Tag: Monica

  • ರಜತ್ ಜೊತೆ ನಿವೇದಿತಾ ಗೌಡ `ಲಕ ಲಕ ಮೋನಿಕಾ’

    ರಜತ್ ಜೊತೆ ನಿವೇದಿತಾ ಗೌಡ `ಲಕ ಲಕ ಮೋನಿಕಾ’

    ಬಾತ್ ರೂಮ್ ನಲ್ಲೇ ರೀಲ್ಸ್ ಮಾಡ್ಕೊಂಡು ಸದಾ ನೆಟ್ಟಿಗರ ಮನತಣಿಸುವ, ಮೋಹಕ ಅವತಾರದಲ್ಲಿ ಪಡ್ಡೆ ಹುಡುಗರ ಪಾಲಿನ ಪಾರಿಜಾತವಾಗಿರೋ ನಿವೇದಿತಾ ವೆರೈಟಿ ವೆರೈಟಿ ರೀಲ್ಸ್ ಮೂಲಕ ಗಮನಸೆಳೆದಿದ್ದಾರೆ. ಇದೀಗ ಬಿಗ್ ಬಾಸ್ ಖ್ಯಾತಿಯ ರಜತ್ ಜೊತೆ ರೀಲ್ಸ್ ಮಾಡಿದ್ದಾರೆ. ಅದು ಸಖತ್ ಟ್ರೆಂಡ್ ಆಗ್ತಿದೆ. ರಜನಿಕಾಂತ್ ಅಭಿನಯದ ಕೂಲಿ ಸಿನಿಮಾದ ಮೋನಿಕಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ ನಿವೇದಿತಾ ಗೌಡ.

    ನಿವೇದಿತಾ ಗೌಡ ಜೊತೆಗೆ ಮಾಜಿ ಬಿಗ್ ಮಾಸ್ ಸ್ಪರ್ಧಿಗಳಾದ ರಜತ್, ಧನರಾಜ್ ಹಾಗೂ ನಟಿ ಅಖಿಲಾ ಪ್ರಕಾಶ್ ಸಖತ್ ಆಗಿಯೇ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಮಚ್ಚು ಹಿಡಿದು ರೀಲ್ಸ್ ಮಾಡಿ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಿ ಬಂದಿರುವ ರಜತ್ ಇದೀಗ ನಿವೇದಿತಾ ಗೌಡ ಜೊತೆ ಲವ್ ಯು ಮೋನಿಕಾ ಅಂತಾ ಹೆಜ್ಜೆ ಹಾಕಿದ್ದಾರೆ.

    ಕೂಲಿ ಸಿನಿಮಾದಲ್ಲಿ ಮೋನಿಕಾ ಆಗಿ ಸೊಂಟ ಬಳುಕಿಸಿದ್ದಾರೆ ಪೂಜಾ ಹೆಗ್ಡೆ. ಅದೇ ಹಾಡಿಗೆ ನಿವೇದಿತಾ ಗೌಡ ಹಾಗೂ ಸ್ನೇಹಿತರು ಮಸ್ತ್ ಮಸ್ತ್ ಸ್ಟೇಪ್ ಹಾಕಿದ್ದಾರೆ. ಈ ಸ್ಟೆಪ್ ನೋಡಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ಸ್ ಮಾತ್ರ ವೆರೈಟಿ ವೆರೈಟಿ ಆಗಿಯೇ ಬರುತ್ತಿವೆ.

  • ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ದುನಿಯಾ ವಿಜಯ್ ಪುತ್ರಿಯರು

    ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ದುನಿಯಾ ವಿಜಯ್ ಪುತ್ರಿಯರು

    ಸ್ಯಾಂಡಲ್‌ವುಡ್ ಸಲಗ (Salaga) ದುನಿಯಾ ವಿಜಯ್ (Duniya Vijay) ಈಗಾಗಲೇ ನಟ, ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದಾರೆ. ಭೀಮನಾಗಿ ಅಬ್ಬರಿಸಲು ಸಜ್ಜಾಗಿರುವ ಬೆನ್ನಲ್ಲೇ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಸಿನಿ ದುನಿಯಾಗೆ ಇಬ್ಬರು ಪುತ್ರಿಯರನ್ನು ವಿಜಯ್ ಪರಿಚಯಿಸುತ್ತಿದ್ದಾರೆ.

    ದುನಿಯಾ ವಿಜಯ್ ಅವರ ಇಬ್ಬರು ಹೆಣ್ಣು ಮಕ್ಕಳು ಸಿನಿಮಾರಂಗ ಪ್ರವೇಶಿಸೋದು ಖಚಿತ. ಇದನ್ನ ಸ್ವತಃ ವಿಜಯ್ ಅನೌನ್ಸ್ ಮಾಡಿದ್ದಾರೆ. ಆದರೆ ನೀವು ಗೆಸ್ ಮಾಡಿದಂತೆ ಕಿರಿ ಮಗಳು ಮೋನಿಷಾ (Monisha) ಅಲ್ಲ. ಬದಲಿಗೆ ಹಿರಿಯ ಮಗಳು ಮೋನಿಕಾ (Monica) ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಮೋನಿಕಾ ವಿಜಯ್ ಅವರ ಎಜುಕೇಷನ್ ಕಂಪ್ಲೀಟ್ ಆಗಿದೆ. ರಿಸೆಂಟ್ ಆಗಿ ಮುಂಬೈನಲ್ಲಿ ಆ್ಯಕ್ಟಿಂಗ್ ಕೋರ್ಸ್ ಸಹ ಮುಗಿಸಿ ಬಂದಿದ್ದಾರೆ. ಮುಂಬೈನ ಅನುಪಮ್ ಖೇರ್ (Anupam Kher) ನಟನಾ ಶಾಲೆಯಲ್ಲಿ ತರಬೇತಿ ಪಡೆದು ಬಂದಿರುವ ಮೋನಿಕಾ, ಸದ್ಯ ಬೆಂಗಳೂರಿನಲ್ಲಿ ಕಲಾತಂಡವೊಂದರ ಜೊತೆ ಕೆಲಸ ಮಾಡ್ತಿದ್ದಾರೆ. ಇದನ್ನೂ ಓದಿ:‘ಜವಾನ್’ ಸಕ್ಸಸ್ ಬಳಿಕ ಪ್ರಭಾಸ್ ಸಿನಿಮಾದಲ್ಲಿ ನಯನತಾರಾ

    ಹಾಗಾಗಿ ಹಿರಿ ಮಗಳು ಮೋನಿಕಾ ಸಿನಿಮಾ ಎಂಟ್ರಿಗೆ ತಯಾರಾಗಿದ್ದು, ಶೀಘ್ರದಲ್ಲೇ ಸಿನಿಮಾ ಅನೌನ್ಸ್ ಆಗುವ ನಿರೀಕ್ಷೆಯಿದೆ. ಆದ್ರೆ ಕಿರಿ ಮಗಳು ಮೋನಿಷಾ ಇನ್ನೂ ಎಜುಕೇಷನ್ ಮಾಡ್ತಿದ್ದು, ಈಗ ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗ್ತಿದ್ದಾರಂತೆ. ಜೊತೆಗೆ ಮೋನಿಷಾ ಸಹ ಆ್ಯಕ್ಟಿಂಗ್ ಟ್ರೈನಿಂಗ್ ಪಡೆದುಕೊಳ್ಳಲಿದ್ದು, ಅದು ಮುಗಿದು ವಾಪಸ್ ಆದ ಬಳಿಕವಷ್ಟೇ ಮೋನಿಷಾ ಬಣ್ಣದ ಜಗತ್ತಿಗೆ ಬರಲಿದ್ದಾರೆ.

    ವಿಜಯ್ ಅವರ ಇಬ್ಬರು ಮಕ್ಕಳಿಗೂ ಈಗಾಗಲೇ ತುಂಬಾ ಆಫರ್ಸ್ ಬಂದಿದೆ. ಆದರೆ ಶಿಕ್ಷಣಕ್ಕೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಇಷ್ಟು ದಿನ ನಟನೆಗೆ ಬರೋದನ್ನ ಮುಂದೂಡಲಾಗಿತ್ತು. ಆದ್ರೀಗ ಹಿರಿ ಮಗಳು ಸಿನಿಮಾ ಮಾಡೋ ಉದ್ದೇಶದಿಂದಲೇ ಸಕಲ ತಯಾರಿ ಮುಗಿಸಿದ್ದಾಳೆ. ಹೀಗಾಗಿ ಮೋನಿಕಾ ಲಾಂಚ್ ಮಾಡೋಕೆ ಇದು ಸೂಕ್ತ ಸಮಯ ಎಂದು ವಿಜಯ್ ನಿರ್ಧರಿಸಿದ್ದಾರಂತೆ. ಸದ್ಯ ಮೋನಿಕಾ ಚೊಚ್ಚಲ ಸಿನಿಮಾಗೆ ಅದ್ಭುತ ಸ್ಕ್ರಿಪ್ಟ್ ಕೂಡ ರೆಡಿಯಿದ್ದು, ಒಂದೊಳ್ಳೆ ಸಮಯ ನೋಡ್ಕೊಂಡು ಸಿನಿಮಾ ಶುರು ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ. ಇನ್ನು ಹಿರಿಯ ಮಗಳ ಮೊದಲ ಸಿನಿಮಾಗೆ ಸ್ವತಃ ದುನಿಯಾ ವಿಜಯ್ ಅವರೇ ಆ್ಯಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ.

    ಸಕಲ ತಯಾರಿ ಮಾಡಿಕೊಂಡೇ ನಟನೆಗಿಳಿಯುತ್ತಿರುವ ಮೋನಿಕಾ ಕೂಡ ತಂದೆ ದುನಿಯಾ ವಿಜಯ್ ಅವರಂತೆಯೇ ಗೆದ್ದು ಬೀಗುತ್ತಾರಾ? ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗಳ ಹುಟ್ಟುಹಬ್ಬಕ್ಕೆ ದುಬಾರಿ ಗಿಫ್ಟ್ ನೀಡಿದ ದುನಿಯಾ ವಿಜಯ್

    ಮಗಳ ಹುಟ್ಟುಹಬ್ಬಕ್ಕೆ ದುಬಾರಿ ಗಿಫ್ಟ್ ನೀಡಿದ ದುನಿಯಾ ವಿಜಯ್

    ಚಂದನವನದ ಬ್ಲ್ಯಾಕ್ ಕೋಬ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಸಲಗ ಚಿತ್ರದ ಸಕ್ಸಸ್ ನಂತರ ಮತ್ತೆ ಕೌಟುಂಬಿಕ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ತಮ್ಮ ಮುದ್ದು ಮಗಳು ಮೋನಿಕಾ ಅವರಿಗೆ ಭರ್ಜರಿ ಗಿಫ್ಟ್ ನೀಡಿ, ನೆಟ್ಟಿಗರ ಗಮನ ಸೆಳೆದಿದ್ದಾರೆ.‌

    ದುನಿಯಾ ವಿಜಯ್ `ಸಲಗ’ ಚಿತ್ರದ ಮೂಲಕ ನಟನಾಗಿ ಮಾತ್ರವಲ್ಲ, ನಿರ್ದೇಶಕನಾಗಿಯೂ ಕೂಡ ಸಕ್ಸಸ್ ಕಂಡವರು. ಇದೀಗ ಭೀಮ ಚಿತ್ರದ ಜತೆಗೆ ಟಾಲಿವುಡ್ ಅಖಾಡದಲ್ಲೂ ವಿಜಯ್ ಸೌಂಡ್ ಮಾಡ್ತಿದ್ದಾರೆ. ಈಗ ಮಗಳು ಮೋನಿಕಾ ಹುಟ್ಟುಹಬ್ಬಕ್ಕೆ ದುಬಾರಿ ಕಾರೋಂದನ್ನ ಗಿಫ್ಟ್ ನೀಡಿದ್ದಾರೆ. ಇದನ್ನೂ ಓದಿ:ರಾಜಮೌಳಿ ಶಿಷ್ಯನಿಂದ ಬಂಕಿಮ ಚಂದ್ರ ಚಟರ್ಜಿ ಅವರ ‘ಆನಂದಮಠ’ ಕೃತಿ ಆಧರಿಸಿದ ಸಿನಿಮಾ

    ಕುಟುಂಬದಲ್ಲಿ ಅದೇನೇ ಸಮಸ್ಯೆ ಇದ್ದರು ಮಕ್ಕಳ ಪಾಲಿಗೆ ಬೆಸ್ಟ್ ಅಪ್ಪನಾಗಿ, ಮಕ್ಕಳ ಖುಷಿಗೆ ವಿಜಯ್ ಶ್ರಮಿಸುತ್ತಿದ್ದಾರೆ. 3 ಮಕ್ಕಳ ತಂದೆಯಾಗಿರುವ ವಿಜಯ್ ಈಗ ವೈಯಕ್ತಿಕ ವಿಚಾರವಾಗಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಮಗಳು ಮೋನಿಕಾ ಹುಟ್ಟುಹಬ್ಬಕ್ಕೆ ದುಬಾರಿ ಕಾರು ಗಿಫ್ಟ್ ಮಾಡಿ, ಮುದ್ದು ಮಗಳ ಖುಷಿಗೆ ವಿಜಯ್ ಪಾತ್ರರಾಗಿದ್ದಾರೆ. ಅಪ್ಪ ಮತ್ತು ಕಾರಿನ ಜತೆಯಿರುವ ಫೋಟೋವನ್ನ ಮೋನಿಕಾ ಶೇರ್ ಮಾಡಿ, ಲವ್ ಯೂ ಅಪ್ಪ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಧ್ಯಮಗಳ ಮುಂದೇ ಕಣ್ಣೀರಿಟ್ಟ ಕೀರ್ತಿಗೌಡ

    ಮಾಧ್ಯಮಗಳ ಮುಂದೇ ಕಣ್ಣೀರಿಟ್ಟ ಕೀರ್ತಿಗೌಡ

    ಬೆಂಗಳೂರು: ನಾಗರತ್ನ ಅವರು ದುನಿಯಾ ವಿಜಿ ಅವರ ಎರಡನೇ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳು ಮೋನಿಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಗಿರಿನಗರ ಪೊಲೀಸ್ ಠಾಣೆಯ ಪೊಲೀಸರು ನಾಗರತ್ನ ಮನೆಯಲ್ಲಿ ಇಲ್ಲದ ಕಾರಣ ಅವರ ಮಗಳು ಮೋನಿಕಾರನ್ನು ವಶಕ್ಕೆ ಪಡೆದಿದ್ದರು. ಆದ್ದರಿಂದ ದುನಿಯಾ ವಿಜಿ ಮತ್ತು ಎರಡನೇ ಪತ್ನಿ ಕೀರ್ತಿಗೌಡ ಗಿರಿನಗರ ಪೊಲೀಸ್ ಠಾಣೆಯ ಬಳಿ ಬಂದಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಇಬ್ಬರು ಮಗಳ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ.

    ಕೀರ್ತಿಗೌಡ ಅವರು ಮಾತನಾಡಿ, ಏನೇ ಪರಿಸ್ಥಿತಿ ಇರಬಹುದು ಇದೆಲ್ಲವನ್ನು ಮೀರಿ, ಯಾವುದೇ ಹೆಣ್ಣಿಗಾದರೂ ಈ ರೀತಿ ಹಲ್ಲೆ ಮಾಡಬಾದರು ಎಂದು ಮೋನಿಕಾ ಬಗ್ಗೆ ಮಾತನಾಡುವಾಗ ಕಣ್ಣೀರು ಹಾಕಿದ್ದಾರೆ. ಅವರ ತಾಯಿ ಮಾಡಿದ ತಪ್ಪಿಗೆ, ಅಷ್ಟು ಚಿಕ್ಕ ಹುಡುಗಿಗೆ ಶಿಕ್ಷೆಯಾಗುವುದು ಬೇಡ. ಇಷ್ಟೆಲ್ಲಾ ನಡೆದಿದ್ದಕ್ಕೆ ಬೇಜಾರಿದೆ. 2-3 ವರ್ಷದಿಂದ ಒಟ್ಟಿಗೆ ಇದ್ದೆವು. ಆದರೆ ನಮ್ಮ ಮೇಲೆ ಹೊಡೆಸುವಷ್ಟು ದ್ವೇಷ ಇದೆ ಅಂತ ಗೊತ್ತಿರಲಿಲ್ಲ. ಈಗ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳಿ ಗಳಗಳನೇ ಅಳುತ್ತಾ ಹೋಗಿದ್ದಾರೆ.

    ಈ ವೇಳೆ ಮಾತನಾಡಿದ ವಿಜಿ ಪರ ವಕೀಲ ಶಿವಕುಮಾರ್, ನಾಗರತ್ನ ಅವರು ಇಷ್ಟಾದರೂ ಮಕ್ಕಳ ಭವಿಷ್ಯದ ಬಗ್ಗೆ ಲೆಕ್ಕಿಸದೆ ಈ ರೀತಿ ವರ್ತಿಸುತ್ತಿದ್ದಾರೆ. ಆದರೆ ನಾಗರತ್ನ ಅವರ ವಿರುದ್ಧ ಕೀರ್ತಿ ಅವರು ದೂರು ನೀಡಿದ್ದು, ವಿಜಯ್ ಅವರು ನೀಡಿಲ್ಲ. ಪ್ರಕರಣದಲ್ಲಿ ಮೋನಿಕಾ ಆರೋಪಿ ಆಗಿದ್ದರೆ. ಆದರೆ ದೂರಿನಲ್ಲಿ ಹೆಸರು ಕೈಬಿಟ್ಟರು ಪೊಲೀಸರು, ಕಾನೂನು ಅದನ್ನು ಬಿಡಲು ಸಾಧ್ಯವಿಲ್ಲ. ಒಂದೊಮ್ಮೆ ನಾಗರತ್ನ ಅವರು ಎಲ್ಲಿದ್ದಾರೆ ಎಂದು ಮಾಹಿತಿ ಲಭಿಸಿದರೆ ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಕಾನೂನು ನಿಯಮ ಅಡಿ ಎಲ್ಲವೂ ನಡೆಯಲಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=H0T715sdeFM

  • ನಾಗರತ್ನ ಮೇಲೆ ಎಫ್‍ಐಆರ್ ದಾಖಲು – ಯಾವುದೇ ಕ್ಷಣದಲ್ಲಾದ್ರೂ ಬಂಧನ ಸಾಧ್ಯತೆ!

    ನಾಗರತ್ನ ಮೇಲೆ ಎಫ್‍ಐಆರ್ ದಾಖಲು – ಯಾವುದೇ ಕ್ಷಣದಲ್ಲಾದ್ರೂ ಬಂಧನ ಸಾಧ್ಯತೆ!

    ಬೆಂಗಳೂರು: ನಟ ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರತ್ನ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಕೀರ್ತಿಗೌಡ ಅವರು ನೀಡಿದ ದೂರಿನ ಆಧಾರದ ಮೇರೆಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 326ರ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಹಲ್ಲೆ ಮತ್ತು ಅಂಗಾಂಗ ಊನಗೊಳಿಸಿದ ಆರೋಪದಡಿ ಎಫ್‍ಐಆರ್ ದಾಖಲು ಮಾಡಲಾಗಿದೆ.

    ಒಮ್ಮೆ ಎಫ್‍ಐಆರ್ ದಾಖಲಾದ ನಂತರ ಹೆಚ್ಚುವರಿ ಸೆಕ್ಷನ್ ಸೇರಿಸಲು ಕೋರ್ಟ್ ಒಪ್ಪಿಗೆಯನ್ನು ಪಡೆಯಬೇಕು. ಈಗಾಗಲೇ ನಾಗರತ್ನ ವಿರುದ್ಧ ಐಪಿಸಿ ಸೆಕ್ಷನ್ 306 ಮತ್ತು 309 ಅಡಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ 326 ಸೆಕ್ಷನ್ ಹಾಕಲು ಪೊಲೀಸರು ನಿರ್ಧಾರ ಮಾಡಿದ್ದು, ಈ ಬಗ್ಗೆ ಕೋರ್ಟ್ ಗೆ ಪೊಲೀಸರು ಮನವಿ ಮಾಡಲಿದ್ದಾರೆ. ಈ ಪ್ರಕರಣಕ್ಕೆ ಐಪಿಸಿ ಸೆಕ್ಷನ್ 236 ಸೇರ್ಪಡೆ ಮಾಡಲು ಪೊಲೀಸರು ತೀರ್ಮಾನ ಮಾಡಿದ್ದಾರೆ.

    ಎಫ್‍ಐಆರ್ ದಾಖಲಾದ ಹಿನ್ನೆಲೆಯಲ್ಲಿ ನಾಗರತ್ನ ಮತ್ತು ಮೋನಿಕಾಗೆ ಜೈಲಿಗೆ ಹೋಗಲೇಬೇಕಾದ ಸನ್ನಿವೇಶ್ ಸೃಷ್ಟಿಯಾಗಿದ್ದು, ಯಾವುದೇ ಕ್ಷಣದಲ್ಲಾದರೂ ಮೋನಿಕಾ ಮತ್ತು ನಾಗರತ್ನ ಬಂಧನದ ಸಾಧ್ಯತೆ ಇದೆ. ಇದು ನಾನ್ ಬೇಲಬೆಲ್ ಕೇಸ್ ಆಗಿದ್ದು, ಬಂಧನದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಬಹುದು.

    ನಾಗರತ್ನರ ಬಂಧನ ಖಚಿತ. ಬಾಗಿಲು ಹಾಕಿಕೊಂಡು ನಾಗರತ್ನ ಮನೆಯಲ್ಲಿ ಕುಳಿತಿದ್ದಾರೆ. ಪೊಲೀಸರು ಮನೆಯ ಮುಂಭಾಗದಲ್ಲಿಯೇ ಕಾಯುತ್ತಿದ್ದರು. ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಅವರನ್ನು ಬಂಧಿಸಲಾಗುವುದು ಎಂದು ಡಿಸಿಪಿ ಅಣ್ಣಾಮಲೈ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುನಿಯಾ ವಿಜಿ ಮೇಲೆ ಮತ್ತೊಂದು ಪ್ರಕರಣ ದಾಖಲು!

    ದುನಿಯಾ ವಿಜಿ ಮೇಲೆ ಮತ್ತೊಂದು ಪ್ರಕರಣ ದಾಖಲು!

    ಬೆಂಗಳೂರು: ನಟ ದುನಿಯಾ ವಿಜಯ್ ವಿರುದ್ಧ ಪ್ರಕರಣಗಳ ಮೇಲೆ ಪ್ರಕರಣಗಳು ದಾಖಲಾಗುತ್ತಿವೆ. ಪಾಣಿಪುರಿ ಕಿಟ್ಟಿ, ಪುತ್ರಿ ಮೋನಿಕಾ ಕೇಸ್ ಬೆನ್ನಲ್ಲೇ, ವಿಜಿ ಹಾಗೂ ಕುಟುಂಬದವರ ವಿರುದ್ಧ ಶಾಂತಿಭಂಗ ಕೇಸ್ ದಾಖಲಾಗಿದೆ.

    ಹೌದು, ಈ ಬಾರಿ ದುನಿಯಾ ವಿಜಿ, ಇಬ್ಬರು ಪತ್ನಿಯರು, ಮಕ್ಕಳು ಹಾಗೂ ಬಾಡಿಗಾರ್ಡ್ ವಿರುದ್ಧ ಗಿರಿನಗರ ಪೊಲೀಸರು ಶಾಂತಿಭಂಗದ ಕೇಸ್ ದಾಖಲಿಸಿಕೊಂಡಿದ್ದಾರೆ. ಹೀಗಾಗಿ ದುನಿಯಾ ವಿಜಯ್‍ರನ್ನು ಡಿಸಿಪಿ ಅಣ್ಣಮಲೈ ಮುಂದೆ ಹಾಜರು ಪಡಿಸಿಲಿದ್ದಾರಂತೆ.

    ಈ ಹಿಂದೆ ಆಗಿದ್ದೇನು?:
    ಅವಾಚ್ಯ ಶಬ್ಧಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ವಿಜಿ ಮೊದಲ ಪುತ್ರಿ ಮೋನಿಕಾ ತನ್ನ ತಂದೆ ವಿಜಿ, ಚಿಕ್ಕಮ್ಮ ಕೀರ್ತಿ ಗೌಡ ಸೇರಿದಂತೆ ಐವರ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಾನು ಮನೆಯ ಒಳಗೆ ಹೋಗುವಾಗ ನನ್ನ ತಂದೆ ವಿಜಿ, ಕೀರ್ತಿಗೌಡ, ಹೇಮಂತ್, ವಿನೋದ್ ಹಾಗೂ ಕಾರ್ ಡ್ರೈವರ್ ಮಹಮ್ಮದ್ ಸೇರಿ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ನನ್ನನ್ನು ಬೈದು ಕಾಲಿನಿಂದ ಹಾಗೂ ಕೆಲವು ಮಾರಕಸ್ತ್ರಗಳಿಂದ ಹೊಡೆದು ಗೋಡೆಗೆ ನನ್ನ ತಲೆಯನ್ನು ಹಿಡಿದು ಹೊಡೆದಿದ್ದಾರೆ ಎಂದು ಮೋನಿಕಾ ದೂರಿನಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 34, 324, 323, 504 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

    ಪುತ್ರಿ ಮೋನಿಕಾ ಪ್ರಕರಣಕ್ಕೂ ಮುನ್ನ ದುನಿಯಾ ವಿಜಿ ಜಿಮ್ ಟ್ರೈನರ್ ಮಾರುತಿಗೌಡ ಹಲ್ಲೆ ಪ್ರಕರಣದಲ್ಲಿ ಸಿಲುಕಿದ್ದರು. ಹೀಗೆ ಒಂದೂವರೇ ತಿಂಗಳಿನಲ್ಲಿ ವಿಜಯ್ ವಿರುದ್ಧ ಒಂದೊಂದೇ ಪ್ರಕರಣಗಳು ದಾಖಲಾಗುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫೇಕ್ ಕಂಪ್ಲೇಂಟ್ ಕೋಡೋಕೆ ನನಗೆ ತಲೆ ಸರಿ ಇಲ್ಲವಾ? ದುನಿಯಾ ವಿಜಿಗೆ ಪುತ್ರಿ ಮೋನಿಕಾ ತಿರುಗೇಟು

    ಫೇಕ್ ಕಂಪ್ಲೇಂಟ್ ಕೋಡೋಕೆ ನನಗೆ ತಲೆ ಸರಿ ಇಲ್ಲವಾ? ದುನಿಯಾ ವಿಜಿಗೆ ಪುತ್ರಿ ಮೋನಿಕಾ ತಿರುಗೇಟು

    ಬೆಂಗಳೂರು: ಫೇಕ್ ಕಂಪ್ಲೇಂಟ್ ಕೊಡುವುದ್ದಕ್ಕೆ ನನಗೆ ತಲೆ ಸರಿಯಿಲ್ಲವಾ? ಏನಾದರೂ ನಡೆದಿದ್ದರೆ ತಾನೇ ದೂರು ನೀಡುವುದು ಎಂದು ನಟ ದುನಿಯಾ ವಿಜಯ್ ಪುತ್ರಿ ಮೋನಿಕಾ ಪ್ರತಿಕ್ರಿಯೆ ನೀಡಿದ್ದಾರೆ.

    ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೋನಿಕಾ ಅವರು, ಜಗಳ ಆಗಿ ನನ್ನ ಮೇಲೆ ಹಲ್ಲೆ ಆಗಿರುವುದ್ದಕ್ಕೆ ನಾನು ದೂರು ನೀಡಿದ್ದೇನೆ. ಆದರೆ ಆಸ್ಪತ್ರೆಯಲ್ಲಿದ್ದಾಗ ನನ್ನ ತಂದೆ ನನಗೆ ಕರೆ ಮಾಡಿ ಸಂಪರ್ಕ ಮಾಡಿಲ್ಲ. ನನ್ನ ವಸ್ತುಗಳನ್ನು ತೆಗೆದುಕೊಂಡು ಬರಲು ಅಪ್ಪನ ಮನೆಗೆ ತೆರಳಿದ್ದೆ. ಈ ವೇಳೆ ಮನೆಗೆ ಹೋಗುತ್ತಿದಂತೆ ಲಾಕ್ ಮಾಡಿ ಕೀರ್ತಿ ಪರ ಪೊಲೀಸರಿಗೆ ಹೇಳಿಕೆ ನೀಡುವಂತೆ ಒತ್ತಡ ಹಾಕಿದರು. ಇದಕ್ಕೆ ನಿರಾಕರಿಸಿದಕ್ಕೆ ನನ್ನ ಮೇಲೆ 4 ರಿಂದ 5 ಜನ ಸೇರಿ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.

    ಸದ್ಯ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ವಿಡಿಯೋ ಮೊಬೈಲ್‍ನಲ್ಲಿ ಸೆರೆ ಹಿಡಿದಿರುವ ದೃಶ್ಯಗಳು ಮಾತ್ರ. ಮನೆಯ ಸಿಸಿಟಿವಿ ದೃಶ್ಯಗಳಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ ದೃಶ್ಯಗಳು ದಾಖಲಾಗಿದೆ. ಇದನ್ನು ಪರಿಶೀಲನೆ ನಡೆಸಬೇಕು. ಈಗಾಗಲೇ ಪೊಲೀಸರಿಗೆ ದೂರು ನೀಡಿರುವುದರಿಂದ ಮುಂದಿನ ಕ್ರಮ ಅವರೇ ಕೈಗೊಳ್ಳುತ್ತಾರೆ ಎಂದರು. ಇದನ್ನೂ ಓದಿ:ದುನಿಯಾ ವಿಜಿ ವಿರುದ್ಧ ಮಗಳಿಂದಲೇ ದೂರು- ಎಫ್‍ಐಆರ್ ದಾಖಲು

    ನನ್ನ ಮೇಲೆ ನಡೆಸಿದ ಬಳಿಕ ನನ್ನನ್ನು ಗೇಟ್‍ನಿಂದ ಹೊರ ಹಾಕಿದ್ದರು. ನನಗೆ ಕೋಪ ಬಂದ ಕಾರಣ ನಾನು ಮನೆ ಹೊರಭಾಗದಿಂದ ಕಲ್ಲನ್ನು ತೆಗೆದುಕೊಂಡು ಬಾಗಿಲಿಗೆ ಹೊಡೆದೆ. ಈ ವೇಳೆ ಅವರು ನನಗೆ ಏನೆಂದು ಬೈದರೋ, ನಾನು ಅದನ್ನೇ ಬೈದೆ ಅಷ್ಟೇ. ನಡೆದ ಘಟನೆ ಎಲ್ಲವೂ ಪೂರ್ವ ನಿಗದಿಯಂತೆ ಮಾಡಿದ್ದಾರೆ. ನಾನು ನನ್ನ ಬಟ್ಟೆ ಹಾಗೂ ಕಾರಿನ ದಾಖಲಾತಿ ಸೇರಿದಂತೆ ಕೆಲ ವಸ್ತುಗಳನ್ನು ತರಲು ಒಬ್ಬಳೇ ಹೋಗಿದ್ದೆ. ಒಂದೊಮ್ಮೆ ಜಗಳ ಮಾಡುವ ಉದ್ದೇಶ ಹೊಂದಿದ್ದರೆ. ನಾನು 5 ಜನರನ್ನು ಕರೆದುಕೊಂಡು ಹೋಗುತ್ತಿದೆ ವಿನಃ, ಒಬ್ಬಳೇ ಹೋಗುತ್ತಿರಲಿಲ್ಲ ಎಂದರು.

    ನಿರಂತರ ಜಗಳ:
    ಕೀರ್ತಿ ಗೌಡ ಮನೆಗೆ ಬಂದ ಬಳಿಕ ಮನೆಯಲ್ಲಿ ನಿರಂತರವಾಗಿ ಜಗಳ ನಡೆಯುತ್ತಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ನಾನು, ನನ್ನ ತಂಗಿ ಹೇಳಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮನೆಯಲ್ಲಿ ಇದ್ದ ವೇಳೆ ನನ್ನ ತಂಗಿಯ ಮೇಲೆಯೂ ಒತ್ತಡ ಹಾಕಿ ಅಮ್ಮನ ವಿರುದ್ಧ ದೂರು ನೀಡಲು ತಿಳಿಸಿದ್ದರು. ಆದರೆ ನಾವು ಒಪ್ಪಿಗೆ ನೀಡಿರಲಿಲ್ಲ. ಅಪ್ಪ ಜೈಲಿಂದ ಬಂದ ಮೇಲೆ ಹೇಗೆ ಇದ್ದಾರೆಂಬುದು ನನಗೆ ಗೊತ್ತಿಲ್ಲ. ಏಕೆಂದರೆ ಅವರು ಬಂದ ಕೂಡಲೇ 15 ದಿನ ಪ್ರವಾಸಕ್ಕೆ ಸಿದ್ಧರಾದರು. ಈ ವೇಳೆ ನಮ್ಮನ್ನು ಮನೆಯಲ್ಲಿ ಯಾರು ನೋಡಿಕೊಳ್ಳಲು ಇಲ್ಲದ ಕಾರಣ ಅಮ್ಮನ ಮನೆಗೆ ಬಂದೆ. 15 ದಿನದ ಬಳಿಕ ನನ್ನ ವಸ್ತುಗಳನ್ನು ತರಲು ಮನೆಗೆ ತೆರಳಿದ್ದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಟ್ಟಿರುವ ದೂರು ಸುಳ್ಳು, ಮೂರು ದಿನದಲ್ಲಿ ಪತ್ನಿ, ಮಗಳ ಡ್ರಾಮಾ ಬಯಲು: ದುನಿಯಾ ವಿಜಿ ಸ್ಪಷ್ಟನೆ 

    ನನ್ನ ಮೇಲೆ ಹಲ್ಲೆ ನಡೆಸಿದ ವೇಳೆ ಕೈ ಗೆ ರಕ್ತ ಬರುವಂತೆ ಗಾಯವಾಗಿಲ್ಲ. ಆದರೆ ಮೂಳೆಗೆ ಗಾಯವಾಗಿದೆ. ವೈದ್ಯರು ಚಿಕಿತ್ಸೆ ನೀಡಿ ಮತ್ತೆ ನೋವು ಹೆಚ್ಚಾದರೆ ಬರುವಂತೆ ಸಲಹೆ ನೀಡಿದ್ದಾರೆ. ಆದ್ದರಿಂದ ನಾನು ಮನೆಗೆ ತೆರಳುತ್ತಿದ್ದೇನೆ. ರಕ್ತ ಬರುವಂತೆ ಮಾಡಿದರೆ ಮಾತ್ರ ಅದು ಹಲ್ಲೆ ಎಂದು ಕರೆಯುವುದಾದರೆ ನಾನು ಏನು ಮಾಡಲು ಸಾಧ್ಯವಿಲ್ಲ. ಇಲ್ಲಿ ನಾನು ಯಾರ ಮೇಲೂ ಹೋರಾಟ ಮಾಡುತ್ತಿಲ್ಲ. ಪೊಲೀಸರೆ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ದುನಿಯಾ ವಿಜಯ್ ಪತ್ನಿ ನಾಗರತ್ನ ಅವರು, ನಾವು ಜೀವದ ಆಸೆ ಬಿಟ್ಟು ಬಿಟ್ಟಿದ್ದೇವೆ. ಅಪ್ಪನೇ ಈ ರೀತಿ ಮಾಡುತ್ತಾರೆ ಎಂದರೆ ಏನು ಹೇಳಲು ಸಾಧ್ಯ. ಅವರು ಸಿನಿಮಾ ಸೆಲೆಬ್ರೆಟಿ ಆಗಿರುವುದಿಂದ ಎಲ್ಲರೂ ಬೆಂಬಲ ನೀಡುತ್ತಾರೆ. ಸಾಯಿಸುವುದಾದರೆ ಸಾಯಿಸಲಿ. ಈ ಜೀವನವೇ ಸಾಕಾಗಿದೆ. ನನ್ನ ಮಕ್ಕಳು ನನಗೆ ಎಂದು ಭಾರ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv