಗೆ ಬರಲು ಯಾರಿಗೂ ಅವಕಾಶವಿಲ್ಲ. ಏಕೆಂದರೆ ಮನೆಯಲ್ಲಿ ನನ್ನ ತಂದೆ ಹಾಗೂ ತಾಯಿ ಮಾತ್ರ ಇದ್ದಾರೆ. ನಾನು ಊರಿನಲ್ಲಿದ್ದೆ. ಹೀಗಿರುವಾಗ ಕಳೆದ ವಾರ ನಾಗರತ್ನ ಮನೆ ಮೇಲೆ ದಾಳಿ ಮಾಡಿಸಿದ್ದಳು. ಆಗ ನನ್ನ ತಂದೆ- ತಾಯಿ ಮಗ ಇಲ್ಲದ ಸಮಯದಲ್ಲಿ ನಮ್ಮ ಮನೆ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ದೂರು ನೀಡಿದ್ದರು. ಈ ದೂರಿಗೆ ಪ್ರತಿ ದೂರು ನೀಡಲು ತಾಯಿ ಮತ್ತು ಮಗಳು ಈ ನಾಟಕವಾಡಿದ್ದಾರೆ ಎಂದು ವಿಜಿ ಹೇಳಿದರು.

    ಮೋನಿಕಾ ಬಾಗಿಲು ಬಡಿದಾಗ ನಾವು ಬಾಗಿಲು ತೆಗೆಯಲಿಲ್ಲ. ಆಕೆ ಬಾಗಿಲು ಚಚ್ಚಿದ್ದಾಳೆ. ನಂತರ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಠಾಣೆಗ ಹೋಗಿ ದೂರು ನೀಡಿದ್ದಾಳೆ. ಆದರೆ ಆಸ್ಪತ್ರೆಗೆ ದಾಖಲಾಗುವಾಗ ವೈದ್ಯರು ನಿನಗೆ ಯಾವುದೇ ಗಾಯವಾಗಿಲ್ಲ ಎಂದು ಹೇಳಿ ಮೆಡಿಕಲ್ ಸರ್ಟಿಫಿಕೇಟ್ ನೀಡಿದ್ದಾರೆ. ಇವರು ಡ್ರಾಮಾ ಮಾಡುತ್ತಿದ್ದಾರೆ. ಮೂರು ದಿನಗಳಲ್ಲಿ ಎಲ್ಲ ಮಾಧ್ಯಮಗಳ ಮುಂದೆ ನಾನು ನಿಜವನ್ನು ಹೊರ ಹಾಕುತ್ತೇನೆ ಎಂದರು.

    ಇವರಿಗೆ ಬೆಳಗ್ಗೆ ಎದ್ದರೆ ದೂರು, ಸಂಜೆ ಎಫ್‍ಐಆರ್ ಹಾಗೂ ಟಿವಿಯಲ್ಲಿ ಬರುವ ಆಸೆ. ನನ್ನ ಮೇಲೆ ಎಫ್‍ಐಆರ್ ದಾಖಲಾಗಲು ಈ ರೀತಿ ಮಾಡುತ್ತಿದ್ದಾರೆ. ನಾನು ತೊಂದರೆಯಲ್ಲಿದ್ದರೆ ಅವರಿಗೆ ಖುಷಿ. ಹಾಗಾಗಿ ಅವರು ಹೀಗೆ ಮಾಡುತ್ತಿದ್ದಾರೆ. ನನ್ನ ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದಾರೆ. ನನ್ನ ತಂದೆಗೆ ಸರಿಯಾಗಿ ಕಣ್ಣು ಕಾಣಿಸುವುದಿಲ್ಲ. ನನ್ನ ತಾಯಿಗೆ ನಡೆದಾಡಲು ಆಗಲ್ಲ. ಹೀಗಿರುವಾಗ ನಾಗರತ್ನ ನನ್ನ ತಂದೆ- ತಾಯಿ ವಿರುದ್ಧ ದೂರು ನೀಡಿದ್ದಳು. ಮೋನಿಕಾ ಬಾಗಿಲು ಬಡಿಯುವಾಗ ನಾನು ಮನೆಯೊಳಗೆ ಇದ್ದೆ. ಈ ವೇಳೆ ಮನೆಯಲ್ಲಿದ್ದ ಮೂವರು ಯುವಕರನ್ನು ಕಿಟಕಿಯಿಂದ ಮೋನಿಕಾಳ ನೋಡುತ್ತಿದ್ದಳು. ಆ ಮೂವರನ್ನು ನೋಡಿ ಮೋನಿಕಾ ಅವರ ವಿರುದ್ಧ ಕೂಡ ದೂರು ದಾಖಲಿಸಿದ್ದಾಳೆ. ಮೋನಿಕಾ ಪ್ರೀಪ್ಲಾನ್ ಮಾಡಿಕೊಂಡು ಈ ರೀತಿ ಮಾಡಿದ್ದಾಳೆ. ನಾಗರತ್ನ ಬರಿ ಸುಳ್ಳು ಹೇಳುತ್ತಾರೆ, ಡ್ರಾಮಾ ಮಾಡುತ್ತಾರೆ ಅವರ ಮಾತನ್ನು ಯಾರೂ ನಂಬಬೇಡಿ. ಮೂರು ದಿನ ನನಗೆ ಸಮಯ ಕೊಡಿ ನಾನು ಎಲ್ಲ ಸತ್ಯವನ್ನು ಹೇಳುತ್ತೇನೆ ಎಂದು ವಿಜಯ್ ಹೇಳಿದರು. ಇದನ್ನೂ ಓದಿ:ದುನಿಯಾ ವಿಜಿ ವಿರುದ್ಧ ಮಗಳಿಂದಲೇ ದೂರು- ಎಫ್‍ಐಆರ್ ದಾಖಲು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv